ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ:

  • ಕಾಪು: ಪಿರ್ಯಾದಿ ಕಿಶೋರ್ ಪ್ರಾಯ : 42 ವರ್ಷ ತಂದೆ : ಗುಡ್ಡ ಮೆಂಡನ್ ವಾಸ : ಗುಲಾಬಿ ನಿವಾಸ, ಲೈಟ್‌ ಹತ್ತಿರ ಪಡು ಗ್ರಾಮ ಕಾಪು ತಾಲೂಕು ಉಡುಪಿ ಜಿಲ್ಲೆ. ಇವರ ತಮ್ಮ ಗಿರೀಶ ರವರು ಮೀನುಗಾರಿಕೆ ಕೆಲಸ  ಮಾಡಿಕೊಂಡಿದ್ದು, ದಿನಾಂಕ 27-09-2021 ರಂದು ಮೀನುಗಾರಿಕೆಗೆ ಹೋದವನು ಮೀನುಗಾರಿಕೆ ಬೋಟು ಮಂಗಳೂರಿನಲ್ಲಿ ನಿಂತಿದ್ದು, ಮಂಗಳೂರಿನಿಂದ ಮನೆಗೆ ಬಂದಿದ್ದು,   ಸಂಜೆ ಮೀನನ್ನು ಹೆಂಡತಿಯ ಮನೆಯಾದ ಮಂದಾರ್ತಿಗೆ ಕೊಟ್ಟು ರಾತ್ರಿ ಬೋಟಿಗೆ ಹೋಗುವುದಾಗಿ ಹೇಳಿ ಹೋಗಿದ್ದು, ದಿನಾಂಕ 28-09-2021 ರಂದು ಬೆಳಗಿನ ಜಾವ 02.15 ಗಂಟೆಯ ಸಮಯಕ್ಕೆ ಪಿರ್ಯಾದಿದಾರರಿಗೆ  ಸ್ಥಳೀಯರೊಬ್ಬರು ಫೋನ್ ಮಾಡಿ ನಿಮ್ಮ ತಮ್ಮ ಗಿರೀಶ್‌ನಿಗೆ ಬೆಳಗಿನ ಜಾವ 01.00 ಗಂಟೆಯಿಂದ  02.00 ಗಂಟೆಯ ನಡುವಿನ ಸಮಯದಲ್ಲಿ ಏಣಗುಡ್ಡೆ ಗ್ರಾಮದ ಕಿಯಾ ಶೋರೂಮ್ ಸಮೀಪ ಉಡುಪಿ ಮಂಗಳೂರು ರಾ ಹೆ 66 ರಲ್ಲಿ ಉಡುಪಿ ಕಡೆಯಿಂದ ಯಾವುದೋ ವಾಹನ ತನ್ನ ಬಾಬ್ತು  ವಾಹನವನ್ನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಢಿಕ್ಕಿ ಹೊಡೆದು ಪರಾರಿಯಾಗಿದ್ದು, ಗಿರೀಶನು ಗಾಯಗೊಂಡು  ರಸ್ತೆಗೆ ಬಿದ್ದು ಮೃತ ಪಟ್ಟಿರುವುದಾಗಿ ತಿಳಿಸಿದಂತೆ, ಪಿರ್ಯಾದಿದಾರರು ಕೂಡಲೇ ಇತರ ಸಂಬಂಧಿಕರೊಂದಿಗೆ ಸ್ಥಳಕ್ಕೆ ಹೋಗಿ ನೋಡುವಾಗ ಮೃತ ದೇಹ ರಸ್ತೆಯ ಮೇಲೆ ಬಿದ್ದಿದ್ದು, ಪಿರ್ಯಾದಿದಾರರು ಕೂಡಲೇ  ಸ್ಥಳೀಯರ ಸಹಾಯದಿಂದ ಮೃತದೇಹವನ್ನು ಉಡುಪಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಕೊಂಡು ಹೋಗಿ ಮೃತ ಶರೀರವನ್ನು ಇರಿಸಿರುತ್ತಾರೆ. ಪಿರ್ಯಾದಿದರರ ತಮ್ಮ ಗಿರೀಶನು ದಿನಾಂಕ 27.09.2021 ರಂದು ಸಂಜೆ ಮಂದಾರ್ತಿಯ ಹೆಂಡತಿಯ ಮನೆಗೆ ಹೋಗಿ ವಾಪಾಸ್ಸು ಮೀನುಗಾರಿಕೆಗೆ ಹೋಗಲು  ಉಡುಪಿಯಿಂದ ಕಾಪು ಕಡೆಗೆ ಉಡುಪಿ ಮಂಗಳೂರು ರಾ ಹೆ 66 ರ ಮಣ್ಣು ರಸ್ತೆಯಲ್ಲಿ ಪೂರ್ವ ಬದಿಯಲ್ಲಿ ನಡೆದುಕೊಂಡು ಬರುವಾಗ ದಿನಾಂಕ 28.09.2021 ರಂದು ಬೆಳಗಿನ ಜಾವ 01.00 ಗಂಟೆಯಿಂದ 02.00 ಗಂಟೆಯ ನಡುವಿನ ಸಮಯದಲ್ಲಿ ಉಡುಪಿ ಕಡೆಯಿಂದ  ಯಾವುದೋ ವಾಹನದ ಚಾಲಕ ತನ್ನ ಬಾಬ್ತು ವಾಹನವನ್ನು ಅತೀ ವೇಗ  ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಗಿರೀಶನಿಗೆ ಢಿಕ್ಕಿ ಹೊಡೆದು ವಾಹನವನ್ನು ನಿಲ್ಲಿಸದೇ ಪರಾರಿಯಾಗಿದ್ದು, ಪರಿಣಾಮ ಗಿರೀಶನಿಗೆ ತೀವೃ ಗಾಯಗೊಂಡು ರಸ್ತೆಗೆ ಬಿದ್ದು ಸ್ಥಳದಲ್ಲಿಯೇ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಅಪರಾಧ ಕ್ರ ಮಾಂಕ 152/2021  ಕಲಂ 279,  304(A)   ಐ.ಪಿ.ಸಿ ಮತ್ತು 134 (ಎ) ಮತ್ತು (ಬಿ) ಐಎಂ ವಿ ಆಕ್ಟ್ ರಂತೆ ಪ್ರಕರಣ ದಾಖಲಿಸಲಾಗಿದೆ.

