ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಶಂಕರನಾರಾಯಣ: ದಿನಾಂಕ  28/04/2021 ರಂದು ಬೆಳಿಗ್ಗೆ 09:15 ಗಂಟೆಗೆ ಪಿರ್ಯಾದಿದಾರರಾದ ಸುಜಾತ್  ಕುಲಾಲ್ (27), ಗಂಡ: ಜಯರಾಮ ಕುಲಾಲ್, ವಾಸ: ಮೈನಮಕ್ಕಿ  ಮನೆ  ಆಜ್ರಿ ಗ್ರಾಮ ಕುಂದಾಪುರ ತಾಲೂಕು ಇವರು KA-20-EV-4787 ನೇ  ನಂಬ್ರದ  ಬುಲೆಟ್ ಮೋಟಾರ್ ಸೈಕಲ್‌ನಲ್ಲಿ ಸಹ ಸವಾರರಾಗಿ ಕುಳಿತುಕೊಂಡು ಕುಂದಾಪುರ ತಾಲೂಕಿನ ಆಜ್ರಿ ಗ್ರಾಮದ ಶನೇಶ್ವರ  ದೇವಸ್ಥಾನದ ಕ್ರಾಸ ಬಳಿ ಆಜ್ರಿ ಪೇಟೆ ಕಡೆಗೆ  ಹೋಗುತ್ತಿರುವಾಗ ಆರೋಪಿ ಗಣೇಶ್ ಕುಲಾಲ್  ಮೋಟಾರ್ ಸೈಕಲ್‌‌ನ್ನು ಅತೀ  ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಮೋಟಾರ್ ಸೈಕಲ್ ಆರೋಪಿಯ  ಹತೋಟಿ  ತಪ್ಪಿ  ರಸ್ತೆಯ ಮೇಲೆ ಬಿದ್ದ ಪರಿಣಾಮ ಮೋಟಾರ್  ಸೈಕಲ್  ಪಿರ್ಯಾದಿದಾರರ ಬಲಕಾಲಿನ ಮೇಲೆ ಬಿದ್ದು , ಮೂಳೆ  ಮುರಿತದ ಗಾಯವಾಗಿರುತ್ತದೆ. ಆರೋಪಿಗೆ   ಸಹ  ರಕ್ತಗಾಯವಾಗಿದ್ದು, ಎರಡು ಜನರು  ಚಿಕಿತ್ಸೆಯ ಬಗ್ಗೆ   ಕುಂದಾಪುರ ಚಿನ್ಮಯಿ  ಆಸ್ಪತ್ರೆಯಲ್ಲಿ  ದಾಖಲಾಗಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 44/2021  ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಕುಂದಾಪುರ: ಪಿರ್ಯಾದಿದಾರರಾದ ರಾಮ ನಾಯ್ಕ (60), ತಂದೆ: ಪುರುಷ ನಾಯ್ಕ, ವಾಸ: ಶ್ರೀ ಕೃಷ್ಣ ನಿಲಯ, ಕಿರಾಡಿ ಗುಡ್ಡೆ, ಆವರ್ಸೆ ಗ್ರಾಮ, ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ ಇವರ ಮಗ ಶ್ರೀನಿವಾಸ (29) ಎಂಬುವವರು ರಿಂಗ್ ಬಾವಿ ಕೆಲಸ ಮಾಡಿಕೊಂಡಿದ್ದು ದಿನಾಂಕ 28/04/2021 ರಂದು ಉದಯ ಎಂಬುವವರ ಜೊತೆಯಲ್ಲಿ ಮೂಡುಗೋಪಾಡಿಯ ಸತೀಶ್ ಶೆಟ್ಟಿ ಎಂಬುವವರ ಜಾಗದಲ್ಲಿ ರಿಂಗ್ ಬಾವಿ ಕೆಲಸಕ್ಕೆ ಹೋಗಿದ್ದು ಮದ್ಯಾಹ್ನ 14:00 ಗಂಟೆಗೆ ಉದಯರವರು ಪಿರ್ಯಾದಿದಾರರಿಗೆ ದೂರವಾಣಿ ಕರೆ ಮಾಡಿ ಶ್ರೀನಿವಾಸರವರು 15 ಅಡಿ ಆಳದ ಬಾವಿಗೆ ಬಿದ್ದು ಬಾವಿ ರಿಂಗಿಗೆ ಅಳವಡಿಸಿದ ಕಬ್ಬಿಣದ ರಾಡ್ ತಾಗಿ ಗಾಯವಾಗಿದ್ದು ಅವರನ್ನು ಕೋಟೇಶ್ವರ ಎನ್.