ಅಭಿಪ್ರಾಯ / ಸಲಹೆಗಳು

  • ಅಪಘಾತ ಪ್ರಕರಣ

    ಮಣಿಪಾಲ: ದಿನಾಂಕ: 25.12.2022 ರಂದು ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮದ ಮಣಿಪಾಲದ ಕೆನರಾ ಮಹಲ್ ಎದುರುಗಡೆ ರಸ್ತೆಯ ಎಡ ಬದಿಯಲ್ಲಿ  ನಿಲ್ಲಿಸಿದ್ದ KA 09 Z 6944  ನೇ ಕಾರಿಗೆ ಪರ್ಕಳ ಕಡೆಯಿಂದ ಉಡುಪಿ – ಮಣಿಪಾಲ ಕಡೆಗೆ 169(ಎ) ರಲ್ಲಿ ಕಪ್ಪು ಬಣ್ಣದ ಕಾರಿನ ಚಾಲಕ ತನ್ನ ಕಾರನ್ನು  ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕೆನರಾ ಮಾಲ್ ಎದುರುಗಡೆ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿ ಸಮಯ ಸುಮಾರು ಮುಂಜಾನೆ 1:00 ಗಂಟೆಗೆ ಪಿರ್ಯಾದಿ ಅಂಜನ್ ಕುಮಾರ್ ಇವರ ಕಾರಿಗೆ ಡಿಕ್ಕಿ ಹೊಡೆದು ಪರಾರಿಯಾದ ಪರಿಣಾಮ ಪಿರ್ಯಾದಿದಾರರ ಕಾರಿನ ಹಿಂಬದಿ ಸಂಪೂರ್ಣ ಜಖಂಗೊಂಡಿದ್ದು ಮುಂಭಾಗದ ಬಂಪರ್,ರೇಡಿಯೇಟರ್ ಮತ್ತು ಇತರ ಭಾಗಗಳು ಜಖಂಗೊಂಡಿರುತ್ತದೆ ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 233/2022 ಕಲಂ : 279 ಐಪಿಸಿ. 134 (ಬಿ) ಐ.ಎಂ.ವಿ ಕಾಯ್ದೆ. ನಂತೆ   ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಪಿರ್ಯಾದಿ ಪ್ರದೀಪ್ ಇವರ ತಂದೆ ರಾಘು ಪೂಜಾರಿಯವರು ದಿನಾಂಕ: 27.12.2022 ರಂದು ರಾತ್ರಿ 8.00 ಗಂಟೆಗೆ ಕೆಲಸ ಮುಗಿಸಿ ಬಸ್ಸಿನಿಂದ ಇಳಿದು ಗುಡ್ಡೆಯಂಗಡಿಯ ಬಳಿ ಮನೆಗೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಬರುತ್ತಿರುವಾಗ ಅಲೆವೂರು ಕಡೆಯಿಂದ ಉಡುಪಿ ಕಡೆಗೆ KA20EU4391 ನೇ ಸ್ಕೂಟರನ್ನು ಅದರ ಸವಾರನು ಹಿಂಬದಿಯಲ್ಲಿ  ಓರ್ವ ಮಹಿಳೆಯನ್ನು ಕುಳ್ಳಿರಿಸಿಕೊಂಡು ಅತೀವೇಗ ಹಾಗು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ತಂದೆಗೆ ಹಿಂದಿನಿಂದ ಡಿಕ್ಕಿ ಹೊಡೆದ, ಪರಿಣಾಮ ಪಿರ್ಯಾದಿದಾರರ ತಂದೆ ರಸ್ತೆಗೆ ಬಿದ್ದು, ತಲೆ ಹಾಗೂ ಸೊಂಟಕ್ಕೆ ತೀವ್ರ ಸ್ವರೂಪದ ರಕ್ತಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಉಡುಪಿ ಅಜ್ಜರಕಾಡು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ, ಅಲ್ಲಿನ ವೈದ್ಯರ ಸೂಚನೆಯಂತೆ, ಹೆಚ್ಚಿನ ಚಿಕಿತ್ಸೆಯ ಕುರಿತು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಬಂದು ಒಳರೋಗಿಯಾಗಿ ದಾಖಲಿಸಿರುವುದಾಗಿದೆ ಹಾಗೂ ಸ್ಕೂಟರು ಸವಾರ ಆದಿತ್ಯ ಪ್ರಭು ಹಾಗು ಸಹಸವಾರೆಗೂ ಸಾದಾ ಸ್ವರೂಪದ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 234/2022 ಕಲಂ : 279, 338 ಐಪಿಸಿಯಂತೆ   ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ದಿನಾಂಕ 27/12/2022 ಸಂಜೆ 7:10 ರಂದು ಪಿರ್ಯಾದಿ ಜೀವಂಧರ್ ಇವರು ಮನೆಯಲ್ಲಿರುವಾಗ ರಾ ಹೆ 66 ರಲ್ಲಿ ಯಾವುದೋ ಅಪಘಾತವಾದ ಶಬ್ದ ಬಂದಿದ್ದು ಸ್ಥಳಕ್ಕೆ ಹೋಗಿ ನೋಡಲಾಗಿ ಪಿರ್ಯಾದಿದಾರರ ತಮ್ಮ ಮಹೇಂದ್ರ ಕುಮಾರ್ ರವರು ಅಪಘಾತಕ್ಕೆ ಒಳಗಾಗಿ ರಸ್ತೆಗೆ ಬಿದ್ದಿದ್ದು ಪಿರ್ಯಾದಿದಾರರು ತನ್ನ ತಮ್ಮನನ್ನು ಮೇಲೆ ಎತ್ತಿ ನೋಡಲಾಗಿ ತಲೆ ಕಾಲು ಹಾಗೂ ಮೈ ಕೈಗೆ ಗಾಯವಾಗಿದ್ದು ಅವರನ್ನು ಕೂಡಲೆ ಉಡುಪಿ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ವೈದ್ಯರು ಪ್ರಥಮ ಚಿಕಿತ್ಸೆ ನೀಡಿದ್ದು ಬಳಿಕ ಹೆಚ್ಚಿನ ಚಿಕಿತ್ಸೆಗೆ ಕೆ ಎಂ ಸಿ ಆಸ್ಪತ್ರೆ ಮಣಿಪಾಲಕ್ಕೆ ಕರೆದುಕೊಂಡು ಹೋಗಿದ್ದು ಅಲ್ಲಿನ  ವೈದ್ಯರು ಮಹೇಂದ್ರ ಕುಮಾರ್  ರವರನ್ನು ಒಳ ರೋಗಿಯನ್ನಾಗಿ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡುತ್ತಿದ್ದು ಮಹೇಂದ್ರ ಕುಮಾರ್ ರವರು ಚಿಕಿತ್ಸೆಯಲ್ಲಿರುವಾಗ ರಾತ್ರಿ 8:30 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಅಪಘಾತಕ್ಕೆ KA 70 M 1179  ನೇದರ ಕಾರು ಚಾಲಕ ಪ್ರಜ್ವಲ್ ನ ಅತೀ ವೇಗ ಹಾಗೂ ಅಜಾಗರೂಕತೆಯ ಸವಾರಿಯೇ ಕಾರಣವಾಗಿರುತ್ತದೆ.  ಈ ಬಗ್ಗೆ ಕಾಪು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 145/2022 ಕಲಂ 279,  304(ಎ) ಐಪಿಸಿ ಯಂತೆ  ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿರ್ಯಾದಿ ಶೈಲೇಶ್ ಶೆಟ್ಟಿ ಇವರು ನವಯುಗ ಕಂಪನಿಯಲ್ಲಿ ಸೇಫ್ಟಿ ಆಫಿಸರ್ ಆಗಿ ಕೆಲಸ ಮಾಡಿಕೊಂಡಿದ್ದು, ಪಿರ್ಯಾದಿದಾರರು  ದಿನಾಂಕ: 27/12/2022 ರಂದು ರಾತ್ರಿ 11.00 ಗಂಟೆಗೆ ಮನೆಯಲ್ಲಿರುವಾಗ ಪಾಂಗಾಳ ಬ್ರೀಡ್ಜ ಬಳಿ ಅಪಘಾತವಾದ ಬಗ್ಗೆ ಮಾಹಿತಿ ಬಂದಂತೆ ಪಿರ್ಯಾದಿದಾರರು ಸ್ಥಳಕ್ಕೆ ಬಂದು ನೋಡಲಾಗಿ ಎ.ಪಿ. 39 ಟಿ.