ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಗಂಗೊಳ್ಳಿ: ದಿನಾಂಕ: 26.07.2022 ರಂದು ಸಂಜೆ ಪಿರ್ಯಾದಿ ಸುರೇಂದ್ರ ಪೂಜಾರಿ ಇವರು KA 20 AA 2566 ನೇ ಮಿನಿ ಟಿಪ್ಪರ್‌ಲಾರಿಯನ್ನು ನಾಗೂರಿನಿಂದ ಕಾರ್ಕಳಕ್ಕೆ ಹೋಗುವರೇ ಚಾಲನೆ ಮಾಡಿಕೊಂಡು ಹೋಗುತ್ತೀರುವಾಗ ಮರವಂತೆ ಗ್ರಾಮದ ಮರವಂತೆ ಅಪೂರ್ವ ಹೋಟೇಲ್‌ನಿಂದ ಸ್ವ ಲ್ಪ ಮುಂದಕ್ಕೆ NH 66 ರಸ್ತೆಯಲ್ಲಿ  ಹೋಗುವಾಗ ಟಿಪ್ಪರ್‌ಕೆಟ್ಟು ಹೋಗಿದ್ದು,  ಟಿಪ್ಪರನ್ನು ತೀರಾ ಎಡಬದಿಗೆ  ಮಣ್ಣು ರಸ್ತೆಯಲ್ಲಿ  ನಿಲ್ಲಿಸಿ ಇಂಡಿಕೇಟರ್‌ಹಾಕಿ,  ಬ್ಯಾಕೇಡ್‌, ಕಲ್ಲು ಹಾಗೂ ಸೊಪ್ಪುಗಳನ್ನು ಹಾಕಿ, ಟಿಪ್ಪರ್‌ಮಾಲಿಕ ಪ್ರತಾಪ ಶೆಟ್ಟಿ ಹಾಗೂ  ಸಂಬಂಧಿ ಗಣೇಶ ಪೂಜಾರಿ ರವರನ್ನು ಬರಮಾಡಿಸಿಕೊಂಡು ಸದ್ರಿ ಟಿಪ್ಪರ್‌ನ್ನು ರಿಪೇರಿ ಮಾಡಿಕೊಂಡು ನಂತರ  ಪಿರ್ಯಾದಿದಾರರು, ಟಿಪ್ಪರ್‌ಮಾಲಿಕ ಪ್ರತಾಪ ಶೆಟ್ಟಿ ಹಾಗೂ  ಸಂಬಂಧಿ ಗಣೇಶ ಪೂಜಾರಿ ಯವರು  ನಿಂತಿರುವಾಗ ದಿನಾಂಕ: 27/07/2022 ರಂದು  ಸಮಯ ಸುಮಾರು 00:30 ಗಂಟೆಗೆ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ MH 43 BG 0386 ನೇ ಲಾರಿ ಚಾಲಕ ರವಿ ನಾಯಕ್‌ಎಂಬಾತನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿ ಮಣ್ಣು ರಸ್ತೆಯಲ್ಲಿ KA 20 AA 2566 ನೇ ಮಿನಿ ಟಿಪ್ಪರ್‌ನ ಹಿಂದೆ ನಿಂತಿದ್ದ ಪ್ರತಾಪ ಶೆಟ್ಟಿ ಹಾಗೂ ಗಣೇಶ ಪೂಜಾರಿ ರವರಿಗೆ ಡಿಕ್ಕಿ ಹೊಡೆದು ನಂತರ KA 20 AA 2566 ನೇ ಮಿನಿ ಟಿಪ್ಪರ್‌ನ ಹಿಂಬದಿಗೆ ಡಿಕ್ಕಿ  ಹೊಡೆದಿದ್ದು  ಮಿನಿ ಟಿಪ್ಪರ್‌ಮಗುಚಿ ಬಿದ್ದು ಜಖಂ ಆಗಿರುತ್ತದೆ.  ಟಿಪ್ಪರ ನ ಪಕ್ಕದಲ್ಲಿದ್ದ ಪಿರ್ಯಾದಿದಾರರು ಅಪಘಾತದಿಂದ ತಪ್ಪಿಸಿಕೊಳ್ಳುವಾಗ ಬಿದ್ದು ಸಣ್ಣಪುಟ್ಟ ಗಾಯವಾಗಿರುತ್ತದೆ.  ಅಲ್ಲದೇ ಈ ಅಪಘಾತದಿಂದ ಪ್ರತಾಪಶೆಟ್ಟಿಯವರಿಗೆ ಕಾಲು ಮೂಳೆ ಮುರಿತವಾಗಿದ್ದು, ಎಡಭುಜ ಹಾಗೂ ಎದೆಗೆ ಪೆಟ್ಟಾಗಿರುತ್ತದೆ ಮತ್ತು  ಗಣೇಶ ಪೂಜಾರಿಗೆ ತಲೆಗೆ ಹಾಗೂ ಕೈಕಾಲುಗಳಿಗೆ ಪೆಟ್ಟಾಗಿರುತ್ತದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 66/2022 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬೈಂದೂರು: ಫಿರ್ಯಾದಿ ಬಿ ಎಸ್ ಸುಲೇಮಾ್ ಇವರು ದಿನಾಂಕ 26/07/2022 ರಂದು ರಾತ್ರಿ 8:15 ಗಂಟೆಗೆ ನಾವುಂದ ಕಡೆಯಿಂದ ಮಸ್ಕಿ ಬೈಪಾಸ್ ಕಡೆಗೆ ಅವರ ಮನೆಗೆ ಹೋಗುವರೇ ಅವರ ಬಾಬ್ತು  KA 20ET 3311 ನೇ ಮೋಟಾರು ಸೈಕಲ್ ನ್ನು ನಾವುಂದ ಅಂಡರ್ ಪಾಸ್ ಬಳಿ ಸರ್ವಿಸ್ ರಸ್ತೆಯಲ್ಲಿ ನಾವುಂದ ಪೆಟ್ರೋಲ್ ಬಂಕ್ ಬಳಿ ಹೋಗುತ್ತಿರುವಾಗ ನಾವುಂದ ಬೈಪಾಸ್ ಕಡೆಯಿಂದ KA 20EV 3669 ನೇ ಮೋಟಾರು ಸೈಕಲ್ ಸವಾರನು ಸಹ ಸವಾರನನ್ನು ಕುಳ್ಳಿರಿಸಿಕೊಂಡು ನಾವುಂದ ಬೈಪಾಸ್ ಕಡೆಯಿಂದ ಪೆಟ್ರೋಲ್ ಬಂಕ್ ಕಡೆಗೆ ಪಿರ್ಯಾದುದಾರರ ಎದುರಿನಿಂದ ಆತನ ಬಾಬ್ತು ಮೋಟಾರು ಸೈಕಲ್ ನ್ನು ಅತೀ ವೇಗ ಹಾಗು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ಪಿರ್ಯಾದಿದಾರರ ಮೋಟಾರು ಸೈಕಲ್ ಗೆ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು  ಮೋಟಾರು ಸೈಕಲ್ ಸಮೇತ ರಸ್ತೆ ಬಿದ್ದಿದ್ದು ,ಅಪಘಾತದಲ್ಲಿ ಪಿರ್ಯಾದಿದಾರರಿಗೆ ಎಡ ಕಾಲು ಜಖಂಗೊಂಡಿರುತ್ತದೆ. ಅಘಘಾತಪಡಿಸಿದ ಮೋಟಾರುಸೈಕಲ್ ಸಹ ಸವಾರ ಕರುಣಾಕರ ರವರಿಗೆ  ಮೋಟಾರು ಸೈಕಲ್ ನಿಂದ ಬಿದ್ದು ಮುಖ ಹಾಗೂ ಮೊಣಕಾಲಿಗೆ ರಕ್ತಗಾಯವಾಗಿರುತ್ತದೆ, ಅಫಘಾತಪಡಿಸಿದ ಮೋಟಾರು ಸೈಕಲ್ ಸವಾರನಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಗಾಯಗೊಂಡ ಪಿರ್ಯಾದುದಾರರನ್ನು ಹಾಗೂ ಕರುಣಾಕರ ರವರನ್ನು  ಪಿರ್ಯಾದುದಾರರ  ತಮ್ಮ ಹಾಗೂ ಅಪಘಾತಪಡಿಸಿದ ಮೋಟಾರು ಸೈಕಲ್ ಸವಾರ ಸೇರಿ ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುತ್ತಾರೆ. ಈ ಬಗ್ಗೆ ಬೈಂದೂರು  ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 148/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಶಂಕರನಾರಾಯಣ: ದಿನಾಂಕ 27/07/2022  ರಂದು  ಬೆಳಿಗ್ಗೆ  ಸುಮಾರು 