ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ದಿನಾಂಕ 26/08/2022 ರಂದು ಪಿರ್ಯಾದಿದಾರರಾದ ನಿತ್ಯಾನಂದ (40), ತಂದೆ: ಗೋಪು ಪೂಜಾರಿ, ವಾಸ: ಶ್ರೀ ಗೋಪಾಲ, ಯಾಳಹಕ್ಲು ವಡ್ಡೆರ್ಸೆ ಗ್ರಾಮ, ಬನ್ನಾಡಿ ಅಂಚೆ, ಬ್ರಹ್ಮಾವರ ತಾಲೂಕು ಇವರು  ತನ್ನ ಕಾರಿನಲ್ಲಿ ವಡ್ಡೆರ್ಸೆ ಯಿಂದ ಸ್ಯಾಬ್ರಕಟ್ಟೆ ಕಡೆಗೆ ಹೋಗುತ್ತಿರುವಾಗ ಮಧ್ಯಾಹ್ನ 01:00 ಗಂಟೆಗೆ ಮಧುವನ ಜಂಕ್ಷನ್ ಬಳಿ ತಲುಪಿದಾಗ ಸ್ಯಾಬ್ರಕಟ್ಟೆಯಿಂದ ಕೋಟ ಮೂರುಕೈ ಕಡೆಗೆ KA-20-EH-4686 ನೇ ಟಿವಿಎಸ್ ಸ್ಟಾರ್ ಸಿಟಿ ಬೈಕನ್ನು ಅದರ ಸವಾರ ಚಲಾಯಿಸಿಕೊಂಡು ಬರುತ್ತಿರುವಾಗ ಶಾಂತಿ ನಗರ ಪಡುಮಾನಂಬಳ್ಳಿ ಕಡೆಯಿಂದ KA-20-EP-3611 TVS ಸ್ಕೂಟರ ಸವಾರ ಸಾಧಿಕ್ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಒಮ್ಮೇಲೆ ಮುಖ್ಯ ರಸ್ತೆಗೆ ಬಂದು ಪಿರ್ಯಾದಿದಾರರ ಎದುರಿನಿಂದ ಬರುತ್ತಿದ್ದ KA-20-EH-4686 ನೇ ಟಿವಿಎಸ್ ಸ್ಟಾರ್ ಸಿಟಿ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ತಲೆಗೆ ತೀವೃ ಗಾಯವಾಗಿದ್ದು,ಮಾತನಾಡುತ್ತಿರಲಿಲ್ಲ.ಗಾಯೊಂಡವರು ಸಾಸ್ತಾನದ ಶಂಭು ಪೂಜಾರಿ (50) ಎಂಬುವವರಾಗಿದ್ದು ಅವರನ್ನು  ಕೂಡಲೇ ಒಂದು  ವಾಹನದಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 136/2022 ಕಲಂ: 279 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಪಿರ್ಯಾದಿದಾರರಾದ ರಂಜಿತ್ ಕುಮಾರ್ (42), ತಂದೆ: ಶಿವಾನಂದ,  ವಾಸ: ಶ್ರೀ ಗಣೇಶ್ ಕೃಪಾ , ಕುದಿ  - 82 , ಕೊಡಿಬೆಟ್ಟು ಅಂಚೆ, ಉಡುಪಿ ತಾಲೂಕು ಇವರು ದಿನಾಂಕ  27/08/2022 ರಂದು KA-20-EA-2112 ನೇ ಮೋಟಾರ್ ಸೈಕಲ್ ನಲ್ಲಿ ಸ್ನೇಹಿತ ಪ್ರಶಾಂತ ಎಂಬುವವರನ್ನು ಹಿಂಬದಿ ಸವಾರನನ್ನಾಗಿ ಕುಳ್ಳಿರಿಸಿಕೊಂಡು ಹಿರೇಬೆಟ್ಟು ಗ್ರಾಮದ  ಕೊಡಿ ಬೆಟ್ಟು ಕಡೆಯಿಂದ ಪಟ್ಲ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿರುವಾಗ ಮದ್ಯಾಹ್ನ 03:30 ಗಂಟೆಗೆ ಕೆಮ್ಮಣ್ಣು ಬೈಲ್ ಎಂಬಲ್ಲಿ  ತಲುಪುವಾಗ ಆರೋಪಿತ ಸಂತೋಷ ಪೂಜಾರಿ ತನ್ನ KA-20-AB-4491 ನೇ ಆಟೋ ರಿಕ್ಷಾವನ್ನು ಪಟ್ಲ ಕಡೆಯಿಂದ ಕೊಡಿಬೆಟ್ಟು ಕಡೆಗೆ ಚಲಾಯಿಸಿಕೊಂಡು ಬಂದು ಕೆಮಣ್ಣು ಬೈಲು ಎಂಬಲ್ಲಿ ತಲುಪಿದಾಗ ತೀರಾ ಬಲ ಬದಿಗೆ ಚಲಾಯಿಸಿ ಪಿರ್ಯಾದಿದಾರರ ಮೋಟಾರ್ ಸೈಕಲ್ ಗೆ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮತ್ತು ಹಿಂಬದಿಯ ಸವಾರ ಪ್ರಶಾಂತ ಇಬ್ಬರು ಮೋಟಾರ್ ಸೈಕಲ್ ಸಮೇತ್ ರಸ್ತೆಗೆ ಬಿದ್ದಿದ್ದು ಪಿರ್ಯಾದಿದಾರರಿಗೆ ಬಲಕೈ ಮತ್ತು ಬಲಕಾಲಿಗೆ ಗಾಯವಾಗಿದ್ದು ಹಿಂಬದಿಯ ಸವಾರನಾದ ಪ್ರಶಾಂತ್ ರವರಿಗೆ  ತಲೆಗೆ ಮತ್ತು ಬಲಕಾಲಿಗೆ ಗಾಯವಾಗಿರುತ್ತದೆ.  ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 121/2022  ಕಲಂ: 279 , 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿರ್ಯಾದಿದಾರರಾದ ಮೊಹಮ್ಮದ್ ಇಕ್ಬಾಲ್ (50), ತಂದೆ: ದಿ| ಜಿ.ಎಂ ಯಾಕೂಬ್ , ವಾಸ: ವಾಟರ್ ಟ್ಯಾಂಕ್ ಹತ್ತಿರ, ಗಂಗೊಳ್ಳಿ ಮೈನ್ ರೋಡ್, ಗಂಗೊಳ್ಳಿ ಗ್ರಾಮ, ಕುಂದಾಪುರ ತಾಲೂಕು ಉಡುಪಿ ಜಿಲ್ಲೆ ಇವರು  ದಿನಾಂಕ 27/08/2022 ರಂದು ತನ್ನ  KA-20-AA-7801 ನೇ ದೋಸ್ತ್‌ ವಾಹನದಲ್ಲಿ ಮೀನನ್ನು ಲೋಡ್ ಮೀನಿನ ಮಾಲಕರಾದ ದಿನಕರ.ಕೆ ರವರೊಂದಿಗೆ ಗಂಗೊಳ್ಳಿ ಬಂದಿರಿನಿಂದ ಹೊರಟು ರಾಷ್ಟ್ರೀಯ ಹೆದ್ದಾರಿ 66 ರ ಏಕಮುಖ ಸಂಚಾರ  ರಸ್ತೆಯಲ್ಲಿ  ಮಂಗಳೂರು ಕಡೆಗೆ ಹೋಗುತ್ತಾ  ಸಂಜೆ 6:30 ಗಂಟೆಗೆ ಮೂಳೂರು ಗ್ರಾಮದ  ಸಿ.ಎಸ್.ಐ ಚರ್ಚ್ ಶಾಲೆಯ ಬಳಿ  ತಲುಪುತ್ತಿದ್ದಂತೆ ಅದೇ ರಸ್ತೆಯಲ್ಲಿ ಪಿರ್ಯಾದಿದಾರರ ವಾಹನದ ಹಿಂದಿನಿಂದ ಓರ್ವ  ಬಸ್ಸಿನ ಚಾಲಕ ತನ್ನ ಬಸ್ಸನ್ನು ತೀರಾ ವೇಗ & ತೀವೃ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ದೋಸ್ತ್‌ ವಾಹನದ ಎಡಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ  ದೋಸ್ತ್‌ವಾಹನವು ಪಲ್ಟಿಯಾಗಿ ಮಂಗಳೂರು-ಉಡುಪಿ ಏಕಮುಖ ರಸ್ತೆಯ ಪಶ್ಚಿಮ ಅಂಚಿನಲ್ಲಿ ಮಗುಚಿ ಬಿದ್ದು, ಸಂಪೂರ್ಣ ಜಖಂ ಗೊಂಡಿರುತ್ತದೆ. ಢಿಕ್ಕಿ ಹೊಡೆದ ಬಸ್ಸಿನ ಚಾಲಕ ಬಸ್ಸನ್ನು ನಿಲ್ಲಿಸದೇ  ಪರಾರಿಯಾಗಿರುವುದಾಗಿದೆ.  