ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾದ ಶಂಕರ ಸಂಜೀವ ಮೂಲ್ಯ (32), ತಂದೆ: ಸಂಜೀವ ಗುರುವ ಮೂಲ್ಯ, ವಾಸ: # 4-116, ಅಂಗನವಾಡಿ  ಕೇಂದ್ರದ ಬಳಿ, ಸಾಂತೂರು ಅಂಚೆ ಮತ್ತು ಗ್ರಾಮ, ಕಾಪು ತಾಲೂಕು, ಉಡುಪಿ ಇವರ ತಂದೆ ಸಂಜೀವ ಮೂಲ್ಯ (66) ಎಂಬುವವರು ಪ್ರತಿ ದಿನದಂತೆ ದಿನಾಂಕ 27/06/2022 ರಂದು ಬೆಳಿಗ್ಗೆ ಮನೆಯಿಂದ ವಾಕಿಂಗ್‌ಗೆ ಹೋಗಿದ್ದು, ಪಡುಬಿದ್ರಿ–ಕಾರ್ಕಳ ರಾಜ್ಯ ಹೆದ್ದಾರಿ-01 ರಲ್ಲಿ ಮನೆಗೆ ವಾಪಾಸ್ಸು ನಡೆದುಕೊಂಡು ಬರುತ್ತಾ ಸಮಯ 08:20 ಗಂಟೆಯ ಕಾಪು ತಾಲೂಕು ಸಾಂತೂರು ಗ್ರಾಮ ಕಾಂಜರಕಟ್ಟೆಯ ಇನ್ನಾಕ್ಕೆ ಹೋಗುವ ರಸ್ತೆಯ  ದ್ವಾರದ ಬಳಿ ತಲುಪುತ್ತಿದ್ದಂತೆ, KA-19-MB-8703 ನೇ ನಂಬ್ರದ ಕಾರು ಚಾಲಕ ಶಂಕರ ಎಂಬುವವರು ರಸ್ತೆಯ ಬದಿಯ ಮಣ್ಣು ರಸ್ತೆಯಲ್ಲಿ ನಿಲ್ಲಿಸಿದ್ದ ತನ್ನ ಕಾರನ್ನು ಯಾವುದೇ ಸೂಚನೆ ಕೊಡದೇ ಅಜಾಗರೂಕತೆಯಿಂದ ಒಮ್ಮೆಲೇ ಹಿಂದಕ್ಕೆ ಚಲಾಯಿಸಿ ಪಿರ್ಯಾದಿದಾರರ ತಂದೆಗೆ ಡಿಕ್ಕಿ ಹೊಡೆದಿರುತ್ತಾರೆ. ಅಪಘಾತದಿಂದ ಪಿರ್ಯಾದಿದಾರರ ತಂದೆ ಸಂಜೀವ ಮೂಲ್ಯ ರವರ ಎಡಕಾಲಿನ ಮೊಣಗಂಟಿಗೆ ತರಚಿದ ಗಾಯ ಮತ್ತು ಸೊಂಟಕ್ಕೆ ಮೂಳೆ ಮುರಿತದ ತೀವ್ರ ಗಾಯವಾಗಿದ್ದು, ಅವರನ್ನು ಚಿಕಿತ್ಸೆಯ ಬಗ್ಗೆ ಸುರತ್ಕಲ್‌ನ ಅಥರ್ವ  ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 83/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ಪಿರ್ಯಾದಿದಾರರಾದ ರಕ್ಷಿತ್ ರಾವ್ (20), ತಂದೆ: ಉಮೇಶ ಗಾಣಿಗ, ವಾಸ: 3-92  ಬಡನಿಡಿಯೂರು, ಬಡನಿಡಿಯೂರು ಗ್ರಾಮ ಇವರು ದಿನಾಂಕ 26/06/2022 ರಂದು  ಮಣಿಪಾಲದಲ್ಲಿರುವಾಗ  ರಾತ್ರಿ 10:00 ಗಂಟೆಗೆ ಪಿರ್ಯಾದಿದಾರರ ತಾಯಿ ಕರೆ ಮಾಡಿ ಪಿರ್ಯಾದಿದಾರರ ತಂದೆ   ಉಮೇಶ ಗಾಣಿಗ (54) ರವರಿಗೆ  ನೇಜಾರಿನಲ್ಲಿ ರಸ್ತೆ ಅಪಘಾತವಾಗಿ  ಅವರನ್ನು ಚಿಕಿತ್ಸೆ ಬಗ್ಗೆ  ಉಡುಪಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ಸಾರ್ವಜನಿಕರು ತಿಳಿಸಿದಂತೆ ಪಿರ್ಯಾದಿದಾರರು ಉಡುಪಿ ಜಿಲ್ಲಾ ಆಸ್ಪತ್ರೆಗೆ ಹೋದಾಗ ಅಲ್ಲಿ ಪಿರ್ಯಾದಿದಾರರ ತಂದೆಯವರನ್ನು ಅಪಘಾತಗೊಳಿಸಿದ ಸ್ಕೂಟರ್ ಸವಾರ ಹಾಗೂ ಆಟೋ ರಿಕ್ಷಾ ಚಾಲಕ ಉಡುಪಿ ಜಿಲ್ಲಾ ಆಸ್ಪತ್ರೆಗೆ ಕರೆ ತಂದಿದ್ದು ಪಿರ್ಯಾದಿದಾರರು ತನ್ನ ತಂದೆ ಯನ್ನು ಹೆಚ್ಚಿನ ಚಿಕಿತ್ಸೆಗಾಗಿ   ಆಟೋ ರಿಕ್ಷಾ ದಲ್ಲಿ ಕರೆದುಕೊಂಡು ಹೋಗುತ್ತಿರುವಾಗ ಅಪಘಾತದ ಬಗ್ಗೆ ಪಿರ್ಯಾದಿದಾರರು ತಂದೆಯಲ್ಲಿ ವಿಚಾರಿಸಿದಾಗ ದಿನಾಂಕ 26/06/2022 ರಂದು ರಾತ್ರಿ ಪಿರ್ಯಾದಿದಾರರ ತಂದೆ ಕೆಲಸ ಮುಗಿಸಿ ಉಡುಪಿಯಿಂದ ಸೈಕಲ್ ನಲ್ಲಿ ತನ್ನ ಮನೆಯಾದ ಬಡನಿಡಿಯೂರಿಗೆ  ನೇಜಾರು ಮಾರ್ಗವಾಗಿ  ಬರುತ್ತಿರುವಾಗ  ನೇಜಾರು ಮಸೀದಿ ಬಳಿ  ಇರುವ ಗ್ಯಾರೇಜ್  ಹತ್ತಿರ ರಾತ್ರಿ 09:45 ಗಂಟೆಗೆ  ತಲುಪಿದಾಗ ಅವರ ಹಿಂದಿನಿಂದ ಸಂತೆಕಟ್ಟೆ ಕಡೆಯಿಂದ  ಕೆಮ್ಮಣ್ಣು ಕಡೆಗೆ ಓರ್ವ ಸ್ಕೂಟರ್ ಸವಾರ ನಿರ್ಲಕ್ಷ್ಯತನ ಹಾಗೂ ಅಜಾರೂಕತೆಯಿಂದ ಚಲಾಯಿಸಿಕೊಂಡು  ಬಂದು ಸೈಕಲ್ ಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಸೈಕಲ್ ಸಮೇತ ರಸ್ತೆಗೆ ಬಿದ್ದು ಅವರ ಎಡಕಾಲಿನ ಮೊಣಗಂಟಿನ  ಕೆಳಗೆ  ಮೂಳೆ,ಉರಿತದ   ಒಳ ಜಖಂ ಹಾಗೂ ಎಡಕಾಲಿನ ಮಣಿಗಂಟಿನ ಮೇಲೆ ರಕ್ತಗಾಯವಾಗಿದ್ದು ,  ಅಪಘಾತಗೊಳಿಸಿದ ಸ್ಕೂಟರ್ ಸವಾರ ಹಾಗೂ ಸಾರ್ವಜನಿಕರು ಉಪಚರಿಸಿದ್ದು ಅಪಘಾತಗೊಳಿಸಿದ ಸ್ಕೂಟರ್ ನಂಬ್ರ KA-20-EN-1276 ಆಗಿದ್ದು ,  ಗಾಯಗೊಂಡವರನ್ನು ಅಪಘಾತಗೊಳಿಸಿದ ಸ್ಕೂಟರ್ ಸವಾರ ಹಾಗೂ ಆಟೋ ರಿಕ್ಷಾ  ಚಾಲಕ ಚಿಕಿತ್ಸೆಯ ಬಗ್ಗೆ  ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿರುವುದಾಗಿ ತಿಳಿಸಿರುತ್ತಾರೆ .ಪಿರ್ಯಾದಿದಾರರು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಕೆಎಂಸಿ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು  ಅಲ್ಲಿನ ವೈದ್ಯರು ಪರೀಕ್ಷಿಸಿ  ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ . ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 57/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿರ್ಯಾದಿದಾರರಾದ ಪ್ರತೀಕ್‌. ಡಿ. ಶೆಟ್ಟಿ (24), ತಂದೆ: ದಿವಾಕರ ಶೆಟ್ಟಿ,  ವಾಸ: ನಂದಾ ದೀಪಾ, ಎಸ್.