 

ಇತರ ಪ್ರಕರಣಗಳು

  • ಕಾಪು: ಮಾನ್ಯ ನ್ಯಾಯಾಲಯದ ಖಾಸಗಿ ದೂರು ನಂಬ್ರ 805/2021 ರ ಸಾರಂಶವೇನೆಂದರೆ ಪಿರ್ಯಾದಿ ಕೆ. ಎಸ್. ನಿಹಾಲ್ ಅಹಮ್ಮದ್  ಪ್ರಾಯ : 23 ವರ್ಷ  ತಂದೆ : ಕೆ. ಎಸ್. ಹಾರೂನ್ ರಶೀದ್ ವಾಸ : ಎ1 ಸಫಾ ಮೆನ್ಶನ್ ಕೊಂಬಗುಡ್ಡೆ, ಮಲ್ಲಾರು ಗ್ರಾಮ ಕಾಪು ತಾಲೂಕು ಇವರ ಚಿಕ್ಕಮ್ಮ ರಜಿಯಾ  ಎಂಬುವರು ಕಾರು ನಂಬ್ರ KA-20 Z -9201 ನೇದರ ಮಾಲಕಿಯಾಗಿದ್ದು, ಆಕೆ ಅನಾರೋಗ್ಯದಿಂದ ಇರುವ ಕಾರಣ ಸದ್ರಿ ಕಾರನ್ನು ತನ್ನ ಸುಪರ್ದಿಗೆ ನೀಡಿದ್ದು, ಸುಮಾರು 2 ತಿಂಗಳ  ಹಿಂದೆ ಆಪಾದಿತ 2 ನೇಯವನು ಫೈಜಾನ್  ಪ್ರಾಯ : 19 ವರ್ಷ  ತಂದೆ : ಪಹಾದ್  ವಾಸ :  ರಿಕ್ಷಾ ನಿಲ್ದಾಣದ ಎದುರು, ಸ್ವಾಗತ್ ನಗರ,  ಮಜೂರು ಗ್ರಾಮ  ಕಾಪು ತಾಲೂಕು ಪಿರ್ಯಾದಿದಾರರಿಗೆ ಕರೆ ಮಾಡಿ ಆರೋಪಿ 1 ನೇಯವರು 1) ದೃಶ್ಯ ಪ್ರಾಯ : 22 ವರ್ಷ  ತಂದೆ : ದಿ. ದಿನೇಶ ವಾಸ : ಗ್ಲೋಬಲ್ ರೆಸಿಡೆನ್ಸಿ, ವಿಶ್ವನಾಥ ದೇವಸ್ಥಾನದ ಹತ್ತಿರ ಕಟಪಾಡಿ, ಕಾಪು ತಾಲೂಕು ಉಡುಪಿ ಜಿಲ್ಲೆ, ಇವರ  ಮದುವೆಯ ಸಮಾರಂಭದ ಬಗ್ಗೆ 15 ದಿನಗಳ ಬಗ್ಗೆ ಕಾರು ನೀಡುವಂತೆ ತಿಳಿಸಿ ಆಪಾದಿತ 1 ನೇಯವರ ಚಾಲನಾ ಪರವಾನಿಗೆಯನ್ನು ತೋರಿಸಿದ್ದು, ಆಪಾದಿತ 1 ನೇಯವರು ಕಾರನ್ನು ತೆಗೆದುಕೊಂಡು ಹೋಗಿದ್ದು ಕಾರನ್ನು ವಾಪಸ್ಸು ನೀಡದೆ ಇದ್ದು, ಈ ಬಗ್ಗೆ ಆಪಾದಿತ 1 ನೇಯವರಿಗೆ ಕರೆ ಮಾಡಿದಾಗ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, 4 ದಿನಗಳ ನಂತರ ಪಿರ್ಯಾದಿದಾರರು ಆಪಾದಿತ 1 ನೇಯವರಿಗೆ ಕರೆ ಮಾಡಿದಾಗ ತಾನು ಕಾರನ್ನು  ಹಾಸನ ಗ್ಯಾರೇಜ್ ನಲ್ಲಿಟ್ಟಿದ್ದು, ಗ್ಯಾರೇಜ್ ನ ಮಾಲಕರ ಮೊಬೈಲ್ ನಂಬ್ರ ನೀಡಿದ್ದು ಅವರಿಗೆ ಕರೆ ಮಾಡಿ ವಿಚಾರಿಸಿದಾಗ ಆಪಾದಿತ 1 ನೇಯವರು ಕಾರನ್ನು 2,00,000/- ರೂಗಳಿಗೆ ಗ್ಯಾರೇಜ್ ನ ಮಾಲಕರಿಗೆ ಮಾರಿರುವುದಾಗಿ ತಿಳಿಸಿದ್ದು, ಪಿರ್ಯಾದಿದಾರರು ಈ ಬಗ್ಗೆ ವಿಚಾರಿಸಿದಾಗ ಆಪಾದಿತ 1 ನೆಯವರು ಕಾರಿನ ನಕಲಿ ದಾಖಲೆ ಸೃಷ್ಠಿಸಿ ಮಾರಾಟ ಮಾಡಿರುವುದಾಗಿ ತಿಳಿದು ಬಂದಿರುತ್ತದೆ. ಪಿರ್ಯಾದಿದಾರರು ಆಪಾದಿತನ ಮೇಲೆ ಒಳ್ಳೆಯ ನಂಬಿಕೆಯಿಂದ ಕಾರನ್ನು ನೀಡಿದ್ದು, ಆದರೆ ಆರೋಪಿಗಳು ಪಿರ್ಯಾದಿದಾರರನ್ನು ವಂಚಿಸಿ ಕಾರನ್ನು ಮಾರಾಟ ಮಾಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 153-2021 ಕಲಂ 406 420 468 ಜೊತೆ ಗೆ  34 ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ:

