ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಶಿವಪ್ಪ (43), ತಂದೆ : ದಿ. ನಿಂಗಪ್ಪ,  ವಾಸ : ಕಲ್ಯ ಮೋಹನದಾಸ ರವರ ಬಾಡಿಗೆ ಮನೆ, ಕಲ್ಯ ಊಳಿಯಾರಗೋಳಿ ಗ್ರಾಮ ಕಾಪು ತಾಲೂಕು ಇವರು ದಿನಾಂಕ 27/05/2022 ರಂದು  8:00 ಗಂಟೆಯ ಸಮಯಕ್ಕೆ ಕಾಪು ಕೆ1 ಹೋಟೆಲ್  ಬಳಿ ಇರುವಾಗ ಬಸಲಿಂಗಪ್ಪ ಎಂಬುವವರು ಮಂಗಳೂರು ಉಡುಪಿ ರಾಷ್ಟ್ರೀಯ ಹೆದ್ದಾರಿ 66  ರಸ್ತೆಯನ್ನು ದಾಟಿ ರಸ್ತೆಯ ಪಶ್ಚಿಮ ಬದಿ ಅಂಚಿನಲ್ಲಿರುವಾಗ ಮಂಗಳೂರು ಕಡೆಯಿಂದ ಓರ್ವ ಕಾರಿನ ಚಾಲಕ ತನ್ನ ಕಾರನ್ನು  ಅತೀ ವೇಗ ಹಾಗೂ ಅಜಾಗರೂಕತೆಯಿಂದ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು ಬಸಲಿಂಗಪ್ಪ ರವರಿಗೆ  ಢಿಕ್ಕಿ ಹೊಡೆದು ಕಾರನ್ನು  ನಿಲ್ಲಿಸದೇ ಪರಾರಿಯಾಗಿದ್ದು, ಕೂಡಲೇ ಪಿರ್ಯಾದಿದಾರರು ಮತ್ತು ಅಲ್ಲಿರುವ ಸ್ಥಳೀಯರು ಸ್ಥಳಕ್ಕೆ ಹೋಗಿ ನೋಡುವಾಗ  ಬಸಲಿಂಗಪ್ಪರವರು ರಸ್ತೆಗೆ ಬಿದ್ದಿದ್ದು ಅವರಿಗೆ ತಲೆಗೆ ಮೈಕೈಗಳಿಗೆ ಗಾಯವಾಗಿದ್ದು, ಸ್ಥಳೀಯರ ಸಹಾಯದಿಂದ ಪಿರ್ಯಾದಿದಾರರು ಉಡುಪಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಬಸಲಿಂಗಪ್ಪ ರವರಿಗೆ ಒಂದು ವಾಹನದಲ್ಲಿ ಮಂಗಳೂರು ವೆನ್‌ಲಾಕ್‌ ಆಸ್ಪತ್ರೆಗೆ ಕಳಿಸಿಕೊಟ್ಟಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 51/2022 ಕಲಂ: 279, 338 ಐಪಿಸಿ ಮತ್ತು ಕಲಂ: 134 (ಎ&ಬಿ) ಐ.ಎಮ್.ವಿ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಮನುಷ್ಯ ಕಾಣೆ ಪ್ರಕರಣ

 

  • ಕುಂದಾಪುರ : ಪಿರ್ಯಾದಿದಾರರಾದ ಗಿರೀಶ್ ಶೆಟ್ಟಿ , ತಂದೆ: ವೆಂಕಟೇಶ್ ಶೆಟ್ಟಿ, ವಾಸ : ಸೌಕೂರು ಚಿಕ್ಕಪೇಟೆ ಶಾನರ ಮಕ್ಕಿ ಗುಲ್ವಾಡಿ ಗ್ರಾಮ, ಕುಂದಾಪುರ ತಾಲೂಕು ಇವರ ತಂದೆ ವೆಂಕಟೇಶ್ ಶೆಟ್ಟಿ (72) ಎಂಬುವವರು  ದಿನಾಂಕ 24/05/2022 ರಂದು ಬೆಳಿಗ್ಗೆ 07:00 ಗಂಟೆಗೆ ಠಾಣಾ ವ್ಯಾಪ್ತಿಯ ಕುಂದಾಪುರ ತಾಲೂಕು ಗುಲ್ವಾಡಿ ಗ್ರಾಮದ ಸೌಕೂರು ಚಿಕ್ಕಪೇಟೆಯ ಮನೆಯಿಂದ ಶೃಂಗೇರಿಯಲ್ಲಿರುವ ತಂಗಿ ಯಶೋಧರವರ ಮನೆಗೆ ಹೋಗುವುದಾಗಿ ಮನೆಯಿಂದ ಹೊರಟು ಹೋದವರು ನಂತರೆ ಮನೆಗೂ ಬಾರದೇ ಶೃಂಗೇರಿಗೂ ಹೋಗದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 26/2022 ಕಲಂ: ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ. 

