ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾದ ಸುಮಿತ್ರ, (49),  ಗಂಡ: ಶಿವಪ್ಪ ನಾಯ್ಕ,  ವಾಸ: ಗೀತಾ ಕಾಮತ್‌ ರವರ ಬಾಡಿಗೆ ಮನೆ, ಕಚ್ಚೂರು ಗ್ರಾಮ, ಬ್ರಹ್ಮಾವರ ತಾಲೂಕು ಇವರು ಗಂಡ ಶಿವಪ್ಪ ನಾಯ್ಕ (51)  ರವರು ಮೂರು ವರ್ಷಗಳಿಂದ ಗಂಟಲು ಕ್ಯಾನ್ಸರ್‌ ನಿಂದ ಬಳಲುತ್ತಿದ್ದು, ಇದೇ ಕಾರಣದಿಂದ ಅವರು ಬೇಸತ್ತು ಮನನೊಂದು, ಜೀವನದಲ್ಲಿ ಜೀಗುಪ್ಸೆಗೊಂಡು ದಿನಾಂಕ 27/09/2022 ರಂದು ಮಧ್ಯಾಹ್ನ 12:00 ಗಂಟೆಯಿಂದ  4:15  ಗಂಟೆಯ ಮಧ್ಯಾವಧಿಯಲ್ಲಿ ಮನೆಯ ಹಿಂಬದಿಯಲ್ಲಿರುವ ಸೀತಾಫಲದ ಮರಕ್ಕೆ ನೈಲಾನ್‌ ಹಗ್ಗ ಬಿಗಿದು, ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.   ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 47/2022 ಕಲಂ: 174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಮಣಿಪಾಲ: ದಿನಾಂಕ 27/09/2022 ರಂದು 13:20 ಗಂಟೆಯಿಂದ 15:15 ಗಂಟೆಯ ಮದ್ಯಾವಧಿಯಲ್ಲಿ ಯಾರೊ ಕಳ್ಳರು ಪಿರ್ಯಾದಿದಾರರಾದ ಡಾ|| ಮಂಜುನಾಥ ಭಟ್ಟ (54), ತಂದೆ: ಶಿವರಾಮ ಭಟ್ಟ, ವಾಸ; “ಸುದೇವ ಹಾವಸ್” 4-152(ಸಿ) ಹಯಗ್ರೀವ ನಗರ 7ನೇ ಕ್ರಾಸ್ ಕುಂಜಿಬೆಟ್ಟು ಶಿವಳ್ಳಿ ಗ್ರಾಮ ಉಡುಪಿ ತಾಲೂಕು ಇವರ ವಾಸದ ಮನೆಯ ಎದುರಿನ ಬಾಗಿಲನ್ನು ಮುರಿದು ಒಳ ಪ್ರವಶಿಸಿ ಮನೆಯ ಕೋಣೆಯಲ್ಲಿರುವ ಕಪಾಟಿನಲ್ಲಿದ್ದ 20 ಸಾವಿರ ರೂಪಾಯಿ ಮೌಲ್ಯದ ಒಂದು ಚಿನ್ನದ ಉಂಗುರ ಮತ್ತು 4000/- ರೂಪಾಯಿ ನಗದು ಹಣ ಕಳವು ಮಾಡಿಕೊಂಡಿರುವುದಾಗಿರುವುದಾಗಿದೆ, ಕಳವಾದ ಸ್ವತ್ತಿನ ಒಟ್ಟು ಮೌಲ್ಯ 24000/- ಆಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 137/2022, ಕಲಂ; 454, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯದಿದಾರರಾದ ಮುರಳಿ (20), ತಂದೆ: ಕೇಶವ ಬಂಗೇರಾ, ವಾಸ: ಮಂಜಡ್ಕ ಮನೆ, ಕುಂಟಿಬೈಲು, ಮಿಯಾರು ಗ್ರಾಮ, ಕಾರ್ಕಳ ತಾಲೂಕು ಇವರು ಮನೆಯಲ್ಲಿ ಎರಡು ದನ ಹಾಗೂ ಎರಡು ದನದ ಕರುಗಳನ್ನು ಸಾಕಿಕೊಂಡಿದ್ದು, ಪ್ರತಿ ದಿನ ಬೆಳಗ್ಗೆ ಅವುಗಳನ್ನು ಮೇಯಲು ಹೊರಗೆ ಬಿಡುತ್ತಿದ್ದು ಸಂಜೆಯಾಗುವಾಗ ಅವುಗಳು ಹಟ್ಟಿಗೆ ವಾಪಾಸು ಬರುತ್ತಿದ್ದು, ದಿನಾಂಕ 25/09/2022 ರಂದು ಬೆಳಗ್ಗೆ 07:00 ಗಂಟೆಗೆ ಎಂದಿನಂತೆ ದನಕರುಗಳನ್ನು ಹೊರಗೆ ಮೇಯಲು ಬಿಟ್ಟಿದ್ದು, ಅವುಗಳಲ್ಲಿ ಒಂದು ಕಂದು ಬಣ್ಣದ ಗಬ್ಬದ ಹಸು ಸಂಜೆಯಾದರೂ ಹಟ್ಟಿಗೆ ವಾಪಾಸು ಬಾರದೇ ಇದ್ದು ಉಳಿದ ಮೂರು ದನಗಳು ಬಂದಿರುತ್ತದೆ. ವಾಪಾಸು ಬಾರದೇ ಇದ್ದ ದನವನ್ನು ಮಿಯಾರು ಪರಿಸರದಲ್ಲಿ ಎಷ್ಟೇ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ದಿನಾಂಕ 26/09/2022 ರಂದು ಬೆಳಗ್ಗೆ  04:00 ಗಂಟೆ ಸಮಯಕ್ಕೆ ಪಿರ್ಯಾದಿದಾರರ ಮನೆಯಿಂದ 300 ಮೀಟರ್ ದೂರದಲ್ಲಿ ರಮೇಶ್ ಆಚಾರ್ಯ ಎಂಬುವವರು ಮನೆ ಮನೆಗೆ ಹಾಲು ಹಾಗೂ ಪೇಪರ್ ಹಾಕುತ್ತಿದ್ದವರು ಅವರ ಮನೆಯ ಬಳಿ ರಸ್ತೆಯಲ್ಲಿ ಒಂದು ದನವನ್ನು ಬೋಲೆರೋ ವಾಹನಕ್ಕೆ ತುಂಬಿಸುತ್ತಿರುವುದನ್ನು ನೋಡಿರುವುದಾಗಿ ತಿಳಿಸಿದ್ದು, ಸದ್ರಿ ಬೋಲೆರೋ ವಾಹನವು ಕುಂಟಿಬೈಲು ಪೇಟೆ ಕಡೆ ಹೋಗಿರುವುದಾಗಿ ತಿಳಿಸಿರುತ್ತಾರೆ. ನಾಪತ್ತೆಯಾಗಿರುವ ದನದ ಮೌಲ್ಯ 10,000/- ರೂಪಾಯಿ ಆಗಿರುತ್ತದೆ . ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 124/2022 ಕಲಂ: 379  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾದ ಶ್ರೀಮತಿ  ಜಾಹೀದಾ  (27), ಗಂಡ: ಇರ್ಪಾನ್ ಶೇಖ್ , ವಾಸ: ಉಚ್ಚಿಲ ಪೊಲ್ಯ ಬರ್ಪಾಣಿ ರೋಡ್, ಬಡಾ ಗ್ರಾಮ ಕಾಪು ತಾಲೂಕು ಇವರು ದಿನಾಂಕ 07/07/2018 ರಂದು ಬಡಾ ಗ್ರಾಮದ  ಉಚ್ಚಿಲ ಪೊಲ್ಯ ಬರ್ಪಾಣಿ ರಸ್ತೆ  ವಾಸಿ ಇರ್ಫಾನ್ ಶೇಖ್ ನೊಂದಿಗೆ ಮದುವೆಯಾಗಿದ್ದು, ಮದುವೆಯಾದ ಒಂದು ತಿಂಗಳಿನಿಂದ ಪಿರ್ಯಾದಿದಾರರಿಗೆ ಅವರ ಗಂಡ, ಅತ್ತೆ ಅಲೀಮಾ, ಮಾವ ಸುಲೈಮಾನ್ ಶೇಖ್, ಗಂಡನ ಅಣ್ಣ ಅಫ್ಜಲ್ ಶೇಖ್ ಮತ್ತು ಗಂಡನ ಅಣ್ಣನ ಹೆಂಡತಿ ಸಬೀನಾ ರವರು ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ನೀಡಿದ್ದಲ್ಲದೇ 5 ಲಕ್ಷ ಹಣ,  ಚಿನ್ನವನ್ನು ತರಬೇಕು ಇಲ್ಲದಿದ್ದರೇ ಸುಮ್ಮನೆ ಬಿಡುವುದಿಲ್ಲ. ಎಂದು ಬೆದರಿಕೆ ಹಾಕಿರುತ್ತಾರೆ.  ದಿನಾಂಕ 25/09/2022 ರಂದು ರಾತ್ರಿ 21:30 ಗಂಟೆಗೆ ಪಿರ್ಯಾದಿದಾರರ ಗಂಡ, ಅತ್ತೆ, ಮಾವ,  ಗಂಡನ ಅಣ್ಣ ಮತ್ತು  ಗಂಡನ ಅಣ್ಣನ  ಹೆಂಡತಿ ಸಮಾನ ಉದ್ದೇಶದಿಂದ ಸೇರಿಕೊಂಡು ಪಿರ್ಯಾದಿದಾರರಿಗೆ ನಿನ್ನ ಮನೆಯಿಂದ 5 ಲಕ್ಷ ಹಣ ಹಾಗೂ ಬಂಗಾರವನ್ನು ತೆಗೆದುಕೊಂಡು ಬಾ,  ನಮಗೆ ಹಣ ಚಿನ್ನ ಬೇಕು,  ಇಲ್ಲದೇ ಹೋದರೆ ನಿನ್ನನ್ನು ಸಾಯಿಸಿ ಬಿಡುತ್ತೇವೆ ಎಂದು ಹೇಳುತ್ತಾ ಸುಲೇಮಾನ್ ಶೇಕ್ ಪಿರ್ಯಾದಿದಾರರ ಕುತ್ತಿಗೆಯನ್ನು ಒತ್ತಿ ಹಿಡಿದು ಉಸಿರುಗಟ್ಟಿಸಿದ್ದು, ಅತ್ತೆ ಅಲೀಮಾ ಪಿರ್ಯಾದಿದಾರರ ಕೈಗಳನ್ನು ಗಟ್ಟಿಯಾಗಿ ಹಿಡಿದು ಮುರಿದಿರುತ್ತಾರೆ. ಗಂಡ ಇರ್ಫಾನ್ ಶೇಕ್ ಹಾಗೂ ಅತ್ತೆ ಅಲೀಮಾ ಪಿರ್ಯಾದಿದಾರರನ್ನು ಸುಟ್ಟು ಹಾಕುವುದಾಗಿ  ಹೇಳಿ ಬಾಟಲಿಯಲ್ಲಿ ಇದ್ದ ಸೀಮೆ ಎಣ್ಣೆಯನ್ನು ಪಿರ್ಯಾದಿದಾರರ ಮೈಗೆ ಎರಚಿರುತ್ತಾರೆ. ಸಬೀನಾ ಪಿರ್ಯಾದಿದಾರರ ತಲೆ ಕೂದಲನ್ನು ಎಳೆದು ಕಾಲಿನಿಂದ ತುಳಿದು ಚಪ್ಪಲಿಯಲ್ಲಿ ಕೆನ್ನೆಗೆ ಹೊಡೆದುದಲ್ಲದೇ ಸುತ್ತಿಗೆಯಿಂದ ಭುಜಕ್ಕೆ ಹೊಡೆದಿರುತ್ತಾಳೆ. ಪಿರ್ಯಾದಿದಾರರ ಗಂಡನ ಅಣ್ಣ ಅಫ್ಜಲ್ ಶೇಖ್ ಬೆಂಕಿಪೊಟ್ಟಣ ತರುತ್ತೇನೆ ಗಟ್ಟಿಯಾಗಿ ಹಿಡಿದುಕೊಳ್ಳಿ ಎಂದು ಪಿರ್ಯಾದಿದಾರರ ಕೆನ್ನೆಗೆ ಹೊಡೆದು ದೊಣ್ಣೆಯಿಂದ ಕಾಲಿಗೆ ಹೊಡೆದು ಒಳಗೆ ಹೋಗಿದ್ದು, ಆ ಸಮಯದಲ್ಲಿ ಪಿರ್ಯಾದಿದಾರರು ಒದ್ದಾಡಿ ಎಲ್ಲರನ್ನೂ ದೂಡಿ  ಅಲ್ಲಿಂದ ತಪ್ಪಿಸಿಕೊಂಡು ತನ್ನ ಮೂರು ವರ್ಷದ ಮಗನೊಂದಿಗೆ ತನ್ನ ತಾಯಿ ಮನೆಗೆ ಹೋಗಿ  ಮರುದಿನ  ಉಡುಪಿ ಜಿಲ್ಲಾ  ಆಸ್ಪತ್ರೆಗೆ ಹೋಗಿ ದಾಖಲಾಗಿರುವುದಾಗಿ ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 119/2022 ಕಲಂ: 498(ಎ), 506, 323, 324, 355, 307 ಜೊತೆಗೆ 149  ಐಪಿಸಿ, ಕಲಂ: 3, 4 ಡಿ.ಪಿ. ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ .
  • ಮಣಿಪಾಲ: ದಿನಾಂಕ 26/09/2022 ರಂದು ಮಣಿಪಾಲ ಪೊಲೀಸ್ ಠಾಣಾ ಪೊಲೀಸ್‌ ಉಪನಿರೀಕ್ಷಕರಾದ ರಾಜಶೇಖರ ವಂದಲಿರವರು ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಮಣಿಪಾಲದ ಶೀಂಬ್ರಾ ಸೇತುವೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿತ ಚೆರಿಯನ್‌ ಅಬ್ರಾಹಂ (21) ಅಮಲಿನಲ್ಲಿರುವುದು ಕಂಡು ಬಂದಿದ್ದು, ಆತನ ಬಳಿ ಹೋಗಿ ಪರಿಶೀಲಿಸಿದಾಗ ಆತನ ಬಾಯಿಯಿಂದ ಗಾಂಜಾದಂತಹ ಘಾಟು ವಾಸನೆ ಬರುತ್ತಿದ್ದು, ಆತನು ಮಾದಕ ವಸ್ತು ಗಾಂಜಾವನ್ನು ಸೇವಿಸಿರುವ ಬಗ್ಗೆ ಅನುಮಾನ ಬಂದ ಕಾರಣ ಆತನನ್ನು ಠಾಣೆಗೆ ಕರೆದುಕೊಂಡು ಬಂದು ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಮಣಿಪಾಲ ಕೆ.ಎಂ.ಸಿ  ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು  ದಿನಾಂಕ 27/09/2022 ರಂದು ದೃಢಪತ್ರವನ್ನು ನೀಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 134/2022 ಕಲಂ: 27 (B) NDPS ರಂತೆ ಪ್ರಕರಣ ದಾಖಲಾಗಿರುತ್ತದೆ .
