ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕೋಟ: ಪಿರ್ಯಾದಿದಾರರಾದ ಮಹೇಶ ಪೂಜಾರಿ (32), ತಂದೆ: ದಿ ಸುಧಾಕರ ಪೂಜಾರಿ, ವಾಸ: ಪಂಜುರ್ಲಿ ನಿಲಯ ಮೇಲ್ಬೆಟ್ಟು  ಮೂಡಹಡು ಗ್ರಾಮ ಬ್ರಹ್ಮಾವರ ತಾಲೂಕು ಇವರು  ದಿನಾಂಕ 27/10/2022 ರಂದು ಬೆಳಿಗ್ಗೆ ಮನೆಯಿಂದ ಪೇಟೆಗೆಂದು ಹೊರಟು 10:00 ಗಂಟೆಗೆ ಸಾಲಿಗ್ರಾಮ ಏಕದಂತ ಹಾರ್ಡವೇರ್ ಬಳಿ ತನ್ನ KA-20-ED-2909 ನೆ ಬಜಾಜ್ ಡಿಸ್ಕವರಿ ಬೈಕ್ ನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಚಿಕ್ಮಮ್ಮನ ಬಳಿ ಮಾತನಾಡಿಕೊಂಡಿರುವಾಗ KA-20-EF-3325 ನೇದರ ಸವಾರ ಸುಕ್ಷಿತ್ ಸ್ಕೂಟಿಯನ್ನು ರಾಷ್ಟ್ರೀಯ ಹೆದ್ದಾರಿ 66 ರ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಏಕಾಏಕಿ  ಪಿರ್ಯಾದಿದಾರರ ಬಲಕಾಲಿಗೆ ಗುದ್ದಿದ ಪರಿಣಾಮ ಪಿರ್ಯಾದಿದಾರರು ಕೆಳಗೆಬಿದ್ದು ಬಲ ಕಾಲಿಗೆ ತೀವೃ ತರಹದ ಒಳ ಜಖಂ ಆಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 188/2022 ಕಲಂ: 279.338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಶಂಕರನಾರಾಯಣ: ದಿನಾಂಕ  27/10/2022 ರಂದು ಬೆಳಿಗ್ಗೆ 11:45 ಗಂಟೆಗೆ  ಪಿರ್ಯಾದಿದಾರರಾದ ಚಂದ್ರಕುಲಾಲ್  ( 32), ತಂದೆ:, ಶೀನ ಕುಲಾಲ್, ವಾಸ: ಗಡಿಬಚ್ಚಲು ಸಿದ್ದಾಪುರ ಗ್ರಾಮ ಕುಂದಾಪುರ ತಾಲೂಕು ಇವರು  ಹೆಬ್ರಿ ತಾಲೂಕಿನ ಬೆಳ್ವೆ ಗ್ರಾಮದ  ಗೋಳಿಯಂಗಡಿ  ಪೇಟೆಯಿಂಧ  ಸ್ವಲ್ಪ  ಮುಂದುಗಡೆ  ಹೆಬ್ರಿ-ಆಗುಂಬೆ ರಾಜ್ಯ ರಸ್ತೆಯಲ್ಲಿ KA-20-EP-6424 ನೇ ನಂಬ್ರದ ಮೋಟಾರ್  ಸೈಕಲ್‌ನಲ್ಲಿ ಹೆಬ್ರಿ ಕಡೆಯಿಂದ ಹಾಲಾಡಿ ಕಡೆಗೆ ಬರುತ್ತಿರುವಾಗ  ಆರೋಪಿಯು KA-20-Z- 6659 ಕಾರನ್ನು ಹಾಲಾಡಿ  ಕಡೆಗೆ  ಅತೀ ವೇಗ  ಹಾಗೂ  ಅಜಾಗರೂಕತೆಯಿಂದ  ಚಲಾಯಿಸಿ ಕೊಂಡು  ಹೋಗಿ  ಯಾವುದೇ  ಮುನ್ಸೂಚನೇ ನೀಡದೇ  ಒಮ್ಮೆಲೇ  ಬಲಬದಿಗೆ  ತಿರುಗಿಸಿದ ಪರಿಣಾಮ  ಕಾರು  ಮೋಟಾರ್ ಸೈಕಲ್‌‌ಗೆ ಡಿಕ್ಕಿ  ಹೊಡೆದ  ಪರಿಣಾಮ ಪಿರ್ಯಾದಿದಾರರು ಹಾಗೂ ಹಿಂಬದಿ ಸವಾರ ಅರುಣ್  ಕುಲಾಲ್  ಮೋಟಾರ್  ಸೈಕಲ್  ಸಮೇತ  ರಸ್ತೆಯ   ಮೇಲೆ  ಬಿದ್ದ  ಪರಿಣಾಮ  ಪಿರ್ಯಾದಿದಾರರ  ಬಲಕಾಲಿನ ಮೊಣಗಂಟು   ಹಾಗೂ ಸೊಂಟಕ್ಕೆ  ಮೂಳೆ ಮುರಿತದ   ಗಾಯವಾಗಿದ್ದು, ಹಿಂಬದಿ  ಸವಾರ  ಅರುಣ್ ಕುಲಾಲ್  ಇವರಿಗೆ  ತರಚಿದ  ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 113/2022  ಕಲಂ: 279,   337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಗಂಡಸು ಕಾಣೆ ಪ್ರಕರಣ

 • ಪಡುಬಿದ್ರಿ: ಪಿರ್ಯಾದಿದಾರರಾದಶಬ್ನಮ್ ತಂಜಿಲ್ (29), ಗಂಡ: ತಂಜಿಲ್ ಮೂಸಾ, ವಾಸ: #7-65/ಸಿ, ಅಲ್ ಅಮೀನ್ ಹೌಸ್, ಹೊನ್ನಯ್ಯ ಸದನ, ಬೇಂಗ್ರೆ, ಪಡುಬಿದ್ರಿ, ನಡ್ಸಾಲು ಗ್ರಾಮ, ಕಾಪು ತಾಲೂಕು ಇವರ ಗಂಡ ತಂಜಿಲ್ ಮೂಸಾ (43) ಎಂಬುವವರು ಸುರತ್ಕಲ್‌‌ನಲ್ಲಿ ಬುರ್ಖಾ ಶಾಪ್ ನಡೆಸಿಕೊಂಡಿದ್ದು, 2-3 ದಿನಗಳಿಗೊಮ್ಮೆ ಮನೆಗೆ ಬಂದು ಹೋಗುವುದಾಗಿದೆ. ತಂಜಿಲ್ ಮೂಸಾ ರವರು ದಿನಾಂಕ 26/10/2022 ರಂದು ಮಧ್ಯಾಹ್ನ 13:15 ಗಂಟೆಗೆ ಮನೆಯಿಂದ ಹೋದವರು ಈವರೆಗೆ ವಾಪಾಸ್ಸು ಮನೆಗೆ ಬಾರದೇ, ಸುರತ್ಕಲ್‌‌ನ ಅಂಗಡಿಗೂ ಹೋಗದೇ, ಕಲ್ಲಾಫುವಿನ ಮನೆಗೂ ಹೋಗದೇ ಕಾಣೆಯಾಗಿರುತ್ತಾರೆ.  ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 135/2022, ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಕುಂದಾಪುರ: ಪಿರ್ಯಾದಿದಾರರಾದ ಅರುಣ್ ಕುಮಾರ್ ಶೆಟ್ಟಿ (43), ತಂದೆ: ಸದಾಶಿವ ಶೆಟ್ಟಿ, ವಾಸ: ಅವನಿ ಹೌಸ್, ತಲ್ಲೂರು ಗ್ರಾಮ, ಕುಂದಾಪುರ ಕಸಬ ಗ್ರಾಮ, ಕುಂದಾಪುರ ಇವರ ಮಗಳು 14 ವರ್ಷ ಪ್ರಾಯದ ಅನುಶ್ರೀ ರವರು ಹಟ್ಟಿಯಂಗಡಿ ಸಿದ್ದಿವಿನಾಯಕ ವಸತಿ ಶಾಲೆಯಲ್ಲಿ 