ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಶ್ರೀಮತಿ ಶಕುಂತಳ (36), ಗಂಡ: ರಾಘವ, ವಾಸ: ನಾಗಾನುಗ್ರಹ ಅಚ್ಲಾಡಿ ಗ್ರಾಮ ಮತ್ತು ಅಂಚೆ ಬ್ರಹ್ಮಾವರ ತಾಲೂಕು,  ಉಡುಪಿ ಜಿಲ್ಲೆ ಇವರು ದಿನಾಂಕ 26/05/2021 ರಂದು ಬೆಳಿಗ್ಗೆ 08:30 ಗಂಟೆಗೆ ಎಂದಿನಂತೆ ಕೆಲಸಕ್ಕೆಂದು ಗಂಡ ರಾಘವ ರವರ ಜೊತೆ KA-20-Y-4560 ನೇ ಸ್ಕೂಟಿಯಲ್ಲಿ  ಸೈಬರಕಟ್ಟೆ ಕಡೆಯಿಂದ ಕೋಟ ಮೂರು ಕೈ ಕಡೆಗೆ ಹೋಗುತ್ತಿರುವಾಗ ಬ್ರಹ್ಮಾವರ ತಾಲೂಕು ವಡ್ಡರ್ಸೆ ಗ್ರಾಮದ ಬಸ್ ನಿಲ್ದಾಣದ ಹಿಂದೆ ಸೈಬ್ರಕಟ್ಟೆ ಕೋಟ ಮೂರ್ ಕೈ ಡಾಮರು ರಸ್ತೆಯಲ್ಲಿ ಬರುತ್ತಿರುವಾಗ ರಾಘವರವರು ಸ್ಕೂಟಿಯನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಎದುರು ಹೋಗುತ್ತಿದ್ದ ಬೇರೆ ವಾಹನವನ್ನು ನೋಡಿ ಅದಕ್ಕೆ ಢಿಕ್ಕಿ ಹೊಡೆಯಬಹುದೆಂದು ತಿಳಿದು ಒಮ್ಮಲೇ ಬ್ರೇಕ್‌ ಹಾಕಿದ ಪರಿಣಾಮ ಪಿರ್ಯಾದಿದಾರರು ನಿಯಂತ್ರಣ ತಪ್ಪಿ ಸ್ಕೂಟಿಯಿಂದ ಜಾರಿ ರಸ್ತೆಯ ಎಡ ಬದಿಗೆ ಬಿದ್ದ ಪರಿಣಾಮ ಅವರ ಎಡ ಭುಜದ ಬಳಿ ಮೂಳೆ ಮುರಿತ ಉಂಟಾಗಿ ಹಾಗೂ ಎಡ ಕಾಲಿನ ಮೊಣಗಂಟಿನ ಬಳಿ ರಕ್ತ ಗಾಯ ಆಗಿರುತ್ತದೆ. ಈ ಬಗ್ಗೆ ಪಿರ್ಯಾದಿದಾರರು ಕೋಟೇಶ್ವರ ಎನ್‌.ಆರ್‌ಆಚಾರ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 108/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ತಾರಾ ಶೆಟ್ಟಿ (70), ತಂದೆ: ಅಚ್ಚನ್ನ ಶೆಟ್ಟಿ, ವಾಸ: ಮಲ್ಲಿಕಾ ನಿವಾಸ ಅಶ್ವತಕಟ್ಟೆ ದುರ್ಗ ಅಂಚೆ ಮತ್ತು  ಗ್ರಾಮ, ಕಾರ್ಕಳ ತಾಲೂಕು ಇವರ ಮಗಳು ಶ್ರೀಮತಿ ರೇಖಾ ಇವರು ಕಾರ್ಕಳ ತಾಲೂಕು ದುರ್ಗಾ ಗ್ರಾಮದ  ಅಶ್ವತ ಕಟ್ಟೆ ಎಂಬಲ್ಲಿ ಪಿರ್ಯಾದಿದಾರರ ಮನೆಯಾದ ಮಲ್ಲಿಕಾ ನಿವಾಸದಲ್ಲಿ  ವಾಸವಾಗಿದ್ದು, ಆಕೆಗೆ  ಮದುವೆಯಾಗಿ ಮೂರು ವರ್ಷವಾಗಿದ್ದು ಗಂಡ ರವಿ ಶೆಟ್ಟಿ ಒಂದು ವರ್ಷದ ಹಿಂದೆ ವೈಯಕ್ತಿಕ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದು ಆ ಬಳಿಕ ರೇಖಾ ರವರು ಮಾನಸಿಕವಾಗಿ ನೊಂದುಕೊಂಡಿದ್ದು ಇದೇ ಕಾರಣದಿಂದ ಮನನೊಂದು  ದಿನಾಂಕ 28/05/2021 ರಂದು ಬೆಳಿಗ್ಗೆ 10:00 ಗಂಟೆಯ ನಂತರ ತನ್ನ ಮನೆಯ ಕೊಠಡಿಯ ಫ್ಯಾನಿಗೆ ಚೂಡಿದಾರ್ ಶಾಲ್ ನಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕಾರ್ಕಳ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 16/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ಪಿರ್ಯಾದಿದಾರರಾದ ಪ್ರವೀಣ್ ಶೆಟ್ಟಿ (42), ತಂದೆ: ಆನಂದ ಶೆಟ್ಟಿ, ವಾಸ: ಸೊರೆಮಕ್ಕಿ ನೇರಳಕಟ್ಟೆ, ಕರ್ಕುಂಜೆ ಗ್ರಾಮ ಇವರ ತಂದೆ ಆನಂದ ಶೆಟ್ಟಿ (70) ರವರು ದಿನಾಂಕ 28/05/2021 ರಂದು 14:30 ಗಂಟೆಗೆ ಮನೆಯಲ್ಲಿ ಅವರ ಕೋಣೆಯಿಂದ ವಿಷದ ಬಾಟಲಿ ಹೊರಗೆ ಎಸೆದಿದ್ದು ಮನೆಯವರೆಲ್ಲ ಹೋಗಿ ನೋಡಲಾಗಿ ಆನಂದ ಶೆಟ್ಟಿ ಯವರು ವಿಷ ಸೇವಿಸಿ ಅಸ್ವಸ್ಥರಾಗಿದ್ದು ಕೂಡಲೇ ಕುಂದಾಪುರ ಆದರ್ಶ ಆಸ್ಪತ್ರೆಗೆ 03:00 ಗಂಟೆಗೆ ಕರೆದುಕೊಂಡು ಹೋದಲ್ಲಿ ಪರೀಕ್ಷೀಸಿದ ವೈಧ್ಯಾಧಿಕಾರಿಯವರು ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಪಿರ್ಯಾದಿದಾರರ ತಂದೆ ವಯೋವೃದ್ದರಾಗಿದ್ದು ಕಣ್ಣು ಕಾಣದೇ ಮನೆಯಲ್ಲಿಯೇ ಇದ್ದು  ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 14/2021 ಕಲಂ: 174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕುಂದಾಪುರ: ದಿನಾಂಕ 25/05/2021 ರಂದು  ಸದಾಶಿವ  ಆರ್‌ ಗವರೋಜಿ, ಪೊಲೀಸ್ ಉಪನಿರೀಕ್ಷಕರು, ಕುಂದಾಪುರ ಪೊಲೀಸ್‌ ಠಾಣೆ ಇವರು ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಕುಂದಾಪುರ ಕಸಬಾ ಗ್ರಾಮದ ಎಮ್‌. ಕೋಡಿ  ಬಳಿ ಇಬ್ಬರು  ವ್ಯಕ್ತಿಗಳು ಗಾಂಜಾ ಸೇವನೆ ಮಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯವರೊಂದಿಗೆ ಕುಂದಾಪುರ ಕಸಬಾ ಗ್ರಾಮದ ಎಮ್‌. ಕೋಡಿಗೆ ಹೋದಾಗ ಅಲ್ಲಿ  ಇಬ್ಬರು ವ್ಯಕ್ತಿಗಳು ತೂರಾಡಿಕೊಂಡು  ಅಮಲಿನಲ್ಲಿರುವುದು ಕಂಡುಬಂದಿದ್ದು, ಅವರುಗಳು  ಮಾದಕ ವಸ್ತು ಸೇವನೆ ಮಾಡಿರುವ ಅನುಮಾನ ಬಂದ ಮೇರೆಗೆ ಅವರನ್ನು ವೈದ್ಯಕೀಯ ತಪಾಸಣೆ ಬಗ್ಗೆ ಪ್ರೊಫೆಸರ್ ಅಂಡ್ ಹೆಡ್  ಫೊರೆನ್ಸಿಕ್ ವಿಭಾಗ ಕೆಎಂಸಿ ಮಣಿಪಾಲರವರ  ಮುಂದೆ ಹಾಜರುಪಡಿಸಿದ್ದು, ಅವರನ್ನು  ಪರೀಕ್ಷಿಸಿದ ವೈದ್ಯರು ಅವರು  ಗಾಂಜಾ ಸೇವಿಸಿರುವುದು  ದೃಢಪಟ್ಟಿರುವುದಾಗಿ  ವರದಿಯನ್ನು ನೀಡಿರುತ್ತಾರೆ. ಆರೋಪಿತರಾದ 1)ರಿಚರ್ಡ್ ಫೆರ್ನಾಂಡೀಸ್ (29), ತಂದೆ: ರೋಕಿ ಫೆರ್ನಾಂಡೀಸ್, ವಾಸ:ಮನೆನಂಬ್ರ 455/7, ಎಮ್. ಕೋಡಿ ಕುಂದಾಪುರ ಕಸಬಾ ಗ್ರಾಮ,  ಕುಂದಾಪುರ ತಾಲೂಕು,   2) ಸಂತೋಷ ಶೆಟ್ಟಿ (22), ತಂದೆ: ಬಾಲಕೃಷ್ಣ ಶೆಟ್ಟಿ, ವಾಸ: ಶ್ರೀ ಮಂಜುನಾಥ ನಿಲಯ, ಪಿಂಗಾಣಿಗುಡ್ಡೆ ತಲ್ಲೂರು  ಗ್ರಾಮ, ಕುಂದಾಪುರ ತಾಲೂಕು ಇವರು ಕೋವಿಡ್-19 ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ಹಾಗೂ ಮಾನ್ಯ ಜಿಲ್ಲಾ ದಂಡಾಧಿಕಾರಿಗಳ ಆದೇಶದ ಬಗ್ಗೆ ತಿಳುವಳಿಕೆ ಇದ್ದರೂ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವವಿದೆಯೆಂದು ತಿಳಿದೂ ಕೂಡಾ ಒಟ್ಟು ಸೇರಿಕೊಂಡು ಗಾಂಜಾ ಸೇವನೆ ಮಾಡಿ ಅಪಾಯಕಾರಿಯಾದ ರೋಗದ ಸೋಂಕನ್ನು ತಡೆಗಟ್ಟುವಲ್ಲಿ ನಿರ್ಲಕ್ಷ್ಯತನ ತೋರಿರುವುದಾಗಿದೆ. ಈ ಬಗ್ಗೆ ಕುಂದಾಪುರ  ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 72/2021 ಕಲಂ: 269 ಐಪಿಸಿ ಮತ್ತು ಕಲಂ: 