ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣ

 • ಬೈಂದೂರು: ದಿನಾಂಕ 28/03/2021 ರಂದು ಬೆಳಿಗ್ಗೆ 10:35 ಗಂಟೆಗೆ ಪಿರ್ಯಾದಿದಾರರಾದ ಸುನೀತಾ (63), ಗಂಡ:ಅನಂತ ಶೇರುಗಾರ , ವಾಸ:ಮನೆ ನಂಬ್ರ 4/28 ಬಿ ಸ್ವಾಮಿ ಕೃಪಾ, ಬಿಜೂರು ಗ್ರಾಮ ಮತ್ತು ಅಂಚೆ ಬೈಂದೂರು ತಾಲೂಕು ಇವರಿಗೆ ಸಂಬಂಧಿಸಿದ ಜಾಗದಲ್ಲಿ ಆರೋಪಿತ ಮಂಜುನಾಥ ಶೇರುಗಾರ ಎಂಬುವವರು ಹೆಚ್ಚುವರಿ ಜಾಗ ಕಬಳಿಸುವ ಉದ್ದೇಶದಿಂದ ಕೆಲಸಗಾರರೊಂದಿಗೆ ಕಂಪೌಂಡನ್ನು ಕಟ್ಟುತ್ತಿರುವಾಗ ಪಿರ್ಯಾದಿದಾರರು ಮತ್ತು ಅವರ ಮಗ ಅಜಿತ್ ರವರು ನಮಗೆ ಸೇರಿದ ಜಾಗದಲ್ಲಿ ಏಕೆ ಕಂಪೌಂಡ ಕಟ್ಟುತ್ತಿದ್ದೀರಿ ಎಂದು ಕೇಳಿದಾಗ ಮಂಜುನಾಥ ಶೇರುಗಾರರವರು ಅವರ ಬಳಿ ಬಂದು ಇದನ್ನು ಕೇಳಲು ನೀನು ಯಾರು ಎಂದು ಅವಾಚ್ಯ ಶಬ್ಧಗಳಿಂದ ಬೈದು ಪಿರ್ಯಾದಿದಾರರ ಕೈ ಹಿಡಿದು ಎಳೆದು ದೂಡಿ ಅಲ್ಲೇ ಇದ್ದ ಒಂದು ಕಲ್ಲಿನಿಂದ ಪಿರ್ಯಾದಿದಾರರಿಗೆ ಹೊಡೆದಿದ್ದು ಪಿರ್ಯಾದಿದಾರರ ಬಲಕೈಗೆ ಗಾಯವಾಗಿದ್ದು ಈ ಜಗಳವನ್ನು ತಪ್ಪಿಸಲು ಬಂದ ಪಿರ್ಯಾದಿದಾರರ ಮಕ್ಕಳಾದ ಅಜಿತ ಹಾಗೂ ಹರಿಪ್ರಸಾದ ರವರಿಗೆ ಆರೋಪಿತನು ಕೂಡ ಕೈ ಯಿಂದ ಹೊಡೆದು ದೂಡಿ, ಕಾಲಿನಿಂದ ತುಳಿದಿರುತ್ತಾನೆ. ಪಿರ್ಯಾದಿದಾರರು ಹಾಗೂ ಅವರ ಮಕ್ಕಳು ಬೊಬ್ಬೆ ಹಾಕಿದಾಗ ಆಪಾದಿತನು ಜೀವ ಬೆದರಿಕೆ ಹಾಕಿರುತ್ತಾನೆ. ಆರೋಪಿತನು ಹೊಡೆದ ಪರಿಣಾಮ ಪಿರ್ಯಾದಿದಾರರ ಬಲಕೈಗೆ, ಬೆನ್ನಿಗೆ ಸೊಂಟಕ್ಕೆ ಪೆಟ್ಟಾಗಿದ್ದು , ಪಿರ್ಯಾದಿದಾರರ ಮಗ ಅಜಿತ್ ನಿಗೆ ತಲೆಗೆ, ಬೆನ್ನಿಗೆ ಸೊಂಟಕ್ಕೆ ಪೆಟ್ಟಾಗಿದ್ದು ಬೈಂದೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 64/2021 ಕಲಂ: 504, 354, 324, 323, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬೈಂದೂರು: ಪಿರ್ಯಾದಿದಾರರಾದ ಮಂಜುನಾಥ ಯು (37), ಗಂಡ: ಶೇಷಯ್ಯ  ಶೆರುಗಾರ, ವಾಸ:ಉಗ್ರಾಣಿ ಮನೆ ಬಿಜೂರು, ಬಿಜೂರು  ಗ್ರಾಮ ಮತ್ತು ಅಂಚೆ ಬೈಂದೂರು ತಾಲೂಕು ಇವರು ದಿನಾಂಕ 28/03/2021 ರಂದು ಬೆಳಿಗ್ಗೆ 10:35 ಗಂಟೆಗೆ ಪಿರ್ಯಾದಿದಾರರಿಗೆ ಸಂಬಂಧಿಸಿದ ಜಾಗದಲ್ಲಿ ಕಂಪೌಂಡ್ ಗೆ ಕಲ್ಲು ಕಟ್ಟುತ್ತಿರುವಾಗ ಪಿರ್ಯಾದಿದಾರರ ಸಂಬಂಧಿಕರಾದ ಅಜಿತ್ ಎ ಬಿಜೂರು ಹಾಗೂ ಹರೀಶ ಎ ಬಿಜೂರು ರವರು ಜಾಗದ ಬಳಿ ಬಂದು ಪಿರ್ಯಾದಿದಾರರನ್ನುದ್ದೇಶಿಸಿ ಅವಾಚ್ಯವಾಗಿ ಬೈದುದಲ್ಲದೇ ನಮ್ಮ ಜಾಗದಲ್ಲಿ ಕಂಪೌಂಡ್ ನ್ನು ಏಕೆ ಕಟ್ಟಿಸುತ್ತೀಯಾ ಎಂದು ಮಾತಿಗೆ ಮಾತಾಗಿದ್ದು ಆರೋಪಿತ ಅಜಿತ್ ನು ಒಂದು ಮರದ ರೀಪಿನಿಂದ ಪಿರ್ಯಾದಿದಾರರ ಕಾಲಿಗೆ,ಸೊಂಟಕ್ಕೆ ಹಾಗೂ ಎದೆಯ ಜಾಗಕ್ಕೆ ಹೊಡೆದು ದೂಡಿ ನಂತರ ಒಂದು ಕಬ್ಬಿಣದ ರಾಡಿನಿಂದ  ಪಿರ್ಯಾದಿದಾರರ ಕಾಲಿಗೆ , ಬೆನ್ನಿಗೆ ಹೊಡೆದಿರುತ್ತಾನೆ ಅಲ್ಲದೇ ಹರೀಶನು ಕಲ್ಲಿನಿಂದ ಪಿರ್ಯಾದಿದಾರರ ಎದೆಗೆ,ಕಾಲಿಗೆ ಹೊಡೆದು ದೂಡಿದಾಗ ನೆಲಕ್ಕೆ ಬಿದ್ದಿದ್ದು ಆರೋಪಿತರಿಬ್ಬರು ಸೇರಿ ಕುತ್ತಿಗೆಯನ್ನು ಹಿಡಿದು ಎಳೆದಾಗ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಹರಿದಿರುತ್ತದೆ ಹಾಗೂ ಕಾಲಿನಿಂದ ತುಳಿಯುತ್ತಿರುವಾಗ ಪಿರ್ಯಾದಿದಾರರು ಬೊಬ್ಬೆ ಹಾಕಿದ್ದು ಪಿರ್ಯಾದಿದಾರರ ಅಣ್ಣ ಸುಬ್ರಹ್ಮಣ್ಯ ಶೇರಿಗಾರ ಬಂದು ಹೊಡೆಯುತ್ತಿದ್ದ ಆರೋಪಿತರಿಂದ ಬಿಡಿಸಿರುತ್ತಾರೆ. ಆರೋಪಿತರು ಅಲ್ಲಿಂದ ಹೋಗುವಾಗ ಜೀವ ಬೆದರಿಕೆ ಹಾಕಿರುತ್ತಾರೆ. ಆರೋಪಿತರು ಹೊಡೆದ ಪರಿಣಾಮ ಪಿರ್ಯಾದಿದಾರರ ಬೆನ್ನಿಗೆ, ಎದೆಯ ಭಾಗಕ್ಕೆ,ಕೈ ಕಾಲುಗಳಿಗೆ,ಕಿವಿಗೆ ಪೆಟ್ಟಾಗಿದ್ದು  ಬೈಂದೂರು ಸರಕಾರಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲು ಮಾಡಿಕೊಂಡಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 65/2021 ಕಲಂ: 504, 324, 27, 506 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಅಜೆಕಾರು: ದಿನಾಂಕ 27/03/2021 ರಂದು ಮಧ್ಯಾಹ್ನ 12:20 ಗಂಟೆಗೆ ಪಿರ್ಯಾದಿದಾರರಾದ ಶಿವಾನಂದ ಸದೆಪ್ಪ ಮಾದರ, ಉಪವಲಯ ಅರಣ್ಯ ಅಧಿಕಾರಿ, ಕಾರ್ಕಳ ವನ್ಯಜೀವಿ ವಲಯ ಕಾರ್ಕಳ ಇವರು ತನ್ನ ಅಧೀನ ಸಿಬ್ಬಂದಿ ಬೇಟೆ ನಿಯಂತ್ರಣ ಕಾವಲುಗಾರ ಹರೀಶ್ ಕುಮಾರ್ ಕೆ. ರವರೊಂದಿಗೆ ಸಿಂಗಳಿಕ ಗಣತಿ ಕಾರ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಕಾರ್ಕಳ ತಾಲೂಕು ಕೆರ್ವಾಶೆ ಗ್ರಾಮದ ಮೀಸಲು ಅರಣ್ಯವಾದ ದೇವರಗುಂಡಿ ಎಂಬಲ್ಲಿ 2 ಜನ ಕಾಣಸಿಕ್ಕಿ ಆ ಪೈಕಿ ಓರ್ವ ಕೋವಿಯನ್ನು ಹಿಡಿದುಕೊಂಡಿದ್ದು, ಪಿರ್ಯಾದಿದಾರರು ಸಿಬ್ಬಂದಿಯೊಂದಿಗೆ ಹತ್ತಿರಕ್ಕೆ ಹೋಗುತ್ತಿದ್ದಂತೆ ಕಾಡಿನಲ್ಲಿ ಓಡಿ ಮೀಸಲು ಅರಣ್ಯದಲ್ಲಿ ತಲೆಮರೆಸಿಕೊಂಡಿರುತ್ತಾರೆ. ಸ್ಥಳದಲ್ಲಿ ಕೋವಿಗೆ ಬಳಸುವ ಮದ್ದುಗುಂಡುಗಳನ್ನು, ಚಪ್ಪಲಿಗಳನ್ನು ಹಾಗೂ ಮೊಬೈಲ್ ಫೋನನ್ನು ಬಿಟ್ಟು ಓಡಿಹೋಗಿರುವುದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 12/2021  ಕಲಂ: 3, 25 Indian Arms Act  1959 ಮತ್ತು ಕಲಂ: 4 Explosive Substances Act 1908 ರಂತೆ ಪ್ರಕರಣ ದಾಖಲಾಗಿರುತ್ತದೆ.  
 • ಗಂಗೊಳ್ಳಿ: ಪಿರ್ಯಾದಿದಾರರಾದ ರಾಜೇಶ್ ಮೊಗವೀರ (38), ತಂದೆ: ಲಕ್ಷ್ಮಣ ಮೊಗವೀರ, ವಾಸ; ತ್ರಾಸಿ ಹೊಸಪೇಟೆ, ತ್ರಾಸಿ ಗ್ರಾಮ, ಕುಂದಪುರ ತಾಲೂಕು ಇವರು ದಿನಾಂಕ 28/03/2021 ರಂದು ರಾತ್ರಿ 8:00 ಗಂಟೆಗೆ ಮನೆಯ ಬಳಿ ನಿಂತಿರುವಾಗ ಸುರೇಶ ಎಂಬುವವರು ಪಿರ್ಯಾದಿದಾರರ ಬಳಿ ಬಂದು ಏಕಾಏಕಿ ಕಬ್ಬಿಣದ ರಾಡ್‌ ನಿಂದ ಪಿರ್ಯಾದಿದಾರರ ಬಲ ಕಣ್ಣಿನ ಹುಬ್ಬಿಗೆ, ಎಡ ಕೈ ಮೊಣಗಂಟಿಗೆ, ಕಾಲಿಗೆ ಹೊಡೆದ ಪರಿಣಾಮ ಅವರಿಗೆ ರಕ್ತಗಾಯ ಉಂಟಾಗಿದ್ದು, ಬಳಿಕ ಆಪಾದಿತನು ಅವಾಚ್ಯ ಶಬ್ದದಿಂದ ಬೈದುಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 31/2021 ಕಲಂ: 324, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 29-03-2021 09:44 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080