ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಮಣಿಪಾಲ: ಪಿರ್ಯಾದಿದಾರರಾದ ಅಭಿಷೇಕ್ ಮಡಿವಾಳ (27), ತಂದೆ: ಶೇಖರ ಮಡಿವಾಳ, ವಾಸ: ಪ್ರೇಮಾಭಿಷೇಕ ಬಂಗ್ಲೆಗುಡ್ಡೆ ಜಂಕ್ಷನ್‌ ಬಳಿ, ಕುಕ್ಕುಂದೂರು ಕಾರ್ಕಳ ತಾಲೂಕು ಇವರು ದಿನಾಂಕ 27/05/2023 ರಂದು ರಾತ್ರಿ 11:30 ಗಂಟೆಯ ಸಮಯಕ್ಕೆ ಉಡುಪಿಯಿಂದ ಕಾರ್ಕಳ ಕಡೆಗೆ ಹೊರಟು ರಾತ್ರಿ 11:50 ಗಂಟೆಯ ಸಮಯಕ್ಕೆ ರಾಷ್ರೀಯ ಹೆದ್ದಾರಿ 169 (ಎ) ರಲ್ಲಿ ಮಣಿಪಾಲ ಲಕ್ಷ್ಮೀಂದ್ರ ನಗರದ ಝುಡಿಯೋ ಬಟ್ಟೆ ಅಂಗಡಿ ಬಳಿ ತಲುಪಿದಾಗ  ಪಿರ್ಯಾದಿದಾರರ ಎದುರಿನಿಂದ ಆಪಾದಿತ ಪ್ರಭ್ ಕಿರತ್ ಸಿಂಗ್  DL-4S-CT-6935 ನೇ ಕಪ್ಪು ಬಣ್ಣದ ಜ್ಯುಪಿಟರ್ ಸ್ಕೂಟ ರ್ ನಲ್ಲಿ ಕೀರ್ತಿ ಮಟನಿಯು ಎಂಬುವವರನ್ನು ಸಹಸವಾರಳನ್ನಾಗಿ ಕುಳಿರಿಸಿಕೊಂಡು ಉಡುಪಿಯಿಂದ ಮಣಿಪಾಲ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಅಲ್ಲಿಯೇ  ರಸ್ತೆಯ ಎಡಭಾಗದಲ್ಲಿ ರಸ್ತೆ ದಾಟಲು ನಿಂತಿದ್ದ ಒಬ್ಬ ಪಾದಚಾರಿಗೆ ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಹಾಗೂ  ಸ್ಕೂಟರ್ ನಲ್ಲಿದ್ದವರು ರಸ್ತೆಗೆ ಬಿದಿದ್ದು, ಪಾದಚಾರಿಗೆ ಹಣೆಗೆ, ತಲೆಗೆ, ಮುಖಕ್ಕೆ, ತೀವ್ರ ಸ್ವರೂಪದ ಪೆಟ್ಟಾಗಿದ್ದು ಮಾತನಾಡುವ ಸ್ಥಿತಿಯಲ್ಲಿರುವುದಿಲ್ಲ, ಅಲ್ಲದೇ ಸ್ಕೂಟರಿನ ಸವಾರ  ಹಾಗೂ ಸಹಸವಾರರಿಗೆ ಕೂಡ ರಕ್ತ ಗಾಯವಾಗಿರುತ್ತದೆ ಅವರನ್ನು ಚಕಿತ್ಸೆಯ ಬಗ್ಗೆ ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ದಾಖಲಿಸಿದ್ದು, ತೀವ್ರತರನಾಗಿ ಗಾಯಗೊಂಡ ಪಾದಚಾರಿಯನ್ನು ಪಿರ್ಯಾದಿದಾರರು ತಮ್ಮ ಕಾರಿನಲ್ಲಿ ಚಿಕಿತ್ಸೆಯ ಬಗ್ಗೆ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಯಲ್ಲಿದ್ದವರು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 28/05/2023 ರಂದು 07:30 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 120/2023 ಕಲಂ: 279, 337, 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 28/05/2023  ರಂದು ಮಧ್ಯಾಹ್ನ 01:30 ಗಂಟೆಗೆ, ಕುಂದಾಪುರ  ತಾಲೂಕಿನ, ತಲ್ಲೂರು ಗ್ರಾಮದ ತಲ್ಲೂರು ಪ್ರವಾಸಿ ಹೊಟೇಲ್‌ಎದುರುಗಡೆ, ಪೂರ್ವ ಬದಿಯ NH 66 ರಸ್ತೆಯಲ್ಲಿ, ಆಪಾದಿತ ರತನ್‌ ಕುಮಾರ್‌  KA-19-ML-0985ನೇ ಕಾರನ್ನು ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಅತೀವೇಗ  ಹಾಗೂ ನಿರ್ಲಕ್ಷ್ಯತನದಿಂದ  ಚಾಲನೆ ಮಾಡಿಕೊಂಡು ಬಂದು ಶಿವಾನಂದ ಮಡಿವಾಳ ರವರು KA-20-EH-8943 ನೇ TVS XL ಸ್ಕೂಟರ್‌ ಸವಾರಿ ಮಾಡಿಕೊಂಡು ಪ್ರವಾಸಿ ಹೊಟೇಲ್‌‌‌ಕಡೆಯಿಂದ NH 66 ರಸ್ತೆಯನ್ನು ಕ್ರಾಸ್‌ಮಾಡುತ್ತಿರುವಾಗ,  XL ಸ್ಕೂಟರ್‌ಗೆ ಡಿಕ್ಕಿ  ಹೊಡೆದ ಪರಿಣಾಮ, ಶಿವಾನಂದ ಮಡಿವಾಳ ರವರ ತಲೆಗೆ, ಮುಖ, ಎರಡೂ ಕಾಲುಗಳಿಗೆ ಗಂಭೀರ ಒಳಜಖಂ ಗಾಯ ಹಾಗೂ ರಕ್ತಗಾಯವಾಗಿ  ಕುಂದಾಪುರ  ಚಿನ್ಮಯಿ   ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು  ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ. ಸಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 72/2023  ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಪಿರ್ಯಾದಿದಾರರಾದ ಅಭಿಷೇಕ್ (27), ತಂದೆ: ದಯಾನಂದ, ವಾಸ:7-65 ಶಾನಬೋಗ ಹೌಸ್ ತೋನ್ಸೆ ವೆಸ್ಟ್ ಕೆಮ್ಮಣ್ಣು ಗ್ರಾಮ.  ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ದಿನಾಂಕ 28/05/2023 ರಂದು KA-20-D-4719 ನೇ ಕಾರಿನಲ್ಲಿ ಚಾಲಕನಾಗಿ ಅವರ ಪಕ್ಕದ ಎಡ ಭಾಗದ ಸೀಟಿನಲ್ಲಿ ಧನುಷ್ ಅವರ ಜೊತೆಯಲ್ಲಿ ಗ್ಯಾನ ಎಂಬ ಒಂದೂವರೆ ವರ್ಷದ ಮಗು ಹಾಗೂ  ಹಿಂದಿನ ಸೀಟಿನಲ್ಲಿ ಮನೀಷಾ ಎಂಬುವವರೊಂದಿಗೆ ಹಂಪನಕಟ್ಟೆಯಿಂದ ಮಣಿಪಾಲದ ಕಡೆಗೆ ಹೊರಟು ಮನಿಷಾರವರನ್ನು ಕೆ ಎಂ ಸಿ ಆಸ್ಪತ್ರೆಯಲ್ಲಿ ಕೆಲಸಕ್ಕೆ ಬಿಡಲು ಹೋಗುತ್ತಿರುವಾಗ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಹೆಚ್ ಪಿ ಪೆಟ್ರೋಲ್ ಪಂಪ್ ಸಮೀಪ ತಲುಪುತ್ತಿದಂತೆ ಮದ್ಯಾಹ್ನ 01:00 ಗಂಟೆಯ ಸಮಯಕ್ಕೆ ಪಿರ್ಯಾದಿದಾರರ ಕಾರಿನ ಎದುರಿಗೆ KA-19-D-9619 ನೇದರ ಚಾಲಕ ಅಬ್ದುಲ್ ಅಜೀಜ್ ತನ್ನ ಕಾರನ್ನು ಪಿರ್ಯಾದಿದಾರರ ಕಾರಿನಿಂದ ಮುಂದೆ ಹೋಗಿ ಯಾವುದೇ ಸೂಚನೆ ನೀಡದೇ ಹಿಂದಕ್ಕೆ ಬಂದು ಒಮ್ಮೇಲೆ  