ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 28/06/2021  ರಂದು ಬೆಳಿಗ್ಗೆ  9:50 ಗಂಟೆಗೆ  ಕುಂದಾಪುರ  ತಾಲೂಕಿನ,  ಕಸಬಾ ಗ್ರಾಮದ KSRTC  ಬಸ್‌ನಿಲ್ದಾಣದ  ಹತ್ತಿರದ  ಶ್ರೀ  ಗಣೇಶ್‌ ತೆಂಗಿನೆಣ್ಣೆ  ಮಿಲ್‌‌ ಬಳಿ,  ಪಶ್ಚಿಮ ಬದಿಯ NH66 ರಸ್ತೆಯಲ್ಲಿ,  ಆಪಾದಿತ ಮೊಹಮ್ಮದ್‌ ಶಬೀರ್‌ ಎಂಬುವವರು  KA-19-MC-5959ನೇ ಕಾರನ್ನು ಉಡುಪಿ  ಕಡೆಯಿಂದ ಬೈಂದೂರು ಅತೀವೇಗ  ಹಾಗೂ ನಿರ್ಲಕ್ಷತನದಿಂದ ಚಾಲನೆ  ಮಾಡಿಕೊಂಡು ಕಾರನ್ನು  ರಸ್ತೆಯ  ತೀರ  ಎಡಬದಿಗೆ  ಚಲಾಯಿಸಿ, ಪಶ್ಚಿಮ ಬದಿಯ NH66 ರಸ್ತೆಯ  ಎಡಬದಿಯಲ್ಲಿ  ಅಂದರೆ  ಪಶ್ಚಿಮ ಬದಿಯಲ್ಲಿ  ಸೈಕಲ್‌‌ನ್ನು  ದೂಡಿಕೊಂಡು  ಸಂಗಮ್‌‌ ಕಡೆಯಿಂದ ಕುಂಭಾಶಿ  ಕಡೆಗೆ ಬರುತ್ತಿದ್ದ ಪ್ರಭಾಕರ ಖಾರ್ವಿ ಯವರಿಗೆ ಎದುರುಗಡೆಯಿಂದ ಡಿಕ್ಕಿ  ಹೊಡೆದ ಪರಿಣಾಮ,  ಪ್ರಭಾಕರ  ಖಾರ್ವಿಯವರ   ತಲೆಗೆ, ಸೊಂಟಕ್ಕೆ, ಎದೆಗೆ ಹಾಗೂ ಕೈ ಕಾಲುಗಳಿಗೆ ಒಳಜಖಂ ಹಾಗೂ ರಕ್ತಗಾಯವಾಗಿ ಕುಂದಾಪುರ  ಆದರ್ಶ  ಆಸ್ಪತ್ರೆಯಲ್ಲಿ  ಪ್ರಥಮ  ಚಿಕಿತ್ಸೆ  ಪಡೆದು  ಹೆಚ್ಚಿನ ಚಿಕಿತ್ಸೆ  ಬಗ್ಗೆ ಮಣಿಪಾಲ  ಕೆ.ಎಂಸಿ   ಆಸ್ಪತ್ರೆಗೆ ಹೋಗಿರುತ್ತಾರೆ.  ಹಾಗೂ  ಕಾರಿನಲ್ಲಿ ಪ್ರಯಾಣಿಸುತ್ತಿದ್ದ  ಫಾತಿಮಾ  ರವರ ತಲೆಗೆ  ಹಾಗೂ ಎಡ ಕೈಗೆ  ಗಾಯನೋವಾಗಿ ಕುಂದಾಪುರ  ಆದರ್ಶ  ಆಸ್ಪತ್ರೆಯಲ್ಲಿ  ಹೊರ ರೋಗಿಯಾಗಿ  ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 58/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಅಸ್ವಾಭಾವಿಕ ಮರಣ ಪ್ರಕರಣ

  • ಹಿರಿಯಡ್ಕ: ಪಿರ್ಯಾದಿದಾರರಾದ ಲತಾ ಪಿ ಶೆಟ್ಟಿ (40), ಗಂಡ: ಪ್ರಕಾಶ ಶೆಟ್ಟಿ, ವಾಸ: ಗರ್ದರ ಬೆಟ್ಟು, ಬಣ್ಣಂಪಳ್ಳಿ, ಪೆರ್ಡೂರು ಗ್ರಾಮ, ಉಡುಪಿ ತಾಲೂಕು. ಮತ್ತು ಜಿಲ್ಲೆ ಇವರ ಗಂಡ  ಪ್ರಕಾಶ ಶೆಟ್ಟಿ (46) ರವರು ವಿಪರೀತ ಕುಡಿತದ ಚಟ ಹೊಂದಿದ್ದು, ಕುಡಿದ ದಿನ ಎಲ್ಲೆಂದರಲ್ಲಿ ಮಲಗಿ ಬೆಳಿಗ್ಗೆ ಮನೆಗೆ ಬರುತ್ತಿದ್ದರು. ದಿನಾಂಕ 27/06/2021 ರಂದು ಸಂಜೆ 4:00 ಗಂಟೆಗೆ ಬಣ್ಣಂಪಳ್ಳಿಯಲ್ಲಿ ಗುಡ್ಡೆದ ಭೂತಕ್ಕೆ ಹೋದವರು ಅಲ್ಲಿ ವಿಪರೀತ ಕುಡಿದಿದ್ದು, ಊಟ ಮಾಡಿ ಮನೆಗೆ ಬರಲು ದಾರಿ ತಪ್ಪಿ ಹರೀಶ ಹೆಗ್ಡೆ ರವರ ಮನೆಯ ಹಿಂಬದಿಯಲ್ಲಿರುವ ಅಡಿಕೆ ತೋಟದಿಂದ ಬರುತ್ತಿರುವಾಗ ಆಕಸ್ಮತ್ತಾಗಿ ಕಾಲು ಜಾರಿ ಅಥವಾ ಎಡವಿ ಬಿದ್ದು, ಅಡಿಕೆ ಸಸಿಯ ಗುಂಡಿಗೆ ಮುಗುಚಿ ಬಿದ್ದಾಗ ಎಡ ಕಣ್ಣಿನ ಬಳಿ ಪೆಟ್ಟಾಗಿ ರಕ್ತ ಸ್ರಾವವಾಗಿ ಅಥವಾ ಒಳಪೆಟ್ಟಿನಿಂದಾಗಿ ಮೃತಪಟ್ಟಿರಬಹುದು ಅಥವಾ ಬೀಳುವಾಗ ಹೃದಯಾಘಾತವಾಗಿರಬಹುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 15/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಶ್ರೀಮತಿ ವಾಣಿಶ್ರೀ (31), ಗಂಡ:ಸುಜಿತ್, ವಾಸ:8-20 ಸಿ, ಪರ್ಣ ಕುಟೀರ, ಸರಳಬೆಟ್ಟು, ಮಣಿಪಾಲ, ಉಡುಪಿ ಇವರು ದಿನಾಂಕ 19/10/2020 ರಂದು ಆಪಾದಿತ 1. ಸುಜಿತ್ ರವರೊಂದಿಗೆ ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ವಿವಾಹವಾಗಿ ದಿನಾಂಕ 13/11/2020 ರಂದು ಉಡುಪಿ ರಿಜಿಸ್ಟಾರ್ ಆಫೀಸ್ ನಲ್ಲಿ ವಿವಾಹ ನೋಂದಣಿ ಮಾಡಿಸಿರುತ್ತಾರೆ. ವಿವಾಹದ ನಂತರ ಪಿರ್ಯಾದಿದಾರರು ಅವರ ಗಂಡನ ಮನೆಯಾದ ಬಡನಿಡಿಯೂರಿನಲ್ಲಿ ವೈವಾಹಿಕ ಜೀವನವನ್ನು ಪ್ರಾರಂಭಿಸಿದ್ದು, ವಿವಾಹದ ಮೊದಲ ದಿನದಿಂದಲೇ ಆಪಾದಿತ 1 ನೇಯವರು ಪಿರ್ಯಾದಿದಾರರಿಗೆ  ಮಾನಸಿಕ ಹಿಂಸೆಯನ್ನು ನೀಡಿರುತ್ತಾರೆ. ನಂತರ ಆಪಾದಿತ 2.ಸುಪ್ರೀತ 3.ಸುಜಾತ 4.ವಿಟ್ಟಲ್ ಪುತ್ರನ್ ಇವರ ಕುಮ್ಮಕ್ಕಿನಲ್ಲಿ  ಆಪಾದಿತ 1ನೇ ಯವರು ಪಿರ್ಯಾದಿದಾರರಿಗೆ ಬೈಯ್ದು ತೊಂದರೆ ನೀಡಿ 5 ಲಕ್ಷ ಹಣವನ್ನು ತವರು ಮನೆಯಿಂದ ತರಬೇಕು ಎಂದು ಪಿರ್ಯಾದಿದಾರರ ಬಳಿಯಿದ್ದ 45 ಪವನ್ ಚಿನ್ನವನ್ನು ತನ್ನ ಹೆಸರಿನಲ್ಲಿ ಜಾಯಿಂಟ್ ಎಕೌಂಟ್ ನಲ್ಲಿ ಇಡಬೇಕು ಹಾಗೂ ತನಗೆ ವಿದೇಶಕ್ಕೆ ಹೋಗಲು ಹಣದ ಅವಶ್ಯಕತೆಯಿದ್ದು, ತವರು ಮನೆಯಿಂದ ಹಣವನ್ನು ತರಬೇಕೆಂದು ಒತ್ತಾಯಿಸಿದ ಮೇರೆಗೆ ದಿನಾಂಕ:07/12/2020 ರಂದು ರೂಪಾಯಿ 35,000/- ವನ್ನು ಆಪಾದಿತ 1 ನೇಯವರ ಖಾತೆಗೆ ವರ್ಗಾಯಿಸಿದ್ದು, ಇನ್ನೂ ಹೆಚ್ಚಿನ ಹಣ ತರುವಂತೆ ಪಿರ್ಯಾದಿದಾರಿಗೆ ಅಶ್ಲೀಲವಾಗಿ ಬೈಯ್ದು ಹೆದರಿಸುತ್ತಿದ್ದು. ದಿನಾಂಕ 28/01/2021 ರಂದು ಆಪಾದಿತ 1 ನೇಯವರು ಆಪಾದಿತ 2 ರಿಂದ 4 ನೇಯವರ ಪ್ರಚೋದನೆಯಿಂದ ಪಿರ್ಯಾದಿದಾರರನ್ನು ಉದ್ದೇಶಿಸಿ ಹಣ ಮತ್ತು ಚಿನ್ನ ತರದಿದ್ದರೇ ಮನೆಯಲ್ಲಿ ಇರಬಾರದು, ಇದ್ದರೇ ಕೊಂದು ಹಾಕುತ್ತೇನೆ ಎಂದು ಜೀವ ಬೆದರಿಕೆ ಹಾಕಿ, ಹಣ ಹಾಗೂ ಒಡವೆಯನ್ನು ಮನೆಯಿಂದ ತೆಗೆದುಕೊಂಡು ಬರಲೇಬೇಕು ಎಂದು ಮನೆಯಿಂದ ಹೊರಹಾಕಿರುವುದಾಗಿ ನೀಡಿದ ದೂರಿನಂತೆ ಮಹಿಳಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 23/2021 ಕಲಂ: 498(ಎ), 504, 506 ಜೊತೆಗೆ 34 ಐಪಿಸಿ ಮತ್ತು. ಕಲಂ 3, 4 ಡಿಪಿ ಕಾಯಿದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 28-06-2021 05:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080