ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣ

  • ಉಡುಪಿ: ಪ್ರಕರಣದ  ಫಿರ್ಯಾದಿ ಶ್ರೀಮತಿ ಅನಿತಾ ಇವರ ಹಾಗೂ 1 ನೇ ಆಪಾದಿತ ಸತೀಶ್ ಪೂಜಾರಿ ಮದುವೆ ದಿನಾಂಕ: 15/02/2021 ರಂದು  ಮಂದಾರ್ತಿ ಶ್ರೀ ದುರ್ಗ ಸನ್ನಿಧಿ ಸಭಾಭವನದಲ್ಲಿ ನಡೆದಿರುತ್ತದೆ. ಮದುವೆ ನಂತರ 1 ನೇ ಆಪಾದಿತನ  ದುಶ್ಚಟಗಳ ಬಗ್ಗೆ ಫಿರ್ಯಾದಿದಾರರಿಗೆ ತಿಳಿದು ಬಂದಿದ್ದು, 1 ನೇ ಆಪಾದಿತನಿಗೆ ಇಸ್ಪೀಟ್ ಜುಗಾರಿ ಆಡುವ ಅಭ್ಯಾಸ ಇದ್ದು, ಆತ  ಜುಗಾರಿ ಆಟದಿಂದ ಹಣವನ್ನು ಕಳೆದುಕೊಂಡು ಫಿರ್ಯಾದಿದಾರರಿಗೆ  ಪೀಡಿಸಿ ತವರು  ಮನೆಯಿಂದ ಹಣವನ್ನು ತೆಗೆದುಕೊಂಡು ಬರುವಂತೆ ಹೇಳುತ್ತಿದ್ದನು. ಅಲ್ಲದೇ ಫಿರ್ಯಾದಿದಾರರಿಗೆ ಹೊಡೆದು ಬಡಿದು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿರುತ್ತಾನೆ. 1 ನೇ ಆಪಾದಿತ ಪಿರ್ಯಾದಿದಾರರ ತವರು ಮನೆಯವರು ಮಾಡಿಸಿದ ಚಿನ್ನಾಭರಣಗಳನ್ನು ಅಡವಿರಿಸಿ ಹೆಚ್ಚಿನ ಹಣಕ್ಕಾಗಿ ಫಿರ್ಯಾದಿದಾರರಿಗೆ  ಪೀಡಿಸುತ್ತಿದ್ದನು. ಈ  ಎಲ್ಲಾ  ವಿಚಾರವನ್ನು ಫಿರ್ಯಾದಿದಾರರು ತವರು ಮನೆಯವರಿಗೆ ತಿಳಿಸಿದ್ದಕ್ಕೆ 1 ನೇ  ಆಪಾದಿತ ಫಿರ್ಯಾದಿದಾರರಿಗೆ ಜೀವ ಬೆದರಿಕೆ ಹಾಕಿರುತ್ತಾನೆ. ಫಿರ್ಯಾದಿದಾರರಿಗೆ 1 ನೇ ಆಪಾದಿತ ಮಾತ್ರ ಅಲ್ಲದೇ 1ನೇ ಆಪಾದಿತನ ಮಾತನ್ನು ಕೇಳಿ 1 ನೇ ಆಪಾದಿತನ ತಾಯಿ 2 ಆಪಾದಿತೆ ರತಿ ಪೂಜಾರಿ ಮತ್ತು 1 ನೇ ಆಪಾದಿತನ ಅಕ್ಕ 3 ನೇ ಆಪಾದಿತೆ ಶ್ಯಾಮಲಾ ಪೂಜಾರಿ ಕೂಡ ಫಿರ್ಯಾದಿದಾರರಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿರುವುದು ಎಂಬಿತ್ಯಾದಿ. ಈ ಬಗ್ಗೆ ಮಹಿಳಾ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  26/2022  ಕಲಂ: 498  (ಎ) , 506, 323 ಜೊತೆಗೆ 34 ಐಪಿಸಿ ಮತ್ತು 3, 4 ಡಿಪಿ ಕಾಯ್ದೆಯಂತೆ ನಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 29-03-2022 05:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080