ಇ. 6875 ನೇ ನಂಬ್ರ ಲಾರಿಯ ಚಾಲಕ ಪರಮೇಶ ರವರು ತನ್ನ ಬಾಬ್ತು ಲಾರಿಯನ್ನು ರಾ ಹೆ 66 ರಲ್ಲಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಾಂಗಾಳ ಬ್ರೀಡ್ಜ್ ಬಳಿ ಅಳವಡಿಸಿದ ಮೇಟಲ್ ಕ್ರ್ಯಾಶ್ ಬ್ಯಾರಿಯರ್ಗೆ ಢಿಕ್ಕಿ ಹೊಡೆದು ಲಾರಿ ಅಲ್ಲೇ ಮಗುಚಿ ಬಿದ್ದಿರುತ್ತದೆ. ಸದ್ರಿ ಅಪಘಾತದಿಂದ ನವಯುಗ ಕಂಪನಿಯವರ ಮೇಟಲ್ ಕ್ರ್ಯಾಶ್ ಬ್ಯಾರಿಯರ್ಗೆ ಸಂಪೂರ್ಣ ಜಖಂ ಆಗಿದ್ದು, ಅದರಿಂದ ನವಯುಗ ಕಂಪನಿಯವರಿಗೆ ಸುಮಾರು 2,18,048 ರೂ. ಗಳು ನಷ್ಟ ಉಂಟಾಗಿರುತ್ತದೆ. ಈ ಬಗ್ಗೆ ಕಾಪು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 146/2022 ಕಲಂ 279, 427  ಐಪಿಸಿ ಯಂತೆ  ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 27/12/2022 ರಂದು ಪಿರ್ಯಾದಿ ಮುಕಪ್ಪ ಇವರ ಹೆಂಡತಿಯ ಅಣ್ಣ ಹುಚ್ಚಪ್ಪ ಹೆಚ್. ಕಂಬಾರ (36) ಎಂಬವರು KA20 HA 0131 ನೇ ಸ್ಕೂಟರಿನಲ್ಲಿ ಮಂಜುನಾಥ ರವರೊಂದಿಗೆ ಸಹಸವಾರನಾಗಿ ಕೂತುಕೊಂಡು ಬೀಡಿನಗುಡ್ಡೆ ಕಡೆಯಿಂದ ಮಿಷನ್ ಕಂಪಂಡ್ ಕಡೆಗೆ ಬರುತ್ತಿರುವಾಗ ಸಮಯ ಸುಮಾರು ಮದ್ಯಾಹ್ನ 12:15 ಗಂಟೆಗೆ 76 ಬಡಗುಬೆಟ್ಟು ಗ್ರಾಮದ ಸಾಯಿರಾಧ ಅಂಪೇರ್ ಅಪಾರ್ಟ್‌ಮೆಂಟ್ ಬಳಿ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಸ್ಕೂಟರ್ ಸವಾರ ಮಂಜುನಾಥ ರವರು ಸ್ಕೂಟರನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ಸವಾರಿಮಾಡಿಕೊಂಡು ರಸ್ತೆಯ ತೀರಾ ಎಡಬದಿಗೆ ಬಂದು ಆಯತಪ್ಪಿ ಸ್ಕೂಟರ್ ಸಮೇತ ಮಂಜುನಾಥ ಹಾಗೂ ಹುಚ್ಚಪ್ಪ ಹೆಚ್ ಕಂಬಾರ ಎಂಬವರು ರಸ್ತೆಗೆ ಬಿದ್ದ ಪರಿಣಾಮ ಸಹಸವಾರರಾದ ಹುಚ್ಚಪ್ಪ ಹೆಚ್ ಕಂಬಾರ ರವರಿಗೆ ತಲೆಗೆ ಗಂಭೀರ ಗಾಯವಾಗಿದ್ದು, ಮಾತನಾಡದೇ ಇದ್ದವರನ್ನು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ವೆನ್ಲಾಕ್ ಆಸ್ಪತ್ರೆ ಮಂಗಳೂರಿಗೆ ಕಳುಹಿಸಿದ್ದು, ಅಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾತ್ತಿರುವುದಾಗಿದೆ. ಅಲ್ಲದೆ ಸ್ಕೂಟರ್ ಸವಾರ ಮಂಜುನಾಥ ರವರಿಗೆ ಬಲಭುಜಕ್ಕೆ, ಬಲಕೈಗೆ ಮತ್ತು ಬಲಕಾಲಿಗೆ ಗಾಯವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ   109/2022 ಕಲಂ: 279, 337, 338  ಪ್ರಕರಣ ದಾಖಲಾಗಿರುತ್ತದೆ.

