ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

 • ಬ್ರಹ್ಮಾವರ: ಬ್ರಹ್ಮಾವರ ತಾಲೂಕು ಉಪ್ಪೂರು ಗ್ರಾಮದ ಉಪ್ಪೂರು ತೆಂಕಬೆಟ್ಟುವಿನ ಬಾಡಿಗೆ ಮನೆಯ ಪಕ್ಕದ ಶ್ರೀಮತಿ ಅಖಿಲ್‌ ಶೆಡ್ತಿಯವರ ಮನೆಯಲ್ಲಿ ಈ ಹಿಂದ ಕೆಲಸ ಮಾಡಿಕೊಂಡಿದ್ದ ಸುಲೋಚನವ್ವ (62) ರವರು  ದಿನಾಂಕ 27/08/2022 ರಂದು ಬೆಳಿಗ್ಗೆ ಶ್ರೀಮತಿ ಅಖಿಲ್‌ ಶೆಟ್ಟಿಯವರ ತಾಯಿ ಶ್ರೀಮತಿ ಲಲಿತ್‌ ಬಿ ಶೆಟ್ಟಿಯವರು ಅನಾರೋಗ್ಯದಲ್ಲಿರುವುದರಿಂದ ಮಾತನಾಡಿಸಲು ಬಂದವರು ರಾತ್ರಿ ಅಲ್ಲಿಯೇ ತಂಗಿದ್ದು,  ದಿನಾಂಕ 28/08/2022 ರಂದು ಬೆಳಿಗ್ಗೆ 7:00 ಗಂಟೆಯ ಹೊತ್ತಿಗೆ  ಸುಲೋಚನವ್ವರವರು ಶೌಚಾಲಯಕ್ಕೆ ಹೋದವರು  ಮನೆಯ ಹಿಂದುಗಡೆ ಇರುವ ನಳ್ಳಿ ನೀರಿನ ಬಳಿ ಮುಖ ತೊಳೆಯುವಾಗ ಆಯತಪ್ಪಿ ಕುಸಿದು ಬಿದ್ದವರನ್ನು ಆವರ ಮನೆಯ ಕೆಲಸದವರಾದ ಪಾರಮ್ಮ ನೋಡಿದ್ದು, ಕೂಡಲೇ ಶ್ರೀಮತಿ ಅಖಿಲ್‌ ಶೆಡ್ತಿಯವರು ಸುಲೋಚನವ್ವರನ್ನು ಎತ್ತಿ ಉಚಚರಿಸಿ ಹತ್ತಿರದ ವೈದ್ಯರಾದ ಡಾ|| ಶಶಿಧರ ರವರನ್ನು ಕರೆಯಿಸಿ ಪರೀಕ್ಷಿಸಿ ಅವರ ಸಲಹೆಯಂತೆ  ಬ್ರಹ್ಮಾವರದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ   ಕರೆದುಕೊಂಡು ಬಂದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಸುಲೋಚನವ್ವ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಶ್ರೀಮತಿ ಸುಲೋಚನವ್ವರವರು ದಿನಾಂಕ  28/08/2022 ರಂದು ಬೆಳಿಗ್ಗೆ 7:30 ಗಂಟೆಯಿಂದ 10:05 ಗಂಟೆಯ ಮಧ್ಯಾವಧಿಯಲ್ಲಿ  ಹೃದಯಘಾತದಿಂದಲೋ  ಅಥವಾ ಬೇರೆ ಯಾವುದೋ ಕಾರಣದಿಂದಲೋ ಕುಸಿದು ಬಿದ್ದು ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 41/2022 ಕಲಂ: 174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಹೆಬ್ರಿ: ಪಿರ್ಯಾದಿದಾರರಾದ ವಿನಯ ಶೆಟ್ಟಿ (38), ತಂದೆ: ರಾಜಗೋಪಾಲ ಶೆಟ್ಟಿ, ವಾಸ: ವಾಂಟ್ಯಾಳ ಸೀತಾನದಿ ನಾಡ್ಪಾಲು ಗ್ರಾಮ ಹೆಬ್ರಿ ತಾಲೂಕು ಇವರ  ತಂದೆ ರಾಜಗೋಪಾಲ ಶೆಟ್ಟಿ (68) ರವರು ಶಿಕ್ಷಕ ಕೆಲಸ ಮಾಡಿಕೊಂಡಿದ್ದು 8 ವರ್ಷಗಳ ಹಿಂದೆ ನಿವೃತ್ತಿಯನ್ನು ಹೊಂದಿರುತ್ತಾರೆ. ಪ್ರಸ್ತುತ ಕೃಷಿ ಕೆಲಸವನ್ನು ಮಾಡಿಕೊಂಡಿರುತ್ತಾರೆ.  ದಿನಾಂಕ 28/08/2022 ರಂದು ಬೆಳಿಗ್ಗೆ 10:30 ಗಂಟೆಗೆ ನಾಡ್ಪಾಲು ಗ್ರಾಮದ ವಾಂಟ್ಯಾಳ ಸೀತಾನದಿ ಎಂಬಲ್ಲಿರುವ ಅವರ ಮನೆಯ ಬಳಿ ತೋಟದಲ್ಲಿರುವ ಬೋಗಿ ಮರಕ್ಕೆ ಕಬ್ಬಿಣದ ಏಣಿಯನ್ನು ಹಾಕಿ ಸುಮಾರು 20 ಅಡಿ ಮರವನ್ನು ಹತ್ತಿ ಕತ್ತಿಯಿಂದ ಸೊಪ್ಪನ್ನು ಕಡಿಯುತ್ತಿರುವಾಗ ಆಕಸ್ಮಿಕವಾಗಿ ಅವರ ಕಾಲು ಜಾರಿ ನೆಲಕ್ಕೆ ಬಿದ್ದಿರುತ್ತಾರೆ. ಅವರನ್ನು ಮನೆಯವರು ಎಬ್ಬಿಸಿ ಉಪಚರಿಸಿ ನೋಡಿದಾಗ ಅವರು ಮಾತನಾಡುತ್ತಿರಲಿಲ್ಲ ರಾಜಗೋಪಾಲ ಶೆಟ್ಟಿ ರವರನ್ನು ಹೆಬ್ರಿ ಸರಕಾರಿ ಆಸ್ಪತ್ರೆಗೆ ಬೆಳಿಗ್ಗೆ 11:50 ಗಂಟೆಗೆ ಕರೆದುಕೊಂಡು ಬಂದು ವೈದ್ಯರಲ್ಲಿ ತೋರಿಸಿದಾಗ ವೈದ್ಯರು ಅವರನ್ನು ಪರೀಕ್ಷಿಸಿ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ . ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 26/2022 ಕಲಂ: 174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಹೆಬ್ರಿ: ಪಿರ್ಯಾದಿದಾರರಾದ ನಾಗರಾಜ (30), ತಂದೆ: ಕೃಷ್ಣಯ್ಯ ಆಚಾರ್ಯ , ವಾಸ: ಗಾಂಧಿನಗರ ಕೆ ಇ ಬಿ ಕಛೇರಿಯ ಬಳಿ ಚಾರಾ ಗ್ರಾಮ ಹೆಬ್ರಿ ತಾಲೂಕು ಇವರ ತಂದೆ ಕೃಷ್ಣಯ್ಯ ಅಚಾರ್ಯ (65) ಇವರು ದಿನಾಂಕ 19/08/2022 ರಂದು ಕಾಣೆಯಾಗಿರುವ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ದಿನಾಂಕ 28/08/2022 ರಂದು ಬೆಳಿಗ್ಗೆ 10:30 ಗಂಟೆಗೆ ಹೆಬ್ರಿ ವಲಯ ಅರಣ್ಯ ಕಛೇರಿಯ ಅವರಣದ ಒಳಗಡೆ ಬಲಭಾಗದಲ್ಲಿರುವ ಅರಣ್ಯ ಪ್ರದೇಶದಲ್ಲಿ ಸಂಪೂರ್ಣ ಕೊಳೆತು ಹೋಗಿರುವ ಮೃತದೇಹವನ್ನು ಪಿರ್ಯಾದಿದಾರರು