ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

ಕೋಟ: ಫಿರ್ಯಾದಿ ರಾಮದಾಸ್ ಇವರು ದಿನಾಂಕ: 22.04.2023 ರಂದು 18:00 ಗಂಟೆಗೆ ನಂ. KA 20 L 9122 ನೇ ಹೀರೋ ಹೊಂಡಾ ಸ್ಪ್ಲೆಂಡರ್‌ ಬೈಕಿನಲ್ಲಿ ರಾ.ಹೆ. 66 ಉಡುಪಿ - ಕುಂದಾಪುರ ಮುಖ್ಯರಸ್ತೆಯ ಪೂರ್ವ ದಿಕ್ಕಿನ ಸರ್ವೀಸ್‌ ರಸ್ತೆಯಲ್ಲಿ ಬಂದು ಅಮೃತ್‌ ಬಾರ್‌ ಪಕ್ಕದ ಕಾಂಕ್ರೀಟು ರಸ್ತೆಯಲ್ಲಿ ಪೂರ್ವ ದಿಕ್ಕಿಗೆ ಹೋಗುತ್ತಿರುವಾಗ, ಪಿರ್ಯಾದಿದಾರರ ಮನೆ ಸಮೀಪ ಪಾರ್ವತಿ ಪೂಜಾರ್ತಿ ರವರ ಮನೆಯ ಎದುರು ಸಾರ್ವಜನಿಕ ರಸ್ತೆಯಲ್ಲಿ ಕ್ರಮದಂತೆ ಎಡಬದಿಯಲ್ಲಿ ಹೋಗುತ್ತಿರುವಾಗ, ಎದುರಿನಿಂದ ಪೂರ್ವದಿಂದ ಪಶ್ಚಿಮದ ಕಡೆಗೆ ಒರ್ವ ನಂ. KA 20 EX 3621 ನೇ ಸ್ಕೂಟಿ ಸವಾರನು ತನ್ನ ಕಿವಿಯಲ್ಲಿ ಮೊಬೈಲ್‌ ಇಟ್ಟು ಮಾತನಾಡುತ್ತಾ ಸ್ಕೂಟಿಯನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ಒಮ್ಮೆಲೆ ಬಲಕ್ಕೆ ಚಲಾಯಿಸಿದ ಪರಿಣಾಮ ಆತನ ಸ್ಕೂಟಿಯು ಪಿರ್ಯಾದಿದಾರರ ಬೈಕಿನ ಬಲಬದಿ ಪೂಟ್‌ ರೆಸ್ಟ್‌ ಗೆ ಢಿಕ್ಕಿ ಹೊಡೆಯಿತು. ಪಿರ್ಯಾದಿದಾರರು ಮತ್ತು ಸ್ಕೂಟಿ ಸವಾರ ಇಬ್ಬರೂ ವಾಹನಗಳ ಸಮೇತ ರಸ್ತೆಗೆ ಬಿದ್ದಿದ್ದು  ಅಪಘಾತದಿಂದ ಪಿರ್ಯಾದಿದಾರರ ಬಲಕಾಲಿನ ಕೊನೆಯ ಎರಡು ಬೆರಳು ತುಂಡಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 71/2023  ಕಲಂ: 279, 338 IPC 230(A) RW 177, 134 (A)&(B) RW 187 IMV ACT ನಂತೆ ಪ್ರಕರಣ ದಾಖಲಾಗಿರುತ್ತದೆ.

 

