ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ:

  • ಕಾಪು: ಪಿರ್ಯಾದಿ ಶೈಲೇಶ ಶೆಟ್ಟಿ ಪ್ರಾಯ : 36 ವರ್ಷ ತಂದೆ : ದಿ. ಜಯರಾಮ ಶೆಟ್ಟಿ   ವಾಸ : ಬಳಕಂಜೆ ಮನೆ ಮಂಗಳೂರು ಇವರು ನವಯುಗ ಕಂಪೆನಿಯಲ್ಲಿ ಸೇಪ್ಟಿ ಆಫೀಸರ್ ಆಗಿ ಕೆಲಸ ಮಾಡಿಕೊಂಡಿದ್ದು  ದಿನಾಂಕ 27-08-2021 ರಂದು ಬೆಳಗಿನ ಜಾವ 01.00 ಗಂಟೆ ಸಮಯಕ್ಕೆ KA-23A-8938 ನೇದರ ಲಾರಿ ಚಾಲಕ ಆನಂದ ಎಂಬಾತನು ಆತನ ಬಾಬ್ತು ಲಾರಿಯನ್ನು ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ರಾ.ಹೆ 66 ರಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕಾಪು ತಾಲೂಕು ಕಟಪಾಡಿ ಜಂಕ್ಷನ್ ಸಮೀಪ ರಾ.ಹೆ 66 ರ ವಿಭಾಜಕದ ಮೇಲೆ ಹತ್ತಿಸಿದ ಪರಿಣಾಮ ವಿಭಾಜಕ ಜಖಂಗೊಂಡು, ವಿಭಾಜಕದಲ್ಲಿ ಅಳವಡಿಸಿದ ನವಯುಗ ಕಂಪೆನಿಗೆ ಸಂಬಂದಪಟ್ಟ  METAL BUM, SOLAR BLINKAR, RED REFLECTER ಜಖಂಗೊಂಡಿರುವುದಾಗಿ ಮಾಹಿತಿ ಬಂದಂತೆ ಪಿರ್ಯಾದಿದಾರರು ಸ್ಥಳಕ್ಕೆ ಹೋಗಿ ನೋಡಿದಾಗ   ಲಾರಿಯು ಡಿವೈಡರ್ ಮೇಲಿದ್ದು ನವಯುಗ ಕಂಪೆನಿಗೆ ಸಂಬಂದಪಟ್ಟ  METAL BUM, SOLAR BLINKAR, RED REFLECTER ಜಖಂಗೊಂಡಿದ್ದು ಇದರಿಂದ  ಕಂಪೆನಿಗೆ ಸುಮಾರು 1,08,230/- ರೂ ನಷ್ಟವಾಗಿರುತ್ತದೆ. ಈ ಅಪಘಾತಕ್ಕೆ KA-23A-8938 ನೇ ಲಾರಿ ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ. ಈ ಬಗ್ಗೆ  ಕಾಪು ಠಾಣಾ ಅಪರಾಧ ಕ್ರಮಾಂಕ 142/2021  ಕಲಂ 279, 427   ಐ.ಪಿ.ಸಿ. ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕೊಲ್ಲೂರು:  ಪಿರ್ಯಾದಿ ಯೊಗೀಶ್ (37) ತಂದೆ:  ಶಂಕರ  ಆಚಾರ್ಯ ವಾಸ: ಆಲೂರು  ಸೂರ್ಗಿ ಮನೆ  ಆಲೂರು  ಗ್ರಾಮ ಕುಂದಾಫುರ ಇವರು ದಿನಾಂಕ:27/08/2021 ರಂದು  ಬೆಳಗ್ಗೆ 10-00 ಗಂಟೆಗೆ  ಜಡ್ಕಲ್‌ ಗ್ರಾಮದ  ಜಡ್ಕಲ್‌  ರಾಮ ಮಂದಿರದ  ಬಳಿ ಇರುವ ಲಕ್ಷ್ಮೀ  ಜನರಲ್‌ ಸ್ಟೋರ್‌ ಅಂಗಡಿಗೆ  ದಿನಸಿ ಸಾಮಾನು ಕೊಳ್ಳಲು ಬಂದಿದ್ದು  ಅಂಗಡಿಯ ಎದುರು ನಿಂತುಕೊಂಡಿದ್ದಾಗ ಕೊಲ್ಲೂರು – ಕುಂದಾಪುರ ರಾಜ್ಯ ಹೆದ್ದಾರಿಯ-27 ರಲ್ಲಿ  ಜಡ್ಕಲ್‌ ಕಡೆಯಿಂದ  ಕೊಲ್ಲೂರು ಕಡೆಗೆ ಆರೋಪಿ ಶರತ್ ತನ್ನ ಬಾಬ್ತು KA 20 EC 1371ನೇ   ಮೋಟಾರು  ಸೈಕಲ್‌ನ್ನು ವೇಗವಾಗಿ ಅಜಗಾರೂಕತೆಯಿಂದ ಚಲಾಯಿಸಿಕೊಂಡು ಬಂದು  ಲಕ್ಷ್ಮೀ ಜನರಲ್‌ ಸ್ಟೋರ್‌ ಅಂಗಡಿ ಸಮೀಪ  ವೇಗವನ್ನು  ನಿಯಂತ್ರಿಸಲಾಗದೇ ತೀರ ಎಡಕ್ಕೆ ಚಲಾಯಿಸಿ ರಾಜ್ಯ ಹೆದ್ದಾರಿಯ ಎಡಬದಿಯ  ಮಣ್ಣು ರಸ್ತೆಯಲ್ಲಿ  ರಸ್ತೆ ದಾಟಲು ನಿಂತುಕೊಂಡಿದ್ದ ಅಶ್ವಿನಿ ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ ಅಶ್ವಿನಿರವರು ಮಣ್ಣು ರಸ್ತೆಗೆ ಬಿದ್ದು ಬಲಕಾಲು ಮಣಿಗಂಟು ಬಳಿ  ಮೂಳೆ ಮುರಿತ ಉಂಟಾಗಿ  ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ  ಒಳರೋಗಿಯಾಗಿ  ಚಿಕಿತ್ಸೆಯಲ್ಲಿರುತ್ತಾರೆ. ಆರೋಪಿಯು ಮೋಟಾರ್ ಸೈಕಲ್ ನ ನಿಯಂತ್ರಣ ತಪ್ಪಿ  ಮೋಟಾರ್ ಸೈಕಲ್ ಸಮೇತ ಬಿದ್ದು ಎಡ ಕಾಲು ಮೂಗು ಮತ್ತು ತುಟಿಗೆ ರಕ್ತಗಾಯವಾಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿ ಚಿಕಿತ್ಸೆಯಲ್ಲಿರುತ್ತಾರೆ ಈ ಬಗ್ಗೆ  ಕೊಲ್ಲೂರು  ಠಾಣಾ ಅಪರಾಧ ಕ್ರಮಾಂಕ 27/2021  ಕಲಂ: 279,  338 IPC  ಯಂತೆ ಪ್ರಕರಣ ದಾಖಲಿಸಲಾಗಿದೆ.

 

ಇತ್ತೀಚಿನ ನವೀಕರಣ​ : 28-08-2021 06:36 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080