ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಬ್ರಹ್ಮಾವರ: ದಿನಾಂಕ 27/06/2021 ರಂದು ಬೆಳಿಗ್ಗೆ  ಪಿರ್ಯಾದಿದಾರರಾದ ಶಿವಾನಂದ ಸನೀಲ್ (43), ತಂದೆ: ದಿ.ಸಂಜೀವ ಪೂಜಾರಿ, ವಾಸ: ಉಪ್ಪೂರು ಕುದ್ರುಬೆಟ್ಟು, ಕಡವಿನ ಬಾಗಿಲು, ಉಪ್ಪೂರು ಗ್ರಾಮ, ಬ್ರಹ್ಮಾವರ ತಾಲೂಕು ಇರು ತನ್ನ ಸ್ಕೂಟರ್‌ನಲ್ಲಿ ಅವರ ಸ್ನೇಹಿತ ಅಶೋಕ್ ಜತ್ತನ್ ರವರನ್ನು ಸಹಸವಾರರನ್ನಾಗಿ ಕುರಿಸಿಕೊಂಡು ಬ್ರಹ್ಮಾವರ ಕಡೆಯಿಂದ ಉಪ್ಪೂರು ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಾ ಬ್ರಹ್ಮಾವರ ಹೇರೂರು ಸೇತುವೆ ದಾಟಿ ಸ್ವಲ್ಪ ಮುಂದೆ  ಬೆಳಿಗ್ಗೆ 11:00 ಗಂಟೆಗೆ ಹೇರಾಯಿ ಬೆಟ್ಟು ಎಂಬಲ್ಲಿ ತಲುಪಿದಾಗ  ಅವರ ಮುಂದಿನಿಂದ ಆರೋಪಿ ಹರೀಶ್ KA-20-ER-4760 ನೊಂದಣಿ ನಂಬ್ರದ ಹೊಂಡಾ ಆ್ಯಕ್ಟಿವಾ ಸ್ಕೂಟರ್‌ನ್ನು ಅತೀವೇಗ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಹೋಗಿ ಆತನ ಮುಂದಿನಿಂದ ಉಪ್ಪೂರು ಕಡೆಗೆ ಹೋಗುತ್ತಿದ್ದ ಸೈಕಲ್ ಸವಾರನಿಗೆ ಹಿಂದಿನಿಂದ ಡಿಕ್ಕಿ ಹೊಡೆದಿರುವುದಾಗಿದೆ. ಈ ಅಪಘಾತದ ಪರಿಣಾಮ ಸೈಕಲ್ ಸವಾರ ಸೈಕಲ್ ಸಮೇತ ಹಾಗೂ ಆರೋಪಿಯು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಸೈಕಲ್ ಸವಾರರಾದ ಲೋಕು ಪೂಜಾರಿ ಎಂಬುವವರ ತಲೆಗೆ ಮತ್ತು ಎರಡೂ ಕಣ್ಣಿಗೆ, ಎಡ ಕೈ,  ಎಡ ಕಾಲಿಗೆ ಗಾಯವಾಗಿರುತ್ತದೆ. ಆರೋಪಿ ಹರೀಶ್ ರವರ ಕಣ್ಣಿನ ಬಳಿ ಗಾಯವಾಗಿರುತ್ತದೆ. ಗಾಯಾಳು ಇಬ್ಬರನ್ನೂ ಚಿಕಿತ್ಸೆ ಬಗ್ಗೆ ಒಂದು ವಾಹನದಲ್ಲಿ ಉಡುಪಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 128/2021 ಕಲಂ:  279 , 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

 • ಮಲ್ಪೆ: ಪಿರ್ಯಾದಿದಾರರಾದ ಸುಜಿತ್ (31), ತಂದೆ: ರಾಮದಾಸ್ ಕಾಮತ್,  ವಾಸ: ಸುರಕ್ಷಂ  20-54 ಮೂಡುಬೆಟ್ಟು ಕೊಡವೂರು ಗ್ರಾಮ  ಇವರ ಚಿಕ್ಕಪ್ಪ  ಮೋಹನ್ ದಾಸ ಕಾಮತ್( 64)  ರವರು  ಅವಿವಾಹಿತರಾಗಿದ್ದು , ಮಣಿಪಾಲ ಎಂಐಟಿ ಕಾಲೇಜಿನಲ್ಲಿ  ಕ್ಲಕ್ ಆಗಿ ಕೆಲಸದಲ್ಲಿದ್ದು  4 ವರ್ಷದ ಹಿಂದೆ  ನಿವೃತ್ತಿ ಹೊಂದಿ ಮನೆಯಲ್ಲಿ ಇದ್ದು , ದಿನಾಂಕ 26/06/2021 ರಂದು  ಎಂದಿನಂತೆ  ಬೆಳಿಗ್ಗೆ 7:15 ಗಂಟೆಗೆ  ಮನೆಯಿಂದ   ಸೈಕಲ್  ನಿಂದ  ಹೊರಟಿದ್ದು ಆ ಸಮಯ ವಿಪರೀತ ಮಳೆ ಬರುತ್ತಿದ್ದು  ಮೂಡುಬೆಟ್ಟು ಆಚಾರಿ  ಕಟ್ಟೆ ಯಿಂದ ಸ್ವಲ್ಪ  ಮುಂದೆ ರಸ್ತೆಯಲ್ಲಿ  ಒಂದು ಕೈಯಲ್ಲಿ ಕೋಡೆ ಇನ್ನೊಂದು ಕೈಯಲ್ಲಿ  ಸೈಕಲ್ ಹಿಡಿದು ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಆಕಸ್ಮಿಕವಾಗಿ   ಸೈಕಲ್  ಜಾರಿ ಸೈಕಲ್ ಸಮೇತ ಡಾಂಬರು ರಸ್ತೆಗೆ ಬಿದ್ದು ಹಿಂಬದಿಯ ತಲೆಗೆ ಒಳಜಖಂ ಆಗಿ  ಪ್ರಜ್ಞಾಹೀನ ಸ್ಥಿತಿ  ಯಲ್ಲಿದ್ದವರನ್ನು ಚಿಕಿತ್ಸೆ ಯ ಬಗ್ಗೆ ಉಡುಪಿ  ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಯ ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ  ದಾಖಲಾಗಿದ್ದು , ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 27/06/2021 ರಂದು ಮಧ್ಯಾಹ್ನ 3:00 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 32/2021  ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ಪಿರ್ಯಾದಿದಾರರಾದ ಸೈಮನ್‌ಮಸ್ಕರೇನಸ್‌ (31), ತಂದೆ: ಇಜದೋರ್ ಮಸ್ಕರೇನಸ್‌, ವಾಸ: ಕೇರಾ ಮನೆ, ನಲ್ಲೂರು ಗ್ರಾಮ, ಮಂಜಲ್ತಾರ್‌ ಅಂಚೆ, ಕಾರ್ಕಳ ತಾಲೂಕು ಇವರ ಚಿಕ್ಕಪ್ಪ ಸಿಲ್ವೆಸ್ಟರ್ ಮಸ್ಕರೇನಸ್‌ (54) ರವರಿಗೆ ಹೃದಯ ಸಂಬಂಧಿ ಖಾಯಿಲೆಯಿದ್ದು ವೈದ್ಯರು ಸಲಹೆಯಂತೆ ಔಷಧಿ ಪಡೆಯುತ್ತಿದ್ದು ಬೆಳಿಗ್ಗೆ ಮತ್ತು ಸಂಜೆ ವಾಕಿಂಗ್‌ ಹೋಗುವ ರೂಢಿ ಮಾಡಿಕೊಂಡಿದ್ದರು. ಅದರಂತೆ ದಿನಾಂಕ 27/06/2021 ರಂದು 07.15 ಗಂಟೆಗೆ ಮನೆಯಿಂದ ವಾಕಿಂಗ್‌ಗೆ ಹೋದವರು ಎಂದಿನಂತೆ ಅರ್ಧ ಮುಕ್ಕಾಲು ಗಂಟೆಯೊಳಗೆ ವಾಪಾಸು ಬರುತ್ತಿದ್ದವರು ವಾಪಾಸು ಬಾರದೇ ಇದ್ದುದನ್ನು ಕಂಡ ಪಿರ್ಯಾದಿದಾರರು ಪಕ್ಕದ ಮನೆಯ ರಾಜು ಗೌಡರವರೊಂದಿಗೆ ಮನೆ ಪಕ್ಕ ಇರುವ ಕಾಡಿನಲ್ಲಿ ಒಂದೂವರೇ ಕಿ. ಮೀ. ತನಕ ಸುತ್ತಮುತ್ತ ಹುಡುಕಾಡಿದಾಗ ಅರಣ್ಯ ಇಲಾಖೆಯವರು ಕಾಡು ಪ್ರಾಣಿಗಳಿಗೆ ನೀರು