ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಹಿರಿಯಡ್ಕ: ಪಿರ್ಯಾದಿದಾರರಾದ ದೇವಪ್ಪ (41), ತಂದೆ: ಶಿವಬಸಪ್ಪ, ವಾಸ: ಕೌಸಲ್ಯ ಶೆಟ್ಟಿ , ಮುಚ್ಲುಕೋಡು ದೇವಸ್ಥಾನ ಬಳಿ , ಕುಕ್ಕಿಕಟ್ಟೆ ಇವರು ಸಾಯಿಟೆಕ್ ಸರ್ವಿಸಸ್ ಎಂಬ ಕಂಪೆನಿಯಲ್ಲಿ ಸೋಲಾರ್ ಆಳವಡಿಸುವ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು,  ದಿನಾಂಕ 27/12/2022 ರಂದು  ಮೆಸಿಲಿ ಇಂಡಿಯಾ ಪ್ಯಾಕೆಜಿಂಗ್ ಕಂಪೆನಯಲ್ಲಿ ಸೋಲಾರ್ ಪ್ಲೇಟ್‌ಗಳನ್ನು ಅಳವಡಿಸಲು  ಟೆಕ್ನಿಶಿಯನ್‌‌ರಾದ ಶರತ್ ಹಾಗೂ ರಕ್ಷಿತ್‌‌ರರಿಗೆ  ಪಿರ್ಯಾದಿದಾರರು ಮತ್ತು ರವಿಂದರ ತಲೆ ಮೇಲೆ ಸೋಲಾರ್  ಪ್ಲೇಟ್‌ಗಳನ್ನು ಹೊತ್ತುಕೊಂಡು ಹೋಗಿ ಕೊಡುತ್ತಿದ್ದು 9:15 ಗಂಟೆಗೆ  ರವೀಂದರ ಸೋಲಾರ್ ಪ್ಲೇಟ್‌ಗಳನ್ನು ತಲೆ ಮೇಲೆ ಹೊತ್ತುಕೊಂಡು ಸಿಮೆಂಟ್ ಸೀಟಿನ ಮಾಡಿನ ಮೇಲೆ ನಡೆದುಕೊಂಡು ಹೋಗುವಾಗ ಮಧ್ಯೆದಲ್ಲಿದ್ದ ಫೈಬರ್ ಸೀಟಿನ ಮೇಲೆ ಕಾಲು ಹಾಕಿದಾಗ ಅದು ತುಂಡಾಗಿ ಸುಮಾರು 30 ಅಡಿ ಎತ್ತರದಿಂದ ಕೆಳಗೆ ಬಿದ್ದು ತಲೆಗೆ ರಕ್ತಗಾಯವಾಗಿ ಮಾತನಾಡುತ್ತಿರಲಿಲ್ಲ. ಕೂಡಲೇ ಮಣಿಪಾಲ ಕೆಎಂಸಿ ಅಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಪರೀಕ್ಷಿಸಿ ವೈದ್ಯರು ರವೀಂದ್ರ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಅವಘಡಕ್ಕೆ ಕೆಲಸ ನಡೆಯವ ಸ್ಥಳದಲ್ಲಿ ಗುತ್ತಿಗೆದಾರಾದ ಯೋಗೀಶ್ ಆಚಾರ್ಯ ಹಾಗೂ ಶರತ್ ರವರು ಕೆಲಸ ಮಾಡಿಸುವಾಗ ಸರಿಯಾದ ಸುರಕ್ಷಾತಾ ಕ್ರಮಗಳನ್ನು  ಅನುಸರಿಸದೆ ನಿರ್ಲಕ್ಷತನದಿಂದ ಕೆಲಸ  ಮಾಡಿಸಿರುವುದರಿಂದ  ಆಗಿರುವುದಾಗಿ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 88/2022 ಕಲಂ:  304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ 25/12/2022 ರಂದು ಮಧ್ಯಾಹ್ನ 4:00 ಗಂಟೆಗೆ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಲೆಮಿನಾ ಕ್ರಾಸ್ ನಿಂದ ಮುಂದಕ್ಕೆ  ಹಾದುಹೋಗಿರುವ ಕಾರ್ಕಳ-ಪಡುಬಿದ್ರೆ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಕಾರ್ಕಳ ಕಡೆಯಿಂದ ನಿಟ್ಟೆ ಕಡೆಗೆ KA-9-J-2958 ನೇ ನಂಬ್ರದ ಬೈಕ್ ನ  ಸವಾರನು ತನ್ನ ಬೈಕ್ ನ್ನು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ರಸ್ತೆಯ ತೀರಾ ಎಡಭಾಗಕ್ಕೆ ಚಲಾಯಿಸಿ ರಸ್ತೆಯ ಅಂಚಿಗೆ ತಾಗಿಸಿದ ಪರಿಣಾಮ ಬೈಕ್ ಸವಾರನ ನಿಯಂತ್ರಣ ತಪ್ಪಿ ಬೈಕ್ ಪಲ್ಟಿಯಾಗಿದ್ದು,  ಸವಾರ ಸುರೇಂದ್ರ ನಾಯಕ್ ರಸ್ತೆಗೆ ಬಿದ್ದಿದ್ದು, ಸವಾರನ  ತಲೆಗೆ    ರಕ್ತಗಾಯವಾಗಿದ್ದು, ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಬೈಕ್   ಜಖಂಗೊಂಡಿರುವುದಾಗಿದೆ . ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 153/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಬೈಂದೂರು: ದಿನಾಂಕ  27/12/2022 ರಂದು  ಮದ್ಯಾಹ್ನ 1:35 ಗಂಟೆಗೆ ಪಿರ್ಯಾದಿದಾರರಾದ ಸಂತೋಷ ಕುಮಾರ್ ಪೂಜಾರಿ (28), ತಂದೆ: ಸುಧಾಕರ್ ಪೂಜಾರಿ,  ವಾಸ ನಂದನಮನೆ, ಉಳ್ಳುರು-11 ಗ್ರಾಮ, ಬೈಂದೂರು ತಾಲೂಕು ಇವರು ತನ್ನ KA-20-AA-9416  ನಂಬ್ರದ ಅಟೋರಿಕ್ಷಾದಲ್ಲಿ ತನ್ನ ದೊಡ್ಡಮ್ಮ ನಾಗು ಪೂಜಾರ್ತಿ, ತಾಯಿ ಪದ್ದು, ಮತ್ತು ಮಲ್ಲಿಕ ರವರನ್ನು ಕುಳ್ಳಿರಿಸಿ ಕೊಂಡು ಮ್ಯಾಕೋಡು ದುರ್ಗಪರಮೇಶ್ವರಿ ದೇವಸ್ಥಾನಕ್ಕೆ ಹೋಗಿ ದೇವಸ್ಥಾನದಲ್ಲಿ ಕುಟುಂಬದವರ ಹರಕೆ ಯಕ್ಷಗಾನದ ಊಟ ಮುಗಿಸಿಕೊಂಡು ವಾಪಾಸು ಮನೆಯಾದ ಉಳ್ಳೂರು ಕಡೆಗೆ ನಿಧಾನವಾಗಿ ಹೋಗುತ್ತಿರುವಾಗ ಉಪ್ರಳ್ಳಿ ಕಾಳಿಕಾಂಬ ದೇವಸ್ಥಾನದ ಹತ್ತಿರ  KA-19-D-0817 ನಂಬ್ರದ ರಿಕ್ಷಾ ಚಾಲಕ ಚಂದ್ರ ಮೊಗವೀರ  ಉಳ್ಳೂರು ಕಡೆಯಿಂದ ಅಟೋರಿಕ್ಷಾವನ್ನು ಅತೀ ವೇಗ ಹಾಗು ಅಜಾಗರೂಕತೆಯಿಂದ ಚಲಾಯಿಸಿ ಕೊಂಡು ರಸ್ತೆಯ ತೀರಾ ಬಲಕ್ಕೆ ಬಂದು ರಿಕ್ಷಾದ ಬಲ ಭಾಗಕ್ಕೆ  ಡಿಕ್ಕಿ ಹೊಡೆದ ಅಪಘಾತದ ಪರಿಣಾಮ ರಿಕ್ಷಾದ ಬಲಬದಿಯಲ್ಲಿ ಕುಳಿತುಕೊಂಡಿದ್ದ ನಾಗು ರವರಿಗೆ ಹಣೆಗೆ, ಎಡಕಿವಿಗೆ, ಬಲಕೈಗೆ ರಕ್ತಗಾಯವಾದವರನ್ನು 108 ವಾಹನದಲ್ಲಿ ಚಿಕಿತ್ಸೆಯ ಬಗ್ಗೆ ಕುಂದಾಪುರ  ಚಿನ್ಮಯಿ  ಆಸ್ಪತ್ರೆಗೆ ಕರೆದು ಕೊಂಡು ಹೋಗಿ ದಾಖಲಿಸಿರುವುದಾಗಿದೆ. ರಿಕ್ಷಾ ಚಾಲಕ ಪಿರ್ಯಾದಿದಾರರಿಗೆ  ಪದ್ದು ಮತ್ತು ಮಲ್ಲಿಕ ರವರಿಗೆ ಯಾವುದೇ ಗಾಯನೋವು ಆಗಿರುವುದಿಲ್ಲ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 250/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಟ್ಕಾ ಜುಗಾರಿ ಪ್ರಕರಣ

