ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಕುಂದಾಪುರ: ದಿನಾಂಕ 26-04-2022 ರಂದು ರಾತ್ರಿ ಸಮಯ ಸುಮಾರು 8-00 ಘಂಟೆಗೆ ಪಿರ್ಯಾದಿ ಗೋಪಾಲ ಪೂಜಾರಿ, ಪ್ರಾಯ: 34 ವರ್ಷ ತಂದೆ: ದಿ: ಶೀನ ಪೂಜಾರಿ ವಾಸ: “ಪಾಯಸರ ಮನೆ” ವಡೇರ ಹೋಬಳಿ ಕಸಬಾ ಗ್ರಾಮ, ಇವರು ಕುಂದಾಪುರ ನಗರದ ಕಸಬ ಗ್ರಾಮದ ರಾ.ಹೆ.66 ರ ಬದಿಯ ವಿನಯ ನರ್ಸಿಂಗ್‌ ಆಸ್ಪತ್ರೆ ಹತ್ತಿರ ಶೇಖರ ಎಂಬುವವರ ಕ್ಯಾಂಟಿನ್‌ನಲ್ಲಿ ತಿಂಡಿ ತಿಂದು ಕ್ಯಾಂಟಿನ್‌ ಎದುರಿನಲ್ಲಿ ನಿಂತುಕೊಂಡಿರುವಾಗ ಕ್ಯಾಂಟಿನ್‌ಎದುರಿನ ರಾ.ಹೆ.66 ರ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಏಕಮುಖ ಡಾಮಾರು ರಸ್ತೆಯಲ್ಲಿ  ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಬಿಳಿ ಬಣ್ಣದ  ಮಹೀಂದ್ರಾ ಕಂಪನಿಯ ಬೊಲೆರೊ ಜೀಪ್ ನಂಬರ್‌KA 04 MT 8483 ನೇದನ್ನು ಅದರ ಚಾಲಕ ಪ್ರಮೋದ ಬಸವರಾಜ್‌ ಹಿರೇಮಠ ಎಂಬುವವನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಾ.ಹೆ.66 ರನ್ನು ಪೂರ್ವ ಬದಿಯಿಂದ ಪಶ್ಚಿಮ ಬದಿಗೆ  ದಾಟುತ್ತಿದ್ದ ಪಿರ್ಯಾದಿದಾರರ ಅಣ್ಣ ರವಿ ಪೂಜಾರಿ ಎಂಬುವವನಿಗೆ ಡಿಕ್ಕಿ ಹೊಡೆದ  ಪರಿಣಾಮ ಸದ್ರಿ ವ್ಯಕ್ತಿ ರಸ್ತೆಗೆ  ಬಿದ್ದಿದ್ದು ಆತನ ತಲೆ ಹಿಂಬದಿಗೆ ತೀವ್ರ ಸ್ವರೂಪದ ರಕ್ತಗಾಯವಾಗಿದ್ದು ಆತನ ಕಾಲಿಗೆ ತರಚಿದ ಸಣ್ಣಪುಟ್ಟ ಗಾಯವಾಗಿದ್ದು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ.  