Feedback / Suggestions

ಅಪಘಾತ ಪ್ರಕರಣ

 • ಶಿರ್ವಾ: ದಿನಾಂಕ 27/05/2021 ರಂದು ಬೆಳಿಗ್ಗೆ 09:30 ಗಂಟೆಗೆ ಶಿರ್ವ ಗ್ರಾಮದ ಭೂತೊಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಕ್ರಾಸ್‌ಬಳಿ ಹಾದು ಹೋಗಿರುವ ತಿರುವು ರಸ್ತೆಯಲ್ಲಿ ಆರೋಪಿ ಸೊಹೈಲ್ ಎಂಬಾತನು ಕೆಎ-20-ಇಡಬ್ಲೂ-7298 ನೇ ಹೊಂಡಾ ಡಿಯೋ ದ್ವಿಚಕ್ರವಾಹನವನ್ನು ಶಿರ್ವಾ ಮಸೀದಿ ಕಡೆಯಿಂದ ಬೂತೊಟ್ಟು ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಎದುರುಗಡೆಯಿಂದ ಅಂದರೆ ಶಿರ್ವಾ ಪದವು ಕಡೆಯಿಂದ  ಶಿರ್ವಾ ಮಸೀದಿ ಕಡೆಗೆ ಪಿರ್ಯಾದಿದಾರರಾದ ದರ್ಶನ್‌(19) ತಂದೆ: ರಮೇಶ್‌ಭಂಡಾರಿ, ವಾಸ: ಕೋಡು ಬೀಜೊಟ್ಟು ಬದಿ ಮನೆ, ಶಿರ್ವ ಅಂಚೆ ಮತ್ತು ಗ್ರಾಮ, ಕಾಪು ತಾಲೂಕು ಉಡುಪಿ ಇವರು ತನ್ನ ಕೆಎ-20-ಇವಿ-1947 ನೇ ಹೊಂಡಾ ದ್ವಿಚಕ್ರವಾಹನದಲ್ಲಿ ತನ್ನ ತಾಯಿ ವಿಮಲಾ ರವರನ್ನು ಹಿಂಬದಿ ಸವಾರಳನ್ನಾಗಿ ಕುಳ್ಳಿರಿಸಿಕೊಂಡು ಬರುತ್ತಿದ್ದವರಿಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರಳಾದ ವಿಮಲಾರವರು ಹತೋಟಿ ತಪ್ಪಿ ರಸ್ತೆಗೆ ಬಿದ್ದ ಪರಿಣಾಮ ಬಲ ಕಾಲಿನ ಮೊಣಗಂಟಿನ ಬಳಿ ಮೂಳೆ ಮುರಿತದ ಜಖಂ, ಮುಂಭಾಗದ ನಾಲ್ಕು ಹಲ್ಲುಗಳು ಕಿತ್ತು ಹೋಗಿದ್ದು, ಅಲ್ಲದೆ ಮೂಗಿಗೆ, ಎರಡೂ ಕಣ್ಣಿನ ಮೇಲ್ಗಡೆ , ಎಡಕೈ ಮಣಿಗಂಟಿನ ಬಳಿ ಹಾಗೂ ಎಡ ಕಾಲಿಗೆ ರಕ್ತಗಾಯ ಹಾಗೂ ದರ್ಶನ್‌ ಇವರ ಎಡಕಾಲಿನ ಹೆಬ್ಬರಳಿಗೆ ಚರ್ಮ ಸುಲಿದ ಸಾದಾ ಪ್ರಮಾಣದ ತರಚಿದ ಗಾಯವಾಗಿರುವುದಾಗಿದೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 34/2021, ಕಲಂ: 279,  338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಟ್ಕಾ ಜುಗಾರಿ ಪ್ರಕರಣ

 • ಮಲ್ಪೆ: ದಿನಾಂಕ 27/05/2021 ರಂದು ಕಡೇಕಾರು ಗ್ರಾಮದ ಕನ್ನರಪಾಡಿ ಕಿನ್ನಿಮೂಲ್ಕಿ ಸರ್ವಿಸ್ ರಸ್ತೆಯಲ್ಲಿ ಮಟನ್ ಸ್ಟಾಲ್ ಹಿಂಬದಿ ಸಾರ್ವಜನಿಕ ಖಾಲಿ ಸ್ಥಳದಲ್ಲಿ ಸುರೇಶ ನಿಟ್ಟೂರು ಎಂಬಾತನು  ಮಟ್ಕಾ ಜುಗಾರಿ ಆಟ ಆಡಿಸುತ್ತಿರುವುದಾಗಿ ಠಾಣಾ ಸಿಬ್ಬಂದಿ ರವಿರಾಜ ರವರು  ಸಕ್ತಿವೇಲು ಈ,  ಪೊಲೀಸ್  ಉಪ ನಿರೀಕ್ಷಕರು, ಮಲ್ಪೆ ಪೊಲೀಸ್ ಠಾಣೆ, ಇವರಿಗೆ 16:00 ಗಂಟೆಗೆ ಮಾಹಿತಿ ತಿಳಿಸಿದ ಮೇರೆಗೆ ದಾಳಿ ನಡೆಸುರೇ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ನೋಡಿದಾಗ ಒಬ್ಬನು ಕಲ್ಯಾಣಿ ಮಾರ್ಕೇಟ್‌, ಬಾಂಬೆ  ಮಾರ್ಕೇಟ್‌ ಒಂದು ರೂಪಾಯಿಗೆ 70 ರೂಪಾಯಿ ಕೊಡುತ್ತೇನೆಂದು ಹೇಳುತ್ತಾ ಜನರನ್ನು ಸೇರಿಸಿಕೊಂಡು ಅವರಿಂದ ಹಣ ಪಡೆದುಕೊಂಡು ಮಟ್ಕಾ ಜುಗಾರಿ ಆಟ ನಡೆಸುತ್ತಿರುವುದು ಕಂಡು ಖಚಿತಪಡಿಸಿಕೊಂಡು 18:10 ಗಂಟೆಗೆ ಸಿಬ್ಬಂದಿಗಳೊಂದಿಗೆ ಧಾಳಿ ನಡೆಸಿದಾಗ ಮಟ್ಕಾ ಚೀಟಿ ಪಡೆದು ಹಣ ಸಂಗ್ರಹಿಸುತ್ತಿದ್ದವನ್ನು ಹಿಡಿದು ವಿಚಾರಿಸಿದಾಗ ತನ್ನ ಹೆಸರು ಸುರೇಶ, (48) ತಂದೆ: ಜರ್ನಾಧನ , ವಾಸ: ಹನುಮಂತ ನಗರ, ಆಭರಣ ಶೋರೂಮ್ ಹತ್ತಿರ ನಿಟ್ಟೂರು ಅಂಚೆ ಪುತ್ತೂರು  ಗ್ರಾಮ ಎಂದು ತಿಳಿಸಿದ್ದು, ತಾನು ಜುಗಾರಿ ಆಟದಿಂದ ಬಂದ ಹಣವನ್ನು ತನ್ನ ಸ್ವಂತ ಲಾಭಕ್ಕಾಗಿ ಬಳಸುತ್ತಿರುವುದಾಗಿ ತಪ್ಪೊಪ್ಪಿಕೊಂಡಿದ್ದು, ಆತನಿಂದ ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ಒಟ್ಟು 1350/- ರೂಪಾಯಿ, ಮಟ್ಕಾ ಚೀಟಿ-1 ಹಾಗೂ ಬಾಲ್ ಪೆನ್ನು -1 ನ್ನು ಪಂಚರ ಸಮಕ್ಷಮ ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 62 /2021  ಕಲಂ  78 (i)(iii) ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಬಾವಿಕ ಮರಣ ಪ್ರಕರಣ

 • ಕುಂದಾಪುರ: ಪಿರ್ಯಾದಿದಾರರಾದ ರವೀಂದ್ರ ಜೋಗಿ, (48) ತಂದೆ: ಮಾಲಿಂಗ ಜೋಗಿ, ವಾಸ: ದೇವಿ ದೇವಸ್ಥಾನ, ಬಸ್ರೂರು ಗ್ರಾಮ, ಕುಂದಾಪುರ ಇವರ ತಮ್ಮ ಚಿರಂಜೀವಿ (34) ರವರು ಕೋಟೇಶ್ವ್ರದ ವಿಘ್ನೇಶ್ವರ ಪ್ಲಾಸ್ಟಿಕ್ ಇಂಡಸ್ಟ್ರಿ ಯಲ್ಲಿ ಹೆಲ್ಪರ್ ಆಗಿ ಕೆಲಸ ಮಾಡಿಕೊಂಡಿದ್ದು ಫ್ಯಾಕ್ಟರಿ ವಸತಿಗೃಹದಲ್ಲಿ ವಾಸವಾಗಿರುವುದಾಗಿದೆ. ಚಿರಂಜೀವಿರವರು ಈ ದಿನ ಕೆಲಸಕ್ಕೆ ಹೋಗದೇ ಇದ್ದು ಸಂಜೆ ಸುಮಾರು 18:30 ಗಂಟೆ ವೇಳೆಗೆ ಹತ್ತಿರದ ರೂಮಿನ ರಜನೀಶ್ ಎಂಬವರು ಚಿರಂಜಿವಿಯನ್ನು ಕರೆದಾಗ ಯಾವುದೇ ಮಾತು ಕೇಳದ ಕಾರಣ ಕಿಟಕಿಯಲ್ಲಿ ನೋಡಿಲಾಗಿ ಚಿರಂಜೀವಿಯು ರೂಮಿನ ಫ್ಯಾನ್ ರೆಕ್ಕೆಗೆ ಬೆಡ್ ಶೀಟ್ ಸಹಾಯದಿಂದ ಕುತ್ತಿಗೆಗೆಗ ನೇಣು ಹಾಕಿಕೊಂಡು ನೇತಾಡುವ ಸ್ಥಿತಿಯಲ್ಲಿದ್ದು ಈ ಬಗ್ಗೆ ರವೀಂದ್ರ ಜೋಗಿ ರವರಿಗೆ ಮಾಹಿತಿ ಬಂದಿದ್ದು ಇವರು ರೂಮಿನ ಒಳಗೆ ಹೋಗಿ ನೋಡಲಾಗಿ ಚಿರಂಜೀವಿಯವರು ಕುತ್ತಿಗೆಗೆ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡಿರುವುದಾಗಿದೆ. ಚಿರಂಜೀವಿಯವರು ಯೂವುದೋ ಕಾರಣದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 19/2021 ಕಲಂ: 174 ಸಿ.ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣಗಳು

 • ಕುಂದಾಪುರ: ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ 10/05/2021 ರಿಂದ 24/05/2021 ರವರೆಗೆ ಕೋವಿಡ್ ಕರ್ಪ್ಯೂ ವಿಧಿಸಿದ್ದು ಕರ್ಪ್ಯೂ ಜ್ಯಾರಿಗೊಳಿಸುವ ಬಗ್ಗೆ ಆದೇಶ ಹೊರಡಿಸಿದ್ದು ಈ ಬಗ್ಗೆ  ದಿನಾಂಕ 27/05/2021 ರಂದು ಸದಾಶಿವ ಆರ್ ಗವರೋಜಿ  ಪಿ ಎಸ್ ಐ –ಕುಂದಾಪುರ ಪೊಲೀಸ್ ಠಾಣೆ ರವರು ಸಿಬ್ಬಂದಿಯವರೊಂದಿಗೆ  ಕುಂದಾಪುರ ತಾಲೂಕು ಕುಂದಾಪುರ ವಕ್ವಾಡಿ ಗ್ರಾಮದ ವಕ್ವಾಡಿ ಜಂಕ್ಷನ್ ನಲ್ಲಿ ರಸ್ತೆಯಲ್ಲಿ ವಾಹನ ತಪಾಸಣೆ ಕರ್ತವ್ಯದಲ್ಲಿರುವಾಗ 13:00 ಗಂಟೆಯ ಸಮಯಕ್ಕೆ ಕಳ್ಳಿಗುಡ್ಡೆ ಕಡೆಯಿಂದ ಬೀಜಾಡಿ ಕಡೆಗೆ KA-20-MC-0643 EECO ಕಾರನ್ನು ಅದರ ಚಾಲಕನು ಚಲಾಯಿಸಿಕೊಂಡು ಬರುತ್ತಿದ್ದುದನ್ನು ಕಂಡು ನಿಲ್ಲಿಸಿ ತಪಾಸಣೆ ಮಾಡಿ ವಾಹನ ಚಾಲಕ ಉಬೈದುಲ್ಲ, (42) ತಂದೆ: ಹಸ್ಸನ್ ಸಾಹೇಬ್  ವಾಸ: ಐಸ್ ಪ್ಲಾಂಟ್ ಬಳಿ, ಹಳೆಅಳಿವೆ, ಕೋಟೇಶ್ವರ ಗ್ರಾಮ, ಕುಂದಾಪುರ ತಾಲೂಕು ಈತನನ್ನು ವಿಚಾರಿಸಲಾಗಿ ಸಕಾರಣವಿಲ್ಲದೇ ತಿರುಗಾಡುತ್ತಿರುವುದು ಕಂಡುಬಂದಿರುತ್ತದೆ. ಸದ್ರಿ  ಮೇಲ್ಕಂಡ ವಾಹನ ಚಾಲಕನು ಕೋವಿಡ್ – 2019  ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರವು  ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು  ಹರಡುವ ಸಂಭವವಿದೆಯೆಂದು ತಿಳಿದೂ ಕೂಡಾ ಅನಾವಶ್ಯಕವಾಗಿ ಸಕಾರಣವಿಲ್ಲದೆ ಸಾರ್ವಜನಿಕ  ಸ್ಥಳದಲ್ಲಿ  ಸಂಚರಿಸಿಕೊಂಡು ನಿರ್ಲಕ್ಷತನದಿಂದ ಸರಕಾರ ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿಯಲ್ಲಿನ ನಿಯಮಗಳನ್ನು ಉಲ್ಲಂಘಿಸಿ ಜೀವಕ್ಕೆ ಅಪಾಯಕರವಾದಂಥ ರೋಗವು ಹರಡುವಂತೆ ಮಾಡಿ ನಿರ್ಲಕ್ಷತನ ತೋರಿರುವುದರಿಂದ ಸದ್ರಿ ವಾಹನವನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 70/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ: ದಿನಾಂಕ 27/05/2021 ರಂದು 14:00 ಗಂಟೆಗೆ ಪಿಸದಾಶಿವ ಆರ್ ಗವರೋಜಿ ಪಿ.ಎಸ್.ಐ. ಕುಂದಾಪುರ ಪೊಲೀಸ್ ಠಾಣೆ ಇವರು ಠಾಣೆಯಲ್ಲಿರುವಾಗ ಕುಂದಾಪುರ ತಾಲೂಕು ಗೋಪಾಡಿ ಗ್ರಾಮದ ಗೋಪಾಡಿ ಪಡುಶಾಲೆಯ ಹಿಂಬದಿ  ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ಎಂಬ ಜುಗಾರಿ ಆಡುತ್ತಿರುವುದಾಗಿ  ಬಾತ್ಮೀದಾರರಿಂದ ಬಂದ ಮಾಹಿತಿ ಮೇರೆಗೆ ಸದ್ರಿ ಸ್ಥಳಕ್ಕೆ ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ಮಾನ್ಯ ನ್ಯಾಯಾಲಯಕ್ಕೆ  ವರದಿ ನಿವೇದಿಸಿ ನ್ಯಾಯಾಲಯದ  ಅನುಮತಿ ಪಡೆದು ಸಿಬ್ಬಂದಿಯವರೊಂದಿಗೆ ಇಲಾಖಾ ವಾಹನಗಳಲ್ಲಿ 14:45 ಗಂಟೆಗೆ ಠಾಣೆಯಿಂದ ಹೊರಟು 15:15 ಗಂಟೆಗೆ ಕುಂದಾಪುರ ತಾಲೂಕು ಗೋಪಾಡಿ ಗ್ರಾಮದ ಗೋಪಾಡಿ ಪಡುಶಾಲೆಯ ಹಿಂಬದಿ ತಲುಪಿ ಮರೆಯಲ್ಲಿ ನಿಂತು ನೋಡಲಾಗಿ ಸಾರ್ವಜನಿಕ ಸ್ಥಳದಲ್ಲಿ ಸುಮಾರು 10  ಮಂದಿ ಸಾರ್ವಜನಿಕರು ಒಟ್ಟು ಸೇರಿಕೊಂಡಿದ್ದು, ಕೋಳಿಗಳಿಗೆ ಹಿಂಸಾತ್ಮಕವಾಗಿ ಅದರ ಕಾಲಿಗೆ ಕತ್ತಿಯನ್ನು ಕಟ್ಟಿ ಕೋಳಿ ಅಂಕ ಎಂಬ ಜುಗಾರಿ ಹೇಳಿಕೊಂಡು ಸಾರ್ವಜನಿಕರು  ಹಣವನ್ನು ಪಣವಾಗಿ ಕಟ್ಟಿಕೊಳ್ಳುತ್ತಿರು ವುದನ್ನು ಖಚಿತಪಡಿಸಿಕೊಂಡು, ಸ್ಥಳಕ್ಕೆ ಪಂಚಾಯತುದಾರರನ್ನು ಬರಮಾಡಿಕೊಂಡು 15:30 ಗಂಟೆಗೆ ಸಿಬ್ಬಂದಿಯವರ ಸಹಾಯದಿಂದ ದಾಳಿ ನಡೆಸಿದಾಗ ಅಲ್ಲಿ ಸೇರಿದ ಕೆಲವು ಜನರು ಓಡಿ ಹೋಗಿದ್ದು, ಅವರೊಂದಿಗೆ ಇದ್ದ ಮೂವರು ವ್ಯಕ್ತಿಗಳನ್ನು ಸಿಬ್ಬಂದಿಯವರ ಸಹಾಯದಿಂದ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ 1). ಸಂತೋಷ ಪೂಜಾರಿ, (39)ತಂದೆ: ರಾಮ  ಪೂಜಾರಿ, ವಾಸ: ಸಂಕಮ್ಮ  ನಿಲಯ, ಕದ್ರಿಕಟ್ಟು, ಮಣೂರು  ಗ್ರಾಮ, ಬ್ರಹ್ಮಾವರ ತಾಲೂಕು,  ಉಡುಪಿ ಜಿಲ್ಲೆ, 2). ರಂಗನಾಥ, (36) ತಂದೆ: ಮಹಾಬಲ ಶೆಟ್ಟಿ, ವಾಸ:  ಹೆಗ್ಡೆ ಹೌಸ್, ಮಲ್ಯಾಡಿ, ಉಳ್ತೂರು ಗ್ರಾಮ, ಕುಂದಾಫುರ ತಾಲೂಕು. 3). ನಾಗರಾಜ ಮರಕಾಲ, (44)  ತಂದೆ:  ದಿ: ಹೂವ ನಾಯ್ಕ, ವಾಸ:  ಹಾವಳಿ ಮನೆ, ವಿಠಲವಾಡಿ, ವಡೇರಹೋಬಳಿ ಗ್ರಾಮ, ಕುಂದಾಪುರ ತಾಲೂಕು, ಎಂಬುದಾಗಿ ಹೇಳಿದ್ದು  ಹಣವನ್ನು ಪಣವಾಗಿ ಇಟ್ಟು, ತಮ್ಮ ಸ್ವಂತ ಲಾಭಕ್ಕೋಸ್ಕರ ಕೋಳಿ ಅಂಕ ಎಂಬ ಜುಗಾರಿ ಆಟ  ಆಡುತ್ತಿರುವುದಾಗಿ ತಿಳಿಸಿರುತ್ತಾರೆ.  ಆರೋಪಿತರಿಂದ ಆಟಕ್ಕೆ ಬಳಸಿದ ನಗದು ರೂಪಾಯಿ 1550/-, ಹಿಂಸಾತ್ಮಕವಾಗಿ ಜುಗಾರಿ ಆಟಕ್ಕೆ ಬಳಸಿದ 4 ಹುಂಜ ಕೋಳಿ ಒಟ್ಟು ಅಂದಾಜು ಮೌಲ್ಯ ರೂ. 2,000/-,  ಕೋಳಿಯ ಕಾಲಿಗೆ  ಕಟ್ಟಿದ ಬಾಳು (ಕತ್ತಿ) -2, ಸದ್ರಿ ಸ್ಥಳದಲ್ಲಿಯೇ ನಿಲ್ಲಿಸಿಟ್ಟಿದ್ದ ಹಾಗೂ  ಅಕ್ರಮ ಜುಗಾರಿ ಆಟಕ್ಕೆ ಬರಲು ಉಪಯೋಗಿಸಲಾದ 1). KA.20 ET.2659 JUPEETER ದ್ವಿ ಚಕ್ರ ವಾಹನ  ಅಂದಾಜು  ಮೌಲ್ಯ ರೂ 40,000/-, 2). KA.09 EG.1355 HONDA ACTIVA ದ್ವಿ ಚಕ್ರ ವಾಹನ ಅಂದಾಜು  ಮೌಲ್ಯ ರೂ 40,000/-, 3). KA.20 R.3961 TVS VICTOR ದ್ವಿ ಚಕ್ರ ವಾಹನ  ಅಂದಾಜು  ಮೌಲ್ಯ ರೂ 20,000/-, 4). KA.20 EF.5567 BAJAJ PULSOR ದ್ವಿ ಚಕ್ರ ವಾಹನ ಅಂದಾಜು  ಮೌಲ್ಯ ರೂ 40,000/-, 5). KA.20 EF.2005 FASSION PRO ದ್ವಿ ಚಕ್ರ ವಾಹನ ಅಂದಾಜು  ಮೌಲ್ಯ ರೂ 30,000/-, 6). KA.04 HA.0186 HONDA ACTIVA ದ್ವಿ ಚಕ್ರ ವಾಹನ ಅಂದಾಜು  ಮೌಲ್ಯ ರೂ 35,000/-, 7). KA.20 EQ.7175 JUPITER ದ್ವಿ ಚಕ್ರ ವಾಹನ ಅಂದಾಜು  ಮೌಲ್ಯ ರೂ 40,000/-, 8). KA19 ES 1451 HONDA ACTIVA ದ್ವಿ ಚಕ್ರ ವಾಹನ ಅಂದಾಜು  ಮೌಲ್ಯ ರೂ 40,000/-, 9). KA.05 HV.2921 HONDA DIO ದ್ವಿ ಚಕ್ರ ವಾಹನ ಅಂದಾಜು  ಮೌಲ್ಯ ರೂ 40,000/-,  ಸದ್ರಿ ಸ್ವತ್ತುಗಳನ್ನು ಮಹಜರು ಮುಖೇನ ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಆರೋಪಿತರು ಕೋವಿಡ್-19 ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ಹಾಗೂ ಮಾನ್ಯ ಜಿಲ್ಲಾ ದಂಡಾಧಿಕಾರಿಗಳ ಆದೇಶದ ಬಗ್ಗೆ ತಿಳುವಳಿಕೆ ಇದ್ದರೂ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವವಿದೆಯೆಂದು ತಿಳಿದೂ ಕೂಡಾ ಆರೋಪಿತರು ಒಟ್ಟು ಸೇರಿಕೊಂಡು ಅಕ್ರಮ ಕೋಳಿ ಅಂಕ ಜೂಜಾಟದಲ್ಲಿ ಪಾಲುಗೊಂಡಿದ್ದು, ಅಪಾಯಕಾರಿಯಾದ ರೋಗದ ಸೋಂಕನ್ನು ತಡೆಗಟ್ಟುವಲ್ಲಿ ನಿರ್ಲಕ್ಷ್ಯತನ ತೋರಿ ಅಪರಾಧ ಎಸಗಿರುವುದಾಗಿದೆ, ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 71/2021 ಕಲಂ: 87, 93 KP Act, 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
 • ಕಾರ್ಕಳ: ದಿನಾಂಕ 27/05/2021 ರಂದು ಸಮಯ ಬೆಳಿಗ್ಗೆ ಸುಮಾರು 9:00 ಗಂಟೆಗೆ ಆಪಾದಿತೆ ಶ್ರೀಮತಿ ಉಷಾ ರೈಯವರು ಪಿರ್ಯಾದಿದಾರರಾಧ ಪವಿತ್ರ ಶೆಣೈ (19) ತಂದೆ: ಗುರುದತ್ತ ಶೆಣೈ, ವಾಸ: ಬಾಲಾಜಿ ಆರ್ಕೇಡ್‌ 4ನೇ ಮಹಡಿ, ಕಾರ್ಕಳ ನರ್ಸಿಂಗ್‌ ‌ಎದುರು, ಕಾರ್ಕಳ ಕಸಬಾ ಗ್ರಾಮ ಕಾರ್ಕಳ ಇವರ ಮನೆಯ ಬಾಗಿಲಿಗೆ ಬಂದು ಎಣ್ಣೆಯನ್ನು ಚೆಲ್ಲಿದ್ದು ಪವಿತ್ರ ಶೆಣೈ ರವರು ಯಾಕೆ  ನೀವು ಈ ರೀತಿ ತೊಂದರೆ ಮಾಡುತ್ತೀರಿ  ಎಂದು ಕೇಳಿದಾಗ ಆಪಾದಿತೆಯು ಕೈಯ್ಯಲ್ಲಿದ್ದ ಹರಿತವಾದ ಬ್ಲೇಡ್‌ಕಟ್ಟರ್‌ನಿಂದ ಪವಿತ್ರ ಶೆಣೈ ರವರ ಎಡಕೈಯ ತಟ್ಟಿಗೆ ರಕ್ತ ಗಾಯಗೊಳಿಸಿದ್ದು ಇದನ್ನು ತಡೆಯಲು ಬಂದ ಪವಿತ್ರ ಶೆಣೈ ಇವರ ತಾಯಿ ಶ್ರೀಮತಿ ಶುಭಮಂಗಳ ಇವರ ಎಡಕೈಯ ಕೋಲು ಕೈ ಹಾಗೂ ಬಲಕೈಯ ತಟ್ಟಿಗೆ ತಿವಿದು ರಕ್ತ ಗಾಯಗೊಳಿಸಿರುತ್ತಾರೆ. ಆಪಾದಿತೆಯ ಈ ಕೃತ್ಯಕ್ಕೆ ಕಾರಣವೆನೆಂದರೆ ಪವಿತ್ರ ಶೆಣೈ ರವರು ಆಪಾದಿತೆಯ ಮನೆಗೆ ಬಂದ ಕೇಬಲ್‌ನ್ನು ಕಟ್‌ಮಾಡುತ್ತಾರೆ ಎಂಬ ಉದ್ದೇಶದಿಂದ ಈ ಕೃತ್ಯವನ್ನು ಎಸಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ  ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 69/2021 ಕಲಂ: 324 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾಪು: ಕೋವಿಡ್-19 ಕೋರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ  ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ದಿನಾಂಕ 12/05/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಸದ್ರಿ ಆದೇಶವನ್ನು ಪರಿಷ್ಕರಿಸಿ ದಿನಾಂಕ 10/05/2021 ರಂದು ಬೆಳಗ್ಗೆ 06:00 ಗಂಟೆಯಿಂದ ದಿನಾಂಕ 24/05/2021 ರ ಬೆಳಗ್ಗೆ 06:00 ಗಂಟೆಯವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಮತ್ತೆ ಸದ್ರಿ ಆದೇಶವನ್ನು ಪರಿಷ್ಕರಿಸಿ ದಿನಾಂಕ 24/05/2021 ರ ಬೆಳಗ್ಗೆ 06:00 ಗಂಟೆಯಿಂದ ದಿನಾಂಕ 07/06/2021 ರ ಬೆಳಗ್ಗೆ 06:00 ಗಂಟೆಯವರೆಗೆ ಲಾಕ್‌ಡೌನ್ ಘೋಷಿಸಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳ ಆದೇಶ ಮತ್ತು ಮೇಲಾಧಿಕಾರಿಗಳ ಸೂಚನೆಯಂತೆ ಅನಗತ್ಯವಾಗಿ ಓಡಾಟ ನಿಷೇಧಿಸಿದ್ದು, ಆ ಬಗ್ಗೆ ವಾಹನ  ತಪಾಸಣೆ ನಡೆಸುವಂತೆ ಮೇಲಾಧಿಕಾರಿಯವರ ಆದೇಶದಂತೆ ಕಾಪು ಪೇಟೆಯಲ್ಲಿ ರಾಘವೇಂದ್ರ ಸಿ.  