ಆರ್. ಆಚಾರ್ಯ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ  ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಿದ್ ದುಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ  17:20 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 15/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಅಜೆಕಾರು: ಪಿರ್ಯಾದಿದಾರರಾದ ಪ್ರತೀಮಾ (38), ಗಂಡ: ಸತೀಶ ಶೆಟ್ಟಿ, ವಾಸ:ದೇವಸ್ಯ, ಅಜೆಕಾರು, ಮರ್ಣೆ ಗ್ರಾಮ ಕಾರ್ಕಳ ತಾಲೂಕು ಇವರ ಅಣ್ಣ ಪ್ರವೀಣ್ ಶೆಟ್ಟಿ (46) ಎಂಬುವವರು ಮೊದಲಿಂದಲೂ ವಿಪರೀತ ಮದ್ಯಸೇವನೆಯ ಚಟವನ್ನು ಹೊಂದಿದ್ದು, ಮಾನಸಿಕನಂತೆ ವರ್ತಿಸುತ್ತಿದ್ದು, ಹೆಂಡತಿಯೊಂದಿಗೆ ಜಗಳವಾಡುತ್ತಿದ್ದು ಇದೇ ಕಾರಣದಿಂದ ಹೆಂಡತಿಯು 2 ವರ್ಷದ ಹಿಂದೆ ಬಿಟ್ಟು ಹೋಗಿದ್ದು ಅಂದಿನಿಂದ ತಾಯಿ ಮತ್ತು ಅಣ್ಣ ಇಬ್ಬರೇ ಇದ್ದು ತಾಯಿಯೊಂದಿಗೆ ದಿನವೂ ಜಗಳವಾಡುತ್ತಿದ್ದು, ತಾಯಿಯು ಬೇಸರಗೊಂಡು 1 ವಾರದ ಹಿಂದೆ ತನ್ನ  ಮಗಳ ಮನೆಗೆ ಹೋಗಿದ್ದು  ಇದೇ ಕಾರಣಗಳಿಂದ  ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 28/04/2021 ರಂದು ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 7:45 ಗಂಟೆಯ ಮಧ್ಯಾವಧಿಯಲ್ಲಿ ತನ್ನ ವಾಸದ ಮನೆಯ ಮಾಳಿಗೆಯ ಮರದ ಪಕ್ಕಾಸಿಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ  ಮಾಡಿಕೊಂಡು  ಮೃತಪಟ್ಟಿರುತ್ತಾರೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ ಯುಡಿಆರ್ ಕ್ರಮಾಂಕ 05/2021 ಕಲಂ:  174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಕೋಟ: ಪಿರ್ಯಾದಿದಾರರಾದ ರವೀಂದ್ರ (35), ಅರಣ್ಯ ರಕ್ಷಕ, ಅರಣ್ಯ ಇಲಾಖೆ ಸರಕಾರಿ ವಸತಿ ಗೃಹ  ಕುದ್ರು ಕಟ್ಟೆ ಶಿರಿಯಾರ ಗ್ರಾಮ ಬ್ರಹ್ಮಾವರ ತಾಲೂಕು ಇವರು ಶಂಕರನಾರಾಯಣ ವಲಯದ ಅರಣ್ಯ ರಕ್ಷಕರಾಗಿ ಕರ್ತವ್ಯ ನಿರ್ವಹಿಸಿಕೊಂಡಿರುತ್ತಾರೆ. ಶಿರಿಯಾರ ಗ್ರಾಮದ ಕುದ್ರು ಕಟ್ಟೆ ಯಲ್ಲಿರುವ ಅರಣ್ಯ ಇಲಾಖೆಯ ಸರಕಾರಿ ವಸತಿ ಗೃಹದಲ್ಲಿ  ವಾಸ್ತವ್ಯ ಮಾಡಿಕೊಂಡಿದ್ದವರು ತನ್ನ ಸಹೋದರನ ಮದುವೆಗೆಂದು ರಜೆಯಲ್ಲಿ ಹೋದವರು ದಿನಾಂಕ 26/04/2021 ರಂದು ಮಧ್ಯಾಹ್ನ 12:45 ಗಂಟೆಗೆ ಅಗತ್ಯ ಕಾರ್ಯದ ನಿಮಿತ್ತ  ವಸತಿ ಗೃಹಕ್ಕೆ ಬಂದು ವಾಪಾಸ್ಸು ತೆರಳಿರುತ್ತಾರೆ.  