ಅಭಿಪ್ರಾಯ / ಸಲಹೆಗಳು

  • ಅಘಘಾತ ಪ್ರಕರಣ

    ಕುಂದಾಪುರ: ದಿನಾಂಕ 28/06/2021  ರಂದು ಬೆಳಿಗ್ಗೆ ಸುಮಾರು 9:50 ಗಂಟೆಗೆ  ಕುಂದಾಪುರ  ತಾಲೂಕಿನ,  ಕಸಬಾ ಗ್ರಾಮದ KSRTC  ಬಸ್‌ ನಿಲ್ದಾಣದ  ಹತ್ತಿರದ  ಶ್ರೀ  ಗಣೇಶ್‌  ತೆಂಗಿನೆಣ್ಣೆ  ಮಿಲ್‌‌  ಬಳಿ,  ಪಶ್ಚಿಮ ಬದಿಯ NH66 ರಸ್ತೆಯಲ್ಲಿ,  ಆಪಾದಿತ ಮೊಹಮ್ಮದ್‌  ಶಬೀರ್‌  ಎಂಬವರು  KA19-MC-5959ನೇ ಕಾರನ್ನು ಉಡುಪಿ  ಕಡೆಯಿಂದ ಬೈಂದೂರು ಅತೀವೇಗ  ಹಾಗೂ ನಿರ್ಲಕ್ಷತನದಿಂದ ಚಾಲನೆ  ಮಾಡಿಕೊಂಡು ಕಾರನ್ನು  ರಸ್ತೆಯ  ತೀರ  ಎಡಬದಿಗೆ  ಚಲಾಯಿಸಿ, ಪಶ್ಚಿಮ ಬದಿಯ NH66 ರಸ್ತೆಯ  ಎಡಬದಿಯಲ್ಲಿ  ಅಂದರೆ  ಪಶ್ಚಿಮ ಬದಿಯಲ್ಲಿ  ಸೈಕಲ್‌‌ ನ್ನು  ದೂಡಿಕೊಂಡು  ಸಂಗಮ್‌‌  ಕಡೆಯಿಂದ ಕುಂಭಾಶಿ  ಕಡೆಗೆ  ಬರುತ್ತಿದ್ದ ಪ್ರಭಾಕರ  ಖಾರ್ವಿ  ಯವರಿಗೆ   ಎದುರುಗಡೆಯಿಂದ  ಡಿಕ್ಕಿ  ಹೊಡೆದ ಪರಿಣಾಮ,   ಪ್ರಭಾಕರ  ಖಾರ್ವಿಯವರ   ತಲೆಗೆ, ಸೊಂಟಕ್ಕೆ, ಎದೆಗೆ ಹಾಗೂ ಕೈ ಕಾಲುಗಳಿಗೆ ಒಳಜಕಂ ಹಾಗೂ ರಕ್ತಗಾಯವಾಗಿ ಕುಂದಾಪುರ  ಆದರ್ಶ  ಆಸ್ಪತ್ರೆಯಲ್ಲಿ  ಪ್ರಥಮ  ಚಿಕಿತ್ಸೆ  ಪಡೆದು  ಹೆಚ್ಚಿನ ಚಿಕಿತ್ಸೆ  ಬಗ್ಗೆ ಮಣಿಪಾಲ  ಕೆ.ಎಂಸಿ   ಆಸ್ಪತ್ರೆಗೆ ಹೋಗಿರುತ್ತಾರೆ  ಹಾಗೂ  ಕಾರಿನಲ್ಲಿ ಪ್ರಯಾಣಿಸುತ್ತಿದ್ದ  ಫಾತಿಮಾ  ಎಂಬವರ ತಲೆಗೆ  ಹಾಗೂ ಎಡ ಕೈಗೆ  ಗಾಯನೋವಾಗಿ ಕುಂದಾಪುರ  ಆದರ್ಶ  ಆಸ್ಪತ್ರೆಯಲ್ಲಿ  ಹೊರ ರೋಗಿಯಾಗಿ   ಚಿಕಿತ್ಸೆ  ಪಡೆದುಕೊಂಡಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 58/2021 ಕಲಂ 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕೋಟ: ಪಿರ್ಯಾದಿ ಜಗದೀಶ ಇವರು ಸರಕಾರಿ ಕೈಗಾರಿಕಾ ತರಬೇತಿ  ಸಂಸ್ಥೆ  ಬಿದ್ದಲ್‌ಕಟ್ಟೆ ಹಾರ್ದಳ್ಳಿ ಮಂಡಳಿ ಗ್ರಾಮ ಕುಂದಾಪುರ ತಾಲೂಕು ಎಂಬಲ್ಲಿ ಪ್ರಾಚಾರ್ಯರಾಗಿರುತ್ತಾರೆ.2021ನೇ  ಸಾಲಿನ  ಫೆಬ್ರುವರಿ ತಿಂಗಳ ಮೊದಲನೆ  ವಾರದಲ್ಲಿ ಹಾಗೂ  16-03-2021 ರಂದು ರಾಜ್ಯ ಸರ್ಕಾರದ ಆದೇಶದಂತೆ KEONICS ಕಂಪನಿಯವರು ತಾಂತ್ರಿಕ ವೃತ್ತಿಗೆ ಸಂಬಂಧಿಸಿದಂತೆ 62  ಸರಕುಗಳನ್ನು ಒದಗಿಸಿರುತ್ತಾರೆ.  ಸದ್ರಿ ಸೊತ್ತುಗಳಲ್ಲಿ ಮೊದಲನೇ ಬಾರಿ ಒದಗಿಸಿದ ಸೊತ್ತುಗಳನ್ನು ಅಂಕದಕಟ್ಟೆ ಆಶ್ರಿತಾ ಕಾಂಪ್ಲೆಕ್ಸ್‌ ನ ಬಾಡಿಗೆ ಕಟ್ಟಡದಿಂದ ಬಿದ್ಕಲ್‌ಕಟ್ಟೆಯ ಹೊಸ  ಕಟ್ಟಡಕ್ಕೆ ಸ್ಥಳಾಂತರಿಸಿದ್ದು ಕಟ್ಟಡದ ಸ್ಟೋರ್‌ ರೂಮ್‌ನಲ್ಲಿ  ಇಡಲಾಗಿರುತ್ತದೆ. ದಿನಾಂಕ 16-03-2021 ರಂದು KEONICS ಕಂಪನಿಯ ಸಪ್ಲೈ ಮ್ಯಾನೇಜರ ರವರು ಹಾಗೂ ಸಂಸ್ಥೆಯ ಸಿಬ್ಬಂದಿಗಳು ತಾಂತ್ರಿಕ ವೃತ್ತಿಗೆ ಸಂಬಂಧಿಸಿದಂತೆ KEONICS ಕಂಪನಿಯವರು ಒದಗಿಸಿದ ಸೊತ್ತುಗಳನ್ನು ಪರಿಶೀಲಿಸಿರುತ್ತಾರೆ. ಕೋವಿಡ್‌-19 ವೈರಾಣು ಪ್ರಯುಕ್ತ ಲಾಕ್‌ಡೌನ್‌ ಇದ್ದರಿಂದ ದಿನಾಂಕ 27-04-2021 ರಂದು ಸಂಜೆ 3-00 ಘಂಟೆಗೆ ಸಂಸ್ಥೆಯನ್ನು ಮುಚ್ಚಿರುತ್ತೇವೆ. ಲಾಕ್‌ಡೌನ್‌ ತೆರೆದ  ಕಾರಣ ದಿನಾಂಕ 22-06-2021  ರಂದು ಬೆಳಿಗ್ಗೆ 10-00 ಘಂಟೆಗೆ  ಸಂಸ್ಥೆಯ ಕಛೇರಿ ಅಧಿಕ್ಷಕಿ ಶ್ರೀಮತಿ  ಪ್ರತೀಮಾ ರವರು  ಸಂಸ್ಥೆಯ ಬಾಗಿಲು ತೆರೆದು ಸ್ಟೋರ್‌ ರೂಮ್‌ ನ ಬಾಗಿಲು ತೆರೆಯಲು ಹೋದಾಗ ಬೀಗ  ಬದಲಾಗಿರುವುದನ್ನು ಕಂಡು ವಿಚಾರವನ್ನು ಪಿರ್ಯಾದಿದಾರರಿಗೆ ತಿಳಿಸಿದಂತೆ ಕೆಲಸದ ಮೇಲೆ ಹೊರಗಡೆ  ಇದ್ದ ಪಿರ್ಯಾದಿದಾರರು ಮರುದಿನ  ಬಂದು ಪರಿಶೀಲನೆ ನಡೆಸಿ ನಂತರ ಸ್ಟೋರ್‌ ರೂಮ್‌ ಬೀಗವನ್ನು ತೆಗೆದು ನೋಡಿದಾಗ ಮೇಲ್ನೋಟಕ್ಕೆ ಎಲ್ಲಾ ಸೊತ್ತುಗಳು ಇದ್ದ ಹಾಗೆ ಕಂಡು ಬಂದಿದ್ದು ಕಳೆದ 3  ದಿನಗಳಿಂದ INVOICE ನಲ್ಲಿರುವಂತೆ ಸ್ಟೋರ್‌ ರೂಮ್‌ನಲ್ಲಿದ್ದ ಸೊತ್ತುಗಳನ್ನು ಪರಿಶೀಲಿಸಿದಲ್ಲಿ KEONICS  ಕಂಪನಿಯವರು ಒದಗಿಸಿದ ತಾಂತ್ರಿಕ ವೃತ್ತಿ ಸೊತ್ತುಗಳಲ್ಲಿ  1) Tax Invoice ಕ್ರ.ಸಂ. 12  ರಲ್ಲಿನ ಸಾಮಗ್ರಿ  Voltage Stabilizer input 150-230 volt AC Out Put 220 Volt Ac Fully  Automatic, Make  V guard-01  ಮೌಲ್ಯ 2,750/- ರೂಪಾಯಿ , 2) Tax Invoice ಕ್ರ.