Feedback / Suggestions

ಅಸ್ವಾಭಾವಿಕ ಮರಣ ಪ್ರಕರಣ

  • ಮಲ್ಪೆ: ಪಿರ್ಯಾದಿದಾರರಾದ ರಾಹುಕ್ ಪೈಂಕಾರ(28), ಪ್ರಹ್ಲಾದ್ ಸಾಯಿ, ವಾಸ: ಫರ್ಸಾಬಹರ್ ಅಬಿರಾ ಜಶ್ಪುರ್, ಛತ್ತೀಸ್ಗಢ ಇವರ ಊರಿನವರಾದ ರಾಜ್ ಕುಮಾರ ಯಾದವ್(34) ಇವರು ಮೀನುಗಾರಿಕೆ ಬಗ್ಗೆ ಮಲ್ಪೆ ಗೆ ಬಂದಿದ್ದು ,  ಬೇರೆ ಬೇರೆ ಬೋಟ್ ನಲ್ಲಿ ಕೆಲಸ ಮಾಡಿಕೊಂಡಿದ್ದು , ದಿನಾಂಕ 12/12/2021 ರಂದು  ಮಧ್ಯಾಹ್ನ 14:00 ಗಂಟೆಗೆ  ಪಿರ್ಯಾದಿದಾರರು ಕೆಲಸ ಮಾಡುತ್ತಿದ್ದ  ಬೋಟ್ ನ ಹತ್ತಿರ ಬಂದು ತನಗೆ ಕೆಲಸ ಇರುವುದಿಲ್ಲವಾಗಿ ತಿಳಿಸಿ ಹೋಗಿರುತ್ತಾನೆ, ದಿನಾಂಕ 27/12/2021 ರಂದು ಬೆಳಿಗ್ಗೆ 9:15 ಗಂಟೆಗೆ ಕೊಡವೂರು ಗ್ರಾಮದ ಬಾಪುತೋಟ ಬಂದರಿನ ಟಿ-ಧಕ್ಕೆಯ ನೀರಿನಲ್ಲಿದ್ದ ಮೃತ ದೇಹವನ್ನು ಮೇಲೆ ತೆಗೆದು ಇರಿಸಿದ ಬಗ್ಗೆ ಪಿರ್ಯಾದಿದಾರರಿಗೆ ಮಾಹಿತಿ ಬಂದ ಮೇರೆಗೆ ಪಿರ್ಯಾದಿದಾರರು ಹೋಗಿ ನೋಡಿದಾಗ ರಾಜ್ ಕುಮಾರ್ ಯಾದವ ರವರ ಮೃತದೇಹವಾಗಿರುತ್ತದೆ  ರಾಜ್ ಕುಮಾರ ಯಾದವ್  ದಿನಾಂಕ 12/12/2021 ರಂದು  ಮಧ್ಯಾಹ್ನ 14:00 ಗಂಟೆಯಿಂದ ದಿನಾಂಕ: 27/12/2021 ರ ಬೆಳಿಗ್ಗೆ 9:15 ಗಂಟೆಯ ಮಧ್ಯಾವಧಿಯಲ್ಲಿ  ಯಾವುದೋ ಬೋಟಿನಲ್ಲಿ ಮಲಗಿದ್ದವರು ಆಕಸ್ಮಿಕವಾಗಿ ಕಾಲು ಜಾರಿ ಧಕ್ಕೆ ನೀರಿಗೆ ಬಿದ್ದು ಮೃತಪಟ್ಟಿರುವುದಾಗಿದೆ, ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 51/2021  ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಗೋಕುಲಕೃಷ್ಣ ಎಸ್  ಪ್ರಾಯ (38), ತಂದೆ:ಸ್ವಾಮಿನಾಥನ್ ಎಸ್, ವಾಸ: F1, ರೊಯಲ್ ಕ್ಯಾಸ್ಟಲ್, 3/14, ಗಣೇಶ ನಗರ 4th ಅಡ್ಡರಸ್ತೆ ಕೀಲಕಟ್ಟಲಜಿ ಚೆನ್ನೈ ತಮಿಳುನಾಡು ಇವರು ಸಂಸಾರ ಸಮೇತ ಅವರ ಕಾರ್ ನಂಬ್ರ TN-22-DP-8303 ರಲ್ಲಿ ಉಡುಪಿಯ ಕೃಷ್ಣಮಠಕ್ಕೆ ಬಂದಿದ್ದು, ಆ ದಿನ ಸಂಜೆ 07:30 ಗಂಟೆಗೆ ಪಿರ್ಯಾದಿದಾರರು ತನ್ನ ಕಾರನ್ನು ಕೃಷ್ಣಮಠದ ಹಿಂಬದಿಯ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ ಹೋಗಿದ್ದು, ದೇವರ ದರ್ಶನ ಪಡೆದು ವಾಪಾಸು ಬಂದು ನೋಡುವಾಗ ಯಾರೋ ಕಳ್ಳರು ಪಿರ್ಯಾದಿದಾರರ ಕಾರಿನ ಡ್ರೈವರ್ ಸೈಡ್ ನ ಕಾರ್ ಗ್ಲಾಸನ್ನು ಒಡೆದು, ಅದರಲ್ಲಿದ್ದ ಬ್ಯಾಗನ್ನು ಕಳ್ಳತನ ಮಾಡಿದ್ದು, ಅದರಲ್ಲಿ NIKON DSLR D5200 ಕ್ಯಾಮೇರಾ 50MM Lens Mobile Chargers, Micro Adopter Car Reader, Memory Cards ಬಟ್ಟೆ ಹಾಗೂ ಇತರ ವಸ್ತುಗಳನ್ನು ಕಳ್ಳತನ ಮಾಡಿದ್ದು, ಕಳ್ಳತನವಾದ ಸ್ವತ್ತುಗಳ ಮೌಲ್ಯ 80,000/- ರೂಪಾಯಿ ಆಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 193/2021 ಕಲಂ: 427,379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

Last Updated: 28-12-2021 09:30 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080