  • ಬೈಂದೂರು: ದಿನಾಂಕ 26/12/2022  ರಂದು ನಿರಂಜನ ಗೌಡ ಬಿ. ಎಸ್,  ಪೊಲೀಸ್ ಉಪನಿರೀಕ್ಷಕರು  ಬೈಂದೂರು ಪೊಲೀಸ್ ಠಾಣೆ ಇವರಿಗೆ ಬೈಂದೂರು ತಾಲೂಕು ಉಪ್ಪುಂದ  ಗ್ರಾಮದ ಅಂಬಾಗಿಲು ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ನಡೆಯುತ್ತಿದೆ ಎಂದು ಮಾಹಿತಿ ಬಂದ ಮೇರೆಗೆ  ದಾಳಿ ನಡೆಸಿ ಆರೋಪಿತ ಚಂದ್ರ ಪೂಜಾರಿ ಎಂಬಾತನನ್ನು ವಶಕ್ಕೆ ಪಡೆದು ಆತನ ಕೈಯಲ್ಲಿದ್ದ ಮಟ್ಕಾ ಜುಗಾರಿ ಆಟದಿಂದ ಅಕ್ರಮವಾಗಿ ಸಂಗ್ರಹಿಸಿದ ನಗದು ಹಣ ರೂಪಾಯಿ 3,320/-,ಮಟ್ಕಾ ನಂಬ್ರ ಬರೆದ ಚೀಟಿ-1 ಹಾಗೂ ಬಾಲ್ ಪೆನ್ನು-1 ನ್ನು  ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 251/2022  ಕಲಂ: 78 (I)  & (III) ಕರ್ನಾಟಕ ಪೊಲೀಸ್  ಕಾಯಿದೆ ಯಂತೆ ಪ್ರಕರಣ ದಾಖಲಾಗಿರುತ್ತದೆ .

ಅಸ್ವಾಭಾವಿಕ ಮರಣ ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿದಾರರಾದ ಮಂಜುನಾಥ ಪೂಜಾರಿ (20), ತಂದೆ: ಗೋಪಾಲ ಪೂಜಾರಿ, ವಾಸ: ಪಡುವಾಯಿನ  ಮನೆ, ಬೆಣ್ಣೆಗೆರೆ, ಗುಜ್ಜಾಡಿ ಗ್ರಾಮ ಕುಂದಾಪುರ ತಾಲೂಕು ಇವರ ತಂದೆ ಗೋಪಾಲ ಪೂಜಾರಿ (47) ಇವರು 4 ತಿಂಗಳಿನಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಕುಂದಾಪುರ ಮಾತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೇ ಇದ್ದು ಅದೇ ವಿಷಯಕ್ಕೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದವರು,  ದಿನಾಂಕ 27/12/2022 ರಂದು  14:00 ಗಂಟೆಗೆ ಮನೆಯಿಂದ  ಮೂತ್ರ ಮಾಡಲು ಹೋದವರು ನೈಲಾನ್‌ ಹಗ್ಗದಿಂದ ಮನೆಯ ಪಕ್ಕದಲ್ಲಿರುವ ಕಾಂಡ್ಲಾ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರನ್ನುಕುಂದಾಫುರ ಸರ್ಕಾರಿ ಆಸ್ಪತ್ರೆಗೆ  ಕರೆದುಕೊಂಡು ಹೋಗಿ ವೈದ್ಯರಲ್ಲಿ ತೋರಿಸಿದಲ್ಲಿ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 29/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .  

