ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕಾರ್ಕಳ: ದಿನಾಂಕ 26/01/2022 ರಂದು ಪಿರ್ಯಾದಿದಾರರಾದ  ರಾಜೇಶ ಆಚಾರ್ಯ (32), ತಂದೆ:ನಾರಾಯಣ ಆಚಾರ್ಯ, ವಾಸ:ದುರ್ಗಾ ನಿವಾಸ, ಪಡುಕುಡೂರು, ಒಳಗುಡ್ಡೆ, ಎಳ್ಳಾರೆ ಅಂಚೆ ಮತ್ತು ಗ್ರಾಮ, ಹೆಬ್ರಿ ತಾಲೂಕು, ಉಡುಪಿ ಜಿಲ್ಲೆ ಇವರು ತನ್ನ KA-20-EP-0866 ನೇ ನೋಂದಣಿ ಸಂಖ್ಯೆಯ ಮೋಟಾರು ಸೈಕಲ್ ನಲ್ಲಿ ಸಹ ಸವಾರರಾಗಿ ಪಿರ್ಯಾದಿದಾರರ ತಂದೆ ನಾರಾಯಣ ಆಚಾರ್ಯ (60) ರವರನ್ನು ಕುಳ್ಳಿರಿಸಿಕೊಂಡು ಸವಾರಿ ಮಾಡಿಕೊಂಡು ಅಜೆಕಾರು ಕಡೆಯಿಂದ ಕಾರ್ಕಳ ಕಡೆಗೆ ರಾಜ್ಯ ಹೆದ್ದಾರಿಯಲ್ಲಿ ಎಡ ಬದಿಯಲ್ಲಿ ಹೋಗುತ್ತಾ ಹಿರ್ಗಾನ ಗ್ರಾಮದ ಕೊತ್ತಳಿಗೆ ಎಂಬಲ್ಲಿ ತಲುಪುವಾಗ ಬೆಳಿಗ್ಗೆ 07:30 ಗಂಟೆಗೆ ಹಿಂಬದಿಯಿಂದ ಅಂದರೆ ಅಜೆಕಾರು ಕಡೆಯಿಂದ ಕಾರ್ಕಳ ಕಡೆಗೆ KA-20-P- 7625 ನೇ ನೋಂದಣಿ ಸಂಖ್ಯೆಯ ಕಾರಿನ ಚಾಲಕ ತನ್ನ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಎಡ ಬದಿಗೆ ಬಂದು ಪಿರ್ಯಾದಿದಾರರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರು ಸೈಕಲ್ ನ ಬಲ ಬದಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಸಹ ಸವಾರರಾದ ನಾರಾಯಣ ಆಚಾರ್ಯರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ  ಎದೆಯ ಬಲ ಭಾಗದ ಭುಜದ ಬಳಿ ಗುದ್ದಿದ ಗಾಯ, ಮುಖದ ಬಲ ಕಣ್ಣಿನ ಬಳಿ ತರಚಿದ ಗಾಯ, ತುಟಿಯ ಎಡ ಭಾಗಕ್ಕೆ ಗುದ್ದಿದ ಗಾಯ, ಎದುರಿನ ಒಂದು ಹಲ್ಲು ಅರ್ಧ ತುಂಡಾಗಿದ್ದು, ಬಲ ಕಾಲಿನ ಗಂಟಿನ ಬಳಿ, ಬಲ ಕಾಲಿನ ಸೊಂಟದ ಬಳಿ, ಬಲ ಕೈಯ ಮಣಿ ಗಂಟಿನ ಬಳಿ, ಎಡ ಕೈಯ ತಟ್ಟುವಿನ ಬಳಿ ತರಚಿದ ಗಾಯವಾಗಿದ್ದು, ತುಟಿಯಲ್ಲಿ ರಕ್ತ ಸುರಿದಿದ್ದು ಹಾಗೂ ಸಹ ಸವಾರರಾದ ನಾರಾಯಣ ಆಚಾರ್ಯರವರಿಗೆ ಬಲ ಕಾಲಿನ ಗಂಟಿನ ಬಳಿ, ಎಡ ಕೈ ಮಣಿ ಗಂಟಿನ ಬಳಿ, ಬಲ ಕೈಯ ಮಣಿ ಗಂಟಿನ ಬಳಿ ತರಚಿದ ಗಾಯ, ಸೊಂಟಕ್ಕೆ ಒಳ ನೋವು ಆಗಿದ್ದು ಕಾರಿನ ಚಾಲಕನು ಗಾಯಾಳುಗಳಿಬ್ಬರನ್ನು ಕಾರ್ಕಳ ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪ್ರಥಮ ಚಿಕಿತ್ಸೆ  ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಬೇರೆ ಆಸ್ಪತ್ರೆಗೆ ದಾಖಲಿಸುವಂತೆ  ತಿಳಿಸಿದ್ದು ನಂತರ ಮಣಿಪಾಲ ಕೆ ಎಮ್ ಸಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 20/2022  ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಟ್ಕಾ ಜುಗಾರಿ ಪ್ರಕರಣಗಳು