  • ಹಿರಿಯಡ್ಕ: ಪಿರ್ಯಾದಿ ಸುಮತಿ (40 )  ಗಂಡ: ಸುರೇಂದ್ರ ವಾಸ: ಕಡೆಬೆರ್ಕೆ ದರ್ಖಾಸು  ಕಣಜಾರು ಗ್ರಾಮ  ಕಾರ್ಕಳ ತಾಲೂಕು ಉಡುಪಿ ಜಿಲ್ಲೆ ಇವರ ಮಗ ಸುಮಾರು 16 ವರ್ಷದ ಪ್ರಾಯದ ಸೂರಜ್ ಎಂಬುವನು ಹಿಂದಿನಿಂದಲೂ ಕುಡಿತದ ಚಟವನ್ನು ಹೊಂದಿದ್ದು ಕುಡಿತದ ಚಟದಿಂದಲೇ ಕಳೆದ 1 ವಾರದಿಂದ ಮಾನಸಿಕವಾಗಿ ಅಸ್ವಸ್ತನಾಗಿದ್ದು ,ಮನೆಯಲ್ಲಿ ಯಾರೊಂದಿಗೂ ಬೆರೆಯದೇ ಇದ್ದು , ಇದೇ ಬೇಸರದಲ್ಲಿ ಜೀವನದಲ್ಲಿ ಬೇಸರಗೊಂಡು ದಿನಾಂಕ 27/09/2021 ರ ರಾತ್ತಿ 20:00 ಗಂಟೆಯಿಂದ ರಾತ್ರಿ 22:30 ಗಂಟೆಯ ಮದ್ಯಾವಧಿಯಲ್ಲಿ ಅಜಿತ್ ಶೆಟ್ಟಿರವರಿಗೆ ಸೇರಿದ ಅನುಬೋಗದ ಜಾಗದಲ್ಲಿ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ .ಈ ಬಗ್ಗೆ ಮೃತರ ಮರಣದಲ್ಲಿ  ಯಾವುದೇ ಸಂಶಯ ಇರುವುದಿಲ್ಲ .ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣಾ ಯುಡಿಆರ್ ನಂಬ್ರ:21/2021 ಕಲಂ: 174 ಸಿಆರ್ ಪಿಸಿ ರಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 28-09-2021 09:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080