ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 27/04/2023 ರಂದು ಪಿರ್ಯಾದಿದಾರರಾದ ರಾಜು ಪೂಜಾರಿ  (42), ತಂದೆ:ಅಣ್ಣಪ್ಪ ಪೂಜಾರಿ,ವಾಸ:ಪಡುಮನೆ ಬಡಾಹಿತ್ಲು ಕುಮ್ರಗೊಡು ಗ್ರಾಮ, ಬ್ರಹ್ಮಾವರ ತಾಲೂಕು ಇವರು ACE ವಾಹನದಲ್ಲಿ ಸಾಸ್ತಾನದ ಬಾಡಿಗೆ ಮುಗಿಸಿಕೊಂಡು ಬ್ರಹ್ಮಾವರದ ಕಡೆಗೆ ಬರುತ್ತಿರುವಾಗ ಕುಮ್ರಗೊಡು ಗ್ರಾಮದ NH 66 ರಸ್ತೆಯಲ್ಲಿ ಯು ಟರ್ನ್‌ನಿಂದ  ಸ್ವಲ್ಪ ಹಿಂದುಗಡೆ ಪಿರ್ಯಾದಿದಾರರ ಮುಂಬಾಗದಲ್ಲಿ ಬ್ರಹ್ಮಾವರ ಕಡೆಗೆ KA-20-EU-8848 ದ್ವಿಚಕ್ರ ಸ್ಕೂಟಿ ಸವಾರ ಕೇಶವರವರು ಶಿವ ಮರಕಾಲರವರನ್ನು ಸಹ ಸವಾರರಾಗಿ ಕುಳ್ಳರಿಸಿಕೊಡು ಹೋಗುತ್ತಿರುವಾಗ ಬ್ರಹ್ಮಾವರ ಕಡೆಯಿಂದ ಕುಂದಾಪುರ ಕಡೆ ಹೋಗುವ ರಸ್ತೆಯಿಂದ  KA-20-X-5721 ಪಲ್ಸ್‌ರ್‌ ಮೊಟರ್‌ ಸೈಕಲ್‌ ಸವಾರ ಕುಮ್ರಗೊಡು ಯು ಟರ್ನ್‌ ನಲ್ಲಿ ಯಾವುದೇ ಸೂಚನೆ ನೀಡದೇ, ಇಂಡಿಕೇಟರ್‌ ಹಾಕದೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಬ್ರಹ್ಮಾವರ ಕಡೆಗೆ ಯು ಟರ್ನ್‌ ಮಾಡಿದ ಪರಿಣಾಮ ಪಿರ್ಯಾದಿದಾರರ ಮುಂದಿನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಎರಡು ವಾಹನ ಸವಾರರು ವಾಹನ  ಸಮೇತ ರಸ್ತೆಗೆ ಬಿದ್ದಿದ್ದು ಆಗ ಸಮಯ ರಾತ್ರಿ 07:30 ಗಂಟೆ ಆಗಿರುತ್ತದೆ. ಕೂಡಲೆ ಸ್ಥಳಕ್ಕೆ ಪಿರ್ಯಾದಿದಾರರು ಹಾಗೂ ಇತರ ಸಾರ್ವಜನಿಕರು ಸ್ಥಳಕ್ಕೆ ಹೋಗಿ ನೋಡಿದಾಗ ಸ್ಕೂಟಿ ಸವಾರ ಪಿರ್ಯಾದಿದಾರರ ಪರಿಚಯದ ಕೇಶವರಾಗಿದ್ದು ಅವರ ತಲೆಗೆ ತೀವ್ರ ಒಳ ಜಖಂ ಕಾಲಿಗೆ ತರಿಚಿದ ಗಾಯ ವಾಗಿರುತ್ತದೆ. ಸ್ಕೂಟಿಯಲ್ಲಿದ್ದ ಸಹ ಸವಾರ ಶಿವ ಮರಕಾಲರವರಿಗೆ ತಲೆಗೆ ಹಾಗೂ ಬಲಕಾಲಿಗೆ ತೀವ್ರ ತರಹದ  ರಕ್ತ ಗಾಯವಾಗಿರುತ್ತದೆ. ಹಾಗೂ ಮೊಟಾರ್‌ ಸೈಕಲ್‌ ಸವಾರ ಪರಿಚಯದ ಸುಜೀತ್‌ ಆಗಿದ್ದು, ಆತನಿಗೆ ತಲೆಗೆ ಓಳ ಜಖಂ ಎಡ ಭುಜಕ್ಕೆ ಎಡಕಾಲಿಗೆ ತೀವ್ರ ರಕ್ತ ಗಾಯವಾಗಿರುತ್ತದೆ. ಕೂಡಲೆ ಇವರುಗಳನ್ನು ಆಂಬುಲೆನ್ಸ್‌ ನಲ್ಲಿ ಹತ್ತಿರದ ಮಹೇಶ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಇವರುಗಳನ್ನು ಪರೀಕ್ಷೀಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿಗೆ ಹೋಗುವಂತೆ ತಿಳಿಸಿದ ಮೇರೆಗೆ  K.M.C ಮಣಿಪಾಲಗೆ ಈ ಮೂರು ಜನ ಗಾಯಾಳುಗಳನ್ನು ಕರೆದುಕೊಂಡು ಹೋಗಿ ಸೇರಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 88/2023 : ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಬ್ರಹ್ಮಾವರ: ದಿನಾಂಕ 26/04/2023 ರಂದು ಪಿರ್ಯಾದಿದಾರರಾದ ಆಶ್ವಿನಿ ಶೆಟ್ಟಿ (35), ತಂದೆ:ಭುಜಂಗ ಶೆಟ್ಟಿ, ವಾಸ: ಮನೆ ನಂ 202, ಪ್ರಶಾಂತಿ ಎನ್‌ ಕ್ಲೇವ್‌, ಧರ್ಮಾವರಂ ಆಡಿಟೋರಿಯಮ್‌, ವಾರಂಬಳ್ಳಿ ಗ್ರಾಮ, ಬ್ರಹ್ಮಾವರ ತಾಲೂಕು ಇವರ ತಂದೆ  ಭುಜಂಗ ಶೆಟ್ಟಿ ಎಂಬುವವರು ಅವರ MH-05-DM-2028 ನೇ ಟವಿಎಸ್‌ ಜ್ಯೂಪಿಟರ್‌ ಸ್ಕೂಟರ್‌ನಲ್ಲಿ ಬ್ರಹ್ಮಾವರದಿಂದ ಕಾಳಾವರಕ್ಕೆ ಬ್ರಹ್ಮಾವರ – ಸಾಯಿಬ್ರಕಟ್ಟೆ  ಮಾರ್ಗವಾಗಿ ರಸ್ತೆಯ ಎಡಬದಿಯಲ್ಲಿ ನಿಧಾನವಾಗಿ ಸವಾರಿ ಮಾಡಿಕೊಂಡು ಹೋಗುತ್ತಾ  9:30 ಗಂಟೆಗೆ ಸಾಯಿಬರಕಟ್ಟೆ ಬಳಿ ತಲುಪುವಾಗ  ಸಾಯಿಬರ ಕಟ್ಟೆ ಕಡೆಯಿಂದ ಬ್ರಹ್ಮಾವರ ಕಡೆಗೆ ಆರೋಪಿ  ಅವರ KA-20-EX-1876 ನಂಬ್ರದ ಮೋಟಾರ್‌ ಸೈಕಲ್‌ ಅನ್ನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ಭುಜಂಗ ಶೆಟ್ಟಿ ರವರು ಸವಾರಿ ಮಾಡುತ್ತಿದ್ದ ಸ್ಕೂಟರ್‌ ಗೆ ಡಿಕ್ಕಿ ಹೊಡೆದ  ಪರಿಣಾಮ  ಭುಜಂಗ ಶೆಟ್ಟಿ ರವರು ಗಂಭೀರವಾಗಿ ಗಾಯಗೊಂಡು ರಸ್ತೆಗೆ ಬಿದ್ದಿರುತ್ತಾರೆ.  ಅವರನ್ನು ಚಿಕಿತ್ಸೆಯ ಬಗ್ಗೆ ಕೆ.ಎಮ್‌.ಸಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 87/2023 : ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ಪಿರ್ಯಾದಿದಾರರಾದ ಕೃಷ್ಣ ಪೂಜಾರಿ (41), ತಂದೆ: ದಿ.