ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿದಾರರಾದ ಪ್ರಸಾದ ಜೋಗಿ (31), ತಂದೆ:ಸುಬ್ರಾಯ ಜೋಗಿ, ವಾಸ: ಮಾಣಿಕೊಳಲು, ಹಕ್ಲಾಡಿ ಗ್ರಾಮ, ಕುಂದಾಪುರ ತಾಲೂಕು ಇವರು ದಿನಾಂಕ 26/03/2023 ರಂದು ತನ್ನ ಮೋಟಾರ್‌ಸೈಕಲ್ಲಿನಲ್ಲಿ ಆಲೂರಿಗೆ ಹೋಗುತ್ತಿರುವಾಗ ಸಂಜೆ 04:30 ಗಂಟೆಗೆ ಹರ್ಕೂರು ಮೂರ್‌ಕೈ ಬಳಿ ತಲುಪುವಾಗ ಪಿರ್ಯಾದಿದಾರರ ಮುಂದಿನಿಂದ KA-20-EC-2870 ಮೋಟಾರ್‌ ಸೈಕಲ್‌ ಸವಾರನು ಸಹಸವಾರನ್ನು ಕುಳ್ಳಿಸಿಕೊಂಡು ಆತನ ಮೋಟಾರ್‌ಸೈಕಲ್ಲನ್ನು ಕಟ್ಟಿನಮಕ್ಕಿ ಕಡೆಯಿಂದ ಆಲೂರು ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಿರುವಾಗ  ಒಮ್ಮೆಲೆ ಬ್ರೇಕ್‌ಹಾಕಿದ ಪರಿಣಾಮ ಮೋಟಾರ್‌ ಸೈಕಲ್‌ ಸ್ಕೀಡ್‌ ಆಗಿ ಬಿದ್ದ ಪರಿಣಾಮ ಮೋಟಾರ್ ಸೈಕಲ್‌ ಸವಾರ ಪ್ರದೀಪ ಹಾಗೂ  ಸಹ ಸವಾರರಾದ ಸುಮನಾ ಮೋಟರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದು ಸುಮನಾ ರವರಿಗೆ  ಎಡಕಾಲಿಗೆ ತೀವ್ರ ಸ್ವರೂಪದ ಮೂಳೆ ಮುರಿತದ  ಗಾಯ ವಾಗಿದ್ದು, ಹಾಗೂ ಮಗು ಸುಶಾನ್‌ ಮುಖದ ಬಲಬದಿಗೆ ತರಚಿದ ಗಾಯವಾಗಿರುತ್ತದೆ. ಹಾಗೂ ಆಪಾದಿತ ಪ್ರದೀಪನಿಗೂ ಎಡಗೈಗೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 37/2023 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ:  ದಿನಾಂಕ 27/03/2023 ರಂದು ಪಿರ್ಯಾದಿದಾರರಾದ ವಿಘ್ನೇಶ್ ಆಚಾರ್ಯ (26) ,ತಂದೆ: ಮಂಜುನಾಥ ಆಚಾರ್ಯ , ವಾಸ: ದುರ್ಗಾನಗರ, ಪಣಿಯೂರು ಅಂಚೆ, ಎಲ್ಲೂರು ಗ್ರಾಮ, ಕಾಪು ತಾಲೂಕು ಇವರ  ತಂದೆ ಮಂಜುನಾಥ ಆಚಾರ್ಯ (59) ರವರು  ಮೋಟಾರು ಸೈಕಲ್ ನಂಬ್ರ KA-20-ER-5919 ನೇ ದರಲ್ಲಿ ಉಚ್ಚಿಲದಿಂದ ಹೊರಟು ಉಡುಪಿ ಕಡೆಗೆ ಪ್ರೊಫೆಸನಲ್ ಕೋರಿಯರ್ ಆಫೀಸಿಗೆ ಬರುತ್ತಿರುವಾಗ ಅಂಬಲಪಾಡಿ ಗ್ರಾಮದ ಬಲಾಯಿಪಾದೆ ಜಂಕ್ಷನ್ ಬಳಿ ಇರುವ ನರ್ಸರಿ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ KA-20-EU-5167 ನೇ ಮೋಟಾರು ಸೈಕಲ್ ಸವಾರ ಪ್ರಜ್ವಲ್ನು ತನ್ನ ಮೋಟಾರು ಸೈಕಲನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು  ಮಂಜುನಾಥ ಆಚಾರ್ಯ ರವರು ಸವಾರಿ ಮಾಡಿಕೊಂಡು ಬರುತ್ತಿದ್ದ ಮೋಟಾರು ಸೈಕಲಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಮಂಜುನಾಥ ಆಚಾರ್ಯ ರವರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ಬಲ ಕೈಯ ಭುಜಕ್ಕೆ ಎಡ ಕೈಯ ಮಣಿಗಂಟಿಗೆ ಮೂಳೆಮುರಿತದ ಜಖಂ ಬಲಬದಿಯ ಹಣೆಗೆ ಮತ್ತು ಕಣ್ಣಿನ ಬದಿ ತರಚಿದ ಗಾಯವಾಗಿದ್ದು, ಉಡುಪಿಯ ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಸುರತ್ಕಲ್ ನಲ್ಲಿರುವ ಅಥರ್ವ ಆಸ್ಪತ್ರೆಯಲ್ಲಿ ಪ್ರಸ್ತುತ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಅಲ್ಲದೆ KA-20-EU-5167 ನೇ ಮೋಟಾರು ಸೈಕಲ್ ಸವಾರ ಪ್ರಜ್ವಲ್ ರವರು ರಸ್ತೆಗೆ ಬಿದ್ದು ತರಚಿದ ಗಾಯವಾಗಿ ಉಡುಪಿಯ ಅಜ್ಜರಕಾಡು ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದು ಹೋಗಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 34/2023 ಕಲಂ: 279  338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಟ್ಕಾ ಜುಗಾರಿ ಪ್ರಕರಣ

  • ಗಂಗೊಳ್ಳಿ: ದಿನಾಂಕ 27/03/2023  ರಂದು ವಿನಯ ಎಂ ಕೊರ್ಲಹಳ್ಳಿ, ಪೊಲೀಸ್‌ಉಪನಿರೀಕ್ಷಕರು , ಗಂಗೊಳ್ಳಿ ಪೊಲೀಸ್ ಠಾಣೆ ಇವರು ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಕುಂದಾಪುರ ತಾಲೂಕು ಗಂಗೊಳ್ಳಿ ಗ್ರಾಮದ ಗಂಗೊಳ್ಳಿ ಅರೆಕಲ್‌ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದ ಬಗ್ಗೆ ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿ ಮಟ್ಕಾ ಜುಗಾರಿ ನಡೆಸುತ್ತಿದ್ದ ಸುರೇಶ ಶೇರುಗಾರ(47), ತಂದೆ: ವಿಶ್ವನಾಥ, ವಾಸ:ಗಂಗೊಳ್ಳಿ ರಾಮ ಮಂದಿರ ಬಳಿ, ಗಂಗೊಳ್ಳಿ ಗ್ರಾಮ ಕುಂದಾಪುರ ತಾಲೂಕು ಎಂಬಾತನನ್ನು ವಶಕ್ಕೆ ಪಡೆದು