ಗಾಯಗೊಂಡ ರವಿ ಪೂಜಾರಿ ರವರನ್ನು ಪಿರ್ಯಾದಿದಾರರು ಮತ್ತು ಅಪಘಾತವೆಸಗಿದ ವಾಹನದ ಚಾಲಕರು ಅದೇ ವಾಹನದಲ್ಲಿ ಚಿಕಿತ್ಸೆಗೆ ಕುಂದಾಪುರ ಚಿನ್ಮಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ವೈಧ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ  ತಿಳಿಸಿದಂತೆ ರವಿ ಪೂಜಾರಿ ರವರನ್ನು ಹೆಚ್ಚಿನ ಚಿಕಿತ್ಸೆಗೆ  ಉಡುಪಿ ಆದರ್ಶ  ಆಸ್ಪತ್ರೆಗೆ  ಅಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗಿ  ದಾಖಲಿಸಿರುತ್ತಾರೆ .ಉಡುಪಿ ಆದರ್ಶ  ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದ  ರವಿ ಪೂಜಾರಿ ರವರು ಚಿಕಿತ್ಸೆ  ಫಲಕಾರಿಯಾಗದೇ ದಿನಾಂಕ 27/04/2022 ರಂದು  23 :45 ಗಂಟೆಗೆ  ಮೃತಪಟ್ಟ ಈ ಬಗ್ಗೆ  ಡೆತ್‌ ಇಂಟಿಮೇಶನ್‌‌‌ನನ್ನು  ಈ ದಿನ ದಿನಾಂಕ 28/04/2022 ರಂದು 00:50 ಗಂಟೆಗೆ ಠಾಣೆಯಲ್ಲಿ ಸ್ವೀಕರಿಸಿಕೊಂಡಿರುವುದಾಗಿದೆ. ಆದ್ದರಿಂದ ಈ ಪ್ರಕರಣದ ಕಲಂ:279, 338  ಐ.ಪಿ.ಸಿ ಯನ್ನು ಕಲಂ:279, 304(ಎ) ಐ.ಪಿ.ಸಿ ರಂತೆ ಪರಿವರ್ತಿಸಿ ಪರಿವರ್ತಿತ ವರದಿಯನ್ನು ಘನ ನ್ಯಾಯಾಲಯದ ಮುಂದೆ ನಿವೇದಿಸಿಕೊಂಡಿರುವುದಾಗಿದೆ.ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ, ಅಪರಾದ ಕ್ರಮಾಂಕ 56/2022   ಕಲಂ: 279,  338 ಐಪಿಸಿ. ನ್ನು   279, 304(ಎ)  ಐಪಿಸಿ. ಆಗಿ ದಿನಾಂಕ 28/04/2022 ರಂದು ಪರಿವರ್ತಿಸಿದ್ದಾಗಿದೆ. 
  • ಬ್ರಹ್ಮಾವರ: ದಿನಾಂಕ 28.04.2022 ರಂದು ಪಿರ್ಯಾದಿ ಶ್ರೀಮತಿ ಗೀತಾ, (50 ವರ್ಷ), ಗಂಡ:  ನರಸಿಂಹ ಬಿ. ವಾಸ: ಮನೆ ನಂ 3/23, ಶ್ರೀ ದುರ್ಗಾ ಕೃಪಾ, ಜೆಪಿ ನಗರ, ಆರೂರು ಇವರು ತನ್ನ  KA.20.X.4736 ನೇ TVS PEPT ದ್ವಿಚಕ್ರ ವಾಹನವನ್ನು ಸವಾರಿ ಮಾಡಿಕೊಂಡು ಮನೆಯಿಂದ ಆರೂರುನಲ್ಲಿರುವ ಅಂಚೆ ಕಛೇರಿಗೆ ಬರುತ್ತಾ ಸಮಯ  ಬೆಳಿಗ್ಗೆ 09:45 ಗಂಟೆಗೆ ಆರೂರು ಗ್ರಾಮದ ಹಾಲಿಕಟ್ಟೆ ಬಳಿ ತಲುಪಿದಾಗ ಮುಂಡ್ಕಿನ್‌ ಜೆಡ್ಡು ಕಡೆಯಿಂದ ಅಪರಿಚಿತ ಆರೋಪಿಯು ಅವರ ಬಾಬ್ತು ಬುಲೆಟ್‌  ಮೋಟಾರ್‌ ಸೈಕಲ್‌ನ್ನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ  ದ್ವಿಚಕ್ರ ವಾಹನದ ಎಡಬದಿಗೆ ಡಿಕ್ಕಿ ಹೊಡೆದು ತನ್ನ ಮೋಟಾರ್‌ ಸೈಕಲ್‌ನ್ನು  ನಿಲ್ಲಿಸದೇ ಮುಂದಕ್ಕೆ  ಸವಾರಿ ಮಾಡಿಕೊಂಡು ಕೊಳಲಗಿರಿ ಕಡೆಗೆ ಹೋಗಿರುತ್ತಾನೆ. ಸದ್ರಿ ಅಪಘಾತದ ಪರಿಣಾಮ ಪಿರ್ಯಾದಿದಾರರು ದ್ವಿ ಚಕ್ರ ವಾಹನ ಸಮೇತ ರಸ್ತೆಗೆ ಬಿದ್ದು, ಅವರ ಎಡಬದಿಯ ಭುಜಕ್ಕೆ ಮೂಳೆ ಮುರಿತವಾಗಿ, ತುಟಿಗೆ, ಎಡಕೈ ಮೊಣಗಂಟಿನ ಬಳಿ ತರಚಿದ ರಕ್ತಗಾಯವಾಗಿರುತ್ತದೆ. ಗಾಯಗೊಂಡ ಪಿರ್ಯಾದಿದಾರರನ್ನು ಚಿಕಿತ್ಸೆ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಅಪಘಾತವೇಸಗಿ ಪರಾರಿಯಾದ ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವರೇ ನೀಡಿರುವ ಪಿರ್ಯಾದು ಆಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ  ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 74/2022 ಕಲಂ 279, 338 IPC & 134(A) & (B) IMV ACT ರಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣಗಳು

  • ಮಣಿಪಾಲ: ಪಿರ್ಯಾದಿ ಶ್ರೀಧರ ಭಕ್ತ ಪ್ರಾಯ : 61 ವರ್ಷ, ತಂದೆ: ದಿ:ಕೆ.ಅನಂತ ಭಕ್ತ ವಾಸ : ಮೇದಿನಿ, ಶಾಂತಿನಗರ 1 ನೇ ಕ್ರಾಸ್,80 ಬಡಗಬೆಟ್ಟು ಗ್ರಾಮ, ಉಡುಪಿ ತಾಲೂಕು ಇವರು ಮಣಿಪಾಲದಲ್ಲಿ KA20A-A-0348 Itios ಕಾರನ್ನು ಬಾಡಿಗೆಗೆ ಇಟ್ಟುಕೊಂಡಿದ್ದು,  ದಿನಾಂಕ : 27.04.2022 ರಂದು ಕಾರು ಬಾಡಿಗೆ ಬಗ್ಗೆ ಮಣಿಪಾಲಕ್ಕೆ ಬಂದು ಟೈಗರ್ ಸರ್ಕಲ್ ಬಳಿ ಲೈನ್ ನಲ್ಲಿ ನಿಲ್ಲಿಸಿದ್ದು, ಬಾಡಿಗೆಗೆ ಸರದಿ ಬಂದಾಗ ಸಮಯ ಸುಮಾರು ಸಂಜೆ 4.25 ಗಂಟೆಗೆ ಸುಮಾರು 35 ರಿಂದ 45 ವರ್ಷ ಪ್ರಾಯ ಹೊಂದಿರುವ 4 ಜನ ತುಳು ಮಾತನಾಡುವ ವ್ಯಕ್ತಿಗಳು ಪಿರ್ಯಾದಿದಾರರ ಕಾರಿನ ಬಳಿ ಬಂದು ನಮಗೆ ಕಾರವಾರಕ್ಕೆ ಹೋಗಲು ಇದೆ ಎಷ್ಟು ಬಾಡಿಗೆ ಎಂದು ಪಿರ್ಯಾದಿದಾರರಲ್ಲಿ ಕೇಳಿದಾಗ 5,800/- ರೂಪಾಯಿ ಕೊಡಿ ಎಂದು ಹೇಳಿ, ಒಪ್ಪಿಸಿ ಅವರನ್ನು ಕಾರಿನಲ್ಲಿ ಕುಳ್ಳಿರಿಸಿ ಹೋಗುತ್ತಾ  ರಾತ್ರಿ 08.40 ಗಂಟೆಗೆ  ಅಂಕೋಲ ರೈಲ್ವೇ ಸ್ಟೇಷನ್ ಸಮೀಪ ಕಾರನ್ನು ಆಪಾದಿತರು ನಿಲ್ಲಿಸಲು ಹೇಳಿದಾಗ ಪಿರ್ಯಾದಿದಾರರು ಕಾರನ್ನು ನಿಲ್ಲಿಸಿದಾಗ ಕಾರಿನಲ್ಲಿ ಹಿಂಬದಿಯಲ್ಲಿದ್ದ ಒಬ್ಬ ವ್ಯಕ್ತಿಯು ಪಿರ್ಯಾದಿದಾರರ ಕುತ್ತಿಗೆಯನ್ನು ಒತ್ತಿ ಕೈಯಿಂದ ಲಾಕ್ ಮಾಡಿದ್ದು,  ಉಳಿದ 3 ಆಪಾದಿತರು  ಪಿರ್ಯಾದಿದಾರರನ್ನು  ಡ್ರೈವರ್ ಸೀಟ್ ನಿಂದ ಬಲಾತ್ಕಾರವಾಗಿ ಹಿಂದಿನ ಸೀಟ್ ಗೆ ಎಳೆದು ಕುಳ್ಳಿರಿಸಿ ಪಿರ್ಯಾದಿದಾರರ  ಕುತ್ತಿಗೆಯನ್ನು ಒತ್ತಿ ಹಿಡಿದು ಕಾಲಿನಿಂದ ಒದ್ದು ಅವರ ಬಳಿ ಇದ್ದ ಚೂರಿಯನ್ನು ಪಿರ್ಯಾದಿದಾರರ ಹೊಟ್ಟೆಯ ಬಳಿ ಒತ್ತಿ ಹಿಡಿದು ನಿನ್ನಲ್ಲಿ ಇರುವ ಎಲ್ಲಾ ದುಡ್ಡು ತೆಗೆದುಕೊಡು  ಇಲ್ಲ ಅಂದರೆ ಇಲ್ಲಿಯೇ ನಿನ್ನನ್ನು ಚೂರಿಯಿಂದ ಇರಿದು ಕೊಂದು ಹಾಕುವುದಾಗಿ ಹೇಳಿದಾಗ ಪಿರ್ಯಾದಿದಾರರು ಪರ್ಸ್ ನಲ್ಲಿದ್ದ 3,000/- ರೂಪಾಯಿ ಹಾಗೂ  ಕೈಯಲ್ಲಿದ್ದ ಒರೈಮ್ ವಾಚ್ ನ್ನು ತಗೆದುಕೊಟ್ಟಿರುತ್ತಾರೆ, ಬಳಿಕ ಕಾರಿನಲ್ಲಿದ್ದ ಒಬ್ಬ ವ್ಯಕ್ತಿಯು ಕಾರನ್ನು ಚಲಾಯಿಸಿಕೊಂಡು ರಾತ್ರಿ 11.30 ಗಂಟೆಗೆ ಕುಂದಾಪುರದ  ಆನೆಗುಡ್ಡೆಗೆ ತಲುಪುವಾಗ ಎ.ಟಿ.ಎಂ ಬಳಿ ಕಾರನ್ನು ನಿಲ್ಲಿಸಿ ಎ.ಟಿ.