ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

 • ಕುಂದಾಪುರ: ದಿನಾಂಕ 27/10/2021 ರಂದು ಸಂಜೆ  ಸುಮಾರು 6:30  ಗಂಟೆಗೆ ಕುಂದಾಪುರ ತಾಲೂಕಿನ, ಕೊಟೇಶ್ವರ  ಗ್ರಾಮದ ಕುಂಬ್ರಿಯ ಶ್ರೀಮಂಜುನಾಥ ಸ್ಟೋರ್ ಬಳಿ ರಸ್ತೆಯಲ್ಲಿ, ಆಪಾದಿತ  ಚಂದನ್‌‌ ಸಿ ಶ್ರೀಯನ್‌ ಎಂಬವರು KA53-EY-1687ನೇ ಬೈಕನ್ನು ಹಳೇಅಳಿವೆ ಕಡೆಯಿಂದ ಕೋಟೇಶ್ವರ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು, ಕೋಟೇಶ್ವರ ಕಡೆಯಿಂದ ಹಳೇಅಳಿವೆ ಕಡೆಗೆ ಪಿರ್ಯಾದಿದಾರರಾದ ಸುಭಾಷ್‌ ಎಂಬವರು ರಸ್ತೆಯ ಎಡಬದಿಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿದ್ದ KA20-R-1497ನೇ ಬೈಕಿಗೆ  ಎದುರುಗಡೆಯಿಂದ ಡಿಕ್ಕಿ ಹೊಡೆದ ಪರಿಣಾಮ ಸುಭಾಷ್‌ ರವರ ಎಡಕಾಲಿನ ಪಾದದ ಮೇಲೆ ಮೂಳೆ ಮುರಿತ ಗಾಯ  ಹಾಗೂ ಬಲಕಾಲಿನ ಕಿರು ಬೆರಳಿಗೆ  ತರಚಿದ ಗಾಯವಾಗಿ ಕೋಟೇಶ್ವರ ಎನ್‌‌‌. ಆರ್‌ ಆಚಾರ್ಯ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 84/2021 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
 • ಶಿರ್ವ: ದಿನಾಂಕ 28.10.2021 ರಂದು ಪಿರ್ಯಾದಿ ಜೆಪ್ರಿ ಡಿ'ಸೋಜ ಇವರು ತನ್ನ ಬಾಬ್ತು ಕಾರು ನಂಬ್ರ ಕೆಎ 20ಎಂಬಿ 7809 ನೇದರಲ್ಲಿ ತನ್ನ ಪತ್ನಿ ಪ್ಲಾವಿಯಾ ಡಿ'ಸೋಜರವರನ್ನು ಕುಳ್ಳಿರಿಸಿಕೊಂಡು ಮನೆಯಿಂದ ಹೊರಟಿದ್ದು, ಸಮಯ ಸುಮಾರು ಬೆಳಿಗ್ಗೆ 8:30 ಗಂಟೆಗೆ ಬಂಟಕಲ್‌-92 ಹೇರೋರು ಕಡೆಗೆ ಹಾದು ಹೋಗಿರುವ ಸಾರ್ವಜನಿಕ ರಸ್ತೆಯಲ್ಲಿ ಬಂಟಕಲ್‌ ಹರಿದಾಸ್‌ ಪಾಟ್ಕರ್‌ ಜನರಲ್‌ ಸ್ಟೋರ್‌ ಬಳಿ ತಲುಪುವಾಗ ಎದುರಿನಿಂದ ಅಂದರೆ 92 ಹೇರೂರು ಕಡೆಯಿಂದ ECO ಕಾರು ನಂಬ್ರ ಕೆಎ20 ಎಂಸಿ 8618 ನೇದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾಧಿದಾರರು ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಚಲಾಯಿಸುತ್ತಿದ್ದ ಪಿರ್ಯಾದಿದಾರರ ಪತ್ನಿ ಪ್ಲಾವಿಯಾ ಡಿ;ಸೋಜರವರ ಹಣೆಗೆ ರಕ್ತಗಾಯವಾಗಿದ್ದು, ಅಪಘಾತದಿಂದ ಎರಡೂ ವಾಹನಗಳು ಜಖಂ ಆಗಿದ್ದು, ಪಿರ್ಯಾದಿದಾರರಿಗಾಗಲೀ ECO ಕಾರಿನ ಚಾಲಕನಿಗಾಗಲೀ ಯಾವುದೇ ಗಾಯ ನೋವುಗಳಾಗಿರುವುದಿಲ್ಲ.  ಈ ಅಪಘಾತನಕ್ಕೆ ಕೆಎ20 ಎಂಸಿ 8618 ನೇಕಾರಿನ ಚಾಲಕ ಅಶ್ರಫ್‌ ರವರ ಅತೀ ವೇಗ ಹಾಗೂ ನಿರ್ಲಕ್ಷ್ಯತನದ ಚಾಲನೆಯೇ ಕಾರಣವಾಗಿರುತ್ತದೆ. ಈ ಬಗ್ಗೆ ಶಿರ್ವ  ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 62/2021 ಕಲಂ:  279, 337  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಅಸ್ವಾಭಾವಿಕ ಮರಣ ಪ್ರಕರಣ

 • ಹೆಬ್ರಿ: ಪಿರ್ಯಾದಿ ಜಲಜ ಶೆಡ್ತಿ ಇವರ ಮಗ ನಿತ್ಯಾನಂದ ಶೆಟ್ಟಿ (44) ಇವರು ಹೈನುಗಾರಿಕೆ ವೃತ್ತಿ ಮಾಡಿಕೊಂಡಿದ್ದು ಆತನು ಸುಮಾರು ವರ್ಷಗಳಿಂದ  ಅವರಿಗೆ ಅರೋಗ್ಯ ಸಮಸ್ಯೆವುಂಟಾಗಿ ರಕ್ತ ವಾಂತಿ ಮಾಡಿದ್ದು. ಇದರಿಂದ ಮಾನಸಿಕವಾಗಿ ನೊಂದು ಕೊಂಡು ಮಾನಸಿಕ ಖಿನ್ಯತೆಗೆ ಒಳಗಾಗಿ ನಿನ್ನೆ  ದಿನಾಂಕ  27/10/2021 ರಂದು  ರಾತ್ರಿ 8:00  ಗಂಟೆಯಿಂದ  ಈ ದಿನ ದಿನಾಂಕ 28/10/2021 ರಂದು ಬಿಳಿಗ್ಗೆ 06:00 ಗಂಟೆ ಮಧ್ಯಾವಧಿಯಲ್ಲಿ  ನಾಡ್ಪಾಲು  ಗ್ರಾಮದ  ಸೋಮೇಶ್ವರದ ಕೆಳ ಅರಸಿನ ಮನೆ ಎಂಬಲ್ಲಿ  ಮನೆಯಲ್ಲಿ  ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯುಡಿಅರ್ ಕ್ರಮಾಂಕ 35/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೋಟ: ಶ್ರೀನಿವಾಸ ಪ್ರಾಯ 39 ವರ್ಷ ರವರು ಸೆಂಟ್ರಿಂಗ್‌ ಕಂಟ್ರ್ಯಾಕ್ಟ್‌ ಕೆಲಸ ಮಾಡಿಕೊಂಡಿದ್ದು, ನಿನ್ನೆ ದಿನಾಂಕ 27/10/2021 ರಂದು ತೆಕ್ಕಟ್ಟೆ ಗ್ರಾಮದ ಮಲ್ಯಾಡಿಯಲ್ಲಿರುವ ಕರುಣಾಕರ ಶೆಟ್ಟಿ ಕೆದೂರುರವರ ಮನೆಯ ಸೆಂಟ್ರೀಂಗ್‌ ಕೆಲಸಕ್ಕೆ ಬೆಳಿಗ್ಗೆ 9-00 ಗಂಟೆಗೆ ಮನೆಯಿಂದ ಹೋಗಿದ್ದು. ಮದ್ಯಾಹ್ನ ಸುಮಾರು 3-45 ಗಂಟೆಗೆ ಶ್ರೀನಿವಾಸರವರ ಜೊತೆ ಕೆಲಸ ಮಾಡುತ್ತಿದ್ದ ಶರತ್‌ರವರು ಫಿರ್ಯಾದಿ ರವಿ ಪೂಜಾರಿ ಇವರಿಗೆ ಮದ್ಯಾಹ್ನ 3-30 ಗಂಟೆಗೆ ಪೋನ್‌ ಮಾಡಿ ಶ್ರೀನಿವಾಸರವರು ಸೆಂಟ್ರೀಂಗ್‌ ಕೆಲಸ ಮಾಡುವಾಗ ಆಕಸ್ಮಿಕವಾಗಿ ಕೆಳಗೆ ಬಿದ್ದು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಯ ಬಗ್ಗೆ ಕೋಟೇಶ್ವರ ಎನ್‌ ಆರ್‌ ಆಚಾರ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ತಿಳಿಸಿದಂತೆ ಫಿರ್ಯಾದಿದಾರರು ಹೋಗಿ ನೋಡುವಾಗ ಶ್ರೀನಿವಾಸ ರವರ ಎಡ ಕೆನ್ನೆ ಬಳಿ ಬಾತಿಕೊಂಡಿದ್ದು, ಬೆನ್ನಿನ ಹಿಂಭಾಗ ತೀವ್ರ್ರ ಸ್ವರೂಪದ ಗಾಯವಾಗಿರುವುದಾಗಿದ್ದು,ವೈದ್ಯರ ಸಲಹೆಯಂತೆ ಕೂಡಲೇ ಶ್ರೀನಿವಾಸನನ್ನು ಒಂದು ಅಂಬ್ಯಲೆನ್ಸ್‌ನಲ್ಲಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಆ ಸಮಯ ಶ್ರೀನಿವಾಸರವರು ಮಾತನಾಡುತ್ತಿದ್ದು, ಶ್ರೀನಿವಾಸನಲ್ಲಿ ವಿಚಾರಿಸಿದಲ್ಲಿ ತಾನು ಮಲ್ಯಾಡಿಯಲ್ಲಿ ಸೆಂಟ್ರಂಗ್‌ ಕೆಲಸ ಮಾಡುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದಿರುವುದಾಗಿ ತಿಳಿಸಿದ್ದು, ಮಣೀಪಾಲ ಕೆಎಮ್‌ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಶ್ರೀನಿವಾಸರವರು ದಿನಾಂಕ 28/10/2021 ರಂದು ಸಂಜೆ 4-55 ಗಂಟೆಗೆ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯುಡಿಅರ್ ಕ್ರಮಾಂಕ 41/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೋಟ: ಮೃತೆ ಜ್ಞಾನೇಶ್ವರಿ  ಪ್ರಾಯ 39 ರವರು ಸುಮಾರು 10 ವರ್ಷಗಳ ಹಿಂದೆ ಕೇಶವ ಆಚಾರ್ಯ ಎಂಬವರೊಂದಿಗೆ ಮದುವೆಯಾಗಿ ಗಿಳಿಯಾರು ಗ್ರಾಮದ ಹಾಡಿಕೆರೆ ಎಂಬಲ್ಲಿ ತನ್ನ ಗಂಡನೊಂದಿಗೆ ವಾಸವಾಗಿದ್ದು ಅವರಿಗೆ ಮಕ್ಕಳಾಗಿರುವುದಿಲ್ಲ. ಅಲ್ಲದೇ ಅವರು ಶುಗರ್‌ ಹಾಗೂ ಬಿ ಪಿ ಕಾಯಿಲೆಯಿಂದ ಬಳಲುತ್ತಿದ್ದರು. ಮೃತರ ಗಂಡನಿಗೂ ಸರಿಯಾದ ಕೆಲಸವಿಲ್ಲದೇ ಬೇರೆ ಬೇರೆ ಕಡೆ ಕೆಲಸಕ್ಕೆ ಹೋಗುತ್ತಿದ್ದು, ವಾರಕ್ಕೊಮ್ಮ ಮನೆಗೆ ಬಂದು ಹೋಗುತ್ತಿದ್ದರು. ಮೃತೆ ಜ್ಞಾನೇಶ್ವರಿ ರವರು ಮನೆಯಲ್ಲಿ ಒಬ್ಬರೇ ಇರುತ್ತಿದ್ದು , ಅವರು ಕೂಡಾ ಉಡುಪಿ ಕಡೆಯಲ್ಲಿ ಕೆಲಸ  ಮಾಡಿಕೊಂಡು ಮನೆಯ ಖರ್ಚು ವೆಚ್ಚ ನೋಡಿಕೊಳ್ಳುತ್ತಿದ್ದರು. ದಿನಾಂಕ 28/10/2021 ರಂದು ಬೆಳಿಗ್ಗೆ 8-00 ಗಂಟೆ ಸುಮಾರಿಗೆ ಫಿರ್ಯಾದಿ ಕೆ ಶ್ರೀನಿವಾಸ ಆಚಾರ್ಯ ಇವರಿಗೆ  ಸಂತೋಷ ರವರು ಪೋನ್‌ಮಾಡಿ ಜ್ಞಾನೇಶ್ವರಿ ರವರ ಮೃತ ದೇಹ ಮನೆಯ ಸಮೀಪದ ಬಾವಿಯಲ್ಲಿ ಇರುವುದಾಗಿ ತಿಳಿಸಿದಂತೆ ಫಿರ್ಯಾದಿದಾರರು ಹೋಗಿ ಬಾವಿಯಿಂದ ಅವರನ್ನು ಎತ್ತಿ ನೋಡುವಾಗ ಅದಾಗಲೇ ಜ್ಞಾನೇಶ್ವರಿ ರವರು ಮೃತ ಪಟ್ಟಿದ್ದು, ಅಲ್ಲಿದ್ದ ಸಂತೋಷರವರಲ್ಲಿ ವಿಚಾರಿಸಿದಲ್ಲಿ ನಿನ್ನೆ ದಿನಾಂಕ 27/10/2021 ರಂದು ರಾತ್ರಿ11-00 ಗಂಟೆಗೆ ಜ್ಞಾನೇಶ್ವರಿ ರವರು ಮನೆಯಲ್ಲಿರುವುದನ್ನು ತಾನು ನೋಡಿರುವುದಾಗಿ ಹಾಗೂ ಈ ದಿನ ದಿನಾಂಕ 28/10/2021 ರಂದು ಬೆಳಿಗ್ಗೆ 8-00 ಗಂಟೆಗೆ ಮನೆಯ ಸಮೀಪದ ಸದ್ರಿ ಬಾವಿಗೆ ನೀರು ತರಲು ಬಂದಾಗ ಬಾವಿಯಲ್ಲಿ ಜ್ಞಾನೇಶ್ವರಿರವರ ಮೃತ ದೇಹ  ತೇಲುತ್ತಿರುವುದಾಗಿ ತಿಳಿಸಿರುತ್ತಾರೆ. ಮೃತೆ ಜ್ಞಾನೇಶ್ವರಿ ರವರು ಹಲವು ವರ್ಷಗಳಿಂದ ಮಕ್ಕಳಾಗದ ಚಿಂತೆಯಿಂದ ಇದ್ದುದಲ್ಲದೇ ಬಿಪಿ ಶುಗರ್‌ಕಾಯಿಲೆಯಿಂದ ಬಳಲುತ್ತಿದ್ದು,ಸಂಸಾರದ ಖರ್ಚು ನಿಭಾಯಿಸಲಾಗದ ಚಿಂತೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಸಮೀಪದ ಬಾವಿಗೆ ಬಿದ್ದು ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯುಡಿಅರ್ ಕ್ರಮಾಂಕ 42/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

 • ಪಡುಬಿದ್ರಿ: ಪಿರ್ಯಾದಿ ಅವಿನಾಶ್ ಕಾಮತ್ ಇವರ ತಂದೆಯ ಬಾಬ್ತು KA-20-C-3539 ನಂಬ್ರದ ಟಿಪ್ಪರ್ ಹಾಗೂ KA-20-MA-0258 ನಂಬ್ರದ ಕ್ರೇನ್ ಇದ್ದು, ತಾಯಿ ಶ್ರೀಮತಿ ಕೆ. ಚಿತ್ರಾ ಸಿ ಕಾಮತ್ ಇವರ ಬಾಬ್ತು KA-20-B-0826 ಟಿಪ್ಪರ್ ಇದ್ದು, ಈ ವಾಹನಗಳನ್ನು ಬಾಡಿಗೆಗೆ ನೀಡುತ್ತಿದ್ದು ಅದರ ಚಾಲಕರು ದಿ:20/09/2021 ರಂದು KA-20-B-0826 ಟಿಪ್ಪರನ್ನು ಚಾಲಕ ವೆಂಕಟೇಶ್ ಎಂಬವರು ಸಂಜೆ 7:00 ಗಂಟೆಗೆ ಮನೆಯ ಎದುರು ನಿಲ್ಲಿಸಿ ಹೋಗಿದ್ದು, ಮರುದಿನ ದಿ:21/09/201 ರಂದು ಬೆಳಗ್ಗೆ ಸುಮಾರು 08:00 ಗಂಟೆಗೆ ಚಾಲಕ ವೆಂಕಟೇಶ್ ರವರು ಬಂದು ಲಾರಿಯನ್ನು ಸ್ಟಾಟ್ ಮಾಡಲು ಪ್ರಯತ್ನಿಸಿದಾಗ ಟಿಪ್ಪರಿಗೆ ಅಳವಡಿಸಿದ ಮುರಾಸು ಕಂಪನಿಯ ಬ್ಯಾಟರಿಯನ್ನು ಯಾರೋ ಕಳ್ಳರು ಕಳವು ಮಾಡಿರುವುದು ಕಂಡುಬಂದಿರುತ್ತದೆ. ದಿ:07/10/2021 ರಂದು ಸಂಜೆ ಸುಮಾರು 7:00 ಗಂಟೆಗೆ KA-20-C-3539 ನಂಬ್ರದ ಟಿಪ್ಪರ್ ಹಾಗೂ KA-20-MA-0258 ನಂಬ್ರದ ಕ್ರೇನ್‌ನ್ನು ಚಾಲಕರು ಕೆಲಸ ಮುಗಿಸಿ ಮನೆಯ ಎದುರುಗಡೆ ನಿಲ್ಲಿಸಿ ಹೋಗಿದ್ದು, ಮರುದಿನ ಬೆಳಗ್ಗೆ ದಿ:08/10/2021 ರಂದು ಬೆಳಿಗ್ಗೆ ಸುಮಾರು 8:00 ಗಂಟೆಗೆ KA-20-C-3539  ಟಿಪ್ಪರ್ ಚಾಲಕ ಸುರೇಶ್ ಹಾಗೂ KA-20-A-0258 ಕ್ರೇನ್ ಚಾಲಕ ಮೋಹನ ಬಂದು ವಾಹನವನ್ನು ಸ್ಟಾರ್ಟ್‌ ಮಾಡಲು ಹೋದಾಗ KA-20-C-3539 ಟಿಪ್ಪರ್ ಗೆ ಅಳವಡಿಸಿದ 2 ಮುರಾಸು ಕಂಪನಿಯ ಬ್ಯಾಟರಿಗಳು ಮತ್ತು KA-20-MA-0258 ಕ್ರೇನ್ ಗೆ ಅಳವಡಿಸಿದ ಮುರಾಸು ಕಂಪನಿಯ ಒಂದು ಸಣ್ಣ ಬ್ಯಾಟರಿ ಯನ್ನು ಯಾರೋ ಕಳ್ಳರು ಕಳವು ಮಾಡಿರುವುದು ಕಂಡುಬಂದಿರುತ್ತದೆ. KA-20-B-0826 ಟಿಪ್ಪರಿನ ಬ್ಯಾಟರಿಯನ್ನು ದಿ:20/09/2021 ರಂದು ಸಂಜೆ 7:00 ಗಂಟೆಯಿಂದ ದಿ:21/09/2021 ರ ಬೆಳಗ್ಗೆ 08:00 ಯ ಮಧ್ಯಾವದಿಯಲ್ಲಿಯೂ, KA-20-C-3539  ಟಿಪ್ಪರ್ ಹಾಗೂ KA-20-MA-0258 ಕ್ರೇನ್‌ನ ಬ್ಯಾಟರಿಯನ್ನು ದಿ:07/10/2021 ರಂದು ಸಂಜೆ 7:00 ಗಂಟೆಯಿಂದ ದಿ:08/10/2021 ರಂದು ಬೆಳಗ್ಗೆ ಸುಮಾರು 8:00 ಗಂಟೆಯ ಮದ್ಯಾವಧಿಯಲ್ಲಿ ಯಾರೊ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.