ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

 • ಶಿರ್ವ: ದಿನಾಂಕ 28/03/2022 ರಂದು ಬೆಳಿಗ್ಗೆ 06:30 ಗಂಟೆಗೆ ಶಿರ್ವಾ ಗ್ರಾಮದ ಶಿರ್ವಾ ಅಂಚೆ ಕಛೇರಿಯ ಎದುರುಗಡೆ ಹಾದು ಹೋಗಿರುವ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಶಿರ್ವಾ ಕಡೆಯಿಂದ ಉಡುಪಿ ಕಡೆಗೆ ಆರೋಪಿ  ಶ್ರೀಕಾಂತ್ ನಾಯಕ್ ಎಂಬಾತನು KA 19 EZ 3253 ನೇ ಸುಜುಕಿ ಎಕ್ಸೆಸ್ ದ್ವಿಚಕ್ರವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿ ಶ್ರೀಮತಿ ಹಿಲ್ಡಾ ಡಿಸೋಜಾ ಇವರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು, ಎಡಕಣ್ಣಿನ ರೆಪ್ಪೆಗೆ ತರಚಿದ ರಕ್ತಗಾಯ, ಎಡಕಣ್ಣಿನ ಕೆಳಗಡೆ ಮೂಳೆ ಮುರಿತದ ಜಖಂ, ಬಳಕಣ್ಣಿನ ಕೆಳಗಡೆ ಗುದ್ದಿದ ಜಖಂ, ಎಡಕೈಯ ಮಣಿಗಂಟಿನ ಬಳಿ ತರಚಿದ ರಕ್ತಗಾಯ, ಬಲಕೈಯ ಭುಜದ ಬಳಿ ತೀವ್ರ  ಸ್ವರೂಪದ ಒಳಜಖಂ, ಬಲಕೈಯ ಮೊಣಗಂಟಿನ ಬಳಿ ತರಚಿದ ರಕ್ತಗಾಯ, ಎರಡೂ ಕಾಲಿನ ಗಂಟಿನ ಬಳಿ ತರಚಿದ ರಕ್ತಗಾಯ ಮತ್ತು ಎರಡೂ ಕಾಲಿನ ಪಾದದ ಬಳಿ ತರಚಿದ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಶಿರ್ವ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  15/2022,ಕಲಂ 279, 338 ಐಪಿಸಿಯಂತೆ ನಂತೆ ಪ್ರಕರಣ ದಾಖಲಾಗಿರುತ್ತದೆ.
 • ಬ್ರಹ್ಮಾವರ: ದಿನಾಂಕ 27.03.2022 ರಂದು ಪಿರ್ಯಾದಿ ರಘವೀರ ಪ್ರಭು  ದಾರರು ಅವರ ಬಾಬ್ತು KA.20.EE.1647 ನೇ ಸ್ಕೂಟರ್‌ನಲ್ಲಿ ತನ್ನ ತಾಯಿ ಶಶಿಕಲಾ ಪ್ರಭು (ಪ್ರಾಯ 71 ವರ್ಷ) ರವರನ್ನು ಸಹಸವಾರಿಣಿಯಾಗಿ ಕುಳ್ಳಿರಿಸಿಕೊಂಡು  ಉಡುಪಿ - ಕುಂದಾಪುರ ರಾ.