ಎಂ ನಿಂದ ದುಡ್ಡು ತೆಗೆದು ತರುವಂತೆ ಪಿರ್ಯಾದಿದಾರರಲ್ಲಿ ಹೇಳಿ, ಏನಾದರು ಕಿತಾಪತಿ ಮಾಡಿದರೆ ನಿನ್ನನ್ನು ಬಿಡುವುದಿಲ್ಲ ಎಂದು ಹೆದರಿಸಿದ್ದು, ಪಿರ್ಯಾದಿದಾರರು ಕಾರಿನಿಂದ ಇಳಿದು ಎ.ಟಿ.ಎಂ ನ ಒಳಗೆ ಹೋಗಿ ಬಳಿಕ ಹೊರಗೆ ಬಂದು ಸ್ಥಳದಿಂದ ಓಡಿ ಹೋಗಿ ಪರಾರಿಯಾಗಿರುವುದಾಗಿದೆ. ಈ ಬಗ್ಗೆ ಮಣಿಪಾಲ ಠಾಣೆ,  ಅಪರಾಧ ಕ್ರಮಾಂಕ 59/2022 ಕಲಂ: 394, R/W 34 IPC ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಬೈಂದೂರು : ಪಿರ್ಯಾದಿ ಗೋವರ್ಧನ್ ಶೆಟ್ಟಿ  ಪ್ರಾಯ:73 ತಾಯಿ: ದಿ. ಮೀನಾಕ್ಷಿ ಶೆಟ್ಟಿ ವಾಸ: ವಡೇರಹೋಬಳಿ ಕುಂದಾಪುರ ಇವರ ಯಡ್ತರೆ ಗ್ರಾಮದ ಆಲಂದೂರಿನಲ್ಲಿ  ಸರ್ವೆ ನಂಬ್ರ 210-1 ಆಸ್ತಿಯಿದ್ದು ಸದ್ರಿ ಜಾಗದಲ್ಲಿ  ಪಿರ್ಯಾದುದಾರರ ಬಾಬ್ತು ನಾಗರ ಬನವಿದ್ದು ಸದ್ರಿ ನಾಗ ಬನಕ್ಕೆ ಪಿರ್ಯಾದುದಾರರು ಹಾಗೂ ಊರಿನವರು ಪೂಜೆ ಮಾಡಿಕೊಂಡು ಬರುತ್ತಿದ್ದು, ಪಿರ್ಯಾದುದಾರರು ದಿನಾಂಕ 20-03-2022 ರಂದು ಮಧ್ಯಾಹ್ನ 12:00 ಗಂಟೆಗೆ ಪೂಜೆ ಮಾಡಿಕೊಂಡು ಬಂದಿದ್ದು ದಿನಾಂಕ 20-04-2022 ರಂದು ನಾಗರ ಪೂಜೆಗೆಂದು ಹೋದಾಗ ಯಾರೋ ದುಷ್ಕರ್ಮಿಗಳು ಪಿರ್ಯಾದುದಾರರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಜಾಗದಲ್ಲಿದ್ದ  ನಾಗರ ಕಲ್ಲನ್ನು ಕಿತ್ತುಹಾಕಿದ್ದು ಅಲ್ಲದೇ ನಾಗಬನಕ್ಕೆ ಹೋಗುವ ದಾರಿಯನ್ನು ಹಾಗೂ  ಪಿರ್ಯಾದುದಾರರ ಮನೆಗೆ ಹೋಗುವ ದಾರಿಯನ್ನು  ಬಂದ್ ಮಾಡಿರುತ್ತಾರೆ . ಪಿರ್ಯಾದುದಾರರು ಅಕ್ಕಪಕ್ಕ ದವರನ್ನು ವಿಚಾರಿಸಿ ದೂರು ನೀಡುವರೇ ವಿಳಂಭವಾಗಿರುತ್ತದೆ.ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 81/2022 ಕಲಂ. 447 IPC ಯಂತೆ ಪ್ರಕರಣ ದಾಖಲಿಸಲಾಗಿದೆ.