 • ಹಿರಿಯಡ್ಕ: ದಿನಾಂಕ 28/02/2021  ರಂದು ಅನಿಲ್ ಬಿ ಮಾದರ, ಪೊಲೀಸ್ ಉಪನಿರೀಕ್ಷಕರು, ಹಿರಿಯಡ್ಕ ಪೊಲೀಸ್ ಠಾಣೆ ಇವರಿಗೆ ಉಡುಪಿ ತಾಲೂಕು ಬೊಮ್ಮರಬೆಟ್ಟು ಗ್ರಾಮದ ಸಂತೆ ಮಾರ್ಕೆಟ್ ಸಾರ್ವಜನಿಕ ಸ್ಥಳದಲ್ಲಿ  ಒಬ್ಬ  ವ್ಯಕ್ತಿ ಮಟ್ಕ ಜುಗಾರಿ ಆಟದ ಬಗ್ಗೆ ಹಣ ಸಂಗ್ರಹಿಸುತ್ತಿರುವುದಾಗಿ  ಮಾಹಿತಿ ದೊರೆತ ಮೇರೆಗೆ ದಾಳಿ ನಡೆಸಿ ಮಟ್ಕಾ ಜುಗಾರಿ ಆಟಕ್ಕೆ ನಡೆಸುತ್ತಿದ್ದ ರಾಘವೇಂದ್ರ ಶೇರಿಗಾರ (40), ತಂದೆ: ನಾರಾಯಣ ಶೇರಿಗಾರ , ವಾಸ: ಕೊಪ್ಪಳ ಮನೆ ಹಿರಿಯಡ್ಕ ಅಂಚೆ ಬೊಮ್ಮಾರಬೆಟ್ಟು  ಗ್ರಾಮ, ಉಡುಪಿ ತಾಲೂಕು ಎಂಬಾತನನ್ನು ವಶಕ್ಕೆ ಪಡೆದು ಮಟ್ಕಾ ಜುಗಾರಿ ಆಟಕ್ಕೆ ಸಂಗ್ರಹಿಸಿದ ನಗದು ರೂಪಾಯಿ  850/- ಮತ್ತು ಮಟ್ಕಾ ನಂಬ್ರ ಬರೆದ ಚೀಟಿ- 1,  ಬಾಲ್‌ಪೆನ್‌ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 05/2022 ಕಲಂ : 78 (I)(III) KP ACT   ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಬೈಂದೂರು: ದಿನಾಂಕ 28/01/2022 ರಂದು ಪವನ್ ನಾಯಕ್  ಪೊಲೀಸ್, ಉಪನಿರೀಕ್ಷಕರು ಬೈಂದೂರು ಪೊಲೀಸ್ ಠಾಣೆ ಇವರಿಗೆ ಬೈಂದೂರು ತಾಲೂಕು ಶಿರೂರು ಗ್ರಾಮದ ಶಿರೂರು ಕೆಳಪೇಟೆ ರಿಕ್ಷಾ ನಿಲ್ದಾಣದ  ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ನಡೆಯುತ್ತಿರುವುದಾಗಿ ಬಂದ ಮಾಹಿತಿ  ಮೇರೆಗೆ ದಾಳಿ ನಡೆಸಿ ಆರೋಪಿತ ರಾಮ ಮೊಗವೀರ (46), ತಂದೆ: ಕೃಷ್ಣ ಮೊಗವೀರ, ವಾಸ: ಪಡೆರಹಿತ್ಲು , ಕೆಳಪೇಟೆ , ಶಿರೂರು ಗ್ರಾಮ ಬೈಂದೂರು ತಾಲೂಕು ಎಂಬಾತನನ್ನು ವಶಕ್ಕೆ ಪಡೆದು ಮಟ್ಕಾ ಜುಗಾರಿ ಆಟದಿಂದ ಅಕ್ರಮವಾಗಿ ಸಂಗ್ರಹಿಸಿದ ನಗದು ಹಣ ರೂಪಾಯಿ 1080/-, ಮಟ್ಕಾ ನಂಬ್ರ ಬರೆದ ಚೀಟಿ-1 ಹಾಗೂ ಬಾಲ್ ಪೆನ್ನು-1 ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 25/2022 ಕಲಂ : 78 (I)(III) KP ACT   ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ದಿನಾಂಕ 28/01/2022 ರಂದು ಜನಾರ್ಧನ್ ಕೆ, ಪೊಲೀಸ್ ಉಪನಿರೀಕ್ಷಕರು (ತನಿಖೆ), ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಇವರು ರೌಂಡ್ಸ್ ಕರ್ತವ್ಯದಲ್ಲಿರುವಾಗ ಕಾರ್ಕಳ ತಾಲೂಕು ಬೆಳ್ಮಣ್ ಗ್ರಾಮದ ಬೆಳ್ಮಣ್ ಪೇಟೆಯಲ್ಲಿರುವ ಸಾರ್ವಜನಿಕ ಬಸ್ ನಿಲ್ದಾಣದ ಹಿಂಬದಿಯಲ್ಲಿ  ಮಟ್ಕಾ ಜುಗಾರಿ ಆಟ ಆಡುತ್ತಿದ್ದ  ಬಗ್ಗೆ ಬಂದ ಮಾಹಿತಿಯಂತೆ ದಾಳಿ ನಡೆಸಿ  ಆರೋಪಿತ ಯೊಗೀಶ್ ಕಾಳಪ್ಪ ಮಾಬಿಯಾನ್ (52) ತಂದೆ: ದಿವಂಗತ ಕಾಳಪ್ಪ ಸಾಲಿಯಾನ್, ವಾಸ: ನಡುಮಣ ಮೇಲ್ಮನೆ, ನಂದಳಿಕೆ ಸರಕಾರಿ ಪ್ರಾಥಮಿಕ ಶಾಲೆಯ ಬಳಿ, ಬೆಳ್ಮಣ್ ಅಂಚೆ, ನಂದಳಿಕೆ ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಎಂಬಾತನನ್ನು ವಶಕ್ಕೆ  ಪಡೆದು ಮಟ್ಕಾ ಜುಗಾರಿ  ಆಟದಿಂದ  ಸಂಗ್ರಹಿಸಿದ  ನಗದು ರೂಪಾಯಿ 1360/-,  ಮಟ್ಕಾ ಬರೆದ ಚೀಟಿ ಮತ್ತು ಬಾಲ್‌ ಪೆನ್‌ -01 ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 10/2022 ಕಲಂ : 78 (I)(III) KP ACT   ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೋಟ: ದಿನಾಂಕ 28/01/2022 ರಂದು ಮಧು ಬಿ.ಇ ,  ಪೊಲೀಸ್‌ ಉಪನಿರೀಕ್ಷಕರು, ಕೋಟ ಪೊಲೀಸ್‌ ಠಾಣೆ ಇವರು ರೌಂಡ್ಸ್ ಕರ್ತವ್ಯದಲ್ಲಿರುವಾಗ ಹೊಂಬಾಡಿ ಮಂಡಾಡಿ ಗ್ರಾಮದ ಹುಣ್ಸೆಮಕ್ಕಿಯ ರಾಘವೇಂದ್ರ ಹೋಟೇಲ್ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಡುತ್ತಿರುವುದಾಗಿ ಬಂದ ಮಾಹಿತಿಯಂತೆ ದಾಳಿ ನಡೆಸಿಮಟ್ಕಾ ಜುಗಾರಿ ಆಟದಲ್ಲಿ ನಿರತ ಆರೋಪಿ ನರಸಿಂಹ ಕುಲಾಲ್ (66), ತಂದೆ: ಚಿಕ್ಕ ಕುಲಾಲ್, ವಾಸ: ಹೊರನಾಡಿ, ಮೊಳಹಳ್ಳಿ ಗ್ರಾಮ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ ಎಂಬಾತನನ್ನು ಹಿಡಿದು ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ಒಟ್ಟು 3455/-ರೂಪಾಯಿ ಹಾಗೂ ಆತನ ಕೈಯಲ್ಲಿದ್ದ ಮಟ್ಕಾಚೀಟಿ ಹಾಗೂ ಬಾಲ್ ಪೆನ್ ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 08/2022 78 (I)(III) KP ACT   ರಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಬ್ರಹ್ಮಾವರ: ಪಿರ್ಯಾದಿದಾರರಾದ ಭುವನ್ ಪೂಜಾರಿ (20), ತಂದೆ:ಸುಧಾಕರ ಪೂಜಾರಿ, ವಾಸ:ಮೂಡುಬೆಟ್ಟು ಹೇರೂರು ಗ್ರಾಮ ಬ್ರಹ್ಮಾವರ ತಾಲೂಕು ಇವರ ತಾಯಿ ಬೇಬಿ ಪೂಜಾರ್ತಿ (45) ರವರಿಗೆ 4 ವರ್ಷಗಳಿಂದ ಮಾನಸಿಕ ಖಾಯಿಲೆ ಇದ್ದು ,ಈ ಬಗ್ಗೆ ಉಡುಪಿ ದೊಡ್ಡಣ್ಣಗುಡ್ಡೆಯ ಬಾಳಿಗ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡುತ್ತಿದ್ದು,.