ರಮಾನಂದ ಪೂಜಾರಿ,ವಾಸ: ಮನೆ ನಂಬ್ರ:4-61-ಎಚ್, ಶ್ರೀ ದೇವಿ ಕೃಪಾ,ಹೆಜಮಾಡಿ ಗುಂಡಿ ಗಾಡಿ ಚೌಕ, ಹೆಜಮಾಡಿ ಅಂಚೆ ಮತ್ತು ಗ್ರಾಮ, ಕಾಪು ತಾಲೂಕು ಉಡುಪಿ ಜಿಲ್ಲೆಇವರು ಕಾರು ಚಾಲಕನಾಗಿ ಕೆಲಸಮಾಡಿಕೊಂಡಿದ್ದು, ದಿನಾಂಕ 26/04/2023 ರಂದು ರಾತ್ರಿ 22:00 ಗಂಟೆಗೆ ಅವಿನಾಶ್ ರವರ KA-20-EX-4457 ನೇ ಡಿಯೋ ಸ್ಕೂಟಿಯಲ್ಲಿ ಜಿತೇಂದ್ರ ಶೆಟ್ಟಿ ಎಂಬುವವರ ಮನೆಗೆ ಹೋಗಿ ಪಾರ್ಸೇಲ್ ಊಟವನ್ನುನೀಡಿ ವಾಪಾಸ್ಸು ದಿನಾಂಕ 27/04/2023 ರಂದು 00:15 ಗಂಟೆಗೆ ಅದೇ ಸ್ಕೂಟಿಯಲ್ಲಿ ವಾಪಾಸ್ಸು ಕಾರ್ಕಳ-ಪಡುಬಿದ್ರಿ ರಸ್ತೆಗೆ ಚಲಾಯಿಸಿಕೊಂಡು  ಬಂದು  ಪಡುಬಿದ್ರಿ ಕಡೆಗೆ ತಿರುಗಿಸಲು ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿ-1 ರಲ್ಲಿ ನಿಂತಿರುವಾಗ ಪಡುಬಿದ್ರಿ ಕಡೆಯಿಂದ ಕಾರ್ಕಳ ಕಡೆಗೆ KA-20-MB-9955 ನೇ ಮಾರುತಿ ಸುಜುಕಿ ಕಾರನ್ನು ಅದರ ಚಾಲಕಿ ವಿದ್ಯಾ ಜಿ. ಶೆಟ್ಟಿ ಎಂಬುವವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಸ್ಕೂಟಿ ಸಮೇತ ರಸ್ತೆಗೆ ಬಿದ್ದು,  ಅಪಘಾತದಿಂದ ಪಿರ್ಯಾದಿದಾರರ ತಲೆಗೆ ರಕ್ತ ಗಾಯ, ಬಲಕಾಲಿಗೆ ಮೂಳೆ ಮುರಿತ, ಮೈ-ಕೈಗೆ ಗುದ್ದಿದ ನೋವಾಗಿರುತ್ತದೆ. ಅಪಘಾತದಿಂದ ಎರಡು ವಾಹನಗಳು ಜಖಂಗೊಂಡಿರುತ್ತದೆ. ಗಾಯಗೊಂಡ ಪಿರ್ಯಾದಿದಾರರನ್ನು ಚಿಕಿತ್ಸೆಯ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 55/2023, ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ದಿನೇಶ್ ಪೂಜಾರಿ (45), ತಂದೆ: ಕೊರಗಪ್ಪ ಪೂಜಾರಿ, ವಾಸ: ದುರ್ಗಾ ನಿವಾಸ, ಕಳತ್ರಪಾದೆ, ನಲ್ಲೂರು ಅಂಚೆ ಮತ್ತು ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರ ದೊಡ್ಡಮ್ಮಳ ಮಗಳು ಸುಶೀಲ ಎಂಬುವವರ ಮಗ ರವೀಂದ್ರ ಪೂಜಾರಿ (38) ಇವರು ವಿಪರೀತ ಮದ್ಯಪಾನ ಮಾಡುವ ಅಭ್ಯಾಸ ಉಳ್ಳವನಾಗಿದ್ದು, ದಿನಂಪ್ರತಿ ಬೆಳಗ್ಗೆ 6:30 ಗಂಟೆಗೆ ಮದ್ಯಪಾನ ಮಾಡಲು ಬಜಗೋಳಿಯ ಚಿರಾಗ್ ಬಾರ್ ಕಡೆಗೆ ಹೋಗುತ್ತಿದ್ದು, ಅದರಂತೆ ಈ ದಿನ ದಿನಾಂಕ 27/04/2023 ರಂದು ಕೂಡಾ ಎಂದಿನಂತೆ ಬೆಳಗ್ಗೆ 6:30 ಗಂಟೆಗೆ ಮದ್ಯಪಾನ ಮಾಡಲು ಮನೆಯಿಂದ ಬಜಗೋಳಿ ಕಡೆಗೆ ಹೋದವನು, ಯಾವುದೋ ಕಾರಣದಿಂದ ಚಿರಾಗ್ ಬಾರ್ ಹಿಂಬದಿಯಲ್ಲಿ ಇರುವ 5 ಓಕ್ಲು ಮನೆಯವರಿಗೆ ಸೇರಿದ ಹಾಡಿಗೆ ಹೋದವನ ಮೃತ ದೇಹ ಹಾಡಿಯಲ್ಲಿ ಹಾದು ಹೋಗುವ ಕಾಲು ದಾರಿಯಲ್ಲಿ ಪತ್ತೆಯಾಗಿವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 26/2023 ಕಲಂ: 174 (3) ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಬ್ರಹ್ಮಾವರ: ಫಿರ್ಯಾದಿದಾರರಾದ ಕುಮಾರ್‌ ನಾಯ್ಕ ವಿ (40), ಇವರು F.S.T -2 ಉಪ್ಪೂರು ವಲಯದಲ್ಲಿ 120-ಉಡುಪಿ ವಿಧಾನಸಭಾ ಚುನಾವಣಾ ಕರ್ತವ್ಯದಲ್ಲಿರುವಾಗ ರಾತ್ರಿ ಸಮಯ 08:58 ಗಂಟೆಗೆ ಪಿರ್ಯಾಧಿದಾರರ ಮೊಬೈಲ್ ಗೆ  ಸಮಾಜ ಸೇವಕರೆಂದು ಕರೆಮಾಡಿ ಚೇರ್ಕಾಡಿ ಕ್ರಾಸ್‌ ಬಳಿಯ ಶ್ಯಾಮರಾಯರ ಮನೆಯಲ್ಲಿ ಭೋಜನ ಕೂಟ ನಡೆಯುತ್ತಿರುವುದಾಗಿ ತಿಳಿಸಿದ್ದು, ಪಿರ್ಯಾದಿದಾರರು ಸ್ಥಳಕ್ಕೆ ಹೋಗಿ ನೋಡಿದಾಗ ಸುಮಾರು 40 ರಿಂದ 50 ಸಾರ್ವಜನಿಕರು ಕುರ್ಚಿಯಲ್ಲಿ ಕುಳಿತು ಟೇಬಲ್‌ ನಲ್ಲಿ ಊಟ ಮಾಡುತ್ತಿರುವುದು ಕಂಡುಬಂದಿದ್ದು, ಫಿರ್ಯಾದಿದಾರರನ್ನು ಕಂಡ ಕೂಡಲೇ ಊಟವನ್ನು ಅರ್ಧದಲ್ಲೆ ಬಿಟ್ಟು ಮರೆಯಾಗಿರುತ್ತಾರೆ. ಸ್ಥಳವನ್ನು ಪರೀಶೀಲಿಸಲಾಗಿ 10 ಸ್ಟೀಲ್‌ ಊಟದ ಟೇಬಲ್‌ ,60 ಪ್ಲಾಸ್ಟಿಕ್‌ ಕುರ್ಚಿಗಳು, ಬ್ಲ್ಯಾಕ್‌ ಪೊರ್ಟ್‌ ಎಂದು ಬರೆದಿರುವ 42 ಖಾಲಿ ಬಿಯರ್‌ ಬಾಟಲ್‌, ಬ್ಲ್ಯಾಕ್‌ ಡಿ.ಎಸ್.ಬಿ ಎಂದು ಬರೆದಿರುವ ಖಾಲಿ ಬಾಕ್ಸ್‌ -2, ಬ್ಲ್ಯಾಕ್‌ ಡಿ.ಎಸ್.ಬಿ ಎಂದು ಬರೆದಿರುವ ಖಾಲಿ ಬಾಟಲ್‌-1 1‌ಲೀಟರ್‌ನ 8 ಖಾಲಿ ನೀರಿನ ಬಾಟಲ್‌,ಅರ್ಧ ಲೀಟರ್ ನೀರಿನ ಖಾಲಿ ಬಾಟಲ್-10, ಪ್ಲಾಸ್ಟೀಕ್‌ ತಟ್ಟೆ-24, ಪೇಪರ್‌ ಪ್ಲೇಟ್-8‌, ಪ್ಲಾಸ್ಟೀಕ್‌ ಗ್ಲಾಸ್-8‌, ಇಡ್ಲಿ ತುಂಬಿದ ರಟ್ಟಿನ ಬಾಕ್ಸ್-1, ಅನ್ನ ಇರುವ ಸ್ಟೀಲ್‌ ಪಾತ್ರೆ -1, ಚಿಕನ್‌ ಸಾಂಬಾರು ತುಂಬಿದ ಸ್ಟೀಲ್‌ ಪಾತ್ರೆ-1, ಚಿಕನ್‌ ಸಾರ್‌ ತುಂಬಿದ ಸಣ್ಣ ಪಾತ್ರೆ-1,ಮೊಸರು ತುಂಬಿದ ಸ್ಟೀಲ್‌ ಪಾತ್ರೆ-1 ಇವುಗಳನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ.  