ಈ ಅಪಘಾತದಿಂದ ಪಿರ್ಯಾದಿದಾರರ  ಬಲಗೈನ ಮೊಣಗಂಟಿನ ಬಳಿ ತರಚಿದ ಗಾಯವಾಗಿದ್ದು, ದಿನಕರ. ಕೆ ರವರಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 92/2022 ಕಲಂ: 279, 337 ಐಪಿಸಿ ಮತ್ತು ಕಲಂ: 134(ಎ)(ಬಿ) ಐ.ಎಂ. ವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಪ್ರಸನ್ನ ಸುಬ್ರಾಯ(27), ತಂದೆ:ಸುಬ್ರಾಯ ಆಚಾರ್ಯ, ವಾಸ:ಅಲ್ಬಾಡಿ ಗ್ರಾಮ, ಬೆಳ್ವೆ ಹೆಬ್ರಿ ಕುಂದಾಪುರ ತಾಲೂಕು ಇವರ ತಂದೆ ಸುಬ್ರಾಯ ಆಚಾರ್ಯ(52) ರವರು ದಿನಾಂಕ 24/08/2022 ರಂದು ಬೆಳಿಗ್ಗೆ 08:30 ಗಂಟೆಗೆ  ಅಲ್ಬಾಡಿಯಿಂದ ಹೊರಟು ಮೂಲ ಮನೆಯಾದ ತೆಂಕಬೈಲು(ಎಡಮೊಗೆ)  ಹೋದವರು ಪಿರ್ಯಾದಿದಾರರ ಚಿಕ್ಕಪ್ಪನ ಬಳಿ ತನ್ನ ಗ್ಯಾರೇಜ್‌ಗೆ ಹೋಗುವುದಾಗಿ ತಿಳಿಸಿ ಹೋಗಿರುತ್ತಾರೆ. ನಂತರ ಮಧ್ಯಾಹ್ನ 03:00 ಗಂಟೆ ಸಮಯ ಸುಬ್ರಾಯ ಆಚಾರ್ಯ ರವರು ಪಿರ್ಯಾದಿದಾರರ ತಮ್ಮನಿಗೆ ಮಿಸ್ ಕಾಲ್ ಕೊಟ್ಟಿದ್ದು ಬಳಿಕ ಸುಬ್ರಾಯ ಆಚಾರ್ಯ ರವರ ಮೊಬೈಲ್ ಸ್ವಿಚ್  ಆಫ್‌ ಆಗಿರುತ್ತದೆ. ಬಳಿಕ ಪಿರ್ಯಾದಿದಾರರ ತಮ್ಮ ಹಾಗೂ ಇತರರು ಸುಬ್ರಾಯ ಆಚಾರ್ಯ ರವರನ್ನು ಹುಡುಕಾಡುವ ಸಮಯ ಸುಬ್ರಾಯ ಆಚಾರ್ಯರ  ಬೈಕ್, ಮೊಬೈಲ್ ಹಾಗೂ ಚಪ್ಪಲಿ ಹಾಲಾಡಿ ಸೇತುವೆ ಬಳಿ ಕಂಡು ಬಂದಿದ್ದು ಈ ಬಗ್ಗೆ ಪಿರ್ಯಾದಿದಾರರು ಕಾಣೆಯಾಗಿದ್ದಾಗಿ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತಾರೆ.  ದಿನಾಂಕ 27/08/2022 ರಂದು ಬೆಳಿಗ್ಗೆ 11:00 ಗಂಟೆ ಸಮಯಕ್ಕೆ ಪಿರ್ಯಾದಿದಾರರ ಪರಿಚಿತರೊಬ್ಬರು  ಕರೆ ಮಾಡಿ ಮೃತ ದೇಹವೊಂದು ಜಪ್ತಿ  ಗ್ರಾಮದ ನಂದಿಕೇಶ್ವರ ದೇವಸ್ಥಾನ ಬಳಿ ವಾರಾಹಿ ನದಿ ಕುದ್ರು ಎಂಬಲ್ಲಿ ಹೊಳೆಯಲ್ಲಿ ತೇಲುತ್ತಿರುವುದಾಗಿ ತಿಳಿಸಿದ್ದು. ಅದರಂತೆ ಪಿರ್ಯಾದಿದಾರರು ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಮೃತ ದೇಹವು ಫಿರ್ಯಾದಿದಾರರ ತಂದೆ ಸುಬ್ರಾಯ ಆಚಾರ್ಯ ರವರದ್ದಾಗಿರುತ್ತದೆ. ಸುಬ್ರಾಯ ಆಚಾರ್ಯ ರವರು ಗ್ಯಾರೇಜ್ ವ್ಯವಹಾರದಲ್ಲಿ ಅಧಿಕ ನಷ್ಟ ಅನುಭವಿಸಿದ್ದು ಇದರಿಂದ ಮನನೊಂದು ದಿನಾಂಕ 24/08/2022 ರಂದು ಸಂಜೆ 07:30 ಗಂಟೆಯಿಂದ ದಿನಾಂಕ 27/08/2022 ರಂದು 11:00 ಗಂಟೆಯ ಮಧ್ಯೆ ನೀರಿಗೆ ಹಾರಿ ಮೃತಪಟ್ಟಿರುವುದಾಗಿದೆ; ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 25/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ಪಿರ್ಯಾದಿದಾರರಾದ ಶೈಲೇಶ್ ಎಮ್ ಹೆಗ್ಡೆ (47)  ,ತಂದೆ:ಮಹಾಬಲ ಹೆಗ್ಡೆ , ವಾಸ: ಕಡೇಕಾರು ಇವರ ಅಣ್ಣ ಉಮೇಶ ಹೆಗ್ಡೆ (54)  ರವರು  ದಿನಾಂಕ  21/08/2022 ರಂದು  ಗೋವಾದಿಂದ ಮನೆಯಾದ ಕಡೇಕಾರಿಗೆ   ಬಂದಿದ್ದು , ದಿನಾಂಕ 26/08/2022 ರಂದು  ರಾತ್ರಿ ಊಟ ಮಾಡಿ 11:00 ಗಂಟೆಗೆ ಮಲಗಿದ್ದು ,ದಿನಾಂಕ 27/08/2022 ರಂದು ಬೆಳಿಗ್ಗೆ 11:00 ಗಂಟೆ ಆದರೂ ತಿಂಡಿಗೆ ಬರದಿರುವುದನ್ನು ನೋಡಿ ಪಿರ್ಯಾದಿದಾರರು ರೂಮಿಗೆ ಹೋಗಿ ನೋಡಲಾಗಿ  ರೂಮಿಗೆ ಅಳವಡಿಸಿದ ಸೀಲಿಂಗ್ ಪ್ಯಾನಿಗೆ ಬೆಡ್  ಶೀಟ್ ನ್ನು ಕಟ್ಟಿ  ಕುತ್ತಿಗೆಗೆ  ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.  ಪಿರ್ಯಾದಿದಾರರ ಅಣ್ಣ ಉಮೇಶ ಹೆಗ್ಡೆ  ವ್ಯವಹಾರದಲ್ಲಿ ನಷ್ಟ ಉಂಟಾಗಿ  ಆರ್ಥೀಕ ಮುಗ್ಗಟ್ಟಿನಿಂದ ಖಿನ್ನತೆ ಗೆ ಒಳಗಾಗಿ ದಿನಾಂಕ 26/08/2022 ರಂದು ರಾತ್ರಿ 11:00 ಗಂಟೆಯಿಂದ ದಿನಾಂಕ 27/08/2022 ರಂದು  ಬೆಳಿಗ್ಗೆ  11:00 ಗಂಟೆಯ ಮಧ್ಯಾವಧಿಯಲ್ಲಿ ಬೆಡ್ ರೂಮಿನಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 47/2022  ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಬಸಂತ್‌ ಕುಂದರ್‌ (36), ತಂದೆ: ದಿ. ನಾರಾಯಣ್‌ ಸುವರ್ಣ,  ವಾಸ: ಶ್ರೀ ನಾರಾಯಣ ನಿಲಯ, ಬಿಲ್ಲುಗುಡ್ಡೆ, ಕೊಡವೂರು ಗ್ರಾಮ ಮತ್ತು ಅಂಚೆ, ಉಡುಪಿ ತಾಲೂಕು ಇವರ ವಾಸ್ತವ್ಯದ ಬಾಡಿಗೆ ಮನೆಯಾದ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಬುದಗಿ ದೊಡ್ಡಣಗುಡ್ಡೆಯಲ್ಲಿರುವ ಮನೆಯ ಎದುರು ನಿಲ್ಲಿಸಿದ್ದ ಅವರ ಮಾಲೀಕತ್ವದ ಬಜಾಜ್ ಪಲ್ಸರ್ ಮೋಟಾರ್‌ಸೈಕಲ್‌ನಂಬ್ರ KA-20-EA-8701 ನೇದನ್ನು ದಿನಾಂಕ 24/08/2022 ರಂದು ರಾತ್ರಿ 08:30 ಗಂಟೆಯಿಂದ ದಿನಾಂಕ 25/08/2022 ರಂದು ಬೆಳಿಗ್ಗೆ 03:00 ಗಂಟೆ ನಡುವಿನ ಸಮಯದಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸ್ಕೂಟರ್‌ನ ಮೌಲ್ಯ ರೂಪಾಯಿ 40,000/- ಆಗಿರುತ್ತದೆ.  ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 134/2022 ಕಲಂ:  379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಕಾಣೆ ಪ್ರಕರಣ

  • ಮಲ್ಪೆ: ಪಿರ್ಯಾದಿದಾರರಾದ ಇರ್ಲಾಂಗ್ ((42, ತಂದೆ: ಸೆಲ್ಲಂ, ವಾಸ: ತಮಿಳುನಾಡು ಇವರು ಶ್ರೀ ಕಿರಣ್  ಎಂಬ ಮೀನುಗಾರಿಕೆ  ಬೋಟಿನಲ್ಲಿ  ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 21/08/2022  ರಂದು  ಶ್ರೀ ಕಿರಣ್   ಬೋಟಿನಲ್ಲಿ ಕಲಾಸಿಯಾಗಿ  ಮೂರ್ತಿ, ರವಿ, ಸ್ವಾಮಿ, ಸೂರಿ,ಸ ತ್ಯರಾಜ್, ನಾರಾಯಣ ಸ್ವಾಮಿ,  ಬೋಜ ರಾಜ್  ,ಪಂಗರ್ ರಾಜ್  ಇವರೊಂದಿಗೆ  ಅರಬ್ಬೀಸಮುದ್ರದಲ್ಲಿ  ಮೀನುಗಾರಿಕೆ  ಮಾಡುತ್ತಿರುವಾಗ ದಿನಾಂಕ 24/08/2022 ರಂದು ರಾತ್ರಿ 1:00 ಗಂಟೆಯ ಸಮಯಕ್ಕೆ   ಪಿರ್ಯಾದಿದಾರರ  ಜೊತೆ  ಮೀನುಗಾರಿಕೆ ಕೆಲಸ  ಮಾಡುತ್ತಿದ್ದ  ರವಿ (43)  ಇವರು ಆಕಸ್ಮಿಕವಾಗಿ   ಕಾಲು ಜಾರಿ  ಸಮುದ್ರಕ್ಕೆ ಬಿದ್ದು  ಕಾಣೆಯಾಗಿರುತ್ತಾರೆ . ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 72/2022 ಕಲಂ: ಮನುಷ್ಯ ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

