ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಹೆಬ್ರಿ : ದಿನಾಂಕ 27/03/2023 ರಂದು KA-20-AA-6461 ಗೂಡ್ಸ್‌ ರಿಕ್ಷಾವನ್ನು ಅದರ ಚಾಲಕ ವಸಂತ ರವರು  ಚಲಾಯಿಸಿಕೊಂಡು ಮುದ್ದೂರು ಕಡೆಯಿಂದ ಕೊಕ್ಕರ್ಣೆ ಕಡೆಗೆ ಹೋಗುತ್ತಿರುವಾಗ ಅವರು ಸಂಜೆ ಸಮಯ  07:00 ಗಂಟೆ ಸಮಯಕ್ಕೆ ನಾಲ್ಕೂರು ಗ್ರಾಮದ ಮುದ್ದೂರು ಚಾಕ್ತಿಕಟ್ಟೆ ವಿ.ಎಸ್.ಎಸ್‌ ಇಂಗ್ಲೀಷ್‌ ಮೀಡಿಯಂ ಶಾಲೆಯ ಬಳಿ ತಲುಪುವಾಗ ಗೂಡ್ಸ್‌ ರಿಕ್ಷಾವನ್ನು ಅದರ ಚಾಲಕ ವಸಂತ ರವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ ಎದುರುಗಡೆಯಿಂದ ಅಂದರೆ ಕೊಕ್ಕರ್ಣೆ ಕಡೆಯಿಂದ ಮುದ್ದೂರು ಕಡೆಗೆ ಬರುತ್ತಿದ್ದ ರಾಮ ನಾಯ್ಕ ರವರು ಸಹ ಸವಾರರಾಗಿ ಸ್ಪೂರ್ತಿರವರನ್ನು ಕುಳ್ಳಿರಿಸಿಕೊಂಡು ಬರುತ್ತಿದ್ದ KA-20-FQ-3021 ದ್ವಿಚಕ್ರ ವಾಹನಕ್ಕೆ ಮತ್ತು ಗಣಪತಿ ರವರು ಸವಾರಿ ಮಾಡಿಕೊಂಡು ಬರುತ್ತಿದ್ದ KA-20-EQ-2627  ದ್ವಿಚಕ್ರ ವಾಹನಕ್ಕೆ ಢಿಕ್ಕಿ ಪಡಿಸಿದ ಪರಿಣಾಮ ರಾಮ ನಾಯ್ಕ ರವರಿಗೆ ಬಲಕೈ ಮೊಣಗಂಟಿನ ಬಳಿ ತೀವ್ರಸ್ವರೂಪದ ಒಳಜಖಂ ಆಗಿರುತ್ತದೆ. ಸಹ ಸವಾರರಾದ ಸ್ಪೂರ್ತಿ ರವರಿಗೆ ಬಲಕಾಲಿನ ಗಂಟಿನ ಬಳಿ ತೀವ್ರಸ್ವರೂಪದ ಜಖಂ ಆಗಿರುತ್ತದೆ, ಗಣಪತಿ ರವರಿಗೆ ಎಡಕೈ ಕಿರು ಬೆರಳಿಗೆ ತೀವ್ರ ಸ್ವರೂಪದ ಜಖಂ ಆಗಿರುವುದಲ್ಲದೇ ತಲೆಯ ಎಡ ಭಾಗಕ್ಕೆ ತರಚಿದ ರಕ್ತಗಾಯಗಳಾಗಿರುತ್ತದೆ.  ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 14/2023 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ದಿನಾಂಕ 27/03/2023 ರಂದು ಪಿಯಾ೯ದಿದಾರರಾದ ಮೊಹಮ್ಮದ್‌ ಶಾಹಿಲ್‌ ಶೇಖ್‌ (27),ತಂದೆ:ಅಬ್ದುಲ್‌ ಸತ್ತಾರ್‌, ವಾಸ:4-295 ಉದು೯ಶಾಲೆ ಬಳಿ,  ಪಕೀರಣಕಟ್ಟೆ ಮಲ್ಲಾರು ಗ್ರಾಮ ಕಾಪು ತಾಲೂಕು ಇವರು ತನ್ನೊಂದಿಗೆ ಕೆಲಸ ಮಾಡುವ ಅಶ್ಪಕ್‌ (25) ರವರೊಂದಿಗೆ ಕಾಪುವಿನ ಕೆ1 ಹೋಟೇಲ್‌ಗೆ ತಿಂಡಿ ತಿಂದು ಬರುವುದಕ್ಕಾಗಿ ತಾವು ಕೆಲಸ ಮಾಡುವ ಅಂಗಡಿ ಮಾಲಕರ ಅಕ್ಕ  ಅಕ್ಷತಾರವರ ಸ್ಕೂಟರ್‌ ನಂಬ್ರ MH-02-FF-1262‌ನೇ ಹೋಂಡ ಕಂಪೆನಿಯ ಆಕ್ಟಿವಾ 5ಜಿ ಸ್ಕೂಟರ್‌ನಲ್ಲಿ ಅಶ್ಪಕ್‌ ರವರನ್ನು ಹಿಂಬದಿ ಸವಾರನನ್ನಾಗಿ ಕುಳ್ಳಿರಿಸಿಕೊಂಡು ಕಾಪುವಿನಲ್ಲಿರುವ ಅಂಗಡಿಯಿಂದ ಸಂಜೆ 4:27 ಗಂಟೆಗೆ ಹೊರಟು ರಾಷ್ಟ್ರೀಯ ಹೆದ್ದಾರಿ 66 ಉಡುಪಿ-ಮಂಗಳೂರು ಸವಿ೯ಸ್‌ ರಸ್ತೆಯಲ್ಲಿ ಹೋಗುತ್ತಾ  ಸಂಜೆ 4:30 ರ ಸುಮಾರಿಗೆ ಉಡುಪಿ- ಮಂಗಳೂರು ರಸ್ತೆಯ ಪೂವ೯ ಅಂಚಿನಲ್ಲಿ ಹೋಗುತ್ತಿರುವಾಗ ಹಿಂದಿನಿಂದ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಓವ೯ ನೊಂದಣಿಯಾಗದ ಇಂಜೀನ್‌ ಮತ್ತು ಚಾಸೀಸ್‌ ಇರುವ ವಾಹನವನ್ನು ಅತೀವೇಗ ಹಾಗೂ ನಿಲ೯ಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿಯಾ೯ದಿದಾರರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸ್ಕೂಟರ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದು ಈ ಸಮಯ ಪಿಯಾ೯ದಿದಾರರು ಸ್ಕೂಟರ್‌ನಿಂದ ಜಿಗಿದಿದ್ದು ಹಿಂಬದಿ ಸವಾರರಾದ ಅಶ್ಪಕ್‌ರವರ ಬೆನ್ನಿನ ಬಲಭಾಗಕ್ಕೆ ಲಾರಿಯ ಕಬ್ಬಿಣದ ಭಾಗ ಚುಚ್ಚಿದ್ದು ಅವರು ಸ್ಕೂಟರ್‌ ಸಹಿತ ರಸ್ತೆಗೆ ಬಿದ್ದಿರುತ್ತಾರೆ. ರಸ್ತೆಗೆ ಬಿದ್ದ ಅವರನ್ನು ಎತ್ತಿ ಉಪಚರಿಸಿದ್ದು, ನಮ್ಮ ಸ್ಕೂಟರ್‌ಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ವಾಹನದ ಚಾಲಕನ ಹೆಸರು ಕೇಳಲಾಗಿ ದ್ಯಾಮಣ್ಣ ಕೆ ಎಂಬುದಾಗಿ ತಿಳಿಯಿತು.  ವಾಹನಕ್ಕೆ ಯಾವುದೇ ನೊಂದಣಿ ಸಂಖ್ಯೆ ಇರುವುದಿಲ್ಲ. ಅಪಘಾತದಿಂದ ಗಾಯಗೊಂಡ ಅಶ್ಪಕ್‌ ರವರನ್ನು ಒಂದು ವಾಹನದಲ್ಲಿ ಉಡುಪಿಯ ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಆತನು ಚಿಕಿತ್ಸೆ ಪಡೆದುಕೊಂಡು ಮನೆಗೆ ಬಂದಿರುವುದಾಗಿದೆ.  ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 58/2023 ಕಲಂ:  279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ವಂಚನೆ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಜ್ಯೋತಿ ಉಡುಪಿ (32) ರವರು ಮುಖಕ್ಕೆ ಹಚ್ಚುವ ಕ್ರೀಂ ನ್ನು ಆನ್‌‌ಲೈನ್ ನಲ್ಲಿ ಹುಡುಕುತ್ತಿದ್ದ ಸಂದರ್ಭದಲ್ಲಿ Cosderma-App ನಲ್ಲಿ ಕಂಡುಬಂದ ಮೊಬೈಲ್ ನಂಬ್ರಕ್ಕೆ  ಕರೆ ಮಾಡಿದಲ್ಲಿ  ಆ ವ್ಯಕ್ತಿ paytid.co.in ನಲ್ಲಿ ರಿಜಿಸ್ಟರ್ ಮಾಡುವಂತೆ ಲಿಂಕ್ ಕಳುಹಿಸಿದ್ದು, ಪಿರ್ಯಾದಿದಾರರು ರಿಜಿಸ್ಟರ್ ಮಾಡಿರುತ್ತಾರೆ. ದಿನಾಂಕ 22/03/2023 ರಂದು ಅಪರಿಚಿತ ವ್ಯಕ್ತಿ ಮೊಬೈಲ್ ನಂಬ್ರ ಕ್ಕೆ  ಕರೆ ಮಾಡಿ, ತಾನು ಮೇಲೆ ನಮೂದಿಸಿದ ಕಂಪೆನಿಯವನೆಂದು ತಿಳಿಸಿ, ನೀವು ಈ ಹಿಂದೆ ಮಾಡಿರುವ ರಿಜಿಸ್ಟರ್ ಸರಿಯಿಲ್ಲ ಎಂದು ಹೇಳಿ ಬೇರೊಂದು ಲಿಂಕ್ ಕಳುಹಿಸಿದ್ದು, ಪಿರ್ಯಾದಿದಾರರು ಆತನು ಅದೇ ಕಂಪೆನಿಯವನೆಂದು ನಂಬಿ, ಆತನು ಕಳುಹಿಸಿದ ಲಿಂಕ್ ನಲ್ಲಿ ವಿವರವನ್ನು ಅಪ್‌‌ಡೇಟ್ ಮಾಡಿದ್ದು, ಆದರೆ, ದಿನಾಂಕ 24/03/2023 ರಂದು ಪಿರ್ಯಾದಿದಾರರು ಖಾತೆ ಹೊಂದಿದ್ದ ಸಾಲಿಗ್ರಾಮ ಶಾಖೆಯ ಕರ್ನಾಟಕ ಬ್ಯಾಂಕ್ ಖಾತೆಯಿಂದ  ರೂಪಾಯಿ 99,999/- ದಿನಾಂಕ 25/03/2023 ರಂದು ಕ್ರಮವಾಗಿ ರೂಪಾಯಿ 90,000/- ಮತ್ತು ರೂಪಾಯಿ 8,000/- ಹಣ ಕಡಿತಗೊಂಡಿರುತ್ತದೆ. ಯಾರೋ ಅಪರಿಚಿತ ವ್ಯಕ್ತಿಗಳು Cosderma ಕಂಪೆನಿಯವರೆಂದು ಹೇಳಿ, ಮುಖಕ್ಕೆ ಹಚ್ಚುವ ಕ್ರೀಂ ನೀಡುವುದಾಗಿ ನಂಬಿಸಿ, ಪಿರ್ಯಾದಿದಾರರಿಂದ ವಿವರ ಪಡೆದು, ಅವರ ಖಾತೆಯಿಂದ ಒಟ್ಟು ರೂಪಾಯಿ 1,97,999/- ಹಣವನ್ನು ಆನ್ ಲೈನ್ ಮುಖೇನ ವರ್ಗಾವಣೆ ಮಾಡಿಕೊಂಡು ಕ್ರೀಂನ್ನು ನೀಡದೇ ಪಡೆದ ಹಣವನ್ನು ಹಿಂತಿರುಗಿಸದೇ ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 51/2023  ಕಲಂ: 66(C), 66(D)   ಐ.ಟಿ. ಆಕ್ಟ್  ರಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಕಾರ್ಕಳ ತಾಲೂಕು, ನೂರಾಳ್ ಬೆಟ್ಟು ಗ್ರಾಮದ ಉರೆಕಲ್ ದರ್ಖಾಸು ಮನೆ ನಿವಾಸಿ ಭಾಗೀ (70) ಇವರು ದಿನಾಂಕ 28/03/2023 ರಂದು ಬೆಳಗ್ಗೆ 8:30 ಗಂಟೆಗೆ ತಮ್ಮ ಮನೆಯಲ್ಲಿ ಮಲಗಿದ್ದವರು, ಏಳದೇ ಇದ್ದವರನ್ನು ಅವರ ಮಗ ಸುರೇಶ ಮತ್ತು ಮಗಳು ಸುರೇಖಾ ಇವರುಗಳು ಜೋರಾಗಿ ಕರೆದು ಏಳುವಂತೆ  ತಿಳಿಸಿದರೂ ಏಳದೇ ಮಲಗಿದ್ದವರನ್ನು, ಮುಟ್ಟಿ  ನೋಡಿದಾಗ ಅವರ ದೇಹ ತಣ್ಣಗಿದ್ದು, ಭಾಗೀ ಇವರು  ನಿದ್ರಿಸಿದಲ್ಲಿಯೇ ಯಾವುದೋ ಕಾರಣದಿಂದ ಮೃತಪಟ್ಟಿರುತ್ತಾರೆ . ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ  19/2023 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಕಾರ್ಕಳ ತಾಲೂಕು, ನೂರಾಳ್ ಬೆಟ್ಟು ಗ್ರಾಮದ ಉರೆಕಲ್ ದರ್ಖಾಸು ಮನೆ ನಿವಾಸಿ ರೇಖಾ, (25) ಇವರು ನಾರಾವಿಯಲ್ಲಿ ಫ್ಯಾನ್ಸಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 28/03/2023 ರಂದು ಬೆಳಗ್ಗೆ 8:30 ಗಂಟೆಗೆ ರೇಖಾರವರ ತಾಯಿ ಭಾಗೀ ಇವರು ಮನೆಯಲ್ಲಿ ಮೃತಪಟ್ಟಿದ್ದ ವಿಚಾರವನ್ನು ತಿಳಿದು, ನಾರಾವಿಯಿಂದ  ವಾಪಾಸು ಮನೆಗೆ ಬರುವಾಗ ತಾಯಿ ಮೃತಪಟ್ಟ ವಿಚಾರದಲ್ಲಿ ನೊಂದು ತಮ್ಮ ಮನೆಗೆ ಹೋಗುವ ದಾರಿ ಮಧ್ಯೆ ಸಿಗುವ ಗೋಳಿದಜೆ ಎಂಬಲ್ಲಿ ಸುಭಾಶ್ಚಂದ್ರ ಹೆಗ್ಡೆ ಎಂಬುವವರಿಗೆ ಸೇರಿದ ಅಡಿಕೆ ತೋಟದಲ್ಲಿರುವ ಕೆರೆಗೆ ಬೆಳಗ್ಗೆ  11:45 ಗಂಟೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 20/2023 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ದಾದಾಪೀರ್‌ ನಿಜಾಮುದ್ದೀನ್‌ ದೇಸಾಯಿ (43), ತಂದೆ: ನಿಜಾಮುದ್ದೀನ್‌, ವಾಸ: ರಾಜು ಶೆಟ್ಟಿ ರವರ ಬಾಡಿಗೆ ಮನೆ, ಇಂದ್ರಾಳಿ ಗಿರಣಿ ಬಳಿ, ಶಿವಳ್ಳಿ ಗ್ರಾಮ, ಉಡುಪಿ ತಾಲೂಕು ಇವರು ರೈಲ್ವೆ ಇಲಾಖೆಯಲ್ಲಿ ಕಂಟ್ರಾಕ್ಟ್‌ ಆಧಾರದ ಮೇಲೆ ಕ್ಲೀನಿಂಗ್‌ ಕೆಲಸ ಮಾಡಿಕೊಂಡಿದ್ದು, ದಿನಾಂಕ 28/03/2023 ರಂದು ಬೆಳಿಗ್ಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಇಂದ್ರಾಳಿ ರೈಲ್ವೆ ಸ್ಟೇಶನ್‌ನ ಟ್ರಾಕ್‌ ಕ್ಲೀನಿಂಗ್‌ ಮಾಡುತ್ತಿರುವಾಗ ದೂರದಲ್ಲಿ ಒಬ್ಬ ವ್ಯಕ್ತಿ ಮರದಲ್ಲಿ ನೇತಾಡುತ್ತಿರುವುದು ಕಂಡು ಬಂದು, ಹತ್ತಿರ ಹೋಗಿ ನೋಡಲಾಗಿ, ಸುಮಾರು 45 ರಿಂದ 50 ವರ್ಷ ಪ್ರಾಯದ ಓರ್ವ ಅಪರಿಚಿತ ಗಂಡಸು ಮರಕ್ಕೆ ನೈಲಾನ್‌ಹಗ್ಗ ಕಟ್ಟಿ ಕುತ್ತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಮಾನಸಿಕವಾಗಿ ನೊಂದು ಅಥವಾ ಇನ್ನಾವುದೋ ಕಾರಣದಿಂದ ಮನನೊಂದು ದಿನಾಂಕ 27/03/2023 ರಂದು 21:00 ಗಂಟೆಯಿಂದ ದಿನಾಂಕ 28/03/2023 ರಂದು ಬೆಳಿಗ್ಗೆ 10:30 ಗಂಟೆ ನಡುವಿನ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಯುಡಿಅರ್ ಕ್ರಮಾಂಕ 12/2023‌ ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಶಂಕರನಾರಾಯಣ: ದಿನಾಂಕ    28/03/2023    ರಂದು ಆರೋಪಿ ಗಣೇಶ  ಶೆಟ್ಟಿ,  ವಾಸ :ಕಿರ್ಲಾಡಿ  ಐರಬೈಲ್ಲು  ಸಿದ್ದಾಪುರ  ಗ್ರಾಮ ಕುಂದಾಪುರ  ತಾಲೂಕು ಎಂಬಾತ   ಕುಂದಾಪುರ  ತಾಲೂಕಿನ  ಶಂಕರನಾರಾಯಣ ಗ್ರಾಮದ ಕಲ್ಲಹೊಳೆ  ಎಂಬಲ್ಲಿ ಸಾರ್ವಜನಿಕ  ಸ್ಥಳದಲ್ಲಿ  ಅಕ್ರಮವಾಗಿ  ಮೈಸೂರು  ಲ್ಯಾನ್ಸರ್  ವಿಸ್ಕಿ 90 ಎಮ್‌ಎಲ್‌.52  ಸ್ಯಾಚೆಟ್  ಹಾಗೂ   ಒರಿಜಿನಲ್  ಚಾಯ್ಸ  90  ಎಮ್‌‌ಎಲ್ 5  ಸ್ಯಾಚೆಟ್  ಹಾಗೂ  ಒರಿಜಿನಲ್  ಚಾಯ್ಸ  180  ಎಮ್‌‌ಎಲ್ 1  ಸ್ಯಾಚೆಟ್  ಮದ್ಯವನ್ನು ಆತನ  ವಶ  ಇರಿಸಿಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಲ್ಲಿಗೆ ಭರತ್  ಕುಮಾರ್  ವಿ, ಪೊಲೀಸ್‌ ಉಪನಿರೀಕ್ಷಕರು,   ಶಂಕರನಾರಾಯಣ ಪೊಲೀಸ್  ಠಾಣೆ  ಇವರು ದಾಳಿ ನಡೆಸಿ ಮದ್ಯದ ಸ್ಯಾಚೆಟ್‌‌ನ್ನು ವಶಪಡಿಸಿಕೊಂಡಿರುತ್ತಾರೆ, ವಶಪಡಿಸಿಕೊಂಡ ಮದ್ಯದ  ಸ್ಯಾಚೆಟ್  ಮೌಲ್ಯ   2100/- ರೂಪಾಯಿ  ಆಗಿರುತ್ತದೆ.  ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 32/2024   ಕಲಂ:  32, 34 ಕರ್ನಾಟಕ  ಅಬಕಾರಿ ಕಾಯ್ದೆ  ಯಂತೆ ಪ್ರಕರಣ ದಾಖಲಾಗಿರುತ್ತದೆ.  
     

ಇತ್ತೀಚಿನ ನವೀಕರಣ​ : 29-03-2023 09:28 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080