ಅಭಿಪ್ರಾಯ / ಸಲಹೆಗಳು

 ಅಪಘಾತ ಪ್ರಕರಣ 

  • ಶಂಕರನಾರಾಯಣ: ದಿನಾಂಕ 27/11/2021 ರಂದು 13;15 ಗಂಟೆಗೆ ಸುಧಾಕರ್ ಕುಲಾಲ್ ಇವರು KA-20-EU-6126 ನೇ ನಂಬ್ರದ ಸ್ಕೂಟಿಯಲ್ಲಿ ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ ಜನ್ಸಾಲೆ ಕೆ.ಎಸ್‌. ನಾಯಕ್ ಎಂಬುವವರ ಮನೆಯ ಎದುರುಗಡೆ ಕುಂದಾಪುರ -ಸಿದ್ದಾಪುರ ರಾಜ್ಯ ರಸ್ತೆಯಲ್ಲಿ ಸಿದ್ದಾಪುದಿಂದ ಅಂಪಾರು ಕಡೆಗೆ ಚಲಾಯಿಸಿಕೊಂಡು ಸ್ಕೂಟಿ ಚಲಾಯಿಸಿಕೊಂಡು ಹೋಗುತ್ತಿರುವಾಗ ಆರೋಪಿ ಪ್ರದೀಪ್ ಖಾರ್ವಿ KA-20-MC-7147 ಕಾರನ್ನು ಕುಂದಾಪುರ ಕಡೆಯಿಂದ ಸಿದ್ದಾಪುರ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸ್ಕೂಟಿಗೆ ಡಿಕ್ಕಿ ಹೊಡೆದಿದ್ದು, ಇದರ ಪರಿಣಾಮ ಸ್ಕೂಟಿ ಚಲಾಯಿಸುತ್ತಿದ್ದ ಸುಧಾಕರ ಕುಲಾಲ್ ಇವರು ರಸ್ತೆಯ ಮೇಲೆ ಬಿದ್ದಿದ್ದು ಇದರಿಂದ ಅವರ ತಲೆ ಕೈ ಕಾಲಿಗೆ ರಕ್ತ ಗಾಯವಾಗಿರುತ್ತದೆ, ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಮ್ .ಸಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 106/2021 ಕಲಂ: 279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ : ದಿನಾಂಕ 24/11/2021 ರಂದು ಸಂಜೆ 04: 30 ಗಂಟೆಗೆ ಕೃಷ್ಣ ಪ್ರಸಾದ ಎಂಬುವವರು ಉಡುಪಿ ತಾಲುಕಿನ 76 ಬಡಗುಬೆಟ್ಟು ಗ್ರಾಮದ ಹರಿಶ್ಚಂದ್ರ ಮಾರ್ಗದಲ್ಲಿರುವ ಮಾರಿತಿ ಲೇನ್ ಜಂಕ್ಷನ್ನ ಬಳಿ ರಸ್ತೆಯ ಬದಿಯಲ್ಲಿ ಕೃಷ್ಣ ಪ್ರಸಾದರವರು ನಿಂತಿರುವಾಗ ಅದೇ ಸಮಯದಲ್ಲಿ ಬೀಡನಗುಡ್ಡೆ ಜಂಕ್ಷನ್ ಕಡೆಯಿಂದ ವೆಕಟರಮಣ ದೇವಸ್ಥಾನದ ರಸ್ತೆಯ ಕಡೆಗೆ ಓರ್ವ ಸ್ಕೂಟರ ಸವಾರ ತನ್ನ ಸ್ಕೂಟರನ್ನು ದುಡುಕುತನ ಮತ್ತು ನಿರ್ಲಕ್ಯತನದಿಂದ ಸವಾರಿ ಮಾಡಿ ತೀರಾ ಎಡ ಬದಿಗೆ ಬಂದು ಕೃಷ್ಣ ಪ್ರಸಾದ ರವರಿಗೆ ಡಿಕ್ಕಿ ಹೊಡೆದ ಪರೀಣಾಮ ಕೃಷ್ಣ ಪ್ರಸಾದರವರು ರಸ್ತೆಗೆ ಬಿದ್ದು ತಲೆಗೆ ಗಂಬೀರ ಗಾಯವಾಗಿ ರಕ್ತ ಬರುತಿದ್ದು ಮಾತನಾಡದೇ ಇದ್ದವರನ್ನು ಚಿಕಿತ್ಸೆಯ ಬಗ್ಗೆ ಉಡುಪಿಯ ಟಿ ಎಂ ಪೈ ಅಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣೀಪಾಲ ಕೆ ಎಂ ಸಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲು ಮಾಡಿರುವುದಾಗಿದೆ. ಅಪಘಾತ ಪಡಿಸಿದ ನಂತರ ಸ್ಕೂಟರ ಸವಾರ ತನ್ನ ಸ್ಕೂಟರನ್ನು ಸ್ಥಳದಲ್ಲಿ ನಿಲ್ಲಿಸದೇ ಪರಾರಿಯಾಗಿರುತ್ತಾನೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 77/2021 ಕಲಂ : 279 338, ಐಪಿಸಿ & 134 ( ಎ) & (ಬಿ ) ಜೊತೆಗೆ 187 ಐ ಎಂ ವಿ ಕಾಯಿದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಟ್ಕಾ ಜುಗಾರಿ ಪ್ರಕರಣ

  • ಬ್ರಹ್ಮಾವರ: ಬ್ರಹ್ಮಾವರ ತಾಲೂಕು ಕಚ್ಚೂರು ಗ್ರಾಮದ ಬಾರ್ಕೂರು ರಿಕ್ಷಾ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಮಾಧವ (49), ತಂದೆ: ಕೃಷ್ಣಯ್ಯ ಭಂಢಾರಿ , ವಾಸ: ಉದ್ದಾಲಗುಡ್ಡೆ ,ಹನೆಹಳ್ಳಿ ಗ್ರಾಮ, ಬ್ರಹ್ಮಾವರ ತಾಲೂಕು ಎಂಬಾತ ಹಣವನ್ನು ಪಣವಾಗಿ ಪಡೆದು ಮಟ್ಕಾ ಜುಗಾರಿ ನಡೆಸುತ್ತಿರುವ ಬಗ್ಗೆ ಸುನೀತಾ ಕೆ.ಆರ್‌‌, ಪೊಲೀಸ್ ಉಪನಿರೀಕ್ಷಕರು(ತನಿಖೆ) ,ಬ್ರಹ್ಮಾವರ ಪೊಲೀಸ್ ಠಾಣೆ ಇವರು ದಾಳಿ ನಡೆಸಿದಾಗ ಸಾರ್ವಜನಿಕರು ಅಲ್ಲಿಂದ ಓಡಿ ಹೋಗಿದ್ದು, ಆರೋಪಿಯನ್ನು ಸಿಬ್ಬಂದಿಯವರ ಸಹಾಯದಿಂದ ಹಿಡಿದು ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಆತ ಮಟ್ಕಾ ಜುಗಾರಿ ಆಟದ ಬಗ್ಗೆ ಸಂಗ್ರಹಿಸಿದ ಹಣವನ್ನು ತಾನು ಸ್ವಂತ ಲಾಭಕ್ಕಾಗಿ ಉಪಯೋಗಿಸುತ್ತಿದ್ದುದಾಗಿ ಒಪ್ಪಿಕೊಂಡಿರುತ್ತಾನೆ. ಆರೋಪಿತನ ಅಂಗ ಜಪ್ತಿ ಮಾಡಲಾಗಿ ಆತನ ವಶದಲ್ಲಿ ಮಟ್ಕಾ ಜುಗಾರಿ ಆಟದ ಬಗ್ಗೆ ಸಂಗ್ರಹಿಸಿದ ನಗದು ಹಣ ರೂಪಾಯಿ 700/-, ಮಟ್ಕಾ ನಂಬ್ರ ಬರೆದ ಚೀಟಿ-1, ಹಾಗೂ ಬಾಲ್ ಪೆನ್ನು -1 ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 194/2021 ಕಲಂ:  78 (i) & (iii) ಕೆ.