ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಎನ್ ಕೃಷ್ಣ ಶೆಟ್ಟಿ (85), ತಂದೆ: ದಿ. ಮುದ್ದಣ್ಣ ಶೆಟ್ಟಿ, ವಾಸ: ನಿಸರ್ಗ, ಮಹಾಬಲ ಬೆಟ್ಟು, ಹಿರ್ಗಾನ ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರು ನಿವೃತ್ತ ಅಧ್ಯಾಪಕರಾಗಿದ್ದು ಅಪಾದಿತೆ ಸರಿತಾ, ಗಂಡ: ಎಮ್ ಸದಾನಂದ ಶೆಟ್ಟಿ, ವಾಸ: ಪಲ್ಕೆ, ಈದು ಗ್ರಾಮ ಮತ್ತು ಅಂಚೆ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರು ಪಿರ್ಯಾದಿದಾರರ ಸೊಸೆಯಾಗಿರುತ್ತಾರೆ. ಅಪಾದಿತೆ  ಪ್ರಸ್ತುತ ಪಿರ್ಯಾದಿದಾರರ ಮನೆಯವರೊಂದಿಗೆ ಮನಸ್ತಾಪದಿಂದ ಇದ್ದು ಮೂಡಬಿದ್ರೆ ನ್ಯಾಯಾಲಯದಲ್ಲಿ ಎಮ್ಸಿ ನಂಬ್ರ 143/2017 ರಂತೆ ಜೀವನಾಂಶ ಅರ್ಜಿ ದಾಖಲಿಸಿರುತ್ತಾರೆ. ಜೀವನಾಂಶ ಅರ್ಜಿಯನ್ನು ಹಿಂದಕ್ಕೆ ಪಡೆಯುವುದಾಗಿ ತಿಳಿಸುತ್ತಾ ಆಗಾಗ ಮನೆಗೆ ಭೇಟಿ ನೀಡುತ್ತಿದ್ದರು. ಪಿರ್ಯಾದಿದಾರರು ಕಾರ್ಕಳ ವಿಜಯಾ ಬ್ಯಾಂಕ್ನಲ್ಲಿ ಖಾತೆಯನ್ನು ಹೊಂದಿದ್ದು ಉಳಿತಾಯ ಖಾತೆ ಹೊಂದಿದ್ದು  ಪ್ರಸ್ತುತ ಬ್ಯಾಂಕ್ ಆಫ್ ಬರೋಡದೊಂದಿಗೆ  ವಿಲೀನಗೊಂಡಿರುತ್ತದೆ. ಪಿರ್ಯಾದಿದಾರರ ವಶದಲ್ಲಿ ವಿಜಯಾ ಬ್ಯಾಂಕ್ ನ ಚೆಕ್ ಪುಸ್ತಕ ಹಾಗೂ ಬ್ಯಾಂಕ್ ವಿಲೀನಗೊಂಡ ನಂತರದ ಬ್ಯಾಂಕ್ ಆಫ್ ಬರೋಡದ ಚೆಕ್ ಪುಸ್ತಕ  ಹೊಂದಿದ್ದು ಚೆಕ್ ಪುಸ್ತಕ ಹಾಗೂ  ದಾಖಲೆಗಳನ್ನು ತನ್ನ ರೂಮಿನಲ್ಲಿ ಟೇಬಲ್ ಮೇಲೆ ಇಡುತ್ತಿದ್ದು ಅಪಾದಿತೆ ವಿಜಯಾ ಬ್ಯಾಂಕ್ ನ ಚೆಕ್ ಪುಸ್ತಕಗಳಿಂದ  ಚೆಕ್ ನಂಬ್ರ ಮತ್ತು ಬ್ಯಾಂಕ್ ಆಫ್ ಬರೋಡದ  ನಂಬ್ರದ ಒಟ್ಟು 4 ಚೆಕ್ ಗಳನ್ನು ದಿನಾಂಕ 04/12/2020 ರಂದು  ಅಪಾದಿತೆ ಕಳವು  ಮಾಡಿರುತ್ತಾರೆ. ದಿನಾಂಕ 08/12/2020 ರಂದು ಬ್ಯಾಂಕ್ ಆಫ್ ಬರೋಡಾದ  ಚೆಕ್ ನಿಂದ ರೂಪಾಯಿ 10,000/ ನ್ನು ಮತ್ತು ವಿಜಯಾ ಬ್ಯಾಂಕ್ ನ ಚೆಕ್ ನಿಂದ ರೂಪಾಯಿ 10,000/- ನ್ನು ನಕಲಿ ಸಹಿ ಮಾಡಿ ನಗದೀಕರಿಸಿರುತ್ತಾರೆ.  ದಿನಾಂಕ 09/12/2020 ರಂದು ವಿಜಯಾ ಬ್ಯಾಂಕ್ ಚೆಕ್ ಮೂಲಕ ರೂಪಾಯಿ 45,000/ ನ್ನು ನಕಲಿ  ಸಹಿ ಮಾಡಿ ತನ್ನ ಬ್ಯಾಂಕ್ ಗೆ  ಜಮಾ ಮಾಡಿಕೊಂಡಿರುತ್ತಾರೆ.  