ಅಭಿಪ್ರಾಯ / ಸಲಹೆಗಳು

ಹಲ್ಲೆ ಪ್ರಕರಣ:

  • ಬೈಂದೂರು: ಫಿರ್ಯಾದಿ ಎನ್ ರವಿಚಂದ್ರ (46 ವರ್ಷ) ತಂದೆ:ಎನ್ ಎ. ನಾಗರಾಜ್ ವಾಸ: ಅಯ್ಯಪ್ಪ ಕಂಪೌಂಡ್ ನಂದನವನ ಕೆರ್ಗಾಲ ಪೋಸ್ಟ್ ಬೈಂದೂರು ತಾಲೂಕು. ಇವರು ದಿನಾಂಕ; 27/12/2021 ರಂದು ಸಂಜೆ ಸಮಯ ಸ್ನೇಹಿತ ವೆಂಕಟೇಶ ದೇವಾಡಿಗ ರವರೊಂದಿಗೆ ನಂದನವನ  ಗ್ರಾಮದ ಹಳೆ ಲಕ್ಷ್ಮೀ ಸಿನಿಮಾ ಮಂದಿರದ ಬಳಿ ಇರುವ ವೆಲ್ಡಿಂಗ್ ಗ್ಯಾರೇಜ್ ಗೆ ಹೋಗಿ ಕ್ಲಾಂಪ್ ನ್ನು ತೆಗೆದುಕೊಳ್ಳಲು ಹೋಗಿ ಕ್ಲಾಂಪ್ ನ್ನು ತೆಗೆದುಕೊಂಡು ವಾಪಾಸು ಮನೆಗೆ ಹೊರಡಲು ವೆಂಕಟೇಶ ದೇವಾಡಿಗ ರವರ ಸ್ಕೂಟಿ ಹಿಂದುಗಡೆ ಕುಳಿತುಕೊಳ್ಳುವ ಸಮಯ ಸುಮಾರು ಸಂಜೆ 6:55 ಗಂಟೆಗೆ ಆಪಾದಿತ ಸುರೇಶ್ ಯಾನೆ ಸುರೇಶ್ ಪೂಜಾರಿ ಕಾಡಿನತಾರು ಎಂಬಾತನು ತನ್ನ ಬಾಬ್ತು ಕೆಎ 19 ನೊಂದಣಿಯ ಪೋರ್ಡ ಕಂಪೆನಿಯ ಫಿಗೋ ಕಾರಿನಲ್ಲಿ ಬಂದು ಇಳಿದು ಪಿರ್ಯಾದುದಾರರ ಬಳಿ ಬಂದು ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಪಿರ್ಯಾದುದಾರರು ಮತ್ತು ಆಪಾದಿತನ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದ್ದು ಆಪಾದಿತ ತನ್ನ ಕಾರಿನಲ್ಲಿದ್ದ ತಲವಾರನ್ನು ತೆಗೆದುಕೊಂಡು ಪಿರ್ಯಾದುದಾರರ ಎಡಬದಿಯ ತಲೆಯ ಭಾಗಕ್ಕೆ ಮತ್ತು ಎಡ ಕೈಯ ಮೊಣಗಂಟಿನ ಕೆಳಭಾಗಕ್ಕೆ ಕಡಿದಿದ್ದು ಈ ಘಟನೆ ನೋಡಿದ ಜನಾರ್ಧನ ಮೊಗವೀರ ಮತ್ತು ಮನೋಹರ ಎಂಬವರು ಓಡಿ ಬಂದು ತಪ್ಪಿಸಿದ್ದು ಆಪಾದಿತ ಸ್ಥಳದಿಂದ ಓಡಿ ಹೋಗಿರುತ್ತಾನೆ.  ಗಾಯಗೊಂಡ ಫಿರ್ಯಾದುದಾರರನ್ನು ಅವರ ಹೆಂಡತಿ ಮತ್ತು ವೆಂಕಟೇಶರವರು  ಚಿಕಿತ್ಸೆ ಬಗ್ಗೆ ಖಾಸಗಿ ಅಂಬುಲೆನ್ಸ್ ನಲ್ಲಿ ಕುಂದಾಪುರ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 212/2021 ಕಲಂ: 504, 506, 307 IPC ಮತ್ತು ಕಲಂ 3(1) (r), (s), 3 (2)(v) 3 (2)(v-a)  SC St Act ರಂತೆ ಪ್ರಕರಣ ದಾಖಲಿಸಲಾಗಿದೆ.

