ಅಭಿಪ್ರಾಯ / ಸಲಹೆಗಳು

 ಅಪಘಾತ ಪ್ರಕರಣ

  • ಗಂಗೊಳ್ಳಿ :ಪಿರ್ಯಾದಿ : ಆಲ್ಟನ್ , ಪ್ರಾಯ : 41  ವರ್ಷತಂದೆ: ಆಲ್ಟನ್ ಡಿ ಆಲ್ಮೇಡಾ ವಾಸ: ಆನಗೋಡು ತ್ರಾಸಿ ಗ್ರಾಮ ಇವರು ದಿನಾಂಕ 28 /05/2023  ರಂದು 21.45 ಗಂಟೆಗೆ  ತನ್ನ ಮೋಟಾರ್ ಸೈಕಲ್ ನಲ್ಲಿ ತ್ರಾಸಿ –ಮೊವಾಡಿ ಡಾಂಬರು ರಸ್ತೆಯ ಸಂಜೀವ ಪೂಜಾರಿರವರ ಮನೆಯ ಹತ್ತಿರ ಹೋಗುತ್ತಿರುವಾಗ  ಅವರ ಎದುರುಗಡೆಯಿಂದ   ಮೊವಾಡಿ –ತ್ರಾಸಿ ಡಾಮಾರು ರಸ್ತೆಯಲ್ಲಿ ಓರ್ವ ಆಟೋ ರಿಕ್ಷಾ ಚಾಲಕನು ತನ್ನ ಆಟೋ ರಿಕ್ಷಾವನ್ನು ಅತೀ ವೇಗ ಹಾಗೂ ಅಜಾಗೂರಕತೆಯಿಂದ ಚಲಾಯಿಸಿಕೊಂಡುಬಂದು ಒಮ್ಮೇಲೆ ಬ್ರೇಕ್  ಹಾಕಿದ್ದು ಆಟೋ ರಿಕ್ಷಾ ನಿಯಂತ್ರಣ ತಪ್ಪಿ  ರಸ್ತೆಯ ಬದಿಯಲ್ಲಿರುವ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದಿದ್ದು  ನಂತರ ಸ್ಥಳೀಯ ರಾದ ಶಬರೀಶ ದೇವಾಡಿಗ ಮತ್ತು ವಿವೇಕಾನಂದ ಪೂಜಾರಿ ರವರ ಸಹಾಯದಿಂದ ಉಪಚರಿಸಿದ್ದು ಆಟೋ ರಿಕ್ಷಾ ಚಾಲಕನು  ಪಿರ್ಯಾದಿದಾರ ಪರಿಚಯದ ಗುರುರಾಜ  ಪೂಜಾರಿಯಾಗಿದ್ದು ಹಿಂಬದಿ ಕುಳಿತ್ತಿದ್ದ ವ್ಯಕ್ತಿ ಭಾಸ್ಕರ ಎಂಬುದಾಗಿರುತ್ತದೆ   ಅಪಘಾತದ ಸಮಯ  ಇದ್ದ ಅಟೋ ರಿಕ್ಷಾ ನಂಬ್ರ ಕೆ.ಎ 20 ಎಬಿ 6509 ಆಗಿದ್ದು ಅಪಘಾತದಿಂದಾಗಿ ಚಾಲಕ ಗುರುರಾಜ ಪೂಜಾರಿ ಗೆ ಎಡ ಕೈಗೆ ರಕ್ತ ಗಾಯವಾಗಿದ್ದು ಹಿಂಬದಿ  ಭಾಸ್ಕರನಿಗೆ  ತಲೆಯ ಭಾಗಕ್ಕೆ ರಕ್ತಗಾಯವಾಗಿದ್ದು ಕಿವಿಯಲ್ಲಿ ರಕ್ತ ಬರುತ್ತಿತ್ತು    ಪಿರ್ಯಾದಿದಾರರು ಹಾಗೂ ಸೇರಿದ ಜನರು ಒಂದು ಅಂಬ್ಯುಲೆನ್ಸ್‌ ನಲ್ಲಿ  ಗಾಯಾಳುಗಳನ್ನು ಚಿಕಿತ್ಷೆಯ ಬಗ್ಗೆ ಕುಂದಾಪುರದ ಚಿನ್ನಯಿ ಆಸ್ಪತ್ರೆಗೆ  ಕಳುಹಿಸಿಕೊಟ್ಟಿದ್ದು, ಬಳಿಕ ಗಾಯಾಳು ಭಾಸ್ಕರ   ನನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ  ಕುಂದಾಪುರದ ಚಿನ್ನಯಿ ಆಸ್ಪತ್ರೆಯಿಂದ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರ 10.15 ಗಂಟೆಗೆ ಗಾಯಾಳು ಭಾಸ್ಕರ ರವರು   ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ  .ಈ ಬಗ್ಗೆ  ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ   63/2023 ಕಲಂ: 279, 304 (A )  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಪಿರ್ಯಾದಿವ: ಜನಾರ್ಧನ ಪಾಸ್ವಾನ್ ಪ್ರಾಯ: 35 ವರ್ಷ ತಂದೆ: ಬಿಲಾಸ್ ಪಾಸ್ವಾನ್  ವಾಸ: ಮನಿಯಾರ್ ಮಹಮ್ಮದಿಪುರ ಅಂಚೆ , ಮೊಹದ್ದಿ ನಗರ ಠಾಣಾ, ಸಮಷ್ಠಿಪುರ  ಇವರು ದಿನಾಂಕ 28.05.2023 ರಂದು ರಾತ್ರಿ ಸಮಯ ಸುಮಾರು 08:30 ಗಂಟೆಗೆ ತನ್ನ ಜೊತೆ ಕೆಲಸ ಮಾಡುವ ಜಾಕೀರ್ ಹುಸೇನ್ ರವರೊಟ್ಟಿಗೆ ಈಶ್ವರನಗರ ಜಂಕ್ಷನ್ ಬಳಿ ರಸ್ತೆಯ ಬದಿಯಲ್ಲಿ ರಸ್ತೆದಾಟಲು ನಿಂತುಕೊಂಡಿದ್ದ ಸಮಯ ಆಪಾದಿತ ರಾಘವೇಂದ್ರ ಪೂಜರಿ ತನ್ನ ಬಾಬ್ತು KA 20 HA 8006 ನೇ ಮೋಟಾರ್ ಸೈಕಲ್ ನಲ್ಲಿ ಪರ್ಕಳ ಕಡೆಯಿಂದ ಮಣಿಪಾಲ ಕಡೆಗೆ  ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಭಾಗಕ್ಕೆ ಚಲಾಯಿಸಿಕೊಂಡು ಬಂದು ರಸ್ತೆ ದಾಟಲು ನಿಂತಿದ್ದ ಪಿರ್ಯಾದಿದಾರರು ಮತ್ತು ಅವರೊಟ್ಟಿಗಿದ್ದ ಜಾಕೀರ್ ಹುಸೇನ್  ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ರಸ್ತೆ ಬಿದ್ದಿದ್ದು, ಪಿರ್ಯಾದಿದಾರರ ಎಡಕಾಲಿಗೆ ತೀವ್ರ ತರಹದ  ಒಳ ಜಖಂ ಆಗಿದ್ದು, ಮುಖಕ್ಕೆ ಹಾಗೂ ದೇಹದ ಇತರ ಭಾಗಗಳಿಗೆ ಸಣ್ಣ ಪುಟ್ಟ  ತರಿಚಿದ ಗಾಯಗಳಾಗಿರುತ್ತವೆ, ಜಾಕೀರ್ ಹುಸೇನ್ ರವರಿಗೆ ತಲೆಗೆ ಹಾಗೂ ಕಾಲಿಗೆ ರಕ್ತ ಗಾಯ ಉಂಟಾಗಿರುತ್ತದೆ, ಇವರನ್ನು ಚಿಕಿತ್ಸೆ ಬಗ್ಗೆ ಕೆ ಎಂ ಸಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ.  ಈ ಬಗ್ಗೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ  121/2023 ಕಲಂ: 279, 337, 338  ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 27/05/2023  ರಂದು ಸಂಜೆ  ಸುಮಾರು 7:20  ಗಂಟೆಗೆ, ಕುಂದಾಪುರ  ತಾಲೂಕಿನ, ಹಂಗಳೂರು ಗ್ರಾಮದ ವಿನಾಯಕ ಟಾಕೀಸ್‌ ಬಳಿ, ಪೂರ್ವ ಬದಿಯ NH 66 ರಸ್ತೆಯಲ್ಲಿ, ಆಪಾದಿತ ಸಂದೇಶ್‌ ಯಾದವ್‌ ಎಂಬವರು, KA20-EG-0382ನೇ ಬೈಕನ್ನು ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ  ಚಾಲನೆ ಮಾಡಿಕೊಂಡು ಬಂದು, ರಸ್ತೆ ದಾಟಲು ನಿಂತುಕೊಂಡಿದ್ದ  ಪಿರ್ಯಾದಿ: ಆನಂದ ಸಂಗಪ್ಪ ಅಮರಗತ್ತಿ ಪ್ರಾಯ 30 ವರ್ಷ ತಂದೆ ಸಂಗಪ್ಪ  ಅಮರಗತ್ತಿ ವಾಸ: ಕೋಳಿಹಾಳ ಶರಣ ಬಸವೇಶ್ವರ  ಗುಡಿಯ ಹಿಂದೆ, ಯಲಬುರ್ಗ ತಾಲೂಕು,  ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಎಡಕಾಲಿಗೆ ಒಳಜಖಂ ಗಾಯ, ಬಲ ಹಣೆಗೆ, ಮುಖಕ್ಕೆ ಗಾಯ ಹಾಗೂ ಎದೆಗೆ ಗುದ್ದಿದ ಒಳನೋವಾಗಿ ಕುಂದಾಪುರ  ಸರಕಾರಿ    ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು  ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ  ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಹಾಗೂ ಆಪಾದಿತ ಬೈಕ್ ಸವಾರನು ಗಾಯಗೊಂಡು ಬ್ರಹ್ಮಾವರದ ಪ್ರಣವ್ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ, ಅಪರಾಧ ಕ್ರಮಾಂಕ 73/2023   ಕಲಂ 279, 337   ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 28/05/2023  ರಂದು ರಾತ್ರಿ ಸುಮಾರು 10:00   ಗಂಟೆಗೆ, ಕುಂದಾಪುರ  ತಾಲೂಕಿನ, ಬಸ್ರೂರು  ಗ್ರಾಮದ ಬಸ್ರೂರು ಪೋಸ್ಟ್‌ ಆಫೀಸ್‌ ಬಳಿ ರಸ್ತೆಯಲ್ಲಿ, ಆಪಾದಿತ ನಿತೇಶ ಎಂಬವರು KA20EA-1504ನೇ ಬೈಕಿನಲ್ಲಿ ಮೋಹನ್‌ ಎಂಬವರನ್ನು ಸಹ- ಸವಾರರಾಗಿ ಕುಳ್ಳಿರಿಸಿಕೊಂಡು, ಬಳ್ಕೂರು ಕಡೆಯಿಂದ ಬಸ್ರೂರು ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ  ಸವಾರಿ  ಮಾಡಿಕೊಂಡು ಬಂದು,  ಬಸ್ರೂರು ಕಡೆಯಿಂದ ಬಳ್ಕೂರು ಕಡೆಗೆ ಪಿರ್ಯದಿ ದಾರರಾದ ನಿತಿನ್‌ ಕುಮಾರ್‌ ಎಂಬವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ KA20-EK-0411ನೇ   TVS ಅಪಾಚಿ ಬೈಕಿಗೆ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ ನಿತಿನ್‌ ಕುಮಾರ್‌ ರವರ ಬಲಕಾಲಿನ ಮುಂಗಾಲು ಗಂಟಿಗೆ ಒಳಜಖಂ, ಬಲಕೈ ಹಾಗೂ ತಲೆಗೆ  ರಕ್ತಗಾಯವಾಗಿ ಕುಂದಾಪುರ ನ್ಯೂ ಮೆಡಿಕಲ್‌‌ ಸೆಂಟರ್  ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಹಾಗೂ  ಆಪಾದಿತನು ಗಾಯಗೊಂಡು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾನೆ ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ, ಅಪರಾಧ ಕ್ರಮಾಂಕ 74/2023   ಕಲಂ 279, 337    ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 ಗಂಡಸು ಕಾಣೆ  ಪ್ರಕರಣ

  • ಅಮಾಸೆಬೈಲು: ಪಿರ್ಯಾದಿ: ರತ್ನ ಪ್ರಾಯ (33) ಗಂಡ:  ಸತೀಶ  ವಾಸ: ಕಳಿನಜೆಡ್ಡು ಮಚ್ಟಟ್ಟು  ಗ್ರಾಮ  ಕುಂದಾಪುರ  ಇವರು  ಹಾಗೂ ಅವರ ಗಂಡ ಸತೀಶ ಮತ್ತು ಮಕ್ಕಳೊಂದಿಗೆ ವಾಸವಾಗಿದ್ದು ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ.ಪಿರ್ಯಾದಿದಾರರ ಗಂಡ ಸತೀಶ ರವರು ಗೊಬ್ಬರ ತುಂಬುವ ಕೆಲಸ ಮಾಡಿಕೊಂಡು ಜೀವನ ನಡೆಸಿಕೊಂಡಿರುತ್ತಾರೆ.ದಿನಾಂಕ 24/05/2023 ರಂದು ರಾತ್ರಿ 09:30 ಗಂಟೆಯ ಸಮಯಕ್ಕೆ ಸತೀಶ ಗೊಬ್ಬರ ತುಂಬುವ ಕೆಲಸಕ್ಕೆ  ಆಂದ್ರಕ್ಕೆ ಹೊಗುತ್ತೆನೆಂದು ಹೇಳಿ ಹೋಗಿರುತ್ತಾರೆ .ನಂತ್ರ  ಮೊಬೈಲ್‌ ನಂಬ್ರ 8971606662 ಮತ್ತು8904005663 ನೇ ನಂಬ್ರಕ್ಕೆ ಕರೆ ಮಾಡಿದಲ್ಲಿ ಸ್ವಿಚ್‌ ಆಫ್‌ ಆಗಿರುತ್ತದೆ. ನನ್ನ ಮೈದುನ ಮಂಜನವರಿಗೆ ಕರೆ ಮಾಡಿ ಕೆಳಿದಲ್ಲಿ ಇಲ್ಲಿಗೆ ಬಂದಿರುವುದಿಲ್ಲ, ಎಂದು ತಿಳಿಸಿದ್ದು  ವಾಪಾಸು ಮನೆಗೂ ಬಂದಿರುವುದಿಲ್ಲ. ಪಿರ್ಯಾದಿದಾರರು  ಸಂಬಂಧಿಕರ  ಮನೆಗೆ ಪೋನ್  ಮಾಡಿ ವಿಚಾರಿಸಿದಲ್ಲಿ ಪತ್ತೆಯಾಗದೇ ಇದ್ದು ನಾಪತ್ತೆಯಾಗಿರುತ್ತಾರೆ. ಈ  ಬಗ್ಗೆ ಅಮಾಸೆಬೈಲು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 18/2023 ಕಲಂ ಗಂಡಸು ಕಾಣೆ  ಯಂತೆ ಪ್ರಕರಣ ದಾಖಲಾಗಿರುತ್ತದೆ