8:00  ಘಂಟೆಗೆ ಪಿರ್ಯಾದುದಾರರಾದ ರವೀಂದ್ರ  ಶೆಟ್ಟಿ  (25) ತಂದೆ, ರಾಮಣ್ಣ ಶೆಟ್ಟಿ ವಾಸ, ದೈವದ  ಮನೆ ಕೊಡ್ಲಾಡಿ ಗ್ರಾಮ ಕುಂದಾಪುರ ಇವರು ಕುಂದಾಪುರ  ತಾಲೂಕಿನ ಕೊಡ್ಲಾಡಿ ಗ್ರಾಮದ ದೈವದ ಮನೆ ಎಂಬಲ್ಲಿ ಅವರ, ಮನೆಯ ಸಮೀಪ ಸೊಪ್ಪು ಕಡಿಯುತ್ತಿರುವಾಗ   ಆರೋಪಿತ ಭಾಸ್ಕರ  ಶೆಟ್ಟಿ ಮತ್ತು ಅರುಣ್ ಶೆಟ್ಟಿ  ಕೊಡ್ಲಾಡಿ ಗ್ರಾಮ  ಕುಂದಾಪುರ  ತಾಲೂಕು  ಇವರುಗಳು ಸಮಾನ ಉದ್ದೇಶದಿಂದ ಫಿರ್ಯಾದುದಾರರಲ್ಲಿ ಮಾತನಾಡಲು ಇದೆ  ಬಾ  ಎಂದು  ಕರೆದಾಗ ಫಿರ್ಯಾದುದಾರರು  ಅವರ ಜಾಗದ ಬಳಿ ಹೋಗಿದ್ದಾಗ ನಿನ್ನ ಜಾಗ ಎಲ್ಲಿ ಬರುತ್ತದೆ ಎಂದು ಕೇಳಿದ್ದು ಅವರು  ಕೈಯಲ್ಲಿ ಜಾಗ    ತೋರಿಸುತ್ತಿರುವಾಗ ಆರೋಪಿಗಳು ನಿನಗೆ ಇಲ್ಲಿ ಜಾಗ ಹೇಗೆ ಬರುತ್ತದೆ  ಎಂದು ಅವಾಚ್ಯ ಶಬ್ದದಿಂದ ಬೈದು   ಕಬಿಣ್ಣದ ರಾಡ್‌‌‌ನಿಂದ ಎರಡು ಕಾಲಿಗೆ ಹಲ್ಲೆ  ಮಾಡಿರುತ್ತಾರೆ. ಅಲ್ಲದೆ ಭಾಸ್ಕರ ಶೆಟ್ಟಿ ಇವನು  ಕಬ್ಬಿಣದ ಕತ್ತಿಯನ್ನು ಬಿಸಿದ ಪರಿಣಾಮ ಫಿರ್ಯಾದುದಾರು  ಕತ್ತಿಯನ್ನು ತಡೆದಿದ್ದು ಆಗ ಅವರ  ತುಟಿಗೆ ತಾಗಿ  ರಕ್ತಗಾಯವಾಗಿ ಮೇಲಿನ  ಒಂದು   ಹಲ್ಲು  ತುಂಡಾಗಿ    ಗಂಭೀರ ಸ್ವರೂಪದ ಗಾಯವಾಗಿರುತ್ತದೆ, ಹಾಗೂಎರಡು  ಕಾಲುಗಳಿಗೆ ರಕ್ತಗಾಯವಾಗಿ ರುತ್ತದೆ,  ಈ  ಸಮಯ ಫಿರ್ಯಾದುದಾರರು ಬೊಬ್ಬೆ  ಹಾಕಿ  ಮನೆಯ  ಕಡೆಗೆ ಓಡಿ   ಹೋದಾಗ  ಆರೋಪಿಗಳು ಓಡು   ಓಡು  ಮುಂದೆ   ಆದರೂ ಕೊಂದು ಹಾಕದೇ  ಬಿಡುವುದಿಲ್ಲ ಎಂದು   ಜೀವ  ಬೆದರಿಕೆ ಹಾಕಿರುತ್ತಾರೆ.  ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 74/2022  ಕಲಂ:324. 326. 504. 506(2)  ಜೊತೆಗೆ  34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬೈಂದೂರು: ಫಿರ್ಯಾದಿ ಆನಂದ ಪೂಜಾರಿ ಇವರು  ದಿನಾಂಕ: 20/07/2022 ರಂದು ಯಳಜಿತ್ ಗೆ ಅವರ ಬಾಬ್ತು ಮೋಟಾರ್ ಸೈಕಲ್ ನಲ್ಲಿ ರಾಹೆ 766 ಸಿ ರಲ್ಲಿ ಯಡ್ತರೆ ಮಾರ್ಗವಾಗಿ ಹೋಗುತ್ತಿರುವಾಗ ಪಿರ್ಯಾದುದಾರರ  ಎದುರಿನಿಂದ ಸುಮಾರು 50 ಅಡಿ ದೂರದಲ್ಲಿ ಕೆಎ 20 ಎಬಿ 