ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕೊಲ್ಲೂರು: ಪ್ರಕರಣದ ಸಾರಾಂಶವೆನೆಂದರೆ ಪಿರ್ಯಾಧಿ ರಂಗಪ್ಪ ಇವರು ಅವರ ಮಗ ಗಿರೀಶರವರ  ಆರೋಗ್ಯ ತಪಾಸಣೆ ಬಗ್ಗೆ ಮಂಗಳೂರು ವೆನ್‌ಲ್ಲಾಕ್‌ ಆಸ್ಪತ್ರೆಯ ವೈದ್ಯರ ಬಳಿ  ತೋರಿಸಲು  ನಿನ್ನೆ ದಿನ ದಿನಾಂಕ: 28/03/2023  ರಂದು ಸಂಜೆ 7:30 ಗಂಟೆಗೆ  ಪಿರ್ಯಾಧಿದಾರರು  ಮತ್ತು ಅವರ ಮಗ ಗಿರೀಶ  ಚಿತ್ರದುರ್ಗ ಜಿಲ್ಲೆಯ ಜನಕೊಂಡ  ಬಸ್ಸು ನಿಲ್ಥಾಣದಲ್ಲಿ ಮಂಗಳೂರಿಗೆ ಹೋಗುವ KA 51 C 0147 ನೇ ದುರ್ಗಾಂಬಾ ಬಸ್ಸಿನಲ್ಲಿ ಪ್ರಯಾಣಿಸುತ್ತಾ ಅವರೊಂದಿಗೆ ಬಸ್ಸಿನಲ್ಲಿ ಅಂದಾಜು 35 ರಿಂದ 40 ಜನ  ಪ್ರಯಾಣಿಸುತ್ತಿದ್ದು ದಿನಾಂಕ:29/03/203 ರಂದು ಬೆಳಗ್ಗಿನ ಜಾವ 02:30 ಗಂಟೆಗೆ ಸದ್ರಿ ಬಸ್ಸನ್ನು ಅದರ ಚಾಲಕ ಸಂದೀಪ್‌ ಜಡ್ಕಲ್‌ ಗ್ರಾಮದ ಹಾಲ್ಕಲ್‌  ತಿರುವು  ಇಳಿಜಾರು  ರಸ್ತೆಯಲ್ಲಿ ಅತೀ ವೇಗವಾಗಿ ನಿರ್ಲಕ್ಷತನದಿಂದ  ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಎಡಕ್ಕೆ ಚಲಾಯಿಸಿ ಬಸ್ಸಿನ ಹತೋಟಿ ತಪ್ಪಿ ಚರಂಡಿಗೆ ಎಡ ಮಗ್ಗುಲಾಗಿ  ಬಿದ್ದು ರಸ್ತೆಯ ಬದಿಯ ವಿದ್ಯುತ್ ಕಂಬಕ್ಕೆ  ಡಿಕ್ಕಿ ಹೊಡೆದು ವಿದ್ಯುತ ಕಂಬ ಬಸ್ಸಿನ ಮೇಲೆ ತುಂಡಾಗಿ ಬಿದ್ದು ಬಸ್ಸಿನಲ್ಲಿ ಪ್ರಯಾಣಿಸುತ್ತಿದ ಪಿರ್ಯಾಧಿದಾರರಿಗೆ ಬಲಕಾಲು ಮತ್ತು ಬಲ ಕೈಗೆ ಒಳ ಜಖುಂ ಪೆಟ್ಟಾಗಿರುತ್ತದೆ. ಪಿರ್ಯಾಧಿದಾರ ಮಗ ಗಿರೀಶರವರಿಗೆ  ತುಟಿಗೆ ರಕ್ತಗಾಯ ಮತ್ತು ಎಡ ಕೈಗೆ  ಪೆಟ್ಟಾಗಿರುತ್ತದೆ.  ಪಿರ್ಯಾಧಿದಾರರ  ಜೂತೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆ ತಂದ ಬಸವರಾಜ ಶಿರಟ್ಟಿ ಎಂಬವರನ್ನು ಕುಂದಾಪುರ  ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿ ಚಿಕಿತ್ಸೆಗೆ ಕರೆತರುವ ದಾರಿಯಲ್ಲಿ ಮೃತಪಟ್ಟಿರುವ ಬಗ್ಗೆ ದೃಢೀಕರಿಸಿರುತ್ತಾರೆ. ಗಾಯಳು ದೇವೆಂದ್ರಪ್ಪ ಮತ್ತು ಮಲ್ಲೇಶ್ ಎಂಬವರಿಗೆ ಪೆಟ್ಟಾಗಿದ್ದು ಕುಂದಾಪುರ  ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ. ಪ್ರಯಾಣಿಕರಾದ ಹಾಲಸ್ವಾಮಿ ಎಂಬವರು  ಮಣೆಪಾಲ  ಕೆ.ಎಮ್‌.ಸಿ ಆಸ್ಪತ್ರೆ ಕಡೆಗೆ ಚಿಕಿತ್ಸೆಗೆ  ಹೋದ ವಿಚಾರ ತಿಳಿಯಿತು. ಹಾಗೂ ಇತರ ಗಾಯಳುಗಳು ಬೇರೆ ಕಡೆ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 18/2023 ಕಲಂ: 304(A) 279,337, 338 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.
 • ಕಾಪು: ಪಿರ್ಯಾದಿ ಸುರೇಶ ಕಾಮತ್ ಇವರು ದಿನಾಂಕ 28-03-2023 ರಂದು ತನ್ನ ತಮ್ಮ ಸತೀಶ ಕಾಮತ್‌ ರವರೊಂದಿಗೆ ಉದ್ಯಾವರ ಗ್ರಾಮದ ಟೋಯೊಟಾ ಶೋರೂಮ್ ಬಳಿ, ಅಣ್ಣ ಸುಂದರ ಕಾಮತ್ (58) ರವರು ಉಡುಪಿ ಕಡೆಯಿಂದ ಬರುವರೇ ಕಾಯುತ್ತಾ ನಿಂತಿರುವಾಗ, ಉಡುಪಿ ಮಂಗಳೂರು ರಾ ಹೆ 66 ರಸ್ತೆಯಲ್ಲಿ  ಉಡುಪಿ ಕಡೆಯಿಂದ ಬಂದ ಬಸ್ಸಿನಿಂದ ಅಣ್ಣ ಕೆಳಗೆ ಇಳಿದು ಉಡುಪಿ ಮಂಗಳೂರು ರಾ ಹೆ 66 ರ ರಸ್ತೆಯನ್ನು ದಾಟುತ್ತಾ ರಸ್ತೆಯ ಪಶ್ಚಿಮ ಬದಿಯ ಅಂಚಿನಲ್ಲಿ ತಲುಪುತ್ತಿದ್ದಂತೆ ಅದೇ ರಸ್ತೆಯಲ್ಲಿ ಒಂದು ವಾಹನದ ಚಾಲಕ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ತನ್ನ ಬಾಬ್ತು ವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಅಣ್ಣನಿಗೆ ಢಿಕ್ಕಿ ಹೊಡೆದು ವಾಹನ ನಿಲ್ಲಿಸದೇ ಪರಾರಿಯಾಗಿದ್ದು, ಪರಿಣಾಮ ಪಿರ್ಯಾದಿದಾರರ ಅಣ್ಣ ರಸ್ತೆಗೆ ಬಿದ್ದು, ಆತನ ಮುಖಕ್ಕೆ ತೀವೃ ತರಹದ ರಕ್ತ ಗಾಯವಾಗಿದ್ದು, ಎಡಕೈ ಹಾಗೂ ಬಲ ಕಾಲು ಜಖಂ ಗೊಂಡಿದ್ದು, ಪಿರ್ಯಾದಿದಾರರು ಸತೀಶ ರವರೊಂದಿಗೆ ತನ್ನ ಆಟೋ ರಿಕ್ಷಾದಲ್ಲಿ ಚಿಕಿತ್ಸೆಯ ಬಗ್ಗೆ ಉಡುಪಿ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು, ಪರೀಕ್ಷಿಸಿದ ಅಲ್ಲಿನ ವೈದ್ಯರು ಎಡಕೈ ಮೂಳೆ ಹಾಗೂ ಬಲಕಾಲಿನ ಮೂಳೆ ಮುರಿತವಾಗಿರುವುದಾಗಿದೆ  ಎಂದು ತಿಳಿಸಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 59/2023 ಕಲಂ 279, 338 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ: ದಿನಾಂಕ 29/03/2023 ರಂದು ಬೆಳಿಗ್ಗೆ ಸುಮಾರು 9:15 ಗಂಟೆಗೆ ಕುಂದಾಪುರ  ತಾಲೂಕಿನ, ಕಸಬಾ ಗ್ರಾಮದ ಪಾರಿಜಾತ  ಸರ್ಕಲ್‌‌ ಬಳಿ, ಪುರಸಭಾ ರಸ್ತೆಯಲ್ಲಿ, ಆಪಾದಿತ ಧೋಲ್‌ ಸಿಂಗ್‌ ಎಂಬವರು KA20EW-0471ನೇ ಬೈಕನ್ನು ಕುಂದಾಪುರ ಶಾಸ್ತ್ರಿ ಸರ್ಕಲ್‌ ಕಡೆಯಿಂದ ಹೊಸ ಬಸ್‌ ನಿಲ್ದಾಣದ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷತನದ ಸವಾರಿ  ಮಾಡಿಕೊಂಡು ಬಂದು, ಪಿಯಾದಿದಾರರಾದ ಅಕ್ಷಯ ಎಂಬವರು KA20-EU-9367 Honda Dio ಸ್ಕೂಟರ್‌ನ್ನು ಮನೆಯಿಂದ (ಪಿಶ್‌‌‌ ಮಾರ್ಕೆಟ್‌‌‌) ಸವಾರಿ ಮಾಡಿಕೊಂಡು ಬಂದು ಪಾರಿಜಾತ ಸರ್ಕಲ್‌‌ ನಲ್ಲು “ಯೂ” ಟರ್ನ್‌  ತೆಗೆದುಕೊಂಡು ಹೊಸ ಬಸ್‌ ನಿಲ್ದಾಣದ ಕಡೆಗೆ ಹೋಗುತ್ತಿರುವಾಗ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದ  ಅಕ್ಷಯರವರ ಬಲಭುಜಕ್ಕೆ ಒಳಜಕಂ ಗಾಯ ಹಾಗೂ ಎರಡೂ ಕಾಲುಗಳಿಗೆ ತರಚಿದ ಗಾಯವಾಗಿ, ಕುಂದಾಪುರ ವಿನಯ ಆಸ್ಪತ್ರೆಯಲ್ಲಿ  ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 42/2023 ಕಲಂ 279,  337 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

 ಹಲ್ಲೆ ಪ್ರಕರಣ

