ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಶಂಕರನಾರಾಯಣ: ದಿನಾಂಕ 27/04/2021 ರಂದು 10:30 ಗಂಟೆಗೆ ಪಿರ್ಯಾದಿದಾರರಾಧ ಸತೀಶ್‌ ಶೆಟ್ಟಿ (44) ತಂದೆ ದಿವಂಗತ ಜಗನ್ನಾಥ ಶೆಟ್ಟಿ ವಾಸ ಹರಾಳಿ ಮನೆ ಹೆಂಗವಳ್ಳಿ ಗ್ರಾಮ ಕುಂದಾಪುರ ಇವರು ಮೋಟಾರು ಸೈಕಲ್‌ ನಂಬ್ರ KA-20-EW-5037  ನೇದರಲ್ಲಿ ಸಹ ಸವಾರಾಗಿ ಕುಳಿತು ಹೆಂಗವಳ್ಳಿ- ತೊಂಬತ್ತು  ಡಾಂಬಾರು ರಸ್ತೆಯಲ್ಲಿ ಹೆಂಗವಳ್ಳಿ ಕಡೆಯಿಂದ ತೊಂಬತ್ತು ಕಡೆಗೆ ಮೋಟಾರು ಸೈಕಲ್‌ಸವಾರ ಮೋಟಾರು ಸೈಕಲ್‌ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಕುಂದಾಪುರ ತಾಲೂಕಿನ ಹೆಂಗವಳ್ಳಿ ಗ್ರಾಮದ ಹರಾಳಿ ಕ್ರಾಸ್‌ಸಮೀಪ ರಾಜು ಶೆಟ್ಟಿರವರ ಮನೆ ಎದುರು ಡಾಂಬಾರು ರಸ್ತೆಯಲ್ಲಿ ಮೋಟಾರು ಸೈಕಲ್‌ಗೆ ದನವು ಅಡ್ಡ ಬಂದಿದ್ದು ತಪ್ಪಿಸಲು ಮೋಟಾರು ಸೈಕಲ್‌ನ್ನು ಒಂದೇ ಸಮನೇ ಬ್ರೇಕ್‌ ಹಾಕಿದ ಕಾರಣ ಮೋಟಾರು ಸೈಕಲ್‌ ಸವಾರ ಹಾಗು ಸಹಸವಾರರು ಮೋಟಾರು ಸೈಕಲ್‌ಸಮೇತ ರಸ್ತೆಗೆ ಬಿದ್ದು ಮೋಟಾರು ಸೈಕಲ್‌ಸವಾರನಿಗೆ ಬೆನ್ನು ನೋವು ಹಾಗು ಸಹ ಸವಾರನಿಗೆ ಎಡ ಕೈಗೆ ಮೂಳೆ ಮುರಿತ ಎಡ ಕಾಲಿಗೆ ತರಚಿದ ಗಾಯವಾಗಿದ್ದು, ಚಿಕಿತ್ಸೆ ಬಗ್ಗೆ ಕೋಟೇಶ್ವರ ಎನ್‌ಆರ್‌ಆಚಾರ್ಯ ಆಸ್ಪತ್ರೆಯಲ್ಲಿ ಮೋಟಾರು ಸೈಕಲ್‌ಸವಾರ ಹೊರ ರೋಗಿಯಾಗಿ ಹಾಗು ಸಹಸವಾರ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 43/2021 ಕಲಂ: 279,338 ಐಪಿಸಿ ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಗಂಡಸು ಕಾಣೆ ಪ್ರಕರಣ

 • ಕೋಟ: ಪಿರ್ಯಾದಿದಾರರಾದ ಅಶ್ವಿನಿ  ಹೆಗಡೆ (28) ಗಂಡ: ಉದಯ ಹೆಗಡೆ ವಾಸ: ಪ್ರಧಾನ ನಗರ ಗುಡ್ಡೆಯಂಗಡಿಯಡಾಡಿ ಮತ್ಯಾಡಿ ಗ್ರಾಮ ಕುಂದಾಪುರ ಇವರು ಯಕ್ಷಗಾನ ಕಲಾವಿದರಾಗಿದ್ದು, ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿಕೊಂಡಿರುತ್ತಾರೆ. ಸುಮಾರು ನಾಲ್ಕು ವರ್ಷದ ಹಿಂದೆ ಯಕ್ಷಗಾನ ಕಲಾವಿದರಾದ ಉದಯ ಹೆಗಡೆ (37) ರವರನ್ನ ಪ್ರೀತಿಸಿ ಮದುವೆಯಾಗಿದ್ದು, ಉದಯ ಹೆಗಡೆಯವರು ಪೆರ್ಡೂರು ಮೇಳದಲ್ಲಿ ಯಕ್ಷಗಾನ ಕಲಾವಿದರಾಗಿರುತ್ತಾರೆ. ದಿನಾಂಕ 21/04/2021 ರಂದು ಸಂಜೆ ಸುಮಾರು 6:00 ಗಂಟೆಯ ಸಮಯಕ್ಕೆ ಅಶ್ವಿನಿ  ಹೆಗಡೆ ರವರ ಗಂಡ ಉದಯ ಹೆಗಡೆ  ರವರು ಮನೆಯಿಂದ ತನ್ನ ಸ್ವಂತ ಆಲ್ಟೋ ಕಾರಿನಲ್ಲಿ  ಹೊರಟು ಹೋಗಿರುತ್ತಾರೆ. ನಂತರ ಉದಯ ಹೆಗಡೆರವರ ಮೊಬೈಲ್ ಗೆ ಕರೆ ಮಾಡಿದಾಗ ಸಂಪರ್ಕ ಸಾಧ್ಯ ಆಗಿರುವುದಿಲ್ಲ. ನಂತರ ಅಶ್ವಿನಿ  ಹೆಗಡೆ ರvರು ಶಿರಸಿಯ ತನ್ನ ಗಂಡನ ಸಂಬಂಧಿಗಳಲ್ಲಿ, ಸ್ನೇಹಿತರಲ್ಲಿ  ವಿಚಾರಿಸಿದಲ್ಲಿ ಈ ತನಕ ಪತ್ತೆಯಾಗಿರುವುದಿಲ್ಲಾವಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 70/2021 ಕಲಂ:ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಬೈಂದೂರು: ಮಾನ್ಯ ನ್ಯಾಯಾಲಯದ ಖಾಸಗಿ ಪ್ರಕರಣದಂತೆ ಫಿರ್ಯಾದಿದಾರರಾಧ ಹೆರಿಯ ಪೂಜಾರಿ   (45) ತಂದೆ: ದಿ/ಚಂದು ಪೂಜಾರಿ ವಾಸ: ಮೇಲ್ತಾರುಮನೆ, ಬಿಜೂರು ಗ್ರಾಮ, ಬೈಂದೂರು ಇವರ ಕುಟುಂಬದಲ್ಲಿ ದಿನಾಂಕ 26/09/2012 ರಂದು ಒಂದು ವಿಭಾಗ ಪತ್ರ ಮಾಡಿಕೊಂಡಿದ್ದು ಅದರಂತೆ ಹೆರಿಯ ರವರ ಹಿಸ್ಸೆಗೆ ಬಿಜೂರು ಗ್ರಾಮದ ಸರ್ವೆ ನಂಬ್ರ 312/2ಎ5 ರಲ್ಲಿನ 0.16 ಸೆಂಟ್ಸ್ ಜಮೀನು ಬಂದಿದ್ದು, ಸದ್ರಿ ಜಮೀನು ಅಂದಿನಿಂದ ಇವರ ಸ್ವಾಧೀನತೆಗೆ ಬಂದಿರುತ್ತದೆ. ಈ ಬಗ್ಗೆ ಹೆರಿಯ ಪೂಜಾರಿ ರವರ ಹೆಸರಿಗೆ ಪಹಣಿ ಪತ್ರಿಕೆ ದಾಖಲಾಗಿರುತ್ತದೆ. ದಿನಾಂಕ 30/12/2020 ರಂದು ಇವರು ಜಮೀನಿನ ಪಹಣಿ ಪತ್ರಿಕೆಯನ್ನು ಪರಿಶೀಲಿಸಿದಾಗ ಸದ್ರಿ ಜಮೀನಿನ ಪಹಣಿ ಪತ್ರಿಕೆಯಲ್ಲಿ ಇವರ ಹೆಸರಿಗೆ ಬದಲು ಆಪಾದಿತ ರಾಜ್ ಕುಮಾರ್ ಯಾನೆ ರಾಜ್ ಎಂದು ದಾಖಲಾಗಿರುತ್ತದೆ. ನಂತರ ಹೆರಿಯ ಪೂಜಾರಿ ರವರು ಬೈಂದೂರು ಉಪನೊಂದಣಾ ಕಛೇರಿಯಲ್ಲಿ ದಾಖಲೆ ಪತ್ರಗಳನ್ನು ಪರಿಶೀಲಿಸಿದಾಗ ಆಪಾದಿತನು ಹೆರಿಯ ಪೂಜಾರಿ ರವರ ಹೆಸರಿನ ನಕಲಿ ಜನರಲ್ ಪವರ್ ಆಫ್ ಎಟಾರ್ನಿಯನ್ನು ಕುಂದಾಪುರ ನೋಟರಿ ವಕೀಲರಾದ ಜಿ ಆರ್ ರಾವ್ ರವರ ಹತ್ತಿರ ನಕಲಿ ಹೆಬ್ಬೆಟ್ಟನ್ನು ಹಾಕಿಸಿ ಮಾಡಿಸಿರುತ್ತಾರೆ. ಸದ್ರಿ ಪವರ್ ಆಫ್ ಎಟಾರ್ನಿಯ ಆಧಾರದ ಮೇಲೆ ಹೆರಿಯ ಪೂಜಾರಿ ರವರ ಬಿಜೂರು ಗ್ರಾಮದ ಸರ್ವೆ ನಂಬ್ರ 312/2ಎ5 ರಲ್ಲಿನ 0.16 ಸೆಂಟ್ಸ್ ಜಮೀನನ್ನು ಬೈಂದೂರು ಉಪನೊಂದಣಾ ಕಛೇರಿಯಲ್ಲಿ ದಸ್ತಾವೇಜ್ ನಂಬ್ರ BAI-1-00921-2019-20 CD NO BAID272 ರಂತೆ ಆಪಾದಿತನು ತನ್ನ ಹೆಸರಿಗೆ ನೊಂದಣಿ ಮಾಡಿಕೊಂಡಿರುತ್ತಾನೆ. ಸದ್ರಿ ಕ್ರಯ ದಸ್ತಾವೇಜಿನ ಆಧಾರದ ಮೇಲೆ ಆಪಾದಿತನು ಮೂರ್ತೆದಾರರ ಸೇವಾ ಸಹಕಾರಿ ಬ್ಯಾಂಕ್ ಉಪ್ಪುಂದದಿಂದ ಅವರನ್ನು ನಂಬಿಸಿ ಮೋಸದಿಂದ ರೂಪಾಯಿ 6.00.000/- ಸಾಲವಾಗಿ ಪಡೆದಿರುತ್ತಾನೆ. ಆಪಾದಿತನು ಹೆರಿಯ ಪೂಜಾರಿ ಇವರ ಸುಳ್ಳು  ಪವರ್ ಆಫ್ ಎಟಾರ್ನಿ ಮಾಡಿಸಿ, ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ವಂಚನೆಯಿಂದ ಹೆರಿಯ ಪೂಜಾರಿ ರವರ ಜಮೀನನ್ನು ಬರೆಸಿಕೊಂಡು ಇವರಿಗೆ ಮೋಸ ಹಾಗೂ ವಂಚನೆ ಮಾಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 81/2021 ಕಲಂ: 420, 465, 468, 471 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಣಿಪಾಲ: ಪಿರ್ಯಾದಿದಾರರಾದ ಅಶೋಕ ಶೆಟ್ಟಿ, ತಂದೆ:ಗುಂಡು ಶೆಟ್ಟಿ ವಾಸ: 3/76-ಬಿ ಅಂಕಿತ ಮೂಡುಮನೆ ಪಡುಪಾಲು ಹೆರ್ಗಾ ಗ್ರಾಮ ಉಡುಪಿ ಇವರು ತಮ್ಮ ಮನೆಯ ಸಮೀಪದಲ್ಲಿ ತಮ್ಮ ಕುಟುಂಬದವರು ಓಡಾಡಲು ಜಾಗವನ್ನು ಬಿಟ್ಟಿದ್ದು ಸಾರ್ವಜನಿಕ ಜಾಗವೆಂದು ತಪ್ಪಾಗಿ ತಿಳಿದು ಅಪಾದಿತ ಅಲ್ಮೆಡ ಮತ್ತು ಅವರ ಪತ್ನಿ ರವರು ಅಶೋಕ ಶೆಟ್ಟಿ ರವರೊಂದಿಗೆ ಜಗಳವಾಡುತ್ತಿದ್ದು ಕಳೆದ 3 ತಿಗಂಳ ಹಿಂದೆ ಇವರು ಸದ್ರಿ ಜಾಗಕ್ಕೆ ಗೇಟು ಹಾಕಿರುತ್ತಾರೆ ದಿನಾಂಕ 27/04/2021 ರಂದು ಬೆಳಿಗ್ಗೆ 11:00 ಗಂಟೆ ಸುಮಾರಿಗೆ ಅಶೋಕ ಶೆಟ್ಟಿ ರವರ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಅಪಾದಿತರಾದ ಅಲ್ಮೇಡ ಮತ್ತು ಆತನ ಪತ್ನಿ ಗೇಟನ್ನುಕಿತ್ತು ಹಾನಿಮಾಡಿ ಅದಕ್ಕೆ ಅಳವಡಿಸಿದ್ದ ನಾಮಫಲಕವನ್ನು ಕಿತ್ತುಕೊಂಡುಹೋಗಿರುತ್ತಾರೆ ಹಾಗೂ ತಡೆಯಲು ಬಂದ ಅಶೋಕ ಶೆಟ್ಟಿ ರವರ ಪತ್ನಿ ನಿರ್ಮಾಳಗೆ ಅವಾಚ್ಯ ಶಬ್ದದ್ದಿಂದ ಬೈದ್ದಿದಲ್ಲದೆ ಅಡ್ಡ ಬಂದರೆ ನಿನ್ನನ್ನು ಕೂಡಾ ಸುತ್ತಿಗೆಯಿಂದ ಹೊಡೆದು ಹಾಕುತ್ತೇನೆ ಎಂದು ಜೀವಬೆದರಿಕೆ ಹಾಕಿರುತ್ತಾರೆ, ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 58/2021 ಕಲಂ: 447,427,504,506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 28-04-2021 09:48 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080