ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ಪಿರ್ಯಾದಿ: ಶಶಿಧರ ದೇವಾಡಿಗ, ಪ್ರಾಯ : 44 ವರ್ಷ ,ತಂದೆ:ದಿ ಜಗನ್ನಾಥ ದೇವಾಡಿಗ, ವಾಸ: ಹುಣ್ಸೆಕಟ್ಟೆ ದರ್ಖಾಸು ಮನೆ ಕಲ್ಯಾ ಅಂಚೆ ನಿಟ್ಟೆ ಗ್ರಾಮ ಇವರ ನೆರೆಮನೆಯವರಾದ  ಸದಾನಂದ   ಶೆಟ್ಟಿ ಪ್ರಾಯ 45 ವರ್ಷ ಎಂಬವರು ಕ್ಯಾಟರಿಂಗ್ ವ್ಯವಹಾರ ಮಾಡಿಕೊಂಡಿದ್ದು, ನಿನ್ನೆ  ದಿನಾಂಕ 26-05-2023 ರಂದು ಸದಾನಂದ ಶೆಟ್ಟಿರವರ ಸಂಭಂಧಿಕರ ಮನೆಯಾದ ಶಿರ್ಲಾಲ್  ಎಂಬಲ್ಲಿ ಕಾರ್ಯಕ್ರಮಕ್ಕೆ ಹೋದ ಸದಾನಂದ ಶೆಟ್ಟಿರವರು  ಅವರ  ಮಗ ಸ್ಪರ್ಷ್ (13 ವರ್ಷ) ನನ್ನು ಹಿಂಬದಿ ಸವಾರನಾಗಿ ಕುಳ್ಳಿರಿಸಿಕೊಂಡು   ಅವರ  ಇಲೆಕ್ಟ್ರಿಕ್   ಸ್ಕೂಟರ್ KA20HA5626 ರಲ್ಲಿ ಶಿರ್ಲಾಲ್ ನಿಂದ  ನಿಟ್ಟೆಗೆ ರಾಜ್ಯ ಹೆದ್ದಾರಿಯಲ್ಲಿ ಹೆಬ್ರಿ –ಕಾರ್ಕಳ ರಸ್ತೆಯಲ್ಲಿ ಕಾರ್ಕಳ ಕಡೆಗೆ  ಸವಾರಿ  ಮಾಡಿಕೊಂಡು ಬರುತ್ತಾ ರಾತ್ರಿ  10-30 ಗಂಟೆಗೆ ಹಿರ್ಗಾನ   ಗ್ರಾಮದ ಬಿ ಎಮ್ ಶಾಲೆಯ  ಬಳಿ  ತಲುಪುವಾಗ  ಯಾವುದೋ  ಪ್ರಾಣಿಯೊಂದು ರಸ್ತೆಯಲ್ಲಿ ಅಡ್ಡ ಬಂದ  ಕಾರಣ ಅತೀವೇಗ ಮತ್ತು ಅಜಾಗರೂಕತೆಯಿಂದ ಸ್ಕೂಟರ್  ಸವಾರಿ ಮಾಡುತ್ತಿದ್ದ  ಸದಾನಂದ ಶೆಟ್ಟಿರವರು  ಸ್ಕೂಟರ್‌ಗೆ ಒಮ್ಮೆಲೇ  ಬ್ರೇಕ್  ಹಾಕಿದಾಗ  ಸ್ಕೂಟರ್‌ನೊಂದಿಗೆ  ಸದಾನಂದ ಶೆಟ್ಟಿ   ಮತ್ತು  ಸ್ಪರ್ಷ್ ರಸ್ತೆಗೆ  ಬಿದ್ದಿದ್ದು ಅವರು ಧರಿಸಿದ್ದ ಹೆಲ್ಮೆಟ್ ಕಳಚಿ ಬಿದ್ದು ಸದಾನಂದ ಶೆಟ್ಟಿರವರಿಗೆ ತಲೆಗೆ ಗಂಭೀರ ಸ್ವರೂಪದ ಗಾಯವಾಗಿದ್ದು ಹಿಂಬದಿ ಸವಾರನಾದ  ಸ್ಪರ್ಷ್ ನಿಗೆ  ಬಲಕೈಗೆ ರಕ್ತಗಾಯವಾಗಿದ್ದು  ಎಡಕೈಗೆ ತರಚಿದ ಗಾಯವಾಗಿದ್ದು ಗಾಯಾಳುಗಳನ್ನು  ಕಾರ್ಕಳದ ಡಾ. ಟಿ ಎಂಎ ಪೈ ಆಸ್ಪತ್ರೆಗೆ  ಕರೆದುಕೊಂಡು ಹೋಗಿದ್ದು   ಅಲ್ಲಿ ಚಿಕಿತ್ಸೆ ಕೊಡಿಸಿ ಸದಾನಂದ ಶೆಟ್ಟಿರವರನ್ನು   ಹೆಚ್ಚಿನ  ಚಿಕಿತ್ಸೆಗೆ  ಮಣಿಪಾಲ   ಕೆಎಂಸಿ  ಆಸ್ಪತ್ರೆಗೆ    ಕಳುಹಿಸಿಕೊಟ್ಟಿದ್ದು ಅಲ್ಲಿಂದ  ಹೆಚ್ಚಿನ  ಚಿಕಿತ್ಸೆಗೆ  ಮಂಗಳೂರು  ವೆನ್‌ಲಾಕ್   ಆಸ್ಪತ್ರೆಗೆ  ಕಳುಹಿಸಿಕೊಟ್ಟಿದ್ದು  ತಲೆಗೆ ಗಂಭೀರ ಗಾಯಗೊಂಡ  ಸದಾನಂದ   ಶೆಟ್ಟಿರವರು ಚಿಕಿತ್ಸೆಗೆ ಸ್ಪಂದಿಸದೇ ಮಂಗಳೂರು  ವೆನ್‌ಲಾಕ್   ಆಸ್ಪತ್ರೆಯಲ್ಲಿ  ಈ ದಿನ ದಿನಾಂಕ  27-05-2023  ರಂದು ಬೆಳಿಗ್ಗೆ 09-15   ಗಂಟೆಗೆ    ಮೃತಪಟ್ಟಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ  66/2023  ಕಲಂ 279,337, 304(ಎ)  ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ. 
