ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕೋಟ: ಪಿರ್ಯಾದಿದಾರರಾದ ಸುಜಯ್ ಕೆ ವಿ (40), ತಂದೆ: ಕೃಷ್ಣ ಭಂಡಾರಿ, ವಾಸ: ವಿಜಯ ಕೃಷ್ಣ ಚೇತನಾ ನಗರ  ಚಾಂತಾರು ಗ್ರಾಮ ಬ್ರಹ್ಮಾವರ ತಾಲೂಕು ಇವರು ದಿನಾಂಕ 26/05/2022 ರಂದು ಮದ್ಯಾಹ್ನ 2:30 ಗಂಟೆಗೆ ಪಾರಂಪಳ್ಳಿ ಗ್ರಾಮದ ಮದ್ಯಸ್ತರ ತೋಟ ಎಂಬಲ್ಲಿ  ತನ್ನ   ವಾಹನದಲ್ಲಿ  ಹೋಗುತ್ತಿರುವಾಗ ಅವರ ಮುಂದಿನಿಂದ KA-51-Z-4322 ನೇ ಕಾರು ಚಾಲಕ ಚಂದ್ರ ಕುಮಾರ್ ತನ್ನ ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ತಿರುವಾದ ರಸ್ತೆಯಲ್ಲಿ ತನ್ನ ಕಾರನ್ನು ಚಲಾಯಿಸಿ ಕಾರನ್ನು  ನಿಯಂತ್ರಿಸಲಾಗದೇ  ತೀರಾ ತನ್ನ ಬಲ  ಭಾಗಕ್ಕೆ ಚಲಾಯಿಸಿ ಕೋಡಿ ಕಡೆಯಿಂದ ಸಾಲಿಗ್ರಾಮ ಕಡೆಗೆ ಬರುತ್ತಿದ್ದ KA-20-EQ-4572 ನೇ ಮೊಟಾರ್ ಸೈಕಲಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಅನಿಲ್ ಕುಮಾರ್ ರವರ ಎಡ ಕಾಲಿಗೆ ಹಾಗೂ ಮರ್ಮಾಂಗಕ್ಕೆ ಗುದ್ದಿದ  ತೀವೃ ಒಳ ನೋವು ಆಗಿರುವುದಾಗಿಯೂ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 72/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
 • ಕಾರ್ಕಳ: ಪಿರ್ಯಾದಿದಾರರಾದ ಚಾರ್ಲ್ಸ ಡಿಸೋಜ (68), ತಂದೆ: ಮಾರ್ಕ್ ಡಿಸೋಜ, ವಾಸ: ಪುಲ್ಕೇರಿ,  ಸಾಣೂರು ಗ್ರಾಮ, ಕಾರ್ಕಳ ತಾಲೂಕು ಇವರು  ದಿನಾಂಕ 26/05/2022 ರಂದು 3:30 ಗಂಟೆಗೆ ರಾಹೆ 169 ರ ಬಳಿ ಇರುವ  ಕಾರ್ಕಳ ತಾಲೂಕು ಸಾಣೂರು ಗ್ರಾಮದ ಪುಲ್ಕೇರಿ ಎಂಬಲ್ಲಿರುವ ತನ್ನ ಮನೆಯ ಎದುರು ಇರುವಾಗ  ಅಪಾದಿತ ಜೀಪು KL-07-N-5583 ನೇದನ್ನು ಚಾಲಕ ವಿ ಎಮ್ ಮೈಕೆಲ್ (72)  ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಬಜಗೋಳಿ ಕಡೆಯಿಂದ  ಪುಲ್ಕೇರಿ ಬೈಪಾಸ್ ಕಡೆಗೆ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಪಿರ್ಯಾದಿದಾರರ ಕಂಪೌಂಡಿಗೆ ಡಿಕ್ಕಿ ಹೊಡೆದ ಪರಿಣಾಮ ಜೀಪು ಚಾಲಕ ವಿ ಎಮ್ ಮೈಕೆಲ್ ಎಂಬವರಿಗೆ  ಮುಖಕ್ಕೆಮತ್ತು ಮೈ ಕೈಗಳಿಗೆ ಗಾಯವಾಗಿದ್ದು ಮಂಗಳೂರು ಕೆಎಂಸಿ ಆಸ್ಪತ್ರೆಯಲ್ಲಿ  ಚಿಕಿತ್ಸೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 80/2022  ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಪಡುಬಿದ್ರಿ: ಪಿರ್ಯಾದಿದಾರರರಾದ ಚಂದ್ರಶೇಖರ (45), ತಂದೆ: ದಿ.