ತನ್ನ ಬಲ ಭಾಗಕ್ಕೆ ತಿರುಗಿಸಿದ ಪರಿಣಾಮ ಪಿರ್ಯಾದಿದಾರರ ಕಾರಿನ ಮುಂಭಾಗಕ್ಕೆ ಡಿಕ್ಕಿ ಹೊಡೆದಿದ್ದು. ಇದರಿಂದ ಗ್ಯಾನ ಎಂಬವರಿಗೆ  ಸಾಮಾನ್ಯ ಸ್ವರೂಪದ ಗಾಯವಾಗಿರುತ್ತದೆ. ಇವರನ್ನು ಚಿಕಿತ್ಸೆ ಬಗ್ಗೆ ಕೆ ಎಂ ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 119/2023 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಕಾಪು: ಪಿರ್ಯಾದಿದಾರರಾದ ಅಕ್ಷಯ ಕುಮಾರ (30), ತಂದೆ : ಜಾರಿ ಬೆಡಿಯ, ವಾಸ : ಕಲ್ಯಾಣಿ ಕಾಂಕ್ರೀಟ್‌ರವರ ರೂಮ್‌ ಇಂಡಸ್ಟ್ರೀಯಲ್ ಏರಿಯಾ. ಮಣಿಪಾಲ ಉಡುಪಿ ಜಿಲ್ಲೆ ಇವರು ದಿನಾಂಕ 27/05/2023 ರಂದು ಟಿ.ಎಮ್. ಅಳವಡಿಸಿದ  KA-20-AA-3473 ನೇ ವಾಹನವನ್ನು ರಾಷ್ಟ್ರೀಯ ಹೆದ್ದಾರಿ 66 ರ ಮಂಗಳೂರು ಉಡುಪಿ ರಸ್ತೆಯಲ್ಲಿ ಕಟಪಾಡಿ ಕಡೆಯಿಂದ ಮಣಿಪಾಲದ ಕಡೆಗೆ ರಸ್ತೆಯ ಪೂರ್ವ ಬದಿಯ ಅಂಚಿನಲ್ಲಿ ಚಲಾಯಿಸಿಕೊಂಡು ಹೋಗುತ್ತಿರುವಾಗ ಏಣಗುಡ್ಡೆ ಗ್ರಾಮದ ಫಾರೇಸ್ಟ್ ಗೇಟ್ ಬಳಿಯ ಕೀಯಾ ಶೋರೂಮ್ ಬಳಿ ತಲುಪುತ್ತಿದ್ದಂತೆ ಅದೇ ರಸ್ತೆಯಲ್ಲಿ ಗೌಡಪ್ಪ ಆರ್ ಮೆಗುರು ರವರು ತನ್ನ KA-19-AD-8384 ನೇ ಕಂಟೈನರ್ ಟ್ರೈಲರ್‌ ವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು 16:30 ಗಂಟೆಗೆ ಪಿರ್ಯಾದಿದಾರರ ವಾಹನಕ್ಕೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ವಾಹನದ ಚಾಸಿಸ್ ಬೆಂಡ್, ಸೆಟ್‌ಪಾರ್ಚ್ ಬೋಲ್ಟ್, ಸೆಟ್‌ಜಖಂ ಗೊಂಡಿರುತ್ತದೆ.  ಹಾಗೂ ಗೌಡಪ್ಪ ಆರ್ ಮೆಗುರು ರವರಿಗೆ ಸಣ್ಣಪುಟ್ಟ ತರಚಿದ ಗಾಯ ಆಗಿರುತ್ತದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 93/2023 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಟ್ಕಾ ಜುಗಾರಿ ಪ್ರಕರಣ

  • ಗಂಗೊಳ್ಳಿ: ಜಯಶ್ರೀ ಹುನ್ನೂರ, ಪೊಲೀಸ್‌ ಉಪನಿರೀಕ್ಷಕರು, ಗಂಗೊಳ್ಳಿ ಪೊಲೀಸ್‌ ಠಾಣೆ ಇವರು ದಿನಾಂಕ 28/05/2023 ರಂದು ಠಾಣೆಯಲ್ಲಿರುವಾಗ ತ್ರಾಸಿ  ಗ್ರಾಮದ ಹೆಚ್‌.