  • ಕುಂದಾಪುರ: ದಿನಾಂಕ 26/05/2023 ರಂದು ಸಂಜೆ ಸಮಯ ಸುಮಾರು 07:20   ಗಂಟೆಗೆ, ಕುಂದಾಪುರ  ತಾಲೂಕಿನ ದೇವಲ್ಕುಂದ ಗ್ರಾಮದ ದೇವಲ್ಕುಂದ ಪೋಸ್ಟ್‌ ಆಪೀಸ್‌ ಹತ್ತಿರ ರಸ್ತೆಯಲ್ಲಿ, ಆಪಾದಿತ  ಗಣೇಶ ಎಂಬವರು KA42-V-5055 ನೇ ಬೈಕ್ ನಲ್ಲಿ ಪಿರ್ಯಾದಿ: ಲೋಹಿತಾಶ್ವ ಆರ್‌ ಕುಂದರ ಪ್ರಾಯ 34 ವರ್ಷ,ತಂದೆ:ರಾಜು ಕುಂದರ್‌,ವಾಸ:ಬಾಳೀಕೆರೆ ದೇವಲ್ಕುಂದ ಗ್ರಾಮ ಇವರನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ದೇವಲ್ಕುಂದ ಕಡೆಯಿಂದ  ಹೆಮ್ಮಾಡಿ ಕಡೆಗೆ  ಅತೀವೇಗ  ಹಾಗೂ ನಿರ್ಲಕ್ಷತನದಿಂದ  ಚಾಲನೆ ಮಾಡಿಕೊಂಡು ಬಂದು, ರಸ್ತೆಗೆ ಅಡ್ಡ ಬಂದ  ದನವನ್ನು ನೋಡಿ ಒಮ್ಮೇಲೆ ಬ್ರೇಕ್‌ ಹಾಕಿದ ಪರಿಣಾಮ ಬೈಕ್‌ ಸವಾರ ಗಣೇಶ ಹಾಗೂ ಪಿರ್ಯಾದಿದಾರರು ಬೈಕ್‌ ಸಮೇತ ರಸ್ತೆಗೆ ಬಿದ್ದ ಪರಿಣಾಮ ಬೈಕ್‌ ಸವಾರನಿಗೆ ತರಚಿದ ಗಾಯವಾಗಿದ್ದು,ಪಿರ್ಯಾದಿದಾರರಿಗೆ  ಬಲಬದಿಯ ಕಣ್ಣಿನ ಮೇಲೆ ರಕ್ತ ಗಾಯವಾಗಿ ಚಿಕಿತ್ಸೆ ಬಗ್ಗೆ  ಕುಂದಾಪುರ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ, ಅಪರಾಧ ಕ್ರಮಾಂಕ 70/2023   ಕಲಂ 279,337    ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಬೈಂದೂರು: ದಿನಾಂಕ 26/05/2023 ರಂದು 23:30 ಗಂಟೆಗೆ ಫಿರ್ಯಾದಿ: ನಿತೀಶ್ ದೇವಾಡಿಗ ಪ್ರಾಯ 36 ವರ್ಷ ತಂದೆ ಮಹಾಬಲ ದೇವಾಡಿಗ ವಾಸ ಶಿವಶಂಕರ್ ಟೈಲರ್ ಎನ್ಎಚ್-66   ಯಡ್ತರೆ ಗ್ರಾಮ   ಇವರು ಸ್ನೇಹಿತರಾದ ಗಣೇಶ್ ದೇವಾಡಿಗ, ಮತ್ತು ಸುರೇಶ್ ದೇವಾಡಿಗರವರೊಂದಿಗೆ  ಸ್ನೇಹಿತ ಚರಣ್ ಎಂಬವರ ಮನೆಯಲ್ಲಿ ಊಟ ಮಾಡಿ  ರಾತ್ರಿಯಾಗಿರುವುದರಿಂದ  ಸ್ನೇಹಿತ ಸುರೇಶ್ ದೇವಾಡಿಗರವರು ಗಣೇಶ್ ದೇವಾಡಿಗರವರನ್ನು ಮನೆಗೆ ಬಿಡಲು  KA 20  EW7180 ನೇ  ಮೋಟಾರು ಸೈಕಲ್ ನಲ್ಲಿ ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು  ಮುಂದೆ ಹೊರಟಿದ್ದು, ಫಿರ್ಯಾಧಿದಾರರು ಇನ್ನೊಂದು ಬೈಕಿನಲ್ಲಿ ಅವರ ಹಿಂದಿನಿಂದ ಹೋಗುತ್ತಿದ್ದಾಗ ಸುರೇಶ್ ದೇವಾಡಿಗ ಮೋಟಾರು ಸೈಕಲನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕೊಂಡು ಹೋಗುತ್ತಾ ಬೈಂದೂರು ಗ್ರಾಮದ ಬೈಂದೂರು-ಗಂಗನಾಡು ರಸ್ತೆಯ ಸೂರ್ಕುಂದ ಜೈನಜಟ್ಟಿಗೇಶ್ವರ ದೇವಸ್ಥಾನದ ಮುಖಮಂಟಪದ ಹತ್ತಿರ ರಸ್ತೆಯಲ್ಲಿ ತಲುಪಿದಾಗ  ಮೋಟಾರು ಸೈಕಲಿಗೆ ನಾಯಿಯೊಂದು ಅಡ್ಡ ಬಂದ ಕಾರಣ ಸವಾರ ಸುರೇಶ್ ದೇವಾಡಿಗ ಒಮ್ಮಲೆ ಬ್ರೇಕ್ ಹಾಕಿದ ಪರಿಣಾಮ ಮೋಟಾರು ಸೈಕಲಿನ ನಿಯಂತ್ರಣ  ತಪ್ಪಿ ಸವಾರ ಹಾಗು ಸಹಸವಾರ ಮೋಟಾರು ಸೈಕಲಿನೊಂದಿಗೆ ರಸ್ತೆ ಬಿದ್ದು ಅಪಘಾತದ ಪರಿಣಾಮ  ಸಹಸವಾರ ಗಣೇಶ್ ರವರಿಗೆ ಬಲಕಾಲ ಮೇಲೆ ಸೊಂಟದ  ಮೂಳೆ ಮುರಿತವಾಗಿದ್ದು, ಆರೋಪಿ ಚಾಲಕ ಸವಾರ ಸುರೇಶ್ ದೇವಾಡಿಗ ರವರಿಗೆ ಭುಜದ ಹತ್ತಿರ ಒಳನೋವು ಉಂಟಾಗಿರುತ್ತದೆ. ಗಾಯಗೊಂಡ ಸುರೇಶ್ ದೇವಾಡಿಗ ರವರನ್ನು ಚಿನ್ಮಯಿ ಆಸ್ಪತ್ರೆಗೆ  ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು  ಪರೀಕ್ಷಿಸಿ   ಒಳರೋಗಿಯಾಗಿ  ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  86/2023 ಕಲಂ:279, 338 ಭಾದಂಸಂ ರಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣ   

  • ಕೊಲ್ಲೂರು: ಪಿರ್ಯಾಧಿ: ಹರೀಶ(30 ವರ್ಷ) ತಂದೆ:   ಬಾಬು ಆಚಾರ್ಯ  ವಾಸ: ಹೊಸೂರು ಕದಳಿ  ಬರದಕಲ್ಲ ಹೊಸೂರು ಗ್ರಾಮ ಇವರು  ಉಡುಪಿಯಲ್ಲಿ ಅಲ್ಯೂಮಿನಿಯಂ ಯೂಪಿವಿಸಿ  ವಿಂಡೋಸ್‌ನಲ್ಲಿ  ಫಿಟಿಂಗ್‌ ವೃತ್ತಿ ಮಾಡಿಕೊಂಡಿದ್ದು ದಿನಾಂಕ: 27/05/2023 ರಂದು  ತನ್ನ ಬಾಬ್ತು  KA05-HL-9055 ನೇ ಮೋಟಾರು ಸೈಕಲ್‌ನ್ನು  ಉಡುಪಿಯಿಂದ ತನ್ನ ಮನೆಯಾದ ಹೊಸುರಿಗೆ ಚಲಾಯಿಸಿಕೊಂಡು  ಹೋಗುತ್ತಾ  ಮಧ್ಯಾಹ್ನ 2:45 ಗಂಟೆಗೆ  ಕೆರಾಡಿ ಗ್ರಾಮದ  ಚಪ್ಪರಮಕ್ಕಿ ಎಂಬಲ್ಲಿ ಮೊಬೈಲ್‌ನೋಡಲು  ಮೋಟಾರು ಸೈಕಲ್‌ನ್ನು ರಸ್ತೆ ಬದಿ ಯಲ್ಲಿ ನಿಲ್ಲಿಸಿಕೊಂಡಿದಾಗ ಚಪ್ಪರಮಕ್ಕಿ ಕಡೆಯಿಂದ  ಬೆಳ್ಳಾಲ ಕಡೆಗೆ ಒಂದು ಕಪ್ಪು ಬಣ್ಣದ  ಮೋಟಾರು ಸೈಕಲ್‌ನಲ್ಲಿ  ಸುಮಾರು 30 ರಿಂದ 35 ವರ್ಷ  ಪ್ರಾಯದ ಹೆಲ್ಮೆಟ್‌ಧರಿಸಿದ ಇಬ್ಬರು ಅಪರಿಚಿತ ವ್ಯಕ್ತಿಗಳು