ಹೆ 66 ರಲ್ಲಿ ಬಾರ್ಕೂರು ಕಡೆಗೆ ಹೋಗುತ್ತಾ ರಾತ್ರಿ 7:30 ಗಂಟೆಗೆ ಸಮಯಕ್ಕೆ  ವಾರಂಬಳ್ಳಿ ಗ್ರಾಮದ  ಬ್ರಹ್ಮಾವರ ಎಸ್‌.ಎಂ.ಎಸ್‌ ಪದವಿ ಪೂರ್ವ ಕಾಲೇಜ್‌ ಎದುರು ತಲುಪುವಾಗ ಅವರ ಎದುರಿನಿಂದ ಅಂದರೆ  ವಿರುಧ್ದ ದಿಕ್ಕಿನಿಂದ ಆರೋಪಿಯು ಅವರ ಬಾಬ್ತು KA.20.EJ.1812ನೇ ಮೋಟಾರ್ ಸೈಕಲ್‌ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ರಾ.ಹೆ 66 ರ ಉಡುಪಿ - ಕುಂದಾಪುರ ಏಕ ಮುಖ ರಸ್ತೆಯ  ತೀರಾ ಎಡಭಾಗದಲ್ಲಿ  ಹೋಗುತ್ತಿದ್ದ  ಫಿರ್ಯಾದಿದಾರರ ಸ್ಕೂಟರಿಗೆ ಡಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳ ಸಮೇತ ಸವಾರರು ಹಾಗೂ ಸಹಸವಾರಿಣಿ ಶಶಿಕಲಾ ಪ್ರಭು ರವರು ರಸ್ತೆಗೆ ಬಿದ್ದಿದ್ದು ಈ ಅಪಘಾತದಿಂದ   ಶಶಿಕಲಾ ಪ್ರಭು ರವರ ತಲೆಗೆ ಒಳ ಜಖಂ ಉಂಟಾಗಿ ಮೂಗಿನಲ್ಲಿ ರಕ್ತ ಬರುತ್ತಿದ್ದು, ಹಾಗೂ   ಫಿರ್ಯಾದಿದಾರರ ಬಲ ಕೈ, ಹಾಗೂ ಬಲ ಕಾಲಿನ ಮಂಡಿಗೆ  ತರಚಿದ ಗಾಯವಾಗಿರುತ್ತದೆ. ಗಾಯಗೊಂಡ ಇಬ್ಬರನ್ನು ಒಂದು ವಾಹನದಲ್ಲಿ ಹತ್ತಿರದ ಬ್ರಹ್ಮಾವರದ ಮಹೇಶ ಆಸ್ಪತ್ರೆಗೆ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆಯನ್ನು ಪಡೆದು ನಂತ್ರ ಶಶಿಕಲಾ ಪ್ರಭು ರವರನ್ನು ಅಲ್ಲಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ  ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಲಾಗಿದೆ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  52/2022 ಕಲಂ 279, 338 ಐಪಿಸಿ ಮತ್ತು ಕಲಂ  218 ಜೊತೆಗೆ 177 ಐಎಂವಿ ಕಾಯಿದೆ ಯಂತೆ ನಂತೆ ಪ್ರಕರಣ ದಾಖಲಾಗಿರುತ್ತದೆ.