 ಅಸ್ವಾಭಾವಿಕ ಮರಣ  ಪ್ರಕರಣ

  • ಬ್ರಹ್ಮಾವರ: ಫಿರ್ಯಾದಿ ಪ್ರಜ್ವಲ್‌ (23)  ತಂದೆ: ಆನಂದ ಪೂಜಾರಿ, ವಾಸ: ಶ್ರೀ ದುರ್ಗಾ, ಕಾಡೂರು ಬೆಳ್ತಾಡಿ, ಕಾಡೂರು ಗ್ರಾಮ ಇವರ  ತಂದೆ ಆನಂದ ಪೂಜಾರಿ ( 55) ರವರು ಕಾಡೂರು ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡಿಕೊಂಡಿದ್ದು, ಇವರು ವ್ಯವಹಾರದಲ್ಲಿ ಸುಮಾರು 20 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡು, ಸಾಲ ಮರುಪಾವತಿಯ ಬಗ್ಗೆ ತಲೆಬಿಸಿ ಮಾಡಿಕೊಂಡಿದ್ದರು. ದಿನಾಂಕ: 28/05/2023 ರಂದು ಬೆಳಿಗ್ಗೆ 6.00 ಗಂಟೆಗೆ ಮನೆಯಿಂದ ಕೆಲಸಕ್ಕೆ ಹೋಗಿದ್ದವರು, ತನ್ನ ವ್ಯವಹಾರ ಹಾಗೂ ಮನೆಯ ಇತರ ಖರ್ಚಿನ ಬಗ್ಗೆ ಸೊಸೈಟಿ ಹಾಗೂ ಇತರ ಕಡೆಗಳಿಂದ ಸಾಲ ಮಾಡಿ ಹಣಕಾಸಿನ ಉಗ್ಗಟ್ಟಿನಲ್ಲಿರುವ ವಿಚಾರದಲ್ಲಿ ಅಥವಾ ಇನ್ನಾವುದೋ ಕಾರಣದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 28/05/2023  ಬೆಳಿಗ್ಗೆ 7:00   ಗಂಟೆಯಿಂದ 7.30  ಗಂಟೆಯ ಮಧ್ಯಾವಧಿಯಲ್ಲಿ ರಂದು ಬ್ರಹ್ಮಾವರ ತಾಲೂಕು, ಕಾಡೂರು  ಗ್ರಾಮದ ಕಾಡೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಪಕ್ಕದ ಮೀಸಲು ಅರಣ್ಯದ ಗೇರು ಮರದ ಕೊಂಬೆಗೆ ನೈಲಾನ್‌ ಹಗ್ಗವನ್ನು ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ   ಯುಡಿಆರ್ ನಂ 43/2023 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ಫಿರ್ಯಾದಿ  ಭಾಸ್ಕರ ಭಟ್‌ (68), ತಂದೆ: ಸೀತಾರಾಮ್‌ ಭಟ್‌, ವಾಸ; ಮನೆ ನಂ 7-52, ಪಾರ್ಥಿಬೆಟ್ಟು, ಚೇರ್ಕಾಡಿ ಗ್ರಾಮ  ಎಂಬಲ್ಲಿರುವ ಮನೆ ನಂ 7-52 ರಲ್ಲಿ ಫಿರ್ಯಾದಿದಾರರ ಜೊತೆ ವಾಸವಾಗಿರುವ ಅವರ ಹೆಂಡತಿ ಲಲಿತಾ ಭಟ್‌ , ಪ್ರಾಯ:59 ವರ್ಷ, ಎಂಬವರಿಗೆ ಮಾನಸಿಕ ಅಸ್ವಸ್ಥೆ ಇದ್ದು,  ಈ ಬಗ್ಗೆ ಕಳೆದ 4 ವರ್ಷಗಳಿಂದ ವೈಧ್ಯರಿಂದ ಚಿಕಿತ್ಸೆ  ಕೊಡಿಸಿದ್ದರೂ ಕೂಡ ಲಲಿತಾ ಭಟ್‌ ರವರು ಆಗಾಗ ಮಂಕಾಗಿ ಕುಳಿತು ಕೊಳ್ಳುತ್ತಿದ್ದು ಅಲ್ಲದೇ ಯಾವಾಗಲೂ ನನಗೆ ಬದುಕುವುದು ಕಷ್ಟ ಎಂದು ಹೇಳುತ್ತಿದ್ದರು. ದಿನಾಂಕ: 29.05.2023 ರಂದು ಬೆಳಿಗ್ಗೆ 09:30   ಗಂಟೆಯಿಂದ 11:30  ಗಂಟೆಯ ಮಧ್ಯಾವಧಿಯಲ್ಲಿ ಫಿರ್ಯಾದಿದಾರರು ಮನೆಯಲ್ಲಿ ಇಲ್ಲದ ಸಮಯ ಲಲಿತಾ ಭಟ್‌ ರವರು ಮನೆಯ ಬೆಡ್‌ ರೂಮ್‌ ನ ಫ್ಯಾನಿಗೆ ನೈಲಾನ್‌ ಹಗ್ಗ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ನೇತಾಡುತ್ತಿದ್ದವರನ್ನು, ಫಿರ್ಯಾದಿದಾರರು ನೋಡಿ ಲಲಿತಾ ಭಟ್‌ ರವರನ್ನು ಉಳಿಸುವ ಉದ್ದೇಶದಿಂದ ಹಗ್ಗದಿಂದ ಬಿಡಿಸಿ ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಮಹೇಶ್‌ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅದಾಗಲೇ ಲಲಿತಾ ಭಟ್‌ ರವರು ಮೃತಪಟ್ಟಿರುವುದಾಗಿ ವೈಧ್ಯರು ತಿಳಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ  ಯುಡಿಆರ್ ನಂ 44/2023 ಕಲಂ 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ಫಿರ್ಯಾದಿ  ಶ್ರೀ ಜೆಫ್ರಿನ್‌ ಡಿಸಿಲ್ವ(66), ತಂದೆ: ದಿ ಪೌಲ್‌ ಡಿಸಿಲ್ವ, ವಾಸ: “ಬೆತೆಲ್‌‌” ಹಂದಾಡಿ ಗ್ರಾಮ,  ಇವರ  ವಾಸದ ಮನೆಯ ಹತ್ತಿರ ವಿರುವ ಅವರ ಮೂಲ ಮನೆಯಲ್ಲಿ ಫಿರ್ಯಾದಿದಾರರ ತಮ್ಮನಾದ ರೋಬರ್ಟ ಡಿಸಿಲ್ವ(60) ರವರು ಒಬ್ಬರೇ ವಾಸವಾಗಿದ್ದು,  ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ. ಅವರು ವಿಪರೀತ ಮಧ್ಯಪಾನ  ಮಾಡುವ ಚಟ ಹೊಂದಿದ್ದು,  ದಿನಾಂಕ:2705/2023 ರಂದು ಸಂಜೆ 7.00 ಗಂಟೆಯ ಸುಮಾರಿಗೆ ವಿಪರೀತ ಮಧ್ಯಾಪಾನ ಮಾಡಿ ಬಂದು ಮಲಗಿದವರು ದಿನಾಂಕ:29/05/2023 