ಫಿರ್ಯಾಧಿದಾರರ ಬಳಿ ಬಂದು ಮೋಟಾರು ಸೈಕಲ್‌ನ್ನು ನಿಲ್ಲಿಸಿ  ಮೋಟಾರು ಸೈಕಲ್‌ನಿಂದ  ಇಳಿದು ಮೋಟಾರ್ ಸೈಕಲ್ ನಲ್ಲಿ ಹಿಂಬದಿ ಕುಳಿತಿದ್ದ ಅಪರಿಚಿತ ವ್ಯಕ್ತಿ ಎಕಾಎಕಿ ತನ್ನ ಕೈಯಲಿದ್ದ  ಮೆಣಿಸಿನ ಪುಡಿಯನ್ನು  ಪಿರ್ಯಾದಿದಾರರಿಗೆ  ಮುಖಕ್ಕೆ ಎರಚಿ ಇಬ್ಬರೂ ಅಪರಿಚಿತ ವ್ಯಕ್ತಿಗಳು ಪಿರ್ಯಾದಿದಾರರನ್ನು ಎಳೆದಾಡಿ ಅಂಗಿಯನ್ನು ಹರಿದು ಪಿರ್ಯಾದಿದಾರರ  ಹಿಂಬದಿ ಪ್ಯಾಂಟ್ ಕಿಸೆಯಲ್ಲಿದ್ದ ಪರ್ಸ್ ನ್ನು  ಬಲವಂತವಾಗಿ  ಕಸಿದುಕೊಂಡು ಪರ್ಸ್ ನಲಿದ್ದ 5000/-  ರೂ ಹಣವನ್ನು ತೆಗೆದುಕೊಂಡು ಪರಾರಿಯಾಗಿರುತ್ತಾರೆ.  ಅಪರಿಚಿತ ವ್ಯಕ್ತಿಗಳ ಹಲ್ಲೆಯಿಂದ ಪಿರ್ಯಾದಿದಾರರಿಗೆ ತಲೆಗೆ  ಮತ್ತು ಹೊಟ್ಟೆಗೆ  ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ  28/2023 ಕಲಂ: 394 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಮಣಿಪಾಲ: ದಿನಾಂಕ: 26.05.2023 ರಂದು ಸಂಜೆ 4:20 ಗಂಟೆಗೆ ಉಡುಪಿ ತಾಲೂಕು 80 ಬಡಗುಬೆಟ್ಟು ಗ್ರಾಮದ ಅರ್ಬಿ ಪಾಲ್ಸ್‌ಎಂಬಲ್ಲಿ ಪಿರ್ಯಾದಿ: ಮಂಜುನಾಥ ಆರ್‌ಎನ್‌ಪ್ರಾಯ: 24 ವರ್ಷ, ತಂದೆ: ರಮೇಶ್‌ಆರ್‌ಎನ್‌, ವಾಸ: ಗ್ಲೇನ್ಸಿ ಹೌಸ್‌, ಕಿಶನ್‌ಮೆಂಡೋನ್ಸಾ ರವರ ಬಾಡಿಗೆ ಮನೆ , ಬಂಟಕಲ್‌, ಶಿರ್ವಾ ಇವರು ತನ್ನ ಸ್ನೇಹಿತೆಯೊಂದಿಗೆ ಕುಳಿತು ಮಾತನಾಡುತ್ತಿರುವ ಸಮಯ ಆಪಾದಿತ ಹನುಮಂತಪ್ಪ ಮಹಾದೇವಪ್ಪ ಎಂಬವನು ಪಿರ್ಯಾದಿದಾರರನ್ನು ಉದ್ದೇಶಿಸಿ ತಾನು ಮಣಿಪಾಲ ಠಾಣೆಯ ಪೊಲೀಸ್‌, ನೀವು ಯಾಕೆ ಕುಳಿತ್ತಿದ್ದೀರಿ ? ನಿಮ್ಮ ಮೇಲೆ ಕೇಸ್‌ಮಾಡುತ್ತೇನೆ ಎಂದು ಹೇಳಿ ಮಣಿಪಾಲ ಪೊಲೀಸ್‌ಠಾಣೆಯ ಎಸ್‌ಐ ರವರಿಗೆ ಫೋನ್‌ಮಾಡುತ್ತೇನೆ ಅವರು ಹೇಳಿದರೆ ಬಿಡುತ್ತೇನೆ ಎಂದು ಹೇಳಿ ಆಪಾದಿತ ಲಕ್ಷ್ಮಣ ಕುಪ್ಪಗೊಂಡ ಎಂಬುವನಿಗೆ ಫೋನ್‌ಮಾಡಿ ಲೌಡ್‌ಸ್ಪೀಕರ್ ಇಟ್ಟು ಮಾತನಾಡಿದ್ದು , ಆ ಸಮಯ ತಾನು ಮಣಿಪಾಲ ಪೊಲೀಸ್‌ಠಾಣೆಯ ಎಸ್‌ಐ ಮಾತನಾಡುತ್ತಿದ್ದೇನೆ, 5 ಸಾವಿರ ರೂಪಾಯಿ ಅವರಿಗೆ ಕೊಡು ಇಲ್ಲವಾದರೆ ಜೀಪು ಕಳಿಸಿ ಪೊಲೀಸ್‌ಠಾಣೆಗೆ ಕರೆಸಿಕೊಳ್ಳುತ್ತೇನೆ ಎಂದು ಬೆದರಿಸಿ ಪಿರ್ಯಾದಿದಾರರ ಮೊಬೈಲ್‌ಮೂಲಕ ಆಪಾದಿತ ಹನುಮಂತಪ್ಪ ಮಹಾದೇವಪ್ಪ ರವರ ಮೊಬೈಲ್‌ನಂಬರ್ 9620059314 ನೇದಕ್ಕೆ ರೂಪಾಯಿ 5 ಸಾವಿರ ವರ್ಗಾಯಿಸಿಕೊಂಡಿದ್ದು , ಇಬ್ಬರೂ ಆಪಾದಿತರು ಪೊಲೀಸ್‌ಅಧಿಕಾರಿಗಳಲ್ಲದಿದ್ದರೂ , ತಾವುಗಳು ಪೊಲೀಸ್‌ಅಧಿಕಾರಿಗಳೆಂದು ನಟಿಸಿ ಪಿರ್ಯಾದುದಾರರಿಂದ ಬಲವಂತವಾಗಿ ರೂಪಾಯಿ 5 ಸಾವಿರ ಹಣವನ್ನು ಪಡೆದುಕೊಂಡಿರುವುದಾಗಿದೆ. ಈ ಬಗ್ಗೆ  ಮಣಿಪಾಲ ಠಾಣೆ,  ಅಪರಾಧ ಕ್ರಮಾಂಕ 116/2023  ಕಲಂ: 170, 419, 384 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಮಣಿಪಾಲ: ಪಿರ್ಯಾದಿ: ಸ್ವಸ್ತಿಕ್ ಎಸ್ ಶೆಟ್ಟಿ ಪ್ರಾಯ:25 ವರ್ಷ ತಂದೆ:ಸುರೇಂದ್ರ ಶೆಟ್ಟಿ ವಾಸ: ಗುಲ್ವಾಡಿ ಮಾವಿನಕಟ್ಟೆ, ಕುಂದಾಪುರ ಇವರಿಗೆ ಸಂಬಂದಪಟ್ಟ ಉಡುಪಿ ತಾಲೂಕು ಮಣಿಪಾಲದ ಕೆ ಎಂ ಸಿ ಆಸ್ಪತ್ರೆಯ ಸಮೀಪ ವಿಜಯ ಮೆಡಿಕಲ್ ಎದುರು ಇರುವ ರಾ ಹೆ 169(ಎ)ರಲ್ಲಿ ರಸ್ತೆ ವಿಭಜಕವನ್ನು ಯಾರೋ ಅಪರಿಚಿತರು ದಿನಾಂಕ:25.05.2023 ರಂದು ರಾತ್ರಿ:10.00 ಗಂಟೆಯಿಂದ ದಿನಾಂಕ:26.05.2023 ರಂದು ಬೆಳಿಗ್ಗೆ 08:00 ಗಂಟೆಯ ನಡುವಿನ ಸಮಯದಲ್ಲಿ ನಾಶ ಮಾಡಿ ಸುಮಾರು 5000/- ರೂಪಾಯಿ ನಷ್ಟ ಉಂಟು ಮಾಡಿರುತ್ತಾರೆ. ಈ ಬಗ್ಗೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ :117/2023, ಕಲಂ: 427 IPC  ರಂತೆ ಪ್ರಕರಣ ದಾಖಲಿಸಲಾಗಿದೆ.
  • ಶಂಕರನಾರಯಣ: ಆರೋಪಿ ವಸಂತ್ ನಾಯ್ಕ ಪ್ರಾಯ 36 ವರ್ಷ ತಂದೆ, ದೇವಣ್ಣ ನಾಯ್ಕ ವಾಸ, ಆಮ್ರಕಲ್ಲು, ಹಿಲಿಯಾಣ ಗ್ರಾಮ ಇವರು ದಿನಾಂಕ.27.05.2023 ರಂದು 16;45 ಘಂಟೆಗೆ  ಹೆಬ್ರಿ  ತಾಲೂಕಿನ  ಬೆಳ್ವೆ  ಗ್ರಾಮದ ಗೋಳಿಯಂಗಡಿಯ ಹೆಂಗವಳ್ಳಿ ಕ್ರಾಸ್ ಬಳಿ ಇರುವ ಸಾರ್ವಜನಿಕ ಬಸ್ಸು ನಿಲ್ದಾಣದ ಒಳಗಡೆ  ಕುಳಿತ್ತು ಕೊಂಡು  ಅಕ್ರಮವಾಗಿ ಶರಾಬು ಸೇವನೆ ಮಾಡಿರುತ್ತಾನೆ.  , ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  58/2023 ಕಲಂ  15 (ಎ) ಕರ್ನಾಟಕ  ಅಬಕಾರಿ ಕಾಯ್ದೆ ರಂತೆ ಪ್ರಕರಣ ದಾಖಲಿಸಲಾಗಿದೆ.  
  • ಗಂಗೊಳ್ಳಿ: ದಿನಾಂಕ: 27/05/2023  ರಂದು ಪಿರ್ಯಾದಿ: ಜಯಶ್ರೀ ಹೊನ್ನೂರು ಪಿಎಸ್‌ಐ (ತನಿಖೆ ) ಗಂಗೊಳ್ಳಿ ಪೊಲೀಸ್ ಠಾಣೆ ರವರು  ಸಿಬ್ಬಂದಿಯವರೊಂದಿಗೆ ಮರವಂತೆ ಬಳಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಮರವಂತೆ ಗ್ರಾಮದ ಮರವಂತೆ ಬೀಚ್‌ ಬಳಿ ಸಾರ್ವಜನಿಕ ಸ್ಥಳದಲ್ಲಿ  ಓರ್ವ ವ್ಯಕ್ತಿ ಮದ್ಯಪಾನ ಮಾಡುತ್ತಿದ್ದ ಬಗ್ಗೆ ದೊರೆತ ಮಾಹಿತಿಯಂತೆ ಪಿರ್ಯಾದಿದಾರರು ಸಿಬ್ಬಂದಿಗಳೊಂದಿಗೆ ಸದ್ರಿ ಸ್ಥಳಕ್ಕೆ 20.45  ಗಂಟೆಗೆ ಹೋಗಿ  ದಾಳಿ ನಡೆಸಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದ ಆಪಾದಿತನನ್ನು ವಶಕ್ಕೆ ಪಡೆದು, ಆತನ ತಪ್ಪಿತವನ್ನು ತಿಳಿಯಪಡಿಸಿ ಆಪಾದಿತನನ್ನು ಮತ್ತು ಸೊತ್ತನ್ನು ಸ್ವಾಧೀನಪಡಿಸಿಕೊಂಡು ಕ್ರಮ ಜರುಗಿಸಿದ್ದಾಗಿದೆ. ಈ ಬಗ್ಗೆ ಗಂಗೊಳ್ಳಿ ಠಾಣಾ  ಅಪರಾಧ ಕ್ರಮಾಂಕ 61/2023 ಕಲಂ: 15 (A) K E Act ರಂತೆ ಪ್ರಕರಣ ದಾಖಲಿಸಲಾಗಿದೆ. 

ಹಲ್ಲೆ ಪ್ರಕರಣ

  • ಕಾಪು: ಪಿರ್ಯಾದಿ: ಶ್ರೀ ವರ್ಷಿತ್ ಪೂಜಾರಿ ಪ್ರಾಯ : 21 ವರ್ಷ  ತಂದೆ : ವಿಠಲ ಪೂಜರಿ ವಾಸ : ಅನುಗ್ರಹ ಅನಂತರಾಜ ಮಾರ್ಗ, ಕೊಂಬಗುಡ್ಡೆ, ಮಲ್ಲಾರು ಗ್ರಾಮ ಇವರ  ಸಿಎಸ್‌ಕೆ ಕ್ರೀಕೆಟ್ ಟೀಮ್ ಗೆದ್ದಿರುವುದರಿಂದ ತನ್ನ ವಾಟ್ಸಪ್ ಸ್ಟೇಟಸ್‌ನಲ್ಲಿ ಹಾಕಿದ್ದು,  ಈ ಬಗ್ಗೆ ರಾಘವೇಂದ್ರನು ಪಿರ್ಯಾದಿದಾರರಿಗೆ ಫೋನ್ ಕರೆ ಮಾಡಿ ಆಕ್ಷೇಪಿಸಿದರು, ಬಳಿಕ ಪಿರ್ಯಾದಿದಾರರು ಆರ್‌ಸಿಬಿ ಟೀಮನ್ನು ಟ್ರೋಲ್ ಮಾಡಿ ತನ್ನ ವಾಟ್ಸಪ್ ಸ್ಟೇಟಸ್‌‌ಗೆ ಹಾಕಿದ್ದು, ದಿನಾಂಕ 25/05/2023 ರಂದು ಫೋನ್ ಕರೆ ಮಾಡುತ್ತಿದ್ದು 14.30 ಗಂಟೆಗೆ  ಅವರ ಕರೆಯನ್ನು ಸ್ವೀಕರಿಸಿದ್ದು, ಪಿರ್ಯಾದಿದಾರಿಗೆ ವಾಟ್ಸಪ್ ಸ್ಟೇಟಸ್‌ನಲ್ಲಿ ‌ಆರ್‌ಸಿಬಿ ಟೀಮ ಬಗ್ಗೆ ಬರೆದ ವಿಚಾರದ ಕುರಿತು ಆಕ್ಷೇಪಿಸಿ, ಅವಾಚ್ಯ ಶಬ್ದಗಳಿಂದ ಬೈದು ಜೀವ ಸಹಿತ ಬಿಡುವುದಿಲ್ಲವಾಗಿ ಬೆದರಿಕೆ ಹಾಕಿದಾರು. ನಂತರ ರಾಘವೇಂದ್ರ 16.30 ಗಂಟೆಗೆ ಹಾಗೂ ರಾತ್ರಿ 22.00 ಗಂಟೆಗೂ ಪಿರ್ಯಾದಿದಾರರ 8749090729 ನಂಬ್ರಗೆ 9743897628 ನಂಬ್ರದಿಂದ ಕರೆ ಮಾಡಿದಾಗಲೂ ಅವಾಚ್ಯ ಶಬ್ದದಿಂದ ಪಿರ್ಯಾದಿದಾರರಿಗೆ ಹಾಗೂ ಅವರ ತಂದೆ-ತಾಯಿಗೆ ಬೈದು ನೀನು ನಾಳೆ ಗ್ರೌಂಡ್‌ಬಾ ನೋಡಿಕೊಳ್ಳುತ್ತೇನೆ. ಎಂದು ಬೆದರಿಕೆ ಹಾಕಿದರು. ದಿನಾಂಕ 26/05/2023 ರಂದು ರಾಘವೇಂದ್ರನು 15 ಗಂಟೆ ಸುಮಾರಿಗೆ ಪಿರ್ಯಾದಿದಾರರಿಗೆ ಫೋನ್ ಕರೆ ಮಾಡಿ ನಾನು ಗ್ರೌಂಡ್‌ನಲ್ಲಿದ್ದೆನೆ ನೀನು ಕೂಡಲೇ ಬಾ ಎಂದು ಹೇಳಿದ ನಂತರ ಪಿರ್ಯಾದಿದಾರು ಗ್ರೌಂಡ್‌ಗೆ ಹೋದಾಗ ರಾಘವೇಂದ್ರನು ಗ್ರೌಂಡ್‌‌ನಲ್ಲಿ ಇರಲಿಲ್ಲ.  ಸ್ವಲ್ಪ ಹೊತ್ತಿನಲ್ಲಿ ರಾಘವೇಂದ್ರ ಗ್ರೌಂಡ್‌ಗೆ ಬಂದು, ಸಮಯ ಸುಮಾರು 18.30 ಗಂಟೆಗೆ ರಾಘವೇಂದ್ರನು ಸುಧೀರ ಹಾಗೂ ಮತ್ತೊಬ್ಬರು  ಜೊತೆಗೂಡಿ ಅಲ್ಲಿದ್ದ ಪಿರ್ಯಾದಿದಾರರ ಬಳಿ ಹೋಗಿ, ರಾಘವೇಂದ್ರನು ಪಿರ್ಯಾದಿದಾರರಿಗೆ ನೀನು ಬಾರಿ ಆರ್‌ಸಿಬಿ ಟೀಮ್ ವಿರುದ್ಧ ವಾಟ್ಸಪ್‌ನಲ್ಲಿ ಸ್ಟೇಟಸ್‌ಹಾಕುತ್ತಿಯಾ, ಎಂದು ಬೈದರು ಪಿರ್ಯಾದಿದಾರರು ಅವರಲ್ಲಿ ಆಕ್ಷೇಪಿಸಿದಾಗ ಅವರು ತನ್ನ ಬಲಕೈಯನ್ನು ಮುಷ್ಠಿ ಕಟ್ಟಿ ಪಿರ್ಯಾದಿದಾರರ ಮುಖದ ಎಡಭಾಗಕ್ಕೆ ಬಲವಾಗಿ ಗುದ್ದಿದರು. ಕೈ ಬೆರಳಿಗಿದ್ದ ಉಂಗುರದಂತಹ  ಲೋಹದ ವಸ್ತು ಪಿರ್ಯಾದಿದಾರರ ಮುಖಕ್ಕೆ ತಾಗಿ ಗಾಯವಾಗಿ ರಕ್ತ ಬರತೊಡಗಿತು. ಅವರ ಗೆಳೆಯರಾದ ಸುಧೀರ ಹಾಗೂ ಇನ್ನೊಬ್ಬರು ಪಿರ್ಯಾದಿದಾರರಿಗೆ ಹಿಡಿದಿಟ್ಟುಕೊಂಡಿದ್ದು, ರಾಘವೇಂದ್ರನು ಕೈಗಳಿಂದ ಕೆನ್ನೆಗೆ, ತಲೆಗೆ ಹಾಗೂ ಮೈಕೈಗೆ ಹೊಡೆದಿದ್ದು ಪರಿಣಾಮ ಪಿರ್ಯಾದಿದಾರರ ಎಡ ಕೈಗೆ  ಸಣ್ಣ ತರಚು ಗಾಯವಾಗಿರುತ್ತದೆ. ರಾಘವೇಂದ್ರನು ಪಿರ್ಯಾದಿದಾರರಿಗೆ ಹೊಡೆಯುತ್ತಿರುವುದನ್ನು ಕಂಡು ಗ್ರೌಂಡ್‌ನಲ್ಲಿ ಆಟವಾಡಲು ಬಂದಿದ್ದ ಸ್ವರೂಪ್, ವಿಕ್ಕಿ ಮತ್ತಿತರರು ಅವರ ಕಡೆಗೆ ಬರುವುದನ್ನು ಕಂಡು ರಾಘವೇಂದ್ರನು  ತುಳು ಭಾಷೆಯಲ್ಲಿ “ಏರ್‌ನಿನ್ನ ಅಮ್ಮನಕ್ಲೆನ್ ಪುರ ಲೆಪ್ಪುವ ಲೆಪ್ಪು ನಿನನ್‌ಲಾ ಅಕ್ಲೆನ್‌ಲಾ ಯಾನೆ ಕೆರ್ಪೆ” ಎಂದು ಬೆದರಿಕೆ ಹಾಕಿ ಅಲ್ಲಿಂದ ಹೊರಟು ಹೋದರು. ರಕ್ತಗಾಯವಾಗಿದ್ದ ಪಿರ್ಯಾದಿದಾರರಿಗೆ ಸ್ವರೂಪ್  ಹಾಗೂ ಇತರು ಚಿಕಿತ್ಸೆಯ ಬಗ್ಗೆಜಿಲ್ಲಾಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದು, ಪರೀಕ್ಷಿಸಿದ ಇಲ್ಲಿನ ವೈದ್ಯರು ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಕಾಪು  ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ : 90/2023,  ಕಲಂ: 324, 341 504 506 ಜೊತೆಗೆ 34 ಐಪಿಸಿ ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಹಿರಿಯಡ್ಕ: ಪಿರ್ಯಾಧಿ: ಅಶೋಕ ಪ್ರಾಯ 54 ವರ್ಷ ತಂದೆ: ವಿಠಲ ವಾಸ; ಕುಂಟಲ್ಪಾಡಿ ಸಾಣೂರು ಗ್ರಾಮ ಇವರು ಅಂಜಾರು ಗ್ರಾಮದ ಪಾಲ್ ಬೆಟ್ಟು  ಅಮರನಾಥ ಶೆಟ್ಟಿಯವರ ತೋಟದಲ್ಲಿ 1ವರ್ಷದಿಂದ ಕೆಲಸ ಮಾಡಿಕೊಂಡಿದ್ದು,  ಪ್ರತಿದಿನ ತೋಟಕ್ಕೆ ನೀರು ಬಿಡಲು ಪಂಪ್ ಚಾಲು ಮಾಡಲು ಅಲ್ಲೇ ಪಕ್ಕದಲ್ಲಿ  ವಾಸಮಾಡಿಕೊಂಡಿರುವ ದಯಾನಂದ ಪೂಜಾರಿ  ಎಂಬುವರ ಮನೆಯ ಪಕ್ಕದಿಂದ  ಹೋಗಬೇಕಾಗಿದ್ದು, ದಯಾನಂದ ಪೂಜಾರಿಯವರು ಮೊದಲಿನಿಂದಲೂ ಜಾಗದ ವಿಷಯದಲ್ಲಿ ಪಿರ್ಯಾದುದಾರರೊಂದಿಗೆ ಗಲಾಟೆ ಮಾಡುತ್ತಿದ್ದು, ದಿನಾಂಕ 26/05/2023 ರಂದು ಬೆಳಿಗ್ಗೆ 10:00 ಗಂಟೆಗೆ  ಪಿರ್ಯಾದುದಾರರು ನೀರಿನ ಪಂಪ್ ಚಾಲುಮಾಡಲು ಹೋಗುವಾಗ ತಡೆದು ನಿಲ್ಲಿಸಿ ಪಿರ್ಯಾಧಿದಾರರನ್ನು ಉದ್ದೇಶಿಸಿ " ಏಯ್ ನಿನಗೆ ಎಷ್ಟು ಸಲ ಹೇಳುವುದು ಕೆಲಸ ಬಿಟ್ಟು ಹೋಗಬೇಕೆಂದು ಕೆಲಸ ಬಿಟ್ಟು ಹೋಗದಿದ್ದರೆ ನಿನ್ನ ಕೈ  ಕಾಲು ಮುರಿದು ಕೊಂದು ಹೊಳೆಗೆ ಬಿಸಾಡುತ್ತೇನೆ ಎಂದು ಅವ್ಯಾಚ್ಯ ಶಬ್ದದಿಂದ ಬೈದು ಅಲ್ಲಿಯೇ ಇದ್ದ ಕಲ್ಲಿನಿಂದ ಹೊಡೆದ ಪರಿಣಾಮ  ಫಿರ್ಯಾಧಿದಾರರ ಬಲಕೈಗೆ ಕಲ್ಲು ತಾಗಿ  ನೋವು ಆಗಿರುತ್ತದೆ. ಈ ಸಮಯದಲ್ಲಿ ಅಲ್ಲಿಗೆ ಬಂದ ಫಿರ್ಯಾಧಿದಾರರ ಹೆಂಡತಿಗೂ ಕೂಡಾ ಬೈದಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ. ಅಪರಾಧ ಕ್ರಮಾಂಕ  39/2023    ಕಲಂ  341, 324 504, 506  ಐಪಿಸಿ ರಂತೆ ಪ್ರಕರಣ ದಾಖಲಿಸಲಾಗಿದೆ.

ಮಟ್ಕಾ ಜುಗಾರಿ ಪ್ರಕರಣ

  • ಕಾಪು: ದಿನಾಂಕ:27/05/2023 ರಂದು 13:00 ಗಂಟೆಗೆ ಪಿರ್ಯಾದಿ: ಭರತೇಶ್‌ ಕಂಕಣವಾಡಿ ಪಿ.ಎಸ್.ಐ (ತನಿಖೆ) ಕಾಪು ಪೊಲೀಸ್ ಠಾಣೆ ಇವರಿಗೆ ಕಾಪು ತಾಲೂಕು ಏಣಗುಡ್ಡೆ  ಗ್ರಾಮದ  ಏಣಗುಡ್ಡೆ ಗ್ರಾಮದ ಕಟಪಾಡಿ ಹಳೆಯ ಮೀನುಮಾರುಕಟ್ಟೆ ಬಳಿ ಸಾವ೯ಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯಂತೆ ಮಾನ್ಯ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಪಂಚರು ಹಾಗೂ ಠಾಣಾ ಸಿಬ್ಬಂದಿಗಳೊಂದಿಗೆ ಸದ್ರಿ ಸ್ಥಳಕ್ಕೆ ಹೊಗಿ ಮಟ್ಕಾ ಜುಗಾರಿ ಅಡುತ್ತಿರುವುದನ್ನು ಖಚಿತಪಡಿಸಿಕೊಂಡು 14:30 ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದಾಗ ಅಲ್ಲಿ ಹಣ ಕಟ್ಟಲು ಸೇರಿದ್ದ ಸಾರ್ವಜನಿಕರು ಸಮವಸ್ತ್ರದಲ್ಲಿದ್ದ ಪಿರ್ಯಾದಿದಾರರನ್ನು ಹಾಗೂ ಸಿಬ್ಬಂದಿಯವರನ್ನು ನೋಡಿ ಓಡಿ ಹೋಗಿದ್ದು ಮಟ್ಕಾ ಚೀಟಿ ಬರೆಯುತ್ತಿದ್ದ ವ್ಯಕ್ತಿಯು ಕೂಡಾ ಓಡಲು ಪ್ರಯತ್ನಸಿದ್ದು, ಆತನನ್ನು ಹಿಡಿದು ವಿಚಾರಿಸಲಾಗಿ ತನ್ನ ಹೆಸರು ರವಿ ಪೂಜಾರಿ (50) ತಂದೆ:ಶೇಖರ್‌ ಸಾಲ್ಯಾನ್‌  ವಾಸ: ಸಮುದ್ರ ನಿಲಯ  ಕೋಟೆ ಗ್ರಾಮ ಕಟಪಾಡಿ, ಕಾಪು ತಾಲೂಕು ಎಂದು ತಿಳಿಸಿದ್ದು, ತಾನು ಮಟ್ಕಾ ಜೂಜಾಟದಿಂದ ಸಂಗ್ರಹಿಸಿದ ಹಣವನ್ನು ತನ್ನ ಸ್ವಂತ ಲಾಭಕ್ಕಾಗಿ ಬಳಿಸಿಕೊಳ್ಳುವುದಾಗಿ  ತಿಳಿಸಿದ್ದು, ಆತನಿಗೆ ಸ್ಥಳದಲ್ಲಿಯೇ ಕಲಂ:41(1)(ಎ) ಸಿ.ಆರ್.ಪಿ.ಸಿ ಯಂತೆ ನೋಟೀಸ್‌ ಜ್ಯಾರಿ ಮಾಡಿ. ಆತನ ಅಂಗ ಜಪ್ತಿ ಸಮಯ ಅಂಗಿಯ ಎಡಬದಿ ಕಿಸೆಯಲ್ಲಿದ್ದ ಮಟ್ಕಾ ಚೀಟಿ ಬರೆಯಲು ಬಳಸಿದ ಬಾಲ್ ಪೆನ್-1, ಮಟ್ಕಾ ಚೀಟಿ-01, ನಗದು 500 ಮುಖಬೆಲೆಯ1 ನೋಟು, 200 ರೂ ಮುಖಬೆಲೆಯ 2 ನೋಟು, 50 ರೂ ಮುಖಬೆಲೆಯ 1 ನೋಟು, 10 ರೂ ಮುಖಬೆಲೆಯ 4 ನೋಟು,  ಒಟ್ಟು,990/- ರೂಪಾಯಿಗಳಿದ್ದು, ಸದ್ರಿ ಸೊತ್ತುಗಳನ್ನು ಪಂಚರ ಸಮಕ್ಷಮ ಮುಂದಿನ ಕ್ರಮದ ಬಗ್ಗೆ ಮಹಜರು ಮುಖೇನ ಸ್ವಾದೀನಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ  ಕಾಪು  ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 91/2023 ಕಲಂ:  78 (1) (iii) KP Act  ರಂತೆ ಪ್ರಕರಣ ದಾಖಲಿಸಲಾಗಿದೆ.