ದಿನಾಂಕ 04/12/2020 ರಂದು ವಿಜಯಾ ಬ್ಯಾಂಕ್ ಚೆಕ್ ನಲ್ಲಿ  50,000/-  ರೂಪಾಯಿ ನಮೂದಿಸಿ ನಕಲಿ ಸಹಿ ಮಾಡಿ ಬ್ಯಾಂಕಿಗೆ ನೀಡಿದ್ದು  ಸಹಿ ವ್ಯತ್ಯಾಸ ಇರುವ ಕಾರಣ ಚೆಕ್ ಅಮಾನ್ಯಗೊಂಡಿರುತ್ತದೆ. ಅಪಾದಿತೆಯು ಪಿರ್ಯಾದಿದಾರರಿಗೆ ಸೇರಿದ ರೂಪಾಯಿ 65,000/- ನ್ನು ದ್ರೋಹವನ್ನು ಬಗೆದು ತನ್ನ ಸ್ವಂತ ಲಾಭಕ್ಕಾಗಿ ಉಪಯೋಗಿಸಿಕೊಂಡಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 134/2021 ಕಲಂ: 380, 420, 464, 465, 467, 468, 471 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ 27/10/2021 ರಂದು ಮಧು ಬಿ ಇ, ಪೊಲೀಸ್ ಉಪನಿರೀಕ್ಷಕರು ಕಾರ್ಕಳ ನಗರ ಪೊಲೀಸ್ ಠಾಣೆ ಇವರು  ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಸಂಜೆ 17:30 ಗಂಟೆಗೆ  ಠಾಣಾ ಸರಹದ್ದಿನಲ್ಲಿ ರೌಂಡ್ಸು ಕರ್ತವ್ಯದಲ್ಲಿರುವ ಸಮಯ ಪುಲ್ಕೇರಿ ಬೈಪಾಸ್ ಹತ್ತಿರ ಒಬ್ಬ ದ್ವಿಚಕ್ರ ವಾಹನ ಸವಾರ KA-19-HF-2710 ನೇ ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನವನ್ನು ಸಾರ್ವಜನಿಕ ರಸ್ತೆಯಾದ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಮೂಡಬಿದ್ರೆ ಕಡೆಯಿಂದ ಕಾರ್ಕಳ ಕಡೆಗೆ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಅಡ್ಡಾದಿಡ್ಡಿಯಾಗಿ ಸವಾರಿ ಮಾಡಿಕೊಂಡು ಬರುತ್ತಿರುವುದಾಗಿದೆ . ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 135/2021 ಕಲಂ: 279, 336 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಪಡುಬಿದ್ರಿ: ದಿನಾಂಕ 27/10/2021 ರಂದು ಬೆಳಿಗ್ಗೆ ಅಶೋಕ್ ಕುಮಾರ್, ಪೊಲೀಸ್ ಉಪನಿರೀಕ್ಷಕರು, ಪಡುಬಿದ್ರಿ ಪೊಲೀಸ್ ಠಾಣೆ ಇವರು  ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ HR-55-E-6002 ಲಾರಿ ಒಂದರಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿರುವುದಾಗಿ ಬಂದ ಮಾಹಿತಿಯಂತೆ ಸಿಬ್ಬಂದಿಯವರೊಂದಿಗೆ ಕಾಪು ತಾಲೂಕು ನಡ್ಸಾಲು ಗ್ರಾಮದ ಪಡುಬಿದ್ರಿ- ಕಾರ್ಕಳ ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ವಾಹನ ತಪಾಸಣೆ ಮಾಡುತ್ತಿರುವ ಸಮಯ ಸಂಶಯಿತ HR-55-E-6002 ನೇ ನಂಬ್ರದ ಲಾರಿಯನ್ನು ನಿಲ್ಲಿಸಿ ಪರಿಶೀಲಿಸಿದಾಗ, ಅದರಲ್ಲಿ 10 ಎತ್ತುಗಳು, 05 ಎಮ್ಮೆ ಹಾಗೂ 03 ಕೋಣಗಳು ಸೇರಿದಂತೆ ಒಟ್ಟು 18 ಜಾನುವಾರುಗಳನ್ನು ಹಿಂಸಾತ್ಮಕವಾಗಿ ರೀತಿಯಲ್ಲಿ ಕಾಲುಗಳಿಗೆ ಮತ್ತು ಕುತ್ತಿಗೆಗೆ ಹಗ್ಗದಿಂದ ಕಟ್ಟಿ ಬಿಗಿದು, ಒಂದಕ್ಕೊಂದು ತಾಗುವಂತೆ ಮತ್ತು ಮಿಸುಗಾಡದಂತೆ ತುಂಬಿಸಿ, ಲಾರಿಯ ಟಾಪ್‌ನ ಮೇಲೆ ಸುಮಾರು 20 ಅಲೂಗಡ್ಡೆ ತುಂಬಿದ ಚೀಲಗಳನ್ನು ಇರಿಸಿ ಸಾಗಾಟ ಮಾಡುತ್ತಿದ್ದು.  