ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಸಚಿನ್‌ ಕುಮಾರ್ (30), ತಂದೆ: ಭಾಸ್ಕರ ಸಾಲ್ಯಾನ್‌, ವಾಸ: ಮನೆ ನಂಬ್ರ: 9-108, ಪಿತ್ರೋಡಿ ಉದ್ಯಾವರ ಗ್ರಾಮ ಉಡುಪಿ ತಾಲೂಕು ಉಡುಪಿ ಜಿಲ್ಲೆ ಇವರ ತಂದೆ ಭಾಸ್ಕರ ಸಾಲ್ಯಾನ್‌    ರವರು ದಿನಾಂಕ 28/04/2023 ರಂದು ಬೆಳಿಗ್ಗೆ 9:20 ಗಂಟೆಗೆ ಮನೆಯಿಂದ ಎಂದಿನಂತೆ ತನ್ನ KA-20-X-3145 ನೇ ನೊಂದಣಿಯ ವೆಗೋ ಸ್ಕೂಟರ್‌ ನಲ್ಲಿ ಕೆಲಸದ ಬಗ್ಗೆ ಮಲ್ಪೆ-ಪಿತ್ರೋಡಿ-ಸಂಪಿಗೆನಗರ ಮಾರ್ಗವಾಗಿ ರಸ್ತೆಯ ಎಡಬದಿಯಲ್ಲಿ ಮಲ್ಪೆ ಕಡೆಗೆ ಹೊರಟು ಹೋಗುತ್ತಾ ಬೆಳಿಗ್ಗೆ 09:25 ಗಂಟೆಗೆ ಪಿತ್ರೋಡಿಯನ್ನು ತಲುಪುವ ವೇಳೆಗೆ ಎದುರಿನಲ್ಲಿ ಮಲ್ಪೆ ಕಡೆಯಿಂದ KA-20-AA-3838 ನೇ ರಿಕ್ಷಾ ಚಾಲಕ ಮಧುಕರ ಕೋಟ್ಯಾನ್‌  ತನ್ನ  ರಿಕ್ಷಾವನ್ನು ಅತೀ ವೇಗ ಹಾಗೂ  ತೀವ್ರ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಭಾಸ್ಕರ ಸಾಲ್ಯಾನ್‌ ರವರ ಸ್ಕೂಟರ್‌ ಗೆ ಡಿಕ್ಕಿ ಹೊಡೆದ ಪರಿಣಾಮ ಭಾಸ್ಕರ ಸಾಲ್ಯಾನ್‌ ರವರು ಸ್ಕೂಟರ್‌ ಸಮೇತ ರಸ್ತೆಗೆ ಬಿದ್ದು, ಬಲಭುಜದ ಮೂಳೆ ಹಾಗೂ ಸೊಂಟದ ಭಾಗದ ಮೂಳೆ ಮುರಿತವಾಗಿರುತ್ತದೆ. ಅಲ್ಲದೇ 2 ವಾಹನಗಳು ಜಖಂಗೊಂಡಿರುತ್ತವೆ.  ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 73/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ನಾಗರತ್ನ (24), ತಂದೆ: ಸುಧಾಕರ,  ವಾಸ: ಮನೆ ನಂಬ್ರ 3-3-120 ಅಂಬಲಪಾಡಿ ಹಳೆ ಅಂಚೆ ಕಚೇರಿ ಹತ್ತಿರ ಅಂಬಲಪಾಡಿ ಗ್ರಾಮ ಉಡುಪಿ ತಾಲೂಕು ಮತ್ತು ಜಿಲ್ಲೆ ಇವರ  ತಂದೆ ಸುಧಾಕರ ರವರು ದಿನಾಂಕ 27/04/2023 ರಂದು ಕೂಲಿ ಕೆಲಸ ಮುಗಿಸಿ ವಾಪಸ್ಸು ಮನೆ ಕಡೆಗೆ ಬರುತ್ತಿರುವಾಗ ರಾತ್ರಿ 7:40 ಗಂಟೆಗೆ ಅಂಬಲಪಾಡಿ ಗ್ರಾಮದ ಅಂಬಲಪಾಡಿ ಹಳೆ ಅಂಛೆಕಛೇರಿಯ ಬಳಿ ಹಾದು ಹೋಗಿರುವ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಯಾವುದೋ ಅಪರಿಚಿತ ವಾಹನದ ಚಾಲಕನು ತನ್ನ ವಾಹನವನ್ನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಾಲಾಯಿಸಿ ಪಿರ್ಯಾದಿದಾರರ ತಂದೆಗೆ ಡಿಕ್ಕಿ  ಹೊಡೆದ ಪರಿಣಾಮ ಪಿರ್ಯಾದಿದಾರರ ತಂದೆ ಸುಧಾಕರ ರವರು ರಸ್ತೆಗೆ ಬಿದ್ದು ತಲೆಗೆ ರಕ್ತ ಗಾಯ, ಎದೆಗೆ ಗುದ್ದಿದ ಒಳಜಖಂ ಹಾಗೂ ಕಾಲುಗಳಿಗೆ ತರಚಿದ ಗಾಯವಾಗಿದ್ದವರನ್ನು  ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಅಪಘಾತಪಡಿಸಿದ ವಾಹನದ ಚಾಲಕನು ವಾಹನವನ್ನು ನಿಲ್ಲಿಸದೇ ವಾಹನ ಸಮೇತ ಪರಾರಿಯಾಗಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 42/2023 ಕಲಂ: 279, 338  ಐಪಿಸಿ  & 134(A&B) ಐಎಂವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೊಲ್ಲೂರು: ಪಿರ್ಯಾದಿದಾರರಾದ ಶ್ರೀಮತಿ ಲಕ್ಷ್ಮೀ  (38), ಗಂಡ: ರಾಜು, ವಾಸ:ಸಾಲಿ ಮಲಗದ್ದೆ ಜಡ್ಕಲ್‌ ಗ್ರಾಮ ಬೈಂದೂರು ತಾಲೂಕು, ಉಡುಪಿ ಜಿಲ್ಲೆ ಇವರು ದಿನಾಂಕ 28/04/2023 ರಂದು ಬೆಳಗ್ಗೆ ಮುದೂರು ಹುಂಡಿಕನಗನಾಡಿ ಎಂಬಲ್ಲಿ ಭಜನೆ  ಕಾರ್ಯಕ್ರಮ ಮುಗಿಸಿ ನೆರೆಮನೆಯ ನಿವಾಸಿ ವಿಶ್ವನಾಥ ಎಂಬುವವರೊಂದಿಗೆ  KA-34-EG-2572 ಮೋಟಾರು ಸೈಕಲ್‌ ನಲ್ಲಿ ಹಿಂಬದಿ ಸಹಸವಾರರಾಗಿ ಕುಳಿತು  ಮುದೂರು ಹುಂಡಿ ಕನಗನಾಡಿ ಕಡೆಯಿಂದ ಜಡ್ಕಲ್‌ ಮಲಗದ್ದೆ  ಕಡೆಗೆ  ಮುದೂರು ಪಂಚಾಯತು ಮಣ್ಣು ರಸ್ತೆಯಲ್ಲಿ ಹೋಗುತ್ತಿದಾಗ ಬೆಳಗ್ಗೆ 06:30 ಗಂಟೆಗೆ ಮುದೂರು ಗ್ರಾಮದ ಕುಂಟನ ಮಡಿಕೆ ಬಳಿ ಆರೋಪಿ ವಿಶ್ವನಾಥ  ಸ್ಕೂಟಿಯನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ನಿಯಂತ್ರಣ ತಪ್ಪಿ ಸ್ಕೂಟಿ ಸಮೇತ ರಸ್ತೆಗೆ ಮಗುಚಿ ಬಿದ್ದ ಪರಿಣಾಮ ಪಿರ್ಯಾದಿದಾರರಿಗೆ ಬಲ ಕಾಲಿನ ಪಾದದ ಬಳಿ ಹಾಗೂ ಮೇಲ್ಭಾಗ ರಕ್ತಗಾಯ ಹಾಗೂ ದೇಹದ ಇತರ ಭಾಗಗಳಿಗೆ ಒಳನೋವು ಉಂಟಾಗಿ ಕುಂದಾಪುರ  ಚಿನ್ಮಯಿ   ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ಚಿಕಿತ್ಸೆ ಯಲ್ಲಿರುವುದಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 24/2023 ಕಲಂ:279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಶಂಕರನಾರಾಯಣ: ಪಿರ್ಯಾದಿದಾರರಾದ ಧರ್ಮಪ್ರಸಾದ ಶೆಟ್ಟಿ (31), ತಂದೆ: ತಾರನಾಥ  ಶೆಟ್ಟಿ,   ವಾಸ: ಹರಿಪ್ರಸಾದ ನಿಲಯ  ಇರ್ಜಿ ಅಂಪಾರು ಗ್ರಾಮ ಕುಂದಾಪುರ  ತಾಲೂಕು ಇವರ ತಂದೆ ತಾರನಾಥ  ಶೆಟ್ಟಿ (65) ಇವರು ಊರಿನಲ್ಲಿ ಕೆಲಸ  ಮಾಡಿಕೊಂಡಿದ್ದು, ಈಗ ಸುಮಾರು ಸಮಯದಿಂದ  ಹೃದಯ  ಸಂಬಂಧಿ  ಕಾಯಿಲೆಯಿಂದ ಬಳಲುತ್ತಿದ್ದು, ಈ ಬಗ್ಗೆ ಮಣಿಪಾಲದ  ಕೆ,ಎಮ್.ಸಿ  ಆಸ್ಪತ್ರೆಯಲ್ಲಿ ಚಿಕಿತ್ಸೆ  ಪಡೆಯುತ್ತಿದ್ದರು ಆದರೆ  ಕಾಯಿಲೆ ಸರಿಯಾಗಿ ಗುಣವಾಗಿರಲಿಲ್ಲಾ ಈ ವಿಷಯದಲ್ಲಿ ಅವರು ಜೀವನದಲ್ಲಿ  ಜಿಗುಪ್ಸೆಗೊಂಡು  ದಿನಾಂಕ 21/04/2023  ರಂದು  ಬೆಳಿಗ್ಗೆ 8:00 ಗಂಟೆಯಿಂದ 11:00 ಗಂಟೆಯ  ಮದ್ಯದ ಅವಧಿಯಲ್ಲಿ ಕುಂದಾಪುರ ತಾಲೂಕಿನ ಅಂಪಾರು  ಗ್ರಾಮದ  ಇರ್ಜಿ ಎಂಬಲ್ಲಿ ಯಾವುದೋ  ವಿಷ  ಪದಾರ್ಥ ಸೇವಿಸಿ ಅಸ್ವಸ್ಥರಾದವರನ್ನು ಚಿಕಿತ್ಸ್ಸೆಯ ಬಗ್ಗೆ  ಕುಂದಾಪುರ ವಿನಯ  ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಯ  ಬಗ್ಗೆ  ಮಣಿಪಾಲದ  ಕೆ,ಎಮ್.ಸಿ   ಆಸ್ಪತ್ರೆಗೆ ಕರೆದುಕೊಂಡು  ಹೋಗಿದ್ದು, ಅಲ್ಲಿ ಚಿಕಿತ್ಸೆಯಲ್ಲಿ ಇರುತ್ತಾ ದಿನಾಂಕ  27/04/2023 ರಂದು  20:10 ಗಂಟೆಗೆ  ಚಿಕಿತ್ಸೆ  ಫಲಕಾರಿಯಾಗದೇ  ಮೃತಪಟ್ಟಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 11/2023  ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ದಿವ್ಯಾಂತ್‌ (19), ತಂದೆ: ನಿತ್ಯಾನಂದ ಶೆಟ್ಟಿಗಾರ್‌, ವಾಸ:  ರೈಲ್ವೆ ಕ್ವಾಟ್ರಸ್‌, ಇಂದ್ರಾಳಿ, ಉಡುಪಿ ತಾಲೂಕು ಮತ್ತು ಜಿಲ್ಲೆ ಇವರ ತಂದೆ ನಿತ್ಯಾನಂದ ಶೆಟ್ಟಿಗಾರ್‌ (48) ರವರು ರೈಲ್ವೆ ಇಲಾಖೆಯಲ್ಲಿ ಟ್ರಾಕ್‌ ಮ್ಯಾನ್‌ ಆಗಿ ಕೆಲಸ ಮಾಡುತ್ತಿರುವಾಗ ತನ್ನ ಬಲ ಕಾಲನ್ನು ಕಳೆದುಕೊಂಡಿದ್ದು, ಪ್ರಸ್ತುತ 3 ವರ್ಷಗಳಿಂದ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಖಲಾಸಿಯಾಗಿ ಕೆಲಸ ಮಾಡಿಕೊಂಡಿದ್ದು, ಇತ್ತೀಚೆಗೆ ಸಾಲಬಾದೆ ವಿಚಾರವಾಗಿ ಮದ್ಯ ಸೇವನೆ ಮಾಡುತ್ತಿದ್ದರು. ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 28/04/2023 ರಂದು 15:00 ಗಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಇಂದ್ರಾಳಿ ರೈಲ್ವೆ ಸ್ಟೇಶನ್‌ ರಸ್ತೆಯಲ್ಲಿರುವ ರೈಲ್ವೆ ಇಲಾಖೆಗೆ ಸೇರಿದ ಬಾವಿಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 22/2023 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ನಿತಿನ್‌ ಪೂಜಾರಿ (40), ತಂದೆ: ದಿ. ಜಿ.ಬಿ ಗೋಪಾಲ, ವಾಸ: ನೀತಾ ನಿವಾಸ, ದೊಡ್ಡಣಗುಡ್ಡೆ, ಶಿವಳ್ಳಿ ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ಉಡುಪಿ ತಾಲೂಕು ದೊಡ್ಡಣಗುಡ್ಡೆಯ ಪಂಚಧೂಮಾವತಿ ದೈವಸ್ಥಾನದ ಗುರಿಕಾರರಾಗಿರುತ್ತಾರೆ. ದಿನಾಂಕ 28/04/2023 ರಂದು ಬೆಳಗಿನ ಜಾವ 02:30 ಗಂಟೆಯಿಂದ 02:51 ಗಂಟೆ ನಡುವಿನ ಸಮಯದಲ್ಲಿ 25 ರಿಂದ 30 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯೊರ್ವನು ದೈವಸ್ಥಾನದ ಹೊರಗಡೆಯ ದೈವದ ಮೂಲಗುಡಿಯ ಪಕ್ಕದಲ್ಲಿರುವ ಕಾಣಿಕೆ ಡಬ್ಬಿಯನ್ನು ಒಡೆದು ಅದರಲ್ಲಿದ್ದ ಅಂದಾಜು ರೂಪಾಯಿ 20,000/- ಹಣವನ್ನು ಕಳವು ಮಾಡಿಕೊಂಡು, ಕೃತ್ಯಕ್ಕೆ ಬಳಸಿದ್ದ ಸುತ್ತಿಗೆಯನ್ನು ಅಲ್ಲಿಯೇ ಬಿಸಾಡಿ ಹೋಗಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 61/2023  ಕಲಂ: 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ವಿಶ್ವನಾಥ. ಎಸ್ ಇವರು 118 - ಬೈಂದೂರು ವಿಧಾನಸಭಾ ಕ್ಷೇತ್ರ ಚುನಾವಣೆಯ ಎಫ್.ಎಸ್.