ಅಭಿಪ್ರಾಯ / ಸಲಹೆಗಳು

28-05-2021 ದೈನಂದಿನ ಅಪರಾಧ ವರದಿ- ಅಪರಾಹ್ನ

ಹಲ್ಲೆ ಪ್ರಕರಣಗಳು

  • ಬ್ರಹ್ಮಾವರ : ಪಿರ್ಯಾದಿ ದೇವು ನಾಯ್ಕ್, ಪ್ರಾಯ-47 ವರ್ಷ, ತಂದೆ: ದಿ.ತಮ್ಮಯ್ಯ ನಾಯ್ಕ್, ವಾಸ: ಬಾಯರ್ ಬೆಟ್ಟು, ಚೇರ್ಕಾಡಿ ಗ್ರಾಮ, ಬ್ರಹ್ಮಾವರ ಇವರು ದಿನಾಂಕ 27-05-2021 ರಂದು ರಾತ್ರಿ 8:30 ಗಂಟೆಗೆ ಚೇರ್ಕಾಡಿ ಗ್ರಾಮದ ಬಾಯರ್ ಬೆಟ್ಟು ಎಂಬಲ್ಲಿರುವ ತನ್ನ ತಾಯಿಯನ್ನು ಮಾತನಾಡಿಸಲು ಅವರ ಮನೆಗೆ ಹೋದಾಗ ಪಿರ್ಯಾದುದಾರರ ತಮ್ಮನಾದ 1ನೇ ಆರೋಪಿ ಜಯಂತ ನಾಯ್ಕ್  ತಂದೆ: ದಿ. ತಮ್ಮಯ್ಯ ನಾಯ್ಕ, ವಾಸ: ಬಾಯರ್ ಬೆಟ್ಟು ಹಲಗೆಗುಂಡಿ, ಚೇರ್ಕಾಡಿ ಗ್ರಾಮ, ಬ್ರಹ್ಮಾವರ ತಾಲೂಕು ಇವರು ಪಿರ್ಯಾದುದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದದಿಂದ ಬೈದು ನೀನು ಮನೆಗೆ ಯಾಕೆ ಬಂದಿ ಇಲ್ಲಿ ನಿನಗೆ ಏನಿದೇ? ಹೋಗು ಇಲ್ಲಿಂದ ಎಂದು ಹೇಳಿ ಮನೆಯಿಂದ ಹೊರಗೆ ದೂಡಿದ್ದು ಆಗ ಪಿರ್ಯಾದುದಾರರು ಮನೆಯ ಅಂಗಳಕ್ಕೆ ಬಂದು ನಾನು ನನ್ನ ತಾಯಿಯನ್ನು ನೋಡಲು ಬಂದಿದ್ದೇನೆ ಎಂದು ಹೇಳಿದಾಗ ಆರೋಪಿ ಜಯಂತ್ ನಾಯ್ಕ್ ಕೈಯಿಂದ ಪಿರ್ಯಾದಿದಾರರ ಮುಖಕ್ಕೆ ಹೊಡೆದು, ಬಲ ಕೈ ಹೆಬ್ಬೆರಳಿಗೆ ಕಚ್ಚಿ, ಮರದ ರೀಪಿನ ತುಂಡಿನಿಂದ ಹಣೆಗೆ ಹೊಡೆದಿದ್ದು ಆಗ ಪಿರ್ಯಾದುದಾರರು ಬೊಬ್ಬೆ ಹಾಕುವುದನ್ನು ಕೇಳಿ ಇನ್ನೊಬ್ಬ ತಮ್ಮ ಪುರುಷೋತ್ತಮ ತಪ್ಪಿಸಲು ಬಂದಾಗ ಆರೋಪಿ ಜಯಂತ ಮರದ ರೀಪಿನ ತುಂಡಿನಿಂದ ಪುರುಷೋತ್ತಮನ ತಲೆಗೆ ಹಾಗೂ ಮೈ ಕೈಗೆ  ಹೊಡೆದಿದ್ದು ಆಗ ಜಯಂತನ ಹೆಂಡತಿ 2ನೇ ಆರೋಪಿ ಶಕುಂತಲಾ ಮನೆಯಿಂದ ಕತ್ತಿಯನ್ನು ತಗೆದುಕೊಂಡು ಬಂದು ಪುರುಷೋತ್ತಮನ ಬೆನ್ನಿಗೆ ಕಡಿದಿರುತ್ತಾರೆ. ಆರೋಪಿತರು ನಡೆಸಿದ ಹಲ್ಲೆಯಿಂದ ಪಿರ್ಯಾದುದಾರರ ಹಣೆಯ ಎಡಭಾಗಕ್ಕೆ ರಕ್ತಗಾಯ, ಮೈ ಕೈಗೆ ಒಳನೋವು, ಬಲ ಕೈ ಹಬ್ಬೆರಳಿಗೆ ನೋವಾಗಿದ್ದು, ಪುರುಷೋತ್ತಮನಿಗೆ ತಲೆಗೆ ರಕ್ತಗಾಯ, ಸೊಂಟದ ಬಳಿ ಕತ್ತಿಯಿಂದ ಕಡಿದ ತೀವ್ರ ರಕ್ತಗಾಯ, ಮೈ ಕೈಗೆ ಒಳನೋವು ಉಂಟಾಗಿದ್ದು  ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಮಹೇಶ ಆಸ್ಪತ್ರೆಗೆ ಬಂದಾಗ ಪರೀಕ್ಷಿಸಿದ ವೈದ್ಯರು ಪಿರ್ಯಾದುದಾರನ್ನು ಒಳರೋಗಿಯಾಗಿ ದಾಖಲಿಸಿಕೊಂಡು, ಪುರುಷೋತ್ತಮನನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಕಳುಹಿಸಿರುತ್ತಾರೆ. ಪಿರ್ಯಾದುದಾರರ ಆರೋಪಿಗಳ ಜೊತೆಯಲ್ಲಿ ವಾಸವಾಗಿರುವ ತನ್ನ ತಾಯಿ ಮನೆಗೆ ಬರುವುದಕ್ಕೆ ಆಕ್ಷೇಪಿಸಿ ಜಗಳ ಮಾಡುತ್ತಿದ್ದು ಪುರುಷೋತ್ತಮನು ಪಿರ್ಯಾದುದಾರರಿಗೆ ಬೆಂಬಲ ನೀಡುತ್ತಿದ್ದಾನೆ ಎನ್ನುವ ಕಾರಣಕ್ಕೆ ಆರೋಪಿತರು ಈ ಕೃತ್ಯವೆಸಗಿರುವುದಾಗಿದೆ ಎಂಬುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 99/2021 ಕಲಂ 504,323,324,326 r/w 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಬ್ರಹ್ಮಾವರ : ಬ್ರಹ್ಮಾವರ ತಾಲೂಕು, ಚೇರ್ಕಾಡಿ ಗ್ರಾಮದ ಬಾಯರ್ ಬೆಟ್ಟು, ಹಲಗೆಗುಂಡಿ ಎಂಬಲ್ಲಿ ವಾಸವಾಗಿರುವ ಪಿರ್ಯಾದಿ ಜಯಂತ ನಾಯ್ಕ, (46), ತಂದೆ: ದಿ. ತಮ್ಮಯ್ಯ ನಾಯ್ಕ, ವಾಸ: ಬಾಯರ್ ಬೆಟ್ಟು ಹಲಗೆಗುಂಡಿ, ಚೇರ್ಕಾಡಿ ಗ್ರಾಮ, ಬ್ರಹ್ಮಾವರ ತಾಲೂಕು ಇವರ ತಾಯಿಯಾದ ಅಪ್ಪಿ ಬಾಯಿ ಅವರಿಗೆ ಒಟ್ಟು 6 ಜನ ಮಕ್ಕಳಿದ್ದು, ಅವರ ಆಸ್ಥಿಯನ್ನು ಎಲ್ಲಾರಿಗೂ ಪಾಲು ಮಾಡಿ ಅದರಲ್ಲಿ ಒಂದು ಪಾಲನ್ನು ಹಾಗೂ ಮನೆಯನ್ನು ಅಪ್ಪಿಬಾಯಿರವರು ಇಟ್ಟುಕೊಂಡಿದ್ದು, ಸದ್ರಿ ಮನೆಯಲ್ಲಿ ಪಿರ್ಯಾದಿದಾರರಾದ ಜಯಂತ ನಾಯ್ಕ ಎಂಬವರು ತನ್ನ ತಾಯಿ ಅಪ್ಪಿಬಾಯಿ, ಹೆಂಡತಿ ಶಕುಂತಳ, ಮಗಳು ಲಾವಣ್ಯ ರೊಂದಿಗೆ ವಾಸವಾಗಿರುತ್ತಾರೆ. ಪಿರ್ಯಾದಿದಾರರ ಸಹೋದರರಾದ 1ನೇ ಆರೋಪಿ ದೇವು ನಾಯ್ಕ ತಂದೆ: ದಿ. ತಮ್ಮಯ್ಯ ನಾಯ್ಕ, ವಾಸ: ಬಾಯರ್ ಬೆಟ್ಟು ಚೇರ್ಕಾಡಿ ಗ್ರಾಮ, ಬ್ರಹ್ಮಾವರ ತಾಲೂಕು ಹಾಗೂ 2 ನೇ ಆರೋಪಿಯಾದ ಪುರುಷೋತ್ತಮ ತಂದೆ: ದಿ. ತಮ್ಮಯ್ಯ ನಾಯ್ಕ, ವಾಸ: ಬಾಯರ್ ಬೆಟ್ಟು ಚೇರ್ಕಾಡಿ ಗ್ರಾಮ, ಬ್ರಹ್ಮಾವರ ತಾಲೂಕುರವರು ತಾಯಿಯ ಮನೆಯ ಹತ್ತಿರದಲ್ಲಿಯೇ ಅವರಿಗೆ ಬಂದ ಜಾಗದಲ್ಲಿ ಮನೆಗಳನ್ನು ಕಟ್ಟಿಕೊಂಡಿರುತ್ತಾರೆ. ಅವರಿಬ್ಬರಿಗೂ ಪಿರ್ಯಾದಿದಾರರು ತಾಯಿಯ ಮನೆಯಲ್ಲಿ ಇರುವುದು ಇಷ್ಷ ಇರುವುದಿಲ್ಲ. ಇದೇ ವಿಚಾರದಲ್ಲಿ ಆರೋಪಿಗಳಿಗೂ ಹಾಗೂ ಪಿರ್ಯಾದಿದಾರರ ಮಧ್ಯೆ ಆಗಾಗ ಜಗಳ ಆಗುತ್ತಿರುವುದಾಗಿದೆ. ಇದೇ ವಿಚಾರದಲ್ಲಿ  ದಿನಾಂಕ: 27.05.2021 ರಂದು ರಾತ್ರಿ ಸುಮಾರು 8:30 ಗಂಟೆಗೆ ಪಿರ್ಯಾದಿದಾರರು ಹೆಂಡತಿ, ಮಗಳು ಹಾಗೂ ತಾಯಿಯೊಂದಿಗೆ ಮನೆಯಲ್ಲಿ ಇರುವಾಗ 1ನೇ ಆರೋಪಿ ದೇವುನಾಯ್ಕ ಮನೆಗೆ ಬಂದು ಪಿರ್ಯಾದಿದಾರರಿಗೂ ಹಾಗೂ ಅವರ ಹೆಂಡತಿಗೆ ಬೈಯಲು ಶುರು ಮಾಡಿದ್ದು, ಆಗ ಪಿರ್ಯಾದಿದಾರರು ಹಾಗೂ ಅವರ ಹೆಂಡತಿ ಆರೋಪಿಗೆ ನೀನು ಯಾಕೆ ಬೈಯುತ್ತೀ, ನಿನ್ನ ಮನೆಗೆ ಹೋಗು ಎಂದು ಹೇಳಿ, ಫಿರ್ಯಾದಿದಾರರು ಅಂಗಳಕ್ಕೆ ಹೋಗಿದ್ದು, ಆಗ ಆರೋಪಿಯು ಅಂಗಳಕ್ಕೆ ಬಂದು ಅಲ್ಲಿಯೇ ಇದ್ದ  ರೀಪಿನ ತುಂಡಿನಿಂದ ಫಿರ್ಯಾದಿದಾರ ತಲೆಗೆ, ಬೆನ್ನಿಗೆ, ಕಾಲಿಗೆ, ಕೈಗೆ ಹೊಡೆದಿರುತ್ತಾನೆ. ಆಗ ಪಿರ್ಯಾದಿದಾರರ ಹೆಂಡತಿ ಶಕುಂತಳ ರವರು ಅಡ್ಡ ಬಂದಿದ್ದು, ಅವರಿಗೂ 1ನೇ ಆರೋಪಿಯು ರೀಪಿನ ತುಂಡಿನಿಂದ ಹೊಡೆದು, ಪಿರ್ಯಾದಿದಾರರನ್ನು ದೂಡಿ ಹಾಕಿರುತ್ತಾನೆ. ಪಿರ್ಯಾದಿದಾರರು ಕೆಳಗೆ ಬಿದ್ದಾಗ ಆರೋಪಿಯು ಒಂದು ಹಂಚಿನ ತುಂಡನ್ನು ತೆಗೆದು ಪಿರ್ಯಾದಿದಾರರ ಮೂಗಿನ ಬಳಿ ಹೊಡೆದಿರುತ್ತಾನೆ. ಆ ಸಮಯ 2ನೇ ಆರೋಪಿ ಪುರುಷೋತ್ತಮನು ಅಲ್ಲಿಗೇ ಬಂದು 1ನೇ ಆರೋಪಿಯು ಹೊಡೆದು ಬಿಸಾಡಿದ ರೀಪಿನ ತುಂಡನ್ನು ಹೆಕ್ಕಿ ಪಿರ್ಯಾದಿದಾರರ ಬೆನ್ನಿಗೆ, ತಲೆಗೆ, ಕಾಲಿಗೆ ಹೊಡೆದಿರುತ್ತಾನೆ. ಅಲ್ಲದೇ ಆರೋಪಿಗಳು ಪಿರ್ಯಾದಿದಾರರಿಗೆ ತಾಯಿಯ ಮನೆಯಿಂದ ಹೋಗದಿದ್ದರೇ ಕೊಂದು ಹಾಕುತ್ತೇವೆ ಎಂದು ಬೆದರಿಕೆ ಹಾಕಿರುವುದಾಗಿದೆ. ಈ ಹಲ್ಲೆಯಿಂದ ಪಿರ್ಯಾದಿದಾರರ ತಲೆಗೆ ಹಾಗೂ ಮೂಗಿನ ಬಳಿ ತೀವ್ರ ರಕ್ತಗಾಯ ಹಾಗೂ ಬೆನ್ನಿಗೆ ಕಾಲುಗಳಿಗೆ, ಕೈಗಳಿಗೆ ಒಳ ನೋವು ಉಂಟಾಗಿರುತ್ತದೆ. ಅಲ್ಲದೇ ಅವರ ಹೆಂಡತಿ ಶಕುಂತಳ ರವರ ಎಡಕಾಲು ಮತ್ತು ಬಲ ಕೈಗೆ ಒಳನೋವು ಉಂಟಾಗಿರುತ್ತದೆ.  