27(b) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ದಿನಾಂಕ 28/05/2021 ರಂದು ರಾಘವೇಂದ್ರ ಸಿ, ಪೊಲೀಸ್ ಉಪನಿರೀಕ್ಷಕರು, ಕಾಪು ಪೊಲೀಸ್ ಠಾಣೆ ಇವರಿಗೆ ಉದ್ಯಾವರ ಗ್ರಾಮದ ಸೌಂದರ್ಯ ರೆಸಿಡೆನ್ಸಿಯ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜುಗಾರಿ ಆಟ ಆಡುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ದಾಳಿ ನಡೆಸಿ ಇಸ್ಪೀಟ್‌ ಜುಗಾರಿ ಆಡುತ್ತಿರುವವರನ್ನು ಹಿಡಿದು ವಿಚಾರಿಸಲಾಗಿ 01) ಇಸ್ಪೀಟ್ ಎಲೆಗಳನ್ನು ಹಾಕುತ್ತಿದ್ದವನ ಹೆಸರು ಅಶೋಕ (48), ತಂದೆ : ದಿ. ಗಿರಿಯಾ ಪೂಜಾರಿ, ವಾಸ : ಕೆ.ಇ.ಬಿ. ಹತ್ತಿರ ಬೋಳಾರಗುಡ್ಡೆ ಉದ್ಯಾವರ ಗ್ರಾಮ,  02) ರಮೇಶ ನಾರಾಯಣ ಕೋಟ್ಯಾನ್ (30), ತಂದೆ:  ದಿ. ನಾರಾಯಣ ಕೋಟ್ಯಾನ್, ವಾಸ : ಗಣೇಶ ನಗಹರ ಭಗವತಿ ಅನುಗ್ರಹ ಬೋಳಾರಗುಡ್ಡೆ ಉದ್ಯಾವರ ಗ್ರಾಮ, 03) ರಾಘವೇಂದ್ರ (35), ತಂದೆ : ಪದ್ಮನಾಭ, ವಾಸ: ಮನೆ ನಂಬ್ರ 7-145 ಬೋಳಾರಗುಡ್ಡೆ ಪಂಚಾಯ್ತಿ ಹಿಂಭಾಗ ಉದ್ಯಾವರ ಗ್ರಾಮ, 04) ಅಶೋಕ (34), ತಂದೆ:  ದಿ. ಐತು ಬಂಗೇರಾ, ವಾಸ : ಮಠದಂಗಡಿ ಮೀನು ಮಾರುಕಟ್ಟೆ ಹತ್ತಿರ ಉದ್ಯಾವರ ಗ್ರಾಮ,  05) ಉದಯ ಆಚಾರ್ಯ (38), ತಂದೆ : ದಿ. ಗೋಪಾಲ ಆಚಾರ್ಯ, ವಾಸ : ಶಬರಿ ನಿಲಯ ಪಂಚಾಯ್ತಿ ಹಿಂಭಾಗ, ಬೋಳಾರಗುಡ್ಡೆ ಉದ್ಯಾವರ ಗ್ರಾಮ, 06) ರವೀಂದ್ರ (42), ತಂದೆ : ದಿ. ಮಂಜಪ್ಪ ಪೂಜಾರಿ, ವಾಸ : ಅಂಕುದ್ರು ಹೊಳೆ ಬದಿ ಉದ್ಯಾವರ ಗ್ರಾಮ, 07) ಮಹೇಶ (22), ತಂದೆ : ಜಗದೀಶ, ವಾಸ : ಸಂಜೀವಿನಿ ನಿಲಯ, ಬೋಳಾರಗುಡ್ಡೆ ಪಂಚಾಯ್ತಿ ಹತ್ತಿರ, ಉದ್ಯಾವರ ಗ್ರಾಮ,  08) ಯೋಗೀಶ (55), ತಂದೆ : ದಿ. ಮೆನಕಾ, ವಾಸ : ಬೋಳಾರಗುಡ್ಡೆ ಪಂಚಾಯ್ತಿ ಹಿಂಭಾಗ, ಉದ್ಯಾವರ ಗ್ರಾಮ, 09) ಪ್ರವೀಣ (32), ತಂದೆ : ರವಿ, ವಾಸ : ಹರಿ ಫರ್ನಾಂಡಿಸ್‌ರವರ ಬಾಡಿಗೆ ಮನೆ ಅಂಕುದ್ರು ಉದ್ಯಾವರ ಗ್ರಾಮ,  10) ರವೀಂದ್ರ (52), ತಂದೆ : ಕೃಷ್ಣ ದೇವಾಡಿಗ, ವಾಸ : ಗಜನಿ ಹೌಸ್ ಅಂಕುದ್ರು ಉದ್ಯಾವರ ಗ್ರಾಮ ಪಿತ್ರೋಡಿ ಎಂದು ತಿಳಿಸಿದ್ದು ಆರೋಪಿಗಳನ್ನು ದಸ್ತಗಿರಿ ಮಾಡಿ ಸ್ಥಳದಲ್ಲಿದ್ದ  ಆರೋಪಿಗಳು  ಇಸ್ಪೀಟ್ ಜೂಜಾಟಕ್ಕೆ ಬಳಸಿದ ನಗದು ರೂಪಾಯಿ 39,210/-, ರೂಪಾಯಿ, ಅಂದರ್ ಬಾಹರ್ ಆಟಕ್ಕೆ ಬಳಸಲಾದ 52 ಇಸ್ಪೀಟ್ ಎಲೆಗಳು, ನೆಲಕ್ಕೆ ಹಾಸಿದ ತಿಳಿ ಕಂದು ಬಣ್ಣದ ಕೆಂಪು ಹೂವುಗಳಿರುವ ಬೆಡ್‌ಸೀಟ್ ಮತ್ತು  ಆರೋಪಿಗಳು ತಂದ 1) ಗ್ರೇ ಬಣ್ಣದ ಮ್ಯಾಟ್ರೀಕ್ಸ್ ಆ್ಯಕ್ಟಿವ್ ಸ್ಕೂಟರ್ ನಂಬ್ರ ಕೆ.ಎ. 20 ಇ.ಆರ್. 0944,  2) ಕೆಂಪು ಬಣ್ಣದ ಮ್ಯಾಟ್ರೀಕ್ಸ್ ಡಿಯೋ ಸ್ಕೂಟರ್‌ನಂಬ್ರ ಕೆ.ಎ. 20 ಇ.ಎಫ್‌. 5724,  3) ನೀಲಿ ಬಣ್ಣದ ಬಜಾಜ ಕಂಪನಿಯ ಅವೆಂಜರ್ ಮೋಟಾರು ಸೈಕಲ್ ನಂಬ್ರ ಕೆ.ಎ. 20 ಇ.ಎಮ್. 8815,  4) ನೀಲಿ ಬಣ್ಣದ ಯಮಹಾ ಕಂಪನಿಯ ಸ್ಟ್ರೀಟ್ ರ್ಯಾಲಿ ಸ್ಕೂಟರ್‌ನಂಬ್ರ ಕೆ.ಎ. 20 ಇ.ಯು. 3632,  5)  ನೀಲಿ ಬಣ್ಣದ ಮ್ಯಾಟ್ರೀಕ್ಸ್ ಆ್ಯಕ್ಟೀವ್ ಸ್ಕೂಟರ್‌ನಂಬ್ರ ಕೆ.ಎ. 20 ಇ.ವಿ. 6371 , 6) ಕಪ್ಪು ಮತ್ತು ನೀಲಿ ಬಣ್ಣದ ಸಿಟಿ100 ಮೋಟಾರು ಸೈಕಲ್‌ನಂಬ್ರ ಕೆ.ಎ. 20 ಇ.ಪಿ. 9021 ಆಗಿದ್ದು ಸೊತ್ತುಗಳನ್ನು ಮಹಜರ್ ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಆರೋಪಿಗಳು ರಾಜ್ಯ ಸರಕಾರದ ಕೋವಿಡ್-19 ನಿಯಮವನ್ನು ಉಲ್ಲಂಘಿಸಿ ಇಸ್ಪೀಟ್ ಜುಗಾರಿ ಆಟದಲ್ಲಿ  ಭಾಗಿಯಾಗಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 89/2021 ಕಲಂ: 87 KP ACT ಮತ್ತು 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 29-05-2021 09:31 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080