 ಅಸ್ವಾಭಾವಿಕ ಮರಣ ಪ್ರಕರಣ 

  • ಮಲ್ಪೆ : ಪಿರ್ಯಾದಿದಾರರಾದ ಗುರುದಾಸ ಬಂಗೇರ(60),ತಂದೆ: ಶೀನ ಕುಂದರ್,ವಾಸ:ಕೊಳ, ಮಲ್ಪೆ ಬಂದರು ,ಕೊಡವೂರು ಗ್ರಾಮ ಇವರು ದಿನಾಂಕ: 28/05/2022 ರಂದು ಬೆಳಿಗ್ಗೆ 5:00 ಗಂಟೆಗೆ ಮೀನಿನ ಬಲೆ ದುರಸ್ತಿ ಕೆಲಸದ ಬಗ್ಗೆ ಮಲ್ಪೆ ಬಂದರಿಗೆ ಹೋಗಿದ್ದು , ಮಳೆ ಬಂದ ಕಾರಣ ವಾಪಸ್ಸು ಬೆಳಿಗ್ಗೆ 7:00 ಮನೆಗೆ ಬಂದು ನೋಡಿದಾಗ ಪಿರ್ಯಾದಿದಾರರ ಅಣ್ಣ ಸುಂದರ ಬಂಗೇರ( 62) ಇವರು ಮನೆಯ ಬಚ್ಚಲ ಕೋಣೆಯ ಒಳಗೆ ನೀರಿನ ಟ್ಯಾಂಕಿಗೆ ಬಿದ್ದ ಸ್ಥಿತಿಯಲ್ಲಿರುವುದನ್ನು ನೋಡಿ ಪರಿಶೀಲಿಸಿದಾಗ ಅವರು ಮೃತಪಟ್ಟಿರುವುದು ಕಂಡು ಬಂದಿದ್ದು ,ಪಿರ್ಯಾದಿದಾರರ ಅಣ್ಣ ವಾತ ಕಾಯಿಲೆಯಿಂದ ಬಳಲುತ್ತಿದ್ದು ಅಲ್ಲದೆ ಸಕ್ಕರೆ ಕಾಯಿಲೆಯಿದ್ದು ,ಈ ಬಗ್ಗೆ ಆರ್ಯುವೇದಿಕ್ ಮದ್ದು ಸೇವನೆ ಮಾಡುತ್ತಿದ್ದು, ದಿನಾಂಕ 28/05/2022 ರಂದು ಬೆಳಿಗ್ಗೆ 5:00 ಗಂಟೆಯಿಂದ 7:00 ಗಂಟೆಯ ಮಧ್ಯಾವಧಿಯಲ್ಲಿ ಬಚ್ಚಲು ಮನೆಯ ಟ್ಯಾಂಕಿಗೆ ಆಕಸ್ಮಿಕವಾಗಿ ಅಥವಾ ಇನ್ಯಾವುದೋ ಕಾರಣದಿಂದ ಬಿದ್ದು ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 35/2022  ಕಲಂ: 174(ಸಿ) ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ 

  • ಬ್ರಹ್ಮಾವರ : ಪಿರ್ಯಾದಿದಾರರಾದ ಉಷಾ ಆರ್‌ ಶೆಟ್ಟಿ [43] , ಗಂಡ: ರತ್ನಾಕರ ಶೆಟ್ಟಿ, ವಾಸ: ಎಳ್ಳಂಪಳ್ಳಿ, ನೀಲಾವರ ಗ್ರಾಮ ಮತ್ತು ಅಂಚೆ, ಬ್ರಹ್ಮಾವರ ತಾಲೂಕು ಇವರು 1 ನೇ ಆರೋಪಿ ಶಿವರಾಜ್‌ ಕುಮಾರ್‌ ರವರ ನೀಲಾವರ ಗ್ರಾಮದ ಸರ್ವೆ ನಂ. 23/34 ರಲ್ಲಿ 19 ಸೆಂಟ್ಸ್‌ , ಸರ್ವೆ ನಂ. 23/34 ರಲ್ಲಿ ಪರಿವರ್ತಿತ 5 ಸೆಂಟ್ಸ್‌ ಭೂಮಿಯನ್ನು 2 ನೇ ಆರೋಪಿ ರಾಜೇಶ್‌ ಆಚಾರ್ಯ ರವರ ಮುಖಾಂತರ ರೂಪಾಯಿ. 3,96,000/- ಕ್ಕೆ ಕ್ರಯ ಮಾಡಿಕೊಳ್ಳುವ ಬಗ್ಗೆ ದಿನಾಂಕ 24/08/2021 ರಂದು ಕರಾರು ಆಗಿದ್ದು, ಮುಂಗಡವಾಗಿ 55,000/- ನೀಡಿರುತ್ತಾರೆ. ಪುನಃ 1ನೇ ಆರೋಪಿ ದಿನಾಂಕ 09/11/2021 ರಂದು ರೂಪಾಯಿ. 2,00,000/ ಹಣವನ್ನು ಪಡೆದಿರುತ್ತಾರೆ. ನಂತರ ಉಳಿದ ಹಣ ತುರ್ತಾಗಿ ಬೇಕೆಂದು 1 ನೇ ಆರೋಪಿ ಪಿರ್ಯಾದಿದಾರರಿಗೆ ತಿಳಿಸಿ, ನಿಮಗೆ ಅಧಿಕಾರ ಪತ್ರ ಕೊಡುತ್ತೇನೆ ಯಾವಾಗ ಬೇಕಾದರೂ ನೊಂದಣಿ ಮಾಡಿಕೊಳ್ಳಿ ಎಂದು ಹೇಳಿ ಪಿರ್ಯಾದಿದಾರರಿಂದ ಉಳಿದ 1,41,000/-. ಹಣವನ್ನು ಪಡೆದುಕೊಂಡು 22/03/2022 ರಂದು ಸ್ಥಿರಾಸ್ತಿಗಳನನ್ನು ನೊಂದಣಿ ಮಾಡಿಕೊಳ್ಳುವ ಅಧಿಕಾರ ಪತ್ರ ಬರೆದು ಕೊಟ್ಟಿರುತ್ತಾರೆ. ಅಧಿಕಾರ ಪತ್ರವನ್ನು ನೋಂದಣಿ ಮಾಡುವ ಸಲುವಾಗಿ ದಿನಾಂಕ: 08/04/2022 ರಂದು ಜಿಲ್ಲಾ ನೋಂದಣಾಧಿಕಾರಿಗಳ ಸಮ್ಮುಖದಲ್ಲಿ ನೋಂದಣಿ ಮಾಡಿ, ದಿನಾಂಕ 30/04/2022 ರಂದು ಬ್ರಹ್ಮಾವರ ನೋಂದಣಾಧಿಕಾರಿಯವರ ಕಛೇರಿಯಲ್ಲಿ ನೋಂದಣಿ ಮಾಡಲು ಹೋದಂತಹ ಸಮಯದಲ್ಲಿ 1ನೇ ಆರೋಪಿತರು ಪಿರ್ಯಾದಿದಾರರಿಗೆ ಮೋಸ ಮಾಡುವ ಉದ್ದೇಶದಿಂದ 3 ನೇ ಆರೋಪಿತರ ಕಾರ್ಯದರ್ಶಿಗಳು ಬ್ರಹ್ಮಾವರ ಮೂರ್ತೆದಾರರ ಸೇವಾ ಸಹಕಾರಿ ಸಂಘದಲ್ಲಿ ಸ್ಥಿರಾಸ್ತಿಯ ಮೇಲೆ ರೂಪಾಯಿ 4,50,000/- ಸಾಲವನ್ನು ಏಪ್ರಿಲ್‌ ತಿಂಗಳ 20 ರ ನಂತರ ಮಾಡಿರುತ್ತಾರೆ. ಈ ಬಗ್ಗೆ ಪಿರ್ಯಾದಿದಾರರು ಎಲ್ಲಾ ಅಧಿಕಾರಿಗಳ ಸಮ್ಮುಖದಲ್ಲಿ ವಿಚಾರಿಸಿದಾಗ 1 ರಿಂದ 3ನೇ ಆರೋಪಿತರು ಒಬ್ಬರಿಗೊಬ್ಬರು ಶಾಮೀಲಾಗಿದ್ದುಕೊಂಡು , ಕರಾರು ಮಾಡಿಕೊಂಡ ವಿಚಾರ ತಿಳಿದೂ ಸಹ 1 ನೇ ಆರೋಪಿಗೆ 2 ನೇ ಆರೋಪಿ ಸಾಲವನ್ನು ಕೊಡಿಸುವಂತೆ ಮಾಡಿದ್ದು, ಅಲ್ಲದೆ 3ನೇ ಆರೋಪಿಯು ದಾಖಲಾತಿಗಳನ್ನು ಕೂಲಂಕುಷವಾಗಿ ಪರಿಶೀಲಿಸದೆ ಪಿರ್ಯಾದಿದಾರರಿಗೆ ಮೋಸ, ವಂಚನೆ ಮತ್ತು ಆರೋಪಿತರಿಗೆ ಹಣದ ಸಹಾಯ ಮಾಡುವ ಉದ್ದೇಶದಿಂದ ಸಾಲವನ್ನು ನೀಡಿ, ಆರೋಪಿಗಳು ಪಿರ್ಯಾದಿದಾರರಿಗೆ ಮೋಸ, ವಂಚನೆ, ಅನ್ಯಾಯ ಮಾಡಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 93/2022 ಕಲಂ :406, 417, 420 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 28-05-2022 06:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080