 • ಹಿರಿಯಡ್ಕ: ದಿನಾಂಕ: 28/03/2022 ರಂದು ಪಿರ್ಯಾದಿ ಆನಂದ ಕುಲಾಲ್  ಇವರ ಬಾಬ್ತು ಸ್ಕೂಟಿ ನಂಬ್ರ ಕೆ ಎ 20 ಇ ಎಮ್ 0964  ನೇ ರಲ್ಲಿ ಪಿರ್ಯಾದಿದಾರರ ಹೆಂಡತಿಯ ಅಕ್ಕನ ಮಗನಾದ ಆಶೀಷ್ ನು ಪಿರ್ಯಾದಿದಾ ರರ ಹೆಂಡತಿ ತಂಗಿ ನಳಿನಿ ರವರನ್ನು ಸಹ ಸವಾರಳನ್ನಾಗಿ ಕುಳ್ಳಿರಿಸಿಕೊಂಡು ಕಾರ್ಕಳ ಬೈಲೂರಿನಿಂದ ಈ ದಿನ ದಿನಾಂಕ 28/03/2022 ರಂದು ಮದ್ಯಾಹ್ನ  ಮದ್ದು ತರುವುದುಕ್ಕಾಗಿ ಹೆಬ್ರಿಗೆ ಹೋಗಿ ನಂತರ ವಾಪಾಸ್ಸು ಪೆರ್ಡೂರು ಬರುವುದಕ್ಕಾಗಿ ರಾ.ಹೆ 169 (ಎ) ರಲ್ಲಿ ಬರುತ್ತಾ  ಪೆರ್ಡೂರು ಗ್ರಾಮದ ಜೋಗಿಬೆಟ್ಟು ಎಂಬಲ್ಲಿಗೆ ಸಂಜೆ 17:20 ಗಂಟೆ ತಲುಪುವಾಗ ಸ್ಕೂಟಿ     ಸವಾರ ಆಶೀಷ್ ನು ಸ್ಕೂಟಿಯನ್ನು ಅತೀ ವೇಗ ಹಾಗೂ ನಿರ್ಲಕ್ಷ ತನದಿಂದ ಸವಾರಿ ಮಾಡಿ ಒಮ್ಮಲೇ ಬ್ರೇಕ್ ಹಾಕಿದ ಪರಿಣಾಮ ಸ್ಕೂಟಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ  ಡಿಕ್ಕಿ ಹೊಡೆದು ನಂತರ ಚರಂಡಿಗೆ ಬಿದ್ದು ಸಹ ಸವಾರಳಾದ ನಳಿನಿ ರವರಿಗೆ ತಲೆಗೆ ರಕ್ತ ಗಾಯವಾಗಿದ್ದು ವಿಷಯ ತಿಳಿದ ಪಿರ್ಯಾದಿದಾರರು ಕೂಡಲೇ ಸ್ಥಳಕ್ಕೆ ಹೋಗಿ  ನಳಿನಿಯವರನ್ನು ಚಿಕಿತ್ಸೆ ಬಗ್ಗೆ ಹಿರಿಯಡಕ ಕಾಮತ್ ನರ್ಸಿಂಗ್ ಹೋಮ್ ಗೆ ಕರೆದುಕೊಂಡು ಹೋಗಿ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆ ಗೆ ಕರೆದುಕೊಂಡು ಹೋಗಿ ದಾಖಲು ಮಾಡಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  14/2022 ಕಲಂ :279,338 ಐಪಿಸಿಯಂತೆ ನಂತೆ ಪ್ರಕರಣ ದಾಖಲಾಗಿರುತ್ತದೆ. 

ಇತರ ಪ್ರಕರಣ

 • ಉಡುಪಿ: ಪಿರ್ಯಾದಿ ನಾರಾಯಣ ಇವರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಟೆಂಪೋ ಚಾಲಕರಾಗಿರುತ್ತಾರೆ. ದಿನಾಂಕ 28/03/2022 ರಂದು ಬೆಳಿಗ್ಗೆ ಪೆರ್ಡೂರಿನಿಂದ ಕೆ.