0092ನೇ ಆಟೋ ರಿಕ್ಷಾವೊಂದು ಯಡ್ತರೆ ಕಡೆಯಿಂದ ಕೊಲ್ಲೂರು ಕಡೆಗೆ ಹೋಗುತ್ತಿದ್ದು  ಸಂಜೆ ಸಮಯ ಸುಮಾರು 6:15 ಗಂಟೆಗೆ ಹೊತ್ತಿಗೆ ಬೈಂದೂರು ಗ್ರಾಮದ ಕಳವಾಡಿ ಎಂಬಲ್ಲಿ ಆಟೋ ರಿಕ್ಷಾ ಹೋಗುತ್ತಿರುವಾಗ ಒಂದು ತೆಂಗಿನ ಮರವು ತುಂಡಾಗಿ ವಿದ್ಯುತ್ ಕಂಬದ ಮೇಲೆ ಬಿದ್ದು, ವಿದ್ಯುತ್ ಕಂಬವು ಆಟೋ ರಿಕ್ಷಾದ ಮೇಲೆ ಬಿದ್ದಿದ್ದು ಪಿರ್ಯದುದಾರರು ಕೂಡಲೇ  ಅವರ ಮೋಟಾರ್ ಸೈಕಲ್ ನ್ನು ಅಲ್ಲೇ ರಸ್ತೆ ಬದಿಗೆ ನಿಲ್ಲಿಸಿ, ಅಲ್ಲಿಗೆ ಹೋಗಿ ರಿಕ್ಷಾ ಚಾಲಕರನ್ನು ಎತ್ತಿ ಉಪಚರಿಸಿದ್ದು, ರಿಕ್ಷಾ ಚಾಲಕ ಪಿರ್ಯಾದುದಾರರ ಪರಿಚಯದ ಶಿರೂರಿನ ಸದಾಶಿವ ಎಂಬವರಾಗಿದ್ದು ಅವರ ತಲೆಗೆ ತೀವ್ರ ಸ್ವರೂಪದ ರಕ್ತಗಾಯವಾಗಿರುತ್ತದೆ  ಹಾಗೂ ಅವರ  ಆಟೋ ರಿಕ್ಷಾವು ಸಂಪೂರ್ಣ ಹಾನಿಯಾಗಿರುತ್ತದೆ. ಗಾಯಗೊಂಡ ಸದಾಶಿರವರನ್ನು ಪಿರ್ಯಾದುದಾರರು  ಹಾಗೂ ಇತರರು ಸೇರಿ ಒಂದು ಅಂಬುಲೆನ್ಸ್ ನಲ್ಲಿ ಕುಂದಾಪುರ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ, ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುತ್ತಾರೆ .  ಮೆಸ್ಕಾಂ ಇಲಾಖೆಗೆ ಸಂಬಂದಿಸಿದ ವಿದ್ಯುತ್ ಕಂಬವು ಶಿಥಿಲಾವಸ್ಥೆಯಲ್ಲಿ ಇದ್ದುದ್ದರಿಂದ ತೆಂಗಿನ ಮರ ತುಂಡಾಗಿ ವಿದ್ಯುತ್ ಕಂಬದ ಮೇಲೆ ಬಿದ್ದು, ವಿದ್ಯುತ್ ಕಂಬವು ತುಂಡಾಗಿ ಸದಾಶಿವರವರ ಬಾಬ್ತು ಕೆಎ 20 ಎಬಿ 0092ನೇ ಆಟೋ ರಿಕ್ಷಾದ ಮೇಲೆ ಬಿದ್ದು, ಚಾಲಕರಾದ ಸದಾಶಿವರವರ ತಲೆಗೆ ತೀವ್ರ ತರಹದ ಗಾಯವಾಗಿರುತ್ತದೆ. ಈ ಘಟನೆಗೆ ಮೆಸ್ಕಾಂ ಇಲಾಖೆಯ ತೀವ್ರ ನಿರ್ಲಕ್ಷ್ಯತನವೇ ಕಾರಣವಾಗಿದ್ದು  ಮೆಸ್ಕಾಂ ಇಲಾಖೆಯ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿಯಾಗಿರುತ್ತದೆ. ಈ ಬಗ್ಗೆ ಬೈಂದೂರು  ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 147/2022 ಕಲಂ. 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 28-07-2022 10:10 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080