ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಹಿರಿಯಡ್ಕ: ಪಿರ್ಯಾದಿ ಕುಮಾರ್ ಆರ್ ಶೆಟ್ಟಿ ಇವರು ದಿನಾಂಕ: 28/11/2022 ರಂದು ನಾನು ಬೆಳಿಗ್ಗೆ ಬೇಗ ಗದ್ದೆಗೆ ಹೋಗಿ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಗ ಸುಮಾರು 8:30 ಗಂಟೆಗೆ ಪಿರ್ಯಾದುದಾರರ ಚಿಕ್ಕಮ್ಮ ಕಮಲ ಶೆಟ್ಟಿಯವರ ಮನೆಯ ಬಳಿ ಬೈಲು ಮನೆ ಡಾಮಾರು ರಸ್ತೆಯಲ್ಲಿ ವಾಹನಗಳು ಅಪಘಾತವಾದಂತೆ ದೊಡ್ಡದಾದ ಶಬ್ದವಾಗಿದ್ದು, ಪಿರ್ಯಾದುದಾರರು  ಶಬ್ದವನ್ನು ಕೇಳಿ ಕೂಡಲೇ ಅಲ್ಲಿಗೆ ಹೋಗಿ ನೋಡಲಾಗಿ ಆತ್ರಾಡಿ-ಕುಕ್ಕೆಹಳ್ಳಿ ರಸ್ತೆ ಕಡೆಯಿಂದ ಬೈಲು ಮನೆ ರಸ್ತೆಯಲ್ಲಿ ಒಂದು 407 ಟೆಂಪೂ ಕುಕ್ಕಿಕಟ್ಟೆ ಕಡೆಗೆ ಹೋಗುತ್ತಿದ್ದಾಗ ಕುಕ್ಕಿಕಟ್ಟೆ ಕಡೆಯಿಂದ ಬರುತ್ತಿದ್ದ ಪಿರ್ಯಾದುದಾರರ ಪರಿಚಯದ ವಾಸುದೇವ ಆಚಾರ್ಯರ ಮಗ ರಾಜೇಶ್ ಎಂಬವರ ಮೋಟರು ಸೈಕಲಿಗೆ ತೀರಾ ಬಲಭಾಗಕ್ಕೆ ಹೋಗಿ ಢಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರ ರಾಜೇಶ  ರಸ್ತೆಗೆ ಬಿದ್ದು ಆತನು ಸ್ಥಳದಲ್ಲಿ ಮೃತಪಟ್ಟಿರುತ್ತಾನೆ. ಆ ಸಮಯ ಪಿರ್ಯಾದುದಾರರ  ಪರಿಚಯದ ಜಗದೀಶ್ ಆಚಾರ್ ಹಾಗೂ ಇತರರು ಬಂದಿರುತ್ತಾರೆ. ಢಿಕ್ಕಿ ಹೊಡೆದ 407 ಟೆಂಪೋದ ಚಾಲಕ ಕೂಡ ಅಲ್ಲಿಗೆ ಬಂದಿದ್ದು, ಆತನ ಹೆಸರು ಅಶೋಕ್ ಕುಲಾಲ್ ಕುಕ್ಕೆಹಳ್ಳಿ ಎಂದು ತಿಳಿಸಿರುತ್ತಾನೆ. ಢಿಕ್ಕಿ ಹೊಡೆದ ಟೆಂಪೋದ ನಂಬ್ರ KA-20-D-5497 ಆಗಿರುತ್ತದೆ. ರಾಜೇಶನು ಸವಾರಿ ಮಾಡಿಕೊಂಡಿದ್ದ ಮೋಟಾರು ಸೈಕಲಿನ ನಂಬ್ರ KA-20-R-6309 ಆಗಿರುತ್ತದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 79/2022 ಕಲಂ : 279, 304(ಎ) ಐಪಿಸಿ ಯಂತೆ  ಪ್ರಕರಣ ದಾಖಲಾಗಿರುತ್ತದೆ.
