ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣಗಳು

  • ಮಲ್ಪೆ: ಪಿರ್ಯಾದಿದಾರರಾದ ವಿಜಯ ಕರ್ಕೆರ (40), ತಂದೆ:  ಸುಂದರ ಕೋಟ್ಯಾನ, ವಾಸ: ಕರ್ಕೆರ ನಿವಾಸ ಬಾಪುತೋಟ ಇವರು ದಿನಾಂಕ 20/09/2021 ರಂದು ರಾತ್ರಿ  ಕೆಲಸ ಮುಗಿಸಿ ತನ್ನ KA-20-EQ-9390 ನೇ  ಸ್ಕೂಟರ್ ನ್ನು ತನ್ನ ಮನೆಯಾದ  ಬಾಪುತೋಟ ಮಲ್ಪೆ ಯ ಮನೆಯ ಕಂಪೌಂಡ ಒಳಗಡೆ ರಾತ್ರಿ 11:50 ಗಂಟೆಗೆ  ನಿಲ್ಲಿಸಿ ರಾತ್ರಿ ಮನೆಯಲ್ಲಿ ಮಲಗಿದ್ದು ಮರುದಿನ ದಿನಾಂಕ 21/09/2021 ರಂದು ಬೆಳಿಗ್ಗೆ 05:00 ಗಂಟೆಗೆ ಕೆಲಸಕ್ಕೆ ಹೋಗಲು ಮನೆಯ ಹೊರಗಡೆ ಬಂದು  ನೋಡಿದಾಗ ಮನೆಯ ಕಂಪೌಂಡ ಒಳಗಡೆ ಇಟ್ಟಿದ್ದ ಪಿರ್ಯಾದಿದಾರರ ಸ್ಕೂಟರ್ ಇರದೇ ಇದ್ದು  ಪರಿಸರದಲ್ಲಿ ಹುಡುಕಾಡಿದರೂ ಸಿಕ್ಕಿರುವುದಿಲ್ಲ, ಯಾರೋ ಕಳ್ಳರು ದಿನಾಂಕ 20/09/2021 ರಂದು ರಾತ್ರಿ 11:50 ಗಂಟೆಯಿಂದ ಮರುದಿನ ಮುಂಜಾನೆ 05:00 ಗಂಟೆಯ ಮಧ್ಯಾವಧಿಯಲ್ಲಿ  ಪಿರ್ಯಾದಿದಾರರ  ಸ್ಕೂಟರ್ ನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಸ್ಕೂಟರಿನ ಮೌಲ್ಯ 41,578/- ರೂಪಾಯಿ ಆಗಿರುತ್ತದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 109/2021  ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ: ಪಿರ್ಯಾದಿದಾರರಾದ ಯೋಗೇಂದ್ರ ಆಚಾರ್ (38), ತಂದೆ: ಮುತ್ತಯ್ಯ ಆಚಾರ್, ವಾಸ: ಲಕ್ಷ್ಮೀ ನಾರಾಯಣ ಕೃಪಾ ನಾಯಕ್ ವಾಡಿ, ಗುಜ್ಜಾಡಿ ಪೋಸ್ಟ್, ಕುಂದಾಪುರ ತಾಲೂಕು ಇವರು ಕುಂದಾಪುರ ತಾಲೂಕು ಹೊಸಾಡು ಗ್ರಾಮದ ಮುಳ್ಳಿಕಟ್ಟೆಯ ಸಾಯಿರಾಮ್ ಕಾಂಪ್ಲೆಕ್ಸ್ ಹತ್ತಿರ ಗೂಡಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿದ್ದು  ಅಂಗಡಿಯಲ್ಲಿ ಅವರ ಮನೆ ದೇವರ ಹೆಸರಿನಲ್ಲಿ ಕಾಣಿಕೆ  ಡಬ್ಬ ಇಟ್ಟಿದ್ದು ಪ್ರತಿದಿನ ಪಿರ್ಯಾದಿದಾರರು ಹಾಗೂ ಅಂಗಡಿಗೆ ಬರುವ ಗಿರಾಕಿಗಳು ಕಾಣಿಕೆ ಹಾಕುತ್ತಿದ್ದರು.  