ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 26/11/2021 ರಂದು ರಾತ್ರಿ ಸುಮಾರು 10:00 ಗಂಟೆಗೆ, ಕುಂದಾಪುರ  ತಾಲೂಕಿನ ವಡೇರಹೋಬಳಿ   ಗ್ರಾಮದ  ಬಸ್ರೂರು ಮೂರಕೈ ಹತ್ತಿರ ಅಜಿತ್ ಎಂಬುವರ ಮನೆಯ ಎದುರುಗಡೆ  SH 52   ರಸ್ತೆಯಲ್ಲಿ, ಆಪಾದಿತ ಆಕಾಂಕ್ಷ್ ‌ ಎಂಬವರು ‌ KA20-ES-3533 ಬುಲೇಟ್ ಬೈಕನ್ನು ಬಸ್ರೂರು  ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದು, ಬಸ್ರೂರು ಮೂರಕೈ ಹತ್ತಿರ SH 52   ರಸ್ತೆಯ ಬದಿಯಲ್ಲಿ  ನಿಂತುಕೊಂಡಿದ್ದ   ಪ್ರಕಾಶ ಚಂದ್ರ ಶೆಟ್ಟಿ ಎಂಬುವರಿಗೆ ಡಿಕ್ಕಿ  ಹೊಡೆದ ಪರಿಣಾಮ ಪ್ರಕಾಶ ಚಂದ್ರ ಶೆಟ್ಟಿ ಹಾಗೂ ಬೈಕ್ ಸವಾರ ಆಕಾಂಕ್ಷ  ಮತ್ತು ಸಹ ಸವಾರ ಅಭಿಶೇಕ್ ಎಂಬುವರು ಬೈಕ ಸಮೇತ ರಸ್ತೆಗೆ  ಬಿದ್ದ ಪರಿಣಾಮ ಪ್ರಕಾಶ ಚಂದ್ರ ಶೆಟ್ಟಿ ಯವರಿಗೆ  ತಲೆಗೆ ,ಸೊಂಟ, ಎಡ ಕಾಲಿಗೆ ತೀವ್ರ ರೀತಿಯ ಒಳಜಖಂ ಗಾಯ ಹಾಗೂ  ಮೈ ಕೈಗೆ ತರಚಿದ ಗಾಯವಾಗಿ ಕುಂದಾಪುರ ಚಿನ್ಮಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ  ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ  ಕೆ ಎಂ ಸಿ ಮಣಿಪಾಲ ಆಸ್ಪತ್ರೆಗೆ ಹೋಗಿರುತ್ತಾರೆ ಮತ್ತು ಬೈಕ ಸವಾರ ಹಾಗೂ ಸಹ ಸವಾರರಿಗೆ  ತರಚಿದ ಗಾಯಗಳಾಗಿದ್ದು ಕುಂದಾಪುರ ಚಿನ್ಮಯ ಆಸ್ಪತ್ರೆಯಲ್ಲಿ  ಒಳ ರೋಗಿಯಾಗಿ  ದಾಖಲಾಗಿರುತ್ತಾರೆ. ಈ  ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 97/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ಪಿರ್ಯಾದಿ ಬಾಬಣ್ಣ ಆಚಾರಿ ಇವರು ಕಾಪು ತಾಲೂಕು ನಡ್ಸಾಲು ಗ್ರಾಮದ ಅಬ್ಬೇಡಿ ತುಳುವ ಸಂಗಮದ ಬಳಿ ಹೆಂಡತಿ ಮನೆಯಲ್ಲಿ ಒಂಟಿಯಾಗಿ ವಾಸವಿದ್ದು, ಅಲ್ಲಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸಿಕೊಂಡಿರುತ್ತಾರೆ. ದಿನಾಂಕ:27/11/2021 ರಂದು ಬೆಳಿಗ್ಗೆ 5:45 ಗಂಟೆಗೆ ಸುಮಾರಿಗೆ ಮನೆಯಿಂದ ನಡೆದುಕೊಂಡು ಹೊರಟು ಪಡುಬಿದ್ರಿ ಹೈವೇ ದಾಟಿ ಬೆಳಿಗ್ಗೆ 6:00 ಗಂಟೆ ಸುಮಾರಿಗೆ ಸುಮಂಗಲ ಅಂಗಡಿಯ ಎದುರು ಸರ್ವಿಸ್‌ ರಸ್ತೆಯ ಡಿವೈಡರ್‌ ಬಳಿ ಹೋಗುತ್ತಿರುವಾಗ ಪಡುಬಿದ್ರಿ-ಕಾರ್ಕಳ ಜಂಕ್ಷನ್‌ ರಸ್ತೆಯ ಕಡೆಯಿಂದ ಒಂದು ಕೆಂಪು ಬಣ್ಣದ ಸ್ಕೂಟಿಯನ್ನು ಅದರ ಸವಾರ ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ರಸ್ತೆಯ ತೀರಾ ಬಲಕ್ಕೆ ಬಂದು ಎದುರಿನಿಂದ ಡಿವೈಡರ್‌ ಬಳಿ ಇದ್ದ ಪಿರ್ಯಾದಿದಾರರಿಗೆ ಡಿಕ್ಕಿಪಡಿಸಿದ್ದು, ಪರಿಣಾಮ ಪಿರ್ಯಾದಿದಾರರು ಡಿವೈಡರ್‌ಗೆ ಬಿದ್ದು ಎಡಕಾಲಿಗೆ ಮೂಳೆಮುರಿತದ ರಕ್ತಗಾಯವಾಗಿರುತ್ತದೆ. ಅಫಘಾತಗೊಳಿಸಿದ ಕೆಂಪು ಬಣ್ಣದ ಸ್ಕೂಟಿಯನ್ನು ಅದರ  ಸವಾರನು ನಿಲ್ಲಿಸದೇ ಸರ್ವಿಸ್‌ ರಸ್ತೆಯಲ್ಲಿ ಕೆಳಪೇಟೆ ಕಡೆಗೆ ಸವಾರಿ ಮಾಡಿಕೊಂಡು ಹೋಗಿರುತ್ತಾನೆ. ಬಳಿಕ ಅಲ್ಲಿ ಸೇರಿದ ಜನರು ಸಿದ್ದಿವಿನಾಯಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬಳಿಕ ಆಂಬುಲೆನ್ಸ್‌ ನಲ್ಲಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದು ಒಳರೋಗಿಯನ್ನಾಗಿ ದಾಖಲಿಸಿರುತ್ತಾರೆ. ಈ  ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 97/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಟ್ಕಾ ಜುಗಾರಿ ಪ್ರಕರಣ

  • ಹೆಬ್ರಿ: ದಿನಾಂಕ:27/11/2021 ರಂದು ಹೆಬ್ರಿ ಗ್ರಾಮದ ಹೆಬ್ರಿ ತಾಣ ಎಂಬಲ್ಲಿ ರಸ್ತೆಯ ಬದಿಯಲ್ಲಿರುವ ಅಶ್ವಥ ಮರದ ಕಟ್ಟೆಯ ಬದಿಯಲ್ಲಿ ಓರ್ವ ವ್ಯಕ್ತಿಯು ಮಟ್ಕಾ ಜುಗಾರಿ ಎಂಬ ಆಟ ಆಡುತ್ತಿದ್ದಾರೆ ಎಂಬುದಾಗಿ ಬಂದ ಖಚಿತ ಮಾಹಿತಿಯಂತೆ ಮಹೇಶ.ಟಿ.ಎಮ್ –ಪಿಎಸ್ಐ ಹೆಬ್ರಿ ಪೊಲೀಸ್ ಠಾಣೆ ಇವರು ಸಿಬ್ಬಂದಿಗಳೊಂದಿಗೆ ಮೇಲಿನ ಸ್ಥಳಕ್ಕೆ ಬಂದು ನೋಡಿದಾಗ ಆರೋಪಿತ ಪ್ರಮೋದ್ ( 26 ವರ್ಷ) ತಂದೆ: ಸಾಧೂ ಪೂಜಾರಿ ವಾಸ: ಅಮ್ಮುಂಜೆ ತೆಂಕಬೆಟ್ಟು ಅಂಚೆ ಉಪ್ಪೂರು ಗ್ರಾಮ ಉಡುಪಿ ತಾಲೂಕು ಈತನು ಸಾರ್ವಜನಿಕ ಸ್ಥಳದಲ್ಲಿ  ನಿಂತುಕೊಂಡು ಒಂದು ರೂಪಾಯಿಗೆ 70 ಎಂದು ಮಟ್ಕಾ ಜೂಜಾಟಕ್ಕೆ ಜನರನ್ನು ಕರೆದು ಚೀಟಿಯ ಮೇಲೆ ಪೆನ್ನಿನಿಂದ ಅಂಕಿಗಳನ್ನು ಬರೆಯುತ್ತಿರುವುದನ್ನು ಖಚಿತಪಡಿಸಿಕೊಂಡು ಸಿಬ್ಬಂದಿಗಳೊಂದಿಗೆ ಸದ್ರಿ ಸ್ಥಳಕ್ಕೆ ಸಮಯ ಸುಮಾರು ಮದ್ಯಾಹ್ನ 14:00 ಗಂಟೆಗೆ ದಾಳಿ ಮಾಡಿ ಆರೋಪಿತನನ್ನು ವಶಕ್ಕೆ ಪಡೆದು ಆತನ ಬಳಿ ಇದ್ದ 1240/- ರೂಪಾಯಿ ನಗದು, ಮಟ್ಕಾ ನಂಬ್ರ ಬರೆದ ಚೀಟಿ-1  ಹಾಗೂ ಬಾಲ್ ಪೆನ್ನು-1 ಇವುಗಳನ್ನು ಮಹಜರು ಮುಖೇನ ಸ್ವಾಧೀನ ಪಡಿಸಿಕೊಂಡಿದ್ದು ಈ  ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 68/2021 US 78(I) (III) KP ACT  ನಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ಬ್ರಹ್ಮಾವರ ತಾಲೂಕು ಚಾಂತಾರು ಗ್ರಾಮದ ಕುಂಜಾಲ್ ರೋಶನ್ ಬಾರ್‌ ಎದುರುಳಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಜಯ ನಾಯ್ಕ ಎಂಬವರು ಹಣವನ್ನು ಪಣವಾಗಿ ಪಡೆದು ಮಟ್ಕಾ ಜುಗಾರಿ ನಡೆಸುತ್ತಿರುವ ಬಗ್ಗೆ ಠಾಣಾ ಸಿಬ್ಬಂದಿ ಗುರುನಾಥ ಬಿ ಹಾದಿಮನಿ, ಪೊಲೀಸ್ ಉಪನಿರೀಕ್ಷಕರು, ಬ್ರಹ್ಮಾವರ ಪೊಲೀಸ್ ಠಾಣೆ ಇವರಿಗೆ ನೀಡಿದ್ದು, ಸದ್ರಿ  ಸ್ಥಳಕ್ಕೆ ರಾತ್ರಿ 8:20 ಗಂಟೆಗೆ ತೆರಳಿ ಅಲ್ಲೇ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿಯು 00 ರಿಂದ 99 ರ ಒಳಗೆ ಬರೆಯಿಸಿದ ಯಾವುದೇ ನಂಬರ್ ಬಂದರೆ 1 ರೂಪಾಯಿಗೆ 70 ರೂಪಾಯಿ ಕೊಡುವುದಾಗಿ ಸಾರ್ವಜನಿಕರಿಂದ ಹಣವನ್ನು ಪಣವಾಗಿ ಸಂಗ್ರಹಿಸಿ ಮಟ್ಕಾ ಚೀಟಿ ಬರೆದು ಕೊಡುತ್ತಿರುವುದನ್ನು ಖಚಿತ ಪಡಿಸಿಕೊಂಡು ರಾತ್ರಿ 8:25 ಗಂಟೆಗೆ ಸಿಬ್ಬಂದಿಯವರ ಜೊತೆ ದಾಳಿ ನಡೆಸಿದಾಗ ಸಾರ್ವಜನಿಕರು ಅಲ್ಲಿಂದ ಓಡಿ ಹೋಗಿದ್ದು,  ಆರೋಪಿ ಜಯ ನಾಯ್ಕ, ಪ್ರಾಯ: 40 ವರ್ಷ ತಂದೆ: ಲಚ್ಚು ನಾಯ್ಕ  ವಾಸ: ಕಂಬಳಿಬೆಟ್ಟು, ಹಾವಂಜೆ ಗ್ರಾಮ,  ಬ್ರಹ್ಮಾವರ ತಾಲೂಕು ಈತನನ್ನು  ಸಿಬ್ಬಂದಿಯವರ ಸಹಾಯದಿಂದ ಹಿಡಿದು ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಆತ ಮಟ್ಕಾ ಜುಗಾರಿ ಆಟದ ಬಗ್ಗೆ ಸಂಗ್ರಹಿಸಿದ ಹಣವನ್ನು ತಾನು  ಸ್ವಂತ ಲಾಭಕ್ಕಾಗಿ ಉಪಯೋಗಿಸುತ್ತಿದ್ದುದಾಗಿ ಒಪ್ಪಿಕೊಂಡಿರುತ್ತಾನೆ. ಸದ್ರಿ ಆರೋಪಿತನ ಅಂಗ ಜಪ್ತಿ ಮಾಡಲಾಗಿ ಆತನ ವಶದಲ್ಲಿ ಮಟ್ಕಾ ಜುಗಾರಿ ಆಟದ ಬಗ್ಗೆ ಸಂಗ್ರಹಿಸಿದ ನಗದು ಹಣ ರೂ 900/-,  ಮಟ್ಕಾ ನಂಬ್ರ ಬರೆದ ಚೀಟಿ-1, ಹಾಗೂ ಬಾಲ್ ಪೆನ್ನು -1 ದೊರೆತಿದ್ದು ಈ  ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 192/2021 US 78(I) (III) KP ACT  ನಂತೆ ಪ್ರಕರಣ ದಾಖಲಾಗಿರುತ್ತದೆ.

 ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿ ದಯಾನಂದ ಸೇರ್ವೆಗಾರ್ ಇವರ ಅಣ್ಣನಾದ ಧನಂಜಯ ಪ್ರಾಯ: 50 ವರ್ಷ ಎಂಬವರು ಹೆಂಡತಿ ಮಕ್ಕಳೊಂದಿಗೆ ಪಿರ್ಯಾದಿದಾರರ ಮನೆಯ ಸ್ವಲ್ಪ ದೂರದಲ್ಲಿ ಬೇರೆ ಮನೆಯಲ್ಲಿ ವಾಸವಾಗಿದ್ದು, ಅವರು ಬೇರೆ ಬೇರೆ ಕಡೆಗಳಲ್ಲಿ ಹೊಟೇಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದು, ಮಧ್ಯಪಾನ ಮಾಡುವ ಅಭ್ಯಾಸ ಹೊಂದಿರುತ್ತಾರೆ. ಧನಂಜಯ ಹೊಟೇಲ್‌ ಕೆಲಸಕ್ಕೆ ಹೋದವರು ಯಾವಾಗಲೋ ಮನೆಗೆ ಬರುತ್ತಿರುವುದಾಗಿದೆ. ಅವರು ಮನೆಯಿಂದ ಹೊಟೇಲ್‌ ಕೆಲಸಕ್ಕೆಂದು ಹೇಳಿ ಹೋದವರು ದಿನಾಂಕ 26/11/2021 ರಂದು ಮಧ್ಯಾಹ್ನ 12:30 ಗಂಟೆಯಿಂದ ದಿನಾಂಕ 27/11/2021 ರಂದು ಸಂಜೆ 5:00 ಗಂಟೆಯ ಮಧ್ಯಾವಧಿಯಲ್ಲಿ ಯಾವುದೋ ರೀತಿಯಲ್ಲಿ ತಿರುಗಾಡಿಕೊಂಡು, ಯಾವುದೋ ಕಾರಣಕ್ಕೊ, ಯಾವುದೋ ರೀತಿಯಲ್ಲಿಯೋ ವಾರಂಬಳ್ಳಿ ಗ್ರಾಮದ ಬ್ರಹ್ಮಾವರ ಬಸ್ಸ್ ನಿಲ್ದಾಣದ ಬಳಿ ಸರ್ವೀಸ್ ರಸ್ತೆಯ ಬದಿಯಲ್ಲಿ ಮಲಗಿದ ಸ್ಥಿತಿಯಲ್ಲಿಯೇ  ಮೃತ ಪಟ್ಟಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 70/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಕಾರ್ಕಳ ಕಸಬಾದ ಸಾಲ್ಮರದ ಸಮೃದ್ಧಿ ಬಿಲ್ಡಿಂಗ್ ಎಂಬ ವಾಸ್ತವ್ಯ ಇಲ್ಲದ ಕಟ್ಟಡದಲ್ಲಿ ಸುಮಾರು 50 ರಿಂದ 60 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯು ಮಲಗಿದ್ದ ಸ್ಥಿತಿಯಲ್ಲಿಯೇ ಮೃತಪಟ್ಟಿದ್ದು,  ಮೃತಪಟ್ಟು ಸುಮಾರು 15 ದಿನಗಳಾಗಿದ್ದು ಯಾವುದೋ ಅಲೆಮಾರಿ ಅಥವಾ ಬಿಕ್ಷುಕ ಅನಾರೋಗ್ಯದಿಂದ ಅಥವಾ ಆಹಾರ ಸೇವಿಸದೇ  ಮಲಗಿದಲ್ಲಿಯೇ ಮೃತಪಟ್ಟಿರುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 43/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

 

ಇತ್ತೀಚಿನ ನವೀಕರಣ​ : 28-11-2021 10:10 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080