  • ಬ್ರಹ್ಮಾವರ: ದಿನಾಂಕ 27.05.2023 ರಂದು ಪಿರ್ಯಾದಿ: ಮಹಾಂತೇಶ  ಉದಯ ನಾಯಕ್‌, ಪೊಲೀಸ್‌ಉಪನಿರೀಕ್ಷಕರು 1, ಬ್ರಹ್ಮಾವರ ಪೊಲೀಸ್‌ಠಾಣೆ  ಇವರು ಇಲಾಖಾ ಜೀಪಿನಲ್ಲಿ ಠಾಣಾ ಸಿಬ್ಬಂದಿಯವರ ಜೋತೆ  ರೌಂಡ್ಸ್‌ ಕರ್ತವ್ಯದಲ್ಲಿರುವಾಗ  ಬ್ರಹ್ಮಾವರ ತಾಲೂಕು ಚಾಂತಾರು  ಗ್ರಾಮದ ಬ್ರಹ್ಮಾವರ ಪೇಟೆಯ ಕುಂಜಾಲು ಕ್ರಾಸ್‌ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ರತ್ನರಾಜ್‌ ಎಂಬವರು ಹಣವನ್ನು ಪಣವಾಗಿ ಪಡೆದು ಮಟ್ಕಾ ಜುಗಾರಿ ನಡೆಸುತ್ತಿದ್ದುದಾಗಿ ಚಾಂತಾರು ಗ್ರಾಮದ ಬೀಟ್‌ಸಿಬ್ಬಂದಿಯವರಾದ ಪಿಸಿ 2567 ನೇ ರವರಿಗೆ ಮಧ್ಯಾಹ್ನ 03:15 ಗಂಟೆಗೆ ಬಂದ ಮಾಹಿತಿಯನ್ನು ಫಿರ್ಯಾದಿದಾರರಿಗೆ ತಿಳಿಸಿದ್ದು, ಸದ್ರಿ ಮಾಹಿತಿಯನ್ನು ಫಿರ್ಯಾದಿದಾರು ಇಲಾಖಾ ಮೇಲಾಧಿಕಾರಿಯವರಿಗೆ ತಿಳಿಸಿ, ಅವರ ನಿರ್ದೇಶನದಂತೆ ಸದ್ರಿ ಸ್ಥಳಕ್ಕೆ ದಾಳಿ ನಡೆಸಿ, ಮಾನ್ಯ ಘನ ನ್ಯಾಯಾಲಯದಿಂದ ಅನುಮತಿ ಪಡೆದು ಇಲಾಖಾ ಜೀಪಿನಲ್ಲಿ ಠಾಣೆಯಿಂದ ಹೊರಟು ಮಧ್ಯಾಹ್ನ 04:10 ಗಂಟೆಗೆ ಸದ್ರಿ ಸ್ಥಳಕ್ಕೆ ಹೋದಾಗ  ಸಾರ್ವಜನಿಕ ಸ್ಥಳದಲ್ಲಿ 3-4 ಜನರನ್ನು ಸೇರಿಸಿಕೊಂಡು ಆರೋಪಿಯು 00 ರಿಂದ 99 ರ ಒಳಗೆ ನೀವು ಬರೆಯಿಸಿದ ಯಾವುದೇ ನಂಬರ್ ಬಂದರೆ 1 ರೂಪಾಯಿಗೆ 70 ರೂಪಾಯಿ ಕೊಡುವುದಾಗಿ ಸಾರ್ವಜನಿಕರಿಂದ ಹಣವನ್ನು ಪಣವಾಗಿ ಸಂಗ್ರಹಿಸಿ, ಮಟ್ಕಾ ಚೀಟಿ ಬರೆದು ಕೊಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಮಧ್ಯಾಹ್ನ 04:15 ಗಂಟೆಗೆ ದಾಳಿ ನಡೆಸಿದಾಗ, ಸಾರ್ವಜನಿಕರು ಅಲ್ಲಿಂದ ಓಡಿ ಹೋಗಿದ್ದು, ಮಟ್ಕಾ ಜುಗಾರಿ ನಡೆಸುತ್ತಿದ್ದ ಆರೋಪಿಯನ್ನು ಸಿಬ್ಬಂದಿಯವರ ಸಹಾಯದಿಂದ ಹಿಡಿದು ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸಿದಾಗ ಆತನು ಮಟ್ಕಾ ಜುಗಾರಿ ಆಟದ ಬಗ್ಗೆ ಸಂಗ್ರಹಿಸಿದ ಹಣವನ್ನು ತಾನು  ಸ್ವಂತ ಲಾಭಕ್ಕಾಗಿ ಉಪಯೋಗಿಸುತ್ತಿದ್ದುದಾಗಿ ಒಪ್ಪಿಕೊಂಡಿರುತ್ತಾನೆ. ನಂತರ ಸದ್ರಿ ಆರೋಪಿತನ ವಶದಲ್ಲಿದ್ದ ಮಟ್ಕಾ ಜುಗಾರಿ ಆಟದ ಬಗ್ಗೆ ಸಂಗ್ರಹಿಸಿದ ಹಣ ರೂ1130/- , ಮಟ್ಕಾ ಬರೆದ ಚೀಟಿ-1, ಹಾಗೂ ಬಾಲ್ ಪೆನ್ನು -1  ಸ್ವತ್ತುಗಳನ್ನು ಮುಂದಿನ ಕಾನೂನು ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣೆ ಅಪರಾಧ ಕ್ರಮಾಂಕ . 110/2023 : ಕಲಂ 78 (I) (III) KP ACT ರಂತೆ ಪ್ರಕರಣ ದಾಖಲಿಸಲಾಗಿದೆ.
