ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಹೆಬ್ರಿ: ಫಿರ್ಯಾದಿದಾರರಾದ ಮಹೇಶ (22) ತಂದೆ: ಬಸವ ಪರವ ವಾಸ: ದುರ್ಗಾಪರಮೇಶ್ವರಿ ಗಾಂಧಿ ನಗರ ಚಾರ ಗ್ರಾಮ ಹೆಬ್ರಿ ಇವರ ತಂದೆ ಬಸವ ಪರವ ರವರು ದಿನಾಂಕ:26/05/2022 ರಂದು KA.20.V.3375 ನೇ TVS XL ಮೋಟಾರ್ ಸೈಕಲ್ ನ್ನು ಹೆಬ್ರಿ ಕಡೆಯಿಂದ ಚಾರಾ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದು. ಅವರು ಸಂಜೆ ಸಮಯ ಸುಮಾರು 5:30 ಗಂಟೆಗೆ ಚಾರಾ ಲಯನ್ಸ್ ಸರ್ಕಲ್ ನ ಹತ್ತಿರದ ಪೆಟ್ರೊಲ್ ಬಂಕ್ ನ ಬಳಿ ತಲುಪಿದಾಗ ಅವರ ಹಿಂದುಗಡೆಯಿಂದ ಅಂದರೆ ಹೆಬ್ರಿ ಕಡೆಯಿಂದ KA.34.EH.5500 ನೇ ಮೋಟಾರ್ ಸೈಕಲ್ ನ್ನು ಅದರ ಸವಾರ ವಿಶ್ವಾಸ್ ನಾಯಕ್ ಇವರು ಶ್ರೀನಿಧಿ ಇವರನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಮುಂದುಗಡೆ ಯಿಂದ ಹೋಗುತ್ತಿದ್ದ ಬಸವ ಪರವ ರವರ ಮೋಟಾರ್ ಸೈಕಲ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಬಸವ ಪರವ ರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿರುವುದಲ್ಲದೇ ಸವಾರ ವಿಶ್ವಾಸ್ ನಾಯಕ್ ಮತ್ತು ಸಹ ಸವಾರ ಶ್ರೀನಿಧಿ ಇವರು ಸಹ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದಿದ್ದು. ಈ ಘಟನೆಯಿಂದ ಬಸವ ಪರವ ರವರ  ತಲೆಯ ಹಿಂಬದಿಗೆ  ತೀವ್ರ ಸ್ವರೂಪದ ಗುದಿದ್ದ ನೋವಾಗಿದ್ದು. ಸಹ ಸವಾರ ಶ್ರೀನಿಧಿ ರವರಿಗೆ ಸಣ್ಣ ಪುಟ್ಟ ಗುದ್ದಿದ ನೋವಾಗಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 24/2022 ಕಲಂ; 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಾಧಕ ವಸ್ತು ಸೇವನೆ ಪ್ರಕರಣ

  • ಪಡುಬಿದ್ರಿ: ದಿನಾಂಕ 26/05/2022 ರಂದು ಠಾಣಾ ಅಪರಾಧ ಕರ್ತವ್ಯದ ಸಿಬ್ಬಂದಿಯರಾದ ಹೇಮರಾಜ ಇವರು ಕರಿಬಸವರಾಜ ಇವರ ಜೊತೆಯಲ್ಲಿ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ತಡೆಯುವ ಉದ್ದೇಶದಿಂದ ಗಸ್ತು ನಡೆಸುತ್ತಿದ್ದಾಗ ಸಮಯ ಮಧ್ಯಾಹ್ನ 15:00 ಗಂಟೆಗೆ ಕಾಪು ತಾಲೂಕು ನಂದಿಕೂರು ಗ್ರಾಮದ ಅಡ್ವೆ ಬಳಿ ಮೊಹಮ್ಮದ್ಶಾಹಿದ್ ಎಂಬುವರು ಅಮಲು ಪದಾರ್ಥವಾದ ಗಾಂಜಾವನ್ನು ಸೇವಿಸಿದ್ದವನಂತೆ ಕಂಡು ಬಂದಿರುವುದರಿಂದ ಅನುಮಾನಗೊಂಡು ಸದ್ರಿ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆ ತಂದು ಹಾಜರು