ಜಿ ರಸ್ತೆಯಲ್ಲಿ ಟೆಂಪೋ ಚಲಾಯಿಸಿಕೊಂಡು ಬರುತ್ತಿರುವಾಗ ಕೊಳಲಗಿರಿ ಚರ್ಚ್‌ ಎದುರು ಮುಖ್ಯರಸ್ತೆಯಲ್ಲಿ ಕಾರು ನಂಬ್ರ: KA 20 MA 5977 ನೇದನ್ನು ಅದರ ಚಾಲಕನು ಮೂರು ಕಾರುಗಳನ್ನು ಹಾಗೂ ಪಿರ್ಯಾದುದಾರರ ಟೇಪೋವನ್ನು ಓವರ್‌ಟೇಕ್‌ ಮಾಡಿಕೊಂಡು ಬಂದು, ಒಮ್ಮೆಲೆ ಎಡಬದಿಗೆ ತಿರುಗಿಸಿ ಪಿರ್ಯಾದುದಾರರ ಟೆಂಪೋದ ಬಲಬದಿಯ ಕ್ಯಾಬಿನ್ ಬಳಿ ಡಿಕ್ಕಿ ಹೊಡೆದು ಹೋಗಿರುತ್ತಾರೆ. ಪಿರ್ಯಾದುದಾರರು ತನ್ನ ಟೆಂಪೋವನ್ನು ಚಲಾಯಿಸಿಕೊಂಡು ಬರುತ್ತಾ ಬೆಳಿಗ್ಗೆ 08:45 ಗಂಟೆಗೆ ಉಡುಪಿ ತಾಲೂಕು ಪುತ್ತೂರು ಗ್ರಾಮದ ಸಂತೆಕಟ್ಟೆ ರಾ.ಹೆ 66 ಯ ಸರ್ವಿಸ್‌ ರಸ್ತೆಯಲ್ಲಿ ಬರುತ್ತಿರುವಾಗ ಡಿಕ್ಕಿ ಹೊಡೆದ ಕಾರು ಚಾಲಕ ಸಹಿತ 6 ಜನ ಆಪಾದಿತರು ಸಮಾನ ಉದ್ದೇಶದಿಂದ ಒಟ್ಟು ಸೇರಿ ಪಿರ್ಯಾದುದಾರರ ಟೆಂಪೋವನ್ನು ತಡೆದು ನಿಲ್ಲಿಸಿ, ಏಕಾಏಕಿ ಬಲಬದಿಯ ಭುಜದ ಬಳಿ ಮತ್ತುಬಲಕೈಯ ಮೇಲೆ ಕಬ್ಬಿಣದ ಸ್ಪಾನರ್‌ನಿಂದ ಹಾಗೂ ಹೆಲ್ಮೆಟ್‌ ನಿಂದ ಹಲ್ಲೆ ಮಾಡಿದ್ದಲ್ಲದೆ, ಟೆಂಪೋದ ಎಡಬದಿಯಲ್ಲಿ ಕುಳಿತಿದ್ದ ವೀರೇಶ್‌ ಎಂಬಾತನಿಗೂ ಹಿಂಬದಿ ತಲೆಗೆ ಯಾವುದೋ ಕಬ್ಬಿಣದ ವಸ್ತುವಿನಿಂದಹ ಹಲ್ಲೆ ಮಾಡಿ, ಆತನ ಕೆನ್ನೆಗೆ ಮತ್ತು ಮುಖಕ್ಕೆ ಕೈಯಿಂದ ಹಲ್ಲೆ ಮಾಡಿರುತ್ತಾರೆ. ಇಬ್ಬರಿಗೂ ಕೆಳಗೆ ಇಳಿಯದಂತೆ ತಡೆಹಿಡಿದು, ಅವಾಚ್ಯವಾಗಿ ಬೈದು ನೀನು ಏನಾದರೂ ಮಾತನಾಡಿದರೆ ನಿಮ್ಮನ್ನು ಇಲ್ಲಿಯೇ ಮುಗಿಸಿಬಿಡುತ್ತೇವೆ ಎಂಬುದಾಗಿ ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿರುತ್ತಾರೆ ಎಂಬಿತ್ಯಾದಿ.    ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ ಅಕ್ರ   51/2022 ಕಲಂ: 143, 147, 148, 323, 324, 341, 504, 506 Rw 149 IPC ಮತ್ತು ಕಲಂ: 3(1)(r), 3(1)(s),  3(2) (v-a) SC ST ACT-1989 ನಂತೆ ಪ್ರಕರಣ ದಾಖಲಾಗಿರುತ್ತದೆ.