ಇತರ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಸಂದ್ಯಾಕುಮಾರಿ, ಭೂವಿಜ್ಞಾನಿ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಉಡುಪಿ ಇವರು   ದಿನಾಂಕ 26/12/2022 ರಂದು ಬೇಳೂರು ಗ್ರಾಮದ ದೇಲಟ್ಟು ಸ. ನಂ. 244/7 ಪ್ರದೇಶದಲ್ಲಿ ಅನಧೀಕೃತವಾಗಿ ಕೊಜೆ ಮಣ್ಣು ತೆಗೆಯುತ್ತಿದ್ದಾರೆ ಎಂಬುವುದಾಗಿ ಸಾರ್ವಜನಿಕರು ನೀಡಿದ ದೂರಿನಂತೆ ಸ್ಥಳಕ್ಕೆಇಲಾಖಾ ಜೀಪ್ KA-20-G-0388 ನೇದರಲ್ಲಿ ಹೋಗಿದ್ದು,  ಸ್ಥಳದಲ್ಲಿ ಅನಧೀಕೃತವಾಗಿ ಗಣಿಗಾರಿಕೆ  ನಡೆಯುತ್ತಿರುವುದು ಕಂಡುಬಂದಿರುತ್ತದೆ. ಪಿರ್ಯಾದಿದಾರರು ಸಂಬಂಧಪಟ್ಟವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕೊಡುವಂತೆ ತಿಳಿಸಿದಾಗ ಅಲ್ಲಿದ್ದ ಸ್ಥಳಿಯರು  ಬಿ. ದಿನಕರ ಶೆಟ್ಟಿ ಎಂಬುವವರಿಗೆ ತಮ್ಮ ಮೊಬೈಲ್ ನಿಂದ ಕರೆ ಮಾಡಿ ನೀಡಿದ್ದು ಕರೆಯಲ್ಲಿ ದಿನಕರ ಶೆಟ್ಟಿಯವರು ಪಿರ್ಯಾದಿದಾರರಿಗೆ ನೀವು ಯಾರು ಎಂದು ಕೇಳಿರುತ್ತಾರೆ. ಪಿರ್ಯಾದಿದಾರರು “ನಾನು ಗಣಿ ಇಲಾಖೆಯ ಅಧಿಕಾರಿ, ಇಲ್ಲಿ ಕೊಜೆ ಮಣ್ಣು ತೆಗೆಯುವ ಜಾಗ ನಿಮ್ಮದಾ, ಕೊಜೆ ಮಣ್ಣು ತೆಗೆಯಲಿಕ್ಕೆ ಪರವಾನಿಗೆ ಇದೇಯಾ?” ಎಂದು ಕೇಳಿದಾಗ ಅದಕ್ಕೆ ಉತ್ತರವಾಗಿ ದಿನೇಶ್ ಶೆಟ್ಟಿಯವರು  ದರ್ಪದಿಂದ ಮಾತನಾಡಿದ್ದಲ್ಲದೇ  ಬೆದರಿಸಿದ್ದು, ಪಿರ್ಯಾದಿದಾರರು ಮಹಿಳಾ ಅಧಿಕಾರಿ ಎಂಬುವುದನ್ನು ಕೂಡ ಲಕ್ಷಿಸದೇ ಅವಾಚ್ಯ ಹಾಗೂ ಅಶ್ಲೀಲ ಪದಗಳನ್ನು ಬಳಸಿ ಅವಮಾನಿಸಿ ಸಾರ್ವಜನಿಕ ಸ್ಥಳದಲ್ಲಿ ಮುಜುಗರ ಉಂಟಾಗುವಂತೆ ಮಾಡಿ ಸರ್ಕಾರಿ ಕೆಲಸ ಮಾಡದಂತೆ ಅಡ್ಡಿಪಡಿಸಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 234/2022 ಕಲಂ: 504, 509 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಗಂಗೊಳ್ಳಿ: ದಿನಾಂಕ 27/12/2022 ರಂದು ಗಂಗೊಳ್ಳಿ ಠಾಣಾ ಪೊಲೀಸ್‌ ಉಪನಿರೀಕ್ಷಕರಾದ ವಿನಯ ಕೊರ್ಲಹಳ್ಳಿ ರವರಿಗೆ ತ್ರಾಸಿ ಗ್ರಾಮದ ತ್ರಾಸಿ ಬೀಚ್‌ ಬಳಿ ಪಾರ್ಕ್ ನಲ್ಲಿ ಕೆಲವು ಹುಡುಗರು ಕುಳಿತು ಗಾಂಜಾ ಸೇವಿಸುತ್ತಿರುವುದಾಗಿ ದೊರೆತ ಮಾಹಿತಿಯಂತೆ ಪರಿಶೀಲಿಸಲಾಗಿ 2 ಜನರು ಕುಳಿತುಕೊಂಡಿರುವುದು  ಕಂಡು ಬಂದಿದ್ದು, ಅವರ ಹೆಸರು ವಿಳಾಸ ಕೇಳಲಾಗಿ 1] ಪೈಜಲ್ (19) , 2] ಸಮೀರ್‌ (21) ಎಂಬುವುದಾಗಿ ತಿಳಿಸಿದ್ದು ಇವರುಗಳು ಗಾಂಜಾದಂತಹ ಅಮಲು ಪದಾರ್ಥ ಸೇವನೆ ಮಾಡಿರುವ ಬಗ್ಗೆ  ಕುಂದಾಪುರ ಶ್ರೀ ಮಾತಾ ಆಸ್ಪತ್ರೆ ವೈಧ್ಯಾದಿಕಾರಿಯವರ ಮುಂದೆ ಹಾಜರುಪಡಿಸಿ ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಇವರುಗಳ ಪೈಕಿ  ಸಮೀರ್‌  ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುವುದಾಗಿ ವರದಿ ನೀಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 114 /2022 ಕಲಂ: 27(B) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಪಿರ್ಯಾದಿದಾರರಾದ  ಅನುರಾಧ (26), ತಂದೆ: ನಾಗೇಶ್ ಭಟ್,  ವಾಸ: ಮನೆ ನಂ: 4-21 ಆಶಿಶ್ ಹೌಸ್  ವಿಧ್ಯಾರತ್ನ ನಗರ ಮಣಿಪಾಲ ಇವರ ಮನೆಯ ಪಕ್ಕದ ಬಳಿ ಅಂಗಡಿ ಇಟ್ಟುಕೊಂಡಿರುವ ಅಪೇಕ್ಷಾ ಹಾಗು ಅವರ ಗಂಡ ನಿತೇಶ್ ನಾಯಕ್ ರವರು ವಿದ್ಯಾರ್ಥಿಗಳಿಗೆ ಹಾಗು ಸಾರ್ವಜನಿಕರಿಗೆ ಸಿಗರೇಟು ಮಾರಾಟ ಮಾಡಿ ಅವರುಗಳು ರಸ್ತೆಯಲ್ಲಿ ಹಾಗು ಪಿರ್ಯಾದಿದಾರರ ಮನೆಯ ಬಳಿ ಸಿಗರೇಟು ಸೇವನೆ ಮಾಡುತ್ತಿದ್ದುದರಿಂದ ತೊಂದರೆ ಆಗುತ್ತಿರುವ ಬಗ್ಗೆ ಅರೋಪಿಗಳಿಗೆ ತಿಳಿಸಿದ್ದು, ಇದೇ ಮನಸ್ತಾಪದಿಂದ ಅರೋಪಿಗಳಾದ ನಿತೇಶ್ ನಾಯಕ್ ಅತನ ಪತ್ನಿ ಅಪೇಕ್ಷಾ, ತಂದೆ ರಮೇಶ್ ನಾಯಕ್ ಹಾಗೂ ತಾಯಿ ಆಶಾ ಆರ್ ನಾಯಕ್ ರವರು ದಿನಾಂಕ 26/12/2022 ರಂದು ಸಂಜೆ 7:30 ಗಂಟೆಗೆ ಪಿರ್ಯಾದಿದಾರರು ಮತ್ತು ಅವರ ಮಾವ ಅನಂತ ಕೃಷ್ಣಶೆಣೈ ರವರು