ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಅಮಾಸೆಬೈಲು: ಪಿರ್ಯಾದಿದಾರರಾದ ಅರವಿಂದ (36), ವಾಸ: ಅಮಾಸೆಬೈಲು ಗ್ರಾಮ ಕುಂದಾಪುರ ತಾಲೂಕು ಉಡುಪಿ ಜಿಲ್ಲೆ ಇವರು  ಅಮಾಸೆಬೈಲು ಗ್ರಾಮದ ಪೇಟೆಯ ಸರ್ಕಲ್ ಬಳಿ ತಂದೆ ಶಂಕರ ಪೂಜಾರಿಯವರ KA-20-D-4240 ಆಟೋದಲ್ಲಿ  ದಿನಾಂಕ 12/04/2022 ರಂದು ತನ್ನ ಮಗನಿಗೆ ಅಸೌಖ್ಯದ ಕಾರಣ ಅಮಾಸೆಬೈಲಿಗೆ ಬಂದು 11:00 ಗಂಟೆಯ ಸಮಯಕ್ಕೆ ಕೆಲಾರ್ತಿಬೈಲು ತನ್ನ ಮನೆಯ ಕಡೆಗೆ ಹೋಗುವಾಗ  ಅಮಾಸೆಬೈಲು ಗ್ರಾಮದ ಪೇಟೆಯ ಸರ್ಕಲ್ ಬಳಿ ತಲುಪುವಾಗ ನಾಯಿ ಅಡ್ಡ ಬಂದ ಪರಿಣಾಮ ರಿಕ್ಷಾಕ್ಕೆ ಬ್ರೆಕ್ ಹಾಕಿದ್ದು ಆಟೋದಲ್ಲಿದ್ದ ಪಿರ್ಯಾದಿದಾರರಿಗೆ ಹಾಗೂ ಅವರ ಹೆಂಡತಿ, ಅವರ ತಂದೆ ಶಂಕರ ಪೂಜಾರಿಯವರಿಗೆ ತರಚಿದ ಗಾಯಗಳಾಗಿದ್ದು ಪಿರ್ಯಾದಿದಾರರಿಗೆ ಎಡ ಭುಜ ನೋವಾಗಿ ಕುಂದಾಪುರ ವಿನಯ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ನಂತರ ನೋವು ಕಡಿಮೆಯಾಗದ ಕಾರಣ  18/04/2022 ರಂದು ಪುನಃ ಕುಂದಾಪುರ ವಿನಯ ಆಸ್ಪತ್ರೆಗೆ ತೆರಳಿದಲ್ಲಿ 3 ವಾರಗಳ ವಿಶ್ರಾಂತಿ ಪಡೆಯುವಂತೆ ತಿಳಿಸಿದ್ದು,  ದಿನಾಂಕ: 28/04/2022 ರಂದು ಕೋಟೆಶ್ವರದ ಎನ್ ಆರ್ ಆಚಾರ್ಯ ಆಸ್ಪತ್ರೆಗೆ ಬಂದು ಒಳ ರೋಗಿಯಾಗಿ ದಾಖಲಾಗಿದ್ದು ಮೂಳೆ ಜಖಂ ಆಗಿರುವುದಾಗಿ ತಿಳಿಸಿರುತ್ತಾರೆ. ಪಿರ್ಯಾದಿದಾರರು ಕುಂದಾಪುರ ವಿನಯ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ನಂತ್ರ ನೋವು ಕಡಿಮೆಯಾಗದ  ಕಾರಣ ಕೋಟೆಶ್ವರದ ಎನ್ ಆರ್ ಆಚಾರ್ಯ ಆಸ್ಪತ್ರೆಗೆ ಬಂದು ಒಳ ರೋಗಿಯಾಗಿ ದಾಖಲಾಗಿದ್ದು ಆದ್ದರಿಂದ ದೂರನ್ನು ನೀಡಲು ವಿಳಂಬವಾಗಿರುತ್ತದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 09/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ಪಿರ್ಯಾದಿದಾರರಾದ ಹಸನ್‌ ಸಾಬ್‌ ಅಬ್ಬುಸಾಬ್‌ ಕೂಡಲಗಿ (62), ತಂದೆ: ಅಬ್ಬು ಸಾಬ್‌, ವಾಸ: ತಂಬೂರು, ಕಲ್ಲಘಟಕಿ ತಾಲೂಕು, ದಾರವಾಡ ಜಿಲ್ಲೆ ಇವರು AP-26-TA-5929 ನೇ ಲಾರಿಯಲ್ಲಿ ನಿರ್ವಾಹಕರಾಗಿದ್ದು, ಅದರ ಚಾಲಕನಾದ 2 ನೇ ಆರೋಪಿ ಮೌಲ್ ಆಲಿ ತಡಾಸ್‌ವರು ದಿನಾಂಕ 28/04/2022 ರಂದು ಬೆಳಗ್ಗಿನ ಜಾವ 03:45 ಗಂಟೆಗೆ ಕುಂದಾಪುರ–ಉಡುಪಿ ರಾಷ್ಟ್ರೀಯ ಹೆದ್ದಾರಿ 66ರ  ಚಾಂತಾರು ಗ್ರಾಮದ, ಬ್ರಹ್ಮಾವರ ಆಶ್ರಯ ಹೊಟೇಲ್ ಎದುರುಗಡೆ ವಿಶ್ರಾಂತಿ ಪಡೆಯಲು ರಸ್ತೆಯ ಎಡಬದಿಯ ಒಂದು ಲೇನ್‌ನಲ್ಲಿ ಲಾರಿಯ ಯಾವುದೇ ಇಂಡಿಕೇಟರ್ ಹಾಗೂ ಪಾರ್ಕಿಂಗ್ ಲೈಟ್ ಹಾಕದೇ ಲಾರಿಯನ್ನು ನಿಲ್ಲಿಸಿದ್ದು.  ಆಗ ಪಿರ್ಯಾದಿದಾರರು ಲಾರಿಯ ಟಾಪ್ ಕ್ಯಾಬಿನ್ ನಲ್ಲಿ ಟಾರ್ಪಲ್ ಸರಿಮಾಡುವ ಬಗ್ಗೆ ಲಾರಿಯ ಹಿಂದಿನಿಂದ ಹತ್ತಿ ಕ್ಯಾಬಿನ್‌ಗೆ ಹತ್ತಿಕೊಂಡು ಹೋಗುತ್ತಿರುವ ಸಮಯ ಬ್ರಹ್ಮಾವರ ಕಡೆಯಿಂದ 1 ನೇ ಆರೋಪಿ ವಿಲ್ಸನ್ ರೋಚ್ ರವರು ಅವರ KA-20-AA-5677 ನೇ ಟ್ಯಾಂಕರ್‌ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು  ಬಂದು ರಸ್ತೆಯ ಎಡಬದಿಯಲ್ಲಿ ನಿಲ್ಲಿಸಿದ್ದ ಸದ್ರಿ ಲಾರಿಯ ಹಿಂಭಾಗದ ಬಲಭಾಗಕ್ಕೆ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಲಾರಿಯ ಕ್ಯಾಬಿನ್ ಹತ್ತುತ್ತಿದ್ದ ಪಿರ್ಯಾದಿದಾರರು ಆಯ ತಪ್ಪಿ ಲಾರಿಯ ಒಳಗೆ ಬಿದ್ದುಅವರ ತೊಡೆಯ ಭಾಗ ತೀವ್ರ ಒಳ ಜಖಂ ಆಗಿರುತ್ತದೆ. ಗಾಯಗೊಂಡ ಪಿರ್ಯಾದಿದಾರರನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಮಹೇಶ್ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. 2 ನೇ ಆರೋಪಿಯು ಸಾರ್ವಜನಿಕ ರಸ್ತೆಯಲ್ಲಿ ಇತರ ವಾಹನಗಳ ಸಂಚಾರಕ್ಕೆ ತೊಂದರೆ ಆಗುತ್ತದೆ ಅಲ್ಲದೇ ವಾಹನಗಳ ಚಾಲಕರಿಗೆ ಅಪಾಯವಾಗಬಹುದೆಂದು ತಿಳಿದರೂ ಸಹ ಸರಿಯಾಗಿ ಲಾರಿ  ನಿಲ್ಲಿಸದೇ ಇದ್ದು ಹಾಗೂ 1ನೇ ಆರೋಪಿಯು ನಿಂತಿರುವ ಲಾರಿಯನ್ನು  ನೋಡದೇ ಅತೀವೇಗದಿಂದ ಚಲಾಯಿಸಿದ್ದರಿಂದಲೇ  ಅಪಘಾತವಾಗಿರುತ್ತದೆ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 