 • ಪಡುಬಿದ್ರಿ: ಪಿರ್ಯಾದಿ ಸೆಡ್ರಿಕ್ ಕುಟಿನ್ಹೋ ಇವರು ಸಾಫ್ಟ್‌‌‌ ವೇರ್ ಇಂಜಿನಿಯರ್ ಆಗಿದ್ದು, -2019 ನೇ  ಮಾರ್ಚ್‌ ತಿಂಗಳಿನಿಂದ ವರ್ಕ್‌ ಫ್ರಮ್ ಹೋಮ್ ಕೆಲಸ ಮಾಡಿಕೊಂಡಿರುತ್ತಾರೆ. ಆರೋಪಿತ 1.ಪ್ರಿಯಾಂಕ, ಮುಂಬಯಿ.2. ಪೂನಮ್, ಮುಂಬಯಿ3. ಜೆನ್ನಿಫರ್, ಮುಂಬಯಿ.4. ಮುಖೇಶ್.5. ಮೋಹನ್‌ ಜಿ  ಇವರು ಪಿರ್ಯಾದಿದಾರರಿಗೆ ಮೋಸ ಮಾಡುವ ಉದ್ದೇಶದಿಂದ ಮಾಡೆಲಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದಾಗಿ 1 ನೇ ಆಪಾದಿತೆಯು ದಿನಾಂಕ: 10.02.2022 ರಂದು ಪಿರ್ಯಾದಿದಾರರ ಮೊಬೈಲಿಗೆ ಕರೆ ಮಾಡಿ,  ಮಾಡೆಲಿಂಗ್‌‌ನಿಂದಾಗಿ 2-3 ದಿನದಲ್ಲಿ 2 ರಿಂದ 3 ಲಕ್ಷ ರೂಪಾಯಿ ಲಾಭ ಬರುವುದಾಗಿ ತಿಳಿಸಿ, ರೂ. 20,000/- ವನ್ನು ಕೋ ಆರ್ಡಿನೇಟರ್ ಶುಲ್ಕವಾಗಿ ಕಳುಹಿಸುವಂತೆ ತಿಳಿಸಿ ಅಕೌಂಟ್ ನಂಬ್ರ ನೀಡಿದಂತೆ, ಪಿರ್ಯಾದಿದಾರರು ತಮ್ಮ ICICI ಬ್ಯಾಂಕ್ ಖಾತೆಯಿಂದ ಹಣವನ್ನು ನೆಟ್‌‌ ಬ್ಯಾಂಕ್ ಮುಖಾಂತರ ಶೆನಯಾ ಪರಿಹಾರ್‌ ಎಂಬುವರ ಖಾತೆಗೆ ಕಳುಹಿಸಿದ್ದು, ಇದೇ ರೀತಿ ಪಿರ್ಯಾದಿದಾರರಿಗೆ ಆಸೆ ಹುಟ್ಟಿಸಿ ದಿನಾಂಕ: 19.02.2022 ರಂದು ರೂ. 50,000/-, ಮತ್ತು ಅದೇ ದಿನ ರೂ. 50,000/-, ದಿನಾಂಕ: 20.02.2022 ರಂದು ರೂ. 1,00,000/-, ದಿನಾಂಕ:21.02.2022 ರಂದು ರೂ. 80,000/-, ದಿನಾಂಕ: 22.02.2022 ರಂದು ಟ್ಯಾಲೆಂಟ್ ಪ್ಲಾಟ್‌‌ ಫಾರ್ಮ್‌ ಸ್ಟೂಡಿಯೋ ಎಂಬ ಹೆಸರಿನಲ್ಲಿನ ಆಕ್ಸಿಸ್ ಬ್ಯಾಂಕ್ ಖಾತೆಗೆ ರೂ. 1,00,000/-, ದಿನಾಂಕ: 24.02.2022 ರಂದು ರೂ. 60,000/-, ದಿನಾಂಕ: 25.02.2022 ರಂದು ರೂ. 70,000/, ರೂ. 85,000/-, ದಿನಾಂಕ: 26.02.2022 ರಂದು 1 ಮತ್ತು 2 ನೇ ಆರೋಪಿತರು ಪಿರ್ಯಾದಿದಾರರನ್ನು ಬೆಂಗಳೂರಿಗೆ ಬರಲು ಹೇಳಿದಾಗ, ನಾನು ಬೇರೆ ದಿನಾಂಕವನ್ನು ಕೇಳಿದ್ದು, ಅದಕ್ಕೆ ನೀವು ಈವರೆಗೂ ಕಟ್ಟಿದ ಹಣ ಹೋಗುತ್ತದೆ. ಪುನಃ ದಿನಾಂಕ: 26.02.2022 ರಂದು ರೂ. 2,50,000/-, ದಿನಾಂಕ: 27.02.2022 ರಂದು ರೂ. 