ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ : ಪಿರ್ಯಾದಿದಾರರಾದ ಸೃಜನ್‌ (20), ತಂದೆ: ಸುರೇಶ್‌ ಮೊಗವೀರ, ವಾಸ:  ಕುಂಭಾಶಿಮನೆ, ಗೋಪಾಡಿ ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ 27/04/2022 ರಂದು ಸಂಜೆ  ತನ್ನ ತಾಯಿ ಸರೋಜಾ ಎಂಬುವವರನ್ನು KA-05-JG-3824 ನೇ ಹೋಂಡಾ ಆಕ್ಟೀವಾ ಸ್ಕೂಟಿಯಲ್ಲಿ ಹಿಂಬದಿ ಸವಾರಿಣಿಯಾಗಿ ಕುಳ್ಳಿರಿಸಿಕೊಂಡು ಮನೆಯಿಂದ ರಾಷ್ರೀಯ ಹೆದ್ದಾರಿ 66 ರ ಉಡುಪಿ-ಕುಂದಾಪುರ ಮುಖ್ಯ ರಸ್ತೆಯಲ್ಲಿ ಕುಂಭಾಶಿ ಕಡೆಯಿಂದ ತೆಕ್ಕಟ್ಟೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದು, ಅವರು ಸಂಜೆ 5:40 ಗಂಟೆಗೆ ಕನ್ನುಕೆರೆಯ ಶ್ರೀ ಗುರುರಾಘವೇಂದ್ರ ಮಠ ತಿರುವಿನ ಎದುರು ಪೂರ್ವ ಬದಿಯ ರಸ್ತೆಯಲ್ಲಿ ಹೋಗುತ್ತಿರುವಾಗ ಅವರ ಹಿಂದಿನಿಂದ ಅದೇ ರಸ್ತೆಯಲ್ಲಿ ಕುಂದಾಪುರ ಕಡೆಯಿಂದ ಬಂದ ಯಾವುದೋ ಒಂದು ವಾಹನವನ್ನು ಅದರ ಚಾಲಕನು ಓವರ್‌ಟೇಕ್‌ ಮಾಡುವ ಭರದಲ್ಲಿ ಪಿರ್ಯಾದಿದಾರರು ಚಲಾಯಿಸುತ್ತಿದ್ದ ಸ್ಕೂಟಿಯ ಹ್ಯಾಂಡಲ್‌ ಬಾರ್‌ಗೆ ರಭಸವಾಗಿ ತಾಗಿಸಿಕೊಂಡು ಹೋಗಿದ್ದು, ಆಗ ಪಿರ್ಯಾದಿದಾರರು ಸ್ಕೂಟಿ ಸವಾರನು ನಿಯಂತ್ರಣ ತಪ್ಪಿ ಸ್ಕೂಟಿ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಬಲಕಣ್ಣಿನ ಬಳಿ, ಬಲಕೈ ಹಾಗೂ ಬಲಕಾಲಿಗೆ ತರಚಿದ ಗಾಯಗಳಾಗಿದ್ದು, ಸ್ಕೂಟಿಯ ಹಿಂಬದಿ ಸವಾರಿಣಿಯ ತಲೆಗೆ ತೀವ್ರ ಸ್ವರೂಪದ ಹಾಗೂ ಇತರೆಡೆಗಳಿಗೆ ಸಾದಾ ಗಾಯಗಳಾಗಿದ್ದು, ಗಾಯಗೊಂಡ ಅವರನ್ನು ಕೂಡಲೇ ಚಿಕಿತ್ಸೆಯ ಕೋಟೇಶ್ವರ ಎನ್‌.ಆರ್‌. ಆಚಾರ್ಯ ಆಸ್ಪತ್ರೆಗೂ ಹಾಗೂ ಆ ಪೈಕಿ ಸಹಸವಾರಿಣಿಯನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ. ಅಪಘಾತಪಡಿಸಿದ ವಾಹನ ಚಾಲಕನು ಗಾಯಾಳುಗಳನ್ನು ಆಸ್ಪತ್ರೆಗೂ ಸಾಗಿಸದೇ, ಅಪಘಾತದ ಮಾಹಿತಿಯನ್ನು ಯಾರಿಗೂ ತಿಳಿಸದೇ ಹೋಗಿರುತ್ತಾನೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 59/2022  ಕಲಂ: 279, 337 338 ಐಪಿಸಿ & 134 (A) (B) R/w 187 IMV Act ರಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿದಾರರರಾದ ಲೋಕೇಶ್ (38), ತಂಧೆ: ಆನಂದ ಖಾರ್ವಿ, ವಾಸ: ಕಾತನ ಮನೆ, ಮರವಂತೆ  ಇರು ಮರವಂತೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿಕೊಂಡಿದ್ದು, ದಿನಾಂಕ 27/04/2022 ರಂದು ಮದ್ಯಾಹ್ನ 12:00 ಗಂಟೆ ಸಮಯಕ್ಕೆ ಮರವಂತೆಯ ಶೀನ ದೇವಾಡಿಗರವರು ಮರವಂತೆ ಗ್ರಾಮ ಪಂಚಾಯತ್ ಕಛೇರಿಗೆ ಕರೆ ಮಾಡಿ ಬೈಂದೂರು ತಾಲೂಕು ಮರವಂತೆ ಗ್ರಾಮದ ನೀರೋಣಿಯ ನಾರಾಯಣ ದೇವಾಡಿಗರವರ ಹಳೆಯ ಅಂಗಡಿಯ ಹತ್ತಿರ ಒಬ್ಬ ಗಂಡಸು ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದಿರುವುದಾಗಿ ತಿಳಿಸಿದಂತೆ ಕೂಡಲೇ ಸ್ಥಳಕ್ಕೆ ಹೋಗಿ ನೋಡಲಾಗಿ ಅಂಗಡಿಯ ಸಮೀಪ ಬಿದ್ದುಕೊಂಡಿರುವ ಗಂಡಸು ಮೃತಪಟ್ಟಿರುವುದು ಕಂಡು ಬಂದಿರುತ್ತದೆ. ಮೃತನ ಪಕ್ಕದಲ್ಲಿ ಮೊಬೈಲ್ ಮತ್ತು ಪರ್ಸ್ ಇದ್ದುಅದರಲ್ಲಿ ಆತನ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಇದ್ದು ಆತನ ಮೊಬೈಲ್ ನಿಂದ ಸಂಬಂಧಪಟ್ಟವರಿಗೆ ಕರೆ ಮಾಡಿ ವಿಚಾರವನ್ನು ತಿಳಿಸಲಾಗಿ ಆತನ ಹೆಸರು ಜಲಂದರ್ ಸತಾರ ಮಹಾರಾಷ್ಟ್ರ ಎಂಬುದಾಗಿ ತಿಳಿದು ಬಂದಿರುತ್ತದೆ. ಜಲಂದರ್ ರವರು ಅವರ ಆರೋಗ್ಯ  ಸಮಸ್ಯೆಯಿಂದಾಗಿಅಥವಾ ಇನ್ಯಾವುದೋ ಕಾರಣದಿಂದ ಅಸ್ವಸ್ಥಗೊಂಡು ರಸ್ತೆ ಬದಿಯಲ್ಲಿ ಮಲಗಿಕೊಂಡಲ್ಲಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 12/2022 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ವಂಚನೆ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ನೋರ್ಬಟ್‌ ಎಸ್‌ ಮಸ್ಕರೇನಸ್‌ (56), ತಂದೆ: ದಿ. ಡೇವಿಡ್‌ ಮಸ್ಕರೇನಸ್‌, ವಾಸ: ಬ್ರಿಜೇಟ್‌ವಿಲ್ಲಾ, ಮದಗ, ಪೆರಂಪಳ್ಳಿ, ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ಉಡುಪಿಯ ಡಯಾನ ಸರ್ಕಲ್‌ಬಳಿ ಇರುವ ಹೆಚ್‌ಡಿಎಫ್‌ಸಿ ಬ್ಯಾಂಕಿಗೆ ದಿನಾಂಕ 27/05/2020 ರಂದು ಡಿಮ್ಯಾಟ್‌ ಖಾತೆಯನ್ನು ತೆರೆಯಲು ಹೋಗಿದ್ದು, ಆ ಸಮಯ ಬ್ಯಾಂಕಿನವರು ಪಿರ್ಯಾದಿದಾರರಿಂದ ರಂಜಿತ್‌ ಶೆಟ್ಟಿ ಎಂಬುವವರು ಅರ್ಜಿಯನ್ನು ತುಂಬಿಸುವ ಸಮಯ  40-50 ಸಹಿಗಳನ್ನುಪಡೆದಿದ್ದು, ಅದರಲ್ಲಿ ಖಾಲಿ ಹಾಳೆಗಳು ಕೂಡಾ ಇರುತ್ತದೆ. ಪಿರ್ಯಾದಿದಾರರು ಅರ್ಜಿಗಳಿಗೆ ಸಹಿ ಹಾಕಿ ಮನೆಗೆ ಹೋದ ನಂತರ ಆಧಾರ್‌ಕಾರ್ಡ್ ನಂಬ್ರಗಳಿರುವುದು ಕಂಡು ಬಂದಿದ್ದು, ಆನಂತರ ಪಿರ್ಯಾದಿದಾರರು ಬ್ಯಾಂಕಿಗೆ ಹೋಗಿ ಸಹಿ ಹಾಕಿದ ದಾಖಲಾತಿಗಳನ್ನು ವಾಪಾಸು ನೀಡಲು ಹೇಳಿದಾಗ ಬ್ಯಾಂಕಿನವರು ಅದನ್ನು ಚೆನೈ ಮತ್ತು ಮುಂಬಯಿಗೆ ಕಳುಹಿಸಿರುವುದಾಗಿ ತಿಳಿಸಿದ್ದು, ಆನಂತರ ಪಿರ್ಯಾದಿದಾರರು ಸಹಿ ಮಾಡಿದ ದಾಖಲಾತಿಗಳನ್ನು ನಾಶ ಮಾಡಿರುವುದಾಗಿ ಪತ್ರವನ್ನು ಕಳುಹಿಸಿದ್ದು, ಆರೋಪಿತರಾದ 1) ಹೆಚ್‌.ರಂಜಿತ್‌ ಶೆಟ್ಟಿ, ಹೆಚ್‌ಡಿಎಫ್‌ಸಿ ಬ್ಯಾಂಕ್, ಉಡುಪಿ, 2) ಪೌಲ್‌ಫ್ರಾನ್ಸಿಸ್‌, ಹೆಚ್‌ಡಿಎಫ್‌ಸಿ ಬ್ಯಾಂಕ್ ಮ್ಯಾನೇಜರ್‌, ಉಡುಪಿ, 3) ಸಂತೋಷ್‌ಎಸ್‌. ಹೆಚ್‌ಡಿಎಫ್‌ಸಿ ಬ್ಯಾಂಕ್ ಮ್ಯಾನೇಜರ್‌ ಮಂಗಳೂರು,  4) ವೀಕ್ಷಿತಾ  ಹೆಚ್‌ಡಿಎಫ್‌ಸಿ ಬ್ಯಾಂಕ್, ಉಡುಪಿ ಇವರು  ಪಿರ್ಯಾದಿದಾರರ ಸಹಿಯನ್ನು ನಕಲು ಮಾಡಿದ್ದು, ಅಲ್ಲದೇ ಪಿರ್ಯಾದಿದಾರರು ಸಹಿ ಮಾಡಿರುವ ಕಾಗದ ಪತ್ರಗಳನ್ನು ವಾಪಾಸು ನೀಡಿರುವುದಿಲ್ಲ ಎಂಬುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 64/2022 ಕಲಂ: 420, 465 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

 

ಇತ್ತೀಚಿನ ನವೀಕರಣ​ : 28-04-2022 10:00 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080