 • ಶಂಕರನಾರಾಯಣ: ಫಿರ್ಯಾದಿ ಶ್ರೀಮತಿ.ಲಕ್ಷೀ ಪೂಜಾರ್ತಿ  ಇವರ  ಮಗಳು  ಶ್ರೀಮತಿ ಸವಿತಾ ಇವಳು   ಆಜ್ರಿ  ಗ್ರಾಮದ  ಚೌಕುಳಮಕ್ಕಿ  ಎಂಬಲ್ಲಿ  ಹೊಸದಾಗಿ ಮನೆ  ಕಟ್ಟುತ್ತಿದ್ದು ಅವರು  ಮನೆ  ಕಟ್ಟುವ  ಜಾಗವು  ಆರೋಪಿತ ರಾಮ ಪೂಜಾರಿ, ರಮೇಶ ಪೂಜಾರಿ ಮತ್ತು ಕೃಷ್ಣ ಪೂಜಾರಿ ವಾಸ, ಆಜ್ರಿ ಗ್ರಾಮ ಇವರುಗಳ ಜಾಗ ಎಂದು ತಕರಾರು  ಮಾಡಿ ಶ್ರೀಮತಿ ಸವಿತಾಳಿಗೆ ಮನೆ ಕಟ್ಟದಂತೆ ತೊಂದರೆ ಮಾಡಿರುತ್ತಾರೆ, ಅದೇ ವಿಷಯದಲ್ಲಿ ಆರೋಪಿಗಳು   ಕೋಪಗೊಂಡು ದಿನಾಂಕ 17.03.2023 ರಂದು 16:00  ಘಂಟೆಗೆ  ಫಿರ್ಯಾಧುದಾರರು  ಶ್ರೀಮತಿ ಸವಿತಾ  ಇವಳ  ಮನೆಯಲ್ಲಿ  ಇರುವಾಗ   ಆರೋಪಿಗಳು  ಸದ್ರಿ ಮನೆಯ ಒಳಗಡೆ  ಅಕ್ರಮ ಪ್ರವೇಶ  ಮಾಡಿ   ಮರದ  ಕೋಲಿನಿಂದ  ಹಲ್ಲೆ  ಮಾಡಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 33/2023 ಕಲಂ:448, 324, 354 ಜೊತೆಗೆ  34 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.
 • ಶಂಕರನಾರಾಯಣ: ಫಿರ್ಯಾದಿ ಶ್ರೀಮತಿ. ಬೇಬಿ ಪೂಜಾರ್ತಿ ಇವರಿಗೂ ಆರೋಪಿತ 1.ಶ್ರೀಮತಿ ಲಕ್ಷೀ ಪೂಜಾರಿ, 2.ಶಂಕರ  ಪೂಜಾರಿ, 3.ಅಣ್ಣಪ್ಪ ಪೂಜಾರಿ, 4.ಗೋಪಾಲ ಪೂಜಾರಿ, 5.ಉಮಾಪತಿ, 6. ಉದಯ ಪೂಜಾರಿ ಇವರುಗಳಿಗೂ  ಜಾಗದ ತಕರಾರು ಇದ್ದು, ದಿನಾಂಕ 27.03.2023 ರಂದು ಫಿರ್ಯಾದುದಾರರು  ಕುಂದಾಪುರ  ತಾಲೂಕಿನ ಆಜ್ರಿ ಗ್ರಾಮದ  ಚೌಕುಳಮಕ್ಕಿ  ಎಂಬಲ್ಲಿ  ಅವರಿಗೆ  ಸೇರಿದ  ಗೇರು  ತೋಟದಲ್ಲಿ  ಗೇರು ಬೀಜ ಹೆಕ್ಕುತ್ತಿರುವಾಗ  ಆರೋಪಿಗಳು  ಅಕ್ರಮ ಕೂಟ  ಕೂಡಿಕೊಂಡು  ಬಂದು   ಫಿರ್ಯಾಧುದಾರರಲ್ಲಿ ಸವಿತಾಳಿಗೆ ಮನೆ ಕಟ್ಟಲು ಯಾಕೇ  ಜಾಗ ಕೊಡುವುದಿಲ್ಲ  ಎಂದು   ಕೇಳಿ ಅವಾಚ್ಯ  ಶಬ್ದದಿಂದ  ಬೈದು ಹಲ್ಲೆ ಮಾಡಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 34/2023 ಕಲಂ:143,147,504,323,354,504,506 ಜೊತೆಗೆ149 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.