ಪೊಲೀಸ್ ಉಪನಿರೀಕ್ಷಕರು ಕಾಪು ಪೊಲೀಸ್ ಠಾಣೆ ಇವರು ಸಿಬ್ಬಂದಿಯವರ ಸಹಾಯದಿಂದ ಸಾರ್ವಜನಿಕ ರಸ್ತೆಯಲ್ಲಿ ವಾಹನ ತಪಾಸಣೆಯಲ್ಲಿರುತ್ತಾ ಅಗತ್ಯ ವಸ್ತುಗಳ ಖರೀದಿ ಬಗ್ಗೆ ಸರಕಾರ ನಿಗದಿಪಡಿಸಿದ ಸಮಯ ಅವಕಾಶದ ಬಳಿಕವೂ  ಅನಗತ್ಯವಾಗಿ ಗುಂಪು ಸೇರಿ ಸಂಚರಿಸುತ್ತಿರುವವರ ವಾಹನಗಳನ್ನು ತಪಾಸಣೆಗಾಗಿ ನಿಲ್ಲಿಸಿ ಪರಿಶೀಲಿಸಿದಲ್ಲಿ 1) ಹೊಂಡಾ ಕಂಪನಿಯ ಕೆಂಪು ಬಣ್ಣದ ಡಿಯೋ ಸ್ಕೂಟರ್‌ ನಂಬ್ರ ಕೆಎ-20-ಇವಿ-6522 ನೇದರ ಸವಾರ ಚೇತನ (36) ತಂದೆ: ಗೋಪಾಲ ವಾಸ: ಕೋತ್ತಲಕಟ್ಟೆ ಊಳಿಯಾರಗೋಳಿ ಗ್ರಾಮ ಕಾಪು ತಾಲೂಕು ಉಡುಪಿ ಜಿಲ್ಲೆ. 2) ಮಹಿಂದ್ರಾ ಕಂಪನಿಯ ಗ್ರೇ ಬಣ್ಣದ ಡುರೋ ಡಿಝಡ್‌ಸ್ಕೂಟರ್‌ ನಂಬ್ರ ಕೆಎ-20-ಇಇ-3407 ನೇದರ ಸವಾರ ಪ್ರಶಾಂತ (35) ತಂದೆ : ಸಂಜೀವ ದೇವಾಡಿಗ ವಾಸ : ದಂಡತೀರ್ಥ ಶಾಲೆಯ ಹತ್ತಿರ ಊಳಿಯಾರಗೋಳಿ ಗ್ರಾಮ ಕಾಪು ತಾಲೂಕು ಸದ್ರಿಯವರ ಓಡಾಟದ ಕಾರಣವನ್ನು ವಿಚಾರಿಸಲಾಗಿ, ಯಾವುದೇ ತುರ್ತು ಕಾರಣವಿಲ್ಲದೇ, ಅನಗತ್ಯವಾಗಿ ಸಂಚರಿಸುವುದು ಕಂಡು ಬಂದಿರುತ್ತದೆ. ಸದ್ರಿ ಆರೋಪಿಗಳು ಘನ ಕರ್ನಾಟಕ ಸರಕಾರವು ಕೋವಿಡ್‌ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಕೋವಿಡ್‌ನಿಯಮ ಉಲ್ಲಂಘಿಸಿ ಅನಗತ್ಯವಾಗಿ ವಾಹನದಲ್ಲಿ ಸಂಚರಿಸುತ್ತಿರುವುದರಿಂದ ಅವರ  ಮೇಲೆ  ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವರದಿಯನ್ನು ನೀಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 88/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ದಿನಾಂಕ 27/05/2021 ರಂದು ಸಂಜೆ  18:30 ಗಂಟೆಗೆ ಮಧು ಬಿ.ಇ ಪೊಲೀಸ್ ಉಪನಿರೀಕ್ಷಕರು ಕಾರ್ಕಳ ನಗರ ಪೊಲೀಸ್ ಠಾಣೆ ರವರು ರಾಣಾ ಸರಹದ್ದಿನ ಕಾರ್ಕಳ ತಾಲೂಕು ಕಸಬ ಗ್ರಾಮದ ಪತ್ತೊಂಜಿಕಟ್ಟೆ-ಹಿರ್ಗಾನ ಸಾರ್ವಜನಿಕ ರಸ್ತೆಯ ಪೊಲ್ಲಾರ್ ಎಂಬಲ್ಲಿ ಇಲಾಖಾ ಜೀಪಿನಲ್ಲಿ ಚಾಲಕನೊಂದಿಗೆ ವಾಹನ ತಪಾಸಣೆ ಮಾಡುತ್ತಿದ್ದ ಸಮಯದಲ್ಲಿ ಪತ್ತೊಂಜಿಕಟ್ಟೆ ಕಡೆಯಿಂದ ಹಿರ್ಗಾನ ಕಡೆಗೆ ಒಂದು ದ್ವಿಚಕ್ರ ವಾಹನದಲ್ಲಿ ಹಿಂಬದಿಯಲ್ಲಿ ಸಹಸವಾರೆಯೊಬ್ಬರನ್ನು ಕುಳ್ಳಿರಿಸಿಕೊಂಡು ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬರುತ್ತಿದ್ದು ನಾವು ನೋಡಿ ದ್ವಿಚಕ್ರವಾಹನದ ಸವಾರನಿಗೆ ದೂರದಲ್ಲಿಯೇ ಕೈ ಸನ್ನೆ ಮಾಡಿ ದ್ವಿಚಕ್ರ ವಾಹನವನ್ನು ಬದಿಗೆ ನಿಲ್ಲಿಸುವಂತೆ ಸೂಚನೆ ನೀಡಿದರೂ ಕೂಡ ದ್ವಿಚಕ್ರ ವಾಹನ ಸವಾರನು ಸೂಚನೆಯನ್ನು ಪಾಲಿಸದೇ ಅದೇ ವೇಗದಲ್ಲಿ ನಮ್ಮ ಜೀವಕ್ಕೆ ಅಪಾಯಕರವಾಗುವ ರೀತಿಯಲ್ಲಿ ತಾಗುವಂತೆ ಸವಾರಿ ಮಾಡಿಕೊಂಡು ಹಿರ್ಗಾನ ಕಡೆಗೆ ದ್ವಿಚಕ್ರ ವಾಹನವನ್ನು ಸವಾರಿಮಾಡಿಕೊಂಡು ಹೋಗಿದ್ದು. ಹೋಗುವಾಗ ದ್ವಿಚಕ್ರ ವಾಹನದ ಹಿಂಬದಿಯ ನಂಬರ್‌ ನೋಡಲಾಗಿ KA-20-EU-6010 ನೇ ನೊಂದಣಿ ಸಂಖ್ಯೆಯ ಬಿಳಿ ಬಣ್ಣದ ದ್ವಿಚಕ್ರ ವಾಹನ ಆಗಿರುತ್ತದೆ. ಸದ್ರಿ ದ್ವಿಚಕ್ರ ವಾಹನ ಸವಾರನು ನಮ್ಮ ಜೀವಕ್ಕೆ ಅಪಾಯಕರವಾಗುವ ರೀತಿಯಲ್ಲಿ ಅತೀ ವೇಗ ಮತ್ತು ಅಜಾಗರೂಕತೆಯಿಂದ ಸವಾರಿಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 70/2021 ಕಲಂ: 279,336 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
 • ಬ್ರಹ್ಮಾವರ: ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 20/05/2021 ರಿಂದ ದಿನಾಂಕ 07/06/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಫ್ಯೂ ಜ್ಯಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ನೀಡಿದ್ದು, ಈ ಬಗ್ಗೆ ಗುರುನಾಥ ಬಿ. ಹಾದಿಮನಿ ಪಿ.ಎಸ್.ಐ. ಬ್ರಹ್ಮಾವರ ಪೊಲೀಸ್ ಠಾಣೆ ಇವರು ದಿನಾಂಕ 27/05/2021 ರಂದು ಸಿಬ್ಬಂದಿಯವರೊಂದಿಗೆ  ಇಲಾಖಾ ವಾಹನದಲ್ಲಿ ಚೇರ್ಕಾಡಿ ಗ್ರಾಮದ ಎಳ್ಳಂಪಳ್ಳಿ ಎಂಬಲ್ಲಿ ಎಳ್ಳಂಪಳ್ಳಿ – ನೀಲಾವರ ರಸ್ತೆಯಲ್ಲಿ ಅನಗತ್ಯವಾಗಿ ಜನರ ಮತ್ತು ವಾಹನಗಳ ಓಡಾಟವನ್ನು ತಪಾಸಣೆ ಮಾಡುತ್ತಿರುವಾಗ ಸಮಯ ಸಂಜೆ 6:30 ಗಂಟೆಗೆ ಎಳ್ಳಂಪಳ್ಳಿ ಕಡೆಯಿಂದ ನೀಲಾವರ ಕಡೆಗೆ ಆರೋಪಿ ಸುರೇಶ್ ನಾಯ್ಕ್ ಎಂಬವರು KA-20-EM-5588 ನೇ ನಂಬ್ರದ ಮೋಟಾರ್ ಸೈಕಲನ್ನು ಹೆಲ್ಮೆಟ್ ಧರಿಸದೇ ಇರುವ ಬಗ್ಗೆ ಮತ್ತು ಎಲ್ಲಿಗೆ ಹೋಗುತ್ತಿರುವುದಾಗಿ ಕೇಳಿದಾಗ ಯಾವುದೇ ಉತ್ತರವನ್ನು ನೀಡದೇ ಒಮ್ಮೆಲೇ ಮೋಟಾರ್ ಸೈಕಲನ್ನು ಚಲಾಯಿಸಿಕೊಂಡು ನೀಲಾವರ ಕಡೆಗೆ ಹೋಗಿರುತ್ತಾನೆ. ಆರೋಪಿಯು ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಹೆಲ್ಮೆಟ್ ಧರಿಸದೇ ಅನಗತ್ಯವಾಗಿ ಮೋಟಾರ್ ಸೈಕಲ್‌ನಲ್ಲಿ ತಿರುಗಾಡಿ ಕೋವಿಡ್‌19 ನಿಯಮ ಉಲ್ಲಂಘಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 96/2021 ಕಲಂ 269 ಐಪಿಸಿ  & 194C, 119 177 ಐಎಮ್ವಿ ಆ್ಯಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ. 

Last Updated: 28-05-2021 09:53 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080