ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

 • ಕಾರ್ಕಳ: ಪಿರ್ಯಾದಿದಾರರಾಧ ಮೋಹನ ಗೌಡ, (38) ತಂದೆ: ಅಣ್ಣಿಗೌಡ, ವಾಸ: ಬೋಜರ ಮನೆ ಹೌಸ್, ಪೆರ್ಮಾನ ಅಂಚೆ, ನಡಾ ಗ್ರಾ, ಬೆಳ್ತಂಗಡಿ ಇವರು ಕೆಎ-20-ಡಿ-7177 ನೇ ವರುಣ ಬಸ್ಸಿನ ಚಾಲಕರಾಗಿದ್ದು  ದಿನಾಂಕ 28/03/2021 ರಂದು ಮದ್ಯಾಹ್ನ 12:45 ಘಂಟೆಗೆ ಬಸ್ಸನ್ನು ಕಾರ್ಕಳ ಬಸ್ ನಿಲ್ದಾಣದಿಂದ ಪುಲ್ಕೇರಿ ಮಾರ್ಗವಾಗಿ ಬಜಗೋಳಿ ಕಡೆಗೆ ಚಲಾಯಿಸಿಕೊಂಡು ಬಂದು ಮಿಯ್ಯಾರು ಗ್ರಾಮದ ಕಂಬಳ ಕ್ರಾಸ್ ಬಳಿ ಬಸ್ಸನ್ನು ನಿಲ್ಲಿಸಿ ಪ್ರಯಾಣಿಕರನ್ನು ಇಳಿಸುತ್ತಿರುವಾಗ ಪುಲ್ಕೇರಿ ಜಂಕ್ಷನ್ ನಿಂದ ಬಜಗೋಳಿ ಕಡೆಗೆ  ತೆರಳುತ್ತಿದ್ದ ಕೆಎ-04-ಎಎ-4057 ನೇ ಟಾಟಾ ಇಂಡಿಕಾ ಕಾರಿನ ಚಾಲಕನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬಸ್ಸಿನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನ ಹಿಂಬದಿ ಮತ್ತು ಕಾರಿನ ಮುಂದಿನ ಭಾಗ ಜಖಂಗೊಂಡಿದ್ದು ಅಲ್ಲದೇ ಈ ಅಪಘಾತದಿಂದ ಕಾರಿನಲ್ಲಿದ್ದ ಕೆ ಮುನಿಯಪ್ಪ ಎಂಬುವವರಿಗೆ ಮೂಗು ಮತ್ತು ಬಾಯಿಯಲ್ಲಿ ರಕ್ತ ಬಂದಿದ್ದು ಹಾಗೂ ಗಂಟಲು ಮತ್ತು ಸೊಂಟಕ್ಕೆ ಗುದ್ದಿದ ಗಾಯವಾಗಿದ್ದು ಅಲ್ಲದೇ ಹಿಂಬದಿ ಸೀಟಿನಲ್ಲಿದ್ದ ಇಬ್ಬರು ಹೆಂಗಸರಿಗೆ ಸಣ್ಣ ಪುಟ್ಟ ಗಾಯಗಳಾಗಿರುತ್ತದೆ. ಈ ಅಪಘಾತಕ್ಕೆ ಕೆಎ-04-ಎಎ-4057 ನೇ ಟಾಟಾ ಇಂಡಿಕಾ ಕಾರಿನ ಚಾಲಕ ವೀರಸ್ವಾಮಿ ಇವರ ಅತೀ ವೇಗ ಮತ್ತು ಅಜಾಗರೂಕತೆಯೇ ಕಾರಣವಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 40/2021 ಕಲಂ: 279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೋಟ: ಪಿರ್ಯಾದಿದಾರರಾಧ ಪ್ರವೀಣ ಮಧ್ಯಸ್ಥ (28) ತಂದೆ: ಸುಬ್ರಮಣ್ಯ ಮಧ್ಯಸ್ಥ ವಾಸ:ಶಾಲೆ ಬಾಗಿಲು ಕಿರಿಮಂಜೇಶ್ವರ ಗ್ರಾಮ ಕುಂದಾಪುರ ಇವರು ದಿನಾಂಕ 28/03/2021 ರಂದು ತನ್ನ KA-20-EM-8391 ನೇ ಪಲ್ಸರ್ ಮೋಟಾರ್ ಸೈಕಲಿನಲ್ಲಿ ಸಂಜೆ ವೇಳೆಗೆ ಮನೆಯಿಂದ ಸಾಸ್ತಾನಕ್ಕೆ ಅಡುಗೆ ಕೆಲಸದ ಬಗ್ಗೆ ಹೊರಟು  ರಾಷ್ರೀಯ ಹೆದ್ದಾರಿ 66 ರ ರಸ್ತೆಯಲ್ಲಿ  ಸಾಗುತ್ತಾ ಸಂಜೆ ಸುಮಾರು 4:00 ಗಂಟೆಯ ಸಮಯಕ್ಕೆ ಗುಂಡ್ಮಿ ಗ್ರಾಮದ ಗುಂಡ್ಮಿ ಅಂಬಾಗಿಲು ಎಂಬಲ್ಲಿ ತಲುಪುವಾಗ ಪ್ರವೀಣ ಮಧ್ಯಸ್ಥ ರವರ ಎದುರಿನಲ್ಲಿ ಹೋಗುತ್ತಿದ್ದ ಆಟೋ ರಿಕ್ಷಾ KA-20-AA-0160 ನೇದರ ಚಾಲಕ ತನ್ನ ಆಟೋ ರಿಕ್ಷಾ ವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಾ ಯಾವುದೇ ಸೂಚನೆ ನೀಡದೆ ನಿರ್ಲಕ್ಷವಾಗಿ ತನ್ನ ರಿಕ್ಷಾವನ್ನು ಬಲಕ್ಕೆ ಡಿವೈಡರ್ ಕಡೆಗೆ ಚಲಾಯಿಸಿ ಪ್ರವೀಣ ಮಧ್ಯಸ್ಥ ರವರ ಮೋಟಾರ್ ಸೈಕಲಿನ ಎಡಭಾಗಕ್ಕೆ ಢಿಕ್ಕಿ ಹೊಡೆದ ಪರಿಣಾಮ ಪ್ರವೀಣ ಮಧ್ಯಸ್ಥ ರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು, ಇದರಿಂದ ಪ್ರವೀಣ ಮಧ್ಯಸ್ಥ ರವರ ಎಡ ಕೈಗೆ ಮೂಳೆ ಮುರಿತದ ಗಾಯ ಮುಖಕ್ಕೆ, ತಲೆಗೆ ರಕ್ತಗಾಯವಾಗಿದ್ದು, ಅಲ್ಲದೇ ಕೈಗೆ ಕಾಲಿಗೆ ದೇಹಕ್ಕೆ ತರಚಿದ ಗಾಯ ಉಂಟಾಗಿರುತ್ತದೆ. ಕೂಡಲೇ ಅಲ್ಲಿ ಸೇರಿದ ಜನರು ಉಪಚರಿಸಿ  ಪ್ರವೀಣ ಮಧ್ಯಸ್ಥ ರವರನ್ನು ಚಿಕಿತ್ಸೆಯ ಬಗ್ಗೆ ಬ್ರಹ್ಮಾವರ ಮಹೇಶ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಕೊಟೇಶ್ವರ ಎನ್ ಆರ್ ಆಚಾರ್ಯ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಅಪಘಾತಕ್ಕೆ KA-20-AA-0160 ಆಟೋ ರಿಕ್ಷಾ ಚಾಲಕ ಮಂಜುನಾಥನ ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆಯೆ ಕಾರಣವಾಗಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 53/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ದಿನಾಂಕ 29/03/2021 ರಂದು ಬೆಳಿಗ್ಗೆ 8:00 ಗಂಟೆಗೆ ಕಾರ್ಕಳ ತಾಲೂಕು ಮಾಳ ಗ್ರಾಮದ ತಾಲೂಕು ಮಾಳ ಗ್ರಾಮದ ಮಾಳ ಚಕ್ ಪೋಸ್ಟ್ ನಿಂದ 4 ಕಿ ಮೀ ಮೇಲೆ ಮಾಳ ಘಾಟಿಯ ರಾಷ್ಟ್ರೀ ಯ ಹೆದ್ದಾರಿಯಲ್ಲಿ KA-19-AC-2517 ನೇ ನಂಬ್ರದ ಮಿನಿ ಟಿಪ್ಪರ್ ಕಾರ್ಕಳ ಕಡೆಯಿಂದ ಶೃಂಗೇರಿ ಕಡೆಗೆ ತನ್ನ ಟಿಪ್ಪರ್ ನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ, ಎಸ್ ಕೆ ಬಾರ್ಡರ್ ನಿಂದ ಕಾರ್ಕಳ ಕಡೆಗೆ KA-18-Z-3775 ನೇ ನಂಬ್ರದ ಯೂಸಫ್ ಹೈದರ್ ಎನ್ನುವ ಕಾರು ಚಾಲಕ ತನ್ನ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ತೀರಾ ಬಲಭಾಗಕ್ಕೆ ಚಲಾಯಿಸಿಕೊಂಡು ಬಂದು ಟಿಪ್ಪರಿನ ಹಿಂಭಾಗದ ಟಯರ್ ಹೌಸಿಂಗ್ ಗೆ ಡಿಕ್ಕಿ ಹೊಡೆದ ಪರಿಣಾಮ 2 ವಾಹನಗಳು ಜಖಂ ಗೊಂಡಿದ್ದು 2 ವಾಹನದಲ್ಲಿರುವ ವ್ಯಕ್ತಿಗಳಿಗೆ ಯಾವುದೇ ರೀತಿಯ ಗಾಯಗಳಾಗಿರುವುದಿಲ್ಲವಾಗಿದೆ. ಎಂಬುದಾಗಿ ಕೆ ಎನ್ ಪ್ರಭಾಕರ (45), ತಂದೆ: ನಾರಾಯಣ ವಾಸ: ಕಲ್ಕಟೆ ಮೆಣಸೆ ಮಸ್ಕೆ ಗ್ರಾಮ ಶೃಂಗೇರಿ ತಾಲೂಕು ಚಿಕ್ಕಮಂಗಳೂರು ಜಿಲ್ಲೆ  ಇವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 37/2021 ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಮಲ್ಪೆ: ಪಿರ್ಯಾದಿದಾರರಾಧ ಪ್ರಶಾಂತ ಕುಮಾರ್ ಸ್ವಾಯಿ ತಂದೆ: ಸಂತೋಷ  ಕುಮಾರ್ ಸ್ವಾಯಿ ವಾಸ:  ಬರಂಪೂರ್ ಗ್ರಾಮ, ಗಂಜಾಮ್ ಜಿಲ್ಲೆ, ಒರಿಸ್ಸಾ ಇವರ ತಂದೆ ಸಂತೋಷ ಕುಮಾರ (46) ಇವರು ಕದಿಕೆ ಪರಿಸರದಲ್ಲಿ ಮೇಸ್ತ್ರಿಯವರೊಂದಿಗೆ ಹೆಲ್ಪರ್ ಆಗಿ ಕೆಲಸ ಮಾಡಿಕೊಂಡಿದ್ದು, ಅವರಿಗೆ ಶರಾಬು ಕುಡಿಯುವ ಚಟವಿದ್ದು, ಶರಾಬು ಕುಡಿದು ಬಂದು ಮನೆಯಲ್ಲಿ  ಗಲಾಟೆ ಮಾಡುತ್ತಿದ್ದು , ಸರಿಯಾಗಿ ಕೆಸಲಕ್ಕೆ ಹೋಗುತ್ತಿರಲಿಲ್ಲ, ದಿನಾಂಕ 29/03/2021 ರಂದು ಕದಿಕೆ ಯ ರೂಮಿನಿಂದ ಕೆಸಲಕ್ಕೆ ಹೋಗಿದ್ದು , ಪ್ರಶಾಂತ ಕುಮಾರ್ ರವರು ಎಡಬೆಟ್ಟುವಿನ ಸೂಪರ್ ಲಾಂಡ್ರಿಯಲ್ಲಿ ಕೆಲಸ ಮಾಡುತ್ತಿರುವಾಗ ಅವರ ಮಾವನ ಮಗ ಸುಬ್ರಾತ್ ಎಂಬುವವರು ಕರೆ ಮಾಡಿ ಸಂತೋಷಕುಮಾರ  ರವರು ಗುಜ್ಜರಬೆಟ್ಟುವಿನ ಸ್ಮಶಾನಕ್ಕೆ ಹೋಗುವ ದಾರಿಯ  ಬದಿಯಲ್ಲಿನ  ಮರದ ಕೊಂಬೆಗೆ  ಬೈರಸ್ ಕಟ್ಟಿ  ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವಿಚಾರ ತಿಳಿಸಿದಂತೆ ಪ್ರಶಾಂತ ಕುಮಾರ್ ರವರು ಗುಜ್ಜರಬೆಟ್ಟುವಿನ ಸ್ಮಶಾನದ ಬಳಿ ಹೋಗಿ ನೋಡಿದ್ದು ಇವರ  ತಂದೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು , ಸಂತೋಷ ಕುಮಾರ  ಶರಾಬು ಸೇವನೆ ಮಾಡುವ ಚಟ ಹೊಂದಿದ್ದು ಅದೇ ಕಾರಣದಿಂದ  ಜೀವನದಲ್ಲಿ  ಜಿಗುಪ್ಸೆ ಗೊಂಡು ದಿನಾಂಕ 29/03/2021 ರಂದು ಬೆಳಿಗ್ಗೆ 09:00 ಗಂಟೆಯಿಂದ ಬೆಳಿಗ್ಗೆ 11:00 ಗಂಟೆಯ ಮಧ್ಯಾವಧಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ  ಮಾಡಿಕೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 14/2021 ಕಲಂ 174 ಸಿ.ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 29-03-2021 06:21 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080