ಟಿಪ್ಪರಿಗೆ ಅಳವಡಿಸಿದ ಕಳವಾದ ಬ್ಯಾಟರಿಗಳ ಅಂದಾಜು ಬೆಲೆ 30,000/- ರೂಪಾಯಿ ಆಗಿದ್ದು, ಕ್ರೇನ್ ಗೆ ಅಳವಡಿಸಿದ ಕಳವಾದ ಬ್ಯಾಟರಿಯ ಅಂದಾಜು ಬೆಲೆ 7,000 ಸಾವಿರ ಆಗಿರುತ್ತದೆ. ಕಳವಾದ ಒಟ್ಟು 4 ಬ್ಯಾಟರಿಗಳ ಮೌಲ್ಯ 37,000/- ರೂಪಾಯಿ ಆಗಬಹುದು. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 105/2021 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಹಲ್ಲೆ ಪ್ರಕರಣ 

 • ಕಾರ್ಕಳ : ದಿನಾಂಕ 27/10/2021 ರಂದು ರಾತ್ರಿ 20:00 ಗಂಟೆಗೆ ಪಿರ್ಯಾದಿದಾರರಾದ ಜ್ಯೋತಿ, ಪ್ರಾಯ: 39 ವರ್ಷ, ಗಂಡ: ನಾಗರಾಜ್, ವಾಸ: ಪಿಲಿಚಂಡಿಸ್ಥಾನ ಬಳಿ,ಕುಕ್ಕುಂದೂರು ಗ್ರಾಮ,ಕಾರ್ಕಳ ತಾಲೂಕು ಇವರು ತನ್ನ ತಾಯಿ ನಲ್ಲಮ್ಮರೊಂದಿಗೆ ತಮ್ಮ ಮನೆಯ ಪಕ್ಕದಲ್ಲಿರುವ ಗಂಡನ ಅಣ್ಣನ ಹೆಂಡತಿ ದುರ್ಗಾ ಎಂಬುವವರ ಮನೆಯಲ್ಲಿ ಟಿ ವಿ ನೋಡುತ್ತಿರುವ ಸಮಯ ಅಪಾದಿತ ಹುಸೇನ್ ಎಂಬಾತನು ತನ್ನ ಮನೆಯಲ್ಲಿ ನಿಂತುಕೊಂಡು ದುರ್ಗಾಳನ್ನು ಉದ್ದೇಶಿಸಿ ಫ್ಯಾಕ್ಟರಿಗೆ ಹೋಗಿ ತಡವಾಗಿ ಬರುತ್ತೀಯ ಎಂದು ಕೇಳಿದ್ದು ಆಗ ದುರ್ಗಾಳು ಹೊರಗೆ ಬಂದು ನಿನಗೆ ನನ್ನ ವಿಚಾರ ಯಾಕೆ ಎಂದು ಕೇಳಿದಾಗ ಅಪಾದಿತನು ಕತ್ತಿಯನ್ನು ಹಿಡಿದುಕೊಂಡು ದುರ್ಗಾಳ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಕತ್ತಿಯಿಂದ ದುರ್ಗಾಳಿಗೆ ಕಡಿಯಲು ಬಂದಾಗ ಪಿರ್ಯಾದಿದಾರರು ತಡೆದಾಗ ಫಿರ್ಯಾದಿದಾರರ ಬಲಕೈಗೆ ರಕ್ತಗಾಯವಾಗಿದ್ದು, ಅಪಾದಿತನು ಪುನಃ ದುರ್ಗಾಳಿಗೆ ಕತ್ತಿಯಿಂದ ಹೊಡೆದು ತಲೆಗೆ ರಕ್ತಗಾಯಗೊಳಿಸಿದ್ದಲ್ಲದೇ , ಫಿರ್ಯಾದಿದಾರರ ತಾಯಿ ನಲ್ಲಮ್ಮರವರ ಕಾಲಿಗೆ ಕಲ್ಲನ್ನು ಎಸೆದು ಗಾಯಗೊಳಿಸಿದ್ದಲ್ಲದೇ, ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 136/2021 ಕಲಂ: 324, 447, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 28-10-2021 06:45 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080