ಸಂ. 21  ರಲ್ಲಿನ ಸಾಮಗ್ರಿ  Flux Meter :3 ½  Display 20 micro tesla 200 gaus with  9 volt battery Make HTC  -01  ಮೌಲ್ಯ 7203.39/- ರೂಪಾಯಿ 3) Tax Invoice ಕ್ರ.ಸಂ.22 ರಲ್ಲಿನ ಸಾಮಗ್ರಿ Electronic Iron 750 Volt 220 Volt Ac with Temperature control make Maharaja/Equivalent -01 ಮೌಲ್ಯ 1500/- ರೂಪಾಯಿ 4)Tax Invoice ಕ್ರ.ಸಂ.22 ರಲ್ಲಿನ ಸಾಮಗ್ರಿ  AC Fan make Maharaja/Equivalent -01 ಮೌಲ್ಯ 2000/- ರೂಪಾಯಿ 5) Tax Invoice  ಕ್ರ.ಸಂ.52 ರಲ್ಲಿನ ಸಾಮಗ್ರಿ  Mobile Phone (Different Models) At Least One 3G Mobile Make Lava  -02  ಮೌಲ್ಯ 10,593.22/- ರೂಪಾಯಿ, 6) Tax Invoice ಕ್ರ.ಸಂ.53 ರಲ್ಲಿನ ಸಾಮಗ್ರಿ Smart Phones (Android/Windows) Make Lava -02 ಮೌಲ್ಯ 21,186.44/- ರೂಪಾಯಿ 7) Tax Invoice  ಕ್ರ.ಸಂ.58 ರಲ್ಲಿನ ಸಾಮಗ್ರಿ  LED Display TV 32 inches Make Universal company -02  ಮೌಲ್ಯ 41,525.42/- ರೂಪಾಯಿ 8) Tax Invoice  ಕ್ರ.ಸಂ.61 ರಲ್ಲಿನ ಸಾಮಗ್ರಿ  Hone Theatre system 5.1 Channel Make Philips company -01  ಮೌಲ್ಯ 10,466.10/- ರೂಪಾಯಿ ಆಗಿದ್ದು ಸದ್ರಿ ಸೊತ್ತುಗಳು ಇಲ್ಲದಿರುವುದು ಕಂಡು ಬಂದಿರುತ್ತದೆ. ಯಾರೋ ಕಳ್ಳರು ದಿನಾಂಕ 27-04-2021 ರಂದು ಸಂಜೆ 3-00 ಘಂಟೆಯಿಂದ ದಿನಾಂಕ 22-06-2021 ರಂದು ಬೆಳಿಗ್ಗೆ  10-00 ಘಂಟೆ  ಮಧ್ಯಾವಧಿಯಲ್ಲಿ  ಸದ್ರಿ ಸೊತ್ತುಗಳನ್ನು ಕಳ್ಳತನ ಮಾಡಿದ್ದು ಸ್ವತ್ತುಗಳ ಒಟ್ಟು ಮೌಲ್ಯ 97,224.57/-ರೂಪಾಯಿ ಆಗಬಹುದಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 126/2021 ಕಲಂ: 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ದಿನಾಂಕ: 26/08/2021 ರಂದು 16-00 ಗಂಟೆಗೆ ಮಾನ್ಯ ಪೊಲೀಸ್ ವೃತ್ತ ನಿರೀಕ್ಷಕರು ಬೈಂದೂರು ರವರಿಗೆ ಮಾನ್ಯ ಪೊಲೀಸ್ ಉಪಾಧೀಕ್ಷಕರು ಕುಂದಾಪುರ ರವರು ನೀಡಿದ ಮಾಹಿತಿಯಂತೆ ಪಂಚಾಯ್ತುದಾರರು ಮತ್ತು ಸಿಬ್ಬಂದಿಯವರೊಂದಿಗೆ ಇಲಾಖಾ ಜೀಪಿನಲ್ಲಿ ತೆರಳಿ ಮಾನ್ಯ ಪೊಲೀಸ್ ಉಪಾಧೀಕ್ಷಕರು ಕುಂದಾಪುರ ರವರೊಂದಿಗೆ ಹಾಗೂ ಪಿಎಸ್ಐ ಗಂಗೊಳ್ಳಿ ಹಾಗೂ ಸಿಬ್ಬಂದಿಗಳೊಂದಿಗೆ 17-15 ಗಂಟೆಗೆ ಅರೆಹೊಳೆ ಬೈಪಾಸ್‌ ನಿಂದ ಹೇರೂರು ಕಡೆಗೆ ಹೋಗುವ ರಸ್ತೆಯ ಮೂಲಕ ರೈಲ್ವೇ ಮೇಲು ಸೇತುವೆಯ ಸ್ವಲ್ಪ ಮುಂದಕ್ಕೆ ಚಲಿಸಿ ಕೋಯಾನಗರ ಕಡೆಗೆ ಹೋಗುವ ಡಾಂಬಾರು ರಸ್ತೆಯ ಬಳಿ ಇಲಾಖಾ ವಾಹನಗಳನ್ನು ನಿಲ್ಲಿಸಿಕೊಂಡು ಸಾದಾ ಉಡುಪಿನಲ್ಲಿದ್ದ ಸಿಬ್ಬಂದಿಯವರನ್ನು ಮೇಲ್ಭಾಗದ ರಸ್ತೆಯಲ್ಲಿ ಸಂಶಯಿತ ವ್ಯಕ್ತಿಯ ಬಗ್ಗೆ ಮಾಹಿತಿ ಕಲೆ ಹಾಕಲು ಕಳುಹಿಸಿ 17-50 ಗಂಟೆಗೆ ಅರೆಹೊಳೆ ಬೈಪಾಸ್‌ ಕಡೆಯಿಂದ TVS NTORQ ಸ್ಕೂಟರ್ ನಂಬ್ರ KA21EB5125 ರಲ್ಲಿ ಬಂದ ವ್ಯಕ್ತಿ ಜಾಫರ್ ಸಾದಿಕ್ ಪ್ರಾಯ 42 ವರ್ಷ ತಂದೆ: ಮಹಮ್ಮದ್ ಹನೀಫ್ ವಾಸ: ಬಳ್ಕಿನಬಾಗಿಲು ಸನಾ ಕಾಂಪ್ಲೆಕ್ಸ್ ಕೊಡೇರಿ ರಸ್ತೆ ನಾಗೂರು ಕಿರಿಮಂಜೇಶ್ವರ ಗ್ರಾಮ ಬೈಂದೂರು ತಾಲೂಕು ಈತನನ್ನು ವಶಕ್ಕೆ ಪಡೆದು ಪಂಚರ ಹಾಗೂ ಪತ್ರಾಂಕಿತ ಅಧಿಕಾರಿಯಾಗಿ ಹಾಜರಿದ್ದ ಮಾನ್ಯ ಪೊಲೀಸ್ ಉಪಾಧೀಕ್ಷಕರು ಕುಂದಾಪುರ ರವರ ಸಮಕ್ಷಮ ಆತನ ಬೆನ್ನಿನಲ್ಲಿ ಧರಿಸಿದ ಬ್ಯಾಗ್ ನಲ್ಲಿದ್ದ ಹಳದಿ ಬಣ್ಣದ ಪಾಲಿಥೀನ್‌ ಚೀಲದಲ್ಲಿದ್ದ 400 ಗ್ರಾಂ ಗಾಂಜಾ, ಹಸಿರು ಬೂದು ಬಣ್ಣದ ಬ್ಯಾಗ್‌, ಸ್ಕೂಟರ್ ಡಿಕ್ಕಿಯಲ್ಲಿದ್ದ 120 ಗ್ರಾಂ ಗಾಂಜಾ ತುಂಬಿದ್ದ ನೀಲಿ ಬಣ್ಣದ ಪಾಲೀಥಿನ್ ಚೀಲ, ಗಾಂಜಾ ತುಂಬಲು ಬಳಸುವ 10 ಸಣ್ಣ ಸಣ್ಣ ಪಾಲಿಥೀನ್ ಚೀಲಗಳು, ವಿವಾ ಫ್ಯಾಶನ್‌ ಎಂಬ ಹೆಸರಿನ ನೈಲಾನ್‌ ಚೀಲ TVS NTORQ ಸ್ಕೂಟರ್ ನಂಬ್ರ KA21EB5125, ಹಾಗೂ  ಲಾವಾ ಲಾವಾ ಮೊಬೈಲ್ ಮತ್ತು ಏರಟೆಲ್‌ ಸಿಮ್‌ ನಂಬ್ರ 8147065568  ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಸ್ವಾಧೀನಪಡಿಸಿದ ಗಾಂಜಾ 520 ಗ್ರಾಂ ಆಗಿದ್ದು ಅಂದಾಜು ಮೌಲ್ಯ ರೂ 15,000/-, ಸ್ಕೂಟರ್ ಮೌಲ್ಯ ರೂ 80,000/-, ಸ್ವಾಧೀನಪಡಿಸಿದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ ರೂ 95,000/- ಆಗಿದ್ದು, ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 108/2021 ಕಲಂ 8 (ಸಿ), 20(ii)(ಎ) ಎನ್.ಡಿ.ಪಿ.ಎಸ್. ಕಾಯ್ದೆ-1985ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು:  ದಿನಾಂಕ 28/06/2021  ರಂದು 12:00 ಗಂಟೆಗೆ ಪವನ್ ನಾಯಕ್ ಪೊಲೀಸ್ ಉಪನಿರೀಕ್ಷಕರು ಬೈಂದೂರು ಪೊಲೀಸ್ ಠಾಣೆ ಇವರಿಗೆ ಕಿರಿಮಂಜೇಶ್ವರ ಗ್ರಾಮದ ಅರೆಹೊಳೆ ಬಳಿ ಸಾರ್ವಜನಿಕ ಸ್ಥಳದಲ್ಲಿ  ಮಟ್ಕಾ ಜುಗಾರಿ ಆಟ ನಡೆಯುತ್ತಿದೆ ಎಂದು ಮಾಹಿತಿ ಬಂದ ಮೇರೆಗೆ ಪಿರ್ಯಾದಿದಾರರು ಸಿಬ್ಬಂದಿಗಳ ಸಹಾಯದಿಂದ 12:30 ಗಂಟೆಗೆ ಸದ್ರಿ ಸ್ಥಳಕ್ಕೆ ದಾಳಿ ನಡೆಸಿ ಆರೋಪಿತ ಆನಂದ ಪೂಜಾರಿ ಪ್ರಾಯ 51 ವರ್ಷ ತಂದೆ: ದಿ. ಮಹಾಲಿಂಗ ಪೂಜಾರಿ ವಾಸ: ಗಡಿನೆರಳುಮನೆ ನಾಯ್ಕನಕಟ್ಟೆ ಶಾಲೆ ಬಳಿ ಕೆರ್ಗಾಲ್ ಗ್ರಾಮ ಇವರನ್ನು ವಶಕ್ಕೆ ಪಡೆದಿದ್ದು, ಆತನು ತನ್ನ ಸ್ವಂತ ಲಾಭಕೋಸ್ಕರ ಅಕ್ರಮವಾಗಿ ಮಟ್ಕಾ ಜುಗಾರಿ ಆಡುತ್ತಿರುವುದಾಗಿ ಒಪ್ಪಿಕೊಂಡಿದ್ದು ನಂತರ ಆತನ ಬಳಿಯಲ್ಲಿದ್ದ ಮಟ್ಕಾ ಜುಗಾರಿ ಆಟದಿಂದ ಅಕ್ರಮವಾಗಿ ಸಂಗ್ರಹಿಸಿದ ನಗದು ಹಣ ರೂ 450/-, ಮಟ್ಕಾ ನಂಬ್ರ ಬರೆದ ಚೀಟಿ-1 ಹಾಗೂ ಬಾಲ್ ಪೆನ್ನು-1 ನ್ನು ಪಂಚರುಗಳ ಸಮಕ್ಷಮ ಸ್ವಾದೀನಪಡಿಸಿಕೊಂಡು ನಂತರ ಮಾನ್ಯ 2 ನೇ ಎಸಿಜೆ ಮತ್ತು ಜೆ.ಎಮ್.ಎಪ್.ಸಿ ನ್ಯಾಯಾಲಯ ಕುಂದಾಪುರದ ಅನುಮತಿ ಪಡೆದು  ಪ್ರಕರಣದ ದಾಖಲಿಸಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 107/2021 ಕಲಂ: 78(I)(III) KP Act ನಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 29-06-2021 10:34 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080