ಕುಡಿಯಲು ನಿರ್ಮಾಣ ಮಾಡಿದ ದೊಡ್ಡ ಕೆರೆಯಲ್ಲಿ ತುಂಬಿದ ನೀರಿನ ಅಡಿಯಲ್ಲಿ ಸಂಜೆ 04:30 ಗಂಟೆ ವೇಳೆಗೆ ಪಿರ್ಯಾದಿದಾರರ ಚಿಕ್ಕಪ್ಪನವರ ಮೃತ ದೇಹವು ಪತ್ತೆಯಾಗಿದ್ದು ಅವರು ಧರಿಸಿದ ಚಪ್ಪಲು ಕೆರೆಯ ದಂಡೆಯ ಮೇಲೆ ಇದ್ದು ಕಂಡು ಬಂದಿರುತ್ತದೆ. ಮೃತರು ಅವರಿಗಿದ್ದ ಹೃದಯ ಸಂಬಂಧಿ ಖಾಯಿಲೆಯಿಂದ ಮಾನಸಿಕವಾಗಿ ಜೀವನದಲ್ಲಿ ನೊಂದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಅರ್ ಕ್ರಮಾಂಕ 18/2021 ಕಲಂ: 174 ಸಿ,ಆರ್,ಪಿ,ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಜುಗಾರಿ ಪ್ರಕರಣ

 • ಅಜೆಕಾರು: ದಿನಾಂಕ 27/06/2021 ರಂದು ಕಾರ್ಕಳ ತಾಲೂಕು ಕಡ್ತಲ ಗ್ರಾಮದ ಕುಂಜಿಕೆರೆ ಎಂಬಲ್ಲಿ ಪ್ರಸನ್ನ ಹೆಗ್ಡೆಯವರ ಮನೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಇಸ್ಪಿಟು ಜುಗಾರಿ ಆಟ ನಡೆಸುತ್ತಿರುವುದಾಗಿ ಸುದರ್ಶನ್ ದೊಡಮನಿ, ಪೊಲೀಸ್‌ ಉಪನಿರೀಕ್ಷಕರು, ಅಜೆಕಾರು ಪೊಲೀಸ್‌ ಠಾಣೆ ಇವರಿಗೆ ದೊರೆತ ವರ್ತಮಾನದಂತೆ ದಾಳಿ ನಡೆಸಿ ಆರೋಪಿಗಳಾದ 1) ಪ್ರಸನ್ನ ಹೆಗ್ಡೆ (53),  ತಂದೆ: ಸದಾಶಿವ ಹೆಗ್ಡೆ, ವಾಸ: ಕುಂಜಿಕೆರೆ ಹೌಸ್, ಕಡ್ತಲ ಗ್ರಾಮ, ಕಾರ್ಕಳ ತಾಲೂಕು, ಉಡುಪಿ  ಜಿಲ್ಲೆ, 2) ರಾಜೇಶ್ ಶೆಟ್ಟಿ (35),  ತಂದೆ: ಜಯಕರ ಶೆಟ್ಟಿ, ವಾಸ: ಲಕ್ಷ್ಮಿ ನಿವಾಸ, ಹಾಡಿಯಂಗಡಿ ಪೋಸ್ಟ್ ಶಿರ್ಲಾಲು ಗ್ರಾಮ, ಕಾರ್ಕಳ ತಾಲೂಕು ಉಡುಪಿ ಜಿಲ್ಲೆ, 3) ಹರೀಶ್ ಕಾಮತ್ (45), ತಂದೆ: ಪದ್ಮನಾಭ ಕಾಮತ್, ವಾಸ: ಶ್ರೀ.ಪದ್ಮಾವತಿ, ಮುದೆಲ್ಕಡಿ, ಮರ್ಣೆ ಗ್ರಾಮ, ಕಾರ್ಕಳ ತಾಲೂಕು ಉಡುಪಿ ಜಿಲ್ಲೆ, 4)  ಸುರೇಂದ್ರ ಶೆಟ್ಟಿ (35), ತಂದೆ: ವಿಠಲ ಶೆಟ್ಟಿ, ವಾಸ: ಬೊಂಡುಕುಮೇರಿ ಹೌಸ್, ಮರ್ಣೆ ಗ್ರಾಮ, ಕಾರ್ಕಳ ತಾಲೂಕು ಉಡುಪಿ ಜಿಲ್ಲೆ , 5) ಮಹೇಶ್ ಶೆಟ್ಟಿ(33), ತಂದೆ: ಶೇಖರ ಶೆಟ್ಟಿ, ವಾಸ: ಕೊಂಬಗುಡ್ಡೆ, ಅಜೆಕಾರು, ಮರ್ಣೆ ಗ್ರಾಮ, ಕಾರ್ಕಳ ತಾಲೂಕು ಉಡುಪಿ ಜಿಲ್ಲೆ, 6) ಸಂತೋಷ್ (38), ತಂದೆ: ಶೇಖರ ಪೂಜಾರಿ, ವಾಸ: ಕಾಂತಬೆಟ್ಟು, ಅಜೆಕಾರು ಮರ್ಣೆ ಗ್ರಾಮ, ಕಾರ್ಕಳ ತಾಲೂಕು ಉಡುಪಿ ಜಿಲ್ಲೆ,  7) ಸತೀಶ್ (40), ತಂದೆ: ರಾಮಣ್ಣ ಹೆಗ್ಡೆ ವಾಸ: ಸಿರಿಬೈಲು, ಕಡ್ತಲ ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರನ್ನು ದಸ್ತಗಿರಿ ಮಾಡಿ ಆರೋಪಿತರು ಅಂದರ್‌  ಬಾಹರ್‌ ಇಸ್ಪೀಟ್‌‌ ಆಟಕ್ಕೆ ಬಳಸಿದ ಒಟ್ಟು 11,420/- ರೂಪಾಯಿ, 52 ಇಸ್ಪೀಟ್‌ ಎಲೆಗಳು, ಹಳೆಯ ಪ್ಲಾಸ್ಟಿಕ್ ಗೋಣಿಚೀಲವನ್ನು ಸ್ವಾಧೀನಪಡಿಕೊಂಡಿರುವುದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 17/2021  ಕಲಂ: 87 KP Act ರಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

 • ಕುಂದಾಪುರ: ದಿನಾಂಕ 27/06/2021 ರಂದು  ಸುಧಾಪ್ರಭು, ಪೊಲೀಸ್ ಉಪನಿರೀಕ್ಷಕರು, ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಇವರಿಗೆ ಕುಂದಾಪುರ ತಾಲೂಕು ಗುಲ್ವಾಡಿ ಗ್ರಾಮದ ಕಾಂಡ್ಲಗದ್ದೆ ನಿವಾಸಿ ಅಬೂಬಕರ್ ಎಂಬಾತನು ಜಾನುವಾರುಗಳನ್ನು ಮಾಂಸ ಮಾಡುವ ಉದ್ದೇಶದಿಂದ ಅಕ್ರಮ ವಾಗಿ ಎಲ್ಲಿಂದಲೂ ಕಳುವು ಮಾಡಿ ತಂದು ತನ್ನ ಮನೆ ಬಳಿ ಹಿಂಸ್ಮಾತ್ಮಕವಾಗಿ ಕಟ್ಟಿ ಹಾಕಿದ ಬಗ್ಗೆ ಬಂದ ಮಾಹಿತಿ  ಮೇರೆಗೆ ಗುಲ್ವಾಡಿ ಗ್ರಾಮದ ಕಾಂಡ್ಲಗದ್ದೆ ಎಂಬಲ್ಲಿಗೆ ತಲುಪುವಾಗ ಪೊಲೀಸರು ಜೀಪಿನಲ್ಲಿ ಮನೆ ಹತ್ತಿರ ಬರುವುದನ್ನು ಕಂಡು ಆರೋಪಿ ಅಬೂಬಕರ್  (42), ತಂದೆ: ಅಬ್ದುಲ್ ಬ್ಯಾರಿ,  ಗುಲ್ವಾಡಿ ಗ್ರಾಮ ಗುಲ್ವಾಡಿ ಪೋಸ್ಟ್ ಕಾಂಡ್ಲಾಗದ್ದೆ ಕುಂದಾಪುರ ತಾಲೂಕು ಓಡಿ ಹೋಗಿರುತ್ತಾನೆ.  ಆ ಬಳಿಕ ಸ್ಥಳದಲ್ಲಿ ವಧಿಸಿ ಮಾಂಸ ಮಾಡಲು ಹಿಂಸಾತ್ಮಕವಾಗಿ ಹಗ್ಗದಿಂದ ಕಟ್ಟಿದ 55,000/- ರೂಪಾಯಿ ಮೌಲ್ಯದ 23 ಜಾನುವಾರುಗಳು ಹಾಗೂ ಜಾನುವಾರುಗಳನ್ನು ಕಟ್ಟಲು ಉಪಯೋಗಿಸಿದ 23 ಹಗ್ಗ ವಶಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 48/2021 ಕಲಂ: 379 ಐಪಿಸಿ ಮತ್ತು ಕಲಂ:11(1) (D) ಪ್ರಾಣಿ ಹಿಂಸೆ ನಿಷೇಧ ಕಾಯಿದೆ 1960 ರಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 28-06-2021 10:43 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080