75/2022 ಕಲಂ: 279, 338, 283 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ : ಪಿರ್ಯಾದಿದಾರರಾದ ನಾಗರಾಜ ಶೆಟ್ಟಿ (29), ತಂದೆ: ಸಂಜೀವ ಶೆಟ್ಟಿ, ವಾಸ:ಮಣೂರು ಪಡುಕೆರೆ ಕೋಟತಟ್ಟು ಬ್ರಹ್ಮಾವರ ತಾಲೂಕು ಇವರು ದಿನಾಂಕ 28/04/2022 ರಂದು ಕೆಲಸದ ನಿಮಿತ್ತ ಕೋಟಕ್ಕೆ ಬಂದು ಕೆಲಸ ಮುಗಿಸಿ ತೆಕ್ಕಟ್ಟೆ ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೋಗುತ್ತಿರುವಾಗ ಮಣೂರು ಗ್ರಾಮದ ಉಮಾನಾಥ ಎಂಬವರ ರೈಸ್ ಮಿಲ್ ಎದುರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಉಡುಪಿ ಕಡೆಯಿಂದ ಕುಂದಾಪುರದ ಕಡೆಗೆ KA-04-MH-4519 ನಂಬ್ರದ ಕಾರು ಚಾಲಕ ಗಣೇಶ ಆಚಾರ್ಯ ತನ್ನ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಭಾಗಕ್ಕೆ ಚಲಾಯಿಸಿಕೊಂಡು ಬಂದು 1:15 ಗಂಟೆಯ ಸಮಯಕ್ಕೆ ರಸ್ತೆಯ ಪಶ್ಚಿಮ ಅಂಚಿನ ಬಳಿ ರಸ್ತೆ ದಾಟಲು ನಿಂತು ಕೊಂಡಿದ್ದ ಪಿರ್ಯಾದಿದಾರರ ಸಂಬಂಧಿ ಸುರೇಂದ್ರ ಶೆಟ್ಟಿ ಗೆ ಢಿಕ್ಕಿ ಹೊಡೆದಿರುತ್ತಾನೆ . ಸುರೇಂದ್ರ ಶೆಟ್ಟಿ ಯವರು ರಸ್ತೆಗೆ ಬಿದ್ದು ಎಡಕಾಲಿನ ಪಾದದ ಗಂಟಿನ ಬಳಿ ಮೂಳೆ ಮುರಿತದ ಒಳಗಾಯ ಆಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 60/2022  ಕಲಂ: 279, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಪಿರ್ಯಾದಿದಾರರಾದ ವಿರೂಪಾಕ್ಷ (41), ತಂದೆ: ದಿ. ಬಸಯ್ಯ, ವಾಸ: ಭರತ್ ನಿಲಯ, 13-103 ಇ, ವಿದ್ಯಾನಗರ, ಪೆರಂಪಳ್ಳಿ, ಶಿವಳ್ಳಿ ಗ್ರಾಮ , ಕುಂಜಿಬೆಟ್ಟು ಪೋಸ್ಟ್ , ಉಡುಪಿ ತಾಲೂಕು ಇವರು ದಿನಾಂಕ 28/04/2022 ರಂದು ಕೆಲಸದ ನಿಮಿತ್ತ ಅಂಬಾಗಿಲಗೆ ಕಾರಿನಲ್ಲಿ ಹೋಗುತ್ತಿರುವ  ಸಮಯ 03:00 ಗಂಟೆಗೆ ಪಿರ್ಯಾದಿದಾರರ ಮುಂದುಗಡೆಯಿಂದ KA-20-EV-3750 ನೇ ಮೋಟಾರ್ ಸೈಕಲ್ ನ್ನು ಅದರ ಸವಾರ ಹಿಂಬದಿಯಲ್ಲಿ ಓರ್ವ ಸಹಸವಾರನನ್ನು ಕುಳ್ಳಿರಿಸಿಕೊಂಡು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಾ ಕಕ್ಕುಂಜೆ ಸಂತೋಷನಗರ ಎಂಬಲ್ಲಿ ರಸ್ತೆಯ ಎಡಬದಿಯಲ್ಲಿ ನಿಲ್ಲಿಸಿದ KA-20-B-3336 ನೇ ಮಿನಿಟಿಪ್ಪರ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ನ ಸವಾರ ಹಾಗೂ ಸಹ ಸವಾರ ಮೋಟಾರ್ ಸೈಕಲ್ ನ ಸಮೇತ ರಸ್ತೆಗೆ  ಬಿದ್ದಿದ್ದು ಮೋಟಾರ್ ಸೈಕಲ್ ನ ಸವಾರನ ತಲೆಗೆ ತೀವ್ರ ಗಾಯವಾಗಿರುತ್ತದೆ. ಪಿರ್ಯಾದಿದಾರರು ಮತ್ತು ಅಲ್ಲಿದ್ದ ಸ್ಥಳೀಯರು ಮೋಟಾರ್ ಸೈಕಲ್ ಸವಾರನನ್ನು ಉಪಚರಿಸಿ ಅಂಬುಲೆನ್ಸ್ ನಲ್ಲಿ ಕೆ ಎಂ ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 60/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾದ ಲೀನಾ ಲಸ್ರಾದೋ (70), ಗಂಡ: ಸ್ಟ್ಯಾನಿ ಲೆಸ್ರಾದೊ, ವಾಸ: ಕುಕ್ಕುಡೆ ಹಾರಾಡಿ ಗ್ರಾಮ ಬ್ರಹ್ಮಾವರ ತಾಲೂಕು ಇವರ ಗಂಡನ ತಮ್ಮ ಒಸಾಲ್ಡ್‌ಲೆಸ್ರಾದೊ (72) ರವರು ಬ್ರಹ್ಮಾವರ ತಾಲೂಕು ಹಾರಾಡಿ ಗ್ರಾಮದ ಕುಕ್ಕುಡೆ ಪರಿಸರದಲ್ಲಿ ಸುತ್ತಾಡಿಕೊಂಡು ರಾತ್ರಿ ಬಸ್ಸು ನಿಲ್ದಾಣದಲ್ಲಿ ಮಲಗುತ್ತಿದ್ದು,  ದಿನಾಂಕ 27/04/2022 ರಂದು ಸಂಜೆ 06:00 ಗಂಟೆಯಿಂದ ದಿನಾಂಕ 28/04/2022 ರಂದು ಸಂಜೆ 4:30  ಗಂಟೆಯ ಮದ್ಯಾವಧಿಯಲ್ಲಿ ಅವರು ಕುಕ್ಕುಡೆ ಸುವರ್ಣ ನದಿಯ ತೀರಕ್ಕೆ ಬಹಿರ್‌ದೆಸೆಗೆ ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ನದಿಯ ನೀರಿಗೆ ಬಿದ್ದು ಮೃತ ಪಟ್ಟಿರಬಹುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ ಠಾಣೆ ಯುಡಿಆರ್ ಕ್ರಮಾಂಕ 21/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಕಳವು ಪ್ರಕರಣ

