ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ

 • ಶಂಕರನಾರಾಯಣ:  ದಿನಾಂಕ 27.06.2022  ರಂದು   21:45 ಘಂಟೆಯಿಂದ 28/06/2022 ರ ಬೆಳಿಗ್ಗೆ 06:30 ಗಂಟೆಯ  ಮದ್ಯದ  ಅವಧಿಯಲ್ಲಿ ಯಾರೋ ಕಳ್ಳರು  ಹೆಬ್ರಿ  ತಾಲೂಕು, ಬೆಳ್ವೆ ಗ್ರಾಮದ ತಾರಿಕಟ್ಟೆ ಗಣೇಶ್ ಫ್ಯೂಯಲ್ ಸರ್ವೀಸ್ ನ ಆಫೀಸಿನ ರೂಮಿನ ಶಟರಿನ ಬೀಗವನ್ನು ಮುರಿದು ಆಫೀಸಿನ ಒಳಪ್ರವೇಶಿಸಿ ಕ್ಯಾಶ್ ಡ್ರಾವರಿನ ಹಾಗೂ ಗಾಡ್ರೇಜಿನ ಬೀಗ ಮುರಿದು ನಗದು ರೂ 1,89,842/- ವನ್ನು  ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.ಈ ಬಗ್ಗೆ ಪೂರ್ಣಿಮಾ ಪ್ರಾಯ:29 ವರ್ಷ ತಂದೆ:ಮಹಾಬಲ ಪೂಜಾರಿ ವಾಸ:ಈಶ್ವರ ನಗರ ಬೇಳಂಜೆ , ಹೆಬ್ರಿ  ಇವರು ಶಂಕರನಾರಾಯಣ ಪೊಲೀಸ್ ಠಾಣೆ ಗೆ ದೂರು ನೀಡಿದ್ದು ಠಾಣಾ ಅಪರಾಧ ಕ್ರಮಾಂಕ 67/2022  ಕಲಂ: 457  380 ಭಾ.ಧಂಸಂ ರಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣಗಳು

 • ಕೋಟ: ಫಿರ್ಯಾದುದಾರರಾದ ಕೋಟ ಪೊಲೀಸ್‌ ಠಾಣಾ ಪಿಎಸ್‌ಐ (ಕಾ & ಸು) ಮಧು ಬಿ.ಇ.ರವರಿಗೆ ದಿನಾಂಕ: 28.06.2022 ರಂದು ಮುಂಜಾನೆ 03:00 ಗಂಟೆಗೆ ಶಿರೂರು ಮೂರುಕೈ ಪರಿಸರದಲ್ಲಿ ನಾಲ್ಕೈದು ಜನ ಸೇರಿ ಕಾಡುಪ್ರಾಣಿಯನ್ನು ಶಿಕಾರಿ ನಡೆಸಿ ಕೆಂಪು ಬಣ್ಣದ ಸ್ವಿಫ್ಟ್‌ ಕಾರಿನಲ್ಲಿ ಹಾಕಿಕೊಂಡು ಶಿರೂರು ಮೂರುಕೈ ಕಡೆಯಿಂದ ಸೈಬ್ರಕಟ್ಟೆ ಕಡೆಗೆ ಬರುತ್ತಿರುವ ಬಗ್ಗೆ ಬಾತ್ಮೀದಾರರಿಂದ ದೊರೆತ ಖಚಿತ ಮಾಹಿತಿ ಮೇರೆಗೆ ಕೋಟ ಠಾಣಾ ಸಿಬ್ಬಂದಿಗಳು ಸೈಬ್ರಕಟ್ಟೆ ಚೆಕ್‌ಪೋಸ್ಟ್‌ ನಲ್ಲಿ ವಾಹನ ತಪಾಸಣೆ ನಡೆಸುವ ಸಮಯ ಶಿರಿಯಾರ ಕಡೆಯಿಂದ ಬಂದ ನಂ: KA 04 MQ 1789 ನೇ ಕೆಂಪು ಬಣ್ಣದ ಸ್ವಿಫ್ಟ್‌ ಕಾರಿನಲ್ಲಿ ಐದು ಜನ ವ್ಯಕ್ತಿಗಳು ಒಂದು ಪ್ಲಾಸ್ಟಿಕ್‌ ತೊಟ್ಟೆಯಲ್ಲಿ ರಕ್ತಸಿಕ್ತವಾದ (ಜಿಂಕೆ ಜಾತಿಯಂತ) ಸತ್ತ ಕಾಡು ಪ್ರಾಣಿ (ಬರ್ಕ) ಒಂದು ಮತ್ತು ಒಂದು ಮೊಲ ಹಾಗೂ ಒಂದು ನಳಿಕೆ ತೋಟೆ ಕೋವಿ ಇಟ್ಟುಕೊಂಡಿರುವುದು ಕಂಡು ಬಂದಿರುತ್ತದೆ. ಬಳಿಕ ಫಿರ್ಯಾದುದಾರರು ಸ್ಥಳಕ್ಕೆ ಹೋಗಿ ಆರೋಪಿಗಳಾದ 1) ರಾಘವೇಂದ್ರ (33 ವರ್ಷ) ತಂದೆ: ರಾಮ ವಾಸ: ಬಾಯರಬೆಟ್ಟು ಚೇರ್ಕಾಡಿ ಗ್ರಾಮ ಪೇತ್ರಿ ಬ್ರಹ್ಮಾವರ 2) ಪ್ರಶಾಂತ್‌ (35 