ಪಿರ್ಯಾದಿದಾರರು ತಾಯಿಯ ಮನೆಯಲ್ಲಿ ಇರುವ ಬಗ್ಗೆ ದ್ವೇಷ ದಿಂದ  ಆರೋಪಿಗಳು ಸದ್ರಿ ಹಲ್ಲೆ ಮಾಡಿರುವುದಾಗಿದೆ ಎಂಬುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 98/2021 ಕಲಂ 504,324,326,354,506, r/w 34  ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತರ ಪ್ರಕರಣಗಳು

  • ಬ್ರಹ್ಮಾವರ : ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 20/05/2021 ರಿಂದ ದಿನಾಂಕ 07/06/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಫ್ಯೂ ಜ್ಯಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ನೀಡಿದ್ದು, ಈ ಬಗ್ಗೆ ಪಿರ್ಯಾದಿ ಗುರುನಾಥ ಬಿ. ಹಾದಿಮನಿ, ಪಿ.ಎಸ್.ಐ. ಬ್ರಹ್ಮಾವರ ಪೊಲೀಸ್ ಠಾಣೆ ಇವರು ದಿನಾಂಕ 27/05/2021 ರಂದು ಸಿಬ್ಬಂದಿಯವರೊಂದಿಗೆ ಇಲಾಖಾ ವಾಹನದಲ್ಲಿ ಚೇರ್ಕಾಡಿ ಗ್ರಾಮದ ಎಳ್ಳಂಪಳ್ಳಿ ಎಂಬಲ್ಲಿ ಎಳ್ಳಂಪಳ್ಳಿ – ನೀಲಾವರ ರಸ್ತೆಯಲ್ಲಿ ಅನಗತ್ಯವಾಗಿ ಜನರ ಮತ್ತು ವಾಹನಗಳ ಓಡಾಟವನ್ನು ತಪಾಸಣೆ ಮಾಡುತ್ತಿರುವಾಗ ಸಮಯ ಸಂಜೆ 6.30 ಗಂಟೆಗೆ ಎಳ್ಳಂಪಳ್ಳಿ ಕಡೆಯಿಂದ ನೀಲಾವರ ಕಡೆಗೆ ಆರೋಪಿ ಸುರೇಶ್ ನಾಯ್ಕ್ ಎಂಬವರು KA20EM5588ನೇ ನಂಬ್ರದ ಮೋಟಾರ್ ಸೈಕಲನ್ನು ಹೆಲ್ಮೆಟ್ ಧರಿಸದೇ ಇರುವ ಬಗ್ಗೆ ಮತ್ತು ಎಲ್ಲಿಗೆ ಹೋಗುತ್ತಿರುವುದಾಗಿ ಕೇಳಿದಾಗ ಯಾವುದೇ ಉತ್ತರವನ್ನು ನೀಡದೇ ಒಮ್ಮೆಲೇ ಮೋಟಾರ್ ಸೈಕಲನ್ನು ಚಲಾಯಿಸಿಕೊಂಡು ನೀಲಾವರ ಕಡೆಗೆ ಹೋಗಿರುತ್ತಾನೆ. ಆರೋಪಿಯು ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಹೆಲ್ಮೆಟ್ ಧರಿಸದೇ ಅನಗತ್ಯವಾಗಿ ಮೋಟಾರ್ ಸೈಕಲ್‌ನಲ್ಲಿ ತಿರುಗಾಡಿ ಕೋವಿಡ್‌ 19 ನಿಯಮ ಉಲ್ಲಂಘಿಸಿದ್ದು, ಈ ಬಗ್ಗೆ ನೀಡಿದ ವರದಿಯಂತೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 97/2021 ಕಲಂ 269 ಐಪಿಸಿ  & 194C, 119 177 ಐಎಮ್‌ವಿ ಆ್ಯಕ್ಟ್ ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಮಣಿಪಾಲ : ದಿನಾಂಕ: 28/05/2021 ರಂದು ಕರೋನಾ ವೈರಸ್ ಕಾಯಿಲೆ ಸೊಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅನಾವಶ್ಯಕವಾಗಿ ಸಂಚರಿಸುವವರ ವಿರುದ್ದ  ಕ್ರಮ ಕೈಗೊಳ್ಳುವ ಬಗ್ಗೆ ಮಣಿಪಾಲ ಠಾಣಾ ಪಿ.ಎಸ್.ಐ ರಾಜಶೇಖರ್ ವಂದಲಿರವರು, ಎ ಎಸ್ ಐ ಶೈಲೇಶ್ ಕುಮಾರ್, ಹೆಚ್‌ಸಿ 2017 ಸಂತೋಷ ಕುಂದರ್ ಮತ್ತು ಪಿ.ಸಿ 2588 ಸಂತೋಷರವರು ಮಣಿಪಾಲಸಿಂಡಿಕೇಟ್ ಸರ್ಕಲ್ ಬಳಿಯ ಚಕ್ ಪೋಸ್ಟ್ ಮಣಿಪಾಲ ಬಳಿ ಹಾದು ಹೋಗಿರುವ ರಾ, ಹೆ 169(A) ರಸ್ತೆ ಬಳಿಯಲ್ಲಿ ಕರ್ತವ್ಯದಲ್ಲಿದ್ದಾಗ ಬೆಳಿಗ್ಗೆ 11:30 ಗಂಟೆಯಿಂದ 12:15 ಗಂಟೆಯ ಮಧ್ಯಾವಧಿಯಲ್ಲಿ ಆಪಾದಿತರಾದ ೧) ಪ್ರಕಾಶ್ ಸಿ ಸುವರ್ಣ, ಪ್ರಾಯ: 45 ವರ್ಷ, ತಂದೆ: ಚಂದು ಸುವರ್ಣ, ವಿಳಾಸ:ಅಂಬಾಗಿಲು ವಾಸುಕಿ ನಗರ, ಉಡುಪಿ  2) ರಾಜೇಶ್ ಶೆಟ್ಟಿ ಪ್ರಾಯ: 29 ವರ್ಷ, ತಂದೆ: ಚಂದ್ರಹಾಸ್ ಶೆಟ್ಟಿ,ವಿಳಾಸ: ಆರ್.ಕೆ ನಗರ , ಬಜಗೋಳಿ, ದ.ಕ ಜಿಲ್ಲೆ, 3) ಹಸನ್, ಪ್ರಾಯ: 45 ವರ್ಷ, ತಂದೆ: ಅಬೂಬಕ್ಕರ್, ವಿಳಾಸ : ಕೊಂಬಿಗುಡ್ಡೆ, ಮಲ್ಲಾರ್ ಗ್ರಾಮ, ಕಾಪು ಉಡುಪಿ ಜಿಲ್ಲೆ, 4) ಮಹೇಶ್ ಪ್ರಾಯ: 39 ವರ್ಷ, ತಂದೆ: ಲೋಕಯ್ಯ  ಸಾಲಿಯಾನ್, ವಿಳಾಸ: ಪ್ಲಾಟ್ ನಂಬರ್: 104, ಮಣಿಪಾಲ ಪೆವಿಲಿಯನ್  ವಿ.ಪಿ ನಗರ, ಉಡುಪಿ, 5) ಸೌಜನ್ ಶೆಟ್ಟಿ, ಪ್ರಾಯ: 23 ವರ್ಷ, ತಂದೆ: ಸುಧಾಕರ್ ಶೆಟ್ಟಿ, ವಿಳಾಸ: ಮಲ್ಲಾರು, ಕಾಪು ಉಡುಪಿ ಜಿಲ್ಲೆ, 6) ಅಶ್ವಿನ್, ಪ್ರಾಯ: 35 ವರ್ಷ ತಂದೆ: ಮೋಹನ್ ಜತ್ತನ್ನ, ವಿಳಾಸ: ಸಾಯಿಬಾಬಾ ಮಂದಿರಬಳಿ, ಕೊರಂಗ್ರಪಾಡಿ, ಉಡುಪಿ ಮತ್ತು 7) ಸುರೇಶ್ ಕುಮಾರ್ ಪ್ರಾಯ: 35 ವರ್ಷ,ತಂದೆ: ಎ.