ಮಟ್ಕಾ ಜುಗಾರಿಗೆ ಬಳಸಿದ ಮಟ್ಕಾ ಚೀಟಿ-1, ಬಾಲ್ ಪೆನ್ನು-1 ಹಾಗೂ 520/- ರೂಪಾಯಿ ನಗದನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 38/2023 ಕಲಂ:78(I),78(III) ಕರ್ನಾಟಕ ಪೊಲೀಸ್ ಕಾಯ್ದೆ 2021 ರಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಸುಧಾಕರ ಪೂಜಾರಿ (38), ತಂದೆ: ದಿ. ತಿಮ್ಮಪ್ಪ ಪೂಜಾರಿ,  ವಾಸ: ಅಜ್ಜಿಮನೆ  11 ನೇ ಉಳ್ಳೂರು ಗ್ರಾಮ , ಬೈಂದೂರು  ತಾಲೂಕು ಇವರ ಮನೆಯ  ಪಕ್ಕದಲ್ಲಿ  ಸುಬ್ಬಮ್ಮ ಶೆಡ್ತಿ ರವರು  ಅವರ ಮಗಳು   ಶ್ರೀಮತಿ ಶೆಡ್ತಿ (55) ರವರೊಂದಿಗೆ ವಾಸ ಮಾಡಿಕೊಂಡಿದ್ದು, ಇಬ್ಬರು ದಿನಾಂಕ 26/03/2023 ರಂದು ರಾತ್ರಿ   ಊಟ ಮಾಡಿ ಮಲಗಿದವರು ದಿನಾಂಕ 27/03/2023 ರಂದು ಬೆಳಿಗ್ಗೆ  06:00 ಗಂಟೆಗೆ ಎದ್ದಿದ್ದು 07:30 ಗಂಟೆಗೆ  ಸುಬ್ಬಮ್ಮ ಶೆಡ್ತಿಯವರು ಬಿಸಿ ನೀರು ಬೇಕೆಂದು ಮಗಳು ಶ್ರೀಮತಿ ಶೆಡ್ತಿ ರವರನ್ನು ಕೂಗಿ ಕರೆಯುತ್ತಿರುವುದನ್ನು ಕೇಳಿ ಪಿರ್ಯಾದಿದಾರರು ಸುಬ್ಬಮ್ಮ ಶೆಡ್ತಿ ರವರ ಮನೆಗೆ ಹೋದಾಗ ಶ್ರೀಮತಿ ಶೆಡ್ತಿ ರವರು  ಮನೆಯಲ್ಲಿ ಇಲ್ಲದೇ ಇರುವುದನ್ನು ಕಂಡು ಪಿರ್ಯಾದಿದಾರರು ಅಕ್ಕ ಪಕ್ಕದವರೊಂದಿಗೆ ಹುಡುಕಾಡಿದಾಗ  ಶ್ರೀಮತಿ ಶೆಡ್ತಿ  ರವರ ಮೃತ ದೇಹವು 11 ನೇ ಉಳ್ಳೂರು ಗ್ರಾಮದ ಗೋವಿಂದ ಶೆಟ್ಟಿ ಮನೆ ಎಂಬಲ್ಲಿನ ಅವರ ಮನೆಯ ಬಾವಿಯಲ್ಲಿ ತೇಲುತ್ತಿರುವುದು ಕಂಡು ಬಂದಿರುತ್ತದೆ. ಶ್ರೀಮತಿ ಶೆಡ್ತಿ ಯವರು ದಿನಾಂಕ 27/03/2023 ರಂದು ಬೆಳಿಗ್ಗೆ 06:00 ಗಂಟೆಯಿಂದ 07:30 ಗಂಟೆಯ ಮಧ್ಯಾವದಿಯಲ್ಲಿಮನೆಯ ಬಾವಿಯಲ್ಲಿ ನೀರನ್ನು ಸೇದುತ್ತಿರುವ ಸಮಯ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 18/2023 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾದ ಸುನಿತಾ (36), ತಂದೆ: ಮಹಾಬಲ ಆಚಾರ್ಯ, ವಾಸ:, ರಂಗನಕೆರೆ, ಬಾರ್ಕೂರು ಅಂಚೆ, ಹೇರಾಡಿ ಗ್ರಾಮ, ಬ್ರಹ್ಮಾವರ ತಾಲೂಕು ಇವರು ದಿನಾಂಕ 27/03/2023 ರಂದು ಬೆಳಿಗ್ಗೆ 