ಪಿ ಪೆಟ್ರೋಲ್ ಬಂಕ್ ಬಳಿ  ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಟ್ಕಾ ಜುಗಾರಿ ನಡೆಸುತ್ತಿದ್ದ ಬಗ್ಗೆ ಬಂದ ಮಾಹಿತಿ ಮೇರೆಗೆ  ದಾಳಿ ನಡೆಸಿ ಮಟ್ಕಾ ಜುಗಾರಿ ನಡೆಸುತ್ತಿದ್ದ ಪ್ರಕಾಶ್ ಶೆಟ್ಟಿಗಾರ(46), ತಂದೆ: ದಿ ಮಹಾಬಲ ಶೆಟ್ಟಿಗಾರ,  ವಾಸ: ಕಮ್ಮರಕೊಡ್ಲು, ಹೊಸಾಡು ಗ್ರಾಮ, ಕುಂದಾಪುರ ತಾಲೂಕು ಎಂಬಾತನನ್ನು ವಶಕ್ಕೆ ಪಡೆದು ಜುಗಾರಿಗೆ ಬಳಸಿದ ಮಟ್ಕ ಚೀಟಿ-1, ಬಾಲ್ ಪೆನ್ನು-1 ಹಾಗೂ 530/- - ರೂಪಾಯಿ ನಗದನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 62/2023 ಕಲಂ:78(1)(3) ಕೆ.ಪಿ.ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ಪುರುಷೋತ್ತಮ ಎ, ಪೊಲೀಸ್‌ ಉಪನಿರೀಕ್ಷಕರು, ಪಡುಬಿದ್ರಿ ಪೊಲೀಸ್‌ ಠಾಣೆ ಇವರಿಗೆ  27/05/2023 ರಂದು ಹೆಜಮಾಡಿ ಗ್ರಾಮದ ಗುಂಡಿ ಸ್ಮಶಾನದ ಎದುರುಗಡೆ  ಇರುವ ಗಾಡಿ ಚೌಕ ಎಂಬಲ್ಲಿನ ಹಾಡಿಯಲ್ಲಿ ಕೆಲವು ದಿನಗಳಿಂದ ಕೆಲವರು ಇಸ್ಪೀಟು ಎಲೆಗಳ ಮೇಲೆ ಹಣವನ್ನು ಪಣವಾಗಿಟ್ಟು ಜೂಜಾಟ  ನಡೆಸುತ್ತಿರುವುದಾಗಿ ಮಾಹಿತಿ ಬಂದ ಮೇರೆ ದಾಳಿ ನಡೆಸಿ  1] ಚೇತನ್‌ ಪೂಜಾರಿ (34), ತಂದೆ:ದಿ. ಚಂದ್ರ ಶೇಖರ ಪೂಜಾರಿ, ವಾಸ:ಕಮಲ ನಿವಾಸ, ಶಿವನಗರ, ಹೆಜಮಾಡಿ ಗ್ರಾಮ, ಕಾಪು ತಾಲೂಕು, 2] ಅಭಿಜಿತ್ (39), ತಂದೆ:ದಿ. ರವಿ ಅಮಿನ್, ವಾಸ: ರಾಧಾ ಮುದ್ದಣ್ಣ ನಿಲಯ, ಎಸ್‌,ಎಸ್‌ ರಸ್ತೆ, ಹೆಜಮಾಡಿ ಗ್ರಾಮ, ಕಾಪು ತಾಲೂಕು, 3] ಗಣೇಶ (27), ತಂದೆ:ದಿ. ದಿವಾಕರ, ವಾಸ:ಚಂದ್ರ ಶಾನುಬೋಗ ಕುದುರು, ಬಪ್ಪನಾಡು ಗ್ರಾಮ, ಮುಲ್ಕಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ, 4] ನಿಶಾನ್ ಬಂಗೇರ, ತಂದೆ: ಕಮಲಾಕ್ಷ, ವಾಸ: ಪಲಿಮಾರು ಭಜನಾ ಮಂದಿರದ ಬಳಿ, ಕೋಡಿ  ಹೆಜಮಾಡಿ ಗ್ರಾಮ, ಕಾಪು ತಾಲೂಕು ಇವರಿಂದ ಇಸ್ಪೀಟು ಎಲೆಗಳು-52, ನಗದು 1,190/- ರೂಪಾಯಿ ಹಳೆಯ ನ್ಯೂಸ್‌‌‌‌‌‌ಪೇಪರ್‌ -1 ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 61/2023, ಕಲಂ:  87 ಕೆ.ಪಿ. ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ದಿನಾಂಕ 28/05/2023 ರಂದು ಪುರುಷೋತ್ತಮ ಎ, ಪೊಲೀಸ್‌ ಉಪನಿರೀಕ್ಷಕರು, ಪಡುಬಿದ್ರಿ ಪೊಲೀಸ್‌ ಠಾಣೆ ಇವರಿಗೆ  ಸಾಂತೂರು ಗ್ರಾಮದ ಮುದರಂಗಡಿ ಮೀನು ಮಾರ್ಕೆಟ್‌ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟದ ಬಗ್ಗೆ ಹಣ ಸಂಗ್ರಹಿಸುತ್ತಿದ್ದಾರೆಂದು ಬಂದ ಮಾಹಿತಿಯಂತೆ ದಾಳಿ ನಡೆಸಿ ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರಿಗೆ ಚೀಟಿ ಬರೆದು ಕೊಡುತ್ತಿದ್ದ ದಿನೇಶ್‌ ಶೆಟ್ಟಿ (54), ತಂದೆ: ದಿ. ನಾರಾಯಣ ಶೆಟ್ಟಿ,  ವಾಸ: ಹೊಸಮನೆ, ಕೊಡಂಕೂರು, ಪುತ್ತೂರು ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆ ಎಂಬಾತನ್ನು ವಶಕ್ಕೆ ಪಡೆದು ಸಾರ್ವಜನಿಕರಿಂದ ಸಂಗ್ರಹಿಸಿದ ನಗದು ರೂಪಾಯಿ 1,410/- ಮಟ್ಕಾ ನಂಬ್ರ ಬರೆದ ಚೀಟಿ-1, ಮತ್ತು ಬಾಲ್ ಪೆನ್ನು-1 ನ್ನು  ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 62/2023, ಕಲಂ :78 (I) (III) ಕೆಪಿ ಆಕ್ಟ್  ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 28/05/2023 ರಂದು ಶ್ರೀಮತಿ ಮಮತ ಶಂಕರ ನಾಯ್ಕ, ಪೊಲೀಸ್‌ ಉಪನಿರೀಕ್ಷಕರು(ತನಿಖೆ-3), ಉಡುಪಿ ನಗರ ಪೊಲೀಸ್‌ ಠಾಣೆ ಇವರಿಗೆ  ಉಡುಪಿ ತಾಲೂಕು 76 ಬಡಗುಬೆಟ್ಟು ಗ್ರಾಮದ ಮೀನು ಮಾರ್ಕೆಟ್ ಹಿಂಭಾಗ ಖಾಲಿ ಜಾಗದಲ್ಲಿನ ಬಳಿ ಸಾರ್ವಜನಿಕ ಸ್ಥಳದಲ್ಲಿ  ಇಸ್ಪೀಟು ಜುಗಾರಿ ಆಟ ಆಡುತ್ತಿರುವ ಬಗ್ಗೆ ದೊರೆತ ಮಾಹಿತಿಯಂತೆ  ದಾಳಿ ನಡೆಸಿ, ಅಂದರ್‌-ಬಾಹರ್‌ ಇಸ್ಪೀಟು ಜುಗಾರಿ ಆಟವಾಡುತ್ತಿದ್ದ1. ಅಮೀನಸಾಬಿ ಮೊಕಾಶಿ (48), ತಂದೆ: ಜಲಾಲಸಾಬ ವಾಸ: ಬೊಮ್ಮಣಗಿ ಚಿಕ್ಕಗೇರಿ, ಬಾಗಲಕೋಟೆ ಜಿಲ್ಲೆ,  2. ಶಿವಪ್ಪ (38), ತಂದೆ: ದಿ. ಬಸವರಾಜ, ವಾಸ: ಕರೋಡಿ, ಗುಳೇದಗುಡ್ಡ, ಬಾಗಲಕೋಟೆ ಜಿಲ್ಲೆ, 3. ಸುಬ್ರಮಣ್ಯ (30), ತಂದೆ:ನಾರಾಯಣ ,ವಾಸ:ಚೆನ್ನಕೇಶವ ದೇವಸ್ಥಾನದ ಹತ್ತಿರ ಕರ್ಕಿ ಅಂಚೆ ಹೊನ್ನಾವರ ತಾಲೂಕು ಬೇಲಿಗದ್ದೆ ಉ.ಕ ಜಿಲ್ಲೆ. ಹಾಲಿ ವಾಸ:4 ನೇ ಕ್ರಾಸ್ ಪಣಿಯಾಡಿ ಸುಕನ್ಯಾರವರ ಬಾಡಿಗೆ ಮನೆ  ಉಡುಪಿ ಜಿಲ್ಲೆ.  4. ಭರಮಪ್ಪ (48), ತಂದೆ: ಬಾಲಪ್ಪ,  ವಾಸ:ಚಿಲ್ಲಾಪುರ ಹುನಗುಂದ ಬಾಗಲಕೋಟೆ ಜಿಲ್ಲೆ, 5. ಅಮೀನ್ ಸಾಹೇಬ್ (35), ತಂದೆ:ಬನಿಗಿ ಸಾಹೇಬ್,  ವಾಸ:ಹುಲಿಕೇರಿ,ಗುಡೂರು ಬಾದಾಮಿ ತಾಲೂಕು ಬಾಗಲಕೋಟೆ ಜಿಲ್ಲೆ  ಇವರಿಂದ ಆಟಕ್ಕೆ ಬಳಸಿದ ನಗದು ರೂಪಾಯಿ 18,600/-,  ಹಳೆಯ ದಿನಪತ್ರಿಕೆ-1, ಇಸ್ಪೀಟು ಎಲೆಗಳು-52 ನ್ನು  ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 76/2023 ಕಲಂ: 87 ಕರ್ನಾಟಕ ಪೊಲೀಸ್ ಕಾಯಿದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಬೈಂದೂರು: ದಿನಾಂಕ 27/05/2023 ರಂದು ಸಂಜೆ 3:15 ಗಂಟೆಗೆ ಪಿರ್ಯಾದಿದಾರರಾದ ಮಂಜುನಾಥ ಹೆಗ್ಡೆ (48), ತಂದೆ; ಗೋವಿಂದ ಹೆಗ್ಡೆ, ವಾಸ; ಜಡ್ಡಾಡಿಮನೆ, ಅಲ್ಸಾಡಿ, ಕಾಲ್ತೋಡು ಗ್ರಾಮ, ಬೈಂದೂರು ತಾಲೂಕು ಇವರ ಚಿಕ್ಕಪ್ಪ ವೆಂಕಪ್ಪ ಶೆಟ್ಟಿ(68) ರವರೊಂದಿಗೆ ತೆಂಗಿನ ಕಾಯಿ ಕೀಳಲು ತೋಟಕ್ಕೆ ಹೋಗಿದ್ದು ಎರಡು ಮರದ ತೆಂಗಿನಕಾಯಿಯನ್ನು ತೆಗೆದ ನಂತರ ವೆಂಕಪ್ಪ ಶೆಟ್ಟಿಯವರು ಮತ್ತೊಂದು ಮರದ ತೆಂಗಿನಕಾಯಿ ಕೀಳಲು ತೆಂಗಿನ ಮರವನ್ನು ಹತ್ತಿದ್ದು, ತೆಂಗಿನಕಾಯಿ ಕಿತ್ತು ಇಳಿಯುತ್ತಿರುವ ಸಮಯ ಆಕಸ್ಮಿಕವಾಗಿ ಕಾಲುಜ್ಯಾರಿ ಆಯತಪ್ಪಿ ಕೆಳಗಡೆ ಬಿದ್ದಿದ್ದು, ಪಿರ್ಯಾದಿದಾರರು ಅವರನ್ನು ಎತ್ತಿ ಉಪಚರಿಸಿದಾಗ ವೆಂಕಪ್ಪ ಶೆಟ್ಟಿಯವರಿಗೆ ಎಡ ಕೆನ್ನೆ, ಕಣ್ಣಿನ ಬದಿ ಹಾಗೂ ಮೂಗಿನ ಬದಿ ಒಳಜಖಂ ಉಂಟಾಗಿ ಅಸ್ವಸ್ಥರಾಗಿದ್ದವರನ್ನು ಚಿಕಿತ್ಸೆಯ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲಕ್ಕೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು, ಅದರಂತೆ ಮಣಿಪಾಲ ಕೆ ಎಮ್ ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ  ಚಿಕಿತ್ಸೆಯ ಬಗ್ಗೆ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ. ವೆಂಕಪ್ಪ ಶೆಟ್ಟಿಯವರು ಮಣಿಪಾಲ ಕೆ ಎಮ್ ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾ, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 28/05/2023 ರಂದು ಬೆಳಿಗ್ಗೆ 11:10 ಗಂಟೆಗೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 34/2023 ಕಲಂ:  174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     
      

ಇತ್ತೀಚಿನ ನವೀಕರಣ​ : 29-05-2023 09:46 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080