ಜಾನುವಾರುಗಳಲ್ಲಿ 1 ಎತ್ತು ಮೃತಪಟ್ಟ ಸ್ಥಿತಿಯಲ್ಲಿ ಹಾಗೂ 1 ಎತ್ತು ತೀವ್ರ ಅಸ್ವಸ್ಥ ಸ್ಥಿತಿಯಲ್ಲಿರುತ್ತದೆ. ಲಾರಿ ಚಾಲಕನ ಹೆಸರು  ಖಲಂದರ್  ತಹಶೀಲ್ದಾರ ಹಾಗೂ  ಕ್ಲೀನರ್ ಹೆಸರು ಅಬ್ದುಲ್ ರೆಹಮಾನ್ ಎಂಬುದಾಗಿರುತ್ತದೆ. ಜಾನುವಾರುಗಳನ್ನು ಮಾಂಸಕ್ಕಾಗಿ ಕೇರಳ ರಾಜ್ಯದ ಕಾಸರಗೋಡು ಎಂಬಲ್ಲಿಗೆ ಸಾಗಾಟ ಮಾಡಲು ಕೊಂಡು ಹೋಗುವುದಾಗಿಯೂ,  ಜಾನುವಾರುಗಳನ್ನು ಕಲಘಟಗಿ ಆರೀಫ್ ನಾಲಬಂದ್ ಎಂಬವರು ಎಲ್ಲಿಂದಲೋ ಕದ್ದು ತಂದು ಹುಬ್ಬಳ್ಳಿಯ ಚೆಲಮಟ್ಟ ಎಂಬಲ್ಲಿ ಶೆಡ್‌ ಒಂದರಲ್ಲಿ ಇಟ್ಟಿರುವುದನ್ನು ಅವನು ತಿಳಿಸಿದಂತೆ ಅವನೊಂದಿಗೆ ಸೇರಿ ದಿನಾಂಕ 26/10/2021 ರಂದು ರಾತ್ರಿ 10:30 ಗಂಟೆಗೆ HR-55-E-6002 ನೇ ನಂಬ್ರದ ಲಾರಿಯಲ್ಲಿ ತುಂಬಿಸಿ ನಮ್ಮೊಂದಿಗೆ ಕಳುಹಿಸಿಕೊಟ್ಟಿರುವುದನ್ನು ಸಾಗಿಸಿಕೊಂಡು ಬಂದಿರುವುದಾಗಿಯೂ ತಿಳಿಸಿದರು. ಆರೋಪಿಗಳು 18 ಜಾನುವಾರುಗಳನ್ನು ಮಾಂಸ ಮಾಡುವ ಉದ್ದೇಶದಿಂದ ಎಲ್ಲಿಂದಲೋ ಕಳ್ಳತನ ಮಾಡಿಕೊಂಡು ಕಸಾಯಿಖಾನೆಗೆ ಸಾಗಾಟ ಮಾಡುವ ಉದ್ದೇಶ ಹೊಂದಿರುವುದು ಖಚಿತಪಟ್ಟಿರುತ್ತದೆ.  ಪ್ರಕರಣಕ್ಕೆ ಸಂಬಂಧಿಸಿದಂತೆ 15 ಲಕ್ಷ ಮೌಲ್ಯದ HR-55-E-6002 ನೇ ನಂಬ್ರದ ಲಾರಿಯನ್ನು, ಅದರಲ್ಲಿದ್ದ  3,59,000/- ರೂಪಾಯಿ ಮೌಲ್ಯದ 17 ಜೀವಂತ ಜಾನುವಾರುಗಳು, ಒಂದು ಮೃತ ಎತ್ತನ್ನು, 10,000/- ರೂಪಾಯಿ ಮೌಲ್ಯದ 20 ಅಲೂಗಡ್ಡೆ ಚೀಲಗಳನ್ನು, 5,000/- ರೂಪಾಯಿ ಮೌಲ್ಯದ 2 ಮೊಬೈಲ್ ಫೋನ್‌ಗಳನ್ನು, ನಗದು 400/- ರೂಪಾಯಿಗಳನ್ನು ಸ್ವಾಧೀನಪಡಿಸಿ, ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿರುವುದಾಗಿದೆ. ಸ್ವಾಧೀನಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 18,74,400/- ರೂಪಾಯಿ ಆಗಿರುತ್ತದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 104/2021 ಕಲಂ: 8, 9, 11 ಕರ್ನಾಟಕ ಗೋ ವಧೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ 1964, ಕಲಂ 11 (1) (ಎ), 11(1) (ಡಿ) ಪ್ರಾಣಿ ಹಿಂಸೆ ಪ್ರತಿಬಂಧಕ ಕಾಯ್ದೆ 1960, ಕಲಂ: 4, 5, 6, 7 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020 , ಕಲಂ: 379 ಜೊತೆಗೆ 34  ಐಪಿಸಿ ಮತ್ತು ಕಲಂ: 66 ಜೊತೆಗೆ 192(ಎ) ಐಎಂವಿ ಆಕ್ಟ್  ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 28-10-2021 09:53 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080