3,50,000/, ದಿನಾಂಕ: 28.02.2022 ರಂದು 3 ನೇ ಆರೋಪಿತೆ ಕರೆ ಮಾಡಿ ಒಂದು ಲಕ್ಷ ರೂ ಕೊಡಲು ಬಾಕಿ ಇರುತ್ತದೆ ಎಂದು ಹೇಳಿರುತ್ತಾರೆ. ಕೂಡಲೇ ಪಿರ್ಯಾದಿದಾರರು ರೂ. 1,00,000/- ನ್ನು ಆಪಾದಿತರು ಜಮಾ ಮಾಡಿರುತ್ತಾರೆ. ಅದೇ ರೀತಿ ಆರೋಪಿತರು ಒತ್ತಾಯಿಸಿದಂತೆ ದಿನಾಂಕ:02.03.2022 ರಂದು ರೂ. 1,80,000/-, ದಿನಾಂಕ:03.03.2022 ರಂದು ರೂ. 1,20,000/-, ದಿನಾಂಕ:04.03.2022 ರಂದು ರೂ. 1,00,000/-, ದಿನಾಂಕ: 05.03.2022 ರಂದು ರೂ. 1,20,000/- ಹಣವನ್ನು ಜಮಾ ಮಾಡಿಸಿಕೊಂಡು, ಈ ಮಧ್ಯೆ ಪಿರ್ಯಾದಿದಾರರಿಗೆ ನಂಬಿಕೆ ಬರುವಂತೆ ದಿನಾಂಕ: 07.03.2022 ರಂದು ಮುಂಬಯಿಗೆ ಶೂಟಿಂಗ್ ಆಗುವಲ್ಲಿಗೆ ಹೋಗಿ ಬರುವ ಬಗ್ಗೆ ದಿನಾಂಕ:12.03.2022 ಮತ್ತು 13.03.2022 ರ ವಿಮಾನದ ಟಿಕೆಟನ್ನು ಕಳುಹಿಸಿದ್ದು, ದಿನಾಂಕ: 08.03.2022 ರಂದು ರೂ. 1,30,000/-, ದಿನಾಂಕ:11.03.2022 ರಂದು ರೂ. 1,90,000/- ನ್ನು ಆರೋಪಿತರ ಖಾತೆಗೆ ಜಮಾ ಮಾಡಿಸಿದ್ದು,  ಪಿರ್ಯಾದಿದಾರರು  ದಿನಾಂಕ: 12.03.2022 ರಂದು ಮಹಾರಾಷ್ಟ್ರ ರಾಜ್ಯದ ಮುಬಯಿಯ ಅಂಧೇರಿಗೆ ಬರುವಂತೆ ತಿಳಿಸಿದಂತೆ ಅವರು ನೀಡಿದ ವಿಳಾಸಕ್ಕೆ ಹೋದಲ್ಲಿ ಮುಖೇಶ್ ಮತ್ತು ಮೋಹನ್ ಜಿ ಎಂಬುವರ ಸ್ಟುಡಿಯೋದಲ್ಲಿ ಫೋಟೋಶೂಟ್‌ ಮಾಡಿಸಿರುತ್ತಾರೆ. ಪಿರ್ಯಾದಿದಾರರೊಂದಿಗೆ ಸಂಪರ್ಕದಲ್ಲಿದ್ದ  ಆರೋಪಿತರು ಯಾರೂ ಅಲ್ಲಿ ಕಂಡು ಬಂದಿರುವುದಿಲ್ಲ. ನಂತರ ಆರೋಪಿತರು ಇನ್ನೊಂದು ಕಡೆ ಬ್ರಾಂಡ್‌ ಇಂಟರ್ ವ್ಯೂ ಗೆ ಡಿಪೋಸಿಟ್‌‌ ಎಂದು ದಿನಾಂಕ:15.03.2022 ರಂದು ರೂ. 1,30,000/, ಹಣವನ್ನು ಜಮಾ ಮಾಡಿಸಿದ್ದು, ದಿನಾಂಕ: 19.03.2022 ರಂದು ರೂ. 1,80,000/-, ದಿನಾಂಕ: 22.03.2022 ರಂದು ರೂ. 1,80,000/-, ದಿನಾಂಕ: 23.03.2022 ರಂದು ರೂ. 1,50,000/-, ದಿನಾಂಕ: 23.03.2022 ರಂದು ರೂ. 