ಶಂಕರಪೂಜಾರಿ, ವಾಸ: ಪಲಿಮಾರು ಗುಂಡಿ, ಪಲಿಮಾರು ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರು ದಿನಾಂಕ 27/05/2022 ರಂದು ಅವರ ಪರಿಚಯದ ಸುಬ್ರಹ್ಮಣ್ಯ ಎಂಬುವವರ  KA-20-EQ-1353 ನೇ ನಂಬ್ರದ ಯಮಹಾ ಮೋಟಾರ್ ಸೈಕಲ್ಲಿನಲ್ಲಿ ಸಹ ಸವಾರರಾಗಿ ಕುಳಿತುಕೊಂಡು ಪಲಿಮಾರಿನಿಂದ ಅಡ್ವೆ ಕಡೆಗೆ ಹೊರಟು ಬೆಳಿಗ್ಗೆ 08:45 ಗಂಟೆಗೆ ಕಾಪು ತಾಲೂಕು ನಂದಿಕೂರು ಗ್ರಾಮ ಅಡ್ವೆ-ಪಲಿಮಾರು ರಸ್ತೆಯಲ್ಲಿರುವ ಕೋರ್ದಬ್ಬು ದೈವಸ್ಥಾನದ ಸ್ವಲ್ಪ ಮುಂದೆ ಹೋಗುತ್ತಿರುವಾಗ, ಎದುರುಗಡೆಯಿಂದ ಅಡ್ವೆ ಕಡೆಗೆ ಹೋಗುತ್ತಿದ್ದ  KA-07-A-1865 ನೇ ನಂಬ್ರದ ಶಾಲಾ ಬಸ್ಸು ಚಾಲಕ ಶಿವಪ್ಪ ಪೂಜಾರಿ ಎಂಬಾತನು ತನ್ನ  ಶಾಲಾ ಬಸ್ಸುನ್ನು ಒಮ್ಮೆಲೇ ರಸ್ತೆಯ ಎಡಕ್ಕೆ ಚಲಾಯಿಸಿ ಮಣ್ಣು ರಸ್ತೆಗೆ ಬಸ್ಸುನ್ನು ಇಳಿಸಿ, ಅದೇ ವೇಗದಲ್ಲಿ ಯಾವುದೇ ಸೂಚನೆಯನ್ನು ನೀಡದೇ ಒಮ್ಮೆಲೇ ರಸ್ತೆಯ ಬಲಕ್ಕೆ  ತಿರುಗಿಸಿದ್ದರಿಂದ, ಬಸ್ಸಿನ ಹಿಂಭಾಗದ ಬಲಬದಿ ಪಿರ್ಯಾದಿದಾರರು ಪ್ರಯಾಣಿಸುತ್ತಿದ್ದ ಮೋಟಾರ್‌ ಸೈಕಲ್ಲಿಗೆ ಡಿಕ್ಕಿಪಡಿಸಿದ್ದರಿಂದ, ಮೋಟಾರ್ ಸೈಕಲ್ ಸವಾರನ ನಿಯಂತ್ರಣ ತಪ್ಪಿ ಮುಂದಕ್ಕೆ ಚಲಿಸಿ, ಅಡ್ವೆ ಕಡೆಯಿಂದ ಪಲಿಮಾರು ಕಡೆಗೆಬರುತ್ತಿದ್ದ KA-19-AD-3703 ನೇ ನಂಬ್ರದ ಖಾಸಗಿ ಬಸ್ಸಿನ ಎದುರು ಭಾಗಕ್ಕೆ ಡಿಕ್ಕಿ ಹೊಡೆದು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿರುತ್ತಾರೆ. ಅಪಘಾತದಿಂದ ಪಿರ್ಯಾದಿದಾರರ ಎಡಕಾಲಿನ ಮಂಡಿಗೆ ಹಾಗೂ ಎಡಕಾಲಿನ ಪಾದದ ಬೆರಳುಗಳಿಗೆ ತರಚಿದ ಗಾಯವಾಗಿದ್ದು, ಮೋಟಾರ್ ಸೈಕಲ್ ಸವಾರ ಸುಬ್ರಹ್ಮಣ್ಯ ರವರ ತಲೆಗೆ ಮತ್ತು ಮುಖಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿರುತ್ತದೆ. ನಂತರ ಗಾಯಾಳು ಸುಬ್ರಹ್ಮಣ್ಯ ರವರನ್ನು ಚಿಕಿತ್ಸೆಯ ಬಗ್ಗೆ ಉಡುಪಿಯ ಆದರ್ಶ ಆಸ್ಪತ್ರೆಗೆ  ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 