8ನೇ ತರಗತಿಯಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದು ದಿನಾಂಕ 02/10/2022 ರಿಂದ ಶಾಲೆಗೆ ರಜೆ ಇದ್ದ ಕಾರಣ ತನ್ನ ಮನೆಯಾದ  ತಲ್ಲೂರಿನಲ್ಲಿಯೇ ಇದ್ದು, ದಿನಾಂಕ 27/10/2022 ರಂದು ಬೆಳಿಗ್ಗೆ 11:00 ಗಂಟೆಗೆ ಅನುಶ್ರೀ  ತನ್ನ ಮನೆಯ 1ನೇ ಮಹಡಿಯಲ್ಲಿ ಓದುತ್ತಿದ್ದವಳು ತಕ್ಷಣ ಕುಸಿದು ಬಿದ್ದುದನ್ನು ಪಿರ್ಯಾದಿದಾರರ ಮಗ ಪ್ರಧ್ವಿರಾಜನು ನೋಡಿದ್ದು ನಂತರ ಪಿರ್ಯಾದಿದಾರರ ತಂದೆ ಮತ್ತು ಅಳಿಯ    ಅರ್ಜುನರವರರು ಚಿಕಿತ್ಸೆಯ ಬಗ್ಗೆ 12:00 ಗಂಟೆಗೆ ಚಿನ್ಮಯಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅನುಶ್ರೀಯನ್ನು ಪರೀಕ್ಷಿಸಿದ ವೈಧ್ಯರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.  ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 41/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
 • ಗಂಗೊಳ್ಳಿ: ಪಿರ್ಯಾದಿದಾರರಾದ ರಾಜು ತಾಂಡೇಲಾ (25), ತಂದೆ: ಬಿ ಓಮಯ್ಯ ಪಾಂಡು ತಾಂಡೇಲಾ ,  ವಾಸ: ಲಕ್ಷ್ಮೀ ನಿಲಯ, ಅವಡಿಬೈಲು, ರಾಮಮಂದಿರ ಹತ್ತಿರ, ಗುಜ್ಜಾಡಿ ಗ್ರಾಮ, ಕುಂದಾಪುರ ತಾಲೂಕು ಇವರ ಅಣ್ಣ ರಘುವೀರ್‌ ತಾಂಡೇಲ (28) ರವರು ದಿನಾಂಕ 26/10/2022 ರಂದು  22:30 ಗಂಟೆಗೆ  “ಸಾಗರದೀಪಾ” ಎಂಬ ಭೋಟಿನಲ್ಲಿ ಕುಂದಾಪುರ ತಾಲೂಕು ಗಂಗೊಳ್ಳಿ ಗ್ರಾಮದ ಮ್ಯಾಂಗನೀಸ್‌ ರಸ್ತೆಯ ಬಳಿ ಇರುವ ಮ್ಯಾಂಗನೀಸ್‌ ಜಟ್ಟಿಯಿಂದ ಮೀನುಗಾರಿಕೆ ಬಗ್ಗೆ ಹೊರಟಾಗ ಬೋಟ್‌ನಲ್ಲಿ ಕುಳಿತಿದ್ದರವರು ಆಕಸ್ಮಿಕವಾಗಿ ಆಯಾತಪ್ಪಿ ಬೋಟ್‌ನಿಂದ ಪಂಚಗಂಗಾವಳಿ ನದಿಯ ನೀರಿಗೆ  ಬಿದ್ದು ಕಾಣೆಯಾಗಿದ್ದವರು, ದಿನಾಂಕ 27/10/2022 ರಂದು 19:30 ಗಂಟೆಗೆ  ಮ್ಯಾಂಗನೀಸ್‌ ರಸ್ತೆಯ ಸಮೀಪ  ಪಂಚಗಂಗಾವಳಿ ನದಿಯಲ್ಲಿ ಮೃತದೇಹವು ಪತ್ತೆಯಾಗಿರುತ್ತದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 25/2022  ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

 • ಮಣಿಪಾಲ: ದಿನಾಂಕ 25/10/2022 ರಂದು ರಾತ್ರಿ 09:30 ಗಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಣಿಪಾಲ ವಿದ್ಯಾರತ್ನ ನಗರದಲ್ಲಿರುವ ಯೂತ್ ಕಾರ್ನರ್ ಅಂಗಡಿಯ ಎದುರು ಡಾ. ವಿ.ಎಸ್. ಆಚಾರ್ಯ ರಸ್ತೆಯಲ್ಲಿ ಕಾರು ನಂಬ್ರ KA-20-M-9232 ನೇದರ ಚಾಲಕ ವಿಶಾಲ್ ಕೊಹ್ಲಿ  ತನ್ನ  ಕಾರನ್ನು ನಿರ್ಲಕ್ಷ್ಯತನ, ಅಜಾಗರೂಕತೆ ಹಾಗೂ ಅಪಾಯಕಾರಿ  ರೀತಿಯಲ್ಲಿ ಚಲಾಯಿಸಿ, ಕಾರಿನ ಮೇಲ್ಗಡೆ ಪಟಾಕಿ ಇಟ್ಟು ಸಿಡಿಸಿ  ಮನುಷ್ಯನ ಪ್ರಾಣಕ್ಕೆ ಮತ್ತು ಇತರ ವಾಹನಗಳಿಗೆ  ಅಪಾಯವಾಗುವ ರೀತಿಯಲ್ಲಿ ಯೂತ್ ಕಾರ್ನರ್ ಅಂಗಡಿಯ ಎದುರಿನಿಂದ ಮುಂದೆ ಪೋಲಾರ್ ಬೇರ್ ಬಳಿ ಯು ಟರ್ನ್ ಮಾಡಿ ರತ್ನಸಾಗರ ಹೋಟೇಲ್ ತನಕ  ಚಲಾಯಿಸಿಕೊಂಡು ಬಂದಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 197/2022  ಕಲಂ: 279, 285 ಐಪಿಸಿ ಮತ್ತು 190(2) ಐಎಂವಿ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಅಮಾಸೆಬೈಲು: ದಿನಾಂಕ 27/10/2022 ರಂದು ಬೆಳಗ್ಗೆ 8:30 ಗಂಟೆಗೆ ಪಿರ್ಯಾದಿದಾರರಾದ ಭೋಜರಾಜ (44), ತಂದೆ:ಲಚ್ಚು ಕುಲಾಲ್, ವಾಸ:  ರಟ್ಟಾಡಿ ಗ್ರಾಮದ ಮಂಡಾಡಿ ಬಾಳೆ ಹಿತ್ಲು ಮನೆ, ಕುಂದಾಪುರ ತಾಲೂಕು ಇವರು ಪಿರ್ಯಾದಿದಾರರ ಜಾಗದ ಅಗಳನ್ನು ಕೃಷ್ಣ ಕುಲಾಕ್ ಜೆಸಿಬಿ ಮುಖಾಂತರ ತೆಗೆಯುವ ವೇಳೆ ಪಿರ್ಯಾದಿದಾರರು ಅದು ನಮ್ಮ ಜಾಗ ಏಕೆ ತೆಗೆಯುತ್ತೀಯ ಎಂದು ಕೇಳಿದಾಗ, ಕೃಷ್ಣ ಕುಲಾಲ್ ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಅಲ್ಲಿಯೇ ಇದ್ದ ಒಂದು ಕೋಲನ್ನು ತೆಗೆದು ಪಿರ್ಯಾದಿದಾರರ ತಲೆಗೆ ಹೊಡೆಯಲು ಬಂದಾಗ ಕೈಯನ್ನು ಅಡ್ಡ ಹಿಡಿದಾಗ ಎಡ ಕೈಗೆ ಕೋಲು ತಾಗಿ ನೋವುಂಟಾಗಿರುತ್ತದೆ.