2,10,000/- ಹಣವನ್ನು ಅಪಾದಿತರ ಬ್ಯಾಂಕ್ ಖಾತೆಗೆ ಜಮಾ ಮಾಡಿಸಿ. ಒಟ್ಟು 27,95,000/- ರೂಪಾಯಿಯನ್ನು ದಿನಾಂಕ:10.02.2022 ರಿಂದ  28.03.2022 ಬೇರೆ ಬೇರೆ ದಿನಗಳಲ್ಲಿ ಪಿರ್ಯಾದಿದಾರರಿಗೆ ಕರೆಮಾಡಿ,  ಪಿರ್ಯಾದಿದಾರರನ್ನು ನಂಬಿಸಿ, ಪಿರ್ಯಾದಿದಾರರ ಬ್ಯಾಂಕ್ ಖಾತೆಯಿಂದ  ಆಪಾದಿತರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಿಸಿ, ಪಿರ್ಯಾದಿದಾರರಿಗೆ ಮೋಸ ಮಾಡಿರುವುದಾಗಿದೆ ಎಂಬಿತ್ಯಾದಿ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ ಅಕ್ರ   34/2022, ಕಲಂ: 417, 420  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ಪಿರ್ಯಾದಿ ಸಂತೋಷ ಭಕ್ತ ಇವರು ದಿನಾಂಕ 28/03/2022 ರಂದು ಬೆಳಿಗ್ಗೆ ಹೆಬ್ರಿಯಿಂದ ಉಡುಪಿ ಕಡೆಗೆ ತನ್ನ ಬಾಬ್ತು ಕಾರು ನಂಬ್ರ: KA 20 MA 5977 ನೇದರಲ್ಲಿ ಹೊರಟು ಬಂದಿದ್ದು, ಬೆಳಿಗ್ಗೆ 08:30 ಗಂಟೆಗೆ ಉಡುಪಿ ತಾಲೂಕು ಪುತ್ತೂರು ಗ್ರಾಮದ ಸಂತೆಕಟ್ಟೆ ರಾ.ಹೆ 66 ರಲ್ಲಿ ಬರುತ್ತಿರುವಾಗ ಸರ್ವಿಸ್‌ ರಸ್ತೆಯಲ್ಲಿ ವಾಹನ ನಂಬ್ರ: KA 20 AA 0096 ನೇದರ ಚಾಲಕ ವಾಹನವನ್ನು ನಿಲ್ಲಿಸುವಂತೆ ಸೂಚಿಸಿದ ಮೇರೆಗೆ ಪಿರ್ಯಾದುದಾರರು ವಾಹನವನ್ನು ನಿಲ್ಲಿಸಿದಾಗ, ಆರೋಪಿತನು ಏಕಾಏಕಿಯಾಗಿ ಕಾರಿನ ಬಳಿ ಬಂದು ಪಿರ್ಯಾದುದಾರರನ್ನು ಹೊರಗೆ ಏಳೆದು ಓವರ್‌ಟೇಕ್‌ ಮಾಡುತ್ತೀಯ ಎಂದು ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದುದಾರರ ಕೆನ್ನೆಗೆ ಹೊಡೆದಿದ್ದು, ಪಿರ್ಯಾದುದಾರರ ಹೆಂಡತಿ ಕಾರಿನಿಂದ ಇಳಿದು ಬಂದು ತಡೆಯಲು ಬಂದಾಗ ಆಕೆಯನ್ನು ದೂಡಿ, ಪಿರ್ಯಾದುದಾರಿಗೆ ಕಾಲಿನಿಂದ ತುಳಿದಿರುತ್ತಾನೆ. ಆತನ ಜೊತೆಗಿದ್ದ ಇನ್ನೊಬ್ಬ ವ್ಯಕ್ತಿ ಸಹ ಪಿರ್ಯಾದುದಾರರಿಗೆ ಹಲ್ಲೆ ಮಾಡಿ, ಪಿರ್ಯಾದುದಾರರ ಹೆಂಡತಿಗೆ ಬೈದಿರುತ್ತಾನೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  50/2022 ಕಲಂ: 504, 323, 354 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ. 