ಪೆರಿಸ್ವಾಮಿ, ವಿಳಾಸ: 80 ಬಡಗುಬೆಟ್ಟು ಗ್ರಾಮ, ಉಡುಪಿ ತಾಲೂಕು ಎಂಬುವರು ತಮ್ಮ ಕಾರುಗಳಲ್ಲಿ ಅನಾವಶ್ಯಕವಾಗಿ ಸಂಚರಿಸುತ್ತಿದ್ದು , ಸದರಿ ಆರೋಪಿತರು ಕೋವಿಡ್ ಸೊಂಕು 2ನೇ ಅಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಲಾಕ್ ಡೌನ್ ಇದ್ದು ಉಡುಪಿಯ ಮಾನ್ಯ ಜಿಲ್ಲಾಧಿಕಾರಿಗಳು ಅನಗತ್ಯ ಸಂಚಾರ ನಿರ್ಭಂಧಿಸಿ ಆದೇಶವನ್ನು ಹೊರಡಿಸಿರುವ ವಿಚಾರವನ್ನು ತಿಳಿದಿದ್ದರೂ ಕೂಡಾ ಯಾವುದೇ ಸಕಾರಣವಿಲ್ಲದೇ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೊಂಕನ್ನು ಹರಡುವ ಸಂಭವವಿರುವ ಬಗ್ಗೆ ನಿರ್ಲಕ್ಷ್ಯ ವಹಿಸಿ ತಿರುಗಾಡುತ್ತಿದ್ದರಿಂದ ಸದರಿ ಆರೋಪಿಗಳನ್ನು ಹಾಗೂ ಆರೋಪಿಗಳು ಸವಾರಿ ಮಾಡುತ್ತಿದ್ದ ಒಟ್ಟು 7 ಕಾರುಗಳನ್ನು ವಶಕ್ಕೆ ಪಡೆಯಲಾಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 72/2021 ಕಲಂ 269 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಮಣಿಪಾಲ: ದಿನಾಂಕ 28/05/2021ರಂದು ಕರೋನಾ ವೈರಸ್ ಕಾಯಿಲೆ ಸೊಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅನಾವಶ್ಯಕವಾಗಿ ಸಂಚರಿಸುವವರ ವಿರುದ್ದ ಕ್ರಮಕೈಗೊಳ್ಳುವ ಬಗ್ಗೆ ಮಣಿಪಾಲ ಠಾಣಾ ಪಿ.ಎಸ್.ಐ ಸುಧಾಕರ ತೋನ್ಸೆರವರು, ಎಎಸ್ಐ ಶೈಲೇಶ್ ಹೆಚ್ಸಿ 2017 ಸಂತೋಷಕುಂದರ್, ಮತ್ತು ಪಿ.ಸಿ 2588 ಸಂತೋಷರವರು ಮಣಿಪಾಲ ಸಿಂಡಿಕೇಟ್ ಸರ್ಕಲ್ ಬಳಿಯ ಚಕ್  ಪೋಸ್ಟ್ ಮಣಿಪಾಲ ಬಳಿ ಹಾದು ಹೋಗಿರುವ ರಾ, ಹೆ 169(A)  ರಸ್ತೆ ಬಳಿಯಲ್ಲಿ ಕರ್ತವ್ಯದಲ್ಲಿದ್ದಾಗ ಬೆಳಿಗ್ಗೆ 13:00 ಗಂಟೆಯಿಂದ 13:30 ಗಂಟೆಯ ಮಧ್ಯಾವಧಿಯಲ್ಲಿ ಆಪಾದಿತರಾದ 1) ವಿಜಯಶೆಟ್ಟಿ, ಪ್ರಾಯ: 30 ವರ್ಷ, ತಂದೆ: ಮಂಜುನಾಥಶೆಟ್ಟಿ, ವಿಳಾಸ:ಬೆಳ್ಳಾಡಿ, ಮೂಡಾಯಿನಮನೆ, ಸೇನಾಪುರಗ್ರಾಮ, ಕುಂದಾಪುರ ತಾಲೂಕು, 2) ಸುಕಾಂತ್, ಪ್ರಾಯ: 24 