  • ಶಿರ್ವ: ಪಿರ್ಯಾದಿ ದಯಾನಂದ ನಾಯ್ಕ ಇವರು ದಿನಾಂಕ:27/11/2022ರಂದು ತನ್ನ ಅಕ್ಕನ ಗೃಹಪ್ರವೇಶ ಕಾರ್ಯಕ್ರಮದ ನಿಮಿತ್ತ  ತನ್ನ ಬಾಬ್ತು ಮೋಟಾರು ಸೈಕಲ್  ನಂ ಕೆಎ 20 ಎಕ್ಸ್ 9044ನೇದರಲ್ಲಿ ತನ್ನ ಹೆಂಡತಿ ಹರ್ಷಿನಿಯನ್ನು ಸಹಸವಾರಳನ್ನಾಗಿ ಕುಳ್ಳಿರಿಸಿಕೊಂಡು  ಮನೆಯಿಂದ ಕನರಾಡಿ ಕಡೆಗೆ ಹೋಗುತ್ತಿರುವಾಗ  ಬೆಳ್ಳೆ ಗ್ರಾಮದ ಮೂಡುಬೆಳ್ಳೆಯ ಕಪ್ಪಂದ ಕರಿಯ ಬ್ರಿಡ್ಜ್ ಬಳಿ ಸಂಜೆ ಸುಮಾರು 07.00 ಗಂಟೆಗೆ ತಲುಪುವಾಗ ಓರ್ವ  ಸ್ಕೂಟರ್ ಸವಾರ ಮೂಡುಬೆಳ್ಳೆ ಕಡೆಯಿಂದ ಹಿರಿಯಡ್ಕ ಕಡೆಗೆ ತನ್ನ ಸ್ಕೂಟರ್ ನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು  ತೀರಾ ಬಲಬದಿಗೆ  ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಮೋಟಾರು ಸೈಕಲ್ ಗೆ ಢಿಕ್ಕಿಹೊಡೆದನು.ಪರಿಣಾಮ ಪಿರ್ಯಾದಿದಾರರು ಹಾಗೂ ಸಹಸವಾರಳಾದ ಹರ್ಷಿನಿರವರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು,ಮೋಟಾರು ಸೈಕಲ್ ಪಲ್ಟಿಯಾಗಿರುತ್ತದೆ. ಇದರಿಂದ ಪಿರ್ಯಾದಿದಾರರ ಬಲಕಾಲಿನ ಪಾದದ ಬಳಿ ತೀವ್ರ ಒಳಜಖಂ ಹಾಗೂ  ಬಲಕೈ ಬೆರಳಿಗೆ  ತರಚಿದ ಗಾಯವಾಗಿರುತ್ತದೆ. ಹರ್ಷಿನಿಯವರಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಪಿರ್ಯಾದಿದಾರರನ್ನು ಅವರ ಹೆಂಡತಿ ಹರ್ಷಿನಿ  ಹಾಗೂ ಸಾರ್ವಜನಿಕರು ಬಂದು ಉಪಚರಿಸಿದರು. ಅಫಘಾತಪಡಿಸಿದ ಸ್ಕೂಟರ್ ಸವಾರನನ್ನು ನೋಡಲಾಗಿ ಸ್ಥಳದಲ್ಲಿ ಇರುವುದಿಲ್ಲ.ಅಫಘಾತ ಪಡಿಸಿ ಓಡಿ ಹೋಗಿರುತ್ತಾನೆ. ನಂತರ ಹರ್ಷಿನಿಯು ಪಿರ್ಯಾದಿದಾರರನ್ನು ಖಾಸಗಿ ವಾಹನದಲ್ಲಿ ಉಡುಪಿಯ ಸಿಟಿ ಆಸ್ಪತ್ರೆಗೆ ದಾಖಲಿಸಿದ್ದು ಪರೀಕ್ಷಿಸಿದ ವೈದ್ಯಾಧಿಕಾರಿಯವರು ಒಳರೋಗಿಯನ್ನಾಗಿ ದಾಖಲು ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಶಿರ್ವ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 85/22 ಕಲಂ 279, 338 ಐಪಿಸಿ & 134(A)(B) IMV ACT ನಂತೆ  ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ದಿನಾಂಕ: 27.11.2022 ರಂದು ಸಂಜೆ ಪಿರ್ಯಾದಿ ಅರುಣ್‌ ಕುಮಾರ್‌ ಶೆಟ್ಟಿ ಇವರು  ಜಾನುವಾರುಕಟ್ಟೆಯ ಬಳಿ ಇರುವಾಗ ಸಂಜೆ ಸುಮಾರು 6 ಗಂಟೆಗೆ  ಪರಿಚಯದ ದಯಾರಾಮ ಶೆಟ್ಟಿ ಎಂಬವರು ತಮ್ಮ ಬಾಬ್ತು KA 20 EG 2235 ನೇ ಲೂನಾದಲ್ಲಿ ಹೆಗ್ಗುಂಜೆ ಕಡೆಯಿಂದ ಜಾನುವಾರುಕಟ್ಟೆ ಕಡೆಗೆ ಬರುತ್ತಿದ್ದು, ಆಗ ಹಿಂದಿನಿಂದ ಅಂದರೆ ಹೆಗ್ಗುಂಜೆ ಕಡೆಯಿಂದ ಜಾನುವಾರುಕಟ್ಟೆ ಕಡೆಗೆ ಬಂದ ಸಿಲ್ವರ್‌ ಬಣ್ಣದ KA 20 Z 2749 ನೇ ಓಮಿನಿ ಕಾರು ವೇಗವಾಗಿ ಬಂದು ಹಿಂದಿನಿಂದ ಢಿಕ್ಕಿ ಹೊಡೆಯಿತು. ಅಪಘಾತದಿಂದ ದಯಾರಾಮ ಶೆಟ್ಟಿ ರವರು ಲೂನಾ ಸಮೇತ ಕೆಳಗೆ ಬಿದ್ದರು. ಪರಿಣಾಮ ದಯರಾಮ ಶೆಟ್ಟಿ ರವರ ತಲೆಯ ಮುಂಭಾಗ, ಬಲ ಪಕ್ಕೆಲುಬಿನ ಬಳಿ ತೀವ್ರ ಗಾಯವಾಗಿರುತ್ತದೆ. ಕಾರು ಚಾಲಕನ ಹೆಸರು ರಾಘವೇಂದ್ರ ಶಿವಪುರ ವಾಸಿ ಎಂಬುದಾಗಿ ತಿಳಿಯಿತು. ಕೂಡಲೇ ಗಾಯಗೊಂಡ ದಯಾರಾಮ ಶೆಟ್ಟಿ ರವರನ್ನು 108 ಆಂಬುಲೆನ್ಸ್‌ ನಲ್ಲಿ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 209/2022 ಕಲಂ: 279,  338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಮಣಿಪಾಲ: ದಿನಾಂಕ: 27.11.2022 ರಂದು ಮಣಿಪಾಲ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ಶೀನ ಸಾಲಿಯಾನ್ ರವರು ಠಾಣಾ ಸಿಬ್ಬಂದಿಯವರೊಂದಿಗೆ ಸಂಜೆಯ ಸಮಯ ಸುಮಾರು 17:30 ಗಂಟೆಗೆ ಶಿವಳ್ಳಿ ಗ್ರಾಮದ ಬ್ರಿಡ್ಜ್ ಬಳಿ ಸಮವಸ್ತ್ರದಲ್ಲಿ ಸಂಜೆಯ ಗಸ್ತು ಕರ್ತವ್ಯದಲ್ಲಿರುವಾಗ ಸದ್ರಿ ಬ್ರಿಡ್ಜ್ ನ ಮೇಲ್ಗಡೆಯಲ್ಲಿ ಆಪಾದಿತ KA 20 V 7107 YAMAHA FZ 16 ಮೋಟಾರ್ ಸೈಕಲ್ ಸವಾರ ತನ್ನ ಬಾಬ್ತು ಮೋಟಾರು ಸೈಕಲನ್ನು ಮಣಿಪಾಲದ ಕಡೆಯಿಂದ ಹಾವಂಜೆ ಕಡೆ ವ್ಹೀಲಿಂಗ್ ಮಾಡುತ್ತಾ ಮೋಟಾರು ಸೈಕಲಿನ ಮುಂದಿನ ಚಕ್ರವನ್ನು ಮೇಲ್ಗಡೆಗೆ ಎತ್ತಿ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ದುಡುಕುತನ ಹಾಗು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಿದ್ದು, ಆತನಲ್ಲಿ ಮೋಟಾರು ಸೈಕಲನ್ನು ನಿಲ್ಲಿಸಲು ಸೂಚಿಸಿದಾಗ ನಿಲ್ಲಿಸದೇ ಪರಾರಿಯಾಗಿರುತ್ತಾನೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 205/2022  ಕಲಂ: 279, 336 ಐಪಿಸಿ ಮತ್ತು 134(ಬಿ) ಜೊತೆ  187 ಐಎಂವಿ ಕಾಯ್ದೆ ಯಂತೆ  ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ ‌

  • ಹಿರಿಯಡ್ಕ:  ತೃಪ್ತಿ (17) ಹೆಬ್ರಿಯ ಎಸ್ ಅರ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದು ದಿನಾಂಕ: 27/11/2022 ರಂದು ವಿಶೇಷ ತರಗತಿಯ ಬಗ್ಗೆ ಕಾಲೇಜಿಗೆ ಹೋಗಿರುತ್ತಾಳೆ. ತೃಪ್ತಿ ಉತ್ತಮವಾಗಿ ಓದುತ್ತಿದ್ದಳು ಇತ್ತಿಚಿಗೆ ನಡೆದ ಪರೀಕ್ಷೆಯಲ್ಲಿ  ಸ್ವಲ್ಪ ಕಡಿಮೆ ಅಂಕ ಬಂದಿದ್ದು ಈ ಬಗ್ಗೆ ನೊಂದು ದಿನಾಂಕ: 27/11/2022 ರಂದು ಸಂಜೆ 4:45 ಗಂಟೆಯಿಂದ 5:23 ಗಂಟೆಯ ಮಧ್ಯಾವಧಿಯಲ್ಲಿ ಮನೆಯ ಮಲಗುವ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಯು.ಡಿ.ಆರ್ 43/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

 

ಇತ್ತೀಚಿನ ನವೀಕರಣ​ : 29-11-2022 10:08 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080