 • ಮಣಿಪಾಲ: ಪಿರ್ಯಾದಿ ವೆಂಕಟೇಶ್ ನಾಯ್ಕ್ ಇವರು ದಿನಾಂಕ 27/03/2023 ರಂದು ಮೇಯಲು ಬಿಟ್ಟಿದ್ದ ದನಗಳು ವಾಪಾಸು ಬಾರದೇ ಇದ್ದುದ್ದರಿಂದ ಹುಡುಕಿಕೊಂಡು ರಾತ್ರಿ 9:00 ಗಂಟೆಗೆ ಅಲೆವೂರು –ಜೋಡುರಸ್ತೆ ಸಂತೆ ನಡೆಯುವ ಸ್ಥಳಕ್ಕೆ ಬಂದು  ಅಲ್ಲೆ ಇದ್ದ ಸ್ಟೇಜ್‌ ಹಿಂಬದಿ ಕುಳಿತ್ತಿದ್ದಾಗ  ರಾತ್ರಿ 9:30 ಗಂಟೆ ಹೊತ್ತಿಗೆ ಪಿರ್ಯಾದಿದಾರರಿಗೆ ನೋಡಿ ಪರಿಚಯವಿರುವ ಆಪಾದಿತ ನಿತಿನ್ ಹಾಗೂ ಪರಿಚಯ ಇಲ್ಲದ ಇನ್ನೊಬ್ಬ ಏಕಾಏಕಿಯಾಗಿ ಬಂದು ಆಪಾದಿತ ನಿತಿನ್ ಎಂಬುವನು  ಕೈಯಿಂದ ಪಿರ್ಯಾದಿದಾರರ ಎಡ ಕಣ್ಣಿಗೆ ಮತ್ತು ಕೆನ್ನೆಗೆ ಹೊಡೆದಿದ್ದು, ಆಪಾದಿತ 2ನೇ ಯವ ಕಬ್ಬಿಣದ ಮಚ್ಚುವಿನಿಂದ ಪಿರ್ಯಾದಿದಾರರ ತಲೆಗೆ ಹೊಡೆದು ಗಾಯಗೊಳಿಸಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 80/2023 ಕಲಂ: 323, 324 R/W 34 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಕುಂದಾಪುರ: ದಿನಾಂಕ: 29/03/2023 ರಂದು ಪ್ರಸಾದ್‌ ಕುಮಾರ್‌ ಕೆ ಪಿ,  ಪೊಲೀಸ್‌ ಉಪನಿರೀಕ್ಷಕರು ಕುಂದಾಪುರ ಪೊಲೀಸ್‌ ಠಾಣೆ ಇವರು ಸಿಬ್ಬಂದಿಗಳೊಂದಿಗೆ ಕಸಬಾ ಗ್ರಾಮದ ಸಂಗಂ ಚೆಕ್ ಪೋಸ್ಟ್ ನಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 05:30 ಗಂಟೆಗೆ ಉಡುಪಿ ಕಡೆಯಿಂದ ಬಂದ ಹೀರೊ ಕಂಪೆನಿಯ ಯೂನಿಕಾರ್ನ್ ಮಾದರಿಯ ನೊಂದಣಿ ಸಂಖೈ KA20EJ5252 ನಂಬರ ನ ಬೈಕನ್ನು ನಿಲ್ಲಿಸಿ ಪರಿಶೀಲಿಸಲಾಗಿ ಬೈಕಗೆ ಅಳವಡಿಸಿರುವ ಬಾಕ್ಸ್ ನಲ್ಲಿ ಬಟ್ಟೆಯ ಚೀಲ ಇದ್ದು ಅದರಲ್ಲಿ ಹಣ ಇರುವುದು ಕಂಡು ಬಂದಿದ್ದು ಬೈಕ್ ಚಾಲಕನಲ್ಲಿ ಸದ್ರಿ ಹಣದ ಬಗ್ಗೆ ಯಾವುದಾದರೂ ದಾಖಲೆ ಇರುವ ಬಗ್ಗೆ ವಿಚಾರಿಸಿದ್ದು, ಯಾವುದೇ ದಾಖಲೆ ಇರುವುದಿಲ್ಲವಾಗಿ ತಿಳಿಸಿರುತ್ತಾರೆ. ನಂತರ ಸ್ಥಳಕ್ಕೆ ಪಂಚರನ್ನು ಬರಮಾಡಿಕೊಂಡು ಬೈಕ್ ಚಾಲಕ ದಿಲೀಪ್ ಗೋಡ್ಸೆ ರವರ ಮೂಲಕ ಸದ್ರಿ ಚೀಲವನ್ನು ಬಿಡಿಸಿ ಪರಿಶೀಲಿಸಿದಾಗ 500 ರೂ ಮುಖಬೆಲೆಯ 2,600 ನೋಟುಗಳು ಇದ್ದು ಒಟ್ಟು 13 ಲಕ್ಷ ಹಣ ಇದ್ದಿರುತ್ತದೆ. ಸದ್ರಿ ಹಣದ ಬಗ್ಗೆ ಯಾವುದೇ ದಾಖಲೆ ಇಲ್ಲವೆಂದು ತಿಳಿಸಿದ ಮೇರೆಗೆ ಸದ್ರಿ ಹಣವನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಂಡಿದ್ದು ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 38/2023 ಕಲಂ:98 KP ಆಕ್ಟ್‌ ನಂತೆ  ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ಪಿರ್ಯಾದಿ ಕೀರ್ತಿರಾಜ್ ಇವರು ಅಗತ್ಯ ಕೆಲಸಕ್ಕಾಗಿ ಫೇಸ್ ಬುಕ್ ನಲ್ಲಿ ಕಂಡುಬಂದ ರಿಲಯನ್ಸ್ ಸಾಲ ಮಂಜೂರು ಜಾಹೀರಾತಿನಲ್ಲಿ ಸಾಲ ಕೋರಿ ಅರ್ಜಿ ಸಲ್ಲಿಸಿರುತ್ತಾರೆ. ದಿನಾಂಕ 27.03.2023 ರಂದು ಅಪರಿಚಿತ ವ್ಯಕ್ತಿ ಮೊಬೈಲ್ ನಂಬ್ರ 9748322049 ನೇದರಿಂದ ಕರೆ ಮಾಡಿ ತಾನು ರಿಲಯನ್ಸ್ ಕಂಪೆನಿಯವನೆಂದು ತಿಳಿಸಿ, ನಿಮ್ಮ ಸಾಲ ಮಂಜೂರಾಗಿದ್ದು, ಈ ಬಗ್ಗೆ ಲೀಗಲ್ ಚಾರ್ಜ್‌ ರೂ. 2,599/- ನ್ನು ಪಾವತಿಸುವಂತೆ ಗೂಗಲ್ ಪೇ QR ಕೋಡ್ ನೀಡಿದ್ದು, ಈತನು ರಿಲಯನ್ಸ್ ಕಂಪೆನಿಯವನೆಂದು ತಿಳಿದು, ಪಿರ್ಯಾದಿದಾರರು ಅದೇ ದಿನ ರೂ. 2,599/- ಹಣವನ್ನು ಪಾವತಿಸಿರುತ್ತಾರೆ. ಆದರೆ, ಅದೇ ನಂಬ್ರದಿಂದ ಪುನಃ ಕರೆ ಮಾಡಿ, TDS ಚಾರ್ಜ್‌, GST ಚಾರ್ಜ್‌ ಎಂದು ಹೇಳಿ, ಪಿರ್ಯಾದಿದಾರನ್ನು ನಂಬಿಸಿ, ಪಿರ್ಯಾದಿದಾರರಿಂದ ಒಟ್ಟು ರೂ. 92,449/- ಹಣವನ್ನು ಆನ್ ಲೈನ್ ಮುಖೇನ ಪಡೆದು, ಸಾಲವನ್ನು ನೀಡದೇ ಪಡೆದ ಹಣವನ್ನು ಹಿಂತಿರುಗಿಸದೇ ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಸೆನ್ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 52/2023 ಕಲಂ 66(C), 66(D)  ಐ.ಟಿ ಆಕ್ಟ್ ನಂತೆ  ಪ್ರಕರಣ ದಾಖಲಾಗಿರುತ್ತದೆ.