63/2022, ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಮಲ್ಪೆ : ಪಿರ್ಯಾದಿದಾರರಾದ ನಿತ್ಯಾನಂದ ಒಳಕಾಡು(65), ತಂದೆ: ರಾಮ, ವಾಸ: ಶಾಂತಿನಗರ  ,ಮಣಿಪಾಲ, 80 ಬಡಗುಬೆಟ್ಟು ಗ್ರಾಮ ಇವರಿಗೆ  ದಿನಾಂಕ 27/05/2022 ರಂದು ಮದ್ಯಾಹ್ನ 1:30 ಗಂಟೆಗೆ ಸಾರ್ವಜನಿಕರು ಕರೆ ಮಾಡಿ ಕಿನ್ನಿಮೂಲ್ಕಿ  ರಾಷ್ಟ್ರೀಯ ಹೆದ್ದಾರಿಯ ಬಳಿ JAE’S WHEEL MASTERS ಅಂಗಡಿಯ  ಎದುರುಗಡೆ ರಸ್ತೆ ಬದಿಯಲ್ಲಿ  ನೆರೆದಿರುವ  ಹುಲ್ಲುನ ಮೇಲೆ ಸುಮಾರು 30-35 ವರ್ಷದ  ಅಪರಿಚಿತ  ಗಂಡಸಿನ  ಮೃತದೇಹವಿರುವುದಾಗಿ ಮಾಹಿತಿ ನೀಡಿದಂತೆ ಪಿರ್ಯಾದಿದಾರರು ಹೋಗಿ ಮೃತದೇಹವನ್ನು ನೋಡಲಾಗಿ  ಮೃತ ವ್ಯಕ್ತಿಯು ಮಾಸಿದ ಕಪ್ಪು ಮತ್ತು ಬ್ರೌನ್ ಕಲರ್ ಪಟ್ಟಿವುಳ್ಳ ಅರ್ಧತೋಳಿನ ಟೀಶರ್ಟ್ ಮತ್ತು ಮಾಸಿದ  ಜೀನ್ ಫ್ಯಾಂಟ್ ಧರಿಸಿರುತ್ತಾನೆ, ಮೃತನ ತಲೆಯ ಹಿಂಭಾಗದಲ್ಲಿ  ರಕ್ತ ಗಾಯವಿರುತ್ತದೆ, ಅಲ್ಲದೆ ಕೈಯಲ್ಲಿನ ಚರ್ಮ ಸುಳಿದ ಹಾಗೆ ಕಾಣುತ್ತಿರುತ್ತದೆ. ಮೃತ ಅಪರಿಚಿತ ವ್ಯಕ್ತಿಯು ಆಕಸ್ಮಿಕವಾಗಿ ಬಿದ್ದು ಅಥವಾ ಇನ್ಯಾವುದೋ ರೀತಿಯಲ್ಲಿ ಮೃತಪಟ್ಟಿರಬಹುದು, ಅಪರಿಚಿತ ವ್ಯಕ್ತಿಯ  ಮೃತದೇಹವನ್ನು ಉಡುಪಿ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ  ಇರಿಸಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 34 /2022  ಕಲಂ: 174(ಸಿ)  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

 • ಗಂಗೊಳ್ಳಿ: ಪಿರ್ಯಾದಿದಾರರಾದ ಜಾಹ್ನವಿ ಡಿ ಗಾಣಿಗ (38), ಗಂಡ: ದೇವೇಂದ್ರ ಗಾಣೀಗ, ವಾಸ: ಗುಡ್ಡಿಮನೆ, ಕೊಡಪಾಡಿ, ಗುಜ್ಜಾಡಿ ಗ್ರಾಮ, ಕುಂದಾಪುರ ತಾಲೂಕು ಇವರು  ದಿನಾಂಕ 26/05/2022 ರಂದು ತನ್ನ ಅತ್ತೆ ತುಂಗಾರವರ ಜೊತೆ ಕುಂದಾಪುರ ತಾಲೂಕು ಗುಜ್ಜಾಡಿ ಗ್ರಾಮದ ಕೊಡಪಾಡಿಯಲ್ಲಿರುವ ಮನೆಯಲ್ಲಿರುವಾಗ 18:30 ಗಂಟೆಗೆ ಸೀತಾರಾಮ ಗಾಣಿಗ, ರಾಮಚಂದ್ರ ಗಾಣಿಗ ಹಾಗೂ ವಿಜಯ ಗಾಣಿಗರವರು ಪಿರ್ಯಾದಿದಾರರ ಮನೆಯ ಕಂಪೌಂಡ್ ಒಳಗಡೆ ಬಂದು ಕಂಪೌಂಡ್ ನ್ನು ಒಡೆದು ಹಾಕಲು ಪ್ರಯತ್ನಿಸುತ್ತಿದ್ದಾಗ ಪಿರ್ಯಾದಿದಾರರು ಹಾಗೂ ಅವರ ಅತ್ತೆ ತುಂಗಾರವರು ತಡೆಯಲು ಹೋದಾಗ ರಾಮಚಂದ್ರ ಗಾಣಿಗ ಪಿರ್ಯಾದಿದಾರರ ಎಡಕೈಯನ್ನು ಹಿಡಿದು ಎಳೆದಾಡಿದಾಗ ಕೈಗೆ ತರಚಿದ ಗಾಯವಾಗಿದ್ದು ನಂತರ ಕೆಳಗೆ ದೂಡಿ ಹಾಕಿದ್ದು ಪರಿಣಾಮ ಪಿರ್ಯಾದಿದಾರರು ಕಲ್ಲಿನ ಮೇಲೆ ಬಿದ್ದು ತಲೆಗೆ ಒಳಪೆಟ್ಟಾಗಿರುತ್ತದೆ. ಸೀತಾರಾಮ ಗಾಣಿಗ, ಹಾಗೂ ವಿಜಯ ಗಾಣಿಗ  ಅವಾಚ್ಯ ಶಬ್ದಗಳಿಂದ ಬೈದು  ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 44/2022 ಕಲಂ:  447, 354, 323,  504, 506 ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಗಂಗೊಳ್ಳಿ: ಪಿರ್ಯಾದಿದಾರರಾದ ತುಂಗ ಗಾಣಿಗ (78), ಗಂಡ: ದಿ: ನರಸಿಂಹ ಗಾಣಿಗ, ವಾಸ: ಆನಂದ ನಿಲಯ ಕೊಡಪಾಡಿ, ಗುಜ್ಜಾಡಿ ಗ್ರಾಮ, ಕುಂದಾಪುರ ತಾಲೂಕು ಇವರು  ದಿನಾಂಕ 26/05/2022 ರಂದು 16:00 ಗಂಟೆಗೆ ಅವರ ಜಾಗದ ದಾರಿಯ ಮೇಲೆ ಕಲ್ಲು ಕೂಡಿ ಇಟ್ಟಿದ್ದನ್ನು ತೆಗೆದು ಮನೆಗೆ ಬಂದಿದ್ದು ನಂತರ ಪುನಃ ದಾರಿಯಲ್ಲಿ ಕಲ್ಲು ಕೂಡಿ ಇಟ್ಟಿದ್ದು, ಪಿರ್ಯಾದಿದಾರರು ದಾರಿಯಲ್ಲಿರುವ ಕಲ್ಲುಗಳನ್ನು ತೆಗೆಯುತ್ತಿರುವಾಗ  19:00 ಗಂಟೆಗೆ ಪಿರ್ಯಾದಿದಾರರ ಅತ್ತಿಗೆ ನಾಗಮ್ಮ @ ತುಂಗ, ಭಾಸ್ಕರ, ವಿಜಯ, ದೇವಕಿ, ಜಾಹ್ನವಿ, ದೇವೇಂದ್ರ, ವಿಭಮ, ಶುಭಮ್, ರಾಜು, ನರಸಿಂಹ, ಗಿರೀಶ ಇವರು ಅಲ್ಲಿಗೆ ಬಂದಿರುತ್ತಾರೆ. ನಾಗಮ್ಮ ಪಿರ್ಯಾದಿದಾರರನ್ನು ದೂಡಿ ಹಾಕಿ,  ಜಾಹ್ನವಿ ಸೋಂಟೆಯಿಂದ ಎಡಕಾಲಿಗೆ ಹೊಡೆದಿದ್ದು, ವಿಭಮ್ ಕಾಲಿನಿಂದ ಸೊಂಟಕ್ಕೆ ತುಳಿದು , ರಾಜು  ಜೀವ ಬೇದರಿಕೆ ಹಾಕಿರುತ್ತಾರೆ. ದೇವೆಂದ್ರ ಪಿರ್ಯಾದಿದಾರರನ್ನು ಸಾಯಿಸುವುದಾಗಿ ಕಲ್ಲು ಎತ್ತಿಕೊಂಡು ಬಂದಿರುತ್ತಾರೆ.  ಪಿರ್ಯಾದಿದಾರರು ಬೊಬ್ಬೆ ಹಾಕಿದಾಗ ಪಿರ್ಯಾದಿದಾರರ ಮಕ್ಕಳು ಬರುವುದನ್ನು ನೋಡಿ ಆಪಾದಿತರೆಲ್ಲರೂ ಅಲ್ಲಿಂದ ಹೋಗಿರುವುದಾಗಿ ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 45/2022 ಕಲಂ:  143, 147, 323, 324, 506 ಜೊತೆಗೆ 149   ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 28-05-2022 09:54 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080