ಗಾಂಜಾ ಪ್ರಕರಣ

  • ಮಣಿಪಾಲ: ದಿನಾಂಕ: 27.12.2022 ರಂದು 16.00 ಗಂಟೆಗೆ ದೇವರಾಜ್ ಟಿ.ವಿ, ಪೊಲೀಸ್ ನಿರೀಕ್ಷಕರು, ಮಣಿಪಾಲ ಪೊಲೀಸ್ ಠಾಣೆ. ಇವರಿಗೆ ಬಂದ ಖಚಿತ ವರ್ತಮಾನದಂತೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಣಿಪಾಲದ ಆರ್.ಎಸ್.ಬಿ ಬಳಿ ಸ್ಟೂಟಿಯಲ್ಲಿ ಮಾದಕವಸ್ತು ಹಾಗೂ ಗಾಂಜಾ ಮಾರುತ್ತಿರುವ ವ್ಯಕ್ತಿಗಳನ್ನು ದಾಳಿ ನಡೆಸಲು ಪೊಲೀಸ್ ಅಧೀಕ್ಷಕರವರಿಂದ ಅನುಮತಿ ಪಡೆದು ಸದರಿ ಸ್ಥಳಕ್ಕೆ ಪತ್ರಾಂಕಿತ ಅಧಿಕಾರಿ ಹಾಗೂ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ ಆಪಾದಿತ ಇಕ್ಬಾಲ್ ಹಾಗೂ ಕಾನೂನಿನ  ಸಂಘರ್ಷಕ್ಕೆ ಒಳಪಟ್ಟ ಬಾಲಕನ  ವಶದಲ್ಲಿದ್ದ 41 ಗ್ರಾಂ ಗಾಂಜಾ (ಪ್ಲಾಸ್ಟಿಕ್ ಕವರ್ ಸಮೇತ), 1.06 ಗ್ರಾಂ ಎಂ ಡಿ ಎಂ ಎ (ಪ್ಲಾಸ್ಟಿಕ್ ಕವರ್ ಸಮೇತ), ಡಿಜಿಟಲ್ ತೂಕದ ಯಂತ್ರ, 2 ಮೊಬೈಲ್ ಪೋನ್, ಹಾಗೂ KA-15-EB-0055 ನಂಬ್ರದ TVS Vego ಸ್ಕೂಟಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ಸ್ವಾಧೀನಪಡಿಸಿಕೊಂಡ ಸ್ವತ್ತಿನ ಮೌಲ್ಯ ರು. 38,810/- ಆಗಬಹುದು ಈ ಮಾದಕ ವಸ್ತುವನ್ನು ಆರೋಪಿ ಇಕ್ಬಾಲ್ ನು ರಪೀಕ್ ದೊಡ್ಡನಗುಡ್ಡೆ ಎಂಬವರಿಂದ ಪಡೆದುಕೊಂಡಿರುವುದಾಗಿದೆ . ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 232/2022 ಕಲಂ 8 (c) 20 (b) (ii) (A), 21(b), 22(b) ಎನ್.ಡಿ.ಪಿ.ಎಸ್ ಆಕ್ಟ್ ನಂತೆ   ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 28-12-2022 06:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080