ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಮಲ್ಪೆ: ಪಿರ್ಯಾದಿದಾರರಾದ ರಾಹುಕ್ ಪೈಂಕಾರ(28), ತಂದೆ: ಪ್ರಹ್ಲಾದ್ ಸಾಯಿ, ವಾಸ: ಫರ್ಸಾಬಹರ್ ಅಬಿರಾ ಜಶ್ಪುರ್, ಛತ್ತೀಸ್ಗಢ ಇವರ ಊರಿನವರಾದ ರಾಜ್ ಕುಮಾರ ಯಾದವ್(34) ಇವರು ಮೀನುಗಾರಿಕೆ ಬಗ್ಗೆ ಮಲ್ಪೆ ಗೆ ಬಂದಿದ್ದು ,  ಬೇರೆ ಬೇರೆ ಬೋಟ್ ನಲ್ಲಿ ಕೆಲಸ ಮಾಡಿಕೊಂಡಿದ್ದು , ದಿನಾಂಕ 12/12/2021 ರಂದು  ಮಧ್ಯಾಹ್ನ 14:00 ಗಂಟೆಗೆ  ಪಿರ್ಯಾದಿದಾರರು ಕೆಲಸ ಮಾಡುತ್ತಿದ್ದ  ಬೋಟ್ ನ ಹತ್ತಿರ ಬಂದು ತನಗೆ ಕೆಲಸ ಇರುವುದಿಲ್ಲವಾಗಿ ತಿಳಿಸಿ ಹೋಗಿರುತ್ತಾರೆ. ದಿನಾಂಕ 27/12/2021 ರಂದು ಬೆಳಿಗ್ಗೆ 9:15 ಗಂಟೆಗೆ ಕೊಡವೂರು ಗ್ರಾಮದ ಬಾಪುತೋಟ ಬಂದರಿನ ಟಿ-ಧಕ್ಕೆಯ ನೀರಿನಲ್ಲಿದ್ದ ಮೃತ ದೇಹವನ್ನು ಮೇಲೆ ತೆಗೆದು ಇರಿಸಿದ ಬಗ್ಗೆ ಪಿರ್ಯಾದಿದಾರರಿಗೆ ಮಾಹಿತಿ ಬಂದ ಮೇರೆಗೆ ಪಿರ್ಯಾದಿದಾರರು ಹೋಗಿ ನೋಡಿದಾಗ ರಾಜ್ ಕುಮಾರ್ ಯಾದವ ರವರ ಮೃತದೇಹವಾಗಿರುತ್ತದೆ.  ರಾಜ್ ಕುಮಾರ ಯಾದವ್  ದಿನಾಂಕ 12/12/2021 ರಂದು  ಮಧ್ಯಾಹ್ನ 14:00 ಗಂಟೆಯಿಂದ ದಿನಾಂಕ 27/12/2021 ರ ಬೆಳಿಗ್ಗೆ 9:15 ಗಂಟೆಯ ಮಧ್ಯಾವಧಿಯಲ್ಲಿ  ಯಾವುದೋ ಬೋಟಿನಲ್ಲಿ ಮಲಗಿದ್ದವರು ಆಕಸ್ಮಿಕವಾಗಿ ಕಾಲು ಜಾರಿ ಧಕ್ಕೆ ನೀರಿಗೆ ಬಿದ್ದು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 51/2021  ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಉಡುಪಿ: ದಿನಾಂಕ 15/12/2021 ರಂದು ಪಿರ್ಯಾದಿದಾರರಾದ ಗೋಕುಲಕೃಷ್ಣ ಎಸ್  ಪ್ರಾಯ (38), ತಂದೆ:ಸ್ವಾಮಿನಾಥನ್ ಎಸ್, ವಾಸ: F1, ರೊಯಲ್ ಕ್ಯಾಸ್ಟಲ್, 3/14, ಗಣೇಶ ನಗರ 4th ಅಡ್ಡರಸ್ತೆ ಕೀಲಕಟ್ಟಲಜಿ ಚೆನ್ನೈ ತಮಿಳುನಾಡು ಇವರು ಸಂಸಾರ ಸಮೇತ ಅವರ ಕಾರ್ ನಂಬ್ರ TN-22-DP-8303 ರಲ್ಲಿ ಉಡುಪಿಯ ಕೃಷ್ಣಮಠಕ್ಕೆ ಬಂದಿದ್ದು, ಆ ದಿನ ಸಂಜೆ 07:30 ಗಂಟೆಗೆ ಪಿರ್ಯಾದಿದಾರರು ತನ್ನ ಕಾರನ್ನು ಕೃಷ್ಣಮಠದ ಹಿಂಬದಿಯ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ ಹೋಗಿದ್ದು, ದೇವರ ದರ್ಶನ ಪಡೆದು ವಾಪಾಸು ಬಂದು ನೋಡುವಾಗ ಯಾರೋ ಕಳ್ಳರು ಪಿರ್ಯಾದಿದಾರರ ಕಾರಿನ ಡ್ರೈವರ್ ಸೈಡ್ ನ ಕಾರ್ ಗ್ಲಾಸನ್ನು ಒಡೆದು, ಅದರಲ್ಲಿದ್ದ ಬ್ಯಾಗನ್ನು ಕಳ್ಳತನ ಮಾಡಿದ್ದು, ಅದರಲ್ಲಿ NIKON DSLR D5200 ಕ್ಯಾಮೇರಾ 50MM Lens Mobile Chargers, Micro Adopter Car Reader, Memory Cards ಬಟ್ಟೆ ಹಾಗೂ ಇತರ ವಸ್ತುಗಳನ್ನು ಕಳ್ಳತನ ಮಾಡಿದ್ದು, ಕಳ್ಳತನವಾದ ಸ್ವತ್ತುಗಳ ಮೌಲ್ಯ 80,000/- ರೂಪಾಯಿ ಆಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 193/2021 ಕಲಂ: 427,379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 28-12-2021 09:30 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080