ಸ್ಥಳದಲ್ಲಿ ಸಾರ್ವಜನಿಕರು ಯಾವುದೇ ಪರವಾನಗಿ ಇಲ್ಲದೆ ಮಧ್ಯಪಾನ ಮಾಡಿ ಭೋಜನ ಕೂಟವನ್ನು ಮಾಡಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ  89/2023 : ಕಲಂ 171 E ಐಪಿಸಿ ಮತ್ತು ಸೆಕ್ಷನ್ 32(3) ಅಬಕಾರಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಅಜೆಕಾರು: ಪಿರ್ಯಾದಿದಾರರಾದ ಸುದೀಪ್ ಹೆಗ್ಡೆ ಇವರು ಜಿ.ವಿ.ಪಿ ಇಂಪ್ರಾ ಪ್ರಾಜೆಕ್ಟ್ ಕಂಪೆನಿ ಜಾರ್ಕಳ ಮುಂಡ್ಲಿ ಗ್ರಾಮ, ಕಾರ್ಕಳ ತಾಲೂಕು ಇದರ ಮ್ಯಾನೇಜರ್ ಆಗಿದ್ದು, ದಿನಾಂಕ  27/04/2023 ರಂದು 10:15 ಗಂಟೆಗೆ ಆರೋಪಿತರಾದ ಸುಜಿತ್ ಕುಮಾರ್ ಶೆಟ್ಟಿ, ಕಿಶೋರ್, ಸುಭಾಷ್‌ಚಂದ್ರ ಹೆಗ್ಡೆ, ವಿವೇಕಾನಂದ ಶೆಣೈ, ಅಭಿಲಾಷ್, ಲಕ್ಷ್ಮೀನಾರಾಯಣ ಮಲ್ಯ ಹಾಗೂ ಇತರರು ಸೇರಿಕೊಂಡು  ಜಿ.ವಿ.ಪಿ ಇಂಪ್ರಾ ಪ್ರಾಜೆಕ್ಟ್ ಕಂಪೆನಿ ಒಳಗೆ ಏಕಾಏಕಿ ಅಕ್ರಮ ಪ್ರವೇಶಮಾಡಿ ನಂತರ ಕಂಪೆನಿಯ ಸೊತ್ತುಗಳನ್ನು ನಾಶಗೊಳಿಸಿದ್ದು, ಹಾಗೂ ಪಿರ್ಯಾದಿದಾರರಿಗೆ ಮತ್ತು ಕಂಪೆನಿ ಸಿಬ್ಬಂದಿಯವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿದ್ದು ಪಿರ್ಯಾದಿದಾರರ ಕುತ್ತಿಗೆಗೆ ಕೈಹಾಕಿ ದೂಡಿ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿ ಹಲ್ಲೆ ನಡೆಸಿರುವುದಾಗಿ ನೀಡಿದ ದೂರಿನಂತೆ ಅಜೆಕಾರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 11/2023 ಕಲಂ: 143, 147, 447, 323, 504, 506, 427 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 28-04-2023 09:52 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080