ವರ್ಷ ,ತಂದೆ: ಶಿವಾನಂದಆರ್. ಕೋಟ್ಯಾನ್, ವಿಳಾಸ: ಶ್ರೀದೇವಿಕೃಪಾ ನಿಲಯ, ಬೈಕಾಡಿ, ಭದ್ರಗಿರಿ, ಹಾರಾಡಿಗ್ರಾಮ, ಬಹ್ಮಾವರ ತಾಲೂಕು, 3) ಎ ಕಿಂಗ್ಲೆ ದೀಪಕ್ (24) ತಂದೆ: ಎಂಬ್ರೋಸ್, 30-25ಎ, ಮಹೇಂದ್ರಪುರಿ, ಸೇಲಂ. ತಮಿಳುನಾಡು ವಾಸ: ಚರಕ ಹಾಸ್ಟೆಲ್ ಮಣಿಪಾಲ 4) ಗಣೇಶ್ ಜಿ.ಎಸ್.  ಪ್ರಾಯ: 22 ವರ್ಷ, ತಂದೆ: ಶಶಿಧರ ಜಿ.ಎಸ್.  ವಿಳಾಸ : ಜನತಾ ಕಾಲೋನಿ, ಕೆರೆಕೊಂಡಾಪುರ, ರಾಮಪುರ, ಮೊಳಕಾಲ್ಮೂರು ತಾಲೂಕು, ಚಿತ್ರದುರ್ಗ ಜಿಲ್ಲೆ. ವಾಸ: ಪ್ರಗತಿ ನಗರ, ಅಲೆವೂರು ಗ್ರಾಮ ಉಡುಪಿ ಮತ್ತು 5)ಮೊಹಮ್ಮದ್ ಇಸ್ಮಾಯಿಲ್, ತಂದೆ: ಎ. ಆಹಮ್ಮದ್, ವಿಳಾಸ: ಮನೆ ನಂ: 1-153-2 ಮುಖ್ಯರಸ್ತೆ, ಆತ್ರಾಡಿ ಗ್ರಾಮ ಉಡುಪಿ ತಾಲೂಕು ಎಂಬುವರು ತಮ್ಮ ಮೋಟಾರ್‌ ಸೈಕಲ್‌ಗಳಲ್ಲಿ ಅನಾವಶ್ಯಕವಾಗಿ ಸಂಚರಿಸುತ್ತಿದ್ದು, ಸದರಿ ಆರೋಪಿತರು ಕೋವಿಡ್ ಸೋಂಕು 2ನೇ ಅಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಲಾಕ್ಡೌನ್ ಇದ್ದು ಉಡುಪಿಯ ಮಾನ್ಯ ಜಿಲ್ಲಾಧಿಕಾರಿಗಳು ಅನಗತ್ಯ ಸಂಚಾರ ನಿರ್ಭಂಧಿಸಿ ಆದೇಶವನ್ನು ಹೊರಡಿಸಿರುವ ವಿಚಾರವನ್ನು ತಿಳಿದಿದ್ದರೂ ಕೂಡಾ ಯಾವುದೇ ಸಕಾರಣವಿಲ್ಲದೇ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೊಂಕನ್ನು ಹರಡುವ ಸಂಭವವಿರುವ ಬಗ್ಗೆ ನಿರ್ಲಕ್ಷ್ಯ ವಹಿಸಿ ತಿರುಗಾಡುತ್ತಿದ್ದರಿಂದ ಸದರಿ ಆರೋಪಿಗಳನ್ನು ಹಾಗೂ ಆರೋಪಿಗಳು ಸವಾರಿ ಮಾಡುತ್ತಿದ್ದ ಒಟ್ಟು 5 ಮೋಟಾರ್‌ ಸೈಕಲ್‌‌ಗಳನ್ನು ವಶಕ್ಕೆ ಪಡೆಯಲಾಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 73/2021 ಕಲಂ 269 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಪಘಾತ ಪ್ರಕರಣ