ಹುಡುಗಿ ಕಾಣೆ ಪ್ರಕರಣ

  • ಕಾಪು: ಪಿರ್ಯಾದಿ ಚಮ್ಮನ್ ಸಾಹೇಬ್ ನಾದಫ್ (50) ತಂದೆ: ನಬಿ ಸಾಹೇಬ್ ನಾದಫ್ ವಾಸ: ಎತ್ತಿನಹಳ್ಳಿ ಗ್ರಾಮ ಹಾವೇರಿ ತಾಲೂಕು ಇವರು ಪ್ರಸ್ತುತ ಎರ್ಮಾಳ್ ಪೆಟ್ರೋಲ್ ಪಂಪ್‌ ಹತ್ತಿರ ಬಾಡಿಗೆ ಮನೆಯಲ್ಲಿ ಹೆಂಡತಿ ಮಕ್ಕಳೊಂದಿಗೆ ವಾಸಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರ  ಮಗಳು ಕುಮಾರಿ ಅಂಜುಮಾ (19) ಎಂಬವಳು ಮಣಿಪುರ ಗ್ರಾಮದ ಮಣಿಪುರದ ಹರ್ಮನ್ ಎಂಬವರ ಮನೆಯಲ್ಲಿ ಹೌಸ್ ನರ್ಸ್‌ ಕೆಲಸಮಾಡಿಕೊಂಡಿದ್ದು, ದಿನಾಂಕ 26/12/2021 ರಂದು 11:00 ಗಂಟೆಯ ಸಮಯ್ಕಕೆ ಆಕೆ ಕೆಲಸ ಮಾಡುತ್ತಿದ್ದ ಮಣಿಪುರದ ಹರ್ಮನ್‌‌ ಎಂಬವರ ಮನೆಯಿಂದ ಹೊರಗೆ ಹೋದವಳು ಪಿರ್ಯಾದಿದಾರರ ಮನೆಗೂ ಬಾರದೇ, ಹರ್ಮನ್‌ ರವರ ಮನೆಗೂ ಹೋಗದೇ ಕಾಣೆಯಾಗಿರುತ್ತಾಳೆ. ಈ ಬಗ್ಗೆ .ಪಿರ್ಯಾದಿದಾರರು ಊರಿನಲ್ಲಿ ಹಾಗೂ ಸಂಬಂಧಿಕರ ಮನೆಯಲ್ಲಿ ವಿಚಾರಿಸಿದ್ದಲ್ಲಿ ಎಲ್ಲಿಯೂ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 189/2021 ,ಕಲಂ ಹುಡುಗಿ ಕಾಣೆ ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಬೈಂದೂರು: ಪಿರ್ಯಾದಿ ನಾರಾಯಣ ಮೊಗೇರ ಪ್ರಾಯ:44 ವರ್ಷ ತಂದೆ: ಮಂಜು ಮೊಗೇರ ವಾಸ: ಕೈಸನ ಮನೆ ಅಳಿವೆಗದ್ದೆ ಶಿರೂರು ಗ್ರಾಮ ಬೈಂದೂರು ತಾಲೂಕು ಇವರ ತಂದೆ ಮಂಜು ಮೊಗೇರ ಪ್ರಾಯ: 65 ವರ್ಷ ರವರು ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು  ಮೀನುಗಾರಿಕೆ ಸಲುವಾಗಿ ಪಾತಿದೋಣಿ ಹಾಗೂ ಬಲೆಯನ್ನು ತೆಗೆದುಕೊಂಡು ಶಿರೂರು ಗ್ರಾಮದ ಅಳಿವೆಗದ್ದೆ ಸಮುದ್ರಕ್ಕೆ ಹೋದವರು  ದಿನಾಂಕ 28-12-2021  ರಂದು ಬೆಳಿಗ್ಗೆ 3:30 ಗಂಟೆಯಿಂದ 06:30 ಗಂಟೆಯ ಮಧ್ಯಾವದಿಯಲ್ಲಿ ಶಿರೂರು  ಅಳಿವೆಗದ್ದೆ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ಸಮಯ ಜೋರಾಗಿ ಗಾಳಿ  ಬೀಸಿದ ಕಾರಣ ಪಾತಿದೋಣಿಯಲ್ಲಿದ್ದ ಬಲೆಯು ಅವರ ಕಾಲಿಗೆ ಸಿಕ್ಕಿ  ಆಯತಪ್ಪಿ  ಸಮುದ್ರಕ್ಕೆ ಬಿದ್ದು  ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುತ್ತಾರೆ. ಮೃತರ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಯುಡಿಅರ್‌ ನಂಬ್ರ 53/2021 ಕಲಂ 174 ಸಿಅರ್‌ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 29-12-2021 09:44 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080