ವಿ ಟೆಂಪಲ್‌ ಎದುರು ಕಟಪಾಡಿ ಮೂಡಬೆಟ್ಟು ಗ್ರಾಮ ಕಾಪು ತಾಲೂಕು ಇವರ ತಂದೆ ದಿವಾಕರ ಶೆಟ್ಟಿ (67) ರವರು ದಿನಾಂಕ 27/06/2022 ರಂದು ಮಧ್ಯಾಹ್ನ 1:30 ಗಂಟೆಗೆ  ತನ್ನ ಮೋಟಾರ್‌ ಸೈಕಲ್‌ ನಂಬ್ರ  KA-20-R-1954‌ನ್ನು  ಸವಾರಿ ಮಾಡಿಕೊಂಡು ಕಟಪಾಡಿ ಜಂಕ್ಷನ್‌ನ ಮಂಗಳೂರು ಉಡುಪಿ ರಾಷ್ಟ್ರೀಯ ಹೆದ್ದಾರಿ 66 ರ ಸರ್ವಿಸ್‌ ರಸ್ತೆಯನ್ನು ದಾಟುತ್ತಿರುವಾಗ, ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ರಮೇಶ ರವರು ತನ್ನ ಮೋಟಾರ್‌ ಸೈಕಲ್‌  ನಂಬ್ರ KA-19-EY-8062 ನೇದನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿಮಾಡಿಕೊಂಡು ಬಂದು ಪಿರ್ಯಾದಿದಾರರ ತಂದೆಯ ಮೋಟಾರು ಸೈಕಲ್‌ನ  ಬಲಬದಿಗೆ ಡಿಕ್ಕಿ ಹೊಡೆದ  ಪರಿಣಾಮ ಪಿರ್ಯಾದಿದಾರರ ತಂದೆ  ಬೈಕ್ ಸಮೇತ ಕೆಳಗೆ ಬಿದ್ದು, ಅವರ ಬಲಗಾಲಿನ ಮೂಳೆ ಮುರಿತದ ಗಾಯ, ಗಲ್ಲದ ಬಳಿ ತರಚಿದ ಗಾಯವಾಗಿರುತ್ತದೆ. ಅವರನ್ನು ಸ್ಥಳೀಯರು ಒಂದು ರಿಕ್ಷಾದಲ್ಲಿ ಉಡುಪಿ ಸಿಟಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 65/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     
  • ಬೈಂದೂರು: ಪಿರ್ಯಾದಿದಾರರಾದ ಜಯರಾಮ (35), ತಂದೆ: ಕೃಷ್ಣಯ್ಯ ಶೇರುಗಾರ, ವಾಸ: ಶ್ರೀ ವಿನಾಯಕ ನಿಲಯ, ಬಾಳೆಗೆದ್ದೆ, ಕೊಲ್ಲೂರು ಗ್ರಾಮ ಬೈಂದೂರು ತಾಲೂಕು ಇವರು ದಿನಾಂಕ 26/06/2022 ರಂದು ಅವರ ಮೋಟಾರ್ ಸೈಕಲ್ ನಲ್ಲಿ  ಅವರ ಅಣ್ಣ ಮಂಜುನಾಥರವರು ಅವರ  ಮೋಟಾರ್ ಸೈಕಲ್ ನಂಬ್ರ KA-20-ED-5359 ನೇದರಲ್ಲಿ ಉಪ್ಪುಂದದಿಂದ ತನ್ನ ಮನೆಗೆ ಹೋಗಲು ಯಡ್ತರೆಯಿಂದ ಕೊಲ್ಲೂರು ಮಾರ್ಗವಾಗಿ ರಾಹೆ 766ಸಿ ರಲ್ಲಿ ಮಧ್ಯಾಹ್ನ 03.00 ಗಂಟೆಗೆ ಯಳಜಿತ್ ಗೋವಿಂದ ಮಾಸ್ಟರ್ ರವರ ಮನೆ ಹತ್ತಿರದ ತಿರುವಿನಲ್ಲಿ ಹೋಗುತ್ತಿರುವಾಗ ಕೊಲ್ಲೂರು ಕಡೆಯಿಂದ ಬೈಂದೂರು ಕಡೆಗೆ KA-01-MD-5065 ನೇ ಕಾರು ಚಾಲಕನು ಆತನ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲಬದಿಗೆ ಬಂದು ಮಂಜುನಾಥರವರು ಸವಾರಿ ಮಾಡಿಕೊಂಡಿದ್ದ ಮೋಟಾರ್ ಸೈಕಲ್ ಗೆ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ ಮಂಜುನಾಥರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಅವರ ತಲೆಗೆ ರಕ್ತಗಾಯ,  ಕುತ್ತಿಗೆಗೆ ಮತ್ತು ಬಲಕೈಗೆ ಗುದ್ದಿದ ಒಳ ನೋವುಂಟಾಗಿರುತ್ತದೆ. ಗಾಯಗೊಂಡವರನ್ನು ಒಂದು ವಾಹನದಲ್ಲಿ ಚಿಕಿತ್ಸೆಯ ಬಗ್ಗೆ ಕುಂದಾಪುರ ನ್ಯೂ ಮೆಡಿಕಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 130/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಶ್ರೀ ಸಯ್ಯದ್‌ ಬ್ಯಾರಿ (48), ತಂದೆ: ದಿ. ಶಾಬು ಸಾಹೇಬ್‌, ವಾಸ: ನೂರ್‌ ಇಸ್ಲಾಮ್‌ ಮದರಸಾ ಬಳಿ ಪಾರಂಪಳ್ಳಿ ಗ್ರಾಮ ಬ್ರಹ್ಮಾವರ ಇವರ 2 ನೇ ಮಗಳು ಕುಮಾರಿ ಮಿಸ್ರಿಯಾ (19) ರವರು ಕುಂದಾಪುರ ಬ್ಯಾರೀಸ್‌ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ. ವ್ಯಾಸಂಗ ಮಾಡಿಕೊಂಡಿದ್ದು ಎಂದಿನಂತೆ ದಿನಾಂಕ 27/06/2022 ರಂದು ಬೆಳಿಗ್ಗೆ ಕಾಲೇಜಿಗೆಂದು ಹೋದವಳು ಸಂಜೆ  5:00 ಗಂಟೆಗೆ ಮನೆಗೆ ಬಂದಿದ್ದು, ಆಗ ತನಗೆ ತಲೆನೋವು ಇದೆ ಎಂದು ಹೇಳಿ ಕೋಣೆಗೆ ಹೋಗಿ ಮಲಗಿರುತ್ತಾಳೆ. ಸಂಜೆ 7 ಗಂಟೆಗೆ ಪಿರ್ಯಾದಿದಾರರು ಮತ್ತು ಅವರ ಕಿರಿಯ ಮಗಳು ಕೋಣೆಯ ಬಾಗಿಲು ತೆರೆದು ನೋಡಿದಾಗ ಕೋಣೆಯಲ್ಲಿ ತಲೆನೋವು ಎಂದು ಮಲಗಿದ್ದ ಮಿಸ್ರಿಯಾಳು ಮನೆಯ ಮಾಡಿನ ಮರದ ಪಕ್ಕಾಸಿಗೆ, ಮಕ್ಕಳು ಮಲಗಲು ಈ ಮೊದಲೆ ಹಾಕಿದ್ದ ಜೋಲಿಯಲ್ಲಿಯೇ ನೇಣು ಕುಣಿಕೆ ಮಾಡಿ ಕುತ್ತಿಗೆಗೆ ಬಿಗಿದು ನೇತಾಡುವ ಸ್ಥಿತಿಯಲ್ಲಿ ಕಂಡು ಬಂದಿರುತ್ತಾಳೆ. ಆಕೆ ಇನ್ನೂ ಜೀವಂತವಾಗಿರಬಹುದೆಂದು ತಿಳಿದು ಕೂಡಲೇ ಪಿರ್ಯಾದುದಾರರು ಮತ್ತು ಅವರ ಕಿರಿಯ ಮಗಳು ಸೇರಿ ನೇಣು ಕುಣಿಕೆಯಿಂದ ಆಕೆಯನ್ನು ಬಿಡಿಸಿ ಚಿಕಿತ್ಸೆ ಬಗ್ಗೆ ಕಾರಿನಲ್ಲಿ ಕೋಟೇಶ್ವರದ ಎನ್‌.ಆರ್‌. ಆಚಾರ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಆಗ ಅಲ್ಲಿ ಪರೀಕ್ಷೀಸಿದ ವೈದ್ಯರು ಸಂಜೆ 7:35 ಗಂಟೆಗೆ ಆಕೆಯು ಅದಾಗಲೇ ಮೃತಪಟ್ಟಿರುವುದಾಗಿ ಧೃಡಪಡಿಸಿರುತ್ತಾರೆ. ಮಿಸ್ರಿಯಾಳು ದಿನಾಂಕ 27/06/2022 ರಂದು ಸಂಜೆ 5:30 ಗಂಟೆಯಿಂದ ಸಂಜೆ 7:00 ಗಂಟೆಯ ಮಧ್ಯಾವಧಿಯಲ್ಲಿ ಯಾವುದೋ ಕಾರಣಕ್ಕೆ ಮನನೊಂದು ಜೀವನದಲ್ಲಿ ಜಿಗುಪ್ಸೆ ಹೊಂದಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 25/2022 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.     