  • ಪಡುಬಿದ್ರಿ: ದಿನಾಂಕ 28/04/2022 ರಂದು ಬೆಳಿಗ್ಗೆ 11:00 ಗಂಟೆಗೆ ಪಿರ್ಯಾದಿದಾರರಾದ ರೋಹಿಣಿ (48),ಗಂಡ:ರಮೇಶ್ ಪೂಜಾರಿ, ವಾಸ: ಯತೀಶ್ ನಿಲಯ, ಬೆಳ್ಳಿಬೆಟ್ಟು, ಫಲಿಮಾರು ಗ್ರಾಮ ಕಾಪು ತಾಲೂಕು ಇವರು ಮನೆಗೆ ಬೀಗ ಹಾಕಿ ಬೀಗದ ಕೀಯನ್ನು ಅಲ್ಲೇ ಪಕ್ಕದ ಗೋಡೆಯಲ್ಲಿದ್ದ ಹಲಗೆಯಲ್ಲಿ ಇಟ್ಟು ಪಡುಬಿದ್ರಿಗೆ ಸಾಮಾನು ಖರೀದಿಸಲು ಹೋಗಿ, ತನ್ನ ಅಕ್ಕ ಲತಾಳೊಂದಿಗೆ  ವಾಪಾಸ್ಸು 15:00 ಗಂಟೆಗೆ ಮನೆಗೆ ಬಂದು ನೋಡಿದಾಗ ಮನೆಯ ಕೀ ಇಟ್ಟ ಜಾಗದಲ್ಲಿ ಇರದೇ ಇದ್ದು ಅಲ್ಲಿಯೇ ಸ್ವಲ್ಪ ದೂರದಲ್ಲಿ ಇದ್ದು ಮನೆಯ ಬೀಗವನ್ನು ತೆರೆದು ಒಳಗೆ ಹೊಕ್ಕಿದಾಗ ಮನೆಯ ಹಾಲ್ ನಲ್ಲಿ ಇದ್ದ ಕಬ್ಬಿಣದ ಕಪಾಟು ತೆರೆದಿದ್ದು, ಅದರಲ್ಲಿದ್ದ ಸ್ವತ್ತುಗಳು ಚೆಲ್ಲಾಪಿಲ್ಲಿ ಆಗಿದ್ದು ಹಾಗೂ ಮನೆಯ ಒಳಗಿದ್ದ ಕಬ್ಬಿಣದ ಕಪಾಟು ಬಲಾತ್ಕಾರವಾಗಿ ತೆರೆದಂತಿದ್ದು, ಪಿರ್ಯಾದಿದಾರರು ಕಪಾಟಿನಲ್ಲಿಟ್ಟಿದ್ದ ಚಿನ್ನ  ಮತ್ತು ನಗದು ರೂಪಾಯಿ 10500/- ರನ್ನು ಹುಡುಕಾಡಿದಾಗ  ಇರಲಿಲ್ಲ. ಯಾರೋ ಕಳ್ಳರು ದಿನಾಂಕ 28/04/2022 ರಂದು ಬೆಳಿಗ್ಗೆ 11:00 ಗಂಟೆಯಿಂದ ದಿನಾಂಕ 28/04/2022 ರಂದು 15:00 ಗಂಟೆಯ ಮಧ್ಯಾವಧಿಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಮಯ ಮನೆಯ ಕೀ ಬಳಸಿ ಮನೆಯ ಒಳಗೆ ಹೊಕ್ಕಿ ಕಪಾಟುಗಳ ಬಾಗಿಲುಗಳನ್ನು ಬಲಾತ್ಕಾರವಾಗಿ ತೆರೆದು ಕಪಾಟಿನಲ್ಲಿದ್ದ ರೂಪಾಯಿ 10,500/- ನಗದು ಹಾಗೂ 30 ಗ್ರಾಂ ತೂಕದ ಹಳೆಯ ಹಾಗೂ ಎರಡು ವರ್ಷದ ಹಿಂದೆ ಖರೀದಿಸಿದ ½ ಪವನ್ ತೂಕದ ಚಿನ್ನದ ಬೆಂಡೋಲೆ-1 ಜೊತೆ, ತಲಾ 1 ಪವನ್ ತೂಕದ ಚಿನ್ನದ ಚೈನ್-2, ½ ಪವನ್ ತೂಕದ ಚಿನ್ನದ ಬ್ರಾಸ್ಲೈಟ್-1, ¾  ಪವನ್ ತೂಕದ ಚಿನ್ನದ ಉಂಗುರ-2 ಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಚಿನ್ನಾಭರಣಗಳ ಒಟ್ಟು ಮೌಲ್ಯ 75,000/- ರೂಪಾಯಿ ಮತ್ತು ನಗದು 10,500/- ರೂಪಾಯಿ ಆಗಿರುತ್ತದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 51/2022 ಕಲಂ:  454, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತರ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾದ ಉಷಾಲತಾ ಎ ಶೆಟ್ಟಿ (42), ಗಂಡ: ಅಶೋಕ ಶೆಟ್ಟಿ, ವಾಸ: ರಾಜ್‌ ಲೀಲಾ ಹೌಸ್‌, ಮೂಡುತೋನ್ಸೆ ಬೆಟ್ಟು, ಬೆಳ್ಳಂಪಳ್ಳಿ ಗ್ರಾಮ, ಉಡುಪಿ ತಾಲೂಕು ಇವರ ತಂದೆ ದಾಸಪ್ಪ ಹೆಗ್ಡೆ ರವರು ದಿನಾಂಕ 27/04/2022 ರಂದು ಮನೆಯಲ್ಲಿ ಇದ್ದ ನಾಯಿಯು ಗಲೀಜು ಮಾಡಿದ್ದರಿಂದ ನಾಯಿಯನ್ನು ಹೊರಗೆ ಓಡಿಸಿದ್ದು, ಇದೇ ಕಾರಣಕ್ಕೆ ಪಿರ್ಯಾದಿದಾರರ ಅಣ್ಣನಾದ ಆರೋಪಿ ಆಶಿಶ್‌ ಕುಮಾರ್‌ ಹೆಗ್ಡೆ ಯವರು ಬೆಳಿಗ್ಗೆ 11:00 ಗಂಟೆಗೆ ಅವರ ತಂದೆ ದಾಸಪ್ಪ ಹೆಗ್ಡೆ ರವರಿಗೆ ಕೈಯಿಂದ ಎಡಕಿವಿ, ಬೆನ್ನು ಹಾಗೂ ಎರಡೂ ಕಾಲಿಗೆ ಹೊಡೆದಿದ್ದು, ಈ ಹಲ್ಲೆಯಿಂದ ದಿನಾಂಕ 28/04/2022 ರಂದು ದಾಸಪ್ಪ ಹೆಗ್ಡೆರವರಿಗೆ ಮೈ ಕೈ ನೋವು ಜಾಸ್ತಿ ಆಗಿರುವುದರಿಂದ ಪಿರ್ಯಾದಿದಾರರು ತಂದೆಯನ್ನು ಬ್ರಹ್ಮಾವರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ತಂದೆಯ ಮನೆ ಬಾಳ್ತಾರಿಗೆ ಕರೆದುಕೊಂಡು ಹೋಗಿ ಮನೆಯಲ್ಲಿ ಇರುವಾಗ ಮಧ್ಯಾಹ್ನ 1:00 ಗಂಟೆಗೆ ಆರೋಪಿಯು ಮನೆಗೆ ಬಂದು ಪಿರ್ಯಾದಿದಾರರನ್ನು ನೋಡಿ ಅವಾಚ್ಯವಾಗಿ ಬೈದು ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುತ್ತಾನೆ. ಅಲ್ಲದೆ ಆರೋಪಿಯು ಪಿರ್ಯಾದಿದಾರರಿಗೆ ಹೊಡೆಯಲು ಬಂದಾಗ ಅವರ ತಂದೆ ತಪ್ಪಿಸಲು ಬಂದಿದ್ದು, ಅವರಿಗೂ ಕೂಡ ಬಾಯಿಗೆ ಬಂದಂತೆ ಬೈದು ಇಬ್ಬರನ್ನೂ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾನೆ. ಪಿರ್ಯಾದಿದಾರರು ಅವರ ತಂದೆಗೆ ಚಿಕಿತ್ಸೆ ಕೊಡಿಸಿ ಮನೆಗೆ ಕರೆದುಕೊಂಡು ಬಂದಿದ್ದಕ್ಕೆ ಆರೋಪಿಯು ಪಿರ್ಯಾದಿದಾರರಿಗೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 76/2022 ಕಲಂ: 323, 504, 506, 354 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 29-04-2022 10:10 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080