ಪಡಿಸಿದ್ದು, ಅದರಂತೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಫೊರೆನ್ಸಿಕ್ಮೆಡಿಸಿನ ವಿಭಾಗದ ವೈದ್ಯಾಧಿಕಾರಿಯವರ  ಎದುರು ಹಾಜರು ಪಡಿಸಿ ವೈದ್ಯಕೀಯ ತಪಾಸಣೆಗೊಳಪಡಿಸಿದ್ದು, ಸದ್ರಿ ಮೊಹಮ್ಮದ್ಶಾಹೀದ್ ಎಂಬುವರು ಮಾದಕ ವಸ್ತುವಾದ ಗಾಂಜಾಸೇವಿಸಿರುವುದಾಗಿ ದಿನಾಂಕ 29/05/2022 ರಂದು ವೈದ್ಯರು ದೃಢಪತ್ರವನ್ನು ನೀಡಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 64/2022 ಕಲಂ:27 (B) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ದಿನಾಂಕ: 26.05.2022 ರಂದು  ಠಾಣಾ ಅಪರಾಧ  ಕರ್ತವ್ಯದ ಸಿಬ್ಬಂದಿಯರಾದ  ಹೆಚ್.ಸಿ. 138  ಹೇಮರಾಜ್  ರವರು ಪಿಸಿ 2559 ಕರಿಬಸಜ್ಜ ರವರ ಜೊತೆಯಲ್ಲಿ ಠಾಣಾ ವ್ಯಾಪ್ತಿಯಲ್ಲಿ ಅಪರಾಧ  ತಡೆಯುವ ಉದ್ದೇಶದಿಂದ ಗಸ್ತು ನಡೆಸುತ್ತಿದ್ದಾಗ ಸಮಯ ಮಧ್ಯಾಹ್ನ 15:00 ಗಂಟೆಗೆ ಕಾಪು ತಾಲೂಕು ನಂದಿಕೂರು ಗ್ರಾಮದ ಅಡ್ವೆ ಬಳಿ ಮೊಹಮ್ಮದ್ ಬಿಲಾಲ್ ಎಂಬುವರು ಅಮಲು ಪದಾರ್ಥವಾದ ಗಾಂಜಾವನ್ನು ಸೇವಿಸಿದ್ದವನಂತೆ ಕಂಡು ಬಂದಿರುವುದರಿಂದ ಅನುಮಾನಗೊಂಡು ಸದ್ರಿ  ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆತಂದು ಹಾಜರುಪಡಿಸಿದ್ದು, ಅದರಂತೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಫೊರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯಾಧಿಕಾರಿಯವರ ಎದುರು ಹಾಜರುಪಡಿಸಿ ವೈದ್ಯಕೀಯ ತಪಾಸಣೆಗೊಳಪಡಿಸಿದ್ದು, ಸದ್ರಿ ಮೊಹಮ್ಮದ್ ಬಿಲಾಲ್ ಎಂಬುವರು ಮಾದಕ ವಸ್ತುವಾದ ಗಾಂಜಾ ಸೇವಿಸಿರುವುದಾಗಿ ದಿನಾಂಕ 29/05/2022 ರಂದು ವೈದ್ಯರು ದೃಢ ಪತ್ರವನ್ನು ನೀಡಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 65/2022 ಕಲಂ:27 (B) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ
  • ಪಡುಬಿದ್ರಿ: ದಿನಾಂಕ 26/05/2022 ರಂದು  ಠಾಣಾ ಅಪರಾಧ  ಕರ್ತವ್ಯದ ಸಿಬ್ಬಂದಿಯರಾದ  ಹೆಚ್.ಸಿ. 119 ನೇ ರಾಜೇಶ ರವರು ಪಿ.ಸಿ. 1240 ಸಂದೇಶ ರವರ ಜೊತೆಯಲ್ಲಿ ಠಾಣಾ ವ್ಯಾಪ್ತಿಯಲ್ಲಿ ಅಪರಾಧ  ತಡೆಯುವ ಉದ್ದೇಶದಿಂದ ಗಸ್ತು ನಡೆಸುತ್ತಿದ್ದಾಗ ಸಮಯ ಮಧ್ಯಾಹ್ನ 15:30 ಗಂಟೆಗೆ ಕಾಪು ತಾಲೂಕು ಬಡಾ ಗ್ರಾಮದ  ಪೊಲ್ಯ  ಬಳಿ ಸೈಯ್ಯದ್ ಅಬ್ದುಲ್ಲಾ ಎಂಬುವರು ಅಮಲು ಪದಾರ್ಥವಾದ ಗಾಂಜಾವನ್ನು ಸೇವಿಸಿದ್ದವನಂತೆ ಕಂಡು ಬಂದಿರುವುದರಿಂದ ಅನುಮಾನಗೊಂಡು ಸದ್ರಿ  ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆತಂದು ಹಾಜರುಪಡಿಸಿದ್ದು, ಅದರಂತೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಫೊರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯಾಧಿಕಾರಿಯವರ ಎದುರು ಹಾಜರುಪಡಿಸಿ ವೈದ್ಯಕೀಯ ತಪಾಸಣೆಗೊಳಪಡಿಸಿದ್ದು, ಸದ್ರಿ ಸೈಯ್ಯದ್ ಅಬ್ದುಲ್ಲಾ ಎಂಬುವರು ಮಾದಕ ವಸ್ತುವಾದ ಗಾಂಜಾ ಸೇವಿಸಿರುವುದಾಗಿ ದಿನಾಂಕ 29/05/2022 ರಂದು ವೈದ್ಯರು ದೃಢ ಪತ್ರವನ್ನು ನೀಡಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 66/2022 ಕಲಂ:27 (B) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ದಿನಾಂಕ 27/05/2022 ರಂದು  ಠಾಣಾ ಅಪರಾಧ  ಕರ್ತವ್ಯದ ಸಿಬ್ಬಂದಿಯರಾದ  ಹೆಚ್.ಸಿ. 119 ನೇ ರಾಜೇಶ, ಹೆಚ್.ಸಿ. 138 ಹೇಮರಾಜ್, ಪಿ.ಸಿ. 2559 ಕರಿಬಸಜ್ಜ  ಮತ್ತು ಪಿ.ಸಿ. 1240 ಸಂದೇಶ ರವರು ಠಾಣಾ ವ್ಯಾಪ್ತಿಯಲ್ಲಿ ಅಪರಾಧ  ತಡೆಯುವ ಉದ್ದೇಶದಿಂದ ಗಸ್ತು ನಡೆಸುತ್ತಿದ್ದಾಗ ಸಮಯ ಮಧ್ಯಾಹ್ನ 11:30 ಗಂಟೆಗೆ ಕಾಪು ತಾಲೂಕು ನಡ್ಸಾಲು  ಗ್ರಾಮದ  ಕಂಚಿನಡ್ಕ  ಸುಬ್ಬಯ್ಯನ ಕಾಡು ಎಂಬಲ್ಲಿ  ಅನ್ವರ್ ಎಂಬುವರು ಅಮಲು ಪದಾರ್ಥವಾದ ಗಾಂಜಾವನ್ನು ಸೇವಿಸಿದ್ದವನಂತೆ ಕಂಡು ಬಂದಿರುವುದರಿಂದ ಅನುಮಾನಗೊಂಡು ಸದ್ರಿ  ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆತಂದು ಹಾಜರುಪಡಿಸಿದ್ದು, ಅದರಂತೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಫೊರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯಾಧಿಕಾರಿಯವರ ಎದುರು ಹಾಜರುಪಡಿಸಿ ವೈದ್ಯಕೀಯ ತಪಾಸಣೆಗೊಳಪಡಿಸಿದ್ದು, ಸದ್ರಿ ಅನ್ವರ್ ಎಂಬುವರು ಮಾದಕ ವಸ್ತುವಾದ ಗಾಂಜಾ ಸೇವಿಸಿರುವುದಾಗಿ ಈ ದಿನ ದಿನಾಂಕ: 29.05.2022 ರಂದು ವೈದ್ಯರು ದೃಢ ಪತ್ರವನ್ನು ನೀಡಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 67/2022 ಕಲಂ:27 (B) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾದುದಾರರಾದ ರೇಖಾ ಎ. ಭಂಡಾರಿ (65) ಗಂಡ: ಅಪ್ಪು ಭಂಡಾರಿ  ವಾಸ: ವಾಸ: ಪುಲ್ಲುಂಜ ಮನೆ ಬಾನಂಗಡಿ ಬೋಳ ಗ್ರಾಮ ಕಾರ್ಕಳ  ತಾಲೂಕು ಉಡುಪಿ ಇವರ  ಮಗ ಕಿಶೋರ್ ಭಂಡಾರಿ  (43) ಇವರು  ಸುಮಾರು 7-8  ವರ್ಷಗಳಿಂದ ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡ ಕಾಯಿಲೆ ಬಳಲುತ್ತಿದ್ದು, , ಈ ಬಗ್ಗೆ  ಕಾರ್ಕಳ ನಿಟ್ಟೆ ಗಾಜ್ರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರೂ , ಕಾಯಿಲೆ ಗುಣವಾಗಿರಲಿಲ್ಲ. ಮೂರು ದಿನಗಳ ಹಿಂದೆ ರಕ್ತದೊತ್ತಡ ಕಡಿಮೆಯಾಗಿ ಅಸ್ವಸ್ಥರಾದವರನ್ನು ಕಾರ್ಕಳ ಟಿ. ಎಂ. ಎ. ಪೈ ಆಸ್ಪತ್ರೆಯಲ್ಲಿ  ಚಿಕಿತ್ಸೆ ಕೊಡಿಸಲಾಗಿತ್ತು.  ದಿನಾಂಕ 28/05/2022 ರಾತ್ರಿ 11:00 ಗಂಟೆಗೆ ಮನೆಯ ಜಗುಲಿಯಲ್ಲಿ ಮಲಗಿದವನು ದಿನಾಂಕ 29/05/2022 ರಂದು ಬೆಳಿಗ್ಗೆ 5 ಗಂಟೆಗೆ ಎಬ್ಬಿಸಿದಾಗ ಮಾತನಾಡದೇ ಇದ್ದು, ನೋಡಿದಾಗ ಆತನ ಉಸಿರಾಟ ನಿಂತು ಹೋಗಿದ್ದು,ಆತನು ಮೃತಪಟ್ಟಿದ್ದು, ಕಿಶೋರ್ ಭಂಡಾರಿ ಇವರು ಸಕ್ಕರೆ ಕಾಯಿಲೆಯ ಯಾ ರಕ್ತದೊತ್ತಡ ಕಡಿಮೆಯಾಗುವ ಕಾಯಿಲೆಯಿಂದ, ಹೃದಯಾಘಾತ ಅಥವಾ ಇತರೇ ಕಾರಣದಿಂದ ಮಲಗಿದಲೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಯು.ಡಿ.ಆರ್ ಕ್ರಮಾಂಕ 17/2022 ಕಲಂ 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಫಿರ್ಯಾದುದಾರರಾದ ನಿತ್ಯಾನಂದ  ಒಳಕಾಡುರವರು ಉಡುಪಿಯಲ್ಲಿ  ಸಮಾಜ ಸೇವಕರಾಗಿದ್ದು,  ದಿನಾಂಕ 22/05/2022 ರಂದು ಸಂಜೆ 4:00 ಗಂಟೆಯ ಸುಮಾರಿಗೆ ಉಡುಪಿ ತೆಂಕುಪೇಟೆಯ  ವುಡ್‌ಲ್ಯಾಂಡ್ಸ್ ಹೋಟೆಲ್‌ ರಸ್ತೆಯ ತಾಜ್ ಮಹಲ್‌ ಹೋಟೇಲ್‌ನ ಎದುರಿನ ಕಟ್ಟಡದ ಜಗುಲಿಯ  ಮೇಲೆ  ಓರ್ವ  ಯುವಕನು  ಪ್ರಜ್ಞಾಹೀನ ಸ್ಥಿತಿಯಲ್ಲಿ  ಮಲಗಿರುವುದಾಗಿ ಸಾರ್ವಜನಿಕರು ಕರೆ ಮಾಡಿ  ತಿಳಿಸಿದಂತೆ  ಇವರು  ಸ್ಥಳಕ್ಕೆ  ತೆರಳಿ,  ಸದ್ರಿ  ಅಪರಿಚಿತ  ಯುವಕನನ್ನು  ಅಜ್ಜರಕಾಡು  ಜಿಲ್ಲಾಸ್ಪತ್ರೆಗೆ  ಕರೆದುಕೊಂಡು  ಹೋದಲ್ಲಿ  ಸಂಜೆ  05:10  ಗಂಟೆ ಸುಮಾರಿಗೆ  ಪರೀಕ್ಷಿಸಿದ  ವೈದ್ಯರು ಸದ್ರಿ ಯುವಕನು  ಅದಾಗಲೇ  ಮೃತಪಟ್ಟಿರುವುದಾಗಿ ತಿಳಿಸಿದ್ದು, ಸದ್ರಿ  ಯುವಕನ  ಹಣೆಯಲ್ಲಿ  ಸುಮಾರು 9  ಸೆಂ. ಮೀ.  ಉದ್ದದ  ರಕ್ತಗಾಯವಿದ್ದು,  ಆತನು ಎಲ್ಲೋ ಆಕಸ್ಮಿಕವಾಗಿ ಬಿದ್ದೋ, ಅಥವಾ ಇನ್ನಾವುದೋ  ಕಾರಣದಿಂದಾಗಿ  ಗಾಯಗೊಂಡಿರಬಹುದಾಗಿರುತ್ತದೆ. ಮೃತನು ಅಪರಿಚಿತನಾಗಿದ್ದು, ಹೊರ ಜಿಲ್ಲೆಯ ಅಥವಾ  ಹೊರ ರಾಜ್ಯದ ವಲಸೆ ಕಾರ್ಮಿಕನಂತೆ ಕಂಡು ಬರುತ್ತಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಯು.ಡಿ.ಆರ್ ಕ್ರಮಾಂಕ 31/2022 ಕಲಂ: 174 (3) (iv) ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 29-05-2022 06:45 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080