ಜುಗಾರಿ ಪ್ರಕರಣ

  • ಕುಂದಾಪುರ: ದಿನಾಂಕ 27/06/2022 ರಂದು ಸದಾಶಿವ ಆರ್. ಗವರೋಜಿ, ಪೊಲೀಸ್‌ ಉಪನಿರೀಕ್ಷಕರು, ಕುಂದಾಪುರ ಪೊಲೀಸ್‌ ಠಾಣೆ ಇವರಿಗೆ  ರೌಂಡ್ಸ್  ಕರ್ತವ್ಯದಲ್ಲಿರುವಾಗ ಕುಂದಾಪುರ ತಾಲೂಕು ಕುಂಭಾಶಿ  ಗ್ರಾಮ ಕೊರವಾಡಿ ಕ್ರಾಸ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಇಸ್ಪಿಟ್  ಜುಗಾರಿ ಆಟ ಆಡುತ್ತಿದ್ದಾರೆಂದು ಮಾಹಿತಿ ಬಂದಂತೆ  ದಾಳಿ ಮಾಡಿದಾಗ 9 ಜನರಲ್ಲಿ 7 ಜನರು ಅಲ್ಲಿಂದ ಓಡಿ ಹೋಗಿದ್ದು ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ ಇಬ್ಬರನ್ನು ಸಿಬ್ಬಂದಿಗಳ ಸಹಾಯದಿಂದ  ಹಿಡಿದುಕೊಂಡು ಅವರ ಹೆಸರು ವಿಳಾಸ ವಿಚಾರಿಸಲಾಗಿ 1) ಪ್ರಸಾದ್ ಪೂಜಾರಿ (29), ತಂದೆ: ಚಂದ್ರ ಪೂಜಾರಿ, ವಾಸ: ಅನಂತ ಸದನ, ಅಳೆಅಳಿವೆ ಕೋಟೇಶ್ವರ ಗ್ರಾಮ ಕುಂದಾಪುರ ತಾಲೂಕು, 2) ಮಂಜುನಾಥ ಕಾಂಚನ್ (36), ತಂದೆ : ನಂದಿ ಮೊಗವೀರ, ವಾಸ : ಸಾಕು ನಿಲಯ ಕೊಮೆ ತೆಕ್ಕಟ್ಟೆ ಗ್ರಾಮ, ಕುಂದಾಪುರ ತಾಲೂಕು ಉಡುಪಿ ಜಿಲ್ಲೆ ಎಂಬುದಾಗಿ ತಿಳಿಸಿದ್ದು,  ಸ್ಥಳದಲ್ಲಿದ್ದ  1) ಹಳೆಯ ದಿನಪತ್ರಿಕೆ -1, 2) ಇಸ್ಪೀಟ್ ಎಲೆ  52,  3). ನಗದು ಹಣ ರೂಪಾಯಿ 1080/- ವಶಕ್ಕೆ ಪಡೆದುಕೊಂಡಿರುವುದಾಗಿದೆ. ಓಡಿ ಹೋದವರ ಹೆಸರು ವಿಳಾಸ ವಿಚಾರಣೆ ಮಾಡಲಾಗಿ ಅರುಣ್,  ಪ್ರವೀಣ್, ವಿಶ್ವನಾಥ, ಶಶಿಧರ,  ರೋಹಿತ್, ಭಾಸ್ಕರ ಮತ್ತು ಪಪ್ಪಿ ಎಂಬುದಾಗಿ  ತಿಳಿಸಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 64/2022  ಕಲಂ:  87 KP ACT  ರಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 28-06-2022 09:50 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080