ರಂದು ಮಧ್ಯಾಹ್ನ 1.00 ಗಂಟೆಯ ಮಧ್ಯಾವಧಿಯಲ್ಲಿ ಯಾವುದೋ ದೈಹಿಕ ಕಾಯಿಲೆಯಿಂದ ಅಥವ ಹೃದಯಾಘಾತದಿಂದ ಮೃತಪಟ್ಟಿರಬಹುದಾಗಿದೆ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ   ಯುಡಿಆರ್ ನಂ 45/2023 ಕಲಂ 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ:  ಪಿರ್ಯಾದಿ ಕೆ.ಇಕ್ಬಾಲ್(64)ತಂದೆ:  ದಿ/ಖಲೇಬ್ ಸಾಹೇಬ್ ವಾಸ:ರಿಯಾಜ್ ಮಂಝಿಲ್ ವಿಠಲ ರುಖುಮಾಯಿ ದೇವಸ್ಥಾನ ಬಳಿ ಕೋಡಿಬೆಂಗ್ರೆ, ಪಡುತೋನ್ಸೆ ಗ್ರಾಮ  ಇವರ ಮಗ ರಿಯಾಜ್ ಎಂಬುವರು ವಿಪರಿತ ಮಧ್ಯವೆಸನಿಯಾಗಿದ್ದು ದಿನಾಂಕ: 25-05-23 ರಂದು ರಾತ್ರಿ 9:00 ಗಂಟೆಗೆ ಊಟ ಮಾಡಿ ತನ್ನ ರೂಮಿನಲ್ಲಿ ಮಲಗಿದವರು ಬೆಳಿಗ್ಗೆ 10:30 ಗಂಟೆಗೆಯಾದರು ರೂಮಿನಿಂದ ಆಚೆ ಬರದೇ ಇದ್ದಾಗ ಮನೆಯವರು ರೂಮಿನ ಬಾಗಿಲನ್ನು ಬಡೆದು ಕರೆದರು ಬಾಗಿಲನ್ನು ತೆರೆದಿರುವುದಿಲ್ಲ, ನಂತರ ಮನೆಯವರು ಬಾಗಿಲನ್ನು ಒಡೆದು ನೋಡಲಾಗಿ ಆತನು ತನ್ನ ರೂಮಿನೊಳಗೆ ನೈಲಾನ ಹಗ್ಗದಿಂದ ರೂಮಿನ ಮಾಡಿನ ಪಕ್ಕಾಸಿಗೆ ನೈಲಾನ್‌ ಹಗ್ಗ ಕಟ್ಟಿ ತನ್ನ ಕುತ್ತಿಗೆಗೆ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ   ಯುಡಿಆರ್ ನಂ 27/2023  ಕಲಂ 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಉಡುಪಿ: ದಿನಾಂಕ 22.05.2023 ರಂದು ಪಿರ್ಯಾದಿ: ಶ್ರೀ ಪ್ರಜ್ಞಾ ಭಟ್ ಪ್ರಾಯ:21 ವರ್ಷ  ಗಂಡ:ಕೆ.ಕಿರಣ್ ಭಟ್  ವಾಸ:ಶ್ರೀ ಲಕ್ಷ್ಮೀ ನಿಲಯ, ಮೂಡುಬೆಳ್ಳೆ ಗ್ರಾಮ  ಇವರು ಮನೆಗೆ  ಫ್ರೀಡ್ಜ್, ವಾಷಿಂಗ್ ಮಿಶನ್‌ ಅನ್ನು ಖರೀದಿಸುವ ಸಲುವಾಗಿ OLX ಆ್ಯಪ್‌ ನಲ್ಲಿ  ಹುಡುಕುತ್ತಿರುವಾಗ ಯಾರೋ ಅಪರಿಚಿತ ವ್ಯಕ್ತಿ ತಾನು ಮಿಲಿಟರಿಯಲ್ಲಿ ಕೆಲಸ ಮಾಡುತ್ತೀರುವುದಾಗಿ ಎಂಬುದಾಗಿ ತಿಳಿಸಿ ತನ್ನ ಬಳಿ ಮನೆಗೆ ಬೇಕಾದ ವಸ್ತುಗಳು ಕಡಿಮೆ ಬೆಲೆಯಲ್ಲಿ ವಸ್ತುಗಳು ಸಿಗುತ್ತದೆ ಎಂಬುದಾಗಿ ನಂಬಿಸಿ ಪಿರ್ಯಾದಿದಾರರಿಂದ ಹಂತ ಹಂತವಾಗಿ ರೂ. 56,270/- ಹಣವನ್ನು ಆನ್‌ಲೈನ್‌ ಮುಖೇನಾ ಪಡೆದುಕೊಂಡು ಪಿರ್ಯಾದಿದಾರರಿಗೆ ಫ್ರೀಡ್ಜ್, ವಾಷಿಂಗ್ ಮಿಶನ್‌ ನೀಡದೇ ಪಿರ್ಯಾದಿದಾರರಿಗೆ ಪಡೆದ ಹಣವನ್ನು ವಾಪಾಸ್ಸು ನೀಡದೇ ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  98/2023  ಕಲಂ: 66(C)  66(D)   ಐ.ಟಿ. ಆಕ್ಟ್. ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 01.05.2023 ರಂದು ಪಿರ್ಯಾದಿ: ಶಶಿಧರ, ಪ್ರಾಯ 30 ವರ್ಷ, ತಂದೆ: ರಾಮ ನಾಯ್ಕ, ವಾಸ: ಬರಗುಂಡಿ, ಅಲ್ಬಾಡಿ ಇವರು ಫೇಸ್ ಬುಕ್ ನಲ್ಲಿ ಕಂಡುಬಂದ ಪಾರ್ಟ್ ಟೈಮ್ ಜಾಬ್ ನೀಡುವ ಸಂದೇಶವನ್ನು ನಿಜವೆಂದು ನಂಬಿ, ಲಾಗಿನ್ ಆಗಿದ್ದು, ಅದರಲ್ಲಿ ಟಾಸ್ಕ್ ಕಂಪ್ಲೀಟ್ ಮಾಡಿದಲ್ಲಿ ಕಮೀಶನ್ ಹಣ ನೀಡುವ ಬಗ್ಗೆ ಆರೋಪಿಗಳು ಪಿರ್ಯಾದಿದಾರನ್ನು ನಂಬಿಸಿ, ಟಾಸ್ಕ್ ಬಗ್ಗೆ ಹಣ ಹಾಕುವಂತೆ ಟೆಲಿಗ್ರಾಮ್ ಆಪ್ ನಲ್ಲಿ ಬ್ಯಾಂಕ್ ಖಾತೆಗಳನ್ನು ಕಳುಹಿಸಿದ್ದು, ಪಿರ್ಯಾದಿದಾರರು ಪಾರ್ಟ್ ಟೈಮ್ ಜಾಬ್ ಎಂದು ನಂಬಿ, ಆರೋಪಿಗಳು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ದಿನಾಂಕ 15.05.2023 ರಿಂದ 22.05.2023 ರವರೆಗೆ ಒಟ್ಟು ರೂ. 4,87,000/- ಹಣವನ್ನು ಆನ್‌ ಲೈನ್ ಮುಖೇನ ಫೋನ್ ಪೇ ಹಾಗೂ ನೆಫ್ಟ್ ಮುಖೇನ ವರ್ಗಾವಣೆ ಮಾಡಿರುತ್ತಾರೆ. ಆದರೆ, ಯಾರೋ ಅಪರಿಚಿತ ವ್ಯಕ್ತಿಗಳು ಪಾರ್ಟ್‌ಟೈಮ್ ಜಾಬ್ ನೀಡುವುದಾಗಿ ನಂಬಿಸಿ, ಪಿರ್ಯಾದಿದಾರರಿಂದ ಒಟ್ಟು ರೂ. 4,87,000/- ಹಣವನ್ನು ಪಡೆದು, ಜಾಬ್ ನೀಡದೇ ಪಡೆದ ಹಣವನ್ನು ಮರು ನೀಡದೇ ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 99/2023  ಕಲಂ: 66(C)  66(D)   ಐ.ಟಿ. ಆಕ್ಟ್.  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 29-05-2023 06:32 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080