  •    ಮಣಿಪಾಲ: ದಿನಾಂಕ 26/09/2022 ರಂದು ಮಣಿಪಾಲ ಪೊಲೀಸ್ ಠಾಣಾ ಪೊಲೀಸ್‌ ಉಪನಿರೀಕ್ಷಕರಾದ ರಾಜಶೇಖರ ವಂದಲಿರವರು ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಮಣಿಪಾಲದ ಶೀಂಬ್ರಾ ಸೇತುವೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿತ ಜೊಯಲ್‌ ಜಾನ್ಸನ್‌ (21) ಅಮಲಿನಲ್ಲಿರುವುದು ಕಂಡು ಬಂದಿದ್ದು, ಆತನ ಬಳಿ ಹೋಗಿ ಪರಿಶೀಲಿಸಿದಾಗ ಆತನ ಬಾಯಿಯಿಂದ ಗಾಂಜಾದಂತಹ ಘಾಟು ವಾಸನೆ ಬರುತ್ತಿದ್ದು, ಆತನು ಮಾದಕ ವಸ್ತು ಗಾಂಜಾವನ್ನು ಸೇವಿಸಿರುವ ಬಗ್ಗೆ ಅನುಮಾನ ಬಂದ ಕಾರಣ ಆತನನ್ನು ಠಾಣೆಗೆ ಕರೆದುಕೊಂಡು ಬಂದು ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಮಣಿಪಾಲ ಕೆ.ಎಂ.ಸಿ  ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು  ದಿನಾಂಕ 27/09/2022 ರಂದು ದೃಢಪತ್ರವನ್ನು ನೀಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 135/2022 ಕಲಂ: 27 (B) NDPS ರಂತೆ ಪ್ರಕರಣ ದಾಖಲಾಗಿರುತ್ತದೆ .
  • ಮಣಿಪಾಲ: ದಿನಾಂಕ 26/09/2022 ರಂದು ಮಣಿಪಾಲ ಪೊಲೀಸ್ ಠಾಣಾ ಪೊಲೀಸ್‌ ಉಪನಿರೀಕ್ಷಕರಾದ ರಾಜಶೇಖರ ವಂದಲಿರವರು ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಮಣಿಪಾಲದ ಶೀಂಬ್ರಾ ಸೇತುವೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿತ ಮ್ಯಾಥಿವ್‌ ಕ ಬೇಬಿ (21) ಅಮಲಿನಲ್ಲಿರುವುದು ಕಂಡು ಬಂದಿದ್ದು, ಆತನ ಬಳಿ ಹೋಗಿ ಪರಿಶೀಲಿಸಿದಾಗ ಆತನ ಬಾಯಿಯಿಂದ ಗಾಂಜಾದಂತಹ ಘಾಟು ವಾಸನೆ ಬರುತ್ತಿದ್ದು, ಆತನು ಮಾದಕ ವಸ್ತು ಗಾಂಜಾವನ್ನು ಸೇವಿಸಿರುವ ಬಗ್ಗೆ ಅನುಮಾನ ಬಂದ ಕಾರಣ ಆತನನ್ನು ಠಾಣೆಗೆ ಕರೆದುಕೊಂಡು ಬಂದು ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಮಣಿಪಾಲ ಕೆ.ಎಂ.ಸಿ  ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು  ದಿನಾಂಕ 27/09/2022 ರಂದು ದೃಢಪತ್ರವನ್ನು ನೀಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 136/2022 ಕಲಂ: 27 (B) NDPS ರಂತೆ ಪ್ರಕರಣ ದಾಖಲಾಗಿರುತ್ತದೆ .

ಇತ್ತೀಚಿನ ನವೀಕರಣ​ : 28-09-2022 09:40 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080