ಮನೆಯಲ್ಲಿರುವಾಗ ಮನೆಯ ಅಂಗಳಕ್ಕೆ ಅಕ್ರಮವಾಗಿ ಪ್ರವೇಶ ಮಾಡಿ, ಮನೆಯ ಬಾಗಿಲನ್ನು ಬಡಿದಿದ್ದು, ಪಿರ್ಯಾದಿದಾರರು ಬಾಗಿಲನ್ನು ತೆರೆದು ಹೊರಗೆ ಬಂದಾಗ ನಿತೇಶ್ ನಾಯಕ್ ನು ಪಿರ್ಯಾದಿದಾರರನ್ನು ಉದ್ದೇಶಿಸಿ ಕೆಟ್ಟದಾಗಿ ಬೈದು ,  ಪಿರ್ಯಾದಿದಾರರ ಮಾವನನ್ನು ಥಳಿಸಿ ರಮೇಶ್ ನಾಯಕ್, ಅವರ ಹೆಂಡತಿ ಹಾಗೂ ಅಪೇಕ್ಷಾ  ಜೀವ ಬೆದರಿಕೆ ಒಡ್ಡಿರುವುದಾಗಿ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 231/2022, ಕಲಂ: 447,504, 354(B), 323, 506 ಜೊತೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಪಿರ್ಯಾದಿದಾರರಾದ ಅಪೇಕ್ಷಾ ಜಿ ನಾಯಕ್ , ವಾಸ: ನಾಯಕ್ ಜನರಲ್ ಸ್ಟೊರ್ 4-21ಸಿ1 ವಿಧ್ಯಾರತ್ನ ನಗರ ಮಣಿಪಾಲ ಉಡುಪಿ ಜಿಲ್ಲೆ ಇವರು  ನಾಯಕ್ ಜನರಲ್ ಸ್ಟೊರ್ ಎಂಬ ಅಂಗಡಿಯನ್ನು ನಡೆಸಿಕೊಂಡಿದ್ದು, ಅಂಗಡಿಯ ಪಕ್ಕದ ಮನೆಯ ಅನಂತ ಕೃಷ್ಣ ಶಣೈ ರವರು ಪಿರ್ಯಾದಿದಾರರು ದಿನಾಂಕ 14/11/2022 ರಿಂದ 28/11/2022 ರಂದು 16:40 ಗಂಟೆಗೆ ಅಂಗಡಿಯಲ್ಲಿರು ಹೆಣ್ಣು  ಕಿರುಕುಳ ಕೋಡುತ್ತಿದ್ದು  ಪ್ರಶ್ನಿಸಿದಾಗ ಪಿರ್ಯಾದಿದಾರರಿಗೆ ಅವಾಚ್ಯ ಶಬ್ದದಿಂದ ಬೈದರುತ್ತಾರೆ. ಆತನ ಸೊಸೆ ಅನುರಾಧ ಶಣೈ ನಮ್ಮ ಬಗ್ಗೆ ಹಾಗು ಅಂಗಡಿಯ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿ ಹೆಸರು ಕೆಡಿಸುತ್ತಿದ್ದಾರೆ. ಹಾಗೆ ಅನುರಾಧ ಶಣೈ ಅಂಗಡಿಯನ್ನು ಮುಚ್ಚಿಸಲು ಏನು ಬೇಕಾದರು ಮಾಡುತ್ತೆನೆ ಎಂದು ಪಿರ್ಯಾದಿದಾರರಿಗೆ ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 230/2022, ಕಲಂ: 354(A), 354(D), 506, 509 ಜೊತೆ 34   ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 28-12-2022 10:32 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080