ನೋಡಿ ಅವರು ಧರಿಸಿರುವ ಕಪ್ಪು ಬಣ್ಣದ ಬರ್ಮುಡಾ ಚಡ್ಡಿ ಮತ್ತು ಬಿಳಿ ಬಣ್ಣದ ಅದರಲ್ಲಿ ಗೆರೆಗಳಿರುವ ಷರ್ಟ್ ನ್ನು ನೋಡಿ ಗುರುತಿಸಿ ಇದು ನನ್ನ ತಂದೆ ಕೃಷ್ಣಯ್ಯ ಅಚಾರ್ಯ ಇವರ ಮೃತದೇಹ ಎಂದು ಗುರುತಿಸಿದ್ದು. ಕೃಷ್ಣಯ್ಯ ಅಚಾರ್ಯ ಇವರಿಗೆ ನೆನಪಿನ ಶಕ್ತಿ ಕಡಿಮೆ ಇದ್ದ ಕಾರಣ ವಾಪಾಸು ಮನೆಗೆ ಬರಲು ಅಗದೇ ಹೆಬ್ರಿ ವಲಯ ಅರಣ್ಯ ಕಛೇರಿಯ ಅವರಣದ ಒಳಗೆ ಇರುವ ಅರಣ್ಯ ಪದೇಶದಲ್ಲಿ ನಡೆದು ಕೊಂಡು ಹೋಗಿ ಅನ್ನಾಹಾರ ಇಲ್ಲದೇ ಅಲ್ಲಿಯೇ ಕಾಡಿನಲ್ಲಿ ಬಿದ್ದು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 27/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.                     

ಇತರ ಪ್ರಕರಣ

 • ಕುಂದಾಪುರ: ದಿನಾಂಕ 27/08/2022 ರಂದು ಪವನ್‌ ನಾಯಕ್‌, ಪೊಲೀಸ್‌ ಉಪನಿರೀಕ್ಷಕರು, ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಇವರು ಸಿಬ್ಬಂದಿಯವರ ಜೊತೆ ರೌಂಡ್ಸ್‌ ಕರ್ತವ್ಯದಲ್ಲಿರುವ ಸಮಯ  ಕುಂದಾಪುರ ತಾಲೂಕು ಕಾವ್ರಾಡಿ ಗ್ರಾಮದ ಮುಳ್ಳು ಗುಡ್ಡೆ ಸೌಪರ್ಣೆಕ ಶಾಮಿಯಾನದ ಬಳಿ ರಾಘವೇಂದ್ರ ಆಚಾರ್ಯ (30) ಎಂಬಾತ ಗಾಂಜಾ  ಸೇವಿಸುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ  ಸ್ಥಳಕ್ಕೆ ಹೋಗಿ ಆರೋಪಿಯನ್ನು ಕುಂದಾಪುರ ಶ್ರೀ ಮಾತಾ ಆಸ್ಪತ್ರೆಯ ವೈದ್ಯಾಧಿಕಾರಿವರ ಮುಂದೆ ಹಾಜರುಪಡಿಸಿದಲ್ಲಿ ವೈದ್ಯಾಧಿಕಾರಿಯವರು  ಆರೋಪಿತನನ್ನು   ಪರೀಕ್ಷಿಸಿ   ಗಾಂಜಾ ಸೇವನೆ  ಮಾಡಿದ್ದಾಗಿ  ದೃಢಪತ್ರವನ್ನು ದಿನಾಂಕ 28/08/2022 ರಂದು ನೀಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 40/2022 ಕಲಂ: 27(B) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 28-08-2022 05:54 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080