ಕಳವು ಪ್ರಕರಣಗಳು:

  • ಕಾಪು: ಪಿಯಾ೯ದಿ ಅಮೀತ್ ಕುಮಾರ್ ಪ್ರಾಯ:36 ವರ್ಷ, ತಂದೆ:ದಿ! ಕೄಷ್ಣಪ್ಪ  ವಾಸ:ಮಾಣಿ ತೋಟ ಹೌಸ್,  ಪಾರೆಸ್ಟ್ ಗೇಟ್ , ಕಟಪಾಡಿ. ಇವರು ದಿನಾಂಕ:27/04/2022 ರಂದು ರಾತ್ರಿ 10:30 ಗಂಟೆ ಸುಮಾರಿಗೆ ನನ್ನ  ಮೋಟಾರ್ ಸೈಕಲನ್ನು ಮೂಡಬೆಟ್ಟು ಗ್ರಾಮದ  ಪಾಪುಲಿನ್  ಬಾರ್ ನ ಬಳಿ ನಿಲ್ಲಿಸಿ ಬೀಗ ಹಾಕಿ ತನ್ನ ಸ್ನೇಹಿತ ಪ್ರಸಾದ್ ರವರ ಮೋಟಾರ್ ಸೈಕಲ್ಲಿನಲ್ಲಿ ಉಡುಪಿಗೆ ನನ್ನ ಸಂಬಂಧಿಕರ ಮನೆಯ ಮೆಹಂದಿ ಕಾರ್ಯಕ್ರಮಕ್ಕೆ ಹೋಗಿ  ಬಳಿಕ  ದಿನಾಂಕ:28/04/2022 ರಂದು ಬೆಳಗಿನ ಜಾವ 03:00 ಗಂಟೆಗೆ ಬಂದು ನೋಡುವಾಗ ನನ್ನ ಮೋಟಾರ್ ಸೈಕಲ್ ನಾನಿಟ್ಟ ಸ್ಥಳದಲ್ಲಿ ಇಲ್ಲದೇ ಇದ್ದು ಈ ಬಗ್ಗೆ  ಅಕ್ಕಪಕ್ಕದಲ್ಲಿ ಹುಡುಕಾಡಿದಲ್ಲಿ ಸದ್ರಿ ಮೋಟಾರ್ ಸೈಕಲ್ಲ ಪತ್ತೆಯಾಗಿರುವುದಿಲ್ಲ. ಸದ್ರಿ ಮೋಟಾರ್ ಸೈಕಲ್ಲಿನ ಅಂದಾಜು ಮೌಲ್ಯ 20,000/- ಆಗಬಹುದು. ನನ್ನ ಕೆ.ಎ-20-ವಿ-5656 ನೇ ಯಮಹಾ ಎಪ್.ಜೆಡ್ ಮೋಟಾರ್ ಸೈಕಲನ್ನು ಯಾರೋ ಕಳ್ಳರು ದಿನಾಂಕ:27/04/2022 ರಂದು ರಾತ್ರಿ 10:30 ಗಂಟೆಯಿಂದ ದಿನಾಂಕ:28/04/2022 ರಂದು ಬೆಳಗಿನ ಜಾವ 03:00 ಗಂಟೆಯ ಒಳಗಿನ ಸಮಯದಲ್ಲಿ ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಮೋಟಾರ್ ಸೈಕಲ್ ಕಳವಾದ ಬಗ್ಗೆ ಈ ದಿನ ದಿನಾಂಕ:28/04/2022 ರಂದು ಬೆಳಿಗ್ಗೆ ಕಾಪು ಠಾಣೆಗೆ ಬಂದು ಮಾಹಿತಿ ನೀಡಿ ನಂತರ ಎಲ್ಲಾ ಕಡೆ ಹುಡುಕಾಡಿ  ದೂರು ನೀಡಲು ವಿಳಂಭವಾಗಿರುತ್ತದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಅಪರಾಧ ಪ್ರಕರಣಗಳು  43/2022 ಕಲಂ 379  ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ. .

ಇತ್ತೀಚಿನ ನವೀಕರಣ​ : 28-04-2022 06:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080