ಪಿ ಆ್ಯಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಉಡುಪಿ: ದಿನಾಂಕ 28/11/2021 ರಂದು ಮಂಜುನಾಥ, ಪೊಲೀಸ್ ನಿರೀಕ್ಷಕರು,ಸೆನ್ ಅಪರಾಧ ಪೊಲೀಸ್ ಠಾಣೆ, ಉಡುಪಿ ಇವರಿಗೆ ಬಂದ ಮಾಹಿತಿ ಮೇರೆಗೆ ಉಡುಪಿ ತಾಲೂಕು ಕೊಡವೂರು ಗ್ರಾಮದ ಯು. ಪಾದರಾಯಣ ಆಚಾರ್ಯರ ಸ್ಮಾರಕಾರ್ಥ ತಂಗುದಾಣ, ಮೂಡುಬೆಟ್ಟು ಬಸ್ ನಿಲ್ದಾಣದ ಬಳಿಯ ಸಾರ್ವಜನಿಕ ಸ್ಥಳದಲ್ಲಿ 1 ನೇ ಆರೋಪಿ ಗೌತಮ @ ಬುದ್ದ ನನ್ನು ಬೆಳಿಗ್ಗೆ 10:30 ಗಂಟೆಗೆ ದಸ್ತಗಿರಿಗೊಳಿಸಿ, ಆತನಿಂದ ಯಾವುದೇ ಪರವಾನಿಗೆ ಇಲ್ಲದೇ, ಕಾನೂನು ಬಾಹಿರವಾಗಿ ಮಾರಾಟ ಮಾಡಲು ಹೊಂದಿದ್ದ 1 ಕಿಲೋ, 204 ಗ್ರಾಂ ( ಮೌಲ್ಯ ರೂಪಾಯಿ. 35,000/-) ತೂಕದ ಗಾಂಜಾವನ್ನು ಮತ್ತು ಗಿರಾಕಿ ಕುದುರಿಸಲು ಬಳಸುವ ಮೊಬೈಲ್ ಹ್ಯಾಂಡ್ ಸೆಟ್-1 ( ಮೌಲ್ಯ ರೂಪಾಯಿ. 2,000/-) ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. 1 ನೇ ಆರೋಪಿಯು 2 ನೇ ಆರೋಪಿಪ್ರಣಮ್ ಎಂಬಾತನಿಂದ ಗಾಂಜಾವನ್ನು ಪಡೆದುಕೊಂಡು ಅದನ್ನು ಆತನ ಸೂಚನೆಯ ಮೇರೆಗೆ ಮಾರಾಟ ಮಾಡಲು ಮೇಲ್ಕಾಣಿಸಿರುವ ಸ್ಥಳದಲ್ಲಿ ತನ್ನ ವಶದಲ್ಲಿ ಇಟ್ಟುಕೊಂಡು, ಗಿರಾಕಿ ಹಾಗೂ 2 ನೇ ಆರೋಪಿಗೆ ಕಾಯುತ್ತಿರುವುದಾಗಿದೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 59/2021ಕಲಂ: 8(c), 20 (b) (ii), (B) ಎನ್.ಡಿ.ಪಿ.ಎಸ್. ಕಾಯ್ದೆ 1985 ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ಪಿರ್ಯಾದಿದಾರರಾದ ಶ್ರೀಮತಿ ಇಂದಿರಾ ಟಿ. ಶೆಟ್ಟಿಗಾರ್‌‌ (64), ತಂದೆ: ಶ್ರೀ ತ್ಯಾಂಪಣ್ಣ ಶೆಟ್ಟಿಗಾರ್‌‌, ವಾಸ: ಶ್ರೀ ಮೂಕಾಂಬಿಕಾ ಮೂಡುಬೆಟ್ಟು,ಚಾಂತಾರು ಪೋಸ್ಟ್‌ ವಯಾ ಬ್ರಹ್ಮಾವರ, ಉಡುಪಿ ತಾಲೂಕು ಮತ್ತು ಜಿಲ್ಲೆ ಇವರ ಬಳಿ ಅವರ ತಂಗಿ ಆರೋಪಿತೆಯಾದ ಸುಗುಣ ಸದಾಶಿವ ಶೆಟ್ಟಿಗಾರ್‌‌‌‌‌‌‌ರವರು ಅವರ ಮಕ್ಕಳ ವಿಧ್ಯಾಭ್ಯಾಸಕ್ಕಾಗಿ ಹಣ ಸಹಾಯ ಮಾಡುವಂತೆ ಮೇ 2016 ನೇ ಸಾಲಿನಲ್ಲಿ ಕೋರಿಕೊಂಡಿದ್ದು, ಅದರಂತೆ ಪಿರ್ಯಾದಿದಾರರು ಆರೋಪಿತೆಗೆ ರೂಪಾಯಿ 4,20,000/- ಕೈ ಸಾಲವನ್ನು ನೀಡುವುದಾಗಿ ಒಪ್ಪಿಕೊಂಡು, ಪಿರ್ಯಾದಿದಾರರ ಸಾಲಿಗ್ರಾಮ ಬ್ರ್ಯಾಂಚ್‌‌‌ನ ಸಿಂಡಿಕೇಟ್‌ ಬ್ಯಾಂಕ್‌ ಖಾತೆಯಿಂದ ಆರೋಪಿತೆಯ ಮಂಗಳೂರು ಸಿಂಡಿಕೇಟ್‌ ಬ್ಯಾಂಕ್‌‌ ಹಂಪನಕಟ್ಟೆ ಬ್ರ್ಯಾಂಚ್‌‌‌‌ ಅಕೌಂಟ್‌ ನಂಬ್ರಕ್ಕೆ ದಿನಾಂಕ 10/06/2016 ರಂದು ರೂಪಾಯಿ 1,00,000/-, ದಿನಾಂಕ 15/06/2016 ರಂದು ಪಿರ್ಯಾದಿದಾರರ ಸಿಂಡಿಕೇಟ್‌ ಬ್ಯಾಂಕ್‌‌‌ ಬ್ರಹ್ಮಾವರ ಬ್ರ್ಯಾಂಚ್‌‌ ಖಾತೆಯಿಂದ ರೂಪಾಯಿ.1,00,000/-, ದಿನಾಂಕ 17/06/2016 ರಂದು ಸಾಲಿಗ್ರಾಮ ಬ್ರ್ಯಾಂಚ್‌‌‌ನ ಸಿಂಡಿಕೇಟ್‌ ಬ್ಯಾಂಕ್‌ ಖಾತೆಯಿಂದ ರೂಪಾಯಿ 1,70,000/- ದಿನಾಂಕ 11/11/2016 ರಂದು ಸಾಲಿಗ್ರಾಮ ಬ್ರ್ಯಾಂಚ್‌‌‌ನ ಸಿಂಡಿಕೇಟ್‌ ಬ್ಯಾಂಕ್‌ ಖಾತೆಯಿಂದ ರೂಪಾಯಿ 30,000/- ಹಾಗೂ ದಿನಾಂಕ 18/11/2016 ರಂದು ಸಿಂಡಿಕೇಟ್‌ ಬ್ಯಾಂಕ್‌‌‌ ಬ್ರಹ್ಮಾವರ ಬ್ರ್ಯಾಂಚ್‌‌ ಖಾತೆಯಿಂದ ರೂಪಾಯಿ 20,000/- ರಂತೆ ಒಟ್ಟು 4,20,000/- ರೂಪಾಯಿ ಜಮಾ ಮಾಡಿರುತ್ತಾರೆ. ಆರೋಪಿತೆಯು ಅರ್ಜಿದಾರರಿಂದ ತೆಗೆದು ಕೊಂಡ ಹಣವನ್ನು ತನ್ನ ಮಗಳಿಗೆ ಉದ್ಯೋಗ ದೊರೆತ ನಂತರ ನೀಡುವುದಾಗಿ ಲಿಖಿತ ಅಗ್ರಿಮೆಂಟ್‌ನ್ನು ದಿನಾಂಕ 16/04/2019 ರಂದು ಮಾಡಿಕೊಟ್ಟಿದ್ದು, ನಂತರದ ದಿನಗಳಲ್ಲಿ ಆರೋಪಿತೆಯ ಮಗಳಿಗೆ ಉದ್ಯೋಗ ದೊರೆತಿದ್ದರೂ ಸಹ ಪಿರ್ಯಾದಿಯಿಂದ ಪಡೆದ ಸಾಲದ ಹಣವನ್ನುಆರೋಪಿಯು ವಾಪಾಸು ನೀಡದೇ ಇದ್ದು, ಹಣ ವಾಪಾಸು ನೀಡುವಂತೆ ಪಿರ್ಯಾದಿದಾರರು ಆರೋಪಿತೆಗೆ ಕೇಳಿದಾಗ ಆರೋಪಿತೆಯು ಪಿರ್ಯಾದಿದಾರರಿಗೆ ಅವಾಚ್ಯ ಶಬ್ಧಗಳಿಂದ ಬೈದು, ಮೋಸ ಹಾಗೂ ವಂಚನೆಯನ್ನು ಎಸಗುವ ದುರುದ್ದೇಶದಿಂದ ಸಾಲವಾಗಿ ಪಡೆದ ಹಣವನ್ನು ಪಿರ್ಯಾದಿಗೆ ವಾಪಾಸು ನೀಡದೇ ಮೋಸ ಮಾಡಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 193/2021 ಕಲಂ: ;406,415,419,420,421,504 ಮತ್ತು 120(ಬಿ)ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ : ಪಿರ್ಯಾದಿದಾರರಾದ ವಸಂತ ದೇವಾಡಿಗ (43), ತಂದೆ: ರಾಮಚಂದ್ರ ದೇವಾಡಿಗ , ವಾಸ: ಶಾಖಾ ವ್ಯವಸ್ಥಾಪಕರು, ದಿ. ಉಡುಪಿ ತಾಲೂಕು ಪ್ರೊಟೆಸ್ಟಂಟ್ ಕ್ರಿಶ್ಚಿಯನ್ ಕ್ರೆಡಿಟ್ ಕೋ – ಆಪ್ ಸೊಸೈಟಿ ಲಿ. ಬೈಲೂರು, ಉಡುಪಿ ತಾಲೂಕು ಇವರು ಉಡುಪಿಯ ಪ್ರೋಟೆಸ್ಟೆಂಟ್ ಕ್ರಿಶ್ಚಿಯನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಇದರ ಮುಖ್ಯ ಶಾಖಾ ವ್ಯವಸ್ಥಾಪಕರಾಗಿರುತ್ತಾರೆ. ದಿನಾಂಕ: 05/07/2019 ರಂದು ಆರೋಪಿ ಪಾಂಡುರಂಗ ಶೆಟ್ಟಿ (44), ತಂದೆ: ನಾರಾಯಣ ಶೆಟ್ಟಿ, ವಾಸ: ಪ್ಲಾಟ್ ನಂ. 202, ಪಂಚವಟಿ ಆಪಾರ್ಟಮೆಂಟ್, ಕುಂಜಿಬೆಟ್ಟು ಅಂಚೆ, ಉಡುಪಿ ತಾ|| ಮತ್ತು ಜಿಲ್ಲೆ ಇವರು ತನ್ನ ಮಾರುತಿ ಸಿಯಾಜ್ ಕಾರು ನಂಬರ್ KA-20-MA-3390 ನೇದನ್ನು ಅಡಮಾನ ಇಟ್ಟು ರೂಪಾಯಿ .4,50,000/- ಸಾಲ ಪಡೆದುಕೊಂಡಿದ್ದು , ಆಪಾದಿತನು ಸಂಸ್ಥೆಗೆ ಸಾಲ ಮರುಪಾವತಿ ಮಾಡಿರುವುದಿಲ್ಲ. ಕಾರು ಬೆಂಕಿ ಅವಗಡದಿಂದ ಸುಟ್ಟು ಹೋಗಿದ್ದು, ಈ ಬಗ್ಗೆ ಪಿರ್ಯಾದಿದಾರರ ಸಂಸ್ಥೆಗೆ ಯಾವುದೇ ಮಾಹಿತಿ ನೀಡದೆ, ಆರೋಪಿಯು ಸಂಪೂರ್ಣ ಸಾಲದ ಹಣ ಪಿರ್ಯಾದಿದಾರರ ಸಂಸ್ಥೆಗೆ ಪಾವತಿಸಿದ್ದಾರೆಂದು ಕೋಟಾ ದಾಖಲೆಪತ್ರಗಳನ್ನು ಸೃಷ್ಠಿಸಿ , ಪಿರ್ಯಾದಿದಾರರ ಸಂಸ್ಥೆಯ ಲೆಟರ್ ಹೆಡ್ ಹಾಗೂ ಸೀಲು ನಕಲು ಮಾಡಿ, ಶಾಖಾ ಮ್ಯಾನೇಜರ್ ಸಹಿ ಪೋರ್ಜರಿ ಮಾಡಿ , ನಕಲಿ ದಾಖಲಾತಿಗಳನ್ನು ಸತ್ಯವೆಂದು ದಿನಾಂಕ:17/11/2020 ರಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಉಡುಪಿಯವರಿಗೆ ಸಲ್ಲಿಸಿ ಕಾರಿನ ನೊಂದಣಿ ಪುಸ್ತಕದಲ್ಲಿದ್ದ ಪಿರ್ಯಾದಿದಾರರ ಸಂಸ್ಥೆಯ ಅಡಮಾನ ರದ್ದು ಮಾಡಿ ಆ ಮೂಲಕ ರಾಯಲ್ ಸುಂದರಂ ಜನರಲ್ ಇನ್ಸೂರನ್ಸ್ ಕಂಪನಿಯಿಂದ ಪಿರ್ಯಾದಿದಾರರ ಸಂಸ್ಥೆಗೆ ಬರಬೇಕಿದ್ದ ವಿಮಾ ಹಣವನ್ನು ಪಡೆದು ಪಿರ್ಯಾದಿದಾರರ ಸಂಸ್ಥೆಗೆ ಮೋಸಮಾಡಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 153/2021 ಕಲಂ: 403, 467, 468,471 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 28-11-2021 06:54 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080