ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ :  ಪಿರ್ಯಾದಿ  ಬಾಬು ಪೂಜಾರಿ  61 ವರ್ಷ, ತಂದೆ: ದಿವಂಗತ ಬಚ್ಚ ಪೂಜಾರಿ , ವಾಸ: ಉದ್ದಲ್‌ಗುಡ್ಡೆ ಹನೇಹಳ್ಳಿ ಪಂಚಾಯತ್‌ ಬಳಿ ಹನೇಹಳ್ಳಿ ಇವರು  ದಿನಾಂಕ 28.05.2022 ರಂದು ಅವರ  ಮನೆಯ ಅಂಗಳದಲ್ಲಿರುವಾಗ ಬಾರ್ಕೂರು ಕೂರಾಡಿ ಮುಖ್ಯ ರಸ್ತೆಯಲ್ಲಿ ಸಮಯ  ಸುಮಾರು ಮಧ್ಯಾಹ್ನ 12:30 ಗಂಟೆಗೆ  MH.04.Q .2236 ನೇ ಮಹೇಂದ್ರ ಜೀಪು ಚಾಲಕ ಆದಿತ್ಯ ನು ಕೂರಾಡಿ ಕಡೆಯಿಂದ  ಬಾರ್ಕೂರು ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬಾರ್ಕೂರು ಕಡೆಯಿಂದ ಕೂರಾಡಿ ಕಡೆಗೆ ಹೋಗುತ್ತಿದ್ದ KA.20.AB.1256 Piaggio Ape City ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದನು. ಈ ಅಪಘಾತದಿಂದ ರಿಕ್ಷಾದ ಚಾಲಕ ಉದಯ ಪೂಜಾರಿಯವರಿಗೆ ತಲೆಗೆ  ಮುಖಕ್ಕೆ  ಕಾಲಿಗೆ ರಕ್ತಗಾಯ ಆಗಿರುತ್ತದೆ. ಪ್ರಯಾಣಿಕರಾದ  ವಿಕಾಸನಿಗೆ ಬಲಕಾಲಿಗೆ ಹಾಗೂ ತಲೆಗೆ ರಕ್ತಗಾಯ, ದೀಪಕ್‌ ಹಾಗೂ ಶ್ರೀರಕ್ಷಾಳಿಗೆ  ಬಲಕಾಲಿಗೆ  ತಲೆಗೆ ಗುದ್ದಿದ  ತರಚಿದ ರಕ್ತಗಾಯವಾಗಿರುತ್ತದೆ. ಕೂಡಲೇ ಅವರುಗಳನ್ನು ಒಂದು  ವಾಹನದಲ್ಲಿ ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಈ ಅಪಘಾತಕ್ಕೆ MH.04.Q .2236 ನೇ ಮೇಹೆಂದ್ರ ಜೀಪು ಚಾಲಕ ಆದಿತ್ಯ ರವರ  ಅತೀ ವೇಗ ಹಾಗೂ ನಿರ್ಲಕ್ಷತನದ ಚಾಲನೆಯೇ ಕಾರಣವಾಗಿರುತ್ತದೆ ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ  94/2022 ಕಲಂ : 279,337,338  IPC ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಪಿಯಾದಿ ಶ್ರೇಯಸ್. ವಿ. ಶೆಟ್ಟಿ ಪ್ರಾಯ: 21 ವರ್ಷ ತಂದೆ: ವಿಜಯ ಶೆಟ್ಟಿ ವಾಸ: ಮಾತೃ ಕೃಪಾ ಬೈಲುಕೆರೆ ಗ್ರಾಮ ಇವರು ದಿನಾಂಕ: 27.05.2022 ರಂದು ರಾತ್ರಿ ಸುಮಾರು 10:00 ಗಂಟೆಗೆ ಅವರ ಸ್ನೇಹಿತ ಸಮರ್ಥನೊಂದಿಗೆ ಉಡುಪಿ ಕಡೆಯಿಂದ  ಮಣಿಪಾಲದ ಕಡೆಗೆ ಹೋಗುತ್ತಿರುವಾಗ ಲಕ್ಷ್ಮೀಂದ್ರ ನಗರದ ಉಡುಪಿ-ಮಣಿಪಾಲ NH169(A) ರಸ್ತೆಯಲ್ಲಿವ  ZUDIO ಬಟ್ಟೆ ಶೋರೂಂ ಬಳಿ ತಲುಪುವಾಗ ಪಿರ್ಯಾದಿದಾರರ ಹಿಂದಿನಿಂದ ಬಂದ KA 20 EW 0349 ನೇ ಮೋಟಾರ್ ಸೈಕಲ್ ನ ಸವಾರನಾದ ರಾಜೇಶ ಕುಮಾರ್ ನು ಮೋಟಾರ್ ಸೈಕಲ್ ನ್ನು ಅತೀ ವೇಗ ಹಾಗೂ ಅಜಾಗುರುಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲ್ ನ್ನು ಎಡ ಬದಿಯಿಂದ ಓವರ್ ಟೇಕ್ ಮಾಡಿ ಮುಂದಕ್ಕೆ ಹೋಗಿ ರಸ್ತೆಯ ಎಡ ಅಂಚಿನಲ್ಲಿ ಸ್ಕಿಡ್ ಆಗಿ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿರುತ್ತಾರೆ ಪರಿಣಾಮ KA 20 EW 0349 ನೇ ಮೋಟಾರ್ ಸೈಕಲ್ ನ ಸವಾರ ರಾಜೇಶ ಕುಮಾರ್ ನಿಗೆ ತಲೆಗೆ ತೀವ್ರತರದ ರಕ್ತಗಾಯವಾಗಿದ್ದು ಹಾಗೂ ಮೈಕೈಗೆ ತರಚಿದ ಗಾಯವಾಗಿರುತ್ತದೆ, ಚಿಕಿತ್ಸೆಯ  ಬಗ್ಗೆ ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ದಾಖಲಿಸಿದ್ದು ನಂತರ ಅವರ ಸ್ನೇಹಿತರು ಅವರನ್ನು ಆದರ್ಶ ಆಸ್ಪತ್ರೆಗೆ ದಾಖಲಿಸರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ  78/2022 ಕಲಂ 279, 338 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.  

ಅಸ್ವಾಭಾವಿಕ ಮರಣ ಪ್ರಕರಣ

  • ಕೋಟ: ಫಿರ್ಯಾದಿ : ಬಾಬಿ ಪ್ರಾಯ 55 ವರ್ಷ ಗಂಡ:ಚಂದ್ರ,  ವಾಸ: ಅಂಡಾರುಕಟ್ಟೆ, ನಂಚಾರು ಗ್ರಾಮ  ಇವರ ತಮ್ಮ ಮಂಜುನಾಥ ಶೆಟ್ಟಿ ಪ್ರಾಯ 50  ವರ್ಷ  ಕೃಷಿ ಕೆಲಸ ಮಾಡಿಕೊಂಡು ಪಿರ್ಯಾದಿದಾರರ ಜೊತೆ ವಾಸವಾಗಿರುತ್ತಾರೆ,  ಮಂಜುನಾಥ ಶೆಟ್ಟಿಯವರ ಹೆಂಡತಿ ಮಕ್ಕಳು ಬಿಲ್ಲಾಡಿಯಲ್ಲಿ ವಾಸವಾಗಿದ್ದು ವಾರಕ್ಕೊಮ್ಮೆ ಹೆಂಡತಿ ಮನೆ   ಬಿಲ್ಲಾಡಿಗೆ  ಹೋಗಿ ಬರುತ್ತಿದ್ದರು. ಪಿರ್ಯಾದಿದಾರರು ದಿನಾಂಕ: 28/05/2022 ರಂದು ಬೆಳಿಗ್ಗೆ08:00 ಗಂಟೆಗೆ ಕೂಲಿ ಕೆಲಸಕ್ಕೆಂದು ಹೊರಗೆ ಹೋಗಿದ್ದು ಮಧ್ಯಾಹ್ನ 2:30 ಗಂಟೆಗೆ ವಾಪಾಸ್ಸು ಮನೆಗೆ ಬಂದಾಗ,  ಮನೆಯ ಎದುರು ಇರುವ ಹಲಸಿನ ಮರದ ಕೆಳಗೆ ಮಂಜುನಾಥ ಶೆಟ್ಟಿಯವರು  ಬಿದ್ದುಕೊಂಡಿದ್ದರು. ಪಿರ್ಯಾದಿದಾರರು ಮಾತನಾಡಿಸಲು ಪ್ರಯತ್ನಿಸಿದಾಗ ಮಾತನಾಡುತ್ತಿರಲಿಲ್ಲ,  ಪಿರ್ಯಾದಿದಾರರ ಮನೆಯ ಎದುರು ಇರುವ  ಹಲಸಿನಹಣ್ಣು ಕೊಯ್ಯಲು  ಮಂಜುನಾಥ ಶೆಟ್ಟಿಯವರು ಮರ ಹತ್ತಿದಾಗ ಆಕಸ್ಮಿಕವಾಗಿ ಕೆಳಗೆ ಬಿದ್ದು ಮೃತ ಪಟ್ಟಿರುವುದಾಗಿದೆ , ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಯು.ಡಿ.ಆರ್ ನಂಬ್ರ 20 /2022 ಕಲಂ: 174 CRPC ಯಂತೆ ಪ್ರಕರಣ ದಾಖಲಿಸಲಾಗಿದೆ.


ಇತರ ಪ್ರಕರಣಗಳು

  • ಬೈಂದೂರು: ಫಿರ್ಯಾದಿ ಮಹಮ್ಮದ್ ಫಹಾದ್  ಪ್ರಾಯ 29 ವರ್ಷ ತಂದೆ:ಮಹಮ್ಮದ್ ಮುಜಾಹಿದ್ ವಾಸ: ಜ್ಯೂನಿಯರ್ ಕಾಲೇಜು ರಸ್ತೆ, ಬೈಂದೂರು ಇವರು ದಿನಾಂಕ; 28/05/2022 ರಂದು ಬೆಳಿಗ್ಗೆ 04.45 ಗಂಟೆಗೆ ಬೆಳಿಗ್ಗಿನ ಪ್ರಾರ್ಥನೆ ಬಗ್ಗೆ ಬೈಂದೂರು  ಜಾಮೀಯ ಮಸೀದಿಯ ಬಳಿ ಹೋದಾಗ ಅಲ್ಲಿ ಫಿರ್ಯಾದಿದಾರರ ಪರಿಚಯದ ಫಯಾಜ್ ಅಲಿ, ಮಟ್ಟಾ ಜಾಫರ್, ಡಿ. ಸುಹೈಲ್ ಹಾಗೂ ಇತರರು ಇದ್ದು, ಸಮಯ ಸುಮಾರು 5;00 ಗಂಟೆಗೆ ಆರೋಪಿತರು ಸೇರಿ ಮಸೀದಿಗೆ ಪ್ರಾರ್ಥನೆ ಮಾಡಲು ಬಂದ ಪಿರ್ಯಾದಿದಾರರನ್ನು ಹಾಗೂ ಅವರೊಂದಿಗೆ ಇದ್ದ ಇತರರನ್ನು ಮಸೀದಿಯ ಒಳಗೆ ಹೋಗದಂತೆ ಅಡ್ಡಗಟ್ಟಿ ತಡೆದು, ಬೋಳಿಮಕ್ಕಳೆ ಮಸೀದಿಯ ಒಳಗೆ ಬಂದರೆ ನಿಮ್ಮನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿರುತ್ತಾರೆ. ಪಿರ್ಯಾದಿದಾರರು  ಹಾಗೂ ಅವರೊಂದಿಗೆ ಇದ್ದವರು ಆರೋಪಿತರಲ್ಲಿ ವಿಚಾರಿಸಿದಾಗ ಆರೋಪಿತರು  ತನಗೆ ಉಡುಪಿಯ ವಕ್ಫ ಬೋರ್ಡ್ ನಿಂದ ಜುಮ್ಮಾ ಹಾಗೂ ನಮಾಝು ಮಾಡುವ ಬಗ್ಗೆ ಆದೇಶ ಇರುವುದಾಗಿ ಹೇಳಿದ್ದು ಆರೋಪಿತನಲ್ಲಿ ಆದೇಶದ ಪ್ರತಿಯನ್ನು ತೋರಿಸಲು ಹೇಳಿದಲ್ಲಿ  ತೋರಿಸದೇ ಮೌಖಿಕವಾಗಿ ತಿಳಿಸಿರುತ್ತಾನೆ. ಉಡುಪಿ ವಕ್ಫ ಬೋರ್ಡ್ ನವರು ಮಸೀದಿಯಲ್ಲಿ ಗುರುಗಳನ್ನು ಬದಲಾಯಿಸುವ ವಿಚಾರದಲ್ಲಿ ಜಾಮೀಯ ಮಸೀದಿಗೆ ಸಂಬಂಧಿಸಿದ ಮುಸ್ಲೀಂ ಸಮಾಜದ ಸಭೆಯನ್ನು ಕರೆಯದೇ ಅಭಿಪ್ರಾಯವನ್ನು ಪಡೆಯದೇ ಏಕಾಏಕಿ ಬೈಂದೂರು ಜಾಮೀಯ ಮಸೀದಿಯಲ್ಲಿ ಗುರುಗಳು ಇರುವಾಗಲೇ ಉಡುಪಿ ವಕ್ಫ ಬೋರ್ಡ್ ನವರು  ಆರೋಪಿತರೊಂದಿಗೆ ಸೇರಿ ಜುಮ್ಮಾ ಹಾಗೂ ನಮಾಝು ಮಾಡುವ ಆದೇಶ ಮಾಡಿರುತ್ತಾರೆ. ಸದ್ರಿ ಘಟನೆಗೆ ಬೈಂದೂರು ಜಾಮೀಯ ಮಸೀದಿಯಲ್ಲಿ ಹಿಂದಿನ ಗುರುಗಳಾದ ಫೈಜುಲ್ ಬಾರಿ ರವರು ರಜೆಯಲ್ಲಿ ಇರುವುದರಿಂದ ಅವರ ಅನುಪಸ್ಥಿತಿಯಲ್ಲಿ ಈ ಹಿಂದೆ ಮಸೀದಿಯಲ್ಲಿ ಮೊಹಝಿನ್ (ಬಾಂಗ್ ಕೂಗುವ) ಮಾಡಿಕೊಂಡಿದ್ದ ಸಿರಾಜ್ ರವರಿಗೆ ಮಸೀದಿಯಲ್ಲಿ ಜುಮ್ಮಾ ಹಾಗೂ ನಮಾಝು ಮಾಡುವ ಬಗ್ಗೆ ವಕ್ಫ ಬೋರ್ಡ್ ನಿಂದ ಆದೇಶ ಆಗಿದ್ದು ಸಿರಾಜ್ ರವರು ಈ ಕರ್ತವ್ಯವನ್ನು ಮಾಡಿಕೊಂಡು ಬರುತ್ತಿದ್ದು ಈ ಮಧ್ಯೆ ಉಡುಪಿ ವಕ್ಫ ಬೋರ್ಡ್ ನವರು  ಆಪಾದಿತನಿಗೆ ಜುಮ್ಮಾ ಹಾಗೂ ನಮಾಝು ಮಾಡಲು ಮೌಖಿಕ ಆದೇಶ ಮಾಡಿರುವುದೆ ಈ ಘಟನೆಗೆ ಕಾರಣವಾಗಿರುತ್ತದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ 103/2022 ಕಲಂ. 143, 341.504, 506 ಜೊತೆಗೆ 149  IPC   ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 29-05-2022 10:28 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080