ದಿನಾಂಕ 28/04/2021 ರಂದು ಕರ್ತವ್ಯಕ್ಕೆ ಮರಳಿ ಬಂದವರು ಬೆಳಿಗ್ಗೆ 10:45  ಗಂಟೆಗೆ ವಸತಿ ಗೃಹಕ್ಕೆ ಬಂದು ನೋಡುವಾಗ, ವಸತಿ  ಗೃಹದ ಎದುರಿನ ಬಾಗಿಲಿನ ಬೀಗ ಮುರಿದಿದ್ದು ಒಳಗಡೆಯಿಂದ ಚಿಲಕ ಹಾಕಿರುವುದು ಕಂಡು ಬರುತ್ತದೆ. ಹಿಂಬದಿ ತೆರಳಿ ನೋಡಲಾಗಿ ಹಿಂಬದಿ ಬಾಗಿಲು ತೆಗೆದು ಹಾಕಿದ್ದು, ಒಳ ಬಂದು ನೋಡಿದಾಗ ಮೇಜಿನ ಡ್ರಾಯರ್ ಒಡೆದು ಹಾಕಿದ್ದು, ಒಳಗಿನ ಕೆಲವು ವಸ್ತುಗಳು ಹರಡಿ ಕೊಂಡಿದ್ದು ಡ್ರಾಯರ್ ಒಳಗೆ ಇಟ್ಟಿದ್ದ 75,000/- ರೂಪಾಯಿಯನ್ನು ಯಾರೋ ಕಳ್ಳರು  ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 71//2021 ಕಲಂ: 457,380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

  • ಕುಂದಾಪುರ: ದಿನಾಂಕ 25/04/2021 ರಂದು ಸಂಜೆ 18:40 ಗಂಟೆಗೆ ಫಣಿರಾಜ್, ಸಹಾಯಕ ಪೊಲೀಸ್ ಉಪನಿರೀಕ್ಷಕರು,  ಕುಂದಾಪುರ ಗ್ರಾಮಾಂತರ ಠಾಣೆ ಇವರು ರೌಂಡ್ಸ್ ಕರ್ತವ್ಯದಲ್ಲಿರುವಾಗ ಕನ್ಯಾನ ಗ್ರಾಮದ ಗುಡ್ಡೆಯಂಗಡಿ ಮೈದಾನ ಬಳಿ ಗಾಂಜಾ ಸೇವನೆ ಬಗ್ಗೆ ಬಂದ ಮಾಹಿತಿಯಂತೆ ಆಪಾದಿತರಾದ 1)ಅಶ್ವಥ್, ತಂದೆ:ಮಂಜುನಾಥ,ವಾಸ:ಗುಡ್ಡೆಯಂಗಡಿ ಕನ್ಯಾನ ಗ್ರಾಮ ಕುಂದಾಪುರ, 2) ಕಿಶನ್ , ತಂದೆ: ಶಿವರಾಮ, ವಾಸ:ಗುಡ್ಡೆಯಂಗಡಿ ಕನ್ಯಾನ ಗ್ರಾಮ, 3) ಪ್ರಥ್ವಿರಾಜ್ ), ತಂದೆ:ಚಂದ್ರ ಗುಡ್ಡೆಯಂಗಡಿ, ಹಟ್ಟಿಯಂಗಡಿ ಗ್ರಾಮ ಕುಂದಾಪುರ ಇವರನ್ನು ವಶಕ್ಕೆ ಪಡೆದು ದಿನಾಂಕ 26/04/2021 ರಂದು ಮಣಿಪಾಲ ಕೆ.ಎಂ,ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ತಜ್ಞರ ಮುಂದೆ ಹಾಜರುಪಡಿಸಿದ್ದು ದಿನಾಂಕ 28/04/2021 ರಂದು ಆಪಾದಿತರು ಗಾಂಜಾ ಸೇವಿಸಿರುವುದಾಗಿ ದೃಢಪತೃ ನೀಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 23/2020 ಕಲಂ: 27(b) NDPS ACT ರಂತೆ ಪ್ರಕರಣ ದಾಖಲಾಗಿರುತ್ತದೆ.     

ಇತ್ತೀಚಿನ ನವೀಕರಣ​ : 29-04-2021 10:10 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080