 • ಮಣಿಪಾಲ: ದೇವರಾಜ ಟಿ ವಿ, ಪೊಲೀಸ್ ನಿರೀಕ್ಷಕರು  ಮಣಿಪಾಲ ಪೊಲೀಸ್ ಠಾಣೆ ಇವರಿಗೆ ದಿನಾಂಕ: 28.03.2023 ರಂದು ಬೆಳಿಗ್ಗೆ 21.45 ಗಂಟೆಗೆ ಉಡುಪಿ ತಾಲೂಕು ಹೆರ್ಗಾ ಗ್ರಾಮದ ಪರ್ಕಳ ಸಂಧ್ಯಾ ಹೊಟೇಲ್ ಕಟ್ಟಡದ 1 ನೇ ಮಹಡಿಯ ಕೋಣೆಯಲ್ಲಿ ಹಣವನ್ನು ಪಣವನ್ನಾಗಿಟ್ಟು ಕೊಂಡು ಇಸ್ಪೀಟು ಜುಗಾರಿ ಆಟ ಆಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಸದ್ರಿ ಸ್ಥಳಕ್ಕೆ ದಾಳಿ ಮಾಡಿ ಇಸ್ಪೀಟ್ ಜುಗಾರಿ ಆಡುತ್ತಿದ್ದ ಆಪಾದಿತ ಅನಿಲ , ವಿಶ್ವನಾಥ, ದೀಕ್ಷಿತ್, ಜೀವರಾಜ್, ವರುಣ್, ರವಿಚಂದ್ರ ನಾಯ್ಕ್,ದಿನೇಶ, ಗಣೇಶ, ಅನೀಶ, ಸತೀಶ್, ಅನಿಲ್, ಸತೀಶ್, ರಮೇಶ, ಸುಧಾಕರ್, ಹರೀಶ, ನಿತೇಶ್, ಪ್ರಶಾಂತ, ಜ್ಞಾನೇಶ, ಶಿವಶೆಟ್ಟಿ, ಸಲೀಂ, ಕರುಣಾಕರ್ ಇವರನ್ನು ವಶಕ್ಕೆ ಪಡೆದು ಜುಗಾರಿ ಆಟದ ಬಗ್ಗೆ ಬಳಸಿದ 208 ಇಸ್ಪೀಟ್ ಎಲೆ, ಹಾಗೂ ನಗದು ರೂಪಾಯಿ 1,37,800/- ಮತ್ತು 7 ವಾಹನಗಳನ್ನು ಸ್ವಾಧೀನಪಡಿಸಿಕೊಂಡಿದ್ದು ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 79/2023 ಕಲಂ: 80 KP Act ನಂತೆ  ಪ್ರಕರಣ ದಾಖಲಾಗಿರುತ್ತದೆ.

ಮನುಷ್ಯ ಕಾಣೆ ಪ್ರಕರಣ

 • ಗಂಗೊಳ್ಳಿ: ಪಿರ್ಯಾದಿ ಶಾಲಿನಿ ಇವರ ಗಂಡನಾದ ರಾಘವೇಂದ್ರ ಆಚಾರ್ಯ 42 ವರ್ಷ ರವರು ಸುಮಾರು 6 ವರ್ಷ ದಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆದರು ಗುಣಮುಖರಾಗಿರುವುದಿಲ್ಲ.   ಸದ್ರಿಯವರು ದಿನಾಂಕ: 21/03/2023 ರಂದು ಬೆಳಿಗ್ಗೆ 07:30 ಗಂಟೆಗೆ ಕುಂದಾಪುರ ತಾಲೂಕು ಗುಜ್ಜಾಡಿ ಗ್ರಾಮದ ನಾಯಕವಾಡಿ ಜನತಾಕಾಲೋನಿ ಕಾಳಿಕಾಂಬಾ ಭಜನಾ ಮಂದಿರದ ಬಳಿ ಇರುವ ಪಿರ್ಯಾದಿದಾರರ ಮನೆಯಿಂದ ನಾಯಕವಾಡಿ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದವರು  ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಗಂಗೊಳ್ಳಿಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 39/2023 ಕಲಂ: ಗಂಡಸು ಕಾಣೆಯಂತೆ   ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 29-03-2023 06:36 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080