ಇದೇ ವೇಳೆ ಕೃಷ್ಣ ಕುಲಾಲ್ ಪಿರ್ಯಾದಿದಾರರನ್ನು ಉದ್ದೇಶಿಸಿ ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಅಮಾಸೆಬೈಲು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 27/2022 ಕಲಂ: 324, 447, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
 • ಕಾರ್ಕಳ: ಪಿರ್ಯಾದಿದಾದರರಾದ ಶ್ರೀಮತಿ ಶಾಂತಲ (47) , ಗಂಡ: ಚಂದ್ರಶೇಖರ, ವಾಸ: ಶ್ರೇಷ್ಠ ಅಪಾರ್ಟ್‌ಮೆಂಟ್‌ ಅನಂತಶಯನ ಸರ್ಕಲ್‌ ಬಳಿ ಕಸಬಾ ಗ್ರಾಮ ಕಾರ್ಕಳ ತಾಲೂಕು ಇವರು ಈ ಹಿಂದೆ ಕಾರ್ಕಳದ ಕಸಬಾ ಗ್ರಾಮದ ಅನಂತಶಯನ ಬಳಿ ಇರುವ ಕಾಮತ್‌ ಐಯ್ಯಂಗಾರ ಬೇಕರಿ ನಡೆಸಲು 8 ಲಕ್ಷ ರೂಪಾಯಿಯನ್ನು ಹೂಡಿಕೆ ಮಾಡಿದ್ದು ವಿನಯ ಎಂಬಾತನು ಬೇಕರಿಯನ್ನು ನಡೆಸಿಕೊಂಡು ಹೋಗುತ್ತಿದ್ದು, 1 ವರ್ಷದ ಹಿಂದೆ ಬೇಕರಿಯಲ್ಲಿ ನಷ್ಠ ಉಂಟಾಗಿ ವಿನಯನು ಬೇಕರಿಯನ್ನು ನಿಲ್ಲಿಸಿದ್ದು, ವಿನಯನು ಪಿರ್ಯಾದಿದಾರರೊಂದಿಗೆ ಉಳಿದ 7 ಲಕ್ಷ ರೂಪಾಯಿಯನ್ನು ದರ್ಶನ ಎಂಬಾತನು ಕೊಡುವುದಾಗಿ ಆತನು ಬೇಕರಿ ವ್ಯವಹಾರವನ್ನು ನಡೆಸುವುದಾಗಿ ಕರಾರು ಮಾಡಿಕೊಂಡಿದ್ದು ಇದಕ್ಕೆ ದರ್ಶನನು ಒಪ್ಪಿರುತ್ತಾನೆ. ದರ್ಶನನು ದಿನಾಂಕ 27/10/2022 ರಂದು ಹಣವನ್ನು ಕೊಡುವುದಾಗಿ ತಿಳಿಸಿದ್ದು ಅದರಂತೆ ಪಿರ್ಯಾದಿದಾರರು ದಿನಾಂಕ 27/10/2022 ರಂದು ಮದ್ಯಾಹ್ನ 12:30 ಗಂಟೆಗೆ ಹಣವನ್ನು ಕೇಳಲು ಕಾಮತ್‌ ಐಯ್ಯಂಗಾರ ಬೇಕರಿ ಬಳಿ ಹೋದಾಗ ದರ್ಶನನು ಹಣವನ್ನು ಕೊಡುವುದಿಲ್ಲ ಎಂದು ಅವಾಚ್ಯ ಶಬ್ದದಿಂದ ಬೈದು ಕೈಯಿಂದ ಹೊಡೆದು ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 134/2022 ಕಲಂ:  323, 354, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 28-10-2022 09:57 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080