ವರ್ಷ) ತಂದೆ: ಶಿವ ವಾಸ: ಬಾಯರಬೆಟ್ಟು ಚೇರ್ಕಾಡಿ ಗ್ರಾಮ ಪೇತ್ರಿ ಬ್ರಹ್ಮಾವರ, 3) ಅರುಣ (36 ವರ್ಷ) ತಂದೆ: ಶೀನ ನಾಯ್ಕ ವಾಸ: ಬಾಯರಬೆಟ್ಟು ಚೇರ್ಕಾಡಿ ಗ್ರಾಮ ಪೇತ್ರಿ ಬ್ರಹ್ಮಾವರ, 4) ಚೇತನ್‌ (25 ವರ್ಷ) ತಂದೆ:ಅಚ್ಯುತ ನಾಯ್ಕ ವಾಸ: ಬಾಯರಬೆಟ್ಟು ಚೇರ್ಕಾಡಿ ಗ್ರಾಮ ಪೇತ್ರಿ ಬ್ರಹ್ಮಾವರ, 5) ದೀಕ್ಷಿತ್‌ (23 ವರ್ಷ) ತಂದೆ: ಕೃಷ್ಣ ನಾಯ್ಕ ವಾಸ: ಬಾಯರಬೆಟ್ಟು ಚೇರ್ಕಾಡಿ ಗ್ರಾಮ ಪೇತ್ರಿ ಬ್ರಹ್ಮಾವರ ಎಂಬವರನ್ನು ಹಾಗೂ ಅವರ ವಶದಲ್ಲಿದ್ದ ಶಿಕಾರಿ ಮಾಡಲು ಬಳಸಿದ 1) ನಂ: KA 04 MQ 1789 ನೇ ಕೆಂಪು ಬಣ್ಣದ ಸ್ವಿಫ್ಟ್‌ ಕಾರು 2) ಒಂದು ಪ್ಲಾಸ್ಟಿಕ್‌ ತೊಟ್ಟೆಯಲ್ಲಿ ರಕ್ತಸಿಕ್ತವಾದ (ಜಿಂಕೆ ಜಾತಿಯಂತ) ಸತ್ತ ಸಣ್ಣ ಕಾಡು ಪ್ರಾಣಿ (ಬರ್ಕ) - 1, 3) ಕಂದು ಬಣ್ಣದ ಮೊಲ - 1, 4) ಒಂದು ನಳಿಕೆ ತೋಟೆ ಕೋವಿ - 1, 5) ತೋಟೆಗಳು - 4, 6) ಖಾಲಿ ತೋಟೆ- 1, 7) ಸಣ್ಣ ಟಾರ್ಚ್‌ಲೈಟ್‌ - 1, 8) ಹೆಡ್‌ ಟಾರ್ಚ್‌ಲೈಟ್‌ ಜೊತೆ ಚಾರ್ಜರ್‌-1 9) ನಗದು ರೂ.1,970/- ಹಾಗೂ 10) ಐದು ಮೊಬೈಲ್‌ಗಳನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 100/2022 ಕಲಂ: 3, 25 Arms Act ಮತ್ತು ಕಲಂ: 9, 51 ವನ್ಯ ಜೀವಿ ಸಂರಕ್ಷಣಾ ಕಾಯ್ದೆ.ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

 • ಗಂಗೊಳ್ಳಿ: ಫಿರ್ಯಾದಿ ಜಯೇಂದ್ರ (34 ವರ್ಷ) ತಂದೆ: ಅಣ್ಣಪ್ಪಯ್ಯ ಆಚಾರ್ಯ,  ವಾಸ: ಸುಧೀಂದ್ರ ನಿಲಯ, ಮಕ್ಕಿಮನೆ, ಹಕ್ಲಾಡಿ ಇವರು ಕುಂದಾಪುರ ತಾಲೂಕು, ಹಕ್ಲಾಡಿ ಗ್ರಾಮದ ಮಕ್ಕಿಮನೆ ಎಂಬಲ್ಲಿನ ನಿವಾಸಿಯಾಗಿದ್ದು, ತಂದೆ, ತಾಯಿ ಅಣ್ಣ ಅತ್ತಿಗೆ ಹಾಗೂ ತಂಗಿ ಶ್ರೀಲತಾ(30 ವರ್ಷ)  ರವರೊಂದಿಗೆ ವಾಸಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರ  ತಂಗಿ  ಶ್ರೀಲತಾ ರವರು ಮಾನಸಿಕ ಖಿನ್ನತೆ ಹಾಗೂ ಗರ್ಭಕೋಶದ ಸಮಸ್ಯೆಯಿಂದ ಬಳಲುತ್ತಿದ್ದು ಇದರಿಂದ ಸುಮಾರು 2 ತಿಂಗಳ ಹಿಂದೆ ಮಂಗಳೂರಿನಲ್ಲಿ ಮಾಡುತ್ತಿರುವ ಕೆಲಸ ಬಿಟ್ಟು ಮನೆಗೆ ಬಂದು ವಾಸ್ತವ್ಯ ಮಾಡಿಕೊಂಡಿದ್ದರು. ಪಿರ್ಯಾದಿದಾರರ ತಂಗಿ ಶ್ರೀಲತಾ ರವರು ದಿನಾಂಕ: 27/06/2022 ರಂದು ರಾತ್ರಿ ಸುಮಾರು 8:30 ಗಂಟೆಯ ಸಮಯಕ್ಕೆ ತಮ್ಮ ವಾಸ್ತವ್ಯದ ಮನೆಯ ರೂಮಿನಲ್ಲಿ ಬಾಗಿಲು ಹಾಕಿಕೊಂಡು ಕೋಣೆಯ ಟಾರೀಸ್‌ ನ ಹುಕ್ಕಿಗೆ ಸೀರೆಯನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಅಸ್ವಸ್ಥರಾದ ಶ್ರೀಲತಾ ರವರನ್ನು ಖಾಸಗಿ ಅಂಬುಲೇನ್ಸ್‌ ನಲ್ಲಿ ಚಿಕಿತ್ಸೆ ಬಗ್ಗೆ ಕುಂದಾಪುರ ಆದರ್ಶ ಆಸ್ಪತ್ರೆಗೆ  ಕರೆದುಕೊಂಡು ಹೋದಾಗ ವೈದ್ಯರು ಪರಿಶೀಲಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಶ್ರೀಲತಾ ರವರು ತನಗಿರುವ ಆರೋಗ್ಯ ಸಮಸ್ಯೆ ಹಾಗೂ ಮಾನಸಿಕ ಖಿನ್ನತೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಯು.ಡಿ.ಆರ್‌ ನಂಬ್ರ 16/2022 ಕಲಂ:174 ಸಿ.ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಬ್ರಹ್ಮಾವರ:  ಪಿರ್ಯಾದಿ ಎಮ್ ಉಪೇಂದ್ರ ಪ್ರಭು (45), ತಂದೆ: ದಿ| ಪಾಂಡುರಂಗ ಪ್ರಭು, ವಾಸ: ಸ್ವಾತಿ, ಉಪ್ಪಿನಕೋಟೆ ಅವರ ಚಿಕ್ಕಪ್ಪ ಶ್ರೀಕಾಂತ ಪ್ರಭು (81 ವರ್ಷ) ಎಂಬವರಿಗೆ ಮದುವೆ ಆಗಿರುವುದಿಲ್ಲ. ಅವರು ತಲೆಸುತ್ತು, ಬಿ.ಪಿ ಖಾಯಿಲೆಯಿಂದ ಬಳಲುತ್ತಿದ್ದು, ಈ ಬಗ್ಗೆ ಅವರಿಗೆ ಉಡುಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿತ್ತಿರುವುದಾಗಿದೆ. ಅವರು ಹೆಚ್ಚಾಗಿ ಮನೆಯ ಹತ್ತಿರದಲ್ಲಿರುವ ನರಸಿಂಹ ಪೈ ರವರ ಜಾಗದಲ್ಲಿ ಬಿದ್ದಿರುವ ತೆಂಗಿನ ಕಾಯಿಗಳನ್ನು ಹೆಕ್ಕಲು ಹೋಗುತ್ತಿದ್ದು ಅದೇ ರೀತಿ ದಿನಾಂಕ: 27.06.2022 ರಂದು ರಂದು ಬೆಳಿಗ್ಗೆ 09:30 ಗಂಟೆಯಿಂದ ದಿನಾಂಕ 28.06.2022 ರಂದು ಬೆಳಿಗ್ಗೆ 11:30 ಗಂಟೆಯ ಮಧ್ಯಾವದಿಯಲ್ಲಿ ನರಸಿಂಹ ಪೈ ರವರ ಜಾಗದಲ್ಲಿ ಬಿದ್ದಿರುವ ತೆಂಗಿನ ಕಾಯಿಗಳನ್ನು ಹೆಕ್ಕಲು ನಡೆದುಕೊಂಡು ಹೋಗುವಾಗ ತಲೆ ಸುತ್ತು ಬಂದು ತೆರದ ಬಾವಿಯ ದಂಡೆಯ ಮೇಲೆ ಸುಧಾರಿಸಿ ಕೊಳ್ಳಲು ದಂಡೆಯ ಮೇಲೆ ಕುಳಿತಾಗ ಆಯತಪ್ಪಿ ಬಾವಿಯ ನೀರಿನಲ್ಲಿ ಬಿದ್ದು ಮುಳುಗಿ ಮೃತಪಟ್ಟಿರುವುದಾಗಿದೆ.ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ  ಯುಡಿಆರ್ ನಂ. 29/2022 ಕಲಂ 174  ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 28-06-2022 06:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080