ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾದ ಅರುಣ್ ಕುಮಾರ್ ಪಿ ಆರ್ (39) ತಂದೆ: ರಾಮ ಕೋಟ್ಯಾನ್ ವಾಸ: ಕರಿಯ ಕೋಡ ಮನೆ, ಕಾಡಿಪಟ್ನ, ನಡ್ಸಾಲು ಗ್ರಾಮ, ಪಡುಬಿದ್ರಿ ಅಂಚೆ, ಕಾಪು ಇವರ ತಮ್ಮ ಅನಿಲ್ ಕುಮಾರ್ (34) ಎಂಬುವರು ವಿಪರೀತ ಮದ್ಯಪಾನದ ವ್ಯಸನ ಹೊಂದಿದ್ದು 3-4 ವರ್ಷಗಳಿಂದ ಖಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ  ಉಡುಪಿ ಆದರ್ಶ ಆಸ್ಪತ್ರೆ ಹಾಗೂ ಮೂಲ್ಕಿ ಕುಡ್ವ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡಿರುತ್ತಾರೆ. ವಿಪರೀತ ಮದ್ಯಪಾನದಿಂದ ಕರುಳಿಗೆ ತೊಂದರೆಯಾಗಿರುವ ಬಗ್ಗೆ ಮದ್ಯಪಾನ ಮಾಡದಂತೆ ವೈದ್ಯರು ತಿಳಿಸಿದ್ದರೂ ವಿಪರೀತ ಮದ್ಯಪಾನ ಮಾಡಿಕೊಂಡಿದ್ದು ಕೆಲವೊಮ್ಮೆ ಮನೆಗೆ ಬಾರದೇ ಅಲ್ಲಲ್ಲಿ ಮಲಗುತ್ತಿದ್ದನು. ದಿನಾಂಕ 29/04/2021 ರಂದು ಬೆಳಿಗ್ಗೆ ಅರುಣ್ ಕುಮಾರ್ ಪಿ ಆರ್ ರವರ ಪರಿಚಯದ ಅರವಿಂದ ರವರ ಮನೆಗೆ ಅನಿಲ್ ಕುಮಾರ್ ನು ವಿಪರೀತ ಮದ್ಯಪಾನ ಮಾಡಿಕೊಂಡು ಹೋದವನು ಅಲ್ಲಿ ಮಧ್ಯಾಹ್ನ ದವರೆಗೆ ಮಲಗಿದ್ದು ಮಧ್ಯಾಹ್ನ 12:30 ಗಂಟೆ ತೀವ್ರ ಅಸ್ವಸ್ಥಗೊಂಡು ಮಲಗಿದ್ದಲ್ಲೇ ಮಲ ವಿಸರ್ಜನೆ ಮಾಡಿಕೊಂಡಿದ್ದವನನ್ನು ಅರವಿಂದ ಮತ್ತು ಬಸವ ಎಂಬವರು ಸ್ನಾನ ಮಾಡಿಸಿ, ಬೇರೆ ಬಟ್ಟೆ ಹಾಕಿಸಿ ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಾಗ ವೈದ್ಯರು ಪರೀಕ್ಷಿಸಿ  ಆತನ ಸ್ಥಿತಿ ಗಂಭೀರವಾಗಿದ್ದು ಹೆಚ್ಚಿನ ಚಿಕಿತ್ಸೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದಾಗ ಆಂಬುಲೆನ್ಸ್‌ನಲ್ಲಿ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ಮಧ್ಯಾಹ್ನ 2:00 ಗಂಟೆಗೆ ಕರೆದುಕೊಂಡು ಹೋದಾಗ ಅನಿಲ್ ಕುಮಾರ್‌ನನ್ನು ವೈದ್ಯರು ಪರೀಕ್ಷಿಸಿ  ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 09/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಮಣಿಪಾಲ: ದಿನಾಂಕ 28/04/2021 ರಂದು ಕರೋನಾ ವೈರಸ್ ಕಾಯಿಲೆ ಸೊಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅನಾವಶ್ಯಕವಾಗಿ ಸಂಚರಿಸುವವರ ವಿರುದ್ದ ಕ್ರಮ ಕೈಗೊಳ್ಳುವ ಬಗ್ಗೆ ಮಣಿಪಾಲ ಠಾಣಾ ಕ್ರೈಂ ಪಿ ಎಸ್ ಐ ಸುಧಾಕರ ತೋನ್ಸೆ, ಎ.ಎಸ್.ಐ ಶೈಲೇಶ್  ಕುಮಾರ್, ಹೆಚ್.ಸಿ ಮಹೇಶ್ ಮತ್ತು ಹೆಚ್.ಸಿ 2017 ಸಂತೋಷ್ ಕುಂದರ್‌‌‌ರವರು ಮಣಿಪಾಲ ಸಿಂಡಿಕೇಟ್ ಸರ್ಕಲ್‌ ಬಳಿಯಲ್ಲಿ ಕರ್ತವ್ಯದಲ್ಲಿದ್ದಾಗ 18:00 ಗಂಟೆಯಿಂದ 19:00 ಗಂಟೆಯ ಮಧ್ಯಾವಧಿಯಲ್ಲಿ ಆಪಾದಿತರಾದ ಸದಾನಂದ ಶೇರಿಗಾರ   ವಿಳಾಸ : ಕುಳ್ಳು ಗರಡಿ , ಮಯ್ಯಾಡಿ ಪೋಸ್ಟ್, ಬೈಂದೂರು ತಾಲೂಕು, ಉಡುಪಿ ಜಿಲ್ಲೆ, 2) ಅಭಿಷೇಕ್ ಎಸ್ ಬಂದ್ರಕಳ್ಳಿ,(21) ತಂದೆ: ಶಿವಪ್ಪ ವಿಳಾಸ: 6-129 ಸಿ-4,ಎಸ್,ಐ,ಬಿ,ಎಂ ಹಿಂಬದಿ ರಸ್ತೆ, ಮಂಚಿಕುಮೇರಿ ಶಿವಳ್ಳಿ ಗ್ರಾಮ, ಉಡುಪಿ ಇವರು ಅನಾವಶಕ್ಯಕವಾಗಿ ದ್ವಿ-ಚಕ್ರವಾಹಗಳಲ್ಲಿ ಸಂಚರಿಸುತ್ತಿದ್ದು ಅವರಲ್ಲಿ ಲಾಕ್‌‌ಡೌನ್‌ ಸಮಯದಲ್ಲಿ ಸಂಚರಿಸುತ್ತಿದ್ದ ಬಗ್ಗೆ ವಿಚಾರ ಮಾಡಿದಾಗ ಸದ್ರಿಯವರು ಸಮರ್ಪಕವಾದ ಉತ್ತರವನ್ನು ನೀಡಿರುವುದಿಲ್ಲ. ಸದರಿ ಆರೋಪಿತರು ಕೋವಿಡ್ ರೋಗ ಹರಡುವ ಬಗ್ಗೆ ನಿರ್ಲಕ್ಷ್ಯತನ ವಹಿಸಿರುತ್ತಾರೆ ಆದ್ದರಿಂದ ಸದ್ರಿ ಆರೋಪಿಗಳನ್ನು ಮತ್ತು ಅವರು ಅನಾವಶ್ಯಕವಾಗಿ ಸಂಚರಿಸುತ್ತಿದ್ದ KA-20-EF-8197 ಮತ್ತು KA-20-ET-9595 ನೇ ನೊಂದಣಿ ನಂಬರ್‌ನ ದ್ವಿಚಕ್ರ ವಾಹನಗಳನ್ನು ವಶಪಡಿಸಿಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 59/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 29-04-2021 06:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080