07:00 ಗಂಟೆಗೆ  ಎಂದಿನಂತೆ ಕೆಲಸಕ್ಕೆ ಹೋಗುವ ಬಗ್ಗೆ ಮನೆಯಿಂದ ಹೊರಡುವಾಗ ಅವರ  ಅಣ್ಣ 1 ನೇ ಆರೋಪಿ  ಕೃಷ್ಣ  ತಡೆದು ನೀನು ಕೆಲಸಕ್ಕೆ ಹೋಗುವುದು ಬೇಡ ಮನೆಯಲ್ಲಿಯೇ ಇರು ಎಂದು ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ಅದಕ್ಕೆ ಪಿರ್ಯಾದಿದಾರರು ಕೆಲಸಕ್ಕೆ ಹೋಗುತ್ತೇನೆ ನನ್ನ ಖರ್ಚಿಗೆ ಯಾರೂ ಹಣ ಕೊಡುವುದಿಲ್ಲ ಎಂದು  ಹೇಳಿದಕ್ಕೆ 1ನೇ  ಆರೋಪಿಯು ಬಾಗಿಲು ಹಾಕಿ ಪಿರ್ಯಾದಿದಾರರಿಗೆ ಒಂದು ಕೋಲಿನಿಂದ ಕೈಗೆ, ಕಾಲಿಗೆ ಹೊಡೆದಿದ್ದು ಹೊಡೆಯುವಾಗ ತಲೆಯು ಗೋಡೆಗೆ ತಾಗಿ ಗಾಯವಾಗಿರುತ್ತದೆ. ಅಲ್ಲದೇ ಹೊಡೆದ ಏಟಿಗೆ ಬಲಕೈಗೆ ಗಾಯವಾಗಿದ್ದು ತೊಡೆಯಲ್ಲಿ ಸಹ ರಕ್ತ ಹೆಪ್ಪುಗಟ್ಟಿರುತ್ತದೆ. ಅದೇ ಸಮಯ 2 ನೇ ಆರೋಪಿ ಪಿರ್ಯಾದಿದಾರರ ಅತ್ತಿಗೆ ಶಿಲ್ಪಾರವರು ಕೂಡ  ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 66/2023 : ಕಲಂ 341, 342, 324, 354, 504, 506  ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿರ್ಯಾದಿದಾರರಾದ ಶೈಲೇಶ್, ತಂದೆ : ತೋಮ ಪೂಜಾರಿ, ವಾಸ : ಪಡು ಯೆಣಗುಡ್ಡೆ, ಗರಡಿ ರಸ್ತೆ, ಯೆಣಗುಡ್ಡೆ ಗ್ರಾಮ ಕಾಪು ತಾಲ್ಲೂಕು ಉಡುಪಿ ಜಿಲ್ಲೆ ಇವರು KA-20-MB- 4527 ನೇ ಮಾರುತಿ ಸಿಪ್ಟ್ ಕಾರಿನ ನೊಂದಣಿ ಮಾಲಕರಾಗಿದ್ದು,  ಕಾಪು ಕೆನರಾ ಬ್ಯಾಂಕಿನಲ್ಲಿ ಸಾಲ ಪಡೆದುಕೊಂಡು ಕಾರು ಖರೀದಿ ಮಾಡಿರುತ್ತಾರೆ. ನಂತರ ಕೋವಿಡ್ ಕಾರಣದಿಂದ ಪಿರ್ಯಾದಿದಾರರಿಗೆ ಬ್ಯಾಂಕಿನ ಲೋನ್ ಕಟ್ಟಲು ಆಗದೇ ಕಾರು ಮಾರಾಟ ಮಾಡಿ ಸಾಲ ತಿರಿಸಲು ತಿರ್ಮಾನಿಸಿರುತ್ತಾರೆ. ಪರಿಚಯಸ್ಥ ಆಪಾದಿತ ಕಿರಣನು  ಕಾರನ್ನು ಮಾರಾಟ ಮಾಡಿಕೊಡುವುದಾಗಿ ತಿಳಿಸಿದಂತೆ ಪಿರ್ಯಾದಿದಾರರು ಆಪಾದಿತನ ಬಳಿ ನಂಬಿಕೆಯಿಂದ ತನ್ನ ಕಾರು ನೀಡಿರುತ್ತಾರೆ. ಆಪಾದಿತನು ಪಿರ್ಯಾದಿದಾರರಿಂದ ಕಾರನ್ನು ಪಡೆದುಕೊಂಡು ಬೆಂಗಳೂರಿಗೆ ಮಾರಾಟಕ್ಕೆಂದು ತೆಗೆದುಕೊಂಡು ಹೋಗಿದ್ದು ನಂತರ ಈ ಬಗ್ಗೆ ಕೇಳಲಾಗಿ ಕಾರು ಬೆಂಗಳೂರಿನಲ್ಲಿ ಮಾರಾಟ ಮಾಡಿ ಹಣ ಬ್ಯಾಂಕಿಗೆ ಕಟ್ಟುತ್ತೇನೆಂದು ತಿಳಿಸಿದ್ದು, ಈ ಬಗ್ಗೆ ಪಿರ್ಯಾದಿದಾರರು ಬ್ಯಾಂಕಿಗೆ ಹೋಗಿ ವಿಚಾರಸಿದ್ದು, ಹಣ ಪಾವತಿಸಿರುವುದಿಲ್ಲ ಈ ಬಗ್ಗೆ ಆಪಾದಿತನ ಬಳಿ ಕೇಳಲಾಗಿ ಕಾರು ವಾಪಾಸ್ಸು ನೀಡುವುದಾಗಿ ತಿಳಿಸಿರುತ್ತಾನೆ. ನಂತರ ಪಿರ್ಯಾದಿದಾರರು ಆಪಾದಿತನ ಬಳಿ  ಕಾರು ವಾಪಾಸ್ಸು ಕೇಳಲಾಗಿ ಕಾರು ವಾಪಾಸ್ಸು ನೀಡದೇ ಮೋಸ ಮತ್ತು ನಂಬಿಕೆ ದ್ರೋಹ ಮಾಡಿರುವುದಾಗಿ ನೀಡಿದ ದೂರಿನಂತೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 57/2023 ಕಲಂ: 406, 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿದಾರರಾದ ಸ್ವರೂಪ (23), ತಂದೆ: ದಿ.ದೇವದಾಸ ಆಚಾರ್ಯ, ವಾಸ: ಶ್ರೀದೇವಿ ಪ್ರಸಾದ, 14ನೇ ಅಡ್ಡ ರಸ್ತೆ ತೆಳ್ಳಾರು ರಸ್ತೆ ಕಸಬಾ ಗ್ರಾಮ ಕಾರ್ಕಳ ತಾಲೂಕು ಇವರ ತಾಯಿ ಪುಷ್ಪಾರವರು ದನಗಳನ್ನು ಸಾಕಿಕೊಂಡು ಹೈನುಗಾರಿಕೆ ವೃತ್ತಿ ಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರು ದಿನಾಂಕ 24/03/2023 ರಂದು ಬೆಳಿಗ್ಗೆ 08:30 ಗಂಟೆಗೆ ಹಟ್ಟಿಯಿಂದ 4 ದನಗಳನ್ನು ಮೇಯಲು ಹೊರಗಡೆ ಬಿಟ್ಟಿದ್ದು ಮೇಯಲು ಬಿಟ್ಟಿದ್ದ 15,000/- ಸಾವಿರ ರೂಪಾಯಿ ಮೌಲ್ಯದ ಕಂದು ಬಿಳಿ ಬಣ್ಣದ ಒಂದು ದನ ಹಾಗೂ 5,000/- ಸಾವಿರ ರೂಪಾಯಿ ಮೌಲ್ಯದ ಕಪ್ಪು ಬಣ್ಣದ ಒಂದು ಹೆಣ್ಣು ಕರು ರಾತ್ರಿಯಾದರು ವಾಪಾಸು ಹಟ್ಟಿಗೆ ಬಾರದೇ ಇದ್ದು ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ ಪಿರ್ಯಾದಿದಾರರು ದಿನಾಂಕ 26/03/2023 ರಂದು ರಾತ್ರಿ 08:15 ಗಂಟೆಗೆ ಗುಡ್ಡೆಯಂಗಡಿ ಬಳಿ ದನವನ್ನು ಹುಡುಕುತ್ತಿರುವಾಗ ರಾಜೇಂದ್ರ ಅಮೀನ್‌ ಎಂಬುವವರು ತಾನು ದಿನಾಂಕ 25/03/2023 ರಂದು ಬೆಳಿಗ್ಗಿನ ಜಾವ 03:00 ಗಂಟೆಯ ಸಮಯ ಮನೆಯ ಬಳಿ ನಿಂತುಕೊಂಡು ನೋಡುವಾಗ ಮನೆಯ ಎದುರುಗಡೆ ರಸ್ತೆಯ ಬದಿಯಲ್ಲಿರುವ ಹಲಸಿನ ಮರದ ಬಳಿ ಮಲಗಿಕೊಂಡಿದ್ದ ಒಂದು ಕಂದು ಬಿಳಿ ಬಣ್ಣದ ದನ ಹಾಗೂ ಕಪ್ಪು ಬಣ್ಣದ ಒಂದು ಕರುವನ್ನು ಯಾರೋ ವ್ಯಕ್ತಿಗಳು ಹಿಡಿದು ವಾಹನದಲ್ಲಿ ತುಂಬಿಸಿ ಕಳ್ಳತನ ಮಾಡಿಕೊಂಡು ಅನಂತಶಯನ ರಸ್ತೆಗೆ ಹೋಗಿರುವುದನ್ನು ನೋಡಿರುವುದಾಗಿ ತಿಳಿಸಿದ್ದು ಪಿರ್ಯಾದಿದಾರರು ಮೇಯಲು ಹೊರಗಡೆ ಬಿಟ್ಟಿದ್ದ ಒಂದು ಕಂದು ಬಿಳಿ ಬಣ್ಣದ ದನ ಹಾಗೂ ಕಪ್ಪು ಬಣ್ಣದ ಒಂದು ಕರು ಹಟ್ಟಿಗೆ ಬಾರದೇ ತೆಳ್ಳಾರು ಗುಡ್ಡೆ ಅಂಗಡಿ ರಸ್ತೆಯ ಬದಿಯಲ್ಲಿರುವ ಹಲಸಿನ ಮರದ ಬಳಿ ಮಲಗಿಕೊಂಡಿದ್ದಾಗ ಯಾರೋ ಕಳ್ಳರು ಹಿಡಿದು ವಾಹನದಲ್ಲಿ ಹಾಕಿ ಕಳ್ಳತನ ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 40/2023  ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ಪಿರ್ಯಾದಿದಾರರಾದ ಶೇಖ್ ಸಿರಾಜ್ (36), ತಂದೆ: ಅಬ್ದುಲ್ ತಾಹಿರ್, ವಾಸ: ಹೆಜಮಾಡಿ ಕೋಡಿ, ಹೆಜಮಾಡಿ ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರು ಕಾಪು ತಾಲೂಕು ಹೆಜಮಾಡಿ ಗ್ರಾಮದ ಹೆಜಮಾಡಿ ಪೇಟೆಯ ಬಳಿ ಇರುವ ಅವರ ಜಾಗದಲ್ಲಿ ಕಟ್ಟಡ ಕಾಮಗಾರಿ ನಡೆಸುತ್ತಿದ್ದು, ದಿನಾಂಕ 26/03/2023 ರಂದು ಸಂಜೆ 17:00 ಗಂಟೆಯ ವೇಳೆಗೆ ಹೆಜಮಾಡಿಯ ನಿವಾಸಿಗಳೇ ಆದ ಕಾಸಿಂ ಹಾಜಿ ಮತ್ತು ಅವರ ಮಗ ಕೆ ಇಬ್ರಾಹಿಂ ಎಂಬುವವರು  KA-30-M-3149 ನೇ ನಂಬ್ರದ ಬಿಳಿ ಬಣ್ಣದ ಮಾರುತಿ-800 ಕಾರಿನಲ್ಲಿ ಪಿರ್ಯಾದಿದಾರರು ಕಾಮಗಾರಿ ನಡೆಸುವ ಸ್ಥಳದಲ್ಲಿ ಹಾಕಿದ್ದ ಕಬ್ಬಿಣದ ಗೇಟನ್ನು ಮುರಿದು, ಕಾಮಗಾರಿ ಸ್ಥಳಕ್ಕೆ ಅಕ್ರಮ ಪ್ರವೇಶ ಮಾಡಿ ಅಲ್ಲಿರುವ  30,000/- ರೂಪಾಯಿ ಮೌಲ್ಯದ ಕಟ್ಟಡ ನಿರ್ಮಾಣ ಸೊತ್ತುಗಳನ್ನು ಹಾಳು ಮಾಡಿದ್ದು, ಈ ವೇಳೆ ಅದನ್ನು ತಡೆಯಲು ಹೋದ ಪಿರ್ಯಾದಿದಾರರಿಗೆ ಆರೋಪಿತರು ಅವಾಚ್ಯ ಶಬ್ಧಗಳಿಂದ ಬೈದು ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 39/2023 ಕಲಂ: 447, 427 , 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತ್ತೀಚಿನ ನವೀಕರಣ​ : 28-03-2023 09:49 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080