  • ಕೊಲ್ಲೂರು: ಪಿರ್ಯಾದಿ ಆಶ್ರಫ್ ( ಪ್ರಾಯ:30 ವರ್ಷ),  ತಂದೆ:ಹುಸೇನ್ ಸಾಬ್, ವಾಸ:ಮನೆ ನಂಬ್ರ:3/19 ವಂಡ್ಸೆ ಮಸೀದಿ ರಸ್ತೆ, ವಂಡ್ಸೆ ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ: 28-05--2021 ರಂದು ಬೆಳಿಗ್ಗೆ 10:00 ಗಂಟೆಗೆ ವಂಡ್ಸೆ ಗ್ರಾಮದ ತನ್ನ ಮನೆಯ ಗೇಟಿನ ಬಳಿ ನಿಂತುಕೊಂಡಿರುವ ಸಮಯ ವಂಡ್ಸೆ- ಬೆಳ್ಳಾಲ ರಸ್ತೆಯಲ್ಲಿ ವಂಡ್ಸೆ ಕಡೆಯಿಂದ ಬೆಳ್ಳಾಲ ಕಡೆಗೆ ಆರೋಪಿ ಟಿಪ್ಪರ್ ಚಾಲಕ ರತ್ನಾಕರ ನು ತನ್ನ ಬಾಬ್ತು KA 20 C 7422 ನೇ ಟಿಪ್ಪರ್ ಲಾರಿ ಯನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಮನೆಯ ಗೇಟಿನ ಎದುರಿನ ತಿರುವು ರಸ್ತೆಯಲ್ಲಿ ತೀರಾ ಬಲ ಬದಿಗೆ ಚಲಾಯಿಸಿ ಬೆಳ್ಳಾಲ ಕಡೆಯಿಂದ ವಂಡ್ಸೆ ಕಡೆಗೆ ರಾಜು ಮೊಗವೀರ ರವರು ಚಲಾಯಿಸಿಕೊಂಡು ಬರುತ್ತಿದ್ದ  KA 20 L 8430 ನೇ ಸ್ಕೂಟರ್ ಗೆ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ ಸವಾರ ಸ್ಕೂಟರ್ ಸಮೇತ ರಸ್ತೆಗೆಬಿದ್ದು ಟಿಪ್ಪರಿನ ಎದುರಿನ ಚಕ್ರ ರಾಜು ಮೊಗವೀರನ ತಲೆಯ ಮೇಲೆ ಹರಿದ ಪರಿಣಾಮ ತಲೆಗೆ ತೀವ್ರ ಸ್ವರೂಪದ ಗಾಯಗೊಂಡವರನ್ನು  ಚಿಕಿತ್ಸೆ ಬಗ್ಗೆ ಅಂಬುಲೆನ್ಸ್ ವಾಹನದಲ್ಲಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದು ಕೊಂಡು ಹೋಗಿದ್ದು, ಅಲ್ಲಿ ಪರೀಕ್ಷೀಸಿದ ವೈದ್ಯರು ಸ್ಕೂಟರ ಸವಾರ ರಾಜು ಮೊಗವೀರ ಸ್ಥಳದಲ್ಲೇ ಮೃತ ಪಟ್ಟಿರುವ ಬಗ್ಗೆ ದೃಡೀಕರಿಸಿರುತ್ತಾರೆ. ಈ ಘಟನೆಗೆ KA 20 C 7422 ನೇ ಟಿಪ್ಪರ್ ಲಾರಿ ಚಾಲಕ ರತ್ನಾಕರ ನ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿದ್ದು ಆತನ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕಾಗಿ ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 19/2021  ಕಲಂ: 279, 304 A IPC  ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ

ಇತ್ತೀಚಿನ ನವೀಕರಣ​ : 28-05-2021 06:47 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080