ಟಿ -1 ನೇದರ ಅಧಿಕಾರಿಯಾಗಿದ್ದು,  ಕಂಬದಕೋಣೆ  ಜಟ್ಟಿಗೇಶ್ವರ  ದೇವಸ್ಥಾನದ ಆವರಣದಲ್ಲಿ  ಚುನಾವಣಾ  ನೀತಿ ಸಂಹಿತೆ  ಉಲ್ಲಂಘಿಸಿ  ಚುನಾವಣಾ ಪ್ರಚಾರ  ನಡೆಸುತ್ತಿದ್ದ  ಬಗ್ಗೆ ದೊರೆತ  ಮಾಹಿತಿ ಪ್ರಕಾರ ಎಫ್.ಎಸ್.ಟಿ -1 ಟೀಂ ಜೊತೆಯಲ್ಲಿ ದಿನಾಂಕ 28/04/2023  ರಂದು  ಮಧ್ಯಾಹ್ಮ 12:10 ಗಂಟೆಗೆ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಜಟ್ಟಿಗೇಶ್ವರ ದೇವಸ್ಥಾನ ಕಂಬದಕೋಣೆ ಇಲ್ಲಿ 70 ರಿಂದ 100 ಕುರ್ಚಿಗಳನ್ನು ಹಾಕಲಾಗಿದ್ದು.  80 ಜನ ಮಹಿಳೆಯರು ಹಾಗೂ  20 ಜನ ಪುರುಷರು ಆಸೀನರಾಗಿದ್ದರು. ಕೆಲವು ಪುರುಷರು ಅಂಗಿಗಳ ಮೇಲೆ ಕಮಲ ಚಿಹ್ನೆಯ ಗುರುತು ಇರುವ ಬ್ಯಾಡ್ಜ್ ಹಾಕಿಕೊಂಡಿದ್ದು, ಕೆಲವರು ಕಮಲದ ಚಿಹ್ನೆಯ ಗುರುತು ಇರುವ ಶಾಲು ಹಾಕಿಕೊಂಡಿರುತ್ತಾರೆ. ಆ ಬಳಿಕ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಬಿಜೆಪಿ ಪಕ್ಷದ ಅಭ್ಯರ್ಥಿ ಗುರುರಾಜ ಶೆಟ್ಟಿ ಗಂಟಿಹೊಳೆ ಇವರು ದೇವಸ್ಥಾನದ ಆವರಣದ ಪಕ್ಕಕ್ಕೆ ಬಂದು ಮತ್ತೆ ಗುಂಪು ಸೇರಿಸಿಕೊಂಡು ಚುನಾವಣಾ ಪ್ರಚಾರ ಮಾಡಿರುತ್ತಾರೆ  . ಶ್ರೀ ಜಟ್ಟಿಗೇಶ್ವರ ದೇವಸ್ಥಾನ ಕಂಬದಕೋಣೆ ಇದರ ಆವರಣದಲ್ಲಿ ಚುನಾವಣಾ ನಿಯಮಾನುಸಾರ ಚುನಾವಣಾಧಿಕಾರಿಯಿಂದ ಯಾವುದೇ ಅನುಮತಿ ಪಡೆಯದೇ ಚುನಾವಣಾ ಪ್ರಚಾರ ಮಾಡಿ ಮೂಲಕ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಗುರುರಾಜ ಶೆಟ್ಟಿ ಗಂಟಿಹೊಳೆ ಹಾಗೂ ಪದಾಧಿಕಾರಿಗಳು ಮತ್ತು ಶ್ರೀ ಜಟ್ಟಿಗೇಶ್ವರ ದೇವಸ್ಥಾನಕ್ಕೆ ಸಂಬಂಧ ಪಟ್ಟವರ ಮೇಲೆ ಕ್ರಮ ಕೈಗೊಳ್ಳಬೇಕಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 65/2023 ಕಲಂ:  7 RELIGIOUS  INSTITUTIONS (PREVENTION OF MISUSE ACT 1988) ರಂತೆ ಪ್ರಕರಣ ದಾಖಲಾಗಿರುತ್ತದೆ.  
     

ಇತ್ತೀಚಿನ ನವೀಕರಣ​ : 29-04-2023 09:52 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080