 

ಅಸ್ವಾಭಾವಿಕ ಮರಣ ಪ್ರಕರಣ

 • ಗಂಗೊಳ್ಳಿ: ಫಿರ್ಯಾದಿ ವೆಂಕಪ್ಪಯ್ಯರವರು ತನ್ನ ಅಣ್ಣ ಮಂಜುನಾಥರವರೊಂದಿಗೆ ಬೈಂದೂರು ತಾಲೂಕು ನಾಡ ಗ್ರಾಮದ ಹೆಮ್ಮುಂಜೆ ಎಂಬಲ್ಲಿ ವಾಸ ಮಾಡಿಕೊಂಡಿರುತ್ತಾರೆ. ಫಿರ್ಯಾದಿದಾರರ ಅಣ್ಣ ಮಂಜುನಾಥ ಪ್ರಾಯ: 69 ವರ್ಷ ರವರಿಗೆ ಕಳೆದ ವರ್ಷ ಕೊರೋನಾ ಸೋಂಕು ತಗುಲಿದ್ದು ಈ ಬಗ್ಗೆ ಚಿಕಿತ್ಸೆ ಕೊಡಿಸಿದ್ದು ನಂತರ ಪದೇ ಪದೇ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿದ್ದು ಇತ್ತೀಚೆಗೆ ಮಾನಸಿಕ ಖಿನ್ನತೆಗೆ ಒಳಗಾಗಿರುತ್ತಾರೆ. ಫಿರ್ಯಾದಿದಾರರ ಅಣ್ಣ ಮಂಜುನಾಥರವರಿಗೆ ವಾಕಿಂಗ್ ಮಾಡುವ ಅಭ್ಯಾಸವಿದ್ದು ಎಂದಿನಂತೆ ದಿನಾಂಕ: 28-03-2022 17:00 ಗಂಟೆಗೆ ತೋಟದ ಕಡೆಗೆ ವಾಕಿಂಗ್ ಹೋಗಿದ್ದು ವಾಪಾಸ್ ಬಾರದೇ ಇರುವುದನ್ನು ನೋಡಿ ಹುಡುಕುತ್ತಾ ತೋಟದ ಕಡೆಗೆ ಹೋಗಿ ತೋಟಕ್ಕೆ ನೀರು ಬಿಟ್ಟ ಪಂಪ್ ಸೆಟ್ ನ್ನು  ಬಂದ್ ಮಾಡಿ ತೋಟದಲ್ಲಿದ್ದ ಬಾವಿಯ ಹತ್ತಿರ ಬಂದಾಗ ಸಮಯ ಸುಮಾರು 17:45 ಗಂಟೆಗೆ ಬಾವಿಯ ದಂಡೆಯಲ್ಲಿ ಮಂಜುನಾಥರವರ ಚಪ್ಪಲಿಗಳು ಕಂಡುಬಂದಿದ್ದು ಬಾವಿಯನ್ನು ಇಣುಕಿ ನೋಡಿದಾಗ ಬಾವಿಯ ನೀರಿನಲ್ಲಿ ಮಂಜುನಾಥರವರ ದೇಹವು ಮುಳುಗಿದ್ದು ಕಂಡು ಬಂದಿರುತ್ತದೆ. ಫಿರ್ಯಾದಿದಾರರ ಅಣ್ಣ ಮಂಜುನಾಥರವರು ಮಾನಸಿಕ ಖಿನ್ನತೆಗೆ ಒಳಗಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಈ ದಿನ ದಿನಾಂಕ:28-03-2022 ರಂದು 17:00 ಗಂಟೆಯಿಂದ 17:45 ಗಂಟೆಯ ನಡುವೆ ತೋಟದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.   ಈ ಬಗ್ಗೆ ಗಂಗೊಳ್ಳಿ  ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 15/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

 

ಇತ್ತೀಚಿನ ನವೀಕರಣ​ : 29-03-2022 10:19 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080