ಬ್ರಹ್ಮಾವರ: ದಿನಾಂಕ: 28.04.2023 ರಂದು  ಪಿರ್ಯಾದಿ ಸುರೇಂದ್ರ ಇವರು  ಮನೆಯಿಂದ ಸೈಕಲ್ ನಲ್ಲಿ ಹೊರಟು ಬ್ರಹ್ಮಾವರ  - ಸಾಯಿಬರಕಟ್ಟೆ ಮುಖ್ಯ ರಸ್ತೆಯಲ್ಲಿ ಹೋಗುತ್ತಾ ಹೇರಾಡಿ ಗ್ರಾಮದ ಹೇರಾಡಿ ಸತ್ಯ ಶ್ರೀ ಹೋಲೋ ಬ್ಲಾಕ್ ಕಟ್ಟಡದ ಕಡೆಗೆ ಹೋಗಲು ಮುಖ್ಯ ರಸ್ತೆಯ ಎಡ ಭಾಗದಲ್ಲಿ ಅವರ ಸೈಕಲ್ ನೊಂದಿಗೆ ನಿಂತು ರಸ್ತೆಯ ಬಲಭಾಗದಲ್ಲಿ ವಾಹನ ಇದೆಯೇ  ಎಂದು ನೋಡುವಾಗ ಬೆಳಿಗ್ಗೆ ಸುಮಾರು 08.15 ಗಂಟೆಗೆ ಆರೋಪಿ ಹರೀಶ್ ಆಚಾರಿ ರವರು ಅವರ ಬಾಬ್ತು ಕೆಎ 20 ಎಂಸಿ 9024 ನೇ ವಾಗ್ನಾರ್ ಕಾರನ್ನು ಬ್ರಹ್ಮಾವರ ಕಡೆಯಿಂದ ಅತೀ ವೇಗ ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸೈಕಲಿಗೆ ಡಿಕ್ಕಿ ಹೊಡೆದಿದ್ದು , ಪರಿಣಾಮ ಪಿರ್ಯಾದಿದಾರರು ಸೈಕಲ್ ಸಮೇತ ರಸ್ತೆಗೆ ಬಿದ್ದು ಅವರ ಎಡ ಭುಜದ ಬಳಿ ಮೂಳೆ ಮುರಿತ ಉಂಟಾಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 90/2023 : ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಹಲ್ಲೆ ಪ್ರಕರಣ

ಕಾರ್ಕಳ: ದಿನಾಂಕ 28/04/2023 ರಂದು ಬೆಳಿಗ್ಗೆ 08:30 ಗಂಟೆಗೆ ಪಿರ್ಯಾದಿ ವಿಶ್ವನಾಥ ಪೂಜಾರಿ ಇವರು ತನ್ನ ಆಟೋರೀಕ್ಷಾ ನಿಲ್ಲಿಸಿದ ಸ್ಥಳವಾದ  ಕುಕ್ಕಾಬೆ ಎಂಬಲ್ಲಿ ಕಾಲುದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಆಪಾದಿತರಾದ ಕೃಷ್ಣಪ್ಪ ಪೂಜಾರಿ ಮತ್ತು ಅವರ ಮಗ ರಾಜೇಶ್ ಎಂಬವರು ಸಮಾನ ಉದ್ದೇಶದಿಂದ ಪಿರ್ಯಾದುದಾರರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದುದಲ್ಲದೇ ಇಬ್ಬರು ಕೈಯಿಂದ ಹೊಡೆದು ನಂತರ ಆಪಾದಿತ ಕೃಷ್ಣಪ್ಪ ಪೂಜಾರಿಯವರು ಪಿರ್ಯಾದುದಾರರಿಗೆ ಕತ್ತಿಯಿಂದ ಕಡಿಯಲು ಪ್ರಯತ್ನಿಸಿದಾಗ ಕತ್ತಿಯು ಪಿರ್ಯಾದುದಾರರ ಎಡ ಕೈಗೆ ತಾಗಿ ರಕ್ತಗಾಯವಾಗಿದ್ದು ಪಿರ್ಯಾದುದಾರರನ್ನು ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 56/2023 ಕಲಂ 341,324,504,506 ಜೊತೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ

ಉಡುಪಿ: ಪಿರ್ಯಾದಿ ಎಸ್‌. ಕಿಶೋರ್‌ ಆಚಾರ್ಯ ಇವರು ಉಡುಪಿ ಕನಕದಾಸ ರಸ್ತೆಯಲ್ಲಿರುವ ಹರ್ಷಿತಾ ಜುವೆಲ್ಲರಿ ಶಾಪ್‌ ನ್ನು ಹೊಂದಿದ್ದು, ಪಿರ್ಯಾದುದಾರರ ಮಗ ಮತ್ತು ಹೆಂಡತಿ ಅಂಗಡಿಯನ್ನು ನಡೆಸಿಕೊಂಡಿದ್ದು, ದಿನಾಂಕ 27/04/2023 ರಂದು 16:00 ಗಂಟೆಯಿಂದ 16:30 ಗಂಟೆ ನಡುವಿನ ಸಮಯದಲ್ಲಿ ಅಂದಾಜು 40 ವರ್ಷ ಪ್ರಾಯದ ಇಬ್ಬರು ಅಪರಿಚಿತ ಗಂಡಸರು ಅಂಗಡಿಗೆ ಬಂದು ಮೂಗುತಿ ಬಗ್ಗೆ ಕೇಳಿದ್ದು, ಪಿರ್ಯಾದುದಾರರ ಹೆಂಡತಿ ಚಿನ್ನದ ಮೂಗುತಿ ಇರುವ ಪ್ಯಾಕೇಟ್‌ ಗಳನ್ನು ತೋರಿಸಿದ್ದು, ಆಪಾದಿತರು ಸ್ವಲ್ಪ ಹೊತ್ತು ಮಾತನಾಡುತ್ತಾ, ಮೂಗುತಿಗಳನ್ನು ನೋಡಿ, ಅದರಲ್ಲಿದ್ದ 1 ಮೂಗುತಿ ಪ್ಯಾಕೇಟ್‌ ನ್ನು ಕಳವು ಮಾಡಿಕೊಂಡು ಹೋಗಿದ್ದು, ಅದರಲ್ಲಿ ಅಂದಾಜು 20 ಗ್ರಾಂ ಚಿನ್ನದ ಮೂಗುತಿಗಳಿದ್ದು, ಸದರಿ ಕಳವಾದ ಸ್ವತ್ತಿನ ಅಂದಾಜು ಮೌಲ್ಯ ರೂ. 1,20,000/- ಆಗಬಹುದು. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 60/2023  ಕಲಂ:   379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ

ಶಂಕರನಾರಾಯಣ: ಫಿರ್ಯಾದಿ ಧರ್ಮಪ್ರಸಾದ ಶೆಟ್ಟಿ ಇವರ ತಂದೆ, ತಾರನಾಥ  ಶೆಟ್ಟಿ ಪ್ರಾಯ   65 ವರ್ಷ ಇವರು ದಿನಾಂಕ 21.04. 2023  ರಂದು   ಬೆಳಿಗ್ಗೆ  ಸುಮಾರು  8:00 ಘಂಟೆಯಿಂದ 11:00 ಘಂಟೆಯ  ಮದ್ಯದ ಅವಧಿಯಲ್ಲಿ ಕುಂದಾಪುರ  ತಾಲೂಕಿನ ಅಂಪಾರು  ಎಂಬಲ್ಲಿ ಯಾವುದೋ  ವಿಷ  ಪದಾರ್ಥ ಸೇವಿಸಿ ಅಸ್ವಸ್ಥರಾದವರನ್ನು ಚಿಕಿತ್ಸ್ಸೆಯ ಬಗ್ಗೆ  ಕುಂದಾಪುರ ವಿನಯ  ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಯ  ಬಗ್ಗೆ  ಮಣಿಪಾಲದ  ಕೆ,ಎಮ್.ಸಿ   ಆಸ್ಪತ್ರೆಗೆ ಕರೆದುಕೊಂಡು  ಹೋಗಿದ್ದು, ಅಲ್ಲಿ ಚಿಕಿತ್ಸೆಯಲ್ಲಿ ಇರುತ್ತಾ ದಿನಾಂಕ  27.04.2023 ರಂದು  20;10 ಘಂಟೆಗೆ  ಚಿಕಿತ್ಸೆ  ಫಲಕಾರಿಯಾಗದೇ  ಮಣಿಪಾಲ ಕೆ.ಎಮ್.ಸಿ  ಆಸ್ಪತ್ರೆಯಲ್ಲಿ  ಮೃತಪಟ್ಟಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 11/2023  ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 28-04-2023 06:16 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080