ಆದರೂ ಸಹ ಆಗಾಗ ಪೀಡ್ಸ್ ಬಂದು ಬೀಳುತ್ತಿದ್ದರು. ಬೇಬಿ ಪೂಜಾರ್ತಿ ರವರು ತನಗಿದ್ದ ಮಾನಸಿಕ ಖಾಯಿಲೆಯಿಂದಲೋ ಅಥವಾ ಇನ್ನಾವುದೋ ಹೇಳಿಕೊಳ್ಳಲಾಗದ  ಕಾರಣದಿಂದಲೋ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 28/01/2022 ರಂದು ಬೆಳಿಗ್ಗೆ 11:00 ಗಂಟೆಯಿಂದ ಸಂಜೆ 7:00 ಗಂಟೆಯ ಮಧ್ಯಾವಧಿಯಲ್ಲಿ ತಮ್ಮ ಮನೆಯ  ಮೊದಲ ಮಹಡಿಯ ಉಪ್ಪರಿಗೆಯಲ್ಲಿ ಜಂತಿಗೆ ನೈಲಾನ್ ಹಗ್ಗವನ್ನು ಕಟ್ಟಿ ಇನ್ನೋಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 05/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

 • ಬೈಂದೂರು: ಪಿರ್ಯಾದಿದಾರರಾದ ಮಹೇಂದ್ರ ಕುಮಾರ್ ಶೆಟ್ಟಿ,  ಶಸ್ತ್ರ ಚಿಕಿತ್ಸಕ  ವೈದ್ಯಾಧಿಕಾರಿ ಸಮುದಾಯ ಆರೋಗ್ಯ ಕೇಂದ್ರ ಬೈಂದೂರು ಇವರು ಯಡ್ತರೆ ಗ್ರಾಮ ಬೈಂದೂರು ತಾಲೂಕು ಯಡ್ತರೆ ಗ್ರಾಮದ ಬೈಂದೂರು ಸಮುದಾಯ ಆರೋಗ್ಯ  ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು,  ದಿನಾಂಕ 22/01/2022 ರಂದು ಸಮಯ ಬೆಳಿಗ್ಗೆ 11:00 ಗಂಟೆಗೆ ಸಮುದಾಯ  ಆರೋಗ್ಯ ಕೇಂದ್ರದಲ್ಲಿ ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿರುವಾಗ, ಸಾರ್ವಜನಿಕರ ಪ್ರಾಣಕ್ಕೆ ಅಪಾಯಕಾರಿಯಾದ ಕೊರೋನಾ ರೋಗದ ಸೋಂಕನ್ನು ತಡೆಗಟ್ಟಲು  ಮಾಸ್ಕ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ  ಮಾನ್ಯ ಕರ್ನಾಟಕ ಸರಕಾರ ಹಾಗೂ ಉಡುಪಿ ಜಿಲ್ಲಾಡಳಿತ ಕೋವಿಡ್ ನಿಯಮಾವಳಿಗಳನ್ನು ಹೊರಡಿಸಿದ ಬಗ್ಗೆ  ತಿಳುವಳಿಕೆ ಇದ್ದರೂ ಆರೋಪಿ ಮಹೇಶ್ @ ಮಂಜುನಾಥ ಗಾಣಿಗ ಎಂಬಾತನು ಇತರರೊಂದಿಗೆ ಮೀಡಿಯಾದವನೆಂದು ಹೇಳಿಕೊಂಡು ಮಾಸ್ಕ ಧರಿಸದೇ ಆಸ್ಪತ್ರೆಯ ಒಳಗೆ ಬಂದು ವಿಡಿಯೋ ಚಿತ್ರೀಕರಣ  ಮಾಡುತ್ತಿದ್ದು,  ಪಿರ್ಯಾದಿದಾರರು ಆರೋಪಿತನಿಗೆ  ಕೋವಿಡ್ ನಿಯಮಾವಳಿಗಳ ಬಗ್ಗೆ ತಿಳುವಳಿಕೆ  ನೀಡಿ ಮಾಸ್ಕ  ಧರಿಸುವಂತೆ  ಹಾಗೂ ರೋಗಿಗಳಿಗೆ ತೊಂದರೆ ನೀಡದಂತೆ ತಿಳಿಸಿದ ಸಮಯ ಆರೋಪಿಯು ಪಿರ್ಯಾದಿದಾರರನ್ನುಉದ್ದೇಶಿಸಿ ಉಡಾಫೆಯಿಂದ ಬೈದು  ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 26/2022 ಕಲಂ: 269 ಐಪಿಸಿ ಮತ್ತು ಕಲಂ: 3, 4 The Prevention of Voilence Against Doctors medical Professionals and Medical Institutions Bill 2018  ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 29-01-2022 09:34 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080