ಪಿರ್ಯಾದಿದಾರರು ದಿನಾಂಕ 25/09/2021 ರಂದು ಎಂದಿನಂತೆ ಬೆಳಿಗ್ಗೆ 9:00 ಗಂಟೆಗೆ ಅಂಗಡಿಯ ಬಾಗಿಲು ತೆರೆದು ವ್ಯಾಪಾರ ಪ್ರಾರಂಭಿಸಿ ತನ್ನ ಮನೆ ದೇವರ ಕಾಣಿಕೆ ಹುಂಡಿಯನ್ನು ಅಂಗಡಿಯ ಎದುರುಗಡೆ ಇರುವ ಸೆಲ್ಪ್ ರಾಕ್ಸ್ ನಲ್ಲಿ  ಇಟ್ಟಿದ್ದು ಮದ್ಯಾಹ್ನ 02:00 ಗಂಟೆಗೆ ಊಟಕ್ಕೆ ಮನೆಗೆ ಹೋಗಿ ನಂತರ ಸಂಜೆ 3:30 ಗಂಟೆಗೆ ಅಂಗಡಿಗೆ ಬಂದಾಗ ರಾಕ್ಸ್ ನಲ್ಲಿ ಇಟ್ಟಿದ್ದ ಕಾಣಿಕೆ ಡಬ್ಬಿ ಇಟ್ಟ ಜಾಗದಲ್ಲಿ ಇಲ್ಲದೇ ಇದ್ದು ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ. ಅದರಲ್ಲಿ 1,500 ರಿಂದ 2,000/- ರೂಪಾಯಿ ಹಣ ಇದ್ದು ಯಾರೋ ಕಳ್ಳರು ಪಿರ್ಯಾದಿದಾರರು ಅಂಗಡಿಯಲ್ಲಿಇಲ್ಲದೇ ಇದ್ದ ಸಮಯ ನೋಡಿ ಕಾಣಿಕೆ ಡಬ್ಬಿಯನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 89/2021 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಸಂತೋಷ ಸಾಲ್ಯಾನ್ (28), ತಂದೆ: ರವಿ ಶ್ರೀಯಾನ್, ವಾಸ: ಹಳೆ ಹೈಸ್ಕೂಲು ಬಳಿ ಪಿತ್ರೋಡಿ ಪೋಸ್ಟ್, ಉದ್ಯಾವರ ಗ್ರಾಮ ಉಡುಪಿ ತಾಲೂಕು ಇವರ ತಂದೆ ರವಿ ಶ್ರೀಯಾನ್ (64) ರವರು  ಮೀನುಗಾರಿಕೆ ಕೆಲಸವನ್ನು ಮಾಡಿಕೊಂಡಿದ್ದು, ಪ್ರತಿ ದಿನ ಬೆಳಿಗ್ಗೆ 5:00 ಗಂಟೆಗೆ ಮನೆಯ ಬಳಿ ಇರುವ ಪಾಪನಾಶಿನಿ ಹೊಳೆಗೆ ಮೀನು ಹಿಡಿಯಲು ನಡೆದುಕೊಂಡು ಹೋಗುತ್ತಿದ್ದು ದಿನಾಂಕ 27/09/2021 ರಂದು ಕೂಡಾ ಬೆಳಿಗ್ಗೆ 5:00 ಗಂಟೆಗೆ ಮೀನು ಹಿಡಿಯಲು ಮನೆಯಿಂದ ಹೋಗಿದ್ದು, ಮಧ್ಯಾಹ್ನ 2:00 ಗಂಟೆಯಾದರೂ ಮನೆಗೆ ಬಾರದೇ ಇದ್ದುದರಿಂದ ಪಿರ್ಯಾದಿದಾರರು ಮನೆಯ ಆಸುಪಾಸಿನಲ್ಲಿ ವಿಚಾರಿಸಿದ್ದು ಸುಳಿವು ದೊರೆಯದೇ ಇದ್ದುದರಿಂದ ಹೊಳೆಯಲ್ಲಿ ನೀರಿನಲ್ಲಿಮುಳುಗಿರಬಹುದೆಂದು ಸಂಶಯದಿಂದ  ಹೊಳೆನೀರಿನಲ್ಲಿ ಹುಡುಕಾಡಿದ್ದು ದಿನಾಂಕ 27/09/2021 ರಂದು 16:15 ಗಂಟೆಯ ಸಮಯ ಪಾಪನಾಶಿನಿ ಹೊಳೆಯಲ್ಲಿ ಪಿರ್ಯಾದಿದಾರರ ತಂದೆ ರವಿ ಶ್ರೀಯಾನ್‌ ರವರು ಮುಳುಗಿರುವುದು ಕಂಡು ಬಂದಿದ್ದು ಅವರನ್ನು ಮೇಲಕ್ಕೆತ್ತಿ ದಡಕ್ಕೆ ತಂದು ನೋಡಲಾಗಿ ಮೃತಪಟ್ಟಿರುವುದಾಗಿ ತಿಳಿದು ಬಂದಿರುತ್ತದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 33/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
        

ಇತ್ತೀಚಿನ ನವೀಕರಣ​ : 28-09-2021 09:36 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080