  • ಬೈಂದೂರು: ದಿನಾಂಕ  26/08/2022 ರಂದು ಬೈಂದೂರು ವೃತ್ತ ನಿರೀಕ್ಷಕರಾದ ಸಂತೋಷ ಎ ಕಾಯ್ಕಿಣಿ ರವರು  ಶಿರೂರು ಕರಾವಳಿ ಸಮುದ್ರ ಕಿನಾರೆ ಬಳಿ  ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಾರ್ವಜನಿಕ ಸ್ಥಳದಲ್ಲಿ ಅಮಲಿನಲ್ಲಿ ತೂರಾಡಿಕೊಂಡಿದ್ದ ಶರತ್ ಪೂಜಾರಿ(20)  ಎಂಬಾತನನ್ನು ವಶಕ್ಕೆ ಪಡೆದುಕೊಂಡು ವೈದ್ಯಕೀಯ ತಪಾಸಣೆಯ ಬಗ್ಗೆ ವೈದ್ಯಾಧಿಕಾರಿಯವರು ಶ್ರೀ ಮಾತಾ ಆಸ್ಪತ್ರೆ ಕುಂದಾಪುರ ರವರ ಮುಂದೆ ಹಾಜರು ಪಡಿಸಿದ್ದು ದಿನಾಂಕ 26/08/2022 ರಂದು ಪರೀಕ್ಷಿಸಿದ ವೈದ್ಯಾಧಿಕಾರಿಯವರು ಶರತ್ ಪೂಜಾರಿ ಗಾಂಜಾ ಸೇವಿಸಿರುವುದು ದೃಢಪಟ್ಟಿರುವುದಾಗಿ ವರದಿಯನ್ನು ನೀಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 171/2022 ಕಲಂ : 27(B) NDPS ACT ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ದಿನಾಂಕ 26/08/2022 ರಂದು ನಿರಂಜನ್ ಗೌಡ ಬಿ ಎಸ್,  ಪೊಲೀಸ್  ಉಪನಿರೀಕ್ಷಕರು, ಬೈಂದೂರು ಪೊಲೀಸ್ ಠಾಣೆ ಇವರು  ಪಡುವರಿ ಗ್ರಾಮದ ಸೋಮೇಶ್ವರ ಬೀಚ್ ಬಳಿ ರೌಂಡ್ಸ್  ಕರ್ತವ್ಯದಲ್ಲಿರುವಾಗ ಸಾರ್ವಜನಿಕ ಸ್ಥಳದಲ್ಲಿ ಅಮಲಿನಲ್ಲಿ ತೂರಾಡಿಕೊಂಡಿದ್ದ ಆರೋಪಿತ ವಿಧ್ಯಾಧರ (19)  ಎಂಬಾತನನ್ನು ವಶಕ್ಕೆ ಪಡೆದು  ವೈದ್ಯಕೀಯ ತಪಾಸಣೆಯ ಬಗ್ಗೆ ವೈದ್ಯಾಧಿಕಾರಿಗಳು ಶ್ರೀ ಮಾತಾ ಆಸ್ಪತ್ರೆ ಕುಂದಾಪುರ ರವರ ಮುಂದೆ ಹಾಜರು ಪಡಿಸಿದ್ದು  ಪರೀಕ್ಷಿಸಿದ ವೈದ್ಯಾಧಿಕಾರಿಯವರು ದಿನಾಂಕ 26/08/2022 ರಂದು ವಿಧ್ಯಾಧರ ಗಾಂಜಾ ಸೇವಿಸಿರುವುದು ದೃಢ ಪಟ್ಟಿರುವುದಾಗಿ ವರದಿಯನ್ನು ನೀಡಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 172/2022 ಕಲಂ: 27(B) NDPS ACT ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ 26/08/2022 ರಂದು ದಾಮೋದರ ಕೆ ಬಿ, ಪೊಲೀಸ್‌ ಉಪನಿರೀಕ್ಷಕರು,  ಕಾರ್ಕಳ ನಗರ ಪೊಲೀಸ್ ಠಾಣೆ ಇವರು ಕಾರ್ಕಳ ತಾಲೂಕಿನ ಕಾರ್ಕಳ ಕಸಬಾ ಗ್ರಾಮದ ಬಂಗ್ಲೆಗುಡ್ಡೆ ಪರನೀರು ಮೈದಾನದ ಬಳಿ ತಲುಪಿದಾಗ ಮಾದಕ ವಸ್ತು ಗಾಂಜಾವನ್ನು ಪೇಪರ್‌ನಲ್ಲಿ ಸೇರಿಸಿ ಸಿಗರೇಟ್ ನಂತೆ ರೋಲ್ ಮಾಡಿ  ಸೇದುತ್ತಿದ್ದ ಆಪಾದಿತ ಮಹಮದ್‌ರಫೀಕ್‌ (36) ಎಂಬಾತನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು,  ದಿನಾಂಕ 27/08/2022 ರಂದು 15:00 ಗಂಟೆಗೆ ಆಪಾದಿತನು ಮಾದಕ ವಸ್ತು ಗಾಂಜಾವನ್ನು ಸೇವನೆ ಮಾಡಿರುವುದಾಗಿ ವೈದ್ಯಕೀಯ ವರದಿಯು ಬಂದಿರುತ್ತದೆ.  ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 111 /2022  ಕಲಂ: 27(B) NDPS ACT ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ: ದಿನಾಂಕ 27/08/2022 ರಂದು ಗಂಗೊಳ್ಳಿ ಠಾಣಾ ಪೊಲೀಸ್‌ ಉಪನಿರೀಕ್ಷಕರಾದ  ವಿನಯ ಕೊರ್ಲಹಳ್ಳಿ ರವರು  ರೌಂಡ್ಸ್‌ ಕರ್ತವ್ಯದಲ್ಲಿರುವಾಗ ತ್ರಾಸಿ ಗ್ರಾಮದ ತ್ರಾಸಿ ಪ್ರವಾಸಿ ಮಂದಿರದ ಬಳಿ ಬೀಚ್‌ನಲ್ಲಿ ಕೆಲವು ಹುಡುಗರು ಕುಳಿತು ಗಾಂಜಾ ಸೇವಿಸುತ್ತಿರುವುದಾಗಿ ದೊರೆತ ಮಾಹಿತಿಯಂತೆ  ಹೋಗಿ  ಪರಿಶೀಲಿಸಲಾಗಿ 3 ಜನರು ಕುಳಿತುಕೊಂಡಿರುವುದು  ಕಂಡು ಬಂದಿದ್ದು, ಅವರ ಹೆಸರು ವಿಳಾಸ ಕೇಳಲಾಗಿ 1) ಮೊಹಮ್ಮದ್ ರಿಹಾಬ್‌ಸಾದಾ, 2) ಮೊಹಮ್ಮದ್‌ದಾನಿಶ್‌, 3) ಮೊಹಮ್ಮದ್‌ ಅರ್ಬಾಜ್‌ ಎಂಬುವುದಾಗಿ ತಿಳಿಸಿದ್ದು ಇವರುಗಳು ಗಾಂಜಾದಂತಹ ಅಮಲು ಪದಾರ್ಥ ಸೇವನೆ ಮಾಡಿರುವ ಬಗ್ಗೆ ಅನುಮಾನ ಬಂದ ಮೇರೆಗೆ  ಕುಂದಾಪುರ ಶ್ರೀ ಮಾತಾ ಆಸ್ಪತ್ರೆ ವೈಧ್ಯಾದಿಕಾರಿಯವರ ಮುಂದೆ ಹಾಜರುಪಡಿಸಿ ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ 3 ಜನರು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುವುದಾಗಿ ವರದಿ ನೀಡಿರುತ್ತಾರೆ.  ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 82/2022 ಕಲಂ: 27(B) NDPS Act  ರಂತೆ ಪ್ರಕರಣ ದಾಖಲಾಗಿರುತ್ತದೆ.
       

ಇತ್ತೀಚಿನ ನವೀಕರಣ​ : 28-08-2022 10:03 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080