  • ಕಾಪು: ದಿನಾಂಕ:27/05/2023 ರಂದು ಪಿರ್ಯಾದಿ: ಸುಮ ಬಿ ಪಿ.ಎಸ್.ಐ (ಕಾ ಮತ್ತು ಸು ) ಕಾಪು ಪೊಲೀಸ್ ಠಾಣೆ ಇವರಿಗೆ ಬಂದ ಖಚಿತ ಮಾಹಿತಿಯಂತೆ ಮಾನ್ಯ ನ್ಯಾಯಾಲಯದ ಅನುಮತಿಯನ್ನು ಪಡೆದು ಪಿರ್ಯಾದಿದಾರರು, ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಕಾಪು ತಾಲೂಕು ಪಡು ಗ್ರಾಮದ  ಕಾಪು ಪೇಟೆಯಲ್ಲಿರುವ ಕೆ.ವಿ.ಕೆ ತರಕಾರಿ ಅಂಗಡಿ ಬಳಿ ಸಾವ೯ಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಡುತ್ತಿರುವುದನ್ನು ಖಚಿತಪಡಿಸಿಕೊಂಡು 15:30  ಸ್ಥಳಕ್ಕೆ ದಾಳಿ ನಡೆಸಿದಾಗ ಅಲ್ಲಿ ಹಣ ಕಟ್ಟಲು ಸೇರಿದ್ದ ಸಾರ್ವಜನಿಕರು ಸಮವಸ್ತ್ರದಲ್ಲಿದ್ದ ಪಿರ್ಯಾದಿದಾರರನ್ನು ಹಾಗೂ ಸಿಬ್ಬಂದಿಯವರನ್ನು  ನೋಡಿ ಓಡಿ ಹೋಗಿದ್ದು ಮಟ್ಕಾ ಚೀಟಿ ಬರೆಯುತ್ತಿದ್ದ ವ್ಯಕ್ತಿಯು ಕೂಡಾ ಓಡಲು ಪ್ರಯತ್ನಸಿದ್ದು, ಆತನನ್ನು ಹಿಡಿದು ವಿಚಾರಿಸಲಾಗಿ ತನ್ನ ಹೆಸರು ಶ್ರೀನಿವಾಸ(35) ತಂದೆ:ದಿ. ಸೋಮಪ್ಪ,ವಾಸ:ಶ್ರೀನಿವಾಸ ನಿವಾಸ, ಬ್ರಹ್ಮಸ್ಥಾನ ರಸ್ತೆ, ಪಿ.ಹೆಚ್.ಸಿ  ಕಾಲೋನಿ  ಪಡುಬಿದ್ರೆ ಮೊ.ನಂ:7619326419,ಎಂದು ತಿಳಿಸಿದ್ದು, ತಾನು ಮಟ್ಕಾ ಜೂಜಾಟದಿಂದ ಸಂಗ್ರಹಿಸಿದ ಹಣವನ್ನು ತನ್ನ ಸ್ವಂತ ಲಾಭಕ್ಕಾಗಿ ಬಳಿಸಿಕೊಳ್ಳುವುದಾಗಿ  ತಿಳಿಸಿರುತ್ತಾರೆ.  ಆತನಿಗೆ ಸ್ಥಳದಲ್ಲಿಯೇ ಕಲಂ:41(1)(ಎ) ಸಿ.ಆರ್.ಪಿ.ಸಿ ಯಂತೆ ನೋಟೀಸ್‌ ಜ್ಯಾರಿ ಮಾಡಿ. ಆತನ ಅಂಗ ಜಪ್ತಿ ಮಾಡಿ ಪ್ಯಾಂಟಿನ ಬಲ ಬದಿ  ಕಿಸೆಯಲ್ಲಿದ್ದ ಮಟ್ಕಾ ಬರೆಯಲು ಬಳಸಿದ ಬಾಲ್ ಪೆನ್-1, ಮಟ್ಕಾ ಚೀಟಿ-01, ನಗದು 500 ಮುಖಬೆಲೆಯ 1 ನೋಟು, 200 ರೂ ಮುಖಬೆಲೆಯ 1 ನೋಟು, 50 ರೂ ಮುಖಬೆಲೆಯ 3 ನೋಟು, 20 ರೂ ಮುಖಬೆಲೆಯ 2 ನೋಟು 10 ರೂ ಮುಖಬೆಲೆಯ 2 ನೋಟು,  ಒಟ್ಟು,1010/- ರೂಪಾಯಿಗಳಿದ್ದು, ಸದ್ರಿ ಸೊತ್ತುಗಳನ್ನು ಪಂಚರ ಸಮಕ್ಷಮ ಮುಂದಿನ ಕ್ರಮದ ಬಗ್ಗೆ ಮಹಜರು ಮುಖೇನ  ಸ್ವಾದೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 92/2023 ಕಲಂ:  78 (1) (iii) KP Act  ರಂತೆ ಪ್ರಕರಣ ದಾಖಲಿಸಲಾಗಿದೆ.
  • ಉಡುಪಿ: ಪಿರ್ಯಾದಿ: ಶ್ರೀ ಮಹೇಶ್‌ ಟಿ.ಎಂ, ಪಿಎಸ್‌ಐ ಕಾ.ಸು-1, ಉಡುಪಿ ನಗರ ಪೊಲೀಸ್‌ಠಾಣೆ.  ಇವರು ದಿನಾಂಕ: 27/05/2023 ರಂದು ವಾಹನ ತಪಾಸಣೆ ಕರ್ತವ್ಯದಲ್ಲಿರುವಾಗ 18:00 ಗಂಟೆಗೆ ಉಡುಪಿ ತಾಲೂಕು 76 ಬಡಗುಬೆಟ್ಟು ಗ್ರಾಮದ ಚಿಟ್ಪಾಡಿ ಡಯಾನ ಟಾಕೀಸ್‌ ಬಳಿ ಇರುವ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿ  ಮಟ್ಕಾ ಜುಗಾರಿ ಆಟದ ಬಗ್ಗೆ ಹಣ ಸಂಗ್ರಹಿಸುತ್ತಿರುವುದಾಗಿ ಖಚಿತ ಮಾಹಿತಿ ದೊರೆತ ಮೇರೆಗೆ ಮಾನ್ಯ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು, ಪಂಚರು ಮತ್ತು ಸಿಬ್ಬಂದಿಯವರೊಂದಿಗೆ  ಸ್ಥಳಕ್ಕೆ ತೆರಳಿ ಖಚಿತಪಡಿಸಿಕೊಂಡು 18:40 ಗಂಟೆಗೆ ದಾಳಿ ನಡೆಸಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ನಾಗೇಶ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ತಾನು ಕಮೀಷನ್‌ ಹಣಕೋಸ್ಕರ ಸಾರ್ವಜನಿಕರಿಂದ ಮಟ್ಕಾ ಜುಗಾರಿ ಆಟದ ಬಗ್ಗೆ ಹಣವನ್ನು ಸಂಗ್ರಹಿಸುತ್ತಿದ್ದು, ಸಂಗ್ರಹಿಸಿದ ಹಣವನ್ನು 2ನೇ ಆಪಾದಿತ ಬ್ರಹ್ಮಾವರದ ರಾಬರ್ಟ್ ಎಂಬವರಿಗೆ ಕೊಡುತ್ತಿರುವುದಾಗಿ ತಿಳಿಸಿದ್ದು, ಆಪಾದಿತನ ವಶದಿಂದ ಮಟ್ಕಾ ಜುಗಾರಿ ಆಟಕ್ಕೆ ಸಂಗ್ರಹಿಸಿದ ನಗದು ರೂ 1205/- ಮತ್ತು ಮಟ್ಕಾ ನಂಬ್ರ ಬರೆದ ಚೀಟಿ-1, ಬಾಲ್‌ಪೆನ್‌ನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  75/2023  ಕಲಂ: 78 (i) (iii) ಕರ್ನಾಟಕ ಪೊಲೀಸ್‌ ಕಾಯಿದೆ. ರಂತೆ ಪ್ರಕರಣ ದಾಖಲಿಸಲಾಗಿದೆ.
  • ಮಣಿಪಾಲ: ಪಿರ್ಯಾದಿ: ರುಕ್ಮಾ ನಾಯ್ಕ್  ಪಿ ಎಸ್ ಐ ಮಣಿಪಾಲ ಪೊಲೀಸ್ ಠಾಣೆ. ದಿನಾಂಕ: 27.05.2023 ರಂದು ಬೆಳಿಗ್ಗೆ 10.00 ಗಂಟೆಗೆ ಉಡುಪಿ ತಾಲೂಕು ಮಣಿಪಾಲ ಶಿವಳ್ಳಿ ಗ್ರಾಮದ ಸಿಂಡಿಕೇಟ್‌ ಸರ್ಕಲ್‌ಬಳಿ ಇರುವ ಮನೋಹರ ವೈನ್ಸ್‌ಎದುರು ಆರೋಪಿ ಯತೀಶ್‌ ಮೆಂಡನ್‌ಎಂಬಾತನು ತನ್ನ ಸ್ವಂತ ಲಾಭಕೋಸ್ಕರ ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತ್ತಿರುವುದಾಗಿ ಭಾತ್ಮಿದಾರರಿಂದ ಖಚಿತಪಡಿಸಿಕೊಂಡು 10.00 ಗಂಟೆಗೆ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ಹಾಗೂ ಆರೋಪಿ ಬಳಸುತ್ತಿದ್ದ ಮಟ್ಕಾ ಚೀಟಿ, ಬಾಲ್‌ ಪೆನ್‌,ನಗದು ರೂ 820/- ಮಹಜರು ಮುಖೇನ ಸ್ವಾಧೀನಪಡಿಸಿಕೊಂಡಿರುತ್ತಾರೆ. ಈ ಬಗ್ಗೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ  118/2023 ಕಲಂ: 78(I)(III) KP Act ರಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಹೆಬ್ರಿ: ಫಿರ್ಯಾದಿ: ಗೋಪಾಲಕೃಷ್ಣ ಪ್ರಾಯ 41 ವರ್ಷ ತಂದೆ: ಸಂಕಯ್ಯ ಪೂಜಾರಿ ವಾಸ: ಮಲ್ಲಿಕಾ ನಿಲಯ ಚಿಂಕ್ರಬೆಟ್ಟು ಬೆಳಗುಂಡಿ ಮುದ್ರಾಡಿ ಗ್ರಾಮ ಇವರ ತಂದೆ ಸಂಕಯ್ಯ ಪೂಜಾರಿ ಪ್ರಾಯ 96 ವರ್ಷ ರವರು ಪ್ರಾಯಸ್ಥರಾಗಿದ್ದು  ಕರುಳಿಗೆ ಸಂಬಂದಿಸಿದ ಖಾಯಿಲೆಯಿಂದ ಬಳಲುತ್ತಿದ್ದರು ಈ ಬಗ್ಗೆ ಚಿಕಿತ್ಸೆ ಮಾಡಿಸಿದರೂ ಗುಣಮುಖವಾಗದ ಕಾರಣ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಮಾನಸಿಕ ಖಿನ್ನತೆಗೆ ಒಳಗಾಗಿ ದಿನಾಂಕ; 27/05/2023 ರಂದು ಬೆಳಿಗ್ಗೆ ಸಮಯ ಸುಮಾರು 11:30 ಗಂಟೆಯಿಂದ ಮಧ್ಯಾಹ್ನ 02:00 ಗಂಟೆಯ ಮಧ್ಯಾವಧಿಯಲ್ಲಿ ಮುದ್ರಾಡಿ ಗ್ರಾಮದ ಚಿಂಕ್ರಬೆಟ್ಟು ಬೆಳಗುಂಡಿ ಎಂಬಲ್ಲಿರುವ ಮೃತರಿಗೆ ಸಂಭಂದಿಸಿದ ಜಾಗದಲ್ಲಿರುವ ಗೇರು ಮರದ ಕೊಂಬೆಗೆ ನೈಲಾನ್‌ ಹಗ್ಗವನ್ನು ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವುದಾಗಿದೆ ಮೃತರ ಮರಣದಲ್ಲಿ ಬೇರೆ ಯಾವುದೇ ಸಂಶಯವಿಲ್ಲ ಈ  ಬಗ್ಗೆ ಹೆಬ್ರಿ ಪೊಲೀಸ್ ಠಾಣೆ UDR NO  17/2023  U/s 174 CRPC ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕುಂದಾಪುರ: ಪಿರ್ಯಾದಿ: ಜಗದೀಶ ಪ್ರಾಯ: 40ವರ್ಷ, ತಂದೆ: ಅಣ್ಣಪ್ಪವಾಸ: ಕರ್ಕುಂಜೆ ಕೊಂಗರ್‌ ಖಾನ್,  ಕರ್ಕುಂಜೆ ಗ್ರಾಮ, ಇವರ ಅಕ್ಕ ಗಿರಿಜಾ ಪ್ರಾಯ 42 ವರ್ಷ ಎಂಬವರು ಈ ದಿನ ದಿನಾಂಕ 26/05/2023 ರಂದು ಮಧ್ಯಾಹ್ನ ಸುಮಾರು 1:30 ಗಂಟೆ ಸಮಯಕ್ಕೆ, ಕೆಂಚನೂರಿನ ಭಾಸ್ಕರ ಪೂಜಾರಿಯವರ ತೋಟದ ಕೆಲಸವನ್ನು ಮುಗಿಸಿ ವಾಪಾಸು ತಮ್ಮ ಮನೆಗೆ ನಡೆದುಕೊಂಡು ಬರುತ್ತಿರುವಾಗ ಕೆಂಚನೂರು ಗ್ರಾಮದ ಮಾವಿನಕೆರೆಯ ದಂಡೆಯ ಮೇಲೆ ನಡೆದುಕೊಂಡು ಬರುತ್ತಿರುವಾಗ ಆಕೆಯ ಎದುರಿನಿಂದ ಬಂದ ಯಾವುದೋ ಒಂದು ಗೂಳಿ ಗಿರಿಜಾರವರನ್ನು ದೂಡಿ ಹಾಕಿದ್ದರಿಂದ ಮಾವಿನಕೆರೆಯ ನೀರಿಗೆ ಆಯ ತಪ್ಪಿ ಬಿದ್ದ ಪರಿಣಾಮ ಉಸಿರುಗಟ್ಟಿ ಮತಪಟ್ಟಿದ್ದಾಗಿದೆ. ಈ ಬಗ್ಗೆ . ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ.ಯುಡಿಆರ್‌ನಂ: 17/2023ಕಲಂ: 174 ಸಿ.ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಬೈಂದೂರು: ಪಿರ್ಯಾದಿ: ಪ್ರಕಾಶ ಶೆಟ್ಟಿ ಪ್ರಾಯ 40 ವರ್ಷ ತಂದೆ: ಚಂದಯ್ಯ ಶೆಟ್ಟಿ ವಾಸ: ಸಿಗೇ ಅಡಿ ಕಾಲ್ತೋಡು ಗ್ರಾಮ ಇವರ ಅಕ್ಕ ಪ್ರಮೋದಾ ಶೆಟ್ಟಿ ರವರ ಮಗಳಾದ ಗೌತಮಿ (22 ವರ್ಷ) ಳು ಉಡುಪಿ ಪಿಪಿಸಿ ಕಾಲೇಜಿನಲ್ಲಿ ಎಂ.ಕಾಂ ವಿದ್ಯಾಭ್ಯಾಸ ಮಾಡಿಕೊಂಡಿರುತ್ತಾಳೆ. ಗೌತಮಿಯು ಇತ್ತೀಚೆಗೆ ಬ್ಯಾಂಕ್ಸ್ ಪರೀಕ್ಷೆಗಳನ್ನು ಬರೆದಿದ್ದು ಮತ್ತು ಕಂಪೆನಿಯಲ್ಲಿ ಉದ್ಯೋಗ ಪಡೆಯಲು ಪರೀಕ್ಷೆಗಳನ್ನು ಬರೆದಿದ್ದು ಈ ಎಲ್ಲಾ ಪರೀಕ್ಷೆಗಳಲ್ಲಿಯೂ ಆಕೆಗೆ ಉದ್ಯೋಗ ದೊರೆಯದೇ ಇದ್ದು, ಈ ಬಗ್ಗೆ ಮನೆಯಲ್ಲಿ ತಂದೆ-ತಾಯಿಗೆ  ಹೇಳಲು ಆಗದೇ ಮನಸ್ಸಿನಲ್ಲಿ ನೊಂದುಕೊಂಡಿದ್ದು, ತನಗೆ ಉದ್ಯೋಗ ದೊರೆಯಲಿಲ್ಲ ಎಂಬ ಕಾರಣಕ್ಕೆ ಮನನೊಂದು, ಡೆತ್ ನೋಟ್ ಬರೆದಿದ್ದು, ಈ ದಿನ ದಿನಾಂಕ 27/05/2023 ರಂದು 14:30 ಗಂಟೆಯಿಂದ 17:00 ಗಂಟೆಯ ಮಧ್ಯಾವಧಿಯಲ್ಲಿ ಮನೆಯ ಮಹಡಿಯಲ್ಲಿ ಮರದ ಜಂತಿಗೆ ನೈಲಾನ್ ಹಗ್ಗದಿಂದ ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ನೇತಾಡುತ್ತಿದ್ದವಳನ್ನು ಮನೆಯವರು ನೋಡಿ ಗೌತಮಿಯನ್ನು ನೇಣು ಹಗ್ಗದಿಂದ ಬಿಡಿಸಿ ಚಿಕಿತ್ಸೆಯ ಬಗ್ಗೆ ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದು ವೈದ್ಯರ ಮುಂದೆ ಹಾಜರುಪಡಿಸಿದಲ್ಲಿ, ಗೌತಮಿ ರವರು ಮೃತಪಟ್ಟಿರುವುದಾಗಿ ದೃಢಪಡಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಯುಡಿಆರ್  33